ದೇಖೋ ದೇಖೋ ದೇಖೋ ಬೈಸ್ಕೊಪ್ ದೇಖೋ, ದಿಲ್ಲಿ ಕ ಕ್ಹುತುಬ್ಮಿನಾರ್ ದೇಖೋ, ಆಗ್ರಕ ತಾಜ್ ಮಹಲ್ ದೇಖೋ , ಘರ್ ಬೈಟೆಯ್ ಸಾರ ಸಂನ್ಸಾರ್ ದೇಖೋ ,,,,, ಈ ಹಾಡು ಕೇಳದವರು ಯಾರು ಎಲ್ಲರು ಕೇಳಿದವರೇ.
ಅಂದ ಹಾಗೆ ಈ ವಿಚಾರ ಇಂದು ,,, ?
ಡಿಂಗ್ ಚಿಕ್ - ಡಿಂಗ್ ಚಿಕ್ - ಡಿಂಗ್ ಚಿಕ್ - ಡಿಂಗ್ ಚಿಕ್ ಶಬ್ದ ಮಾಡುತ್ತಾ ಬರುವ ಆ ವ್ಯಕ್ತಿ ಈ ಚಿತ್ರದಲ್ಲಿರುವ ಸಿನೆಮ ಪೆಟ್ಟಿಗೆಯನ್ನು ತನ್ನ ಹೆಗಲ ಮೇಲೆ ಹೊತ್ತು ತರುತ್ತಿದ್ದ ಸಾದಾರಣವಾಗಿ ಇವನು ಬರವುದು ಭಾನುವಾರ ಅಥವಾ ಸಂಜೆ ಅಥವಾ ರಜಾ ದಿನಗಳಲ್ಲಿ , ಹಬ್ಬ ಹರಿದಿನಗಳಲ್ಲಿ , ನಾನಾಗ ಬಹಳ ಚಿಕ್ಕವನು ಪ್ರೈಮರಿ ಸ್ಕೂಲು ಅದು ನನ್ನ ಮನೆಗೆ ಹತ್ತಿರದ ಸ್ಕೂಲು ವಿದ್ಯಾನಗರ ಅಂದರೆ ಸಹ್ಯಾದ್ರಿ ಕಾಲೇಜ್ ಎದುರು.
ಈ ಶಬ್ದ ಬಂದ ಕೂಡಲೇ ನಾವೆಲ್ಲರೂ ಅವನನ್ನು ಸುತ್ತುವರೆವುತ್ತಿದೆವು ಅವನು ಅದರ ಕಾಲುಗಳನ್ನು ಸರಿ ಮಾಡಿ ಅದರ ಮೇಲೆ ಈ ಸಿನೆಮಾ ಬಾಕ್ಸ್ ಇಡುತ್ತಿದ್ದ ನಂತರ ಹಾಡು ಶುರು ಮಾಡುತ್ತಿದ್ದ ಮತ್ತೆ ಅದೇ ಶಬ್ದ ಡಿಂಗ್ ಚಿಕ್ - ಡಿಂಗ್ ಚಿಕ್ ನಾಡಿಗೆ ಹಾಡು ಹುಡುಗರೆಲ್ಲ ಕಾಡಿ ಬೇಡಿ ಮನೆಯಿಂದ ೫ ಪೈಸೆ ತಂದು ಅವನಿಗೆ ಕೊಟ್ಟ ಕೂಡಲೇ ಅವನು ಒಂದೊಂದೇ ಮುಚ್ಚಳ ವನ್ನು ತೆಗೆಯುತ್ತ ಒಬ್ಬಬರಿಗೆನೆ ತನ್ನ ಮುಖ ಕಣ್ಣು ಆ ಮುಚ್ಚಳಕ್ಕೆ ಸರಿಯಾಗುವಂತೆ ರೆಡಿ ರೆಡಿ ಅನ್ನುತಿದ್ದ ನಾವು ತಮ್ಮ ಎರಡು ಕೈಗಳನ್ನು ತಮ್ಮ ಮುಖ ಸೈಡ್ ಕವರ್ ಮಾಡಿ ನೋಡಲು ಅಣಿಯಾಗುತ್ತಿದ್ದೆವು.
೫-೬ ಮುಚ್ಚಳಗಳಿರುತ್ತಿದ್ದವು ಅವನು ಹೆಹ್ ಹೀಹ್ ಹೆಹ್ ಹೀಈಹ್ ಬಾಂಬೆ ಬಾಂಬೆ ಕಲ್ಕತ್ತಾ , ಬೆಂಗಳೂರ್ ಬೆಂಗಳೂರ್ ನೋಡಿ ನೋಡಿ ಡಿಂಗ್ ಚಿಕ್ ,,, ಕನ್ನಂಬಾಡಿ ಕಟ್ಟೆ ನೋಡು ,,,,,, ಹೊಟ್ಟೆ ನೋಡು ವಿಧಾನ ಸೌಧ ನೋಡು , ರಾಜ್ಕುಮಾರ್ ವಿಷ್ಣುವರ್ಧನ್ ಭಾರತಿ ನೋಡು ನೋಡು ಎಂದು ಹಾಡುತ್ತಾ ಎಲ್ಲ ಊರುಗಳ ಹೆಸರುಗಳನ್ನು ಸೇರಿಸಿ ಜನರ ಹೆಸರನ್ನು ಸೇರಿಸಿ ಜೋರಾಗಿ ಹಾಡುತ್ತಾ ಒಂದು ಕೈಯಲ್ಲಿ ರೀಲುಗಳ ಸಲಿಗೆಯನ್ನು ತಿರುಗಿಸುತ್ತಾ ಮತ್ತೊಂದು ಕೈಯಲ್ಲಿ ಅದರ ಮೇಲಿರುವ ಗೊಂಬೆಯ ದಾರವನ್ನು ಎಳೆಯುತ್ತಿದ್ದಂತೆ ಆ ಗೊಂಬೆ ತನ್ನ ಎರಡು ಕೈಗಳನ್ನು ತನ್ನ ಬಟ್ಟೆ ಸಹಿತ ಮೇಲೆ ಕೆಳಗೆ ಮಾಡುತ್ತ ಕುಣಿಯುತ್ತಿರುತ್ತದೆ. ಅದಾಗಲೇ ತಮ್ಮ ತಮ್ಮ ಮುಖಗಳನ್ನು ಇಟ್ಟು ಸಿನೆಮಾ ನೋಡುತ್ತಿರುವ ನಾವು ತಮ್ಮ ಎಲ್ಲವನ್ನು ಮೈಮರೆತು ಅದರಲ್ಲೇ ಮುಳುಗಿರುತ್ತೇವೆ .
ಈ ಮದ್ಯೆ ನಾವು ನೋಡಿ ಮುಗಿಯುತ್ತಿದ್ದಂತೆ ನಮ್ಮೆ ಹಿಂದೆಯೇ ಇನ್ನೊಂದು ಗ್ರೂಪ್ ರೆಡಿ ಇರುತ್ತದೆ. ಈ ಮದ್ಯೆ ಒಮ್ಮೆ ನೋಡಿದವರು ಮತ್ತೊಮ್ಮೆ ಮಗದೊಮ್ಮೆ ನೋಡುವುದುಂಟು , ಜೊತೆಗೆ ನಾನ್ ನೋಡ್ದಾಗ ಅದು ಇತ್ತು ಇದು ಇತ್ತು ಎಂದು ಸುಮ್ಮನೆ ಸ್ವಲ್ಪ ಸೇರಿಸಿ ಲಾಟು ಬಿಡ್ವುದ್ ಉಂಟು . ಮಾರನೆ ದಿನ ಸ್ಕೂಲ್ ನಲ್ಲಿ ಇದೆ ವಿಷಯ ಅದೊಂದು ವಿಸ್ಮಯ ಲೋಕ ನಮ್ಮ ಜೀವನದ ಅಪೂರ್ವ ದಿನಗಳು, ಅದೇ ನಮ್ಮ ಡಾಲ್ಬಿ ಡಿಜಿಟಲ್ ಸಿನೆಮಾ ಹಾಲ್ ಇಡಿ ಪ್ರಪಂಚವನ್ನು ಆ ಮುಚ್ಚಳ ದ ಒಳಗಿಂದ ನೋಡುತ್ತಿದ್ದೆವು .
ಇಂದು ಏನಾಗಿ ಹೋಗಿದೆ ಮೊನ್ನೆ ಅಬ್ಬು ಗೆ ಅಪ್ಪು ಹೇಳಿಕೊಟ್ಟಿದ್ದು ಈ ಟಾರ್ಜ್ಯನ್ ಕಾರ್ ಸರಿಯಿಲ್ಲ ಕಣೋ ಅಬ್ಬು ಇದು ಗಾಳಿಯಲ್ಲಿ ಹೋಗಲ್ಲ ನಮಗೆ ಹ್ಯಾರೀ ಪೋಟ್ ಕಾರ್ ಬೇಕು ಅಂತ ಹೇಳೋ ಅದು ಸ್ವಿಚ್ ಹಾಕಿದ್ರೆ ಗಾಳಿಯಲ್ಲಿ ಹೋಗುತ್ತೆ
ಅವನೇ ಜೋರು ಅಂದ್ರೆ ಅದಕ್ಕಿಂತ ಜೋರು ಅವನ ತಂಗಿ
ಕಾರಣ ಮನೆಯಲ್ಲೇ ಕುಳಿತು ಎಲ್ಲವನ್ನು T V ಮತ್ತು ಕಂಪ್ಯೂಟರ್ ನಲ್ಲಿ ನೋಡಿ ತಿಳಿಯುವ ಮಕ್ಕಳೆಲ್ಲಿ ?
ರೋಡಿನಲ್ಲಿ ೫ ಪೈಸೆ ಕೊಟ್ಟು ಡಬ್ಬದಲ್ಲಿ ತಿರುಗುವ ಸಿನೆಮಾ ನೋಡುವ ನಾನೆಲ್ಲಿ ?
No comments:
Post a Comment