ಅದೇರೀ ಆ ಎದುರು ಮನೆ ಹುಡುಗಿ ಅವಳೀಗ ಮುಂಜಾನೆ ಎದ್ದು ರಂಗೋಲಿ ಹಾಕುವುದಿಲ್ಲ , ಅವಳೀಗ ಮನೆಯ ಕಂಪೊಂಡಿನಲ್ಲಿ ರಾಶಿ ರಾಶಿ ಬಟ್ಟೆ ಒಗೆಯುವುದು ಇಲ್ಲ , ಅದನ್ನು ಒಣ ಹಾಕುವುದುಇಲ್ಲ . ಅದೇ ರೀ ಆ ಎದುರು ಮನೆ ಹುಡುಗಿ ಈಗ ಅಲ್ಲಿ ಕುಳಿತು ರಾಶಿ ರಾಶಿ ಪಾತ್ರೆ ತೊಳೆಯುವುದಿಲ್ಲ,
ಅದೇ ರೀ ಆ ಎದುರು ಮನೆ ಹುಡುಗಿ ಈಗ ಅಲ್ಲಿ ನಿಂತು ನನ್ನನ್ನೂ ಬಾಲ್ಕನಿಯಲ್ಲಿ ನೋಡಿ ಕಣ್ಣು ಮಿಟುಕಿಸ್ವುದಿಲ್ಲ ಅವಳೀಗ ನನ್ನನ್ನೂ ವೈಯಾರದಿಂದ ನೋಡುವುದಿಲ್ಲ, ಪ್ರತಿದಿನ ಬಗೆ ಬಗೆ ಯಾದ ತಿಂಡಿ ಮಾಡಿ ನನಗೆ ಮೊದಲಿನಂತೆ ಕೊಡುವುದಿಲ್ಲ , ಪ್ರತಿ ಭಾನುವಾರ ವಿಶೇಷ ತಿಂಡಿ ಮಾಡುತ್ತಿದ್ದಳಲ್ಲ ಅದು ಈಗ ಸಿಗುತ್ತಿಲ್ಲ , ಕದ್ದು ಮುಚ್ಚಿ ನನ್ನ ಒಟ್ಟಿಗೆ ಸಿನಿಮಾ ನೋಡಲು ಈಗ ಬರುತ್ತಿಲ್ಲ ,
ಭಾನುವಾರದ ಆ ಬೆಣ್ಣೆ ದೋಸೆ ಚಟ್ತ್ನಿ ನೆನಪಾಗುತ್ತಿದೆ , ಸೋಮವಾರದ ಆ ಚಿತ್ರಾನ್ನ ನೆನಪಾಗುತ್ತಿದೆ , ಮಂಗಳವಾರದ ಪೂರಿ ಸಾಗು ನೆನಪಾಗುತ್ತಿದೆ , ಬುಧವಾರದ ರುಚಿಯಾದ ಇಡ್ಲಿ ಸಾಂಬಾರ್ ನೆನಪಾಗುತ್ತಿದೆ , ಗುರುವಾರದ ಪುಳಿಯೋಗರೆ ಅಹಾ ಬಹಳ ನೆನಪಾಗುತ್ತಿದೆ , ಶುಕ್ರವಾರದ ಬಹು ಬೇಡಿಕೆಯ ಘೀ ರೈಸ್ , ಶನಿವಾರದ ತಟ್ಟೆ ಇಡ್ಲಿ ಮತ್ತು ಬೆಣ್ಣೆ , ಒಂದೋ ಎರಡೋ ಏನು ಹೇಳಲಿ ಏನೆಲ್ಲಾ ನನಗಾಗಿ ಮಾಡಿ ಕೊಡುತ್ತಿದ್ದಳು ,ಈಗ ಆ ಒಂದೂ ಕಾರ್ಯಕ್ರಮಗಳು ಕಾಣುತ್ತಿಲ್ಲ ,
ಅದೇ ಆ ಎದುರು ಮನೆ ಹುಡುಗಿ ಈಗ
ಗಿಡಗಳಿಗೆ ನೀರು ಹಾಕುವುದು ಕಾಣುತ್ತಿಲ್ಲ , ಜೋರಾಗಿ ಹಾಡುವುದು ಕೇಳಿಸುತ್ತಿಲ್ಲ , ಏನಾಯಿತು ಅವಳಿಗೆ ಎಲ್ಲರು ಟಿ ವಿ ನೋಡುವಾಗ ಕತ್ತಲೆಯಲ್ಲಿ ಬಂದು ನನಗೊಂದು ಮುತ್ತು ಕೊಟ್ಟು ಹೆದರಿಸುತ್ತಿದ್ದ , ಅವಳೀಗ ಎಲ್ಲವನ್ನು ಮರೆತಿದ್ದಾಳೆ , ಅವಳೀಗ ನಾನು ಕೂರುತ್ತಿದ್ದ ಬಾಲ್ಕನಿಯನ್ನು ನೋಡುವುದಿಲ್ಲ ,
ಅದೇ ರೀ ಆ ಎದುರು ಮನೆ ಹುಡುಗಿ
ಅವಳು ಮಾಡುತಿದ್ದ ಎಲ್ಲ ಕೆಲಸವನ್ನು ಈಗ ನಾನೇ ಮಾಡುತ್ತಿದ್ದೇನೆ ,.,. ,.,.,. ಕಾರಣವಿಷ್ಟೇ
ನಾನೀಗ ಮದುವೆ ಯಾಗಿರುವುದು ಅವಳನ್ನೇ ,.,. ಅವಳು ಬಾಲ್ಕನಿಯಲ್ಲಿ ಕೂರುತ್ತಾಳೆ ,.ನಾ ಮಾಡುವ ಎಲ್ಲ ಕೆಲಸವನ್ನು ನೋಡುತ್ತಾ ,.,.,.,.,.
ನಾನು ಕಣ್ಣು ಮಿಟುಕಿಸಿದರೆ ,.,.,. ಅವಳು ಕಣ್ಣು ಬಿಟ್ಟು ಹೆದರಿಸುತ್ತಾಳೆ ,.,.,.!
No comments:
Post a Comment