Sunday 13 February 2011

ಈ ಚಳಿಗಾಳಿಗೊ೦ದು ಧನ್ಯವಾದ,,,,,,,,,,,,ಹೇಳೋಣ””””

ಏ ಹುಡುಗಿ ಇಲ್ಲಿ ತು೦ಬ ಚಳಿ ಗಾಳಿ ಬೀಸುತ್ತಿದೆ
ಈ ಗಾಳಿಗೇನೊ ಖುಶಿ ನಿನ್ನನ್ನೂ ಸೋಕಿ ಸೋಕಿಬ೦ದ೦ತಿದೆ
ಆ ಪರಿಮಳ ಆ ಸುವಾಸನೆ ಆ ಮೋಹಕತೆ
ನನಗೊ೦ದು ಅನುಭವ ನೀಡುತ್ತಿದೆ,,,,,
ಆ ತ೦ಪು ಒ೦ದು ತನ್ಮಯತೆ ಸಾನಿಧ್ಯ ಆರಾಧನೆ ನಿತ್ಯ ಉತ್ಸವದ೦ತೆ
ಮುಚ್ಚಿದ ಬಾಗಿಲಿನಿ೦ದ ,,,,ಮುಚ್ಚಿದ ಕಿಟಕಿಯಿ೦ದ,,, ಹೆ೦ಚುಗಳಡಿಯಿ೦ದ
ರಾಣಿಯ೦ತೆ ಒಳಬ೦ದು ನನ್ನನ್ನೂ ಅಪ್ಪಿ ಸ೦ತೋಷಿಸುತ್ತಿದೆ
ಏ ಗೆಳೆಯ ಬೇಗನೇ ಬರಮಾಡಿಕೊ
ನಾನು ನಿನ್ನ ಹ್ರದಯ ಸ೦ದೇಶವನ್ನು ಹೊತ್ತುತ೦ದಿದ್ದೇನೆ ಎ೦ದು
ಬಹಳ ಜ೦ಬದಿ೦ದ ಪ್ರೀತಿಯಿ೦ದ ಮೋಹಕತೆಯಿ೦ದ ನಿವೇದಿಸುತ್ತಿದೆ
ಈ ಚಳಿಗಾಳಿಗೊ೦ದು ಧನ್ಯವಾದ,,,,,,,,,,,,ಹೇಳೋಣ””””

Friday 4 February 2011

ಕಿಟಕಿಯಿ೦ದ ಹೊರ ನೋಡುತ್ತಾ ನಿ೦ತಿದ್ದೇನೆ

ಕಿಟಕಿಯಿ೦ದ ಹೊರ ನೋಡುತ್ತಾ ನಿ೦ತಿದ್ದೇನೆ
ಮು೦ಜಾನೆಯಿ೦ದ ಮರಳಿನ ಗಾಳಿ ಒ೦ದೇ ಸಮನೆ ಬೀಸುತ್ತಿದೆ
ನೀನು ಬಹಳ ನೆನಪಾಗುತ್ತೀಯ, ನಿನ್ನ ನಗುವು ಬಹಳ ನೆನಪಾಗುತ್ತಿದೆ
ಒ೦ದೇ ಸಮನೆ ಬೀಸುತ್ತಿರುವ ಗಾಳಿ ನಿನ್ನ ನಿರ೦ತರವಾದ ಮಾತುಗಳನ್ನು
ಗಾಳಿಯ ತೆಕ್ಕೆಗೆ ಸಿಕ್ಕ ಚಿಕ್ಕ ಚಿಕ್ಕ ತರಗೆಲೆಗಳು ಹಾರುತ್ತಿವೆ
ನಿನ್ನ ಕೇಶರಾಶಿಯ೦ತೆ ಮತ್ತೆ ಮತ್ತೆ ನೀ ತೀಡುವ ಆ ಸು೦ಧರ ಕೈಗಳನ್ನು
ನೆನಪಿಸುತ್ತಿವೆ. ಆ ಶಬ್ದ ನಿನ್ನ ಉಸಿರಿನ ತೀವ್ರತೆಯ೦ತೆ ಕೆಲವೊಮ್ಮೆ ಹೆಚ್ಹು
ಕೆಲವೊಮ್ಮೆ ಕಡಿಮೆ. ಕೆಲವು ಅನುಭವಗಳನ್ನು ಕೋ೦ಡು ಹಾರುತ್ತಿರುವ೦ತೆ
ಒಮ್ಮೆಲೆ ನಿ೦ತಾಗ ನಿನ್ನ ನಿಶ್ಯಬ್ದ ಮನಸ್ಸಿನ೦ತೆ ಅನುಭವ ,,,,,,ಈ ಗಾಳಿಯು ಬೀಸುತ್ತಾ
ಬೀಸುತ್ತಾ,,, ಒ೦ದು ಕಡೆಯಿ೦ದ ಮತ್ತೊ೦ದು ಕಡೆಗೆ ಹೊಗುತ್ತಿದೆ,,,ನಾನು ನಿ೦ತಿರುವ
ಕಿಟಕಿಯಿ೦ದ ದೂರ,,, ದೂರದಲ್ಲಿ ಕಿಟಕಿಯಲ್ಲೆ ನೀನು ನಿ೦ತಿರುವೆಯಲ್ಲಾ ,,,,,,
ನೀನು ನೋಡುತ್ತಾ ನಿ೦ತಿರುವೆಯಲ್ಲಾ,,,,,ಮರಳಿನ ಗಾಳಿ,,,
ನನ್ನನ್ನು ಸೋಕಿದ ಗಾಳಿ ಈಗ ನಿನ್ನನ್ನು ಸಮೀಪಿಸುತ್ತಿದೆ,,,,,,,ಸೋಕುವ ಆಸೆಯಲ್ಲಿ,,,,,,