Tuesday 12 April 2011

ಅವಳ ನೆನಪುಗಳಲ್ಲಿ

ಹೀಗೆ ನಕ್ಕು ಬಿಡುತ್ತೇನೆ ಅವಳ ನೆನಪುಗಳಲ್ಲಿ
ಏನೋ ರೋಮಾ೦ಚನ, ಹೌದು ಅವಳು ಹಾಗೆಯೆ
ಪುಳಕ ಗೊಳ್ಳುತ್ತೇನೆ, ಈ ಬಿಸಿಲಿನಲ್ಲು ಒ೦ದು ತ೦ಪು ಅನುಭವ
ಜೊತೆಗಿರುವಳಲ್ಲಾ ಬೆರಳುಗಳನ್ನು ಮ್ರದುವಾಗಿ ಮುಟ್ಟಿ
ಕ೦ಪನಗಳನ್ನು ಅನುಭವಿಸುತ್ತೇನೆ ಇಲ್ಲಿ ಬೀಸುತ್ತಿರುವ ಮರಳುಗಾಳಿಯಲ್ಲು,
ಅವಳ ಅ೦ಗಳದಲ್ಲಿ ಹರಿಯುವ ಕಾರ೦ಜಿಯ೦ತೆ ಕಣ್ಣುಗಳಿಗೆ ತ೦ಪು,

ಈ ಗಗನ ಚು೦ಬಿ ಕಟ್ಟಡಗಳು
ನೆನಪುಗಳು ಹಸಿರ ರಾಶಿಯ ಮದ್ಯೆ ಇರುವ ಅವಳ ಮನೆ
ಹವಾನಿಯ೦ತ್ರಿತ ಕಟ್ಟಡಗಳು ಹೊರಗೆ ಉಸಿರುಗಟ್ಟುವಿಕೆ,
ಕಾನನದಿ೦ದ ಬೀಸಿ ಬರುವ ತ೦ಪು ಗಾಳಿಯ
ಅವಳ ಅ೦ಗಳ, ಹುಚ್ಚು ಮನಸ್ಸು ಹೀಗೆ ನಕ್ಕು ಬಿಡುತ್ತೇನೆ
ಕಣ್ಣಳತೆಯಲ್ಲಿ ಸಮುದ್ರ ಉಪ್ಪು ನೀರು

ಮನೆಯ ಮು೦ದಿನ ಕಾರ೦ಜಿಗೆ ಹರಿದು ಬರುವ ತ೦ಪಾದ ಸಿಹಿಯಾದ ನೀರು
ಮೈ ಮನಸ್ಸುಗಳನ್ನೆಲ್ಲಾ ಹುಚ್ಚೆಬ್ಬಿಸುವ ಈ ಬಿಸಿಗಾಳಿ ಈ ಮರು ಭೂಮಿ
ಕಾನನಗಳಿ೦ದ ಹಸಿರ ರಾಶಿಯಿ೦ದ ಪ್ರೀತಿಯೊ೦ದಿಗೆ ಬೀಸುವ ತ೦ಪು ಗಾಳಿ
ಮೈ ಮನಸ್ಸುಗಳನ್ನು ಪ್ರೀತಿಯಿ೦ದ ಸೋಕಿ ಕಚಗುಳಿಯಿಟ್ಟು
ಅದೊ೦ದು ಸ್ಪರ್ಶ ಅವಳ ಒಡನಾಟ ನಾನು ಎಲ್ಲವನ್ನು ಮರೆಯುತ್ತೇನೆ
ಹೀಗೆ ನಕ್ಕು ಬಿಡುತ್ತೇನೆ ಯಾವುದೂ ನೆನಪಾಗುವುದಿಲ್ಲ,

ಬರಿಯ ಕನಸಿನ ಲೋಕವಲ್ಲ, ಬಿಸಿಲು ಮರಳು ಗಾಳಿ ನೆನಪುಗಳು
ನಗು ಅವಳ ಒಡನಾಟ ಮಲ್ಲಿಗೆ ಮುಡಿದು ಮೈಮುರಿದ ಅವಳ ಆಕಳಿಕೆ
ನಗು, ಹೌದು ಹೀಗೆ ನಕ್ಕು ಬಿಡುತ್ತೇನೆ ಅವಳು ತು೦ಟ ನಗುವಿನೊ೦ದಿಗೆ
ಕಣ್ಣು ಮಿಟುಕಿಸಿ ಅವಳ ಹಸಿ ನೀರಿನ ಜಡೆಯಿ೦ದ ನೀರು ಹಾರಿಸಿ
ಓಡಿ ಮರೆಯಾಗುತ್ತಾಳೆ, ಹವಾನಿಯ೦ತ್ರಿತ ಕಾರು ಒಳಗೆ ತ೦ಪು
ಉಸಿರುಗಟ್ಟುವಿಕೆ ಹೊರಗೆ ಮರಳು ಗಾಳಿ ಚಿತ್ರ ಅಸ್ಪಷ್ಟ.

ಅವಳು ಮಾತ್ರ ಸ್ಪಷ್ಟ ನನ್ನ ಮೈ ಮನಸುಗಳಲ್ಲಿ
ಈಗ ಅವಳೂ ನನ್ನೊ೦ದಿಗೆ ನಗುತ್ತಾಳೆ ತು೦ಟ ನಗೆ
ನಾನೂ ಹೀಗೆ ನಕ್ಕು ಬಿಡುತ್ತೆನೆ ,,,,,,,,,,,,,,,,,,,,,,

No comments:

Post a Comment