ಏನ್ ಸ್ವಾಮಿ ಅಲ್ಲಿ ಗುಬೈಯಲ್ಲಿ ಒಂಟೆ ಮೇಲೆ ಬೇಸಾಯ ಮಾಡ್ತಾರಂತೆ ಹೌದಾ ? ಸೂಪರ್ ಬಾಷೆಯಲ್ಲಿ ಗುಬಾಯಿ ಅಂದರೆ ದುಬಾಯಿ ಅಂತ. ನಾನು ಹೇಗೆ ಹೇಳಲಿ ನನ್ನ ೧೬ ವರುಷಗಳ ಜೀವನದಲ್ಲಿ ಅಲ್ಲಿ ಬೇಸಾಯ ಎಂಬುದೂ ನೋಡಿಲ್ಲ ಆದರೆ ಇರಬಹುದೇನೋ ಗೊತ್ತಿಲ್ಲ . ಈ ಸೂಪರ್ ಗೆ ಈ ವಿಷಯ ಯಾರು ಹೇಳಿರಬಹುದು ! ಅನ್ನುತ್ತಾ ಅದೆಲ್ಲ ಬೇಡ ನಾನು ಮುಂದಿನ ವಾರ ಹೋಗುವಾಗ ನನ್ನ ಜೊತೆ ನೀನು ಬಾ ಆಗ ಎಲ್ಲ ವಿಷಯ ನೀನೆ ಖುದ್ದು ನೋಡಿ ತಿಳಿಯಬಹುದು, ಅಲ್ಲಿ ಒಳ್ಳೆ ಸಂಬಳ ಸಹ ಸಿಗುತ್ತೆ ಎಂದೇ, ಅದಕ್ಕೆ ಸೂಪರ್ ಉತ್ತರ ಅಯ್ಯೋ ಸಂಬಳ ದುಡ್ಡು ಎಲ್ಲಾ ನಂಗೆ ಯಾಕೆ ಸಾಮಿ ನಾನು ಇಲ್ಲಿ ಆರಾಮಾವಾಗಿದ್ದಿನಿ ಸುಕವಾಗಿದ್ದೀನಿ ಸೂಪರ್ - ಸೂಪರ್ ಅಂತ ಜೋರಾಗಿ ನಕ್ಕು ಹೇಳಿದ, ನನಗಿಲ್ಲಿ ಎಲ್ಲರೂ ಚೆನ್ನಾಗೆ ನೋಡುತ್ತಾರೆ ಅಮ್ಮ ಅಕ್ಕ ವಾದ್ಯಾರ್ ಮಕ್ಕಳು ತುಂಬ ಚೆನ್ನಾಗೆ ಮಾತಾಡ್ತಾರೆ ಎಂದು ಹೇಳುತ್ತಾ ಒಂದು ತಮಿಳು ಹಾಡನ್ನು ಹಾಡಲು ಶುರುಮಾಡಿದ, ಅಂದರೆ ಒಂಟಿಯಾಗಿರುವ ಈ ಮನುಷ್ಯ ನಮ್ಮ ಮನೆಯವರನ್ನೆಲ್ಲ ಒಂದೊಂದು ಹೆಸರಿಂದ ತನ್ನದೇ ಆದ ಸಂಬಂದ ಗಳ ಹೆಸರಿನಲ್ಲಿ ಕರೆಯುತ್ತಾನೆ. ಹಬ್ಬ ಮದ್ವೆ ಇತರ ಕಾರ್ಯಕ್ರಮಗಳಿಗೆ ತನ್ನಿದಾಗುವ ಸಹಾಯ ಅಂದರೆ ಮನೆಯ ಸುತಮುತ್ತ ಗುಡಿಸುದು ಮನೆಯನ್ನು ಕಾಯೋದು ಇತರೆ ಕೆಲ್ಸಗಲ್ಲ್ನು ಹೇಳದೆಯು ಮಾಡುತ್ತಾನೆ.
ಸೂಪರ್ ನ ಹೆಸರು ಮುರಗೇಶ ಅಂತೆ ಊರು ತಮಿಳುನಾಡು ಯವ್ವನದಲ್ಲಿ ಯಾರನ್ನೋ ಪ್ರೀತಿಸಿ ನಂತರ ಮನೆಯವರು ಒಪ್ಪದಿದ್ದಾಗ ಆ ಹುಡುಗಿ ಆತ್ಮ ಹತ್ಯೆ ಮಾಡಿಕೊಂಡಳು, ಆ ನೋವಿನಲ್ಲಿ ಸೂಪರ್ ಊರು ಬಿಟ್ಟದ್ದು ಮತ್ತೆ ಹೋಗಿಲ್ಲ ಜೀವನ ಪೂರ್ತಿ ಬ್ರಹ್ಮಚಾರಿಯಾಗಿ ಹೀಗೆ ಚಿಕ್ಕ ಪುಟ್ಟ ಕೂಲಿ ಕೆಲಸ ಮಾಡಿ ಸಂತೋಷವಾಗಿ ಹಾಡು ಹೇಳುತ್ತಾ ಎಲ್ಲರನ್ನು ರಂಜಿಸುತ್ತ ಜೀವಿಸುತಿದ್ದಾನೆ ಮನಸ್ಸಿನಲ್ಲಿನ ನೋವನ್ನ ಹಾಡಿನ ಮೂಲಕ ಹೊರಹಾಕುತ್ತ ಸೂಪರ್ - ಸೂಪರ್ ಅನ್ನುತ್ತಾನೆ .
ಸಾಮಾನ್ಯವಾಗಿ ಈ ಬಡಾವಣೆಯ ಯಲ್ಲಾ ಜನರು ಸೂಪರ್ ಗೆ ಪರಿಚಯವಿದ್ದಾರೆ ಎಲ್ಲರೊಂದಿಗೂ ಒಡನಾಟವಿದೆ ಸೂಪರ್ ಗೆ ಮಾತ್ರ ಎಲ್ಲರೂ ಸಹಾಯ ಮಾಡುತ್ತಾರೆ .
ಒಂದು ದಿನ ಸಂಜೆ ನನ್ನಬಳಿ ಬಂದು ಸ್ವಾಮಿ ಚಿಲ್ಲರೆ ದುಡ್ಡು ಇದ್ದರೆ ಕೊಡಿ ಅಂದ ಸೂಪರ್, ನಾನು ೨೦/- ಕೊಟ್ಟೆ ಅದಕ್ಕೆ ಸೂಪರ್ ಹೇಳಿದ್ದು ನನಗೆ ೧೦/- ಸಾಕು ಸ್ವಾಮಿ ಜಾಸ್ತಿ ದುಡ್ಡು ನನಗ್ಯಾಕೆ ಸ್ವಾಮಿ ?
ಎಂದು ಹೇಳುತ್ತಾ ಈಗ ಬರುತ್ತೇನೆ ಸಾಮಿ ಅಂತ ಅಂಗಡಿಯ ಕಡೆಗೆ ನಡೆಯತೊಡಗಿದ ಜೋರಾಗಿ ತಮಿಳು ಹಾಡು ಕೇಳಿಸುತ್ತಾ ,. ಹೌದು ಮನುಷ್ಯನಿಗೆ ಜಾಸ್ತಿ ದುಡ್ಡು ಯಾಕೆ ,.,.,.
ಎಂದು ಯೋಚಿಸುತ್ತಾ ನನ್ನ ಕ್ಯೆಯಲ್ಲಿನ ನನ್ನ ವಿಮಾನದ ಟಿಕೆಟ್ ಅನ್ನು ನೋಡತೊಡಗಿದೆ .,,.
ಹೌದು ಜಾಸ್ತಿ ದುಡ್ಡು ಯಾಕೆ ?
ಇಸ್ಮಾಯಿಲ್ ಅವರೆ...
ReplyDeleteಬ್ಲಾಗ್ ಪ್ರಪಂಚಕ್ಕೆ ನಿಮಗೆ ಸ್ವಾಗತ. ನಿಮ್ಮ ಬರಹಗಳೆಲ್ಲ ಇಷ್ಟವಾದವು. ಬರೆಯುತ್ತಿರಿ.
Tumba santosha & Dhanyavaadagalu
ReplyDelete