ಸಂತೆಯಲ್ಲಿ ವ್ಯಾಪಾರ ಮಾಡುವವರು ಯಾವರೀತಿ ಜನರನ್ನು ಆಕರ್ಷಿಸುತ್ತಾರೆ, ಅಲ್ಲದೆ ಅವರು ವಸ್ತುಗಳನ್ನು ವಿಂಗಡಿಸಿ ಬೇರೆ ಬೇರೆ ಹೆಸರನ್ನಿಟ್ಟು ಕೂಗುತ್ತಾ ಅದರದಾದ ಶೈಲಿಯಲ್ಲಿ ಒಂದು ನೆಟ್ವರ್ಕ್ ಮಾಡಿಕೊಂಡಿರುತ್ತಾರೆ.
ಶಿವಮೊಗ್ಗದ ಬಸ್ಟಾಂಡ್ ಪಕ್ಕದಲ್ಲಿ ಪ್ರತಿ ಮಂಗಳವಾರ ಸಂತೆ ನಡೆಯುತ್ತದೆ. ನನಗೆ ಬಹಳ ಕುತೂಹಲ ಉಂಟುಮಾಡುವುದು ಅವರು ಕೂಗುವ ಶೈಲಿ ಅದರಲ್ಲಿ,
೧. ಆಗೋಯ್ತು ಮುಗ್ದೋಯ್ತು ಕಾಲಿಯಾಯ್ತು
೨. ಈಗ ಬಂದಿದ್ದು ನೆನ್ನೆ ಬೆಳೆದಿದ್ದು
೩. ಎಲ್ ಹೋದ್ರು ಸಿಗಲ್ಲ ಇಲ್ ಮಾತ್ರ
೪. ಅಣ್ಣಾ ಅಕ್ಕ ಅಜ್ಜ ಈ ಕಡೆ ಈ ಕಡೆ
೫. ಬೆಳಗ್ಗೆ ಎಂಟಾಣೆ ಮಾರಿದ್ದು ಈಗ ರುಪಾಯಿ ಗೆ ಎರಡು ( ?)
೬. ಬೆಣ್ಣೆ ಬೆಣ್ಣೆ ಬೆಣ್ಣೆ ಇದು ಮೆಣಸಿನ ಕಾಯಿ ಮಾರುವವನು ಕೂಗೋದು (?)
೭. ತಿಂದು ನೋಡ್ರಿ ದುಡ್ಡು ಆಮೇಲ್ ಕೊಡ್ರಿ
೮. ಕೋಳಿ ಕೋಳಿ ದಿನಕ್ ೨ ಮೊಟ್ಟೆ ಇಡೋ ಕೋಳಿ (?)
೯. ಬಣ್ಣ ಹೋದ್ರೆ ಬಟ್ಟೆ ವಾಪಸ್,.,.,.,
ಸುಮಾರು ರೀತಿಯ ಬಾಷೆಗಳನ್ನೂ ಪ್ರಯೋಗಿಸುತ್ತ ತಮ್ಮದೇ ಆತ್ಮೀಯತೆಯನ್ನು ತೋರುತ್ತ ಎನಣ್ಣ ಹೋದವಾರ ಬರ್ಲೆ ಇಲ್ಲ ಅಕ್ಕ ನಿಮ್ಮ ಎಜ್ಮಾನ್ರು ಕಾಣ್ತಿಲ್ಲ, ಎ ಎನ್ರಣ್ಣ ಬೆಲೆ ಗಿಲೆ ಕೇಳಬಾರದು ಈ ಅಂಗ್ಡಿನೆ ನಿಮ್ದು , ಹೀಗೆ ಸುಮಾರೂ ರೀತಿ ಅವರ ವ್ಯಾಪಾರದಲ್ಲಿ ಕಾಣಬಹುದು ಅಲ್ಲದೆ ಸಂತೆ ಎಂದ ಮೇಲೆ ಅಲ್ಲಿ ಹಜಾಮನಿಂದ ಹಿಡಿದು ಮೆಣಸಿನಕಾಯಿ ಬಜ್ಜಿ ವರೆಗೂ ಸಿಗುತ್ತದೆ ಮದ್ಯದಲ್ಲಿ ಅಯಿಸ್ ಕ್ಯಾಂಡಿ ತಿನ್ನುತ್ತಾ ತಮ್ಮ ತಂದೆ ತಾಯಿಯರ ಕೈ ಹಿಡಿದು ಓಡುತ್ತಾ ಇರುವ ಮಕ್ಕಳು.
ಇಂದು ಸಂತೆ ಎಂದರೆ ಶಾಪಿಂಗ್ ಸೆಂಟರ್ ಇಲ್ಲಿ ಎಲ್ಲವು ದೊರೆಯುತ್ತದೆ ಮಾತ್ರ ಆಧುನಿಕತೆಯೊಂದಿಗೆ ಅಷ್ಟೆ
ಫುಡ್ ಕೋರ್ಟ್ನಲ್ಲಿ ಕುಳಿತು ಮೆಕ್ದೊನಾಲ್ದ್ ಅಯಿಸ್ ಕ್ರೀಮ್ ತಿನ್ನುತಿದ್ದ ಅಬ್ಬು ಮತ್ತು ಅಪ್ಪು ಅಪ್ಪುವನ್ನು ನೋಡಿ ನಾನು ಸಂತೆಯಲ್ಲಿ ತಿನ್ನುತಿದ್ದ ಅಯಿಸ್ ಕ್ಯಾಂಡಿ ನೆನಪಾಗಿ ಬಾಯಲ್ಲಿ ನೀರು ಬರತೊಡಗಿತು
No comments:
Post a Comment