ದುಖವನ್ನು ಮರೆ ಮಾಚುತ್ತಲೇ ಹೋದೆ ಮುಗುಳ್ನಗುತ್ತಲೇ ಹೋದೆ
ಗುಂಪು ಗುಂಪು ಗಳಲ್ಲೂ ಹಾಡು ಹಾಡುತ್ತಲೇ ಹೋದೆ,
ಕಣ್ಣಿರಿಂದ ಬರೆದ ಅದೃಷ್ಟದ ರೇಖೆಗಳನ್ನು
ಹೂವಿನ ಎಲೆಗಳಿಂದ ಸಿಂಗರಿಸುತ್ತ ಹೋದೆ ,
ಹಾಡುಗಳನ್ನು ಹಾಡುತ್ತಾ ಹೋದೆ ಶ್ರುತಿ ತಪ್ಪುತ್ತಾ ಹೋದೆ
ಕವನಗಳನ್ನು ಹೇಳುತ್ತಾ ಹೋದೆ ಲಯವನ್ನು ಮರೆಯುತ್ತಾ ಹೋದೆ ,
ಆದರು ಈ ಪ್ರಕೃತಿ ಎಷ್ಟೊಂದು ಸುಂದರ ಸೂರ್ಯ ಚಂದ್ರ ಭೂಮಿ ಆಕಾಶ
ಎಲ್ಲರಿಗು ಹಾಡು ಕೇಳಿಸುತ್ತಾ ಹೋದೆ ನಿನ್ನ ಉಸಿರಿನ ಸುಗಂಧ ನಿನ್ನ ಶರೀರದ ಸುವಾಸನೆ
ಅದ್ಯಾವ ಮೋಹಕಥೆಯೋ ಈ ಗಾಳಿಯಲ್ಲಿ ಸೇರುತ್ತ ಹೋದೆ ,
ಕ್ಷಣ ಕ್ಷಣ ದ ಮಾಯಾ ಮೋಹಕಥೆಯೋ ಏನೋ ನಾನು ಅದರಲ್ಲಿ ಮುಳುಗುತ್ತಾ ಹೋದೆ
ಒಂದೊಂದು ಹೆಜ್ಜೆಗಳಲ್ಲು ನಾನು ಅದುರುತ್ತ ಹೋದೆ ,,,,,,,, ಪದರುತ್ತ ಹೋದೆ ,.,..
ನಿನ್ನ ಕನಸಿನ ಲೋಕದಲ್ಲಿ ನಾ ಮುಳುಗುತ್ತಾ ಹೋದೆ .
No comments:
Post a Comment