Thursday, 16 July 2009

ಹೀಗೂ ಒಬ್ಬ ಮನುಷ್ಯ ಸ್ನೇಹಮಾಯಿ - ಭಾವಜೀವಿ

ಇಂದು ಮುಂಜಾನೆ ಅಬುಧಾಬಿಯ ಅರಬ್ ಉಡುಪಿ ಉಪಹಾರಗೃಹದಲ್ಲಿ ಉದ್ದಿನವಡೆ ಇಡ್ಡ್ಲಿತಿಂದು ಮುಗಿಸಿ ನಂತರ ಮೈಸೂರು ಮಸಾಲೆ ದೋಸೆಯನ್ನು ತಿನ್ನುತ್ತಾ ನನ್ನ ಸ್ನೇಹಿತರಾದ ಅರಬ್ ರಾಷ್ಟ್ರೀಯ A K Sukkar ಹೇಳಿದ್ದು ನಾಳೆ ಚಪ್ಪನ್ ಭೋಗ್ ರೆಸ್ಟೋರೆಂಟ್ ಹೋಗುವ ಕಣೋ ಪಾನಿ ಪೂರಿ ತಿಂದು ವಾರ ಆಯ್ತು ಎಂದು ಹೇಳುತ್ತಾ ಹೌದು ಅಂದ ಹಾಗೆ ಯಾರಾದರು ಬರುವವರು ಇದ್ದರೆ ಮಾವಿನ ಉಪ್ಪಿನ ಕಾಯಿ ತರೋದಿಕ್ ಹೇಳೋ ಮನೆಯಲ್ಲಿ ಕಾಲಿ ಆಗಿದೆ.
ಹೇ ಆ ಸೊಂಟ ನೋವಿಗೆ ಹಚ್ತಾರಲ್ಲ ಆ ಎಣ್ಣೆ ಸಹ ಮರೀದಂಗೆ ತರ್ಸೋ,

ಅದಕ್ಕೆ ನಾನಂದೆ ಒಂದೇ ಉಸಿರಲ್ಲಿ ನೀನು ಏನೆಲ್ಲ ಹೇಳ್ತಿಯಪ್ಪ ನಿದಾನ ತಿನ್ನು ಯಾರಾದರು ನೋಡಿದ್ರೆ ನೀನು ಒಂದು ವಾರದಿಂದ ಊಟ ಮಾಡಿಲ್ಲ ಅಂತ ತಿಳ್ಕೋತಾರೆ ಅಂದೇ, ನಿಂಗೊತ್ತಿಲ್ಲ ಇಡ್ಡ್ಲಿ ಸಾಂಬಾರ್ ಬೇರೆ ಟೇಸ್ಟ್ ಅದರೊಟ್ಟಿಗೆ ಉದ್ದಿನ ವಡೆ ಗೆ ಈ ಕೆಂಪು ಚಟ್ನಿ ಮತ್ತು ಈ ಬಿಳಿ ಚಟ್ನಿ ಮಿಕ್ಸ್ ಮಾಡಿ ತಿಂದ್ರೆ ಬಿಸಿ ಬಿಸಿ ವಡೆಗೆ ಅದ್ರು ರುಚಿ ನಂಗೆ ಮಾತ್ರ ಗೊತ್ತು ಕಣೋ ನಿಂಗ್ ಗೊತ್ತಿಲ್ಲ ಆಯ್ತಪ್ಪ ನೀನು ಹೇಳಿದ್ದೆ ಸರಿ ಅಂದೇ .

ಅದಕ್ಕೆ ಸುಕ್ಕರ್ ಅದೆಲ್ಲ ಇರ್ಲಿ ನಿಮ್ಮ ಇಂಡಿಯನ್ಸ್ ಒಳ್ಳೆ ಒಳ್ಳೆ ಇಂಡಿಯನ್ ಫುಡ್ ಬಿಟ್ಟು ಅದ್ಯಾಕೋ ಬರಿ ಪಿಜ್ಜಾ , ಕೆಂಟುಕಿ ಬರ್ಗರ್ , ಬರಿ ಜಂಕ್ ಫುಡ್ ತಿಂತಾರೆ . ಅದಕ್ಕೆ ನಾನು ಹೇಳ್ದೆ ಬೇರೆಯವರ ವಿಷ್ಯ ಗೊತ್ತಿಲ್ಲ ನಾನು ಫ್ರೆಶ್ ಫುಡ್ ಮಾತ್ರ ತಿಂತೀನಿ ಅದೆಲ್ಲ ನಾನ್ ತಿನ್ನಲ್ಲ ಅಂದೇ, ಅಲ್ಲ ಕಣೋ ಹೇಳಿದ್ದು ಅಷ್ಟೆ ನೀನ್ ಯಾಕ ಬಿಸಿಯಾಗ್ತಿಯ ತಗೋ ಬಿಸಿ ಬಿಸಿ ಇಂಡಿಯನ್ ಟೀ ಕುಡಿ, ಹೇಳಿ ಎಲ್ಲ ಮುಗಿದ ಮೇಲೆ ಹೊರಡುವಾಗ ಅಲ್ಲಿದ್ದವರಿಗೆ ಥ್ಯಾಂಕು " ಬಹುದ್ ಅಜ್ಜ ಹೇ " ಗೊತ್ತಿಲ್ಲದ ಬಾಷೆಯನ್ನು ಪ್ರಯತ್ನಿಸಿ ಹೇಳಿ ನಗುತ್ತ ಹೊರ ಬಂತು ಈ ವ್ಯಕ್ತಿ .
ವೀಕ್ ಎಂಡ್ ಎಲ್ಲರು ಸೇರಿ ದುಬಾಯಿ ವೀನಸ್ ರೆಸ್ಟೋರೆಂಟ್ ಹೋಗಾಣ ಅಲ್ಲಿ ಎಲೆ ಊಟ ಚೆನ್ನಾಗಿರುತ್ತೆ , ಟಾಲಿ ತಿನ್ನೋಣ, ನಾನಂದೆ ಟಾಲಿ ಅಲ್ಲ ಥಾಲಿ ಅಂದೇ ಹ್ಞೂ ಅದೇ ಅದೇ .

ಇದೆಲ್ಲ ಹೇಳಲು ಕಾರಣ ಈ ಅರಬ್ ರಾಷ್ಟ್ರೀಯ ವ್ಯಕ್ತಿ ಭಾರತದ ತಿನಿಸುಗಳ ಬಗ್ಗೆ ಡ್ರೆಸ್ ಗಳ ಬಗ್ಗೆ ಬೊಂಬಾಯ್ ಡೆಲ್ಲಿ ಬೆಂಗಳೂರು ಮದ್ರಾಸು ಜನ ಜೀವನದ ಬಗ್ಗೆ ಕಾಳಜಿಯಿಂದ ತಿಳಿದುಕೊಂಡಿರುವುದು ಸುಮಾರು ಸಲ ಬೇಟಿ ಕೊಟ್ಟು ಅಲ್ಲಿಯ ಕಟ್ಟಡಗಳ ನಿರ್ಮಾಣದ ಬಗ್ಗೆ ಕಲೆ ಸಂಸ್ಕೃತಿಯ ಬಗ್ಗೆ ಕೂಡಿ ಹಾಕಿರುವ ವಿಷಯಗಳು ಬಹಳ ಕುತೂಹಲ ಉಂಟು ಮಾಡುತ್ತದೆ. ಅಲ್ಲದೆ ಸ್ನೇಹಮಯಿ ಮತ್ತು ಭಾವ ಜೀವಿ .

ಶ್ರೀಮತಿ ಇಂದಿರಾಗಾಂಧಿ ಯವರು ಮೊದಲ ಬೇಟಿ ಯು ಎ ಯಿ ಬಂದಾಗ ಅವರೊಂದಿಗೆ ಅರಬ್ ರಾಯಭಾರಿಯಾಗಿ ೩ ದಿನಗಳು ಓಡಾಡಿದ್ದು ಅವರ ಕಾಲದ ಏರ್ ಪೋರ್ಟ್ ನ ವಿಷ್ಯ ಎಲ್ಲವು ಒಮ್ಮೊಮ್ಮೆ ಮೆಲುಕು ಹಾಕುವುದುಂಟು . ಆಗಿನ ಕಾರುಗಳು ಚಿಕ್ಕ ಚಿಕ್ಕ ಕಟ್ಟಡಗಳು ,.,.

ಈಗ ನೋಡದ್ಯ ಯು ಎ ಯಿ ಹೇಗೆ ಬದಲಾಗಿದೆ ನೋಡಿಲ್ಲಿ ಗಗನ ಚುಂಬಿ ಕಟ್ಟಡಗಳು ಹೊಸ ಹೊಸ ಕಾರುಗಳು , ಯಂತ್ರಗಳು ಮನುಷ್ಯರ ಸ್ವಭಾವಗಳು ಎಲ್ಲ ಬದಲಾಗಿವೆ.
ಆದರೆ ನಾನು ಮಾತ್ರ ಬದಲಾಗಿಲ್ಲ ಕಣೋ .
ಅದಕ್ಕೆ ಕಾರಣ ಏನು ಗೊತ್ತ ಅಂದೇ ,,,
ಏನು
ನೀನು ನನ್ನ ಫ್ರೆಂಡ್ ಆದ್ರಿಂದ ,,,!

1 comment:

  1. ಇಡ್ಲಿ ವಡೆ ದೋಸೆ...ನಿಜ ನಾವು ಪರದೇಶದಲ್ಲಿದ್ದೇವೆ ಅನ್ನೋದೇ ಗೊತ್ತಾಗೊಲ್ಲ..ಎಲ್ಲ ಸಿಗುತ್ತೆ...ನಿಮ್ಮ ಸ್ನೇಹಿತನ ಮಾತು..ದಿಟ...

    ReplyDelete