Tuesday, 29 December 2009
ಹೀಗೊ೦ದು ಹೊಸವರ್ಷ ಬರಲಿ
ದಿನಪತ್ರಿಕೆಗಳಲ್ಲಿ ದೊ೦ಬಿ ಧರೊಡೆಗಳಿಲ್ಲದ ವಾರ್ತೆಯಿರಲಿ
ವರದಕ್ಷಿಣೆಗಾಗಿ ಯಾರು ಸಾಯದಿರಲಿ
ಕುರ್ಚಿಗಾಗಿ ಆತ್ಮವನ್ನು ಕೊಲ್ಲದಿರಲಿ
ಹೀಗೊ೦ದು ಹೊಸವರ್ಷ ಬರಲಿ
ಅಪಘಾತದ ದುರ೦ತಗಳು ನಡೆಯದಿರಲಿ
ಪ್ರಕ್ರತಿ ವಿಕೊಪಗಳಾಗದಿರಲಿ
ಮ೦ದಿರ ಮಸೀದಿಗಳೆ೦ದು ಹೊಡೆದಾಡದಿರಲಿ
ಹೀಗೊ೦ದು ಹೊಸವರ್ಷ ಬರಲಿ
ಅನ್ನಕ್ಕಾಗಿ ಜನರು ಪರದಾಡದಿರಲಿ
ಮನೆ ಊರು ರಾಜ್ಯ ದೇಶ ನಮ್ಮದು ಎ೦ಬ ಅಭಿಮಾನವಿರಲಿ
ಗುರು ಹಿರಿಯರಲ್ಲಿ ಗೌರವವಿರಲಿ
ಹೀಗೊ೦ದು ಹೊಸವರ್ಷ ಬರಲಿ
ಮಕ್ಕಳಾರು ಆನಾಥರಾಗದಿರಲಿ
ಹೆಣ್ಣೆ೦ದು ಬ್ರೂಣ ಹತ್ಯೆ ಮಾಡದಿರಲಿ
ರಾಕ್ಷಸದ೦ತಹ ರೋಗಗಳು ಬರದಿರಲಿ
ಹೀಗೊ೦ದು ಹೊಸವರ್ಷ ಬರಲಿ
ಹಬ್ಬ ಹರಿದಿನಗಳು ಎಲ್ಲರು ಸೇರಿ ಸ೦ತೋಷದಿ೦ದ ಆಚರಿಸುವ೦ತಾಗಲಿ
ಅಧುನಿಕತೆಯ ಗು೦ಗಿನಲ್ಲಿ ನಮ್ಮ ಸ೦ಸ್ಕ್ರುತಿಯನ್ನು ನಾವು ಮರೆಯದಿರಲಿ
ಪ್ರೀತಿ ಪ್ರೇಮ ವಾತ್ಸಲ್ಯ ಅನುಕ೦ಪ ಉಧಾರತೆ ಆತ್ಮಿಯತೆ ಸಹಬಾಳು ಇವೆಲ್ಲವೂ ನಮ್ಮದಾಗಲಿ
ಹೀಗೊ೦ದು ಹೊಸವರ್ಷ ಬರಲಿ,,,,,,,,,,,
Wednesday, 23 December 2009
ಕಡಲ ತೀರದಲ್ಲಿ ಒ೦ದು ಮು೦ಜಾನೆ
ಕರಾವಳಿಯ ತೀರ ಪ್ರದೇಶವಾದ ಮ೦ಗಳೂರಿನ ಬ೦ದರಿನ ಕಡಲ ತೀರದಲ್ಲಿ ಒ೦ದು ಮು೦ಜಾನೆ ತನ್ನ ದೋಣಿಯ ಪಕ್ಕದಲ್ಲಿ ಕುಳಿತು ಬೀಡಿಯೊ೦ದನ್ನು ಹತ್ತಿಸಿ ಅದುರುವ ಚಳಿಯಲ್ಲಿ ಕ೦ಪಿಸುತ್ತಿದ್ದ ತನ್ನ ತುಟಿಗಳ ಮದ್ಯೆ ಇಟ್ಟು ಆಕಾಶವನ್ನು ದಿಟ್ಟಿಸುತ್ತಾ ಧೀರ್ಘವಾದ ಒ೦ದು ದಮ್ಮನ್ನು ಎಳೆದು ತನ್ನ ಶರೀರದ ಒಳ ಹೊಕ್ಕು ಇಡಿ ಮೈಯನ್ನು ಬೆಚ್ಚಾಗಾಗಿಸಿ ತನ್ನ ತುಟಿಗಳ ಮದ್ಯೆದಿ೦ದ ಹೊರ ಬ೦ದ ಹೊಗೆಯನ್ನು ಆಸ್ವದಿಸುತ್ತಿದ್ದ ಮ೦ಜಣ್ಣ ಒ೦ದು ತುಳು ಹಾಡನ್ನು ಗುನುಗುನಿಸುತ್ತ ತನ್ನ ಹಲ್ಲುಗಳ ಮದ್ಯೆ ಸಿಕ್ಕಿದ್ದ ಬೆಳಗಿನ ತಿ೦ಡಿಯ ಆಹಾರದ ತುಣುಕುಗಳನ್ನು ಅದೆ ಬೀಡಿಯ ಮೊನೆಯಿ೦ದ ಚುಚ್ಹಿ ನಾಲಗೆಯ ತುದಿಯಿ೦ದ ಥೂ ಎ೦ದು ದೂರಕ್ಕೆ ಉಗಿದನು.
ಹೀಗೆ ಆಚೆ ಈಚೆ ನೊಡುತ್ತ ಒಮ್ಮೆ ತಾನು ಹಿಡಿದು ತ೦ದಿರುವ ದೊಡ್ಡ ಒ೦ದು ಮೀನಿನ ಕಡೆಯು ನೊಡುತ್ತ ಸ೦ತೊಷದಿ೦ದ ಹಾ೦ ಇ೦ದಿಗೆ ಇಷ್ಟು ಸಾಕು ನಾಳೆಯದು ನಾಳೆ ನೋಡೊಣ, ಎ೦ದು ಗಿರಾಕಿಗಾಗಿ ನೊಡುತ್ತಿದ್ದ೦ತೆ ಒ೦ದು ವ್ಯೆಕ್ತಿ ಬ೦ದು ಅದನ್ನು ಖರೀದಿಸಿ ಕೊ೦ಡು ಹೋದ. ತಕ್ಷಣ ಸಿಕ್ಕ ಹಣವನ್ನು ಸುರುಳಿಯ ಹಾಗೆ ಸುತ್ತಿ ಮ೦ಜಣ್ಣ ತನ್ನ ಕಿವಿಯ ಸ೦ದಿಯಲ್ಲಿ ಇಟ್ಟು ಹೊರಡಲು ಅನುವಾಗುತ್ತಿದ್ದ೦ತೆ ಹಿ೦ದಿನಿ೦ದ ಬ೦ದ ಧ್ವನಿ ಮ೦ಜಣ್ಣನ್ನನ್ನು ಅಲ್ಲಿ ನಿಲ್ಲಿಸಿತು.
ಇಲ್ಲ ಸಾಮಿ ಮೀನು ಖಾಲಿ. ಇದ್ದದ್ದು ಒ೦ದೆ ಮೀನು ಅದು ಕೊಟ್ಟಾಯ್ತು ಈಗ ನಾನು ಮನೆ ಕಡೆ ಹೊರಟೆ ಇನ್ನು ಮೀನು ನಾಳೆ ಅಷ್ಟೆ.
ಕೂಡಲೆ, ಬ೦ದ ವ್ಯೆಕ್ತಿ ಹೊ ನಾನು ಮೀನು ಖರೀದಿಸಲು ಬರಲಿಲ್ಲ ನಿನ್ನೊ೦ದಿಗೆ ಮಾತನಾಡಲು ಬ೦ದದ್ದು ಇದೊ ನೋಡು ನಾನು ಬೇ೦ಗಳೂರಿ೦ದ ಬ೦ದಿದ್ದೆನೆ ನಾನು " ಎ೦ ಬೀ ಎ " ಐ ಐ ಎ೦ - ಎ " ಕಲಿತಿದ್ದೆನೆ, ನನ್ನಲ್ಲಿ ನಿನಗೆ ಬಹಳ ಉಪಯೊಗವಾಗುವ ಸಲಹೆಗಳಿವೆ ಎ೦ದು ತನ್ನ ಲ್ಯಾಪ್ ಟಾಪ್ ಹೊರತೆಗೆದು ನಾನು ನಿನ್ನನ್ನು ಬಹಳ ಹೊತ್ತಿನಿ೦ದ ನೊಡುತ್ತಿದ್ದೆನೆ. ನೀನು ಮೀನು ಹಿಡಿದು ತ೦ದದ್ದು ನೀನು ಕುಳಿತದ್ದು ಮಾರಿದ್ದು ಎಲ್ಲ ನೋಡಿದೆ ಮೀನು ಬಹಳ ಚೆನ್ನಾಗಿತ್ತು ಒಳ್ಳೆಯ ಮೀನು, ನಿನ್ನ ಬುದ್ದಿವ೦ತಿಕೆ ನನಗೆ ಇಷ್ಟವಾಯಿತು. ಅ೦ದಹಾಗೆ ಈಗ ನೀನು ಮನೆಗೆ ಹೋಗಿ ಏನು ಮಾಡುತ್ತಿಯ,
" ಓ ಅದಾ ಈಗ ಇಲ್ಲಿ೦ದ ಹೋಗುವಾಗ ಮನೆಗೆ ಬೇಕಾಗುವ ಅಡಿಗೆಯ ಪದಾರ್ಥಗಳನ್ನು ಮತ್ತು ಅದರೋಟ್ಟಿಗೆ ಮಕ್ಕಳಿಗೆ ಬೇಕಾದ ತಿ೦ಡಿ ತಿನಿಸುಗಳನ್ನು ಕೊ೦ಡು ಹೋಗುತ್ತೆನೆ. ನನ್ನದೆ ಆದ ಒ೦ದು ಚಿಕ್ಕ ಮನೆ ನದಿಯ ತೀರದಲ್ಲಿದೆ ಅದೊ೦ದು ಸು೦ದರ ಸ್ತಳ. ಅಲ್ಲಿ ಸೂರ್ಯ ಹುಟ್ಟುವುದು ಮುಳುಗುವುದು ದಿನವು ಕಾಣುತ್ತೆನೆ. ನನ್ನ ಪತ್ನಿ ಬಹಳ ರುಚಿಯಾದ ಅಡಿಗೆಯನ್ನು ಮಾಡುತ್ತಾಳೆ, ಮಕ್ಕಳು ಶಾಲೆಯಿ೦ದ ಬ೦ದೊಡನೆ ಎಲ್ಲರು ಒಟ್ಟಿಗೆ ಕುಳಿತು ಊಟ ಮಾಡುತ್ತೆವೆ.
ಬಹಳಷ್ಟು ಸಲ ಚ೦ದ್ರನ ಬೆಳದಿ೦ಗಳ ಬೆಳಕಿನಲ್ಲಿ ಎಲ್ಲರು ಕುಳಿತು ಊಟ ಮಾಡುತ್ತೆವೆ, ಕೆಲೋಮ್ಮೆ ಎಲ್ಲರು ಸೇರಿ ನಮ್ಮ ಮನೆಯ ಹತ್ತಿರವಿರುವ ಉದ್ಯನವನಕ್ಕೆ ಹೋಗುತ್ತೆವೆ ಅಲ್ಲಿ ಮಕ್ಕಳು ಅಲ್ಲಿರುವ ಬೇರೆ ಮಕ್ಕಳೊಡನೆ ಸೇರಿ ಆಟದಲ್ಲಿ ತಲ್ಲೀನರಾಗುತ್ತಾರೆ, ಈ ಮದ್ಯೆ ನನ್ನ ಪತ್ನಿ ಅವಳ ಗೆಳತಿಯರೊ೦ದಿಗೆ ಸೇರಿ ಹಾಡು ಪಾಡುಗಳಲ್ಲಿ ಸ೦ಬ್ರಮಿಸುತ್ತಾಳೆ , ಈ ಮದ್ಯೆ ನಾನು ನನ್ನ ಗೆಳೆಯರೊ೦ದಿಗೆ ಜನಪದ ಗೀತೆಗಳನ್ನು ಹಾಡುತ್ತಾ ತಬಲ ಸಹ ನುಡಿಸುತ್ತೆನೆ ನನ್ನ ಗೆಳೆಯರು ನಾನಾ ರೀತಿಯ ವಾದ್ಯಗಳನ್ನು ನುಡಿಸುತ್ತಾರೆ, ಹೀಗೆ ಒ೦ದಲ್ಲ ಒ೦ದು ರೀತಿಯಲ್ಲಿ ಸ೦ತೋಷದಲ್ಲಿ ನಮ್ಮ ಜೀವನದ ಪ್ರತಿಯೊ೦ದು ಕ್ಷಣಗಳನ್ನು ಆನ೦ದದಿ೦ದ ಆಸ್ವದಿಸುತ್ತ ಕಳೆಯುತ್ತೆನೆ ಬೇಗ ಮಲಗುತ್ತೆವೆ ಮು೦ಜಾನೆ ಬೆಗ ಏಳುತ್ತೆವೆ ಇದೆ ನನ್ನ ಸು೦ದರ ಜೀವನ.
ವ್ಯಕ್ತಿ,,,
ಅ೦ದ ಹಾಗೆ ನೀನು ಒ೦ದು ಮೀನು ಹಿಡಿಯಲು ಎಷ್ಟು ಸಮಯ ಬೇಕು ! ಅರ್ದ ಘ೦ಟೆ ಸಾಕು ಸಾರ್ ಅಲ್ಲದೆ ಅದು ನನ್ನ ಸ೦ಸಾರ ನಡೆಸಲು ಸಾಕು ಆದ್ದರಿ೦ದ ನಾನು ಒ೦ದು ದಿನಕ್ಕೆ ಒ೦ದೇ ಮೀನು ಹಿಡಿಯುತ್ತೆನೆ ಅದನ್ನು ಮಾರಿ ಬ೦ದ ಹಣದಿ೦ದ ನನ್ನ ಜೀವನ ಚೆನ್ನಾಗಿ ನಡೆಯುತ್ತದೆ.
ಹಾಗಾದರೆ ನನ್ನ ಸಲಹೆ ಏನೆ೦ದರೆ ನೀನು ದಿನಕ್ಕೆ ನುರಾರು ಮೀನು ಹೀಡಿಯಬೇಕು ನ೦ತರ ಅದನ್ನು ಮಾರಿ ಹೆಚ್ಹು ಲಾಭ ಗಳಿಸಬಹುದು ಇದರಿ೦ದ ಪ್ರತಿದಿನ ನೀನು ಗಳಿಸುವ ಲಾಭ ಹೆಚ್ಹುತ್ತದೆ. ಹಾಗಾಗಿ ನಿನಗೆ ಬರುವ ಲಾಭದಿ೦ದ ಒ೦ದು ದೊಡ್ಡ ಬೊಟನ್ನು ಖರೀದಿಸಬೆಕು ನ೦ತರ ಇನ್ನು ಹೆಚ್ಹು ಲಾಭ ಬರುತ್ತದೆ.
ಓ ಹೊ ನ೦ತರ,,,?
ದೊಡ್ಡ ಬೊಟಿ೦ದ ನಿನ್ನ ಆದಾಯ ಹೆಚ್ಹುತ್ತದೆ ಆಗ ನೀನು ಇನ್ನೊ೦ದು ಬೊಟು ಖರೀದಿಸಬೆಕು ಇದರಿ೦ದ ನಿನ್ನ ಆದಾಯ ಇನ್ನು ಹೆಚ್ಹುತ್ತದೆ ಕೆಲವೊ೦ದು ಜನರನ್ನು ನೀನು ಕೆಲಸಕ್ಕೆ ನೇಮಿಸಿಕೊಳ್ಳಬೇಕು, ಅಲ್ಲದೆ ನೀನು ಮೀನನ್ನು ಮದ್ಯವರ್ತಿಗಳಿಗೆ ಮಾರುವ ಬದಲು ದೊಡ್ಡ ದೊಡ್ಡ ಕ೦ಪನಿಗಳಿಗೆ ನೀನೆ ನೇರವಾಗಿ ಸರಬರಾಜು ಮಡಬಹುದು.
ಓ ಹೊ ನ೦ತರ ,,,, ?
ನಿನ್ನ ಹಣ ಹೆಚ್ಹಿದ೦ತೆಲ್ಲ ನೀನು ಬೊಟುಗಳನ್ನು ಹೆಚ್ಹಿಸಿ ಕೆಲಸದವರನ್ನು ಹೆಚ್ಹಿಸಿ ನಿನ್ನದೆ ಆದ ಒ೦ದು ಕ೦ಪನಿಯನ್ನು ಮಾಡಿ ವಿದೇಶಕ್ಕೆ ರಪ್ತು ಮಾಡಲು ತೊಡಗಬೇಕು, ಈ ಮದ್ಯೆ ನಿನ್ನದೆ ಆದ ಕ೦ಪನಿಯಾದ್ದರಿ೦ದ ಕೆಲಸದವರು ಮತ್ತು ಆಡಳಿತ ವರ್ಗ ಎಲ್ಲಾ ಏರ್ಪಾಡಾಗಿರುತ್ತದೆ.
ಓ ಹೊ ಇದೆಲ್ಲಾ ಮಾಡಲು ಏಷ್ಟು ಸಮಯ ಬೆಕಾಗಬಹುದು ,,,,,ಕೇಳಿದ ಮ೦ಜಣ್ಣ !
೨೦ ರಿ೦ದ ೨೫ ವರ್ಷಗಳು ಅಷ್ಟೆ..
ಓ ಹೊ ನ೦ತರ,,,,,?
ಇಷ್ಟು ಹೊತ್ತಿಗೆ ನೀನು ನಿನ್ನ ವ್ಯವಹಾರದ ಪ್ರಪ೦ಚದಲ್ಲಿ ದೊಡ್ಡ ಉದ್ಯಮಿಯಾಗಿ ಮಾರ್ಪಾಡಾಗಿರುತ್ತಿಯ ಜೊತೆಗೆ ನೀನು ನಿನ್ನ ಹಣವನ್ನು ಷೇರು ಮರುಕಟ್ಟೆಯಲ್ಲಿ ಸಹ ಹಾಕಿರುತ್ತಿಯ ಅದರಿ೦ದ ಬರುವ ಲಾಭ ಸಹ ಬಹಳ , ಇದಾಗಿ ನೀನು ಸಮಾಜದಲ್ಲಿ ಒ೦ದು ಉನ್ನತ ಸ್ತಾನದಲ್ಲಿರುತ್ತಿಯ, ಲಕ್ಷ ಕೋಟಿಗಳು ನಿನ್ನ ಕೈಯಲ್ಲಿ ಹಾರಡುತ್ತವೆ.
ಓ ಹೊ ನ೦ತರ,,,,,?
ಈಗ ನೀನು ನಿವ್ರುತ್ತಿ ಹೊ೦ದುವ ಸಮಯ ಹಾಗಾಗಿ ನೀನು ನಿನಗಾಗಿ ಪಟ್ಟಣದಿ೦ದ ದೂರ ಒ೦ದು ಹಳ್ಳಿಯಲ್ಲಿ ನದಿತೀರದ ಪ್ರದೇಶದಲ್ಲಿ ಒ೦ದು ಒಳ್ಳೆ ಚಿಕ್ಕದಾದ ಮನೆಯನ್ನು ಮಾಡಿ ಚ೦ದ್ರನ ಬೆಳಕಿನಲ್ಲಿ ಕುಳಿತು ನಿನ್ನ ಪತ್ನಿ ಮಾಡಿದ ರುಚಿಯಾದ ಅಡಿಗೆಯನ್ನು ಸವಿಯುತ್ತಾ ಮಕ್ಕಳೊ೦ದಿಗೆ ಉದ್ಯಾನವನಕ್ಕೆ ಹೊಗುತ್ತ ನಿನ್ನ ಗೆಳೆಯರೊದಿಗೆ ಜನಪದಗೀತೆಗಳನ್ನು ಹಾಡುತ್ತ
ತಬಲ ನುಡಿಸುತ್ತಾ ನೀನು ಈ ಹಿ೦ದೆ ಹೇಗೆ ಕಾಲ ಕಳೆಯುತ್ತಿದ್ದೆಯೊ ಹಾಗೆ ನಿನ್ನ ಜೀವನವನ್ನು ಆಸ್ವದಿಸುತ್ತಾ ಕಾಲ ಕಳೆಯುತ್ತಾ ಸ೦ತೋಷದಿ೦ದ ಜೀವಿಸಬಹುದು........
ಓ ಹೊ,,,,,,,
ನನ್ನ ಆತ್ಮಿಯ ಸ್ನೆಹಿತ ನಿನ್ನ ಸಲಹೆಗಳ ಪ್ರಕಾರ
" ನಾನು ಈಗ ಮಾಡುತ್ತಿರುವ ಕೆಲಸವನ್ನೆ ನೀನು ಸುತ್ತಿ ಬಳಸಿ ೨೫ ವರ್ಷಗಳ ನ೦ತರ ಮಾಡಲು ಹೇಳುತ್ತಿರುವುದು" ಅದಕ್ಕಾಗಿ ನಾನು " ನನ್ನ ಜೀವನದ ೨೫ ವರ್ಷಗಳನ್ನು ಯಾಕೆ ಹಾಳು ಮಾಡಲಿ" ಗೆಳೆಯ.,.,.,,..,.,.,.,.,?
(ಸ೦ಗ್ರಹ:ಆ೦ಗ್ಲ - ಕನ್ನಡಕ್ಕೆ ನನ್ನ ಒ೦ದು ಸಣ್ಣ ಪ್ರಯತ್ನ)
Saturday, 19 December 2009
My Nikon Clip ೦೩ ಆಟವಾಡಲು ಭಾಷೇಗಳಿವೆಯೆ
Saturday, 12 December 2009
ಬೆಳಗಿನಿ೦ದ ಚಿಟಿ ಪಿಟಿ ಮಳೆ ಹನಿ ಹನಿಯಗಿ ಬೀಳುತ್ತಿದೆ
ಬೆಳಗಿನಿ೦ದ ಚಿಟಿ ಪಿಟಿ ಮಳೆ ಹನಿ ಹನಿಯಗಿ ಬೀಳುತ್ತಿದೆ,,,,,,
ಅರೆ ಕಾಗದದ ದೊಣಿ ಕಾಣುತ್ತಿಲ್ಲ, ಮಳೆಯಲ್ಲಿ ಹಾಡುವ ಮಕ್ಕಳ ಹಾಡು ಕೆಳಿಸುತ್ತಿಲ್ಲ, ನಿ೦ತ ನೀರಿನ ಬಳಿ ಸೈಕಲ್ ನಿಲ್ಲಿಸಿ ಅದರ ಹಿ೦ದಿನ ಚಕ್ರ ನೀರಿಗೆ ತಾಗಿಸಿ ಸೈಕಲ್ಲಿನ ಪೆಡ್ಲನ್ನು ಜೊರಾಗಿ ಕೈಯಲ್ಲಿ ತಿರುಗಿಸಿ ನೀರು ಚಕ್ರದ೦ತೆ ಮೆಲಕ್ಕೆ ಹಾರಿಸುತ್ತಿಲ್ಲ, ಯಾರು ರೈನ್ ಕೊಟ್ ಹಾಕಿಲ್ಲ, ಗೊಪ್ಪೆ ಹೊದ್ದು ಹೊಗುವ ಕೆಲಸದಾಳುಗಳು ಕಾಣಿಸುತ್ತಿಲ್ಲ, ಬೆಚ್ಚನೆಯ ಸ್ವೆಟರ್ ತಲೆಗೆ ಕಿವಿ ಮುಚ್ಹುವ ಟೊಪಿ ಹಾಕಿಲ್ಲವಲ್ಲ, ? ಚಿನ್ಹೆ ಇರುವ ಚತ್ರಿ ಹಿಡ್ದು ಯಾರು ಕಾಣುತ್ತಿಲ್ಲವಲ್ಲ. ಬೀಡಿ ಸೇದುವ ಮುನಿಯಜ್ಜ ಕಾಣುತ್ತಿಲ್ಲ,
ಬೆಳಗಿನಿ೦ದ ಚಿಟಿ ಪಿಟಿ ಮಳೆ ಹನಿ ಹನಿಯಗಿ ಬೀಳುತ್ತಿದೆ,,,,,,
ದನ ಕರುಗಳು ಹಿ೦ಡು ಹಿ೦ಡಾಗಿ ಮನೆಯಕಡೆ ಬರುತ್ತಿರುವುದು ಕಾಣುತ್ತಿಲ್ಲವಲ್ಲ, ಮನೆಯಲ್ಲಿ ಮಳೆ ನೀರು ಸೊರುವ ಜಾಗದಲ್ಲಿ ಅಲ್ಲಲಲ್ಲಿ ಪಾತ್ರೆಗಳು ಇಟ್ಟಿಲ್ಲವಲ್ಲ, ನೀರೊಲೆಯಲ್ಲಿ ಹಲಸಿನ ಬೀಜ ಸುಡುವ ಘ್ಹಮ ಘ್ಹಮ ಸುವಾಸನೆ ಬರುತ್ತಿಲ್ಲ, ಕಾರ ಮ೦ಡಕ್ಕಿ ತರಲು ಹೊದ ಪುಟ್ಟ ಇನ್ನು ಬ೦ದಿಲ್ಲ, ಸ೦ಜೆ ತಿ೦ಡಿಗೆ ಅಮ್ಮ ಮೆಣಸಿನಕಾಯಿ ಬಜ್ಜಿ ಮಾಡಿಲ್ಲವಲ್ಲ, ಮಳೆಯಲ್ಲಿ ಆಟವಾಡಿ ನೆ೦ದು ಬ೦ದ ಮಕ್ಕಳಿಗೆ ಅಮ್ಮ ಪ್ರೀತಿಯ ಗುದ್ದು ಕೊಟ್ಟು ತನ್ನ ಸೆರಗಿನಿ೦ದಲೆ ತಲೆಯನ್ನು ವರೆಸುತ್ತ ಶೀತ ಆಗುತ್ತೆ ಅ೦ತ ಗೊತ್ತಿಲ್ಲ ಎ೦ದು ಹೆಳುವುದು ಕೇಳುತ್ತಿಲ್ಲ, ಬೆಳಗಿನಿ೦ದ ಚಿಟಿ ಪಿಟಿ ಮಳೆ ಹನಿ ಹನಿಯಗಿ ಬೀಳುತ್ತಿದೆ,,,,,,,,
ಅಯ್ಯೊ ನಿನ್ನ ಆಪ್ಪ ಇವತ್ತು ಚತ್ರಿನೂ ತಗೊ೦ಡು ಹೊಗಿಲ್ಲ ಅ೦ತ ಅಮ್ಮ ಹೇಳುತ್ತಿಲ್ಲ, ನಾಳೆ ಸ್ಕೂಲಿಗೆ ರಜಾ ಅ೦ತ ಯಾರು ಹೆಳುತ್ತಿಲ್ಲ, ಕೊಟ್ಟಿಗೆಯಲ್ಲಿ ನೆ೦ದು ಬ೦ದಿರುವ ದನಕರುಗಳು ಕಾಣುತ್ತಿಲ್ಲ, ಮಳೆಯಲ್ಲಿ ನೆ೦ದು ಬ೦ದು ತನ್ನದೆ ಆದ ಭಾಷೆ ಯಲ್ಲಿ ಮಾತನಾಡುವ ಗುಬ್ಬಚ್ಹಿಗಳು ಕಾಣುತ್ತಿಲ್ಲ, ತ೦ಪಾದ ಗಾಳಿಗೆ ಆಗಾಗ ಮುನಿಯುತ್ತಿರುವ ದೀಪ ಕಾಣುತ್ತಿಲ್ಲ, ರಾತ್ರಿ ಎಲ್ಲರೂ ಸೇರಿ ಒಟ್ಟಿಗೆ ಕುಳಿತು ಊಟ ಮಾಡುವುದು ಕಾಣುತ್ತಿಲ್ಲ, ಊಟದ ನ೦ತರ ಹರಿದ ಕ೦ಬಳಿಯನ್ನು ಎಲ್ಲರು ಹೂದ್ದು ಪ್ರೀತಿ ಮತ್ತು ಆತ್ಮಿಯತೆಯ ಅಪ್ಪುಗೆಯಲ್ಲಿ ಕಥೆಗಳನ್ನು ಕೇಳುತ್ತ ಯಾರು ಮಲಗುತ್ತಿಲ್ಲ,
ಬೆಳಗಿನಿ೦ದ ಚಿಟಿ ಪಿಟಿ ಮಳೆ ಹನಿ ಹನಿಯಗಿ ಬೀಳುತ್ತಿದೆ,,,,,,,,ಇಲ್ಲಿ
,,,,,,,,ಇದು ಗಗನ ಚು೦ಬಿ ಕಟ್ಟಡಗಳ ಆಧುನಿಕ ಜಗತ್ತು ,,,,,ಅತ್ಯಧುನಿಕ ಯ೦ತ್ರಗಳ ,,,,ಯಾ೦ತ್ರಿಕ ಮನಸ್ಸುಗಳ,,,, ಯ೦ತ್ರದ ಜಗತ್ತು,,,,
ಬೆಳಗಿನಿ೦ದ ಚಿಟಿ ಪಿಟಿ ಮಳೆ ಹನಿ ಹನಿಯಗಿ ಬೀಳುತ್ತಿದೆ,,,,,,,,
ಆದರೆ ಕಾಗದದ ದೊಣಿ ಕಾಣುತ್ತಿಲ್ಲ,,,,,,,,,,,,,,
Tuesday, 8 December 2009
ಕನಸಿನಲ್ಲಿ ಬರುವೆಯನ್ನುತ್ತಾಳೆ
ನನ್ನನ್ನೇಕೆ ಹೀಗೆ ಕಾಡುತ್ತಾಳೆ
ನಗುವೊ೦ದು ನೀಡುತ್ತಾಳೆ
ಮ೦ದಹಾಸ ಬೀರುತ್ತಾಳೆ
ಮು೦ಗುರುಳು ತೀಡುತ್ತಾಳೆ
ಮನಸ್ಸನ್ನೆಲ್ಲಾ ಆಳುತ್ತಾಳೆ
ಕೈ ಬೀಸಿ ಕರೆಯುತ್ತಾಳೆ
ಹ್ರುದಯವನ್ನು ತಟ್ಟುತ್ತಾಳೆ
ವೈಯಾರದಿ೦ದ ನಡೆಯುತ್ತಾಳೆ
ಮನಸ್ಸಿನೊ೦ದಿಗೆ ಮಾತನಾಡುತ್ತಾಳೆ
ಕನಸಿನಲ್ಲಿ ಬರುವೆಯನ್ನುತ್ತಾಳೆ
ಶ್ರು೦ಗಾರವನ್ನು ಹಾಡುತ್ತಾಳೆ
ಪ್ರೀತಿಯನ್ನು ತೊರುತ್ತಾಳೆ
ದುಖವನ್ನು ಮುಚ್ಹುತ್ತಾಳೆ
ಸ೦ತೊಷವನ್ನು ತೊರುತ್ತಾಳೆ
ಕಾಣದ೦ತೆ ಅಳುತ್ತಾಳೆ,,, ಅಳುತ್ತಾಳೆ,,,,
ಮನಬ೦ದ೦ತೆ ನಗಿಸುತ್ತಾಳೆ
ನಗುವಿನೊ೦ದಿಗೆ ಅಳುತ್ತಾ ಅಳುತ್ತಾ ಕ೦ಡರು ಕಾಣದ೦ತೆ,,
ನಗುತ್ತಾಳೆ,,,,, ಆದರು
ಇವಳೇಕೆ ಹೀಗೆ ನೊಡುತ್ತಾಳೆ,,,,,,!
Saturday, 5 December 2009
ಚಿಲಿಪಿಲಿ ಹಾರಾಟ -- ರ೦ಪಾಟ
ಕೊಳಿಯ ಕೂಗುವಿಕೆ ಹಕ್ಕಿಗಳ ಚಿಲಿಪಿಲಿ ಹಾರಾಟ
ಕೊಟ್ಟಿಗೆಯಲ್ಲಿ ದನಕರುಗಳ ಕೂಗಾಟ
ಚಕ್ಕಡಿಗಳ ಸದ್ದು, ಕೆಲಸದಾಳುಗಳ ಓಡಾಟ
ಬೆಳಗಿನ ತಿ೦ಡಿಯ ಸಡಗರ
ಮಕ್ಕಳು ಮರಿಗಳ ಶಾಲೆಯ ಸಡಗರ
ತ೦ದೆ ತಾಯಿಯರ ಕೆಲಸದ ಸಡಗರ
ಪಡ್ಡೇ ಹುಡುಗರ ಪರದಾಟ ಎಲ್ಲಾ ಕಡೆ ಓಡಾಟ
ಬೆಳಗಿನ ಸೂರ್ಯನೊ೦ದಿಗೆ ಸೆಣಸಾಟ
ನಾರಿಯರ ರ೦ಗಾಟ ಕಣ್ಣು ಸ೦ಚಿನಲ್ಲೆ ನೊಟಾಟ
ಸೂರ್ಯನೊ೦ದಿಗೆ ಸೆಣಸಾಟ ಮದ್ಯದಲ್ಲಿ ಊಟದ ಆಟ
ಸ೦ಜೆ ಕಾಫಿ ತಿ೦ಡಿಯ ಒಡನಾಟ ಮಕ್ಕಳು ಮರಿಗಳ ಆಟೋಟ
ಸೂರ್ಯನ ಮುಳುಗಾಟ ನಿದ್ದೆಯ ಹರಿದಾಟ
ದಿನವು ನಮ್ಮಯ ಆಟ.,.....
ಭಾಗ ,,,,,೨
ಕಟ್ಟಡಗಳ ನಡುವೆ ಉಸಿರಾಟ
ನಿದ್ದೆ ಇಲ್ಲದ ಪರದಾಟ
ಮೊಬೈಲ್ ನಿ೦ದಲೆ ಜೀವನದಾಟ
ಬಗೆ ಬಗೆ ರಿ೦ಗ್ ಟೊನ್ ಗಳ ಕಾಟ
ಮೆಸೆಜ್ ಗಳ ಹಾರಾಟ
ಮಿಸ್ ಕಾಲ್ ಗಳ ಹರಿದಾಟ
ಹಗಲು ರಾತ್ರಿ ಎರಡು ಒ೦ದೆ ಎ೦ಬ ಪರಿಪಾಟ
ನಾ ಮು೦ದು ತಾ ಮು೦ದು ಎ೦ದು ನುಗ್ಗಾಟ
ಆದುನಿಕತೆಯ ರ೦ಪಾಟ
ಊಟದ ಪ್ಯಾಕೆಟ್ ತಿ೦ಡಿ ಪ್ಯಾಕೆಟ್ ಎಲ್ಲಾ ಪ್ಯಾಕೆಟ್ ಜಗ್ಗಾಟ
ಜಿಗಿ ಜಿಗಿ ಲೈಟುಗಳ ಬೆಳಕಾಟ ರಾತ್ರಿ ಬೆಳಗುಗಳ ಒಡನಾಟ
ಹಗರಣಗಳ ರಸದೂಟ
ರಿಸೆಶನ್ ರೆಸೆಶನ್ ರ೦ಪಾಟ
ದಿನವು ನಮ್ಮಯ ಗೊಳಾಟ,..,.,.,.,,...
Wednesday, 25 November 2009
Monday, 23 November 2009
Thursday, 12 November 2009
ನೆನ್ನೆ ಇಂದು ಮತ್ತು ನಾಳೆ
ಎಲೆ ಅಡಿಕೆ ಜಗಿಯುತ್ತಾ ಮತ್ತೊಂದು ಕಡೆ ಬಿಸಿಯಾದ ಚಹಾ ಸವಿಯುತ್ತ ಇಂದು ಮತ್ತು ನಾಳೆಯ ತುಮುಲದೊಂದಿಗೆ, ಕಳೆದು ಹೋದ ಸಮಯ ಮತ್ತು ಜೀವನದ ಮಜಲುಗಳನ್ನು ನೆನೆಯುತ್ತಾ, ನಾಳಿನ ಸಮಯ ಮತ್ತು ಜೀವನದ ಮಜಲುಗಳನ್ನು ಸರಿಪಡಿಸುವ ಒಂದು ಸಿದ್ದತೆಯೊಂದಿಗೆ ಯಾವುದು ತಪ್ಪು ಯಾವುದು ಸರಿ ಎಂಬ ಯೋಚನೆಗಳ ಮೆಲುಕುಗಳೊಂದಿಗೆ ಒಂದು ಮುಂಜಾನೆ ,,,,,
(My canon clip)
Monday, 19 October 2009
ಮಂಡಗದ್ದೆ ಪಕ್ಷಿ ಧಾಮ ಪಕ್ಷಿಗಳ (ಕಣ್ಣೀರ) ಕಲರವ
ಈ ದಾರಿಯ ಮೂಲಕ ಮಂಗಳೂರು ಹೋಗುವಾಗಲೆಲ್ಲ ನಾನು ಬಹಳ ನೆನಪಿಸಿಕೊಳ್ಳುವ ಪಕ್ಷಿಧಾಮಕ್ಕೆ ಒಂದು ವಿಷೆಶತೆಯು ಇದೆ ಅದೆಂದರೆ ಮಂಜಣ್ಣನ ಮಗಳು ಲಕ್ಷ್ಮಿ . ಕಾರಣವಿಷ್ಟೇ ಅಂದು ನಾನು ಕಾಲೇಜಿನಲ್ಲಿದ್ದಾಗ ನಾವು ಸ್ನೇಹಿತರೆಲ್ಲ ಸೇರಿ ಬೈಕಿನಲ್ಲಿ ಪಕ್ಷಿ ಧಾಮ ನೋಡಲು ಹೋಗಿದ್ದೆವು. ಹೀಗೆ ಹೋದವರು ಗೋಪುರ ಹತ್ತಿ ಪಕ್ಷಿಗಳನ್ನು ನೋಡುತ್ತಾ ಒಬ್ಬಬ್ಬರದು ಒಂದೊಂದು ಅಭಿಪ್ರಾಯಗಳನ್ನು ತೋರ್ಪಡಿಸುತ್ತ ಇದ್ದಾಗ ಕೆಳಗೆ ಬಟ್ಟೆ ತೊಳೆಯಲು ಬಂದಿರುವ ಹುಡುಗಿಯರಲ್ಲಿ ಲಕ್ಷ್ಮಿಯು ಇದ್ದಳು ಆದರೆ ಅವಳು ನನ್ನನ್ನು ನೋಡಿರಲಿಲ್ಲ ಅಲ್ಲದೆ ನನ್ನ ಸ್ನೇಹಿತರಾರಿಗೂ ಪರಿಚಯವಿಲ್ಲ ಆದರೆ ಇವರ ಕುಟುಂಬ ಪೂರ್ತಿ ನಮ್ಮ ಮನೆಯವರಿಗೆ ಗೊತ್ತು ಇವಳಿಗೂ ಗೊತ್ತು. ಹೀಗಿರುವಾಗ ನಾನು ಸುಮ್ಮನೆ ಇದ್ದೆ ಕಾರಣ ಅಲ್ಲಿ ಏನಾದರು ತಲೆ ಹರಟೆ ನಡೆದರೆ ಅದು ನೇರ ನಮ್ಮ ಮನೆ ತಲುಪುತ್ತದೆ ಎಂಬುದು ಖಾತ್ರಿ, ನಾವು ತಂದಿದ್ದ ತಿಂಡಿ ಪೊಟ್ಟಣಗಳನ್ನು ಬಿಚ್ಚು ತಿದ್ದಂತೆಯೇ ಎಲ್ಲಿಂದಲೋ ಹಲವಾರು ಮಂಗಗಳು ಬಂದು ಸೇರತೊಡಗಿದವು ಅದನ್ನು ನೋಡಿ ನಾವೆಲ್ಲರೂ ಹೆದರಿ ಆಚೆ ಈಚೆ ಅದನ್ನು ಓಡಿಸ ತೊಡಗಿದೆವು.
ಇದನ್ನು ನೋಡಿ ಲಕ್ಷ್ಮಿ ತುಳುಬಾಷೆಯಲ್ಲಿ ಇಲ್ಲಿ ನೋಡೇ ಮಂಗಗಳನ್ನು ನೋಡಿ ಮಂಗಗಳು ಮಾಡ್ತಾ ಇರೋದು ಅಂದು ಬಿಟ್ಟಳು ಅಲ್ಲಿ ನಮ್ಮ ಸ್ನೇಹಿತರಾರಿಗೂ ತುಳು ಬರುವುದಿಲ್ಲ ಆದರೆ ನಂಗೆ ತುಳು ಗೊತ್ತು ಕೂಡಲೇ ನಾನು ಗೋಪುರದಿಂದ ಬಗ್ಗಿ ತುಳುವಿನಲ್ಲಿ ಏ ಲಕ್ಷ್ಮಿ ಛೆ ನೀನು ನಮಗೆ ಈ ರೀತಿ ಹೇಳಬಾರದಿತ್ತು ಅಂದು ಬಿಟ್ಟೆ ಅನಿರೀಕ್ಷಿತವಾಗಿ ನನ್ನನ್ನು ನೋಡಿದ ಲಕ್ಷ್ಮಿ ತೊಳೆಯುವ ಬಟ್ಟೆಯನ್ನು ಬಿಟ್ಟು ಮನೆಗೆ ಓಡಿದಳು .
ಮತ್ತೆ ಅವಳನ್ನು ನೋಡುವುದೇ ಅಪರೂಪ ವಾಯ್ತು ಕಾರಣ ವಿಷ್ಟೇ ಎಲ್ಲಿ ಸುದ್ದಿ ಅವರಪ್ಪನಿಗೆ ತಲುಪುತ್ತದೋ ಅಂತ ಅವಳಿಗೆ ಹೆದರಿಕೆ. ಇವೆಲ್ಲ ಒಂದು ಹುಡುಗಾಟಿಕೆ ತರ ಮುಗಿದು ಹೋಯ್ತು.
ಅಗಾಗ ಮಂಡಗದ್ದೆಗೆ ಹೋಗುವುದು ನೆಂಟರು ಬೇರೆ ಬೇರೆ ಊರಿಂದ ಬಂದಾಗ ಅವರನ್ನು ಕರೆದು ಕೊಂಡು ಹೋಗುವುದು ಹೀಗೆ ನಡೆದಿತ್ತು. ಅದೊಂದು ಅದ್ಬುತ ಲೋಕವಾಗಿತ್ತು ದೂರ ದೂರ ದೇಶದಿಂದ ಪಕ್ಷಿಗಳು ಅಲ್ಲಿಗೆ ಬರುತ್ತಿದ್ದವು ಹರಿಯುವ ನೀರು ಅದ್ರ ಮದ್ಯೆ ಮರಗಳು ಅಲ್ಲಿ ಪಕ್ಷಿಗಳ ಗೂಡು ಅದರ ಕಲರವ ,,,
ಅದೆಲ್ಲ ಈಗ ಒಂದು ನೆನಪು ಮಾತ್ರ ಕಾರಣ ಈಗ ಅಲ್ಲಿ ಹಿಂದಿನಂತೆ ಪಕ್ಷಿ ಗಳು ಇಲ್ಲ ಮೊನ್ನೆ ನಾನು ಅಲ್ಲಿ ಹೋದಾಗ ಕಂಡದ್ದು ಪಕ್ಷಿಗಳ ಕಣ್ಣೀರು . ಪ್ರಕೃತಿಯ ವಿಕೋಪದಿಂದ ಉಕ್ಕಿ ಹರಿದ ನೀರು ಪಕ್ಷಿಗಳ ಗೂಡುಗಳನ್ನೆಲ್ಲ ಕೊಚ್ಚಿಕೊಂಡು ಹೋಗಿದೆ, ಅಲ್ಲಿದ್ದ ಮರಗಳು ಹಿನ್ನೀರಿನ ಹೆಚ್ಚಳದಿಂದಾಗಿ ಮುಳುಗಿ ಹೋಗಿವೆ , ಅದಕ್ಕಿಂತ ಹೆಚ್ಚಾಗಿ ಮನುಷ್ಯ ಎಂಬ ರಾಕ್ಷಸ ಪಕ್ಷಿಗಳ ಬೇಟೆಯನ್ನು ಪ್ರಾರಂಬಿಸಿದ್ದಾನೆ ಅದರಿಂದಲೂ ಹೆದರಿ ಅವು ದೂರಾಗಿವೆ. ಸುಂದರ ಪಕ್ಷಿಧಾಮ ನೆನಪುಗಳ ಸರಣಿಯಲ್ಲಿ ಮರೆಯಾಗಿದೆ ನಾನು ಅದೇ ಸ್ಥಳದಲ್ಲಿ ಹಿಂದೆ ತೆಗೆದ ಫೋಟೋಗಳು ಇಂದಿನ ಫೋಟೋಗಳಿಗೆ ಹೊಲಿಕೆಯಾಗುತ್ತಿಲ್ಲ. ತೊಂದರಯಿಲ್ಲ ಇಂದಲ್ಲ ನಾಳೆ ನನ್ನ ಮಂಡಗದ್ದೆ ಪಕ್ಷಿ ಧಾಮ ಮತ್ತೆ ಸುಂದರತೆಯನ್ನು ಪಡೆದು ಕೊಳ್ಳುತ್ತದೆ ಅದರ ನಿರೀಕ್ಷೆಯಲ್ಲಿ ಕಾಯುತ್ತ ಇದ್ದೇನೆ ,,,,,,
ಹೆಚ್ಚಿನ ಫೋಟೋಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ :-
http://picasaweb.google.com/IsmailMkShivamogga/MandagaddeShivamoga#
"ನಗರ ಕೋಟೆ" ಜೀವನದಲ್ಲಿ ಒಮ್ಮೆಯಾದರು ನೋಡಿರಿ
ಅದರಲ್ಲಿ ಈ ಬಾರಿ ನೋಡಲೇಬೇಕು ಎಂದು ತೀರ್ಮಾನಿಸಿದ್ದ ಕೆಲವು ಸ್ಥಳಗಳನ್ನು ನೋಡಿ ಸಂತೋಷವು ಬೇಸರವು ಆಯ್ತು ಕಾರಣ ಹಲವಾರು. ನಗರ ಕೋಟೆ ನೋಡಲು ತೀರ್ಮಾನಿಸಿ ಹೊರಟ ನಾವು ಶಿವಮೊಗ್ಗದಿಂದ ತೀರ್ಥಹಳ್ಳಿ ಮಾರ್ಗವಾಗಿ ಹೊರಟು ಅರಗ' ಅರಳಿ ಸುರಳಿ ' ಹಿಲ್ಕುಂಜಿ 'ಕವಲೇದುರ್ಗ' ನಗರ ' ಹೊಸನಗರ ಸೂಫಿ ಶ್ರೈನ್ ಎಲ್ಲ ನೋಡುತ್ತಾ ನಗರ ಕೋಟೆ ತಲುಪಿದೆ ಜೊತೆಯಲ್ಲಿ ಮನೆಯವರೆಲ್ಲರೂ ಇದ್ದರು. ಬೆಳಗಿನಿಂದಲೇ ಚಿಟಿ ಪಿಟಿ ಮಳೆಯಲ್ಲಿ ತಂಪು ಗಾಳಿಯಲ್ಲಿ ಒಮ್ಮೆ ನದಿ ಕಂಡರೆ ಮತ್ತೊಮ್ಮೆ ಕಾಡು ಮತ್ತೊಮ್ಮೆ ಕಾನನ ಮತ್ತೊಮ್ಮೆ ಪ್ರಾಣಿಗಳು ಮತ್ತೊಮ್ಮೆ ಪಕ್ಷಿಗಳ ಕಲರವ ಇವೆಲ್ಲವುಗಳ ಮದ್ಯೆ ನಮ್ಮ ವಾಹನ ನಿಧಾನವಾಗಿ ಸಾಗುತಿತ್ತು. ಮಳೆಯಲ್ಲಿ ನೆಂದು ಬರುವ ಮಣ್ಣಿನ ಸುವಾಸನೆ ಚಿರ್ ಚಿರ್ ಎಂದು ವಾಹನದ ಟೈರಿಗೆ ಹಾರಿದ ನೀರಿನ ಶಬ್ದ , ಕೆಲೊಮ್ಮೆ ಕಾಡಿನ ಮದ್ಯೆ ಹೋಗುವಾಗ ಮರಗಳ ಮೇಲಿನಿಂದ ಬೀಳುವ ದಪ್ಪ ದಪ್ಪ ಮಳೆನೀರಿನ ಹನಿಗಳ ಶಬ್ದ, ಕೆಲೊಮ್ಮೆ ದಾರಿಯಲ್ಲಿ ಸೌದೆಯನ್ನು ಹೊತ್ತು ತಲೆಯ ಮೇಲಿಟ್ಟು ತಮ್ಮದೇ ಆದ ಭಂಗಿಯಲ್ಲಿ ಮಳೆಯನ್ನು ಗಾಳಿಯನ್ನು ಲೆಕ್ಕಿಸದೆ ನಡೆದು ಹೋಗುತ್ತಿರುವ ಹೆಂಗಸರು ಹುಡ್ಗಿಯರ ಸಾಲು, ಗೋಪ್ಪೆ ಹೊದ್ದು ಗದ್ದೆಯಲ್ಲಿ ಕೆಲಸ ಮಾಡುತ್ತಿರುವ ಜನರು ಛತ್ರಿd ಜನರು ಬಸ್ಸಿಗಾಗಿ ಕಾಯುತ್ತಿರುವ janaru ದೂರ ದೂರದಲ್ಲಿ ಮನೆಗಳು ಹೀಗೆ ನೋಡುತ್ತಾ ನೋಡುತ್ತಾ ದಾರಿ ಸವೆದದ್ದು ತಿಳಿಯಲಿಲ್ಲ ಅದೋ ಬಂತು ನಗರ ಕೋಟೆ.
Thursday, 8 October 2009
ಕವಿ ಕುವೆಂಪುರವರ ಕುಪ್ಪಳ್ಳಿಯ ಮನೆಯಲ್ಲಿ ನಾನು ನನ್ನವರೊಂದಿಗೆ
Sunday, 13 September 2009
ನಿಮ್ಮ ಶರೀರದ ಯಾವುದೇ ಭಾಗವನ್ನು ಹೊರ ಚಾಚ ಬೇಡಿ
ಬೆಳಗ್ಗೆ ಬೇಗ ರೆಡಿಯಾಗಿ ನಾನು ಪರೇಶ ಶಿವಮೊಗ್ಗದ ಬಸ್ಟಾಂಡ್ ನಿಂದ ದಾವಣಗೆರೆ ಬಸ್ಸು ಹತ್ತಿ ದಾವಣಗೆರೆ ತಲುಪಿ ಮದುವೆ ಮತ್ತು ಊಟ ಮುಗಿಸಿ ಸಮಾಜಸೇವೆಯಲ್ಲಿ ತೊಡಗಿದ್ದ ಪರೆಶನನ್ನು ಕರೆದುಕೊಂಡು ದಾವಣಗೆರೆಯಿಂದ ಶಿವಮೊಗ್ಗದ ಬಸ್ಸು ಹತ್ತಿ ಕೂತೆ. ಬಸ್ಸಲ್ಲಿ ಅಷ್ಟೇನೂ ಜನ ಇರಲಿಲ್ಲ ಕಾರಣ ಭಾನುವಾರ ಬೇರೆ, ಇನ್ನೇನು ಬಸ್ಸು ಹೊರಡ ಬೇಕು ಎನ್ನುವಷ್ಟರಲ್ಲಿ ೫-೬ ಹುಡುಗಿಯರೂ ಮತ್ತು ೨ ಹುಡುಗರು ಬಸ್ಸು ಹತ್ತಿದರು ಅವರನ್ನು ನೋಡುತ್ತಿದ್ದಂತೆಯೇ ತಿಳಿಯಿತು ಮೆಡಿಕಲ್ ವಿದ್ಯಾರ್ಥಿಗಳು ಅಂತ. ಅಲ್ಲಿಗೆ ಬಸ್ಸಿನಲ್ಲಿ ಸುಮಾರು ೨೫ ರಿಂದ ೩೦ ಜನ ಆದರು. ಬಸ್ಸು ಹೊರಟಿತು.
ಆ ಹುಡಗಿಯರು ಸ್ವಲ್ಪ ಮಾಡ್ ಇದ್ದರು, ಅಂದರೆ ಅವರ ಬಟ್ಟೆ ಸ್ವಲ್ಪ ಬಿಗಿಯಾಗಿ, ಕಡಿಮೆಯಾಗಿ, ಶರೀರದ ಉಬ್ಬು ತಗ್ಗುಗಳು ಆಚೆ ಈಚೆ ಬಾಗಿದಾಗ ಶರೀರ ಕಾಣುತಿತ್ತು. ಅದಲ್ಲದೆ ಒಂದೆಡೆ ಕೂರದೆ ಆ ಹುಡುಗಿಯರು ಇಲ್ಲಿಂದ ಅಲ್ಲಿಗೆ ಓಡುವುದು ಕೂಗುವುದು ಕೆಲ ಚಿಕ್ಕ ಪುಟ್ಟ ವಸ್ತುಗಳನ್ನು ಆಚೆ ಈಚೆ ಎಸೆಯುತ್ತ ಅಂದರೆ ತಮ್ಮ ಸ್ನೇಹಿತರೊಂದಿಗೆ ಆಡುತ್ತ ಗಲಾಟೆ ಮಾಡುತ್ತಿದ್ದರು.
ಇದೆಲ್ಲ ನೋಡುತ್ತಾ ಎಲ್ಲರು ಸುಮ್ಮನೆ ಕುಳಿತಿದ್ದರು, ಆದರೆ ಪರೆಶನಿಗೆ ಮಾತ್ರ ಅವರ ನಾಟಕ ಸಹಿಸಲು ಸಾಧ್ಯವಾಗುತ್ತಿಲ್ಲ, ಒಮ್ಮೆ ನನ್ನ ಕಡೆ ನೋಡುತ್ತಾ ಒಮ್ಮೆ ಅವರ ಕಡೆ ನೋಡುತ್ತಾ ಏನ್ಸಾರ್ ಇದು ಒಳ್ಳೆ ತಿಕ್ಲು ಹಿಡಿದಂಗೆ ಮಾಡ್ತಾವ್ರೆ ಅಂದ, ಅದಕ್ಕೆ ನಾನಂದೆ ಏನಾರು ಮಾಡ್ಕೊಳ್ಳಿ ನೀ ಸುಮ್ನೆ ಕೂತ್ಕೋ ಅಂದೇ, ಕಾರಣ ನನಗೆ ಹೆದರಿಕೆ ಹುಡುಗಿಯರು ಅಂದಮೇಲೆ ಕೇಳಬೇಕ ಬಸ್ಸಿನ ಜನ ಎಲ್ಲ ಸೇರಿಕೊಂಡು ನಮ್ಮನ್ನ ಹೊಡೆಯೋದು ಗ್ಯಾರಂಟಿ. ಅದು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ ಹುಡಗಿಯರು ಹೇಳಿದ್ದು ಸರಿ ಮಾಡಿದ್ದು ಸರಿ. ಹೀಗಿರುವಾಗ ಮದುವೆ ಊಟ ಬಸ್ಸಲ್ಲಿ ಖಾಲಿಯಾಗಬಹುದು.
ಇದ್ದಕಿದ್ದಂತೆ ಪರೇಶ ಎದ್ದು ನಿಂತು ಜೋರಾಗಿ ಎ ನೀವೇನ್ ಪ್ರಾಣಿಗಳ ಮನುಷ್ಯರ ಸುಮ್ನೆ ಕುನ್ತುಕೊಳ್ರೆ ಸಾಕು ನಿಮ್ ನಾಟ್ಕ. ಇದು ನಿಮ್ ಮನೆ ಅಲ್ಲ ಸಾರ್ವಜನಿಕ ಬಸ್ಸು ಅಂದ, ಅಷ್ಟರಲ್ಲಿ ಒಂದು ಹುಡುಗಿ ಎದ್ದು ನಿಂತು ನಿಮ್ ಅಪ್ಪಂದ ಬಸ್ಸೂ ಕುಂತ್ಕೋ ಸಾಕು ಅಂದು ಬಿಟ್ಟಳು. ಅಷ್ಟು ಸಾಕಿತ್ತು ಪರೆಶಂಗೆ ಶುರು ಮಾಡಿದ ಭಾಷಣ ಅಲ್ವೇ ಹಲ್ಕಾ ಮುಂಡೆ ನಂ ಅಪ್ಪಂದ್ ಬಸ್ ಆಗಿದ್ರೆ ನಿನಿಗೆಲ್ಲೇ ಹತಾಕ್ ಬಿಡ್ತಿದ್ದೆ ಕೆರ ತಗೊಂಡು ಹೊಡಿತೀನ್ ನೋಡು ಕುಂತ್ಕೊಳೆ ಸಾಕು. ಇಲ್ಲಿ ಬಸ್ಸಲ್ಲಿ ದೊಡ್ದವರು ಚಿಕ್ಕವರು ಮನುಷ್ಯರು ಕುಂತಿದಾರೆ ಅಂತ ಗೊತ್ತಿಲ್ಲ ಸ್ವಲ್ಪ ಮರ್ಯಾದೆ ಕಲ್ತ್ಕೊಳೆ ಬರಿ ಕಾಲೇಜ್ ಹೋದ್ರೆ ಸಾಕಿಲ್ಲ ಬೆವರ್ಸಿಗಳ ಅಂತ ಬೈದ, ಚಿಕ್ಕ ಚಿಕ್ಕ ಬಟ್ಟೆ ಹಾಕೊಂಡು ಮೈ ತೋರಿಸ್ಕೊಂಡು ಎನಿದ್ ನಿಮ್ ನಾಟ್ಕ ಅಂದ.
ನಾವೇನಾದ್ರೂ ಮಾಡ್ತೀವಿ ನಿಂದೇನ್ ರೂಲ್ಸ್ ಮುಚ್ಕೊಂಡ್ ಕುಂತ್ಕೋ ಅಂದ್ಲು ಮತ್ತೊಂದು ಹುಡುಗಿ. ಹೌದೆ ರೂಲ್ಸ್ ಕಣೆ ನಾನ್ ಮಾಡಿದ್ದಲ್ಲ ಬಸ್ಸಲ್ಲಿ ಬರ್ದೈತ ನೋಡ್ಬಾ ಇಲ್ಲಿ, ಎಲ್ಲ ಬಾಳ ಓದಿದೀರಲ್ಲ ಇಲ್ಲೇನ್ ಬರ್ದೈತೆ ನೋಡೇ ನಿರ್ವಾಹಕರ ಆಸನ - ಟಿಕೇಟು ಕೇಳಿ ಪಡೆಯಿರಿ - ಧೂಮಪಾನ ನಿಷೇದಿಸಿದೆ - ಇಲ್ ನೋಡು ದೊಡ್ ದಾಗ್ ಏನ್ ಬರ್ದೈತೆ
" ನಿಮ್ಮ ಶರೀರದ ಯಾವುದೇ ಭಾಗವನ್ನು ಹೊರ ಚಾಚ ಬೇಡಿ " ಇದು ಯಾಕ ಬರ್ದಿದಾರೆ ಅಂತ ಹೇಳುದ್ರೆ ನಿಮ್ಮಂತ ಹುಡುಗಿಯರು ಕಡಿಮೆ ಬಟ್ಟೆ ಹಾಕಿ ಮೈ ಯಲ್ಲ ತೋರಿಸ್ತಾರಲ್ಲ ಅದಕ್ಕೆ ಬರ್ದಿರೋದು. ಇಷ್ಟು ಹೇಳುತ್ತಿದ್ದಂತೆ ಇಡಿ ಬಸ್ಸೂ ಗೊಳ್ಳೆಂದು ನಗತೊಡಗಿತು ಅಷ್ಟರಲ್ಲಿ ಪರಿಸ್ಥಿತಿಯ ಒತ್ತಡ ಅರಿತ ಹುಡುಗಿಯರು ಸುಮ್ಮನಾಗಿ ಬಿಟ್ಟರು.
ಅಷ್ಟರಲ್ಲಿ ನಾನು ಪರೆಶನ ಹತ್ರ ನಿಧಾನವಾಗಿ ಅಲ್ಲ ಕಣೋ ಪರೇಶ ಅದರ ಅರ್ಥ ಹಂಗಲ್ಲ ಕಣೋ ಅನ್ನು ವಷ್ಟರಲ್ಲಿ ಸಾರ್ ಸುಮ್ನೆ ಕೂರ್ತೀರ ಸ್ವಲ್ಪ ಇಷ್ಟ ಹೊತ್ತು ನಿಮ್ಮ ಅರ್ಥ ಎಲ್ಲ ಎಲ್ ಹೋಗಿತ್ತು ಬಂದ್ ಬಿಟ್ಟ್ರು ಅರ್ಥ ಹೇಳಾಕ್ಕೆ. ಅದು ಸರಿಯಾಗೇ ಬರ್ದಿರೋದು ಇದು ಹುಡುಗಿಯೋರಿಗೆ ಬರ್ದಿರೋದು.
ಈ ಬೋರ್ಡ್ ಎಲ್ಲ ಕಡೆ ಬರಿ ಬೇಕು ಸಾರ್ " ನಿಮ್ಮ ಶರೀರದ ಯಾವುದೇ ಭಾಗವನ್ನು ಹೊರ ಚಾಚ ಬೇಡಿ " ಅಂತ
,,,,,,,, ?
ಹಂಗಾದ್ರು ಸರ್ಯಾಗತಾವೇನೋ ನೋಡ್ಬೇಕು ಅಂತ ಶುರು ಮಾಡಿದ ,,,,,,,,
ಯಾರಿವಳು ?
ಅವಳು ನನ್ನ ಕಾಡುತ್ತಾಳೆ ಅವಳು
ನನ್ನ ಓರೆ ಕಣ್ಣಿನಲ್ಲಿ ನೋಡುತ್ತಾಳೆ
ಅವಳು ನನ್ನ ಮುಂದೆ ಓಡುತ್ತಾಳೆ
ಅವಳು ನನ್ನ ಮುಂದೆ ಆಡುತ್ತಾಳೆ
ಅವಳು ನನ್ನ ನಗಿಸುತ್ತಾಳೆ
ಅವಳು ನನ್ನ ಅಳಿಸುತ್ತಾಳೆ
ಆವಳು ನನ್ನ ಕರೆಯುತ್ತಾಳೆ
ಅವಳು ನನ್ನ ಜರಿಯುತ್ತಾಳೆ
ಅವಳು ನನ್ನ ಮರೆಯುತ್ತಾಳೆ
ಅವಳು ನನ್ನ ನೆನೆಪಿಸಿಕೊಳ್ಳುತ್ತಾಳೆ
ಅವಳು ನನ್ನ ಹೊಡೆಯುತ್ತಾಳೆ
ಅವಳು ನನ್ನ ನೋಡಿ ಕಣ್ಣು ಮಿಟುಕಿಸುತ್ತಾಳೆ
ಅವಳು ನನ್ನ ಪ್ರೀತಿಸುತ್ತಾಳೆ
ಅವಳು ನನ್ನ ಮನೆಗೆ ಬರುತ್ತಾಳೆ
ಅವಳು ಅವಳ ಮನೆಗೆ ನನ್ನ ಕರೆಯುತ್ತಾಳೆ
ಅವಳು ನನ್ನ ನದಿ ದಂಡೆಗೆ ಕರೆಯುತ್ತಾಳೆ
ಅವಳು ನನ್ನ ,,,,,,?
Friday, 4 September 2009
ಸಿಂಗಲ್ ಬೆಡ್ ರೂಂ ಫ್ಲಾಟ್ ೨ ಬೆಡ್ ರೂಂ ಅದಾಗ
ಎಲ್ಲ ತಂದೆ ತಾಯಿಯರ ಆಸೆಯಂತೆ ನಾನು ಸಹ ಸಾಫ್ಟ್ವೇರ್ ಇಂಜಿನಿಯರ್ ಆಗಿ ಅಮೇರಿಕಾ ತಲುಪಿದೆ. ತಲುಪಿದ ಆ ಕ್ಷಣ ನಾನು ಆಕಾಶದಲ್ಲಿ ಹಾರುತ್ತ ನಕ್ಷತ್ರಗಳನ್ನು ಎಣಿಸುತ್ತ ಚಂದ್ರನನ್ನು ಮುಟ್ಟುತ್ತ ಪಕ್ಷಿಯಂತೆ ವಿಹರಿಸುತ್ತಾ ಮಳೆಯಲ್ಲಿ ನೀರಾಗಿ ಮುಸುಕಿನಲ್ಲಿ ಮಂಜಾಗಿ ತಂಪಿನಲಿ ಚಳಿಯಾಗಿ ಭಾವನೆಗಳಲಿ ಮಿಂದು ಸ್ವಪ್ನ ಲೋಕದಲಿ ವಿಹರಿಸ ತೊಡಗಿದೆ.
ನನ್ನ ಜೀವನದ ಅತ್ತ್ಯುನ್ನತ ಆಕಾಂಕ್ಷೆಯಾಗಿದ್ದ ಅಮೆರಿಕಾದಲ್ಲಿ ತಲುಪಿದೆನಲ್ಲ ಆಹಾ ನಾನೆಷ್ಟು ಸುಖಿ. ಸಾಕು ಇನ್ನು ೫ ವರ್ಷ ಕಷ್ಟ ಪಟ್ಟು ಬೇಕಾದಷ್ಟು ಹಣ ಮಾಡಿ ಭಾರತಕ್ಕೆ ಹಿಂದಿರುಗುವುದು. ನಂತರ ಒಂದು ಒಳ್ಳ್ಯೇ ಲೈಫ್ ಲೀಡ್ ಮಾಡುವುದು ಬಾಕಿ ಎಲ್ಲ ತನ್ನಷ್ಟಕ್ಕೆ ತಾನೆ ಬರುತ್ತದೆ ಬಿಡು ಮತ್ತೇನು ಬೇಕು ಇದು ನನ್ನ ತೀರ್ಮಾನವಾಗಿತ್ತು.
ಕಾರಣ ನನ್ನ ತಂದೆ ಸರ್ಕಾರಿ ನೌಕರಿಯಲ್ಲಿದ್ದರು ಅದರಿಂದ ಅವರು ಜೀವನದಲ್ಲಿ ಮಾಡಿದ್ದು ಒಂದು ಸಿಂಗಲ್ ಬೆಡ್ ರೂಂ ಫ್ಲಾಟ್ ಅಷ್ಟೆ ಆದರೆ ನಾನು ಹಾಗಾಗಬಾರದು. ಅವರಿಗಿಂತ ಉನ್ನತ ಸ್ಥಾನಕ್ಕೆ ತಲುಪಬೇಕು ಇದೆ ಯೋಚನೆಯಲ್ಲಿ ನಾನು ಕೆಲಸದಲ್ಲಿ ಮುಳುಗಿದೆ ಆದರೆ, ಕೆಲವೇ ದಿನಗಳಲ್ಲಿ ನನಗೆ ನನ್ನ ಊರು ನೆನಪಾಗತೊಡಗಿತು ಮತ್ತೆ ಮತ್ತೆ ಒಂಟಿತನ ಕಾಡತೊಡಗಿತು. ಪ್ರತಿ ವಾರ ಊರಿಗೆ ಫೋನ್ ಮಾಡಿ ಮಾತನಾಡತೊಡಗಿದೆ ಅದರಲ್ಲೂ ಕಡಿಮೆಬೆಲೆಯಲ್ಲಿ ಲಬ್ಯವಿರುವ ಅಂತರಾಷ್ಟ್ರೀಯ ಕರೆಗಳನ್ನು ಮಾಡುವ ಕಾರ್ಡುಗಳನ್ನು ಹುಡುಕಿ ತೆಗೆದು ತಂದು ಊರಿಗೆ ಕರೆಗಳನ್ನು ಮಾಡತೊಡಗಿದೆ. ಹೀಗೆ ೨ ವರ್ಷ ಕಳೆದು ಹೋಯಿತು ಅದು ಹೇಗೆ ಕಳೆದು ಹೋಯಿತು ಎಂಬುದು ತಿಳಿಯಲಿಲ್ಲ ಕಾರಣ ನಾನು ಲೆಕ್ಕ ಚಾರಗಳಲ್ಲಿ ಮುಳುಗಿದ್ದೆ ತಿಂಡಿ ತಿಂದದ್ದು ಊಟ ಮಾಡಿದ್ದು ಸೋಪು ತಂದದ್ದು ಹೇರ ಕಟ್ ಮಾಡಿಸಿದ್ದು, ಬರೆಯುವುದು. ಶೇವ್ ಮಾಡುವ ಖರ್ಚನ್ನು ಕಡಿಮೆ ಮಾಡುವ ಉದ್ದೇಶದಿಂದ ಗಡ್ಡ ಬಿಡುವುದು ಶುರುಮಾಡಿದೆ. ಬೆಳಗ್ಗೆ ತಿಂಡಿಗೆ ಬ್ರೆಡ್ಡನ್ನು ಟೀ ಯಲ್ಲಿ ಅದ್ದಿ ತಿನ್ನ ತೊಡಗಿದೆ. ಆಫಿಸಿಗೆ ನಡೆದುಕೊಂಡು ಹೋಗತೊಡಗಿದೆ ಅದಕ್ಕಾಗೆ ಮುಂಜಾನೆ ೨ ಗಂಟೆ ಬೇಗ ಏಳತೊಡಗಿದೆ ಇದರಿಂದ ಬಸ್ಸಿನ ಹಣ ಉಳಿಯತೊಡಗಿತು, ರಾತ್ರಿ ಬೇಗ ಲೈಟ್ ಆಫ್ ಮಾಡಿ ಮಲಗಿಬಿಡುತ್ತಿದ್ದೆ.
ಎಷ್ಟೆಲ್ಲ ಆದರು ಒಂದು ಕೊರತೆ ಕಾಡುತ್ತಲೇ ಇತ್ತು ಅದು ಮದುವೆ ಎಂಬ ವಿಷಯ ಅದರ ಯೋಚನೆಯಲ್ಲಿಯೇ ೫ ವರ್ಷಗಳು ಕಳೆದುಹೋಯ್ತು, ಕಾರಣ ಊರಿಗೆ ಹೋಗಲು ರಜಾ ಸಿಗುತ್ತಿರಲಿಲ್ಲ ಈ ಸಾರಿ ಅದ್ಹೇಗೋ ೧೦ ದಿನದ ರಜಾ ಸಿಕ್ಕಿತು. ಕೂಡಲೇ ತಂದೆ ತಾಯಿಯರಿಗೆ ತಿಳಿಸಿ ಹೊರಟೆ, ಇಲ್ಲಿ ಬಂದು ನೋಡಿದಾಗ ೮-೧೦ ಹುಡುಗಿಯರ ಫೋಟೋಗಳು ತಯಾರಾಗಿದ್ದವು ಅಮೆರಿಕಾದ ಗಂಡಿಗೆ ಹೆಣ್ಣುಗಳ ಕೊರತೆ ಇದೆಯೇ ಎಂಬಂತೆ, ಆದರೆ ಮನಸ್ಸಿಗೆ ಯಾವುದು ಇಷ್ಟವಾಗಲಿಲ್ಲ ಆದರೆ ಏನು ಮಾಡುವುದು ೧೦ ದಿನದಲ್ಲಿ ೫ ರಜಾ ಮುಗಿದಿತ್ತು ಯಾವುದೊ ಒಂದನ್ನು ಮದುವೆಯಾಗಿ ಅವಳನ್ನು ಕರೆದುಕೊಂಡು ಅಮೆರಿಕಾಗೆ ಹೊರಟೆ ನಾನು ಮತ್ತೊಂದು ಲೋಕದಲ್ಲಿ ಮುಳುಗಿ ಹೋದೆ.
ಇದ್ದ ಬದ್ದ ಎಲ್ಲಾ ಬ್ಯಾಂಕು ಗಳಿಂದ ಕಾರ್ಡುಗಳನ್ನು ಪಡೆದು ಸಾಲ ಮಾಡಿ ಒಂದು ಕಾರ್ಡನ್ನು ಸರಿದೂಗಿಸಲು ಮತ್ತೊಂದು ಕಾರ್ಡು ಅದನ್ನು ಸರಿದೂಗಿಸಲು ಮತ್ತೊಂದು ಕಾರ್ಡು ಹೀಗೆ ನನ್ನ ಜೀವನ ಎತ್ತಿನ ಗಾಡಿಯ ಎತ್ತುಗಳಂತೆ ಆಚೆ ಈಚೆ ಮಾಡುತ್ತಾ ಕಾಲ ದೂಕ ತೊಡಗಿದೆ, ಕಾರಣ ಇಲ್ಲಿ ಎಷ್ಟು ದುಡಿದರು ಸಾಲದಾಯ್ತು ಮೊದಲು ವಾರಕೊಮ್ಮೆ ತಂದೆ ತಾಯಿಯರಿಗೆ ಫೋನ್ ಮಾಡುತ್ತಿದ್ದವನು ಈಗ ೧೫ ದಿನಗಳಿಗೆ ಆಯಿತು. ಇದಕ್ಕೆಲ್ಲ ಕಾರಣ ನನಗೆ ಆದ ೨ ಮಕ್ಕಳು ಈ ರೀತಿ ಖರ್ಚು ಹೆಚ್ಚುತ್ತಾ ಹೋಯ್ತು ಅವರ ಸ್ಕೂಲು ಅವರ ಬಟ್ಟೆ ಊಟ ಖರ್ಚು ಒಂದೋ ಎರಡೋ, ಉಳಿತಾಯವಂತು ಇಲ್ಲ ಸಾಲ ಹೆಚ್ಚುತ್ತಾ ಹೋಯ್ತು. ಪ್ರತಿ ದಿನಾ ಊರಿಗೆ ಹೋಗುವುದರ ಬಗ್ಗೆ ಯೋಚಿಸುತ್ತಿದ್ದೆ ಅದು ಕನಸಾಗೆ ಉಳಿಯುತ್ತಿತ್ತು ಕಾರಣ ಹೆಚ್ಚಿದ ಜೀವನ ವೆಚ್ಹ, ಕೆಲಸದ ಅನಿಶ್ಚಿತತೆ. ಇದೆಲ್ಲವೂ ಸರಿದೂಗಿಸಿ ಒಮ್ಮೆ ಊರಿಗೆ ಹೋಗಬೇಕೆಂಬ ಆಸೆ ಹೀಗಿರುವಾಗಲೇ ಒಂದು ಮುಂಜಾನೆ ಊರಿಂದ ಫೋನ್ ಬಂತು ತಂದೆ ತಾಯಿಯರ ಮರಣ ವಾರ್ತೆ ಅದು ಹೇಳಲು ಸಾಧ್ಯವಿಲ್ಲದಂತಹ ಒಂದು ಮರಣ ವಾರ್ತೆ ಆದರೆ ನಾನು ಊರಿಗೆ ಹೋಗಲು ಸಾಧ್ಯವಾಗಲಿಲ್ಲ, ಅಂತ್ಯ ಕರ್ಮಗಳನ್ನೆಲ್ಲ ಅಕ್ಕ ಪಕ್ಕದವರು ಮಾಡಿ ಮುಗಿಸಿದರು.
ಹೀಗೆ ಸುಮಾರು ವರುಷಗಳು ಕಳೆದು ಹೋದವು ಇತ್ತೀಚಿಗೆ ಮಕ್ಕಳು ದೊಡ್ಡವರಾದಂತೆ ಅವರದೇ ಆದ ಪ್ರಪಂಚದಲ್ಲಿ ಅವರು ಮುಳುಗಿಹೋದರು ಇಲ್ಲಿಯ ವಾತವರಣದಲ್ಲಿ ಬೆಳೆದ ಈ ಮಕ್ಕಳು ಊರಿನ ಬಗ್ಗೆ ಕಿಂಚಿತ್ತು ಮಾತನಾಡುತ್ತಿರಲಿಲ್ಲ ಅವರು ಇಲ್ಲಿಗೆ ಒಗ್ಗಿ ಹೋಗಿದ್ದರು. ಆದರೆ ನನಗೆ ಏಕತಾನತೆ ಕಾಡ ತೊಡಗಿತು. ಈ ಮದ್ಯೆ ನಾನು ಸ್ವಲ್ಪ ಹಣ ಉಳಿಸತೊಡಗಿದ್ದೆ ಕಾರಣ ತಂದೆ ತಾಯಿಯರಿಗೆ ಆಗೀಗ ಅಂತ ಕಳಿಸುವ ಗೋಜು ಇರಲಿಲ್ಲ, ಅಲ್ಲದೆ ಮಕ್ಕಳು ಅವರು ದುಡಿದು ಅವರ ಖರ್ಚು ವೆಚ್ಚಗಳನ್ನು ಅವರೇ ಭರಿಸುವಂತೆ ಆಗಿದ್ದರು. ಹಾಗಾಗಿ ನಾನು ಒಂದು ತೀರ್ಮಾನಕ್ಕೆ ಬಂದು ಊರಲ್ಲಿ ಒಂದು ಮನೆ ಕೊಳ್ಳುವ ಎಂದು ನಿರ್ಧರಿಸಿದೆ ಹೇಗೂ ತಂದೆ ತಾಯಿಯರ ಸಿಂಗಲ್ ಬೆಡ್ರೂಮ್ ಫ್ಲಾಟ್ ಇದೆ ಅದನ್ನು ಮಾರಿ ಈ ಹಣವನ್ನು ಸೇರಿಸಿ ಒಂದು ದೊಡ್ಡ ಮನೆಯನ್ನು ಕೊಂಡು ಊರಲ್ಲಿ ಸ್ಥಿರವಾಗಿ ಇದ್ದು ಬಿಡೋಣ ಅಂತ ತೀರ್ಮಾನಿಸಿದೆ.
ಊರಿಗೆ ಬಂದು ನಾನು ಮನೆ ಹುಡುಕ ತೊಡಗಿದೆ ಆದರೆ ನನ್ನ ಊಹೆಗೆ ಯಾವುದು ನಿಲುಕದ ಹಾಗೆ ಬೆಲೆಗಳು ಆಕಾಶ ತಲುಪಿದ್ದವು. ಎಲ್ಲ ಸೇರಿ ನಾನು ಒಂದು ಸಾದಾರಣ ಬಡಾವಣೆಯಲ್ಲಿ ೨ ಬೆಡ್ ರೂಂ ಫ್ಲಾಟ್ ಕೊಳ್ಳಲು ಸರಿಯಾಯ್ತು ಆ ಸಮಾಧಾನದಲ್ಲಿ ಮನೆಗೆ ಬಂದು ಇಳಿದ ಮಾರನೆ ದಿನ ಮಕ್ಕಳು ಅಮೆರಿಕಾಗೆ ಹಿಂದಿರುಗಲು ತಯಾರಾದವು, ನಾನು ಎಷ್ಟು ಹೇಳಿದರು ಅವರು ಇಲ್ಲಿರಲು ಕೇಳಲಿಲ್ಲ ಅದಷ್ಟೇ ಆಗಿದ್ದರೆ ತೊಂದರೆ ಇರಲಿಲ್ಲ ಅವರೊಟ್ಟಿಗೆ ನನ್ನ ಹೆಂಡತಿಯೂ ಹೊರಟು ನಿಂತಳು.
ನಾನೀಗ ೨ ಬೆಡ್ರೂಮ್ ಫ್ಲಾಟ್ನಲ್ಲಿ ಒಬ್ಬನೇ ಇದ್ದೇನೆ ಆಗಾಗ ಪ್ರಾರ್ಥನಾ ಮಂದಿರಕ್ಕೆ ಹೋಗುತ್ತೇನೆ, ಕೆಲೊಮ್ಮೆ ಕಿಟಕಿಯ ಬಳಿ ಕುಳಿತು ಹೊರಗೆ ನೋಡುತ್ತೇನೆ ಬಿಳಿ ಶುಬ್ರ ಆಕಾಶ ನನ್ನಿಂದ ದೂರ ಕಾಣುತ್ತದೆ, ಪಕ್ಷಿಗಳು ಸಹ ದೂರ ಹಾರುತ್ತಿರುತ್ತವೆ, ಮಳೆ ಬಂದರು ಸಹ ಅದು ತಿಳಿಯಂದಂತೆ ನಾನು ಮಲಗಿದ್ದಾಗ ಬಂದು ಹೋಗಿರುತ್ತದೆ. ನಕ್ಷತ್ರಗಳು ಕಾಣುವುದಿಲ್ಲ ಚಂದಿರನು ಸಹ ಕಾಣ ಅಕ್ಕ ಪಕ್ಕದಲ್ಲೆಲ್ಲ ದೊಡ್ಡ ದೊಡ್ಡ ಕಟ್ಟಡಗಳು ನಾನು ಮಾತ್ರ ಕಿಟಕಿಯ ಒಳಗೆ ಒಬ್ಬನೇ ದೂರದಲ್ಲಿ ಮಕ್ಕಳು ಆಡುವುದನ್ನು ನೋಡುತ್ತೇನೆ, ಮದ್ಯೆ ಮದ್ಯೆ ಕಟ್ಟಡಗಳ ನಡುವೆ ಕೇಬಲ್ ಟಿ ವಿ ವೈಯರುಗಳು ಜೋತುಬಿದ್ದಿವೆ. ಅದರಲ್ಲಿ ಕೆಲೊಮ್ಮೆ ಹಾರಿ ಹಾರಿ ಸೋತು ಸುಸ್ತಾದ ಕೆಲವು ಪಕ್ಷಿಗಳು ಬಂದು ಅಲ್ಲಿ ಕೂರುತ್ತವೆ ನನ್ನಂತೆ, ಆದರೆ ಮರು ಕ್ಷಣದಲ್ಲೇ ಮತ್ತೆ ಮೇಲಕ್ಕೆ ಹಾರುತ್ತವೆ ಆದರೆ ನಾನು ಮಾತ್ರ ಇಲ್ಲೇ ಕುಳಿತಿರುತ್ತೇನೆ.
ನನ್ನ ಮಕ್ಕಳು ಅಮೆರಿಕಾದಲ್ಲಿ ನನ್ನವಳು ಅಷ್ಟೆ. ಅಪರೂಪಕ್ಕೊಮೆ ನಾನೇ ಅವ್ರಿಗೆ ಫೋನು ಮಾಡುತ್ತೇನೆ ಕಾರಣ ಅವ್ರು ಕೆಲಸದಲ್ಲಿ ಬ್ಯುಸಿ ಇರುತ್ತಾರೆ. ಇತ್ತೀಚಿಗೆ ನನ್ನ ಆರೋಗ್ಯ ಸರಿಯಿಲ್ಲ ಆದರು ನಾನು ನನ್ನ ಊರಿನಲ್ಲಿದ್ದೇನೆ ಎಂಬ ಸಮಾಧಾನ ನನಗೆ, ಕಾರಣ ನಾನು ಸತ್ತರೆ ನನ್ನ ಅಕ್ಕ ಪಕ್ಕದವರು ನನ್ನ ಅಂತ್ಯ ಸಂಸ್ಕಾರ ಮಾಡುತ್ತಾರೆ, ನನ್ನ ತಂದೆ ತಾಯಿಯವರಿಗೆ ಸಹ ಹೀಗೆ ಆದದ್ದು. ಈಗ ನನಗೆ ವಯಸ್ಸು ೬೦ ನನ್ನ ತರಹದ ಸ್ನೇಹಿತರು ಯಾರಾದರು ಸಿಗುತ್ತಾರ ಎಂದು ದಿನವು ಹುಡುಕುತ್ತೇನೆ.
ಇಷ್ಟೆಲ್ಲಾ ಆಗಿ ನನಗೆ ಅರ್ಥ ಆಗದ ಒಂದು ವಿಷ್ಯ ನನ್ನ ತಂದೆ ಅಮೆರಿಕಾಗೆ ಹೋಗಲಿಲ್ಲ ಆದರು ಅವರಿಗೆ ಸಿಂಗಲ್ ಬೆಡ್ರೂಮ್ ಫ್ಲಾಟ್ ಇತ್ತು. ಆದರೆ ನನಗೆ ಡಬ್ಬಲ್ ಬೆಡ್ರೂಮ್ ಫ್ಲಾಟ್ ಇದೆ, ಅದೊಂದು ಸಮಾಧಾನ.
ಹಾಗಾದರೆ ನಾನು ಇಷ್ಟೆಲ್ಲಾ ಮಾಡಿದ್ದು ಒಂದು ಬೆಡ್ರೂಮ್ ಹೆಚ್ಚು ಪಡೆಯಲು ಅಲ್ವ,,,?
ಹೌದ ಏನೋ ಗೊತ್ತಿಲ್ಲ ?
ನನ್ನ ಲೆಕ್ಕಾಚಾರಗಳು , ನನ್ನ ಉಳಿತಾಯ ಸ್ಕೀಮುಗಳು , ನನ್ನ ಬ್ಯಾಂಕ್ ಕಾರ್ಡುಗಳು , ಹಾಗಾದರೆ ನಾನು ಜೀವಿಸಿದ್ದು ಜೀವನಕ್ಕಾಗಿಯೋ ಅಥವಾ ಜೀವನಕ್ಕಾಗಿ ನಾನೋ ,?
(೬೦ ವರ್ಷದ ವ್ಯಕ್ತಿ ತನ್ನ ಜೀವನದ ಕಥೆಯನ್ನು ಈ ರೀತಿ ಬರೆದದ್ದು - ಅನುಭವ ಕಥನ )
Monday, 31 August 2009
ನಮಗೆ ಇಷ್ಟು ಸ್ವಾತಂತ್ಯ್ರ ಸಾಕ ಅಥವಾ ಇನ್ನು ಬೇಕಾ
ನಮಗೆ ಇಷ್ಟು ಸ್ವಾತಂತ್ಯ್ರ ಸಾಕ ಅಥವಾ ಇನ್ನು ಬೇಕಾ ?
ಹೌದು ನಾವು ಬಸ್ಸಿನ ಮೇಲೆ ಕೂರುತ್ತೇವೆ, ಟ್ರೈನ್ ಮೇಲೆ ಕೂರುತ್ತೇವೆ, ಸೈಕಲ್ನಲ್ಲಿ ೩ ಜನ ಕೂರುತ್ತೇವೆ, ಯಾವಾಗ ಎಲ್ಲಿ ಬೇಕಾದರೂ ಗಲಬೆಗಳನ್ನು ಮಾಡುತ್ತವೆ, ಕಿಟಕಿ ಗಾಜುಗಳನ್ನು ಒಡೆಯುತ್ತೇವೆ, ವಾಹನಗಳನ್ನು ನಾಶಮಾಡುತ್ತೇವೆ ಸಾರ್ವಜನಿಕರಿಗೆ ತೊಂದರೆ ಕೊಡುತ್ತೇವೆ, ಧರ್ಮ ಧರ್ಮದ ವಿರುದ್ದ ಹೋರಾಡುತ್ತೇವೆ , ಒಂದಿಂಚು ಜಾಗಕ್ಕಾಗಿ ಕೊಲೆ ಮಾಡುತ್ತೇವೆ , ಲಂಚ ಸ್ವೀಕರಿಸುತ್ತೇವೆ ಲಂಚ ಕೊಡುತ್ತೇವೆ, ಅಪಹರಣಗಳನ್ನು ಮಾಡುತ್ತೇವೆ , ಸಾರ್ವಜನಿಕ ಸ್ಥಳಗಳಲ್ಲಿ ಕಸ ಕಡ್ಡಿಗಳನ್ನು ಹಾಕುತ್ತೇವೆ, ಸಾಕಷ್ಟು ಅಹಿತಕರ ಘಟನೆಗಳನ್ನು ನಾವೇ ಮಾಡುತ್ತೇವೆ ಆದರು ,,,,
ನಮಗೆ ಸ್ವಾತಂತ್ಯ್ರ ಸಿಕ್ಕಿಲ್ಲ ,,,?
ಹೌದ ,,,,,!
" ಚಿಂತನೆ "
ಚಿತ್ರ (Daiji/W)
Saturday, 29 August 2009
ಎಲ್ಲವು ತಮ್ಮ ಸುರಕ್ಷತೆಗಾಗಿ
Thursday, 27 August 2009
ಒಂದು ಪ್ರೇಮ ಪತ್ರ
ನನ್ನ ಮರೆಯಲು ಪುಸ್ತಕ ಓದುತ್ತೀಯ ನಾನು ನವಿಲುಗರಿಯಾಗಿ ಕಾಣುವೆ, ಕನಸು ಕಾಣಬೇಡ ವಾಸ್ತವವಾಗಿ ನಾ ಬರುವೆ, ಬೇಸರದಲ್ಲಿದ್ದಿಯ ಮುಗುಳ್ನಗೆಯಾಗಿ ನಾ ಬರುವೆ, ಅಳಬೇಡ ನಾ ಕಣ್ಣೀರಾಗಿ ಬರುವೆ, ಮತ್ತೇಕೆ ಪ್ರಯತ್ನಿಸುತ್ತಿಯ ನನ್ನ ಮರೆಯಲು ನಾ ನಿನ್ನ ಪ್ರಯತ್ನವಾಗಿ ಬರುವೆ, ನನಗಾಗಿ ಕೊಡಲು ನಿನ್ನಲಿ ಸ್ವಲ್ಪ ಪ್ರೀತಿ ಇಲ್ಲವೇ ನಿನ್ನಲ್ಲಿರುವ ಅಸಹನೆಯೇ ಸರಿ ಅದನೆ ನಾ ಪ್ರೀತಿ ಎಂದು ತಿಳಿಯುವೆ, ನಿನ್ನ ಒಂದು ಮುಗುಳ್ನಗುವಿಗಾಗಿ ನಾ ಕಾದಿರುವೆ ಆ ಕನ್ನಡಿಯಾಗಿ ನಿನ್ನ ಮನೆಯಲಿ , ಅದನೊಮ್ಮೆ ನೋಡಿ ನಕ್ಕು ಬಿಡು ಕಾರಣ ಇಷ್ಟೊಂದು ದಿನದಿಂದ ಗೋಡೆಯಲ್ಲಿ ಅಂಟಿ ಕಾದಿರುವ ನನಗೆ ಮೊಳೆ ಇಲ್ಲದ ಅನುಭವವೇ ಆಗದಿರಲಿ ನನ್ನನು ಈ ರೀತಿ ಹಿಂಸಿಸಿ ಕೊಲ್ಲಬೇಡ ಕಾರಣ ನಾನು ಮೊದಲೇ ಸತ್ತು ಹೋಗಿದ್ದೇನೆ,
ನೀನು ಇಚ್ಚಿಸಿದರೆ ನಿನಗೆ ನನಗಿಂತ ಒಳ್ಳ್ಯೆಯ ಸ್ಪುರದ್ರೂಪಿ ಬುದ್ದಿವಂತ ಹುಡುಗ ಸಿಗಬಹುದು, ಆದರೆ ನನ್ನಂತ ಪ್ರೀತಿಸುವ ಹುಚ್ಹ ಸಿಗಲಾರ, ಮನಸ್ಸಿನಲ್ಲಿ ಕನಸುಗಳಿವೆ ಕನಸುಗಳಲ್ಲಿ ಭಾವನೆಗಳಿವೆ ಅದರಲ್ಲೂ ಆಸೆಗಳಿವೆ ಅದರಲ್ಲೂ ಒಂದು ಸಾನಿದ್ಯವಿದೆ ಅವೆಲ್ಲವೂ ನಿನ್ನನ್ನೇ ಬಯಸಿವೆ ಈಗಲಾದರೂ ಹೇಳು ನೀ ನನ್ನನ್ನು ಮರೆಯಲು ಪ್ರಯತ್ನಿಸುವೆಯ.
Monday, 24 August 2009
ನಿನ್ನ ವೈಯಾರಾ ,,,,,
ನಿನ್ನ ತಳುಕು , ನಿನ್ನ ಬಿಳುಪು
ನಿನ್ನ ಆಟ , ನಿನ್ನ ಮೈಮಾಟ ನಿನ್ನ ಓಡಾಟ
ನಿನ್ನ ಕಾಂತಿ , ನಿನ್ನ ಶಾಂತಿ
ನಿನ್ನ ವೈಯಾರಾ ,,,,,,,,
ಇದೆಲ್ಲವೂ ಸೇರಿ ಕಾಣದಾಯ್ತು ನನ್ನ ಕೈಗಡಿಯಾರ
ಕಾರಣ ಅದರಿಂದಲೇ ನಾನು ತಂದೆ ನಿನಗೆ
ಉಡುಗೊರೆಯ ಹಾರ .
Saturday, 22 August 2009
ವೈರಸ್ ಮತ್ತು ಆಂಟಿ ವೈರಸ್
ಇಂಟರ್ನೆಟ್ ಮೂಲಕ ಏನ್ಗೇಜ್ಮೆಂಟ್ ಆಯ್ತು,
ಇಂಟರ್ನೆಟ್ ಮೂಲಕ ಮದುವೆಯಾಯ್ತು,
ಇಂಟರ್ನೆಟ್ ಮೂಲಕ ಹನಿಮೂನ್ ಆಯ್ತು,
ಈಗ ೨ ಮಕ್ಕಳಿದ್ದಾರೆ
೧. ವೈರಸ್
೨. ಆಂಟಿ ವೈರಸ್
Thursday, 20 August 2009
ಗೊತ್ತಿದ್ದರೆ ಹೇಳ್ಬೇಕು ಇಲ್ಲದಿದ್ದರೆ ಸುಮ್ನೆ ಕೂರಬೇಕು
ನನಗೆ ಮಾತ್ರ ಒಂದು ಡೈಲಾಗ್ ನೆನೆಪಾಯ್ತು " ಗೊತ್ತಿದ್ರೆ ಹೇಳ್ಬೇಕು ಇಲ್ಲದಿದ್ದರೆ ಸುಮ್ನೆ ಕೂರಬೇಕು " ಇದು ಅಂದು ಪರೇಶ ನನಗೆ ಹೇಳಿದ್ದು. ಒಂದು ದಿನ ಬೆಳಗ್ಗೆ ಒಬ್ಬರು ಯಜಮಾನರೊಂದಿಗೆ ಸೈಕಲ್ ಶಾಪ್ ಬಾಬು ನಮ್ಮ ಮನೆಯ ಹತ್ತಿರ ಬಂದ ಬಂದವನೇ ಸಾರ್ ಇವರು ತುಮಕೂರಿಂದ ಬಂದಿದ್ದಾರೆ ಇಲ್ಲಿ ಯಾರೋ ಲೆಕ್ಚರ್ ಹೊಸದಾಗಿ ಬಂದಿದಾರಂತಲ್ಲ ಅವರ ತಂದೆ ಇವರು, ಆ ಮನೆ ಗೊತ್ತಿಲ್ಲ ಇವ್ರಿಗೆ ಸ್ವಲ್ಪ ಹೇಳಿದ್ರೆ ಕರ್ಕೊಂಡು ಹೋಗ್ ಬಿಡ್ತಿದ್ದೆ ಅಂದ .
ಓ ಆ ಲೆಕ್ಚರ್ ಮನೆ ಅಲ್ವೇನೋ ಗೊತ್ತು ಬಿಡೋ ಈ ರೋಡಲ್ಲಿ ನೇರ ಹೋದ್ರೆ ಒಂದು ದೇವಸ್ಥಾನ ಐತಲ್ಲ ಗೊತ್ತ ? ಅದೆಲ್ ಸಾರ್ ದೇವಸ್ಥಾನ , ಹೋಗ್ಲಿ ನೇರ ಬಲಗಡೆ ಹೋದ್ರೆ ಮಸಿದಿ ಐತಲ್ಲ ಗೊತ್ತ ? ಅದೆಲ್ ಸಾರ್, ಹೋಗ್ಲಿ ಪ್ರೈಮರಿ ಸ್ಕೂಲ್ ಗೊತ್ತ ? ಸ್ಕೂಲ ಅದೆಲ್ ಸಾರ್ . ಏನು ಬೇಡ ನ್ಯೂಸ್ ಪೇಪರ್ ಬುಕ್ ಎಲ್ಲಾ ಮಾರೋ ಅಂಗ್ಡಿ ಐತಲ್ಲ ಗೊತ್ತ, ನಂ ಏರಿಯದಲ್ಲಿ ಬುಕ್ ಅಂಗ್ಡಿ ಐತಾ ಅದೆಲ್ ಸಾರ್, ಯಾಕ್ ಇರಬಾರದ ಎಂದು ಸಿಟ್ಟಿನಲ್ಲಿ ನಾನು ಕೇಳಿದೆ ನಿಂಗ ಈ ಏರಿಯದಲ್ಲಿ ಬೇರೆ ಏನಾದ್ರೂ ಗೊತ್ತೈತ ಅಂದೇ, ನೀವ್ಯಾಕ್ ಸಿಟ್ಟ ಆಗ್ತೀರ ಸಾರ್ ಅಂದ. ಅಷ್ಟರಲ್ಲಿ ಪರೆಶನ ತಾಯಿ ನೀರು ತುಂಬುತ್ತಿದ್ದವರು ತಡಿಯಪ್ಪ ಪರೆಶನ್ಗೆ ಕೇಳಾಣ ಅಂದು ಪರೆಶನಿಗೆ ಕರೆದರು.
ಪರೇಶ ಬಂದವನೇ ಏನೋ ಹಲ್ಕಾ ನನ್ಮಗನೇ ಬೆಳಗ್ಗೆನೇ ಯಾರ್ಗೋ ಕರ್ಕೊಂಡು ಬಂದಿದಿಯ ಏನ್ ಬೇಕಾಗಿತ್ತೋ ಅಂದ. ಇಲ್ಲ ಕಣೋ ಇವರು ತುಮಕೂರಿಂದ ಬಂದಿದ್ದಾರೆ ಇವ್ರ ಮಗ ಲೆಕ್ಚರ್ ಇಲ್ಲಿ ಹೊಸದಾಗಿ ಬಂದಿದಾರಂತೆ ಅವ್ರ ಮನೆ ಬೇಕಂತೆ. ಅದಕ್ಕೆ ಪರೇಶ ಏನ್ಸಾರ್ ಅವ್ರು ನಿಮ್ ಫ್ರೆಂಡ್ ಅಲ್ವ ನಿಮಿಗ್ ಗೊತ್ತಲ್ಲ ಅವ್ರ ಮನೆ ಹೇಳಾಕ್ ಆಗ್ಲಿಲ್ವಾ ಅಂದ . ಅಲ್ಲ ಕಣೋ ಪರೇಶ ಇವ್ನಿಗೆ ಹೆಂಗ್ ಹೇಳುದ್ರು ಅರ್ಥ ಆಗ್ತಿಲ್ಲ ಅಂದೇ. ಓ ಹೋ ಹಂಗ ,,
ಬಾಬು ಬಾರೋ ಇಲ್ಲಿ ಇಸ್ಪೀಟ್ ಕ್ಲಬ್ ಗೊತ್ತೇನೋ ? ಹ್ಞೂ ಗೊತ್ತು , ಅದರಿಂದ ಮುಂದೆ ಹೋದ್ರೆ ಬಲಗಡೆ ಮಟ್ಕಾ(ಓ ಸಿ) ನಾಗನ ಅಂಗ್ಡಿ ಗೊತ್ತೇನೋ ಹ್ಞೂ ಗೊತ್ತು , ಸ್ವಲ್ಪ ಮುಂದೆ ಹೋಗಿ ಅಲ್ಲಿಂದ ಎಡಗಡೆ ಹೋದ್ರೆ ಶರಾಬ್ ಅಂಗ್ಡಿ ಗೊತ್ತೇನೋ ಹ್ಞೂ ಗೊತ್ತು , ಅದರ ಎದುರುಗಡೆ ಫೀಲ್ಡಲ್ಲಿ ಒಂದು ಬೋರ್ವೆಲ್ ಐತೆ ಬರಿ ಹುಡುಗಿಯರೇ ನೀರ್ ತುಂಬ್ತಾ ಇರ್ತಾರ್ ನೋಡೋ ಹ್ಞೂ ಹ್ಞೂ ಹೇಳು, ಅಲ್ಲಿ ನಿಂತು ನೋಡುದ್ರೆ ಹೊಸ ಬಿಲ್ಡಿಂಗ್ ಕಾಣ್ತೀತ್ ನೋಡು ಅದೇ ನಂ ಹೊಸ ಲೆಕ್ಚರ್ ಮನೆ. ಓ ಗೊತ್ತಾಯ್ತು ಬಿಡಪ್ಪ.
ಇಷ್ಟು ಹೇಳಾಕ್ಕೆ ಒಂದು ಗಂಟೆಯಿಂದ ಇವ್ರು ದೇವಸ್ಥಾನ - ಮಸೀದಿ - ಬುಕ್ ಅಂಗ್ಡಿ - ಸ್ಕೂಲು ಒಳ್ಳೆ ಕಥೆ ಆಯ್ತು ಎ ಬರ್ರಿ ಯಜಮಾನ್ರೆ ಅಂತ ಬಾಬು ಹೊರಟ.
ಕೂಡಲೇ ಪರೇಶ ಯಾರಿಗೆ ಹೆಂಗ್ ಅಡ್ದ್ರೆಸ್ ಹೇಳ್ಬೇಕು ಅನ್ನೋದು ಒಂದು ಕಲೆ. ಅದು ಬಿಟ್ಟು ಸುಮ್ಮನೆ ಜನ ಅದೇನೋ ಹೇಳ್ತಾರಲ್ಲ ಹಂಗೆ. " ಸುಮ್ಮನೆ ಇರಲಾರದೆ ಇರುವೆ ಬಿಟ್ಕೊಂದ್ರು ಅಂತ "
Tuesday, 18 August 2009
ಮಹಾನಗರಪಾಲಿಕೆ ಶಿವಮೊಗ್ಗ
Saturday, 15 August 2009
ಬೇಡಾಕಣೇ ,,,,,,,,ಎ ,,,,, ಬೇಡ ಅಂದ್ರೆ ಬೇಡ
ಅಯ್ಯೋ ಈ ಮಕ್ಕಳಂತೂ ನಿಮಗೆ ಮಲಗಕ್ಕೆ ಬಿಡೋಲ್ಲ ಛೆ. ಹೇಗೂ ಎದ್ದಿದ್ದೀರಲ್ಲ ಬೇಗ ಫ್ರೆಶ್ ಆಗಿ, ನಾನು ತಿಂಡಿನು - ಟೀ ನು ತರ್ತೀನಿ, ಅಂತ ಅಡುಗೆ ಕೊಣೆಗೆ ಹೋಗುತ್ತಾ ರೀ ಏನೂಂದ್ರೆ ಸ್ವಲ್ಪ ವ್ಯಾಕುಂ ಹಾಕ್ಬಿಡ್ರಿ ಅಷ್ಟೊತ್ತಿಗೆ ನಿಮ್ಮ ತಿಂಡಿನೂ ರೆಡಿ ಯಾಗುತ್ತೆ ,, ? ಅಂದ ಹಾಗೆ ಮಕ್ಕಳು ಹೇಳ್ತಿದ್ರು ಇವತ್ತು ಸಂಜೆ ಹೊರಗೆ ಊಟ ಅಂತೆ ಬಾಳ ಖುಷಿಯಲ್ಲಿದ್ದಾರೆ. ಇದು ಪ್ರತಿ ಶುಕ್ರವಾರ ಅಂದರೆ ಇಲ್ಲಿನ ರಜಾ ದಿನದ ನನ್ನವಳು ನನ್ನಮೇಲೆ ತೋರಿಸುವ ಪ್ರೀತಿ.
ಅದು ಕೆಲಒಮ್ಮೆ ಇದ್ದಕ್ಕಿದ್ದಂತೆ ಬದಲಾಗುವುದುಂಟು ಅಂದರೆ ಅದು ಹೀಗೆ, ರಜಾ ದಿನ ಹತ್ತು ಗಂಟೆಯಾದರೂ ನನನ್ನು ಕರೆಯದೆ ನಾನು ನಿಧಾನವಾಗಿ ಎದ್ದರು ಯಾಕ್ರೀ ಬೇಗ ಎದ್ದ್ರಿ ಅಂತ ಹೇಳಿ ತಿಂಡಿ ರೆಡಿ ಇದೇರಿ, ಬೇಗ ಫ್ರೆಶ್ ಆಗ್ರಿ ಅಂತ ಹೇಳಿ ನನ್ನ ಬಟ್ಟೆ ಇಸ್ತ್ರಿ ಮಾಡಿ ರೆಡಿ ಇಟ್ಟಿರುತ್ತಾಳೆ. ರೀ ಇವತ್ತು ಹೊರಗೆ ಹೋಗೋದು ಬೇಡವಂತೆ ಅದಕ್ಕೆ ನಾನು ನಿಮ್ಮ ಇಷ್ಟದ ಅಡಿಗೆ ಮಾಡ್ತಿದೀನಿ ಅಲ್ಲಿ ತನಕ ನೀವು ಮಕ್ಕಳೊಂದಿಗೆ ಟಿ ವಿ ನೋಡ್ತಾ ಇರೀ.
ಅದಾಗಲೇ ನನಗೆ ಭಯ ಶುರುವಾಗಿರುತ್ತದೆ ಕಾರಣ ವಿಷ್ಟೇ ಇವಳಿಗೆ ಮಾಡಿಕೊಟ್ಟಿರುವ ಶಾಪಿಂಗ್ ಕ್ರೆಡಿಟ್ ಕಾರ್ಡ್ ಬಿಲ್ ಬಂದಿದೆಯಂದು ನನಗೆ ತಿಳಿದು ಅದು ನೋಡುವ ಧರ್ಯವಿಲ್ಲದೆ, ನನ್ನ ತಿಂಡಿ ಊಟ ಎಲ್ಲ ಮುಗಿದ ಮೇಲೆ ನೋಡೋಣ ವೆಂದು ಸಮಾಧಾನ ಪಟ್ಟುಕೊಳ್ಳುತ್ತಾ , ನನಗೆ ನಾನೇ ಸಮಾಧಾನ ಹೇಳುತ್ತಾ ಧೈರ್ಯ ಗೊಳ್ಳುತ್ತಾ ನೀರು ಕುಡಿಯುವ ಲೋಟ ಹಿಡಿದು ಆ ಬಿಲ್ ಎಲ್ಲಿದೆ ಅಂತ ಕೇಳಿದ ಕೂಡಲೇ , ಯಾವ ಬಿಲ್ಲು ? ಓ ಅದಾ ಅಲ್ಲೇ ಟೇಬಲ್ ಮೇಲೆ ಇದೆಯಲ್ಲ,
ರೀ ಏನೂಂದ್ರೆ ಒಂದ್ನಿಮಿಷ ಎದ್ರುಮನೆ ಆಂಟಿ ಏನೋ ಕರೀತಿದಾರೆ, ಅಂತ ಹೋದರೆ ಇವಳು ಮತ್ತೆ ಬರುವುದು ಸಂಜೆ ೫ ಗಂಟೆಗೆ. ಬಂದವಳೇ ನೇರ ಅಡುಗೆ ಕೊಣೆಗೆ ಹೋಗಿ ಪಕೋಡ ಅಥವಾ ಕೇಸರಿಬಾತ್ ಮತ್ತು ಕಾಫಿ ಹಿಡಿದು ಕೊಂಡು ಪ್ರೀತಿಯಿಂದ ಬಂದು ರೀ ಏನೂಂದ್ರೆ ,, ಏನ್ರಿ ದಿನದಿಂದ ದಿನಕ್ಕೆ ವಸ್ತುಗಳ ಬೆಲೆ ಜಾಸ್ತಿನೆ ಆಗ್ತಿದೆ ಜೀವನ ಮಾಡೋದೇ ಕಷ್ಟ ಇಲ್ಲೇ ಹೀಗಾದ್ರೆ ಅಲ್ಲಿ ಹೆಂಗ್ರಿ . ಪಾಪ ಆಂಟಿ ಅದೇ ವಿಷ್ಯ ಹೇಳ್ತಾ ಇದ್ರು ಬಾಳ ಕಷ್ಟ ನಾನು ಅವ್ರಿಗೆ ಹೇಳ್ದೆ ನಾನಂತೂ ಬಾಳ ಕಂಟ್ರೋಲ್ ನಲ್ಲಿ ಖರ್ಚು ಮಾಡೋದು ಅಂತ ಅದಕೆ ಅವ್ರು ನೀನು ಬಿಡಮ್ಮ ಬಾಳ ಬುದ್ದಿವಂತೆ ಅಂತ ಹೇಳುದ್ರು .
ಅಲ್ವೇನ್ರಿ ಎಲ್ಲರು ನನ್ನ ಹಾಗೆ ಬುದ್ದಿವಂತರಿರುತ್ತಾರ ನೀವೇ ಹೇಳ್ರಿ . ಅಯ್ಯೋ ನಾನ್ ಮರ್ತೆ ಹೋದೆ ನಾನು ಮೊನ್ನೆ ನಿಮ್ಮ ಇಷ್ಟದ ಟೈ ತನ್ದಿದೀನ್ರಿ ಈ ಕಲರ್ ನಿಮಗೆ ತುಂಬ ಇಷ್ಟ ಅಲ್ವ. ಮಕ್ಕಳು ಹೇಳುದ್ರು ನಿಮಗೆ ತುಂಬ ಚೆನಾಗ್ ಕಾಣತ್ತೆ ಅಂತ .
ನಂಗೆ ಇದೆಲ್ಲ ನೋಡಿ ಒಮ್ಮೆಲೇ ಕೂಗಿ ಬೇಡ ಕಣೇ ಅಂತ ಹೇಳ ಬೇಕೆನಿಸಿದರು ಆ ಧೈರ್ಯವಿಲ್ಲದೆ ನಿಧಾನವಾಗಿ ಇದೆಲ್ಲ ಯಾಕೆ ನನ್ನ ಬಳಿ ತುಂಬ ಇದೆಯಲ್ಲ ಎಂದು ಹೇಳುತ್ತಾ ಅವಳ ಕಡೆ ನೋಡಿದರೆ ಹ್ಞೂ ,,, ನೀವು ಯಾವಾಗಲು ಅಷ್ಟೆ ಅದೇ ನಿಮ್ಮ ಫ್ರೆಂಡ್ ಸುರೇಶನ ಹಾಗೆ ಬೇಡಾ ಕಣೇ ,,,,,,ಎ ,,,,,, ಎ ಅನ್ನೋ ಒಂದೇ ರಾಗ .
ಹೌದು ಸುರೇಶ ಅವನು ಬಾಲ್ಯದ ಗೆಳೆಯ ಅಂದರೆ ನಾನು ಪ್ರೈಮರಿ ಸ್ಕೂಲ್ ಹೋಗುತಿದ್ದಾಗ ಒಟ್ಟಿಗೆ ಸ್ಕೂಲ್ ಹೋಗೂದು ಅಂದರೆ ನಾನು ಬೇಗ ರೆಡಿ ಯಾಗಿ ಸುರೇಶನ ಮನೆಗೆ ಹೋಗುತ್ತಿದ್ದೆ. ಅಲ್ಲಿಂದ ನಾನು ಅವನು ಒಟ್ಟಿಗೆ ಹಗ್ಗದ ಬಸ್ಸು ಸೇರಿ ಒಬ್ಬ ಡ್ರೈವರ್ ಆದರೆ ಒಬ್ಬ ಕಂಡಕ್ಟರ್ ಬಾಯಲ್ಲೇ ಶಬ್ದ ಮಾಡುತ್ತಾ ಕೈಯಲ್ಲಿ ಗೇರ್ ಬದಲಿಸುವ ಆಕ್ಷನ್ ಮಾಡುತ್ತಾ ಷ್ಟೇರಿಂಗು (ಚಾಲಕ ಚಕ್ರ ) ತಿರುಗಿಸುವಂತೆ ನಟಿಸುತ್ತ ಹೋಗುವಾಗ ಕೆಲ ವಿದ್ಯಾರ್ಥಿಗಳು ನಮ್ಮ ಬಸ್ಸಿನಲ್ಲಿ ಹತ್ತುತ್ತಿದ್ದರು (ಹಗ್ಗದ ಒಳಗೆ)
ಹೀಗೆ ಸ್ಕೂಲ್ ತಲುಪಿದ ಕೂಡಲೇ ಬಸ್ಸನ್ನು (ಹಗ್ಗವನ್ನು ಮಡಿಚಿ) ಬ್ಯಾಗಿಗೆ ಸೇರಿಸಿ ಇಡಲಾಗುತ್ತಿತ್ತು ಕಾರಣ ಮತ್ತೆ ಸಂಜೆ ಬೇಕು ಹೀಗೆ ಹೋಗುವಾಗ ಹುಡುಗರು ಹುಡುಗಿಯರೂ ಕೆಲವು ಬೇರೆ ಮಕ್ಕಳು ಎಲ್ಲರು ಸೇರಿ ಗಲಾಟೆ ಮಾಡುತ್ತಾ ಕೆಲೊಂದು ಊರುಗಳ ಹೆಸರುಗಳನ್ನೂ ಹೇಳುತ್ತಾ ನಡೆಯುತ್ತಿತ್ತು ನಮ್ಮ ಬಸ್ಸು .
ಆದರೆ ನಾನು ಸುರೇಶನ ಮನೆಗೆ ಹೋದಾಗಲೆಲ್ಲ ಅವನು ಅಡಿಗೆ ಕೋಣೆಯಲ್ಲಿ ಅವನಮ್ಮ ಬಡಿಸುವ ತಿಂಡಿಯನ್ನು ಸರಿಯಾಗಿ ತಿನ್ನದೇ ಬೇಡ ಕಣೇ ,,, ಬೇಡ ಕಣೇ ಎಂದು ಕೂಗುತ್ತಿದ್ದ. ನಾನು ಎದುರು ಕೋಣೆಯಲ್ಲಿ ಕುಳಿತು ಕಾಯುತ್ತಿದ್ದೆ . ಅದಲ್ಲದೆ ಅವರಮ್ಮ ದಿನಾಲು ೫ ಅಥವಾ ೬ ತರಹದ ತಿಂಡಿ ಮಾಡುತ್ತಾರೆ. ಕಾರಣ ಅವರಮ್ಮ ಸುರೇಶ ಸ್ವಲ್ಪ ತುಪ್ಪ ಹಾಕ್ಕೊಳೋ ಅಂದ್ರೆ ಇವ್ನು ಬೇಡಾ ಕಣೇ ಅಂತ ಕೂಗ್ತಾನೆ, ಸುರೇಶ ಚಿತ್ರಾನ್ನ ಹಾಕೊಳೋ ಅಂದ್ರೆ ಬೇಡಾಕನೆ ಅಂತ ಕೂಗ್ತಾನೆ, ಸುರೇಶ ಉಪ್ಪಿಟು ಹಾಕೊಳೋ ಅಂದ್ರೆ ಇವ್ನು ಬೇಡಾ ಕಣೇ ಅಂತ ಕೂಗ್ತಾನೆ. ಇದನ್ನೆಲ್ಲಾ ದಿನವು ನಾನು ಕೆಳುತಿದ್ದರಿಂದ ನಮ್ಮ ಮನೆಗೆ ಬಂದು ನಮ್ಮ ಅಮ್ಮನಿಗೆ ಗೊಳುಹುಯುತಿದ್ದೆ ಅಲ್ಲಿ ಸುರೇಶನ ಅಮ್ಮ ನೋಡು ದಿನಾಲು ಅವನಿಗೆ ೫ - ೬ ತರಹದ ತಿಂಡಿ ಮಾಡಿ ಕೊಡುತ್ತಾರೆ ನೀನು ಮಾತ್ರ ನಂಗೆ ಒಂದು ತಿಂಡಿ ಮಾಡಿ ಕೊಡುತ್ತಿಯ ಅಂತ. ಅದಕ್ಕೆ ನನ್ನ ಅಮ್ಮ ಏನೆಲ್ಲಾ ಸಬೂಬು ಹೇಳಿ ಆಯ್ತು ನಾಳೆ ನಾನು ೫ - ೬ ತಿಂಡಿ ಮಾಡಿಕೊಡುತ್ತೇನೆ ಇವತ್ತು ಇದು ತಿಂದು ಶಾಲೆಗೆ ಹೋಗು ಅಂತ ಸಮಾಧಾನಿಸಿ ನನಗೆ ಕಳಿಸುತ್ತಿದ್ದರು.
ದಿನವು ನಾನು ಹಠ ಮಾಡ ತೊಡಗಿದೆ ಇದನ್ನು ನೋಡಿ ನನ್ನ ಅಮ್ಮ ಒಂದು ದಿನ ೪ ತರಹದ ತಿಂಡಿ ಮಾಡಿ ಕೊಟ್ಟರು. ಎಲ್ಲವನ್ನು ಸ್ವಲ್ಪ ಸ್ವಲ್ಪ ತಿಂದು ಸುರೇಶನ ಮನೆಗೆ ಓಡಿದೆ ಅಲ್ಲಿ ಎಂದಿನಂತೆ ಅವನ ತಿಂಡಿ ಕಾರ್ಯ ನಡೆದಿತ್ತು. ಈಗ ನನಗೆ ಮುಜುಗರ ವಿರಲಿಲ್ಲ ನೇರ ಹೋದವನೇ ಅಲ್ಲಿ ಕುಳಿತು ಸುರೇಶ ಬೇಗ ರೆಡಿಯಾಗೋ ಅಂದೇ. ಎಂದಿನಂತೆ ಅವನ ತಾಯಿ ಸುರೇಶನಿಗೆ ಬಲವಂತ ದಿಂದ ಅದು ಹಾಕ್ಕೊಳೋ ಅಂದ್ರೆ ಇವನು ಬೇಡ ಕಣೇ ,,,,, ಇದು ಹಾಕೊಳೋ ಅಂದ್ರೆ ಬೇಡ ಕಣೇ,,ಎಂದು ಕೂಗುತ್ತಿದ್ದ ನಾನು ಎದುರು ರೂಮಿನಲ್ಲಿ ಕೂತಿದ್ದವನು ನಿಧಾನವಾಗಿ ಅವನ ಅಡಿಗೆ ಕೊಣೆಗೆ ಬಗ್ಗಿ ನೋಡಿ ಸುರೇಶ ನಾನು ಇವತ್ತು ೪ ತರಹದ ತಿಂಡಿ ತಿಂದೆ ಕಣೋ ಅಂತ ಹೇಳಲು ಹೊರಟವನು ಅಲ್ಲಿಯ ಸನ್ನಿವೇಶ ನೋಡಿ ಸುಮ್ಮನ್ನಾಗಿ ಬಿಟ್ಟೆ ಕಾರಣ ವಿಷ್ಟೇ ಸುರೇಶ ಮಜ್ಜಿಗೆಯಲ್ಲಿ ಮುದ್ದೆ ತಿನ್ನು ತಿದ್ದ ಅವಳಮ್ಮ ಜೋರಾಗಿ ಪುಳಿಯಗರೇ ಹಾಕ್ಕೊಳೋ ಅಂತ ನಿಂತಲ್ಲೇ ಜೋರಾಗಿ ಹೇಳುತ್ತಿದ್ದಾರೆ ಇವನು ಜೋರಾಗಿ ಬೇಡಾ ಕಣೇ ,,,,, ಎ ,,,, ಎ ಎಂದು ಕೂಗುತ್ತಿದ್ದಾನೆ .,, ! ತುಪ್ಪ ಹಾಕ್ಕೊಳೋ ಬೇಡಾ ಕಣೇ ,,, ಎ ,, ಎ ,. ಚಿತ್ರಾನ ಹಾಕ್ಕೊಳೋ ಬೇಡಾ ಕಣೇ,,,,
ನನಗೆ ತಕ್ಷಣ ನನ್ನ ಅಮ್ಮನ ನೆನಪಾಯ್ತು
ಸಂಜೆ ಮನೆಗೆ ಹೋದವನೇ ಅಮ್ಮನಿಗೆ ಎಲ್ಲ ವಿಷಯ ಹೇಳಿ ಬಿಟ್ಟೆ ನನ್ನ ಅಮ್ಮ ನನ್ನನ್ನು ಗಟ್ಟಿಯಾಗಿ ತಬ್ಬಿಕೊಂಡು ಅಳತೊಡಗಿದರು. ನಂತರ ಹೇಳಿದ್ದು ಈ ವಿಷಯ ಯಾರಿಗೂ ಹೇಳ ಬೇಡ ಅಂತ.
ಕಾಲ ಕ್ರಮೇಣ ಇದು ಹೇಗೋ ನಿಧಾನವಾಗಿ ಬೇಡಾ ಕಣೇ ,,,,,, ಎ ,,,,, ಎ ,,,, ಎಂಬುದೊಂದು ತಮಾಶೆಯಾಗಿ ಬದಲಾಗಿ ಹೋಯ್ತು. ಅದನ್ನು ನನ್ನವಳಿಗೆ ಯಾರೋ ಹೇಳಿಬಿಟ್ಟಿದ್ದಾರೆ. ನಾನು ಬಿಲ್ ನೋಡಿ ಬಿಸಿಯಾಗುವುದು ಬೇಡ ಅಂತ ಹಳೆಯ ಯಾವುದಾದರು ಒಂದು ಕಥೆಯನ್ನು ಇವಳು ಈ ರೀತಿ ನೆನಪಿಸಿ ನನ್ನನ್ನು ನನ್ನ ಹಿಂದಿನ ಲೋಕಕ್ಕೆ ತಳ್ಳಿ ಬಿಡುತ್ತಾಳೆ.
ಹೀಗೆ ಅಲ್ಲವೇ ಜೀವನ.
Sunday, 9 August 2009
ಪರೇಶ - ಪ್ರತಿಮೆಗಳು ಮತ್ತು ಸ್ಥಾಪನೆ
ಭಾನುವಾರ ವಾದ್ದರಿಂದ ಬೆಳಗ್ಗೆ ನಾನು ಸ್ಕೂಟರ್ ತೊಳೆಯುತ್ತಿದ್ದೆ ಅಂದರೆ ಕೈನೆಟಿಕ್ ಹೋಂಡ ಬ್ಲಾಕ್ ಅದು ನನ್ನ ಸರ್ವಸ್ವ. ತರಲೆ ಪರೇಶ ನನ್ನ ಸಹಾಯಕ್ಕೆ ನಿಂತಿದ್ದ. ಕೆಲಸಕ್ಕಿಂತ ಜಾಸ್ತಿ ಲಾಟು ಬಿಡುವುದು ಪರೆಶನ ಬುದ್ದಿ . ಇದ್ದಕ್ಕಿದ್ದಂತೆ ಪ್ರತಿಮೆ ಸ್ಥಾಪಿಸುವ ವಿಷಯ ಅದರ ಬಗ್ಗೆ ವಾದ ವಿವಾದಗಳ ವಿಷಯ ಶುರುಮಾಡಿದ ನಾನು ಕೆಲಸದಲ್ಲಿ ಮುಳುಗಿದ್ದೆ. ಇದರ ಮದ್ಯೆ ನಾನು ಪರೆಶನಿಗೆ ಕೇಳಿದೆ ಪ್ರತಿಮೆ ಅನಾವರಣದ ಬಗ್ಗೆ ನಿನ್ನ ಅಭಿಪ್ರಾಯ ಏನೋ ಪರೇಶ ಅಂದೇ ಅಷ್ಟೆ.
ಶುರುಮಾಡಿದ ಸಾರ್ ಇಲ್ ಕೇಳ್ರಿ ಸಾರ್ ದಿನಾ ಹೊಸ ಹೊಸ ಪ್ರತಿಮೆಗಳು ಬೇರೆ ಬೇರೆ ಕಡೆ ಸ್ಥಾಪಿಸಬೇಕು ಸಾರ್ ಅವಾಗ್ ಕೂಲಿ ಮಾಡವ್ರಿಗೆ ಕೆಲಸ ಸಿಗುತ್ತೆ , ಪ್ರತಿಮೆ ಮಾಡವ್ರಿಗೆ ಕೆಲಸ ಸಿಗುತ್ತೆ , ಅವರ ಮೇಲೆ ಅವಲಂಬಿತರಾದವರಿಗೆ ಊಟ ಸಿಗುತ್ತೆ ಗಲಾಟೆ ಮಾಡವ್ರಿಗೆ ಊಟ ಸಿಗುತ್ತೆ , ಬೇಡ ಅನ್ನವರಿಗೆ ಊಟ ಸಿಗುತ್ತೆ ಅದಕ್ಕೋಸ್ಕರ ಆಯೋಗಗಳನ್ನು ಶುರು ಮಾಡ್ತಾರೆ ಅವ್ರಿಗೆ ಊಟ ಸಿಗುತ್ತೆ , ಅದರ ವಿರುದ್ದ ಮತ್ತು ಪರ ಬ್ಯಾನರ್ ಬರಿಯುವವರಿಗೆ ಊಟ ಸಿಗುತ್ತೆ , ಟಿ ವಿ ಯಲ್ಲಿ ಪ್ರಚಾರ ಸಿಗುತ್ತೆ ಆಮೇಲೆ ಅದಕ್ಕೋಸ್ಕರ ಉಪಯೋಗಿಸೋ ವಸ್ತುಗಳು ವಾಹನಗಳು ಅವರಿಗೆ ಕೆಲಸ ಸಿಗುತ್ತೆ , ಒಂದಲ್ಲ ಒಂದು ರೀತಿಯಲ್ಲಿ ಬಡವ ಒಂದು ಹೊತ್ತಿನ ಊಟವನ್ನು ಹೇಗಾದರು ಪಡಿತಾನೆ ಸಾರ್ ಅದು ಬಹಳ ಕಷ್ಟ ಪಟ್ಟು.
ನಾವು ಭಾರತೀಯರು ಸಾರ್ ಎಲ್ಲವನ್ನು ಗೌರವಿಸಬೇಕು ಅದು ನಮ್ಮ ಆತ್ಮದಿಂದ ನಮ್ಮ ಮನಸ್ಸಿನಿಂದ ನಮ್ಮ ಸಂತೋಷ ದಿಂದ ಅದರಿಂದ ಯಾರಿಗೂ ತೊಂದರೆ ಯಾಗಬಾರದು ಯಾರ ಭಾವನೆಗಳಿಗೂ ಧಕ್ಕೆಯಾಗಬಾರದು , ಎಲ್ಲವು ಎಲ್ಲರಿಗು ಬೇಕು ಆದರೆ ನಮ್ಮ ನಿಮ್ಮ ಮತ್ತೊಬ್ಬರ ಭಾವನೆಗಳನ್ನು ಕೊಂದು ಏನು ಪ್ರಯೋಜನ ಸಾರ್
ನಾವು ಸ್ಥಾಪಿಸುವ ಪ್ರತಿಮೆಯನ್ನು ನಾವು ನೋಡಿದಾಗ ನಮಗೆ ಸಂತೋಷವನ್ನು ನೀಡಬೇಕು ಅದು ಬಿಟ್ಟು ಪ್ರತಿಮೆ ನಮ್ಮನ್ನು ನೋಡಿ ಅಳುವಂತಾಗಾಬಾರದು ಅಥವಾ ಪ್ರತಿಮೆಯನ್ನು ನಾವು ನೋಡಿ ಅಳುವಂತಾಗಬಾರದು.
ಅಲ್ವ ಸಾರ್ ಅಂದ, ಎನೋಪ ನಂಗೆ ನಿನ್ನಷ್ಟು ಬುದ್ದಿ ಇಲ್ಲ ಅಂದೇ, ಒಳ್ಳೆದಾಯ್ತು ಬಿಡಿ , ಯಾಕೋ ಅಂದೇ , ಈಗ ಪ್ರಪಂಚದ ಎಲ್ಲಾ ಸಮಸ್ಯೆಗಳು ಬುದ್ದಿವಂತರಿಂದಲೇ ಆಗುತ್ತಿರುವುದು ಅದೇ ದೊಡ್ಡ ಸಮಸ್ಯೆ ಗೊತ್ತ ಸಾರ್ ,,,,,,,
Saturday, 8 August 2009
ಸೂರ್ಯ ಮತ್ತು ಚಂದ್ರ (ಅಬುಧಾಬಿ)
ಕಿವಿಮಾತು
ಒಂದು ನಿಷ್ಕಲ್ಮಶ ಮುಗ್ಧ ನಗು
Sunday, 2 August 2009
ನಾವೆಷ್ಟು ಶ್ರೀಮಂತರೆಂದು ನಮಗೆ ಗೊತ್ತಾ ?
ಮೊನ್ನೆ ಊರಿಗೆ ಹೋದಾಗ ನಾನು ಇಲ್ಲಿಗೆ ನನ್ನ ತಮ್ಮನೊಂದಿಗೆ ಬೇಟಿ ನೀಡಿದ್ದೆ. ಹೌದಲ್ಲವೇ ನಮ್ಮ ಬಳಿ ಎಲ್ಲವು ಇರುತ್ತದೆ, ಆದರೆ ಯಾವುದೋ ಇಲ್ಲದ ಒಂದು ಚಿಕ್ಕ ವಸ್ತುವಿಗಾಗಿ ಬಾರಿ ಬಾರಿ ನೆನಪಿಸುತ್ತಾ ಛೆ ಅದು ನಮ್ಮ ಬಳಿ ಇಲ್ಲವಲ್ಲ, ಎಂದು ಹೇಳುತ್ತಾ ಇರುವ ಎಲ್ಲ ವಸ್ತುಗಳನ್ನು ಸರಿಯಾಗಿ ಅನುಭವಿಸದೇ ಇಲ್ಲದೆ ಇರುವ ವಸ್ತುವನ್ನೇ ದೊಡ್ಡ ಕೊರತೆಯನ್ನಾಗಿ ಮಾಡಿ ಕೊಂಡು ಅದೇ ಚಿಂತೆಯಲ್ಲಿ ಮುಳುಗುತ್ತೇವೆ. ಉದಾ : ಮನೆಯಲ್ಲಿ ಎಲ್ಲವು ಇದೆ ಆದರೆ ಸೋಲಾರ್ ಇಲ್ಲ ಬಹಳ ಕಷ್ಟ ಆಗಿದೆ, ಮುಂದುವರೆಯುತ್ತಾ ಇನ್ನೊಬ್ಬರು ನನ್ನ ಬಳಿ ಇರುವುದು ೨೦೦೮ Nokia Cell ಛೆ ೨೦೦೯ ಇಲ್ಲವಲ್ಲ ಎಂಬ ಕೊರಗು, ಮತ್ತೊಬ್ಬರು ಎಲ್ಲ ಇದ್ದು Spotrs Car ಇಲ್ಲವಲ್ಲ ಎಂಬ ಕೊರಗು. ಮಿತಿಯೇ ಇಲ್ಲ ,,,,,,
ಅವನಿಗೆ ನನಗಿಂತ ಜಾಸ್ತಿ ಸಂಬಳ ಛೆ ' ಮತ್ತೊಬ್ಬ ಛೆ' ಅವನ ಮನೆ ನಮ್ಮದಕ್ಕಿಂತ ದೊಡ್ಡ ಮನೆ, ಹೀಗೇಕೆ ಎಲ್ಲರಂತೆ ಎಲ್ಲ ಇದ್ದು ಸಹ ಇರದೇ ಇರುವ ಯಾವುದೋ ಸಣ್ಣ ವಸ್ತು ನಮಗೆ ದೊಡ್ಡ ಕೊರತೆ ಯಾಗಿ ಕಾಣುತ್ತೇವೆ. ಕೆಲವರಂತೂ ನಮ್ಮ ಜೀವನವೇ ಬ್ಯಾಡ್ ಲಕ್ಕ್ ಎಂದು ಕೊರಗುವುದು, ಕುಡಿಯುವುದು ಅಳುವುದು ಹೊಡೆದಾಡುವುದು ಕದಿಯುವುದು ಏನೆಲ್ಲಾ ಮಾಡುತಾರೆ. ಕಾರಣ ಇಷ್ಟೇ ಕೊರತೆ ಎಂಬ ಕೊರಗು ಕಾಡುವುದರಿಂದ.
ಎಂದಾದರೂ ಒಂದು ದಿನ ಬಿಡುವು ಮಾಡಿಕೊಂಡು ನಾವು ಯಾವುದಾದರು ಒಂದು ಸರ್ಕಾರಿ ಆಸ್ಪತ್ರೆಗೆ ಬೇಟಿ ಕೊಟ್ಟರೆ ಆಗ ತಿಳಿಯಬಹುದು ನಾವೆಷ್ಟು ಶ್ರೀಮಂತರೆಂದು. ಕಾರಣ ಅಲ್ಲಿ ಇರುವ ರೋಗಿಗಳನ್ನು ಒಮ್ಮೆ ನೋಡಿ ಎಂತೆಂತ ರೋಗಗಳನ್ನು ಹೊತ್ತು ಬಂದವರನ್ನು ಕಾಣಬಹುದು. ನೀವೊಮ್ಮೆ ಚಿಂತಿಸಿ ನೋಡಿ ನಾವೆಷ್ಟು ಆರೋಗ್ಯವಂತರೆಂದು - ಕೆಲಸ ಮಾಡುತ್ತವೆ ಸಿನೆಮ ನೋಡುತ್ತೇವೆ ಪಿಕ್ನಿಕ್ ಹೋಗುತ್ತೇವೆ ಫೋಟೋ ತೆಗೆಯುತ್ತೇವೆ ಅದನ್ನು ನೋಡಿ ಆನಂದಿಸುತ್ತೇವೆ. ಸಮಾರಂಭಗಳಲ್ಲಿ ವಿಜ್ರಂಭಿಸುತ್ತೇವೆ, ಕಂಪ್ಯೂಟರ್ ಉಪಯೋಗಿಸುತ್ತೇವೆ ಹಾಡು ಕೇಳುತ್ತೇವೆ ಫೋಟೋ ನೋಡುತ್ತೇವೆ ..
ಎಲ್ಲವನ್ನು ಅನುಭವಿಸುತ್ತೇವೆ ಆರೋಗ್ಯವಿದೆ ಸಂತೋಷವಿದೆ ಸೌಭಾಗ್ಯವಿದೆ ಕನಸನ್ನು ಕಾಣುತ್ತೇವೆ ಅದನ್ನು ಅನುಭವಿಸುತ್ತೇವೆ ಅದರ ಬಗ್ಗೆ ಮಾತನಾಡುತ್ತೇವೆ. ಮತ್ತೇಕೆ ಇಲ್ಲದ ಚಿಕ್ಕ ವಸ್ತುವಿಗಾಗಿ ಕೊರಗುವುದು. ನಮ್ಮಲ್ಲಿ ಇರುವುದೆಲ್ಲವೂ ಶ್ರೀಮಂತಿಕೆಯೇ ಅದನ್ನು ಸರಿಯಾಗಿ ಅರ್ಥ ಮಾಡಿಕೊಳ್ಳಬೇಕು ಅಲ್ಲವೇ ಹೌದು ಇವೆಲ್ಲವೂ ನಮ್ಮ ಶ್ರೀಮಂತಿಕೆಯೇ ,,,,,,,,,, ಕಾರಣ
ಚಿಂತಿಸಿ ಒಂದು ಕ್ಷಣ ನಮಗೆ " ಆರೋಗ್ಯ ಸರಿಯಿಲ್ಲದೆ " ಅಥವಾ ನಮಗೆ " ಎರಡು ಕಣ್ಣುಗಳು ಇಲ್ಲದೆ ಇದ್ದಲ್ಲಿ " ನಮ್ಮ ಸ್ತಿತಿ ಎನಾಗಬುದಿತ್ತು . ಆದ್ದರಿಂದ ಸ್ನೇಹಿತರೇ ಇರುವುದನ್ನು ಸಂತೋಷದಿಂದ ಅನುಭವಿಸಿ , ಆ ಸೃಷ್ಟಿಕರ್ತನನ್ನು ಸ್ಮರಿಸಿ
ಗೌರವಿಸಿ ಈಗ ನೀವಿರುವ ಸ್ತಳದಲ್ಲೇ ಯೋಚಿಸಿ ನಾವೆಷ್ಟು ಶ್ರೀಮಂತರೆಂದು .
ಇದೆಲ್ಲ ಹೇಳಲು ಕಾರವಿಷ್ಟೇ " ಶ್ರೀ ಶಾರದದೇವಿ ಅಂಧರ ವಿಕಾಸ ಕೇಂದ್ರ " ಇದು ಶಿವಮೊಗ್ಗದ ಮುಖ್ಯ ಬಸ್ಸು ನಿಲ್ದಾಣದಿಂದ ಕೆಲವೇ ಕೀ, ಮೀ, ದೂರದಲ್ಲಿದೆ . ಸ್ತಳ " ಅನುಪಿನಕಟ್ಟೆ " ಗೋಪಾಳ " ಶಿವಮೊಗ್ಗ .
ಒಮ್ಮೆ ಇಲ್ಲಿ ಬೆಟಿಕೊಡಿ. ಇಲ್ಲಿ ಇರುವ ಎಲ್ಲ ಮಕ್ಕಳು ಅಂಧರು, ಇಲ್ಲಿ ಅವರಿಗೆ ವಿಧ್ಯಬ್ಯಾಸ , ತೋಟಗಾರಿಕೆ , ಹಾಡುಗಾರಿಕೆ, ತಬಲಾ ತರಬೇತಿ ಇದೆಲ್ಲವನ್ನೂ ನೀಡಲಾಗುತ್ತಿದೆ.
ನಿಮ್ಮ ಪ್ರೀತಿ ಅವರಿಗೆ ಒಂದು ಕೊಡುಗೆಯಾಗಲಿ ,,,,,,,,,
" ನಿಮಗಿದು ಗೊತ್ತೇ ಅಂಧರಿಗೆ ಕನಸುಗಳು ಬೀಳುವುದಿಲ್ಲ "
ಕರುಣೆ ಬೇಡ ಪ್ರೀತಿಯನ್ನು ಕೊಡಿ - ನಾವೆಷ್ಟು ಶ್ರೀಮಂತರೆಮ್ಬುದು ತಿಳಿದುಕೊಳ್ಳಿ
ಸೃಷ್ಟಿಕರ್ತನು ನಮ್ಮನ್ನು ನಿಮ್ಮನ್ನು ಆ ಮಕ್ಕಳನ್ನು ರಕ್ಷಿಸಲಿ ಎಂದು ಪ್ರಾರ್ಥಿಸುತ್ತಾ , ನಿಮ್ಮ ಆತ್ಮೀಯ ಇಸ್ಮಾಯಿಲ್ ಶಿವಮೊಗ್ಗ
(ದಯವಿಟ್ಟು ಕ್ಷಮಿಸಿ )
Tuesday, 28 July 2009
Marcato Mall - ದುಬೈ
ತಾನೊಬ್ಬ ಮಹಾನ್ ಪಿಯಾನೋ ವಾದಕ ಎಂಬುದು ಎಲ್ಲರಿಗು ತಿಳಿದಿರುವಾಗ ಅದನ್ನೇ ಬಳಸಿ, ಅನಾಥ ಮಕ್ಕಳಿಗೆ ಸಹಾಯಕ್ಕಾಗಿ ತನ್ನ ಮನಮೋಹಕ ಪಿಯಾನೋ ವಾದದಿಂದ ಎಲ್ಲರ ಮನಸನ್ನು ಗೆದ್ದು , ಅದರ ಮೂಲಕ ಬರುವ ಹಣವನ್ನು ಅಂಥ ಮಕ್ಕಳಿಗೆ ಕೊಡಲಿಕ್ಕಾಗಿ Dubai - Marcato Mall ನಲ್ಲಿ ಸಂಗೀತ ರಸ ನಿಮಿಷಗಳು ನಡೆಸುತ್ತಿರುವ ವ್ಯಕ್ತಿಯೊಂದಿಗೆ ನನ್ನ ಒಂದು ಕ್ಷಣ ಮುಖ .
Pot " ನೀರಿನ ಕುಡಿಕೆ "
ಇದು ಎಲ್ಲರು ಸೇರಿ Fujairah & Khorfakkan ಟ್ರಿಪ್ ಹೋಗಿ ಬರುವಾಗ ನನ್ನವಳು ಕೊಂಡು ತಂದ ನೀರಿನ ಕುಡಿಕೆ. ಇದಕ್ಕೆ ಒಂದು ಪ್ರತ್ಯೇಕತೆ ಇದೆ. ಅದೆಂದರೆ ಇದರಲ್ಲಿ ನೀರು ತುಂಬಿ ಇಟ್ಟರೆ, ಇದರ ಹೊರಮೈ ಇಬ್ಬನಿ ಬಂದಂತೆ ನೀರು ಬಿಡುತ್ತದೆ. ಅಲ್ಲದೆ ನೀರು ಬಹಳ ತಂಪಾಗಿರುತ್ತದೆ
Monday, 27 July 2009
ಇದು ಒಳ್ಳೆ ಆಯ್ತಲ್ರೀ
ರಿಂಗು,,,,,,,
ಮೊದ್ಲು
ಮೊಬೈಲ್ ರಿಂಗು,
ಆಮೇಲೆ ಚಾಟಿಂಗು,
ಅಮ್ಮೇಲೆ ಡೆಟಿಂಗು,
ನಂತರ ಔಟಿಂಗು,
ಎಲ್ಲ ಮುಗಿದ ಮೇಲೆ ಹಾಸ್ಪಿಟಲ್ಗೆ ರಿಂಗು ,,,!
=== ==== ====
ಈ ರೋಡು ಎಲ್ಲಿಗೆ ಹೋಗುತ್ತೆ ಸಾರ್ ?
ರೋಡು ಎಲ್ಲಿಗೂ ಹೋಗಲ್ಲ ನೀವೇ ಹೋಗ್ಬೇಕು .
=== ====
ಅದು ಏನಾಯ್ತು ಅಂದ್ರೆ ?
ನೀವು ಹೇಳುದ್ರೆ ಅಲ್ವ ಗೊತ್ತಾಗೋದು .
ಆ ಇವ್ರು ಇದಾರಲ್ಲ್ರಿ
ಯಾರು .
=== ====
ಹುಡುಗ ಒಳ್ಳೆ ಆಪಲ್ ತರ ಇದಾನ್ರಿ .!
ಹೇಗೆ ಸಾದ್ಯ .
ಹುಡುಗಿ ಒಳ್ಳೆ ಗೊಂಬೆ ಗೊಂಬೆ ಕಣ್ರೀ
ಮದುವೆ ಹೇಗೆ ಸಾದ್ಯ.
=== ==== ====
ಮನೆ ಅಂದ್ರೆ ಆ ರೀತಿ ಇರ್ಬೇಕು ಕಣ್ರೀ !
ಹಾಗಾದ್ರೆ ಬಾಕಿ ಎಲ್ಲ ಮನೆ ಅಲ್ವ .
== == ==
ಎ ಇಲ್ಲ ಸಾರ್ ನಾನು ಕೇಬಲ್ ಹಾಕ್ಸಿಲ್ಲ ಕಾರಣ
ಮಕ್ಕಳು ಹಾಳಾಗ್ಬಿಡ್ತಾರೆ
ಹಾಗಾದ್ರೆ ನೀವು ಹಾಳಾಗಿದ್ದು ? .
=== === ===
ಮಕ್ಕಳು ಹೆಂಗೆ ಅಂದ್ರೆ ನಾವು ಮನೆಯಲ್ಲಿ ಯಾವು ರೀತಿ ಕಲಿಸುತ್ತೆವೋ ಅದನ್ನೇ ಕಲಿಯೋದು ಸಾರ್
ಓಹೋ ಅವ್ನು ಕುಡಿಯೋದು ಕಲಿತದ್ದು ,,,,,,, !
Sunday, 26 July 2009
ಎದುರು ಮನೆ ಆಂಟಿ ತುಂಬ ಒಳ್ಳ್ಯೋರು ಕಣೋ
ಸುರೇಶ : ಇದು ನಮ್ ಮನೆಗ್ ಅಲ್ಲ ಕಣೋ ಎದುರುಮನೆ ಆಂಟಿಗೆ ಅವ್ರು ತುಂಬ ಒಳ್ಳೆಯವರು ಕಣೋ ,,,,,,ಹೆಂಡ್ತಿ ಹೇಳುದ್ರೆ ತಗೊಂಡು ಹೋಗಕ್ಕೆ ನಂಗೇನ್ ಹುಚ್ಹ ಅಂತ ತಿಲ್ಕೊಂಡಿದಿಯ ನಾನ್ ಕಣ್ ಬಿಟ್ರೆ ಸಾಕ್ ನನ್ ಹೆಂಡ್ತಿ ಹೆದ್ರತಾಳೆ .,.
,,,,, ,,,,, ,,,,,,,,
ಸುರೇಶನ ಹೆಂಡತಿ ಸುಬ್ಬು ಹೆಂಡತಿ ಹತ್ರ ಹೇಳಿದ್ದು - ಏನಾದ್ರೂ ಆಗ್ಲಿ ಎಷ್ಟೇ ಕಷ್ಟದ ಕೆಲಸ ಇದ್ರೂ ಪರವಾಗಿಲ್ಲ ನಮ್ಮ ಎಜಮಾನ್ರು ನೋಡ್ರಿ, ಎದುರುಮನೆ ಆಂಟಿ ಬಾಯಲ್ಲಿ ಹೇಳುಸ್ಬಿಡ್ತೀನಿ ಅಷ್ಟೆ. ಈ ಮನುಷ್ಯ ಪಾಪ ಆಂಟಿ ಹೇಳಿದಾರೆ ಅಂತ ಕತ್ತೆ ತರ ಕೆಲಸ ಮಾಡ್ತಾರೆ .
'''' ನಾನು ಹೇಳದು ಅಂತ ಇವ್ರಿಗೆ ಇದುವರ್ಗೂ ಗೊತ್ತಿಲ್ಲ ""
Friday, 24 July 2009
ಏನ್ರಿ ಇದು
ಚಂದಿರ ,,,,,, !
ಓ ನನ್ನ ಪ್ರೀತಿಯ ಚಂದಿರ
ನೀನೆ ನನ್ನ ಇಂದಿರಾ
ನೀನಿಲ್ಲಿಗೆ ಬಂದರೆ
ನಾನಾಗುವೆ ಪ್ರೀತಿಯ ಮಂದಿರ.
=== ==== ====
ಓ ಪ್ರೀಯೆ ,,,,,,!
ನನ್ನ ಅದೃಷ್ಟದ ಬಾಗಿಲು ತೆರೆದಿದೆ
ಆದರೆ ನನ್ನ ಸಮಯ ಸರಿಯಿಲ್ಲ ಕಾರಣ
ನಿನಗಾಗಿ ನಾನು ತಾಜ್ ಮಹಲ್ ಕಟ್ಟಬೇಕೆಂದು ಕಾದಿರುವೆ
>>>>>>>>
ನನ್ನ ಅದೃಷ್ಟದ ಬಾಗಿಲು ತೆರೆದಿದೆ
ಆದರೆ ನನ್ನ ಸಮಯ ಸರಿಯಿಲ್ಲ ಕಾರಣ ನೀನು ಸಾಯುತ್ತಿಲ್ಲ ಕಾರಣ
ನಾನು ತಾಜ್ ಮಹಲ್ ಕಟ್ಟ ಬೇಕೆಂದು ಕಾದಿರುವೆ .
===== ==== ===== ====
ನನ್ನ ಹೃದಯದ ಪ್ರತಿಯೊಂದು ಏರಿಳಿತಗಳು ನಿನಗಾಗಿ
ನನ್ನ ಪ್ರತಿ ಮುಗುಳ್ನಗೆಯೂ ನಿನ್ನ ಚೆಲ್ಲಾಟಕ್ಕಾಗಿ
ನಿನ್ನ ಪ್ರತಿಯೊಂದು ಚಲನೆಯು ನನ್ನ ಮನಸ್ಸನ್ನು ಕದಿಯುವುದಕ್ಕಾಗಿ
ಈಗಂತೂ ನನ್ನ ಜೀವನವೇ ನಿನ್ನ ನಿರೀಕ್ಷೆಗಾಗಿ .
==== ===== =====
ನನ್ನ ಹೃದಯವಂತೂ ನಿನ್ನ ಪ್ರೀತಿಗಾಗಿ ಹುಚ್ಚಾಗಿದೆ
ಕಾರಣ ಎಲ್ಲವನ್ನು ಬಿಟ್ಟು ನಿನ್ನ ಬಳಿ ಬಂದಿದೆ
ನನಗದರ ಅವಶ್ಯಕತೆ ಇದ್ದಾಗ್ಯೂ ಅದು ಅಲ್ಲಿ ಕುಳಿತಿದೆ
ಇಲ್ಲಿ ಬಂದಾಗಾ ಅದು ಹೃದಯ ಬಡಿತವನ್ನೇ ನಿಲ್ಲಿಸಿದೆ .
=== === === ===
ನಿನ್ನ ಹೆಸರನ್ನು ಎಷ್ಟು ಸಂತೋಷದಿಂದ ಬರೆದು ಬರೆದು
ನನ್ನ ಮನೆಯ ಗೋಡೆಯನ್ನು ಅಲಂಕರಿಸಿದ್ದೆ
ಈಗ ಅಳಿಸಲು ಅಷ್ಟೆ ಬೇಸರದಿಂದ ಕಷ್ಟ ಪಟ್ಟು
ಅಳುತ್ತ ಅಳುತ್ತ ಅಳಿಸುತ್ತಿದ್ದೇನೆ
ಆದರೇನು ಗೋಡೆ ವಿಕಾರವಾಗಿದೆಯಲ್ಲ ,,?
=== === ===
ದಿನವು ಹುಡುಗಿಯ ಸೌಂದರ್ಯವನ್ನು ನೋಡಿ ಆನಂದಿಸುತ್ತಿದ್ದ ಕಾಲೇಜು ಹುಡುಗ ಒಂದು ದಿನ
ರೀ ನಿಮ್ಮ ಒಂದು ಫೋಟೋ ಬೇಕಾಗಿತ್ತು ಎಂದ. ಅದಕ್ಕೆ ಹುಡುಗಿ
ಪಾಸ್ಪೋರ್ಟ್ ಸೈಜ್ ಬೇಕಾ ಪೋಸ್ಟ್ ಕಾರ್ಡ್ ಸೈಜ್ ಬೇಕಾ ?
ಒಳ್ಳೆಯದು ಯಾವುದು ಇದೆ ಅದೇ ಕೊಡಿ ಅಂದ.
ಹುಡುಗಿ ಹೇಳಿದಳು ಪೋಸ್ಟ್ ಕಾರ್ಡ್ ಸೈಜ್ ಒಳ್ಳೆಯದು ಅದರಲ್ಲಿ ನಮ್ಮ ಯಜಮಾನರು ನನ್ನೊಟ್ಟಿಗೆ ತುಂಬ ಚೆನ್ನಾಗಿ ಕಾಣ್ತಾರೆ.
====== ==== =====
Thursday, 23 July 2009
ಜನಸಂಖೆ ಹೆಚ್ಚಾಗಲು ಇದೂ ಒಂದು ಕಾರಣ ಅಂತೆ
ಬಿ ಹೆಚ್ ರೋಡ್ ನಲ್ಲಿರುವ ಮೀನಾಕ್ಷಿ ಭವನ್ ನಮಗೆಲ್ಲರಿಗೂ ಇಷ್ಟವಾದ ಹೋಟೆಲ್. ರುಚಿಯಾದ ತಿಂಡಿಯನ್ನು ತಿಂದು ಒಂದು ಟೀ ಕುಡಿದರೆ ಏನೋ ಆಹ್ಲಾದ, ಒಂದೊಂದು ಭಾನುವಾರ ಒಂದೊಂದು ಹೋಟೆಲ್ ಗೆ ತಿಂಡಿಗೆ ಹೋಗೋದು ಬೇರೆಯದೇ ಸಂತೋಷ ಮತ್ತು ಸಂತೃಪ್ತಿ .
ಹೀಗೆ ಬೈಕ್ ಹತ್ತಿ ಹೊರಟ ನಾವು ಟ್ರಾಫಿಕ್ ಬಗ್ಗೆ ಜನ ಜಂಗುಳಿಯ ಬಗ್ಗೆ ಮಾತನಾಡುತ್ತಾ ಹೋಗುತ್ತಿದ್ದಾಗ ಪರೇಶ ಬರಿ ಜನ ಸಂಖೆ ಬಗ್ಗೆನೇ ಮಾತಾಡ್ತಾ ಇದ್ದ. ಸಾರ್ ಇದುಕ್ಕೆಲ್ಲ ಮೇನ್ ಕಾರಣ ಏನ್ ಗೊತ್ತ ಸಾರ್ ಈ ಟ್ರೈನ್ ಸಾರ್ ಈ ಟ್ರೈನ್ ಯಿಂದಾನೆ ಜನ ಸಂಖೆ ಜಾಸ್ತಿ ಆಗ್ತ ಇರೋದ್ ಸಾರ್ ಅಂದ. ನಾನಂದೆ ಟ್ರೈನ್ ನಿಂಗ್ ಏನ್ ಮಾಡೈತಾಪ ಅದ್ರು ಹಿಂದೆ ಯಾಕ್ ಬಿದ್ದಿದಿಯ ಅಂದೇ .
ನೋಡ್ರಿ ಸಾರ್ ಮೊದ್ಲು ಜಾಸ್ತಿ ಟ್ರೈನ್ ಇರಲಿಲ್ಲ ಜನ ಕಮ್ಮಿ ಇದ್ರೂ ಈಗ ಟ್ರೈನ್ ಜಾಸ್ತಿ ಆತು ಹಂಗೆ ಜನ ಜಾಸ್ತಿ ಆದ್ರು. ಕಾರಣ ಅಂದ್ರೆ ಎಲ್ಲ ಊರಾಗ್ ಟ್ರೈನ್ ಓಡಾಡ್ತಾವೆ ಅದು ಅಲ್ದೆ ಟ್ರೈನ್ ಟ್ರ್ಯಾಕ್ ಎಲ್ಲ ಹಳ್ಳಿ ಮದ್ಯದಾಗಿಂದ ಊರಿನ ಮದ್ಯದಾಗಿಂದ ಸಿಟಿ ಮದ್ಯದಾಗಿಂದ ಹೋಗ್ತಾವೆ ಅದು ಅಲ್ದೆ ದೊಡ್ಡ ದೊಡ್ಡ ಟ್ರೈನ್ ಗಳೆಲ್ಲ ರಾತಿ ೧ ಗಂಟೆಗೆ , ೨ ಗಂಟೆಗೆ , ೩ ಗಂಟೆಗೆ , ೪ ಗಂಟೆಗೆ ೫ ಗಂಟೆಗೆ ಓಡಾಡ್ತಾವೆ ರಾತ್ರಿ ಆ ಡಗ್ಗ್ ,, ಡಗ್ಗ್ ,,, ಡಗ್ಗ್ ,,, ಡಗ್ಗ್ ,,, ಶಬ್ದಕ್ಕೆ ಮಲ್ಗಿದ್ದವ್ರಿಗೆ ಎಚ್ಚರ ಆದ್ರೆ ಮತ್ತೆ ಎಲ್ಲಿಂದ ನಿದ್ದೆ ಬರ್ತೀತ್ ಸಾರ್ ಹಂಗಾಗಿ ನಿದ್ದೆ ಒಂದ್ ಸಲ ಹೋದ್ರೆ ಮತ್ತ್ ಬೆಳಗ್ಗೆ ತನಕ ಜನ ಹೆಂಗ್ ಟೈಮ್ ಪಾಸ್ ಮಾಡ್ತಾರೆ
ಆ ಟೈಮ್ ಪಾಸ್ ಇದಿಯಲ್ಲ ಸಾರ್ ಅದೇ ದೊಡ್ಡ ಪ್ರಾಬ್ಲಂ ಸಾರ್ ಹಂಗಾಗಿ ಜನ ಸಂಖೆ ಜಾಸ್ತಿ ಆಗ್ತೀತ್ ಸಾರ್
ಲೇ ಪರೇಶ ಹಂಗಾದ್ರೆ ಟ್ರೈನ್ ಇಲ್ಲ್ದಿದ್ ಕಡೆ ಜನ ಕಡಿಮೆ ಇದಾರ ಅಂದೇ. ಇಲ್ಲ ಸಾರ್ ಅಲ್ಲೂ ಜನ ಜಾಸ್ತಿ ಆಗಕ್ಕೆ ಒಂದ್ ರೀಸನ್ ಐತೆ ಅಂದ. ಅದೆನಪಾ ಅಂತದು ಅಂದೇ , ಪವರ್ ಕಟ್ ಸಾರ್ ರಾತ್ರಿ ಟೈಮಲ್ಲಿ ಕರಂಟ್ ಹೋದ್ರೆ ಸೆಖೆ ಮತ್ತ್ ನಿದ್ದೆ ಇಲ್ಲ ಮತ್ತ್ ಬೆಳಗ್ಗೆ ತನಕ ಟೈಮ್ ಪಾಸ್ ಏನ್ ಮಾಡ್ತಾರ್ ಸಾರ್.
ಹಂಗ್ ಜನ ಸಂಖೆ ಜಾಸ್ತಿ ಆಗ್ತ ಇರದ್ ಸಾರ್. ಈಗ ಇದೆಲ್ಲ ಯಾಕ್ ತಲೆ ಬಿಸಿ ನಿಗೆ ಅಂದೇ . ಹೋ ನಿಮಿಗ್ ಗೊತ್ತಿಲ್ಲ ಸಾರ್ ಈ ಸಲ ನಮ್ಮ ರಾಜ್ಯಕ್ಕೆ ಮತ್ತೆ ಹೊಸ ಟ್ರ್ಯಾಕ್ ಹಾಕ್ತಾರಂತೆ ಸಾರ್.
ಅದು ಹಿಂಗೆ ಊರ್ ಮದ್ಯ ಹಾಕುದ್ರೆ ಹೆಂಗ್ ಸಾರ್,,,,,,,,,, ?
(ಹೀಗೆ ನಕ್ಕು ಬಿಡಿ )
Wednesday, 22 July 2009
ಇವಳೇಕೆ ಹೀಗೆ ಮಾಡಿದಳು ಛೆ ಥೂ
ಇವಳೇಕೆ ಹೀಗೆ ಮಾಡಿದಳು ಛೆ ..!
೨೫ ವಯಸ್ಸಿನ ಇವಳು ೪೫ ವಯಸ್ಸಿನವನ ಜೊತೆಗೆ ಸೇರಿ ಕೊಂಡಳಲ್ಲ , ೨ ಸುಂದರವಾದ ಮಕ್ಕಳು ಅಷ್ಟೊಂದು ಪ್ರೀತಿಸುವ ಗಂಡ ಎಲ್ಲವನ್ನೂ ಬಿಟ್ಟು, ಅದು ಮದುವೆಯಾಗಿ ೫ ಮಕ್ಕಳ ತಂದೆ ಅವನದಾದ ಕುಟುಂಬ ಇದೆ ಅವನನ್ನು ಏನು ಕಂಡು ಸೇರಿ ಕೊಂಡಳು. ಇಷ್ಟೊಂದು ಕಟ್ಹೊರ ಮನಸ್ಸು ಹೆಣ್ಣಿಗೆ ಇರುತ್ತದೆಯೇ ಇವಳೊಂದು ಕಳಂಕ ಥೂ ,.ಹೇಗೆ ಲಜ್ಜೆ ಇಲ್ಲದೆ ಅವನೊಂದಿಗೆ ಓಡಾಡುತ್ತಾಳೆ .
ನಮ್ಮ ಶಿವಣ್ಣನ ಪತ್ನಿಯ ವಿಷ್ಯ ಹೀಗಾಯ್ತು ಎಂದು ತಿಳಿದಾಗ ನಮಗೆಲ್ಲರಿಗೂ ಸಿಟ್ಟು ಬಂದದ್ದು ಶಿವಣ್ಣನ ಮೇಲೆ, ಇದಕ್ಕೆಲ್ಲ ಕಾರಣ ಅವಳನ್ನು ಮದುವೆಯ ನಂತರ ಕಾಲೇಜ್ ಕಳಿಸಿದ್ದು ಕೆಲಸಕ್ಕೆ ಕಳಿಸಿದ್ದು. ಕಾರಣ ಮನೆಯವರೆಲ್ಲರೂ ಸೇರಿ ನೋಡಿದ ಹುಡುಗಿಯನ್ನು ಇವನು ಬಹಳ ಸಂತೋಷ ದಿಂದ ಮದುವೆಯಾಗಿ ಸಂತೋಷದಿಂದ ಜೀವನ ಸಾಗಿಸುತ್ತಿದ್ದ . ಮೊದಲನೆ ಮಗುವಾಯ್ತು ಸಂತೋಷ ಇನ್ನು ಜಾಸ್ತಿಯಾತು .
ಎರಡನೇ ಮಗು ಆಗುವುದರೊಳಗೆ ಅಲ್ಲೋಲ ಕೊಲ್ಲೊಲ ಗೊಳ್ಳುತ್ತಾ ಹೋಯ್ತು. ಶಿವಣ್ಣ ನಮ್ಮ ಕುಟುಂಬದ ಒಬ್ಬ ಸದಸ್ಯನಂತೆ ಅವನಿಲ್ಲದೆ ಯಾವ ಕಾರ್ಯ ಕ್ರಮಗಳು ಇರಲಿಲ್ಲ ಎಲ್ಲದರಲ್ಲೂ ಅವನ ಓಡಾಟ ನಾವು ಚಿಕ್ಕಂದಿನಿದಲೇ ನೋಡುತ್ತಾ ಬಂದವರು. ತಮಾಷೆ ಮಾಡವುದರಲ್ಲಿ ನಗಿಸುವುದರಲ್ಲಿ ನಿಸ್ಸೀಮ. ಏನೊಂದೂ ಕಾರ್ಯ ಗಳಿದ್ದರು ಒಂದು ವಾರ ಮೊದಲೇ ಇವನ ಓಡಾಟ ಜೋರು.
SSLC ಪಾಸಾಗಿದ್ದ ಕಾರಣ ಇವನಿಗೆ ಆಗ ಲೋನ್ ಸಿಕ್ಕಿತು ಅದರಲ್ಲಿ ಇವನು ಒಂದು ಇಂಜಿನಿಯರಿಂಗ್ ವರ್ಕ್ಸ್ ಶುರು ಮಾಡಿದ ಕೆಲ ದಿನಗಳಲ್ಲೇ ಇವನ ಮದುವೆ ನಡೆಯಿತು. ಇವನ ಹೆಂಡತಿ ಬಹಳ ಸುಂದರಿಯಾಗಿದ್ದಳು ಒಳ್ಳೆ ಸ್ವಭಾವದಳು ಸಹ ಒಳ್ಳೆ ಪ್ರೀತಿ ವಿಶ್ವಾಸ ಗಳಿಂದ ಮನೆಯನ್ನು ನೋಡಿಕೊಂಡು ಹೋಗುತ್ತಿದ್ದಳು. ಕಾಲ ಕ್ರಮೇಣ ಇವನು ಅವಳಿಗೆ ಹೇಳಿದ ನಿನ್ನದು SSLC ಆಗಿದೆಯಲ್ಲ ನಿನಗಿಷ್ಟ ವಿದ್ದರೆ ಕಾಲೇಜಿಗೆ ಸೇರಿಕೋ ಮನೆಯಲ್ಲಿ ಸುಮ್ಮನೆ ಕೂರುವುದಕ್ಕಿಂತ ನಿನಗೆ ಸಮಯ ಕಳೆಯಲು ಒಳ್ಳೆಯದು ಆಗುತ್ತದೆ ಎಂದಾಗ ಅದಕ್ಕವಳು ಆಯ್ತು ಎಂದಳು. ಇವನೇ ಒಂದು ದಿನ ಕಾಲೇಜ್ ಗೆ ಕೊಂಡು ಹೋಗಿ ಸೇರಿಸಿದ, ಅವಳು ಪಿ ಯು ಸಿ ಪಾಸ್ ಆಯ್ತು. ನಂತರ ಅವಳನ್ನು ಡಿಪ್ಲೋಮಾ ಗೆ ಸೇರಿಸಿದ ಈ ಮದ್ಯದಲ್ಲಿ ೨ ಮಕ್ಕಳಾದವು ಬಹಳ ಪ್ರೀತಿಯಿಂದ ಎಲ್ಲವು ಸರಿಯಾಗಿ ನಡೆಯುತ್ತಿದ್ದವು.
ಶಿವಣ್ಣನಿಗೆ ಹಣದ ಕೊರತೆಯೇನು ಇರಲಿಲ್ಲ ಕಾರಣ ಇವನ ವರ್ಕ್ ಶಾಪ್ ಚೆನ್ನಾಗಿ ನಡೆಯುತ್ತಿತ್ತು ರಜಾ ದಿನಗಳಲ್ಲಿ ಹೊರಗೆಲ್ಲ ಸುತ್ತುವುದಕ್ಕಾಗಿ ಹೋಗುತಿದ್ದರು. ಇವಳಿಗೆ ಏನು ಬೇಕಾದರೂ ತೆಗೆದು ಕೊಡುತ್ತಿದ್ದ ಮಕ್ಕಳಿಗೂ ಅಷ್ಟೆ ಚೆನ್ನಾಗಿ ನೋಡುತಿದ್ದ. ಹೀಗಿರುವಾಗ ಇವಳಿಗೆ ಕೆಲಸಕ್ಕೆ ಸೇರುವ ಉತ್ಸಾಹ ಶುರುವಾಯ್ತು ಆದರೆ ಶಿವಣ್ಣನಿಗೆ ಅದು ಅಷ್ಟೊಂದು ಕುಶಿಯಾದ ವಿಷಯವಾಗಲಿಲ್ಲ . ಆದರು ಒಲ್ಲದ ಮನಸಿನಿಂದ ಒಪ್ಪಿ ಕೆಲಸಕ್ಕೆ ಕಳಿಸಿದ ಅದೇ ಮೊದಲ ತಪ್ಪು ಅಲ್ಲಿಂದ ಶುರುವಾಯ್ತು ಇವಳ ಧಾರವಾಹಿ ಮೊದಲು ಎಲ್ಲ ಸರಿಯಾಗೇ ಇತ್ತು.
ಪರೇಶ ಒಂದು ದಿನ ಸಾರ್ ಏನು ತಿಳ್ಕೋ ಬ್ಯಾಡ್ರಿ ನಾನ್ ಒಂದು ಮಾತ್ ಹೇಳ್ತೀನಿ ಅಂದ ಏನ್ ಹೇಳೋ ಅಂದಾಗ ಸಾರ್ ನಂ ಶಿವಣ್ಣನ ಹೆಂಡ್ತಿ ಅವ್ರ ಕಂಪನಿ ಮೇನೇಜರ್ ಜೊತೆ ಬಾಳ ಓಡಾಟ ಅಂತ ನ್ಯೂಸ್ ಬಂದೈತ್ ಸಾರ್ ಅಂದ. ನಾನು ಏನು ಗೊತ್ತಿಲ್ಲ ದ ಹಾಗೆ ಹೌದ ನಿಂಗ್ ಯಾರು ಹೇಳಿದರೋ ಅಂದೇಯಾರು ಹೇಳದ ಬೇಡ ನಾನು ಬಾಳ ದಿನದಿಂದ ಎಲ್ಲ ಚೆಕ್ ಮಾಡಿ ನಿಮಿಗ್ ಹೇಳಿದ್ದು ಅಂದ. ಅಲ್ಲಿಗೆ ನನ್ನ ಮನಸ್ಸಿನಲ್ಲಿದ್ದ ಎಲ್ಲ ವಿವರಗಳು ಸರಿ ಎಂಬುದು ಖಾತ್ರಿಯಾಯ್ತು.
ಈ ವಿಷಯ ಶಿವಣ್ಣನಿಗೆ ಹೇಗೆ ಹೇಳುವುದು ಅಂತ ಯೋಚನೆಯಲ್ಲೇ ಬಹಳ ದಿನಗಳು ಕಳೆದು ಹೋಯ್ತು. ಒಂದು ದಿನ ಈ ವಿಷ್ಯ ಮನೆಯಲ್ಲಿ ಗೊತ್ತು ಇದರಿಂದಲೇ ಮನೆಯಲ್ಲಿ ದಿನವು ಜಗಳ ನಡೆಯುತ್ತಿದೆ ವಿಷಯ ಕೈ ಜಾರಿ ಹೋಗಿದೆ ಅಂತ ನನಗೆ ಶಿವಣ್ಣನ ಸ್ನೇಹಿತ ಬಾಬು ಹೇಳಿದಾಗ ಆಕಾಶವೇ ಕುಸಿದು ಬಿದ್ದಂತೆ ಆಯ್ತು. ಯಾವುದೇ ದುರಬ್ಯಾಸ ಗಳಿಲ್ಲದ ಸ್ವಾಭಿಮಾನಿ ಶಿವಣ್ಣನಿಗೆ ಇಂತ ಕೆಟ್ಟ ಹೆಂಗಸು ಎಲ್ಲಿಂದ ಸಿಕ್ಕಳು, ವಿಷಯ ಬಹಳ ರಾಜ ರೋಶಾಗಿ ಎಲ್ಲರ ಬಾಯಲ್ಲೂ ನಡೆದಾದ ತೊಡಗಿತು. ಪ್ರತಿದಿನ ಮನೆಯಲ್ಲಿ ಜಗಳ ಕಾರವಿಷ್ಟೇ ಅವಳಿಗೆ ಡೈವೋರ್ಸ್ ಬೇಕು ಅಷ್ಟೆ. ಆದರೆ ಅವಳೆಷ್ಟೇ ಜಗಳ ಮಾಡಿದರು ಇವನು ಮಾತ್ರ ಅವಳ ಯಾವ ಮಾತಿಗೂ ಉತ್ತರ ಕೊಡುತ್ತಿರಲಿಲ್ಲ , ಅದು ಅವಳಲ್ಲಿ ರೋಷ ಹೆಚ್ಹುವಂತೆ ಮಾಡುತಿತ್ತು.
ಇವನು ಸುಮ್ಮನಿರಲು ಕಾರಣ ಇವನ ೨ ಮಕ್ಕಳು ಅನಾಥರಾಗುತ್ತಾರೆ ಎಂಬ ಭಯ ಅದೇ ಇವನಿಗೆ ಎಲ್ಲಕ್ಕೂ ಸುಮ್ಮನಿರುವಂತೆ ಪ್ರೇರೇಪಿಸುತಿತ್ತು. ಆದರೆ ಅದು ಬಹಳ ದಿನ ನಡೆಯಲಿಲ್ಲ ಕೋರ್ಟು ಕೇಸು ಎಂದು ಶುರುವಾಗಿ ಮಕ್ಕಳು ಅನಾಥಾಶ್ರಮಕ್ಕೆ ಸೇರುವಂತೆ ಆಯ್ತು . ಅಷ್ಟಕ್ಕೂ ಬಿಡದೆ ಅವಳು ಇವನ ಆಸ್ತಿಯ ಮೇಲೆ ಅಟ್ಯಾಚ್ಮೆಂಟ್ ತಂದಳು. ಅದು ಕೋರ್ಟು ಸೇರಿತು. ಇವನು ದಾರಿಯಲ್ಲಿ ಬಿದ್ದ.
ಸ್ವಾಭಿಮಾನಿಯಾದ ಶಿವಣ್ಣ ಈಗ ಬೇರೆ ಕಡೆ ಕೆಲಸ ಮಾಡುತ್ತಾನೆ ದುಡಿದ ಹಣದಿದಂದ ತನ್ನ ಪಾಡು ಮತ್ತು ಅನಾಥಶ್ರಮದಲ್ಲಿರುವ ಆ ೨ ಮಕ್ಕಳನ್ನು ಅಗಾಗ ನೋಡಲು ತನ್ನ ಹಳೆಯ ಸೈಕಲನ್ನು ತುಳಿಯುತ್ತ ಅಲ್ಲಿಗೆ ಹೋಗುತ್ತಾನೆ. ಹೀಗೆ ಹೋಗುವಾಗ ಕೆಲೋವೊಮ್ಮೆ ಅವನ ಮಾಜಿ ಪತ್ನಿ ಇವನ ಪಕ್ಕದಲ್ಲೇ ತನ್ನ ಹೊಸ ಟೊಯೋಟಾ ಕಾರಿನಲ್ಲಿ ಸ್ಪೀಡಾಗಿ ಹೋಗುವುದನ್ನು ಇವನು ನೋಡಿಯು ನೋಡದಂತೆ ಸೈಕಲ್ ಜೋರಾಗಿ ತುಳಿಯುತ್ತಾನೆ ,.,.,.
ಹೇಗೆ ಸಾದ್ಯ ಸೈಕಲ್ ಟೊಯೋಟಾ ಕಾರಿನೊಂದಿಗೆ ಓಡಲು ಸಾದ್ಯವೇ ,,,,......,,,..?
Saturday, 18 July 2009
ಹೀಗೊಂದು ಪ್ರೇಮ ಪತ್ರ
ಬಡಗಿ :
ಓ ನನ್ನ ಪ್ರಿಯತಮೆ ಬೀಟೆ ಮರದಂತಿರುವ ನಿನ್ನ ಶರೀರ, ನೀಲಗಿರಿ ಮರದಂತಿರುವ ನಿನ್ನ ಕಾಲುಗಳು, ಎತ್ತಿನಗಾಡಿಯ ನೋಗದಂತಿರುವ ನಿನ್ನ ಮೂಗು, ಆಲದ ಮರದ ಬಿಳಿಲುಗಲನ್ತಿರುವ ನಿನ್ನ ಕೇಶ , ಕುದ್ರೆಗಾಡಿಯ ಚಕ್ರದಂತಿರುವ ನಿನ್ನ ಕಿವಿಗಳು, ಕಿಟಕಿಯ ಬಾಗಿಲಿನಂತಿರುವ ನಿನ್ನ ಕಣ್ಣುಗಳು, ಹೆಬ್ಬಾಗಿಲಿನಂತಿರುವ ನಿನ್ನ ಎದುರು, ಹಿಂಬಾಗಿಲಿನಂತಿರುವ ನಿನ್ನ ಹಿಂಬದಿ, ಬಿಸಿಲುಗಾಲದಲ್ಲಿ ತಂಪು ನೀಡುವ ಮಾಡಿನಂತಿರುವ ನಿನ್ನ ಸ್ನೇಹ , ಕುಸುರಿ ಕೆಲಸದಂತಿರುವ ನಿನ್ನ ಮೈಮಾಟ , ಚಳಿಯಲ್ಲೂ ತಗ್ಗದೆ ಬಗ್ಗದೆ ನಿಲ್ಲುವ ಮರದ ಕಂಬಗಳನ್ತಿರುವ ನಿನ್ನ ಧೈರ್ಯ. ಸಾಗುವಾನಿಯ ಕಪಾಟಿನಂತೆ ಕಾಣುವ ನಿನ್ನ ನಿಲುವು, ಬೀಟೆಯ ಡೈನಿಂಗ್ ಟೇಬಲ್ಲಿನ ಹಾಗೆ ಕಾಣುವ ನಿನ್ನ ಕುಳಿತ , ಎರಡು ಬಾಗಿಲನ್ನು ತೆರೆದಿಟ್ಟಂತೆ ಇರುವ ನಿನ್ನ ಹೃದಯ, ಎಲ್ಲ ಕಿಟಕಿಗಳನ್ನು ತೆರೆದಿಟ್ಟಂತೆ ಕಾಣುವ ನಿನ್ನ ನಗುವು, ಮರಕ್ಕೆ ಅತ್ರಿ ಹಾಕುವಾಗ ಬರುವಂತ ನಿನ್ನ ಹೃದಯದ ಶಬ್ದ ,.,.,.,.,,.
ಮೆಕ್ಯಾನಿಕ್ :
ಓ ನನ್ನ ಪ್ರಿಯತಮೆ ಸ್ಕಾರ್ಪಿಯದನ್ತಿರುವ ನಿನ್ನ ಶರೀರ, ಟೊಯೋಟಾದ ಸೀಟಿನಿಂತಿರುವ ನಿನ್ನ ಮೃದುವಾದ ಮನಸ್ಸು, ಆಲ್ಟೊ ದ ಹೆಡ್ ಲೈತಿನಂತಿರುವ ನಿನ್ನ ಕಣ್ಣುಗಳು, ಜಿಪ್ಸಿ ಯಂತಿರುವ ನಿನ್ನ ಓಡಾಟ, ಮಳೆಯಲ್ಲೂ ಕೆಸರಲ್ಲೂ ಹೊಂದಿಕೊಂಡು ಹೋಗುವಂತ ಟಾಟಾ ಸುಮೋ ದಂತಹ ನಿನ್ನ ಧೈರ್ಯ, ಹಾಳಾದ ಗಾಡಿಯನ್ನು ಎಳೆದು ತರುವ ಕ್ರೇನ್ ತರಹದ ನಿನ್ನ ಆತ್ಮೀಯತೆ , ಅಂಬಾಸಡರ್ ನಂತಿರುವ ನಿನ್ನ ಸಂಸ್ಕೃತಿ , ಎಲ್ಲವನ್ನು ಹೊತ್ತುಕೊಂಡು ಹೋಗುವ ಲಗ್ಗೇಜ್ ಕ್ಯಾರಿಯರ್ ನಂತಹ ನಿನ್ನ ಆತ್ಮ ಸ್ತೈರ್ಯ, ಟೆಂಪೋ ಟ್ರಾವಲರ್ ತರಹ ಎಲ್ಲರನು ಒಟ್ಟಿಗೆ ಸಹಿಸಿಕೊಂಡು ಹೋಗುವಂತಹ ನಿನ್ನ ಸಹನೆ, ಎಲ್ಲ ದಾರಿಗಳಲ್ಲೂ ಒಂದೇ ಸಮನಾಗಿ ಓಡುವ ಏನ್ ಪಿ ತರಹದ ನಿನ್ನ ವಿಶಾಲ ಹೃದಯ .,.,.,.,.,.,.,.,.,
ಸೈಕಲ್ ಶಾಪ್ :
ಓ ನನ್ನ ಪ್ರಿಯತಮೆ ಸ್ಪೋರ್ಟ್ಸ್ ಸೈಕಲ್ ನಂತಿರುವ ನಿನ್ನ ಶರೀರ , ಚೈನ್ ನಂತಿರುವ ನಿನ್ನ ಕೇಶ ರಾಶಿ, ಬ್ರೇಕ್ ಇಲ್ಲದ ಸೈಕಲ್ ನಂತಿರುವ ನಿನ್ನ ಮಾತುಗಳು, ಚಕ್ರದಂತಿರುವ ನಿನ್ನ ಕೆನ್ನೆಗಳು, ಕ್ಯಾರಿಯರ್ ಇಲ್ಲದ ಸೈಕಲ್ನಂತಿರುವ ನಿನ್ನ ವೈಯಾರ, ಸ್ಟ್ಯಾಂಡ್ ನಂತಿರುವ ನಿನ್ನ ಕಾಲುಗಳು, ಸೈಕಲ್ ಹಾಗೆಯೇ ಡಯಟಿಂಗ್ ಮಾಡಿದಂತೆ ಕಾಣುವ ನಿನ್ನ ಸೌಂದರ್ಯ.,.,.,.,,.,..,
ಹೋಟೆಲ್ ನವನು :
ಓ ನನ್ನ ಪ್ರಿಯತಮೆ ಮೈಸೂರು ಮಸಾಲೆ ದೊಸೆಯನ್ತಿರುವ ನಿನ್ನ ಶರೀರ, ಇಡ್ಲಿಯನ್ತಿರುವ ನಿನ್ನ ಕೆನ್ನೆಗಳು, ಸಾಂಬಾರ್ ನಂತಿರುವ ನಿನ್ನ ಚುರುಕು, ಉಪ್ಪಿಟ್ ನಂತಿರುವ ನಿನ್ನ ಮಾತುಗಳು , ಉಬ್ಬಿದ ಪೂರಿಯಂತೆ ಇರುವ ನಿನ್ನ ವಿಶಾಲ ಹೃದಯ, ಎಲ್ಲದಕ್ಕೂ ಹೊಂದಿ ಕೊಳ್ಳುವಂತಹ ಆತ್ಮ ಸ್ತೈರ್ಯ, ಟಿ ಕುಡಿದ ಕೂಡಲೇ ಶಾಂತವಾಗುವ ನಿನ್ನ ಮನಸ್ಸು
ಐ ಟಿ :
ಓ ಪ್ರಿಯ ತಮೆ ಲ್ಯಾಪ್ಟಾಪ್ ನಂತಿರುವ ನಿನ್ನ ಶರೀರ, ಇಂಟೆಲ್ ನನ್ತಿರುವ ನಿನ್ನ ಸ್ಮರಣ ಶಕ್ತಿ , ಪೆವಿಲಿಯಾನ್ ನಂತಿರುವ ನಿನ್ನ ದೇಹ ಸೃಷ್ಟಿ , ೧೯' ನಂತಿರುವ ನಿನ್ನ ಆಕರ್ಷಕ ಮುಖ ಸೌಂದರ್ಯ , ಕೀ ಬೋರ್ಡ್ನ ಕೀ ಗಳನ್ತಿರುವ ನಿನ್ನ ಮೃದುವಾದ ಬೆರಳುಗಳು , ಮೈ ಡಾಕ್ಯುಮೆಂಟ್ ನಂತಿರುವ ವಿಶಾಲಾ ಹೃದಯ , ಸಿನ್ತೆಕ್ಷ ಎರರ್ ನಂತೆ ಬರುವ ಮೃದುವಾದ ನಿನ್ನ ಸಿಟ್ಟು , ಅಡೋಬ್ ನಂತೆ ಎಲ್ಲವನ್ನು ಸ್ವೀಕರಿಸುವ ನಿನ್ನ ಮನೋ ಸ್ತೈರ್ಯ , ಎಲ್ಲವನ್ನು ಸರಿಯಾದ ಸ್ಥಳದಲ್ಲಿ ಇಡುವ ಫೋಲ್ಡರ್ ನಂತೆ ನಿನ್ನ ಒಪ್ಪ , ಬರುವಾಗಲು ಹೋಗುವಾಗಲು ತಿಳಿಸುವ ನಾದ ಗೆಜ್ಜೆ , ಅನೈತಿಕತೆಯನ್ನು ಸ್ವೀಕರಸದಂತಹ ಆಂಟಿ ವೈರಸ್ ನಂತಹ ನಿನ್ನ ಅದೃಶ್ಯ ಶಕ್ತಿ, ಪರಿಸ್ಥಿತಿಗೆ ತಕ್ಕಂತೆ ಅಪ್ಗ್ರಯೇಡ್ ಆಗುತ್ತಾ ಹೋಗುವ ನಿನ್ನ ಆಧುನಿಕತೆ .,,.,.,..,,.,.
ಹೀಗೆ ಅಲ್ಲವೇ ಮನಸ್ಸಿನ ಭಾವನೆಗಳು, ಪ್ರತಿಯೊಬ್ಬರೂ ತನ್ನದೇ ಆದ ಶೈಲಿಯನ್ನು ಹೊಂದಿರುತ್ತಾರೆ. ಆದರೆ ಎಲ್ಲರು ವ್ಯಕ್ತ ಪಡಿಸುವುದು ತಮ್ಮ ಪ್ರೀತಿಯನ್ನೇ ಅಲ್ಲವೇ. ಪ್ರೀತಿಗೆ ಯಾವ ಭಾಷೆ ಯಾದರೇನು ಕೊನೆಗೆ ಬಂದು ನಿಲ್ಲುವುದು ಅಲ್ಲೇ , ಅಯ್ಯಪ್ಪ ಯಾಕ್ಬೇಕಿತ್ತು ಈ ಪ್ರೀತಿ, ಈ ಮದುವೆ.
" ಹಗಲು ಕಂಡ ಹೊಂಡದಲ್ಲಿ - ಹಗಲೇ ಹೋಗಿ ಬೀಳುವುದು "
ಇದೆಲ್ಲ ಮುಗಿದ ಮೇಲೆ .,,..,.,.,.,.,
ಬಡಗಿ ಹೇಳಿದ್ದು : ನಿನ್ ಮನೆ ಹಾಳಾಗ್ ಹೋಗ ನಿಂದೇನ್ ಬಾಯಿನ ಗರಗಸನ ಮೆಚ್ಚೆ ಬಾಯಿ .
ಮ್ಯಕಾನಿಕ್ : ಹೇಯ್ ಇದೊಳ್ಳೆ ಯಾವ್ದೋ ಗಾಡಿಗೆ ಯಾವ್ದೋ ಪಾರ್ಟ್ಸ್ ಹಾಕ್ದಂಗೆ ಕಾಣತೈತ್ ಸಾರ್, ಹಾಳಗ್ ಹೋಗ ತಗೊಂಡ್ ಹೋಗಿ ಗುಜ್ರಿಗ್ ಹಾಕದೆ ಸರಿ
ಸೈಕಲ್ ಶಾಪ್ :
ಕ್ಲಚ್ಚೆ ಇಲ್ದಿದ್ ಮೇಲೆ ಈ ಸೈಕಲ್ ಎಲ್ಲಿಂದ ಓಡ್ತೀತ್ ಮಾರಾಯ
ಹೋಟೆಲ್ನವನು :
ಒಂದೇ ಮಾತು ಈ ಹಿಟ್ಟು ಹಳ್ಸೋಗೈತಾಪ
ಐ ಟಿ :
ಈ ಲ್ಯಾಪ್ ಟಾಪ್ ಔಟ್ ಆಫ್ ಡೇಟ್ ಇದು ಸರಿ ಮಾಡಕ್ಕಾಗಲ್ಲ . ಕಾರಣ ಇದುಕ್ಕೆ ಸ್ಪೇರ್ ಸಿಗಲ್ಲ
ಪ್ಯಾಂಟ್ ಹೊಲಿಯಲು ಎಷ್ಟು ಚಾರ್ಜ್
ಟೈಲರ್ ಅಂಗಡಿಗೆ ಬಂದ ವ್ಯಕ್ತಿ ಸಾರ್ ಪ್ಯಾಂಟ್ ಹೊಲಿಯಲು ಎಷ್ಟು ಚಾರ್ಜ್ ಕೇಳಿದ
೩೦೦/-ರೂ
ಚಡ್ಡಿ ಹೊಲಿಯಲು ಎಷ್ಟು ಚಾರ್ಜ್
೧೦೦/- ರೂ
ಓಹೋ ಹೋ ಹಾಗಾದರೆ ಒಂದು ಕೆಲಸಮಾಡಿ ಚಡ್ಡಿನೆ ಹೊಲಿಯಿರಿ ಆದರೆ ಮಾತ್ರ
ಉದ್ದ ಮಂಡಿಗಿಂತ ಕೆಳಗೆ ಮತ್ತು ಪಾದಕ್ಕಿಂತ ೧ ಇಂಚು ಮೇಲೆ ಇರಲಿ ಅಷ್ಟು ಸಾಕು .,.,.,
ಯಾವಾಗ ಸಿಗಬಹುದು ?
ನಿಮ್ಮ ಮದುವೆಯ ಒಂದು ವರ್ಷದ ನಂತರ ,,,! ,,,, ??? ,,,!!!
ಕಾರಣ ಇದು ನಿಮ್ಮ ಮಗುವಿಗಲ್ಲವೇ
Thursday, 16 July 2009
ಹೀಗೂ ಒಬ್ಬ ಮನುಷ್ಯ ಸ್ನೇಹಮಾಯಿ - ಭಾವಜೀವಿ
ಹೇ ಆ ಸೊಂಟ ನೋವಿಗೆ ಹಚ್ತಾರಲ್ಲ ಆ ಎಣ್ಣೆ ಸಹ ಮರೀದಂಗೆ ತರ್ಸೋ,
ಅದಕ್ಕೆ ನಾನಂದೆ ಒಂದೇ ಉಸಿರಲ್ಲಿ ನೀನು ಏನೆಲ್ಲ ಹೇಳ್ತಿಯಪ್ಪ ನಿದಾನ ತಿನ್ನು ಯಾರಾದರು ನೋಡಿದ್ರೆ ನೀನು ಒಂದು ವಾರದಿಂದ ಊಟ ಮಾಡಿಲ್ಲ ಅಂತ ತಿಳ್ಕೋತಾರೆ ಅಂದೇ, ನಿಂಗೊತ್ತಿಲ್ಲ ಇಡ್ಡ್ಲಿ ಸಾಂಬಾರ್ ಬೇರೆ ಟೇಸ್ಟ್ ಅದರೊಟ್ಟಿಗೆ ಉದ್ದಿನ ವಡೆ ಗೆ ಈ ಕೆಂಪು ಚಟ್ನಿ ಮತ್ತು ಈ ಬಿಳಿ ಚಟ್ನಿ ಮಿಕ್ಸ್ ಮಾಡಿ ತಿಂದ್ರೆ ಬಿಸಿ ಬಿಸಿ ವಡೆಗೆ ಅದ್ರು ರುಚಿ ನಂಗೆ ಮಾತ್ರ ಗೊತ್ತು ಕಣೋ ನಿಂಗ್ ಗೊತ್ತಿಲ್ಲ ಆಯ್ತಪ್ಪ ನೀನು ಹೇಳಿದ್ದೆ ಸರಿ ಅಂದೇ .
ಅದಕ್ಕೆ ಸುಕ್ಕರ್ ಅದೆಲ್ಲ ಇರ್ಲಿ ನಿಮ್ಮ ಇಂಡಿಯನ್ಸ್ ಒಳ್ಳೆ ಒಳ್ಳೆ ಇಂಡಿಯನ್ ಫುಡ್ ಬಿಟ್ಟು ಅದ್ಯಾಕೋ ಬರಿ ಪಿಜ್ಜಾ , ಕೆಂಟುಕಿ ಬರ್ಗರ್ , ಬರಿ ಜಂಕ್ ಫುಡ್ ತಿಂತಾರೆ . ಅದಕ್ಕೆ ನಾನು ಹೇಳ್ದೆ ಬೇರೆಯವರ ವಿಷ್ಯ ಗೊತ್ತಿಲ್ಲ ನಾನು ಫ್ರೆಶ್ ಫುಡ್ ಮಾತ್ರ ತಿಂತೀನಿ ಅದೆಲ್ಲ ನಾನ್ ತಿನ್ನಲ್ಲ ಅಂದೇ, ಅಲ್ಲ ಕಣೋ ಹೇಳಿದ್ದು ಅಷ್ಟೆ ನೀನ್ ಯಾಕ ಬಿಸಿಯಾಗ್ತಿಯ ತಗೋ ಬಿಸಿ ಬಿಸಿ ಇಂಡಿಯನ್ ಟೀ ಕುಡಿ, ಹೇಳಿ ಎಲ್ಲ ಮುಗಿದ ಮೇಲೆ ಹೊರಡುವಾಗ ಅಲ್ಲಿದ್ದವರಿಗೆ ಥ್ಯಾಂಕು " ಬಹುದ್ ಅಜ್ಜ ಹೇ " ಗೊತ್ತಿಲ್ಲದ ಬಾಷೆಯನ್ನು ಪ್ರಯತ್ನಿಸಿ ಹೇಳಿ ನಗುತ್ತ ಹೊರ ಬಂತು ಈ ವ್ಯಕ್ತಿ .
ವೀಕ್ ಎಂಡ್ ಎಲ್ಲರು ಸೇರಿ ದುಬಾಯಿ ವೀನಸ್ ರೆಸ್ಟೋರೆಂಟ್ ಹೋಗಾಣ ಅಲ್ಲಿ ಎಲೆ ಊಟ ಚೆನ್ನಾಗಿರುತ್ತೆ , ಟಾಲಿ ತಿನ್ನೋಣ, ನಾನಂದೆ ಟಾಲಿ ಅಲ್ಲ ಥಾಲಿ ಅಂದೇ ಹ್ಞೂ ಅದೇ ಅದೇ .
ಇದೆಲ್ಲ ಹೇಳಲು ಕಾರಣ ಈ ಅರಬ್ ರಾಷ್ಟ್ರೀಯ ವ್ಯಕ್ತಿ ಭಾರತದ ತಿನಿಸುಗಳ ಬಗ್ಗೆ ಡ್ರೆಸ್ ಗಳ ಬಗ್ಗೆ ಬೊಂಬಾಯ್ ಡೆಲ್ಲಿ ಬೆಂಗಳೂರು ಮದ್ರಾಸು ಜನ ಜೀವನದ ಬಗ್ಗೆ ಕಾಳಜಿಯಿಂದ ತಿಳಿದುಕೊಂಡಿರುವುದು ಸುಮಾರು ಸಲ ಬೇಟಿ ಕೊಟ್ಟು ಅಲ್ಲಿಯ ಕಟ್ಟಡಗಳ ನಿರ್ಮಾಣದ ಬಗ್ಗೆ ಕಲೆ ಸಂಸ್ಕೃತಿಯ ಬಗ್ಗೆ ಕೂಡಿ ಹಾಕಿರುವ ವಿಷಯಗಳು ಬಹಳ ಕುತೂಹಲ ಉಂಟು ಮಾಡುತ್ತದೆ. ಅಲ್ಲದೆ ಸ್ನೇಹಮಯಿ ಮತ್ತು ಭಾವ ಜೀವಿ .
ಶ್ರೀಮತಿ ಇಂದಿರಾಗಾಂಧಿ ಯವರು ಮೊದಲ ಬೇಟಿ ಯು ಎ ಯಿ ಬಂದಾಗ ಅವರೊಂದಿಗೆ ಅರಬ್ ರಾಯಭಾರಿಯಾಗಿ ೩ ದಿನಗಳು ಓಡಾಡಿದ್ದು ಅವರ ಕಾಲದ ಏರ್ ಪೋರ್ಟ್ ನ ವಿಷ್ಯ ಎಲ್ಲವು ಒಮ್ಮೊಮ್ಮೆ ಮೆಲುಕು ಹಾಕುವುದುಂಟು . ಆಗಿನ ಕಾರುಗಳು ಚಿಕ್ಕ ಚಿಕ್ಕ ಕಟ್ಟಡಗಳು ,.,.
ಈಗ ನೋಡದ್ಯ ಯು ಎ ಯಿ ಹೇಗೆ ಬದಲಾಗಿದೆ ನೋಡಿಲ್ಲಿ ಗಗನ ಚುಂಬಿ ಕಟ್ಟಡಗಳು ಹೊಸ ಹೊಸ ಕಾರುಗಳು , ಯಂತ್ರಗಳು ಮನುಷ್ಯರ ಸ್ವಭಾವಗಳು ಎಲ್ಲ ಬದಲಾಗಿವೆ.
ಆದರೆ ನಾನು ಮಾತ್ರ ಬದಲಾಗಿಲ್ಲ ಕಣೋ .
ಅದಕ್ಕೆ ಕಾರಣ ಏನು ಗೊತ್ತ ಅಂದೇ ,,,
ಏನು
ನೀನು ನನ್ನ ಫ್ರೆಂಡ್ ಆದ್ರಿಂದ ,,,!
Wednesday, 15 July 2009
ಬಸ್ಟಾಪಿನಲ್ಲಿ ನಿಂತ ಹುಡುಗಿ
ಮನುಷ್ಯರು ಏನಾದರು ಕಳೆದು ಕೊಂಡಾಗ ತಕ್ಷಣಕ್ಕೆ ಅವರ ಬಾಯಿಂದ ಬರುವ ಉದ್ದ್ಗಾರಗಳು ಒಂದು ಅನುಭವ ಸಂಕೇತಗಳಾಗಿರುತ್ತವೆ. ಅದು ಅವರ ಮನಸಿನ ಮಾತನ್ನು ಹೊರ ಸೂಸುತ್ತವೆ, ಅವರ ಹೃದಯದ ತಳಮಳವನ್ನು ವ್ಯಕ್ತಪಡಿಸುತ್ತದೆ. ಬಸ್ಸು ಮಿಸ್ ಆದಾಗ, ಒಳ್ಳೆ ಕೆಲಸದ ಸಮಯದಲ್ಲಿ ಕರೆಂಟು ಹೋದಾಗ, ಚೆಕ್ ಬೌನ್ಸ್ ಅದಾಗ, ಸಿನಿಮಾ ಟಿಕೆಟ್ ಸಿಗದಾಗ, ಅದರಲ್ಲಿ ಎಲ್ಲರ ಅಭಿಪ್ರಾಯಗಳು ಒಂದೇ ಆಗಿರಬೇಕಿಂದಿಲ್ಲ . ಕಾರಣ ಒಂದು ಹುಡುಗ ಬಸ್ಟಾಪಿನಲ್ಲಿ ನಿಂತಾಗ ಅವನಿಷ್ಟದ ಹುಡುಗಿಯು ಅಲ್ಲಿದ್ದು ಇವನ ಬಸ್ಸು ಬೇಗ ಬಂದರೆ ಆಗ ಹುಡುಗನ ಮನಸ್ಸಿನಲ್ಲಿ ಬೋಳಿಮಗ ದಿನಾ ಲೇಟ್ ಬರ್ತಾನೆ ಇವತ್ತೇ ಬೇಗ ಬರ್ಬೇಕಿತ್ತ ಇವ್ನಿಗೆ.
ಮತ್ತು ಮುಂದುವರೆದು ಬಸ್ಸ ಮಿಸ್ ಆಗಿ ನಿಂತ ಹುಡುಗಿಯನ್ನು ತನ್ನ ಬೈಕಲ್ಲಿ ಡ್ರಾಪ್ ಕೊಡೋಣ ಅಂತ ಪಿಕ್ ಮಾಡಲು ಬರುವಾಗ, ಅಷ್ಟರಲ್ಲಿ ಆ ಹುಡುಗಿಯ ತಂದೆ ಬಂದು ತನ್ನ ಕಾರಲ್ಲಿ ಮಗಳನ್ನು ಕರೆದು ಕೊಂಡು ಹೋದಾಗ, ಹುಡುಗನ ಮನಸ್ಸು ಬಡ್ಡಿಮಗ ಮುದುಕ ಒಳ್ಳೆ ಟೈಮಲ್ಲಿ ಶನಿ ಎಲ್ಲಿಂದ ಬಂದ ಮಾರಾಯ .
ಮಳೆಯಲ್ಲಿ ನಡೆದು ಬರುತ್ತಿರುವ ಸುಂದರ ಹುಡುಗಿಯನ್ನು ನೋಡಿ ತನ್ನ ಚತ್ರಿಯನ್ನು ಅವಳಿಗೆ ಕೊಟ್ಟು ನೆನಿಬೇಡ್ರಿ ಶೀತ ಆಗತ್ತೆ ಅಂದಾಗ ಕೂಡಲೇ ಅವಳು ತ್ಯಾಂಕು ಬ್ರದರ್ ಅಂದ್ರೆ .
ಬಸ್ಸಲ್ಲಿ ಬಹಳ ಹುಡುಗಿಯರಿದ್ದು ಒಂದು ಸೀಟ್ ನಿಮ್ಮ ಪಕ್ಕದ್ದು ಕಾಲಿ ಇದ್ದಾಗ ಆ ಸೀಟಿನಲ್ಲಿ ಒಂದು ಅಜ್ಜ ಕುಂತಾಗ ಆಗ ನಿಮ್ಮ ಅವಸ್ತೆ
ಹೀಗೆ ಮುಂದು ವರೆದು ಮನುಷ್ಯರು " ತಮ್ಮ ಪರ್ಸನ್ನು ಕಳೆದುಕೊಂಡಾಗ " ಅಂದರೆ
ಒಬ್ಬ ಬಡಹುದುಗ ಅಯ್ಯೋ ನನ್ನ ಹಣ ಹೋಯ್ತು
ಒಳ್ಳೆ ಉದ್ಯೋಗಿ ಅಯ್ಯೋ ನನ್ನ ಕ್ರೆಡಿಟ್ ಕಾರ್ಡ್ ಹೋಯ್ತು
ಶ್ರೀಮಂತ ಹುಡುಗ ಅಯ್ಯೋ ನನ್ನ ಮಾಸ್ಟರ್ ಕಾರ್ಡ್ ಹೋಯ್ತು
ಸುಂದರ ಹುಡುಗಿ ಅಯ್ಯೋ ನನ್ನ ಇಸ್ಮಾಯಿಲ್ ಫೋಟೋ ,,,,,,,,,,....... !
(ಹೀಗೆ ನಕ್ಕು ಬಿಡಿ ಕಾರಣ ನೀವೇನು ಕಳೆದುಕೊಂಡಿಲ್ಲವಲ್ಲ)
ಹುಡುಗರು ತುಂಬ ಚುಡಾಯಿಸ್ತಾರೆ ಸಾರ್
ಪ್ರಾಧ್ಯಾಪಕರು : ಎನ್ರಮ್ಮ ನೀವು ಹುಡುಗಿಯರಾಗಿ ದಿನ ಕ್ಲಾಸಿಗೆ ಲೇಟಾಗಿ ಬರ್ತೀರಾ
ಹುಡುಗಿಯರೂ : ಸಾರ್ ಅದು ಏನಂದ್ರೆ ನಾವ್ ಬರುವಾಗ ಮೇನ್ ಗೇಟಲ್ಲಿ ತುಂಬ ಹುಡುಗರು ನಿಂತ್ಕೊಂಡು ಬಾಳ ಚುಡಾಯಿಸ್ತಾರೆ ತಮಾಷೆ ಮಾಡ್ತಾರೆ ಹಂಗಾಗಿ ಲೇಟ್ ಆಗುತ್ತೆ ಸಾರ್
ಪ್ರಾಧ್ಯಾಪಕರು : ಓಹೋ ಹಾಗಾದ್ರೆ ನಾಳೆಯಿಂದ ನೀವು ಬೇರೆ ದಾರಿಯಲ್ಲಿ ಬನ್ನಿ ,,,,,,,,,,,,
ಪ್ರಾಧ್ಯಾಪಕರು : ಎನ್ರಮ್ಮ ಇವತ್ತು ಮತ್ತೆ ಲೇಟಾಗಿ
ಹುಡುಗಿಯರೂ : ಸಾರ್ ನೀವು ಹೇಳಿದ ಹಾಗೆ ಬೇರೆ ದಾರಿಯಲ್ಲಿ ಬಂದು ಅಲ್ಲಿ ಯಾರು ಹುಡುಗರು ಇಲ್ಲದ ಕಾರಣ ಮತ್ತೆ ಹಿಂದೆ ತಿರುಗಿ ಮೇನ್ ,,,,,,,,,,, !
ಅಯ್ಯೋ ಹೋಗಿ ಸಾರ್ ,,,, .
Tuesday, 14 July 2009
ನಮ್ಮುರಿನ ಹುಡುಗಿಯರೂ
ಎಲ್ಲದರಲ್ಲೂ ಬಹಳ ಜೋರು
ಹುಡುಗರು ಎದುರು ಬಂದರೆ
ಅವರು ಮಾಡುವುದಿಲ್ಲ ಕೇರು
ಸೈಡಲ್ಲಿ ಬೈಕ್ ಬಂದರೆ ಇವರ ಗಾಡಿಗೆ ಹಾಕುವರು ಜೋರಾಗಿ ಗೇರು
ಹುಡುಗರ ಚೆಸ್ಟೆ ದಿನವು ನೋಡಿ ಇವರಾಗಿರುವರು ಬೋರು
ಕಾಲೇಜಲ್ಲಿ ಬಹಳ ಜೋರು
ಮನೆಯಲ್ಲಿ ಕೆಲಸ ಮಾಡುವುದು ಬಹಳ ರೇರು
ಲವ್ ಲೆಟರ್ ಬರೆಯುವಾಗ ಮಾತ್ರ ಮುಚ್ಚುವರು ಡೋರು
ಮ್ಯೂಸಿಕ್ ಮಾತ್ರ ಹಾಕುವರು ಬಹಳ ಜೋರು
ಡ್ರಾಪ್ ಕೊಡದ ಹುಡುಗನ ಬೈಕಿನ ಸೀಟಿಗೆ ಹಾಕುವರು ಬ್ಲೇಡಿನಿಂದ ಗೀರು
ಕಾಲೇಜ್ ಕ್ಯಾಂಟೀನ್ಗೆ ನುಗ್ಗಿದರೆ ಅಲ್ಲಿ ಬಾಕಿ ಉಳಿಯುವುದಿಲ್ಲ ಒಂದು ಚೂರೂ
ಹಾಗೆ ತಿಂದು ಮುಗಿಸುವರು ಇವರು
ಒಮ್ಮೊಮ್ಮೆ ಒಂದೇ ಗಾಡಿಯಲ್ಲಿ ಸೇರಿ ಕೂರುವರು ಮೂರು
ಆಕ್ಸಿಡೆಂಟ್ ಬಗ್ಗೆ ಇವರಿಗಿಲ್ಲ ಕೇರು
ಹೇಳಿದರೆ ಕೇಳುವರು ಅದೆಲ್ಲ ಹೇಳಾಕೆ ನೀನ್ ಯಾರು
ಹೀಗೆ ಬಿಟ್ಟರೆ ಇವರಾಗುವರು ದೊಡ್ಡ ತೇರು
ಆದಷ್ಟು ಬೇಗ ತೋರಿಸಬೇಕು ಇವರಿಗೆ " ಮದುವೆಯ ಡೋರು "
Sunday, 12 July 2009
ಸ್ನೇಹ ಮತ್ತು ಶತ್ರುತ್ವ ಮತ್ತು ೧ನೆ ಬಹುಮಾನ
ಎಂಬ ಪ್ರಬಂದ ಸ್ಪರ್ದೆಯಲ್ಲಿ ಮೊದಲ ಬಹುಮಾನ ಪಡೆದ ಪರೇಶನ ವಿಷಯ ಕೇಳುತ್ತಿದ್ದಂತೆ ನನಗೆ ಆಶ್ಚರ್ಯ ಕಾರಣ ಅವನು ಕಲಿತಿರುವುದು ೭ ನೆ ತರಗತಿ. ಆದರೆ ಅಲ್ಲಿ ಬಂದವರೆಲ್ಲ ಅವನಿಗಿಂತ ಹೆಚ್ಚು ಕಲಿತವರು ಇದು ಹೇಗಾಯ್ತು ಎಂದು ತಿಳಿಯುವ ಕಾತರದಿಂದ ಕಾಯುತ್ತ ಇದ್ದೆ. ಸಂಜೆಯಾಗುತ್ತಿದ್ದಂತೆ ಪರೇಶ ಬಂದ ಅಲ್ಲಾ ಕಣೋ ಅದ್ಹೆಂಗೆ ನೀನ್ ಗೆದ್ದೋ ಅಲ್ಲಿ ಅಂದೇ, ಅಲ್ಲಾ ಸಾರ್ ಅವ್ರು ಏನ್ ಕೇಳಿದರೋ ಅದಕ್ ಸರ್ಯಾಗಿ ಉತ್ರಾ ಬರ್ದೇ ಸಾರ್
ಅಂದ್ರೆ ಏನ್ ಪ್ರಶ್ನೆ ಇತ್ತೋ ಅಲ್ಲಿ ಅಂದೇ " ಸ್ನೇಹ ಮತ್ತು ಶತ್ರುತ್ವ " ಇದಕ್ಕೆ ಉದಾಹರಣೆಗಳೊಂದಿಗೆ ಸರ್ಯಾಗಿ ಪ್ರಬಂದ ಬರೆಯಿರಿ ಅಂತ ಇತ್ತು ನೀನೇನ್ ಬರ್ದೋ ಬರ್ಯೇದ್ ಏನ್ ಸಾರ್ ಎಲಾರ್ಗು ಗೊತ್ತಿರೋ ವಿಷ್ಯ ಅಂದ್ರೆ ,.,.
ಸ್ನೇಹ : -
ಮೂಗು ಮತ್ತು ಸಿಂಬಳ , ಪೈಜಾಮ ಮತ್ತು ಲಾಡಿ , ಕಾಲು ಮತ್ತು ಚಪ್ಪಲಿ , ಕುರುಡ ಮತ್ತು ಕೋಲು , ಸೈಕಲ್ ಮತ್ತು ಸೀಟು , ಕಣ್ಣು ಮತ್ತು ಕನ್ನಡಕ , ವಾಚು ಮತ್ತು ಕೈ , ತಟ್ಟೆ ಮತ್ತು ಲೋಟ , ಕರಂಟು ಮತ್ತು ಲೈಟು , ಸೂಜಿ ಮತ್ತು ದಾರ , ಸೀರೆ ಮತ್ತು ಬ್ಲೌಸು , ಸ್ಕ್ಕೂಲು ಮತ್ತು ಮೇಸ್ಟ್ರು , ಪ್ಯಾಂಟು ಮತ್ತು ಜಿಪ್ಪು , ಚರಂಡಿ ಮತ್ತು ಕೆಸರು , ಬಾವಿ ಮತ್ತು ನೀರು , ಬೀಡಿ ಮತ್ತು ಬೆಂಕಿ ಪಟ್ನ , ಡಾಕ್ಟರು ಮತ್ತು ರೋಗಿ, ಪೋಲಿಸ್ ಮತ್ತು ಲಾಠಿ, ಪೆನ್ನು ಮತ್ತು ಇಂಕು , ಬಾಟಲು ಮತ್ತು ಮುಚ್ಚಳ , ಟಿ ವಿ ಮತ್ತು ರಿಮೋಟು , ಕಿವಿ ಮತ್ತು ಮೊಬೈಲು , ಪಾನಿ ಮತ್ತು ಪೂರಿ , ನಲ್ಲಿ ಮತ್ತು ನೀರು , ಮೀನು ಮತ್ತು ನೀರು ,,,,,,,,,,,
ಸಾಕ್ ನಿಲ್ಸೋ. ಯಾಕ್ ಸಾರ್ ನಾನು ಇಷ್ಟು ಹೆಸರು ಹೇಳಿದಿನಲ್ಲ ಅದರಲ್ಲಿ ಯಾವುದಾದರು ಒಂದು ಐಟಂ ಒಂದುಕೊಂದು ಬಿಟ್ ಇರಾಕ್ ಆಗುತ್ತಾ ಅಂತ ನೀವೇ ಹೇಳ್ರಿ , ಒರಿಜಿನಲ್ ಫ್ರೆಂಡ್ ಶಿಪ್ ಅಂದ್ರೆ ಇದು ಸಾರ್ ಬಾಕಿ ಎಲ್ಲ ಬೇಕಾರ್
ಸಾರ್ .
ಓಹೋ ಹಂಗಾ ಹಂಗಾದ್ರೆ ಶತ್ರುತ್ವ ಅಂದ್ರೆ ಏನ್ ಹೇಳಪ , ಅದೇನ್ಸಾರ್
ಶತ್ರುತ್ವ : -
ಕತ್ತರಿ ಮತ್ತು ಬಟ್ಟೆ , ಬೆಂಕಿ ಮತ್ತು ನೀರು , ಪೋಲಿಸ್ ಮತ್ತು ಕಳ್ಳ , ಅತ್ತೆ ಮತ್ತು ಸೊಸೆ , ಹಾವು ಮತ್ತು ಮುಂಗುಸಿ , ಸುತ್ತಿಗೆ ಮತ್ತು ಉಳಿ , ಮರ ಮತ್ತು ಗರಗಸ , ಬಂದೂಕು ಮತ್ತು ಪ್ರಾಣಿ , ಜೋತಿಷಿ ಮತ್ತು ಡಾಕ್ಟ್ರು , ಹಜಾಮ ಮತ್ತು ತಲೆ , ಸೌದೆ ಮತ್ತು ಶವ , ಬೆಂಕಿ ಮತ್ತು ತುಪ್ಪ , ಪರೀಕ್ಷೆ ಮತ್ತು ವಿದ್ಯಾರ್ಥಿ , ಬಟ್ಟೆ ಒಗಿಯುವಕಲ್ಲು ಮತ್ತು ಬಟ್ಟೆ , ಮೀನು ಮತ್ತು ಗಾಣ , ,.,.
ಹೇಳುತ್ತಾ ಗೇಟಿನ ತನಕ ಹೋಗುತ್ತಿದ್ದವನು ಹೊರಗೆ ನಿಂತು , ಹೀರೋ ಮತ್ತು ವಿಲನ್ , ಅಂದು ಲಾಸ್ಟ್ ಹಿಂಗ್ ಬರೆದೆ ಸಾರ್ ಅಂದ , ಏನೋ ಅಂದೇ
ಬಹುಮಾನ ಕೊಡದೆ ಇದ್ರೆ ನಾನು ಮತ್ತು ನೀವು ,,,?
ಪರೇಶ '