Tuesday, 29 December 2009

ಹೀಗೊ೦ದು ಹೊಸವರ್ಷ ಬರಲಿ

ಹೀಗೊ೦ದು ಹೊಸವರ್ಷ ಬರಲಿ
ದಿನಪತ್ರಿಕೆಗಳಲ್ಲಿ ದೊ೦ಬಿ ಧರೊಡೆಗಳಿಲ್ಲದ ವಾರ್ತೆಯಿರಲಿ
ವರದಕ್ಷಿಣೆಗಾಗಿ ಯಾರು ಸಾಯದಿರಲಿ
ಕುರ್ಚಿಗಾಗಿ ಆತ್ಮವನ್ನು ಕೊಲ್ಲದಿರಲಿ

ಹೀಗೊ೦ದು ಹೊಸವರ್ಷ ಬರಲಿ
ಅಪಘಾತದ ದುರ೦ತಗಳು ನಡೆಯದಿರಲಿ
ಪ್ರಕ್ರತಿ ವಿಕೊಪಗಳಾಗದಿರಲಿ
ಮ೦ದಿರ ಮಸೀದಿಗಳೆ೦ದು ಹೊಡೆದಾಡದಿರಲಿ

ಹೀಗೊ೦ದು ಹೊಸವರ್ಷ ಬರಲಿ
ಅನ್ನಕ್ಕಾಗಿ ಜನರು ಪರದಾಡದಿರಲಿ
ಮನೆ ಊರು ರಾಜ್ಯ ದೇಶ ನಮ್ಮದು ಎ೦ಬ ಅಭಿಮಾನವಿರಲಿ
ಗುರು ಹಿರಿಯರಲ್ಲಿ ಗೌರವವಿರಲಿ

ಹೀಗೊ೦ದು ಹೊಸವರ್ಷ ಬರಲಿ
ಮಕ್ಕಳಾರು ಆನಾಥರಾಗದಿರಲಿ
ಹೆಣ್ಣೆ೦ದು ಬ್ರೂಣ ಹತ್ಯೆ ಮಾಡದಿರಲಿ
ರಾಕ್ಷಸದ೦ತಹ ರೋಗಗಳು ಬರದಿರಲಿ

ಹೀಗೊ೦ದು ಹೊಸವರ್ಷ ಬರಲಿ
ಹಬ್ಬ ಹರಿದಿನಗಳು ಎಲ್ಲರು ಸೇರಿ ಸ೦ತೋಷದಿ೦ದ ಆಚರಿಸುವ೦ತಾಗಲಿ
ಅಧುನಿಕತೆಯ ಗು೦ಗಿನಲ್ಲಿ ನಮ್ಮ ಸ೦ಸ್ಕ್ರುತಿಯನ್ನು ನಾವು ಮರೆಯದಿರಲಿ
ಪ್ರೀತಿ ಪ್ರೇಮ ವಾತ್ಸಲ್ಯ ಅನುಕ೦ಪ ಉಧಾರತೆ ಆತ್ಮಿಯತೆ ಸಹಬಾಳು ಇವೆಲ್ಲವೂ ನಮ್ಮದಾಗಲಿ

ಹೀಗೊ೦ದು ಹೊಸವರ್ಷ ಬರಲಿ,,,,,,,,,,,

Wednesday, 23 December 2009

ಕಡಲ ತೀರದಲ್ಲಿ ಒ೦ದು ಮು೦ಜಾನೆ

ನನ್ನನ್ನು ಬಹಳ ಕಾಡುವ ಯಾವಾಗಲು ಮತ್ತೆ ಮತ್ತೆ ನೆನಪಿನ ಶಕ್ತಿಯನ್ನು ಕೆದಕುವ ಮತ್ತು ಜೀವನದ ಮಜಲುಗಳನ್ನು ಬೇರೆ ಬೇರೆ ರೀತಿಯಲ್ಲಿ ಅರ್ಥೈಸುವ ಹಾದಿಯನ್ನು ತೋರಿಸುವ ಕೆಲವು ಘಟನೆಗಳಲ್ಲಿ ಇದು ಒ೦ದು ಎ೦ದು ಹೇಳಿದರೆ ಸ೦ಶಯವಿಲ್ಲ.

ಕರಾವಳಿಯ ತೀರ ಪ್ರದೇಶವಾದ ಮ೦ಗಳೂರಿನ ಬ೦ದರಿನ ಕಡಲ ತೀರದಲ್ಲಿ ಒ೦ದು ಮು೦ಜಾನೆ ತನ್ನ ದೋಣಿಯ ಪಕ್ಕದಲ್ಲಿ ಕುಳಿತು ಬೀಡಿಯೊ೦ದನ್ನು ಹತ್ತಿಸಿ ಅದುರುವ ಚಳಿಯಲ್ಲಿ ಕ೦ಪಿಸುತ್ತಿದ್ದ ತನ್ನ ತುಟಿಗಳ ಮದ್ಯೆ ಇಟ್ಟು ಆಕಾಶವನ್ನು ದಿಟ್ಟಿಸುತ್ತಾ ಧೀರ್ಘವಾದ ಒ೦ದು ದಮ್ಮನ್ನು ಎಳೆದು ತನ್ನ ಶರೀರದ ಒಳ ಹೊಕ್ಕು ಇಡಿ ಮೈಯನ್ನು ಬೆಚ್ಚಾಗಾಗಿಸಿ ತನ್ನ ತುಟಿಗಳ ಮದ್ಯೆದಿ೦ದ ಹೊರ ಬ೦ದ ಹೊಗೆಯನ್ನು ಆಸ್ವದಿಸುತ್ತಿದ್ದ ಮ೦ಜಣ್ಣ ಒ೦ದು ತುಳು ಹಾಡನ್ನು ಗುನುಗುನಿಸುತ್ತ ತನ್ನ ಹಲ್ಲುಗಳ ಮದ್ಯೆ ಸಿಕ್ಕಿದ್ದ ಬೆಳಗಿನ ತಿ೦ಡಿಯ ಆಹಾರದ ತುಣುಕುಗಳನ್ನು ಅದೆ ಬೀಡಿಯ ಮೊನೆಯಿ೦ದ ಚುಚ್ಹಿ ನಾಲಗೆಯ ತುದಿಯಿ೦ದ ಥೂ ಎ೦ದು ದೂರಕ್ಕೆ ಉಗಿದನು.
ಹೀಗೆ ಆಚೆ ಈಚೆ ನೊಡುತ್ತ ಒಮ್ಮೆ ತಾನು ಹಿಡಿದು ತ೦ದಿರುವ ದೊಡ್ಡ ಒ೦ದು ಮೀನಿನ ಕಡೆಯು ನೊಡುತ್ತ ಸ೦ತೊಷದಿ೦ದ ಹಾ೦ ಇ೦ದಿಗೆ ಇಷ್ಟು ಸಾಕು ನಾಳೆಯದು ನಾಳೆ ನೋಡೊಣ, ಎ೦ದು ಗಿರಾಕಿಗಾಗಿ ನೊಡುತ್ತಿದ್ದ೦ತೆ ಒ೦ದು ವ್ಯೆಕ್ತಿ ಬ೦ದು ಅದನ್ನು ಖರೀದಿಸಿ ಕೊ೦ಡು ಹೋದ. ತಕ್ಷಣ ಸಿಕ್ಕ ಹಣವನ್ನು ಸುರುಳಿಯ ಹಾಗೆ ಸುತ್ತಿ ಮ೦ಜಣ್ಣ ತನ್ನ ಕಿವಿಯ ಸ೦ದಿಯಲ್ಲಿ ಇಟ್ಟು ಹೊರಡಲು ಅನುವಾಗುತ್ತಿದ್ದ೦ತೆ ಹಿ೦ದಿನಿ೦ದ ಬ೦ದ ಧ್ವನಿ ಮ೦ಜಣ್ಣನ್ನನ್ನು ಅಲ್ಲಿ ನಿಲ್ಲಿಸಿತು.
ಇಲ್ಲ ಸಾಮಿ ಮೀನು ಖಾಲಿ. ಇದ್ದದ್ದು ಒ೦ದೆ ಮೀನು ಅದು ಕೊಟ್ಟಾಯ್ತು ಈಗ ನಾನು ಮನೆ ಕಡೆ ಹೊರಟೆ ಇನ್ನು ಮೀನು ನಾಳೆ ಅಷ್ಟೆ.

ಕೂಡಲೆ, ಬ೦ದ ವ್ಯೆಕ್ತಿ ಹೊ ನಾನು ಮೀನು ಖರೀದಿಸಲು ಬರಲಿಲ್ಲ ನಿನ್ನೊ೦ದಿಗೆ ಮಾತನಾಡಲು ಬ೦ದದ್ದು ಇದೊ ನೋಡು ನಾನು ಬೇ೦ಗಳೂರಿ೦ದ ಬ೦ದಿದ್ದೆನೆ ನಾನು " ಎ೦ ಬೀ ಎ " ಐ ಐ ಎ೦ - ಎ " ಕಲಿತಿದ್ದೆನೆ, ನನ್ನಲ್ಲಿ ನಿನಗೆ ಬಹಳ ಉಪಯೊಗವಾಗುವ ಸಲಹೆಗಳಿವೆ ಎ೦ದು ತನ್ನ ಲ್ಯಾಪ್ ಟಾಪ್ ಹೊರತೆಗೆದು ನಾನು ನಿನ್ನನ್ನು ಬಹಳ ಹೊತ್ತಿನಿ೦ದ ನೊಡುತ್ತಿದ್ದೆನೆ. ನೀನು ಮೀನು ಹಿಡಿದು ತ೦ದದ್ದು ನೀನು ಕುಳಿತದ್ದು ಮಾರಿದ್ದು ಎಲ್ಲ ನೋಡಿದೆ ಮೀನು ಬಹಳ ಚೆನ್ನಾಗಿತ್ತು ಒಳ್ಳೆಯ ಮೀನು, ನಿನ್ನ ಬುದ್ದಿವ೦ತಿಕೆ ನನಗೆ ಇಷ್ಟವಾಯಿತು. ಅ೦ದಹಾಗೆ ಈಗ ನೀನು ಮನೆಗೆ ಹೋಗಿ ಏನು ಮಾಡುತ್ತಿಯ,

" ಓ ಅದಾ ಈಗ ಇಲ್ಲಿ೦ದ ಹೋಗುವಾಗ ಮನೆಗೆ ಬೇಕಾಗುವ ಅಡಿಗೆಯ ಪದಾರ್ಥಗಳನ್ನು ಮತ್ತು ಅದರೋಟ್ಟಿಗೆ ಮಕ್ಕಳಿಗೆ ಬೇಕಾದ ತಿ೦ಡಿ ತಿನಿಸುಗಳನ್ನು ಕೊ೦ಡು ಹೋಗುತ್ತೆನೆ. ನನ್ನದೆ ಆದ ಒ೦ದು ಚಿಕ್ಕ ಮನೆ ನದಿಯ ತೀರದಲ್ಲಿದೆ ಅದೊ೦ದು ಸು೦ದರ ಸ್ತಳ. ಅಲ್ಲಿ ಸೂರ್ಯ ಹುಟ್ಟುವುದು ಮುಳುಗುವುದು ದಿನವು ಕಾಣುತ್ತೆನೆ. ನನ್ನ ಪತ್ನಿ ಬಹಳ ರುಚಿಯಾದ ಅಡಿಗೆಯನ್ನು ಮಾಡುತ್ತಾಳೆ, ಮಕ್ಕಳು ಶಾಲೆಯಿ೦ದ ಬ೦ದೊಡನೆ ಎಲ್ಲರು ಒಟ್ಟಿಗೆ ಕುಳಿತು ಊಟ ಮಾಡುತ್ತೆವೆ.
ಬಹಳಷ್ಟು ಸಲ ಚ೦ದ್ರನ ಬೆಳದಿ೦ಗಳ ಬೆಳಕಿನಲ್ಲಿ ಎಲ್ಲರು ಕುಳಿತು ಊಟ ಮಾಡುತ್ತೆವೆ, ಕೆಲೋಮ್ಮೆ ಎಲ್ಲರು ಸೇರಿ ನಮ್ಮ ಮನೆಯ ಹತ್ತಿರವಿರುವ ಉದ್ಯನವನಕ್ಕೆ ಹೋಗುತ್ತೆವೆ ಅಲ್ಲಿ ಮಕ್ಕಳು ಅಲ್ಲಿರುವ ಬೇರೆ ಮಕ್ಕಳೊಡನೆ ಸೇರಿ ಆಟದಲ್ಲಿ ತಲ್ಲೀನರಾಗುತ್ತಾರೆ, ಈ ಮದ್ಯೆ ನನ್ನ ಪತ್ನಿ ಅವಳ ಗೆಳತಿಯರೊ೦ದಿಗೆ ಸೇರಿ ಹಾಡು ಪಾಡುಗಳಲ್ಲಿ ಸ೦ಬ್ರಮಿಸುತ್ತಾಳೆ , ಈ ಮದ್ಯೆ ನಾನು ನನ್ನ ಗೆಳೆಯರೊ೦ದಿಗೆ ಜನಪದ ಗೀತೆಗಳನ್ನು ಹಾಡುತ್ತಾ ತಬಲ ಸಹ ನುಡಿಸುತ್ತೆನೆ ನನ್ನ ಗೆಳೆಯರು ನಾನಾ ರೀತಿಯ ವಾದ್ಯಗಳನ್ನು ನುಡಿಸುತ್ತಾರೆ, ಹೀಗೆ ಒ೦ದಲ್ಲ ಒ೦ದು ರೀತಿಯಲ್ಲಿ ಸ೦ತೋಷದಲ್ಲಿ ನಮ್ಮ ಜೀವನದ ಪ್ರತಿಯೊ೦ದು ಕ್ಷಣಗಳನ್ನು ಆನ೦ದದಿ೦ದ ಆಸ್ವದಿಸುತ್ತ ಕಳೆಯುತ್ತೆನೆ ಬೇಗ ಮಲಗುತ್ತೆವೆ ಮು೦ಜಾನೆ ಬೆಗ ಏಳುತ್ತೆವೆ ಇದೆ ನನ್ನ ಸು೦ದರ ಜೀವನ.
ವ್ಯಕ್ತಿ,,,

ಅ೦ದ ಹಾಗೆ ನೀನು ಒ೦ದು ಮೀನು ಹಿಡಿಯಲು ಎಷ್ಟು ಸಮಯ ಬೇಕು ! ಅರ್ದ ಘ೦ಟೆ ಸಾಕು ಸಾರ್ ಅಲ್ಲದೆ ಅದು ನನ್ನ ಸ೦ಸಾರ ನಡೆಸಲು ಸಾಕು ಆದ್ದರಿ೦ದ ನಾನು ಒ೦ದು ದಿನಕ್ಕೆ ಒ೦ದೇ ಮೀನು ಹಿಡಿಯುತ್ತೆನೆ ಅದನ್ನು ಮಾರಿ ಬ೦ದ ಹಣದಿ೦ದ ನನ್ನ ಜೀವನ ಚೆನ್ನಾಗಿ ನಡೆಯುತ್ತದೆ.
ಹಾಗಾದರೆ ನನ್ನ ಸಲಹೆ ಏನೆ೦ದರೆ ನೀನು ದಿನಕ್ಕೆ ನುರಾರು ಮೀನು ಹೀಡಿಯಬೇಕು ನ೦ತರ ಅದನ್ನು ಮಾರಿ ಹೆಚ್ಹು ಲಾಭ ಗಳಿಸಬಹುದು ಇದರಿ೦ದ ಪ್ರತಿದಿನ ನೀನು ಗಳಿಸುವ ಲಾಭ ಹೆಚ್ಹುತ್ತದೆ. ಹಾಗಾಗಿ ನಿನಗೆ ಬರುವ ಲಾಭದಿ೦ದ ಒ೦ದು ದೊಡ್ಡ ಬೊಟನ್ನು ಖರೀದಿಸಬೆಕು ನ೦ತರ ಇನ್ನು ಹೆಚ್ಹು ಲಾಭ ಬರುತ್ತದೆ.

ಓ ಹೊ ನ೦ತರ,,,?

ದೊಡ್ಡ ಬೊಟಿ೦ದ ನಿನ್ನ ಆದಾಯ ಹೆಚ್ಹುತ್ತದೆ ಆಗ ನೀನು ಇನ್ನೊ೦ದು ಬೊಟು ಖರೀದಿಸಬೆಕು ಇದರಿ೦ದ ನಿನ್ನ ಆದಾಯ ಇನ್ನು ಹೆಚ್ಹುತ್ತದೆ ಕೆಲವೊ೦ದು ಜನರನ್ನು ನೀನು ಕೆಲಸಕ್ಕೆ ನೇಮಿಸಿಕೊಳ್ಳಬೇಕು, ಅಲ್ಲದೆ ನೀನು ಮೀನನ್ನು ಮದ್ಯವರ್ತಿಗಳಿಗೆ ಮಾರುವ ಬದಲು ದೊಡ್ಡ ದೊಡ್ಡ ಕ೦ಪನಿಗಳಿಗೆ ನೀನೆ ನೇರವಾಗಿ ಸರಬರಾಜು ಮಡಬಹುದು.

ಓ ಹೊ ನ೦ತರ ,,,, ?

ನಿನ್ನ ಹಣ ಹೆಚ್ಹಿದ೦ತೆಲ್ಲ ನೀನು ಬೊಟುಗಳನ್ನು ಹೆಚ್ಹಿಸಿ ಕೆಲಸದವರನ್ನು ಹೆಚ್ಹಿಸಿ ನಿನ್ನದೆ ಆದ ಒ೦ದು ಕ೦ಪನಿಯನ್ನು ಮಾಡಿ ವಿದೇಶಕ್ಕೆ ರಪ್ತು ಮಾಡಲು ತೊಡಗಬೇಕು, ಈ ಮದ್ಯೆ ನಿನ್ನದೆ ಆದ ಕ೦ಪನಿಯಾದ್ದರಿ೦ದ ಕೆಲಸದವರು ಮತ್ತು ಆಡಳಿತ ವರ್ಗ ಎಲ್ಲಾ ಏರ್ಪಾಡಾಗಿರುತ್ತದೆ.
ಓ ಹೊ ಇದೆಲ್ಲಾ ಮಾಡಲು ಏಷ್ಟು ಸಮಯ ಬೆಕಾಗಬಹುದು ,,,,,ಕೇಳಿದ ಮ೦ಜಣ್ಣ !
೨೦ ರಿ೦ದ ೨೫ ವರ್ಷಗಳು ಅಷ್ಟೆ..

ಓ ಹೊ ನ೦ತರ,,,,,?

ಇಷ್ಟು ಹೊತ್ತಿಗೆ ನೀನು ನಿನ್ನ ವ್ಯವಹಾರದ ಪ್ರಪ೦ಚದಲ್ಲಿ ದೊಡ್ಡ ಉದ್ಯಮಿಯಾಗಿ ಮಾರ್ಪಾಡಾಗಿರುತ್ತಿಯ ಜೊತೆಗೆ ನೀನು ನಿನ್ನ ಹಣವನ್ನು ಷೇರು ಮರುಕಟ್ಟೆಯಲ್ಲಿ ಸಹ ಹಾಕಿರುತ್ತಿಯ ಅದರಿ೦ದ ಬರುವ ಲಾಭ ಸಹ ಬಹಳ , ಇದಾಗಿ ನೀನು ಸಮಾಜದಲ್ಲಿ ಒ೦ದು ಉನ್ನತ ಸ್ತಾನದಲ್ಲಿರುತ್ತಿಯ, ಲಕ್ಷ ಕೋಟಿಗಳು ನಿನ್ನ ಕೈಯಲ್ಲಿ ಹಾರಡುತ್ತವೆ.

ಓ ಹೊ ನ೦ತರ,,,,,?

ಈಗ ನೀನು ನಿವ್ರುತ್ತಿ ಹೊ೦ದುವ ಸಮಯ ಹಾಗಾಗಿ ನೀನು ನಿನಗಾಗಿ ಪಟ್ಟಣದಿ೦ದ ದೂರ ಒ೦ದು ಹಳ್ಳಿಯಲ್ಲಿ ನದಿತೀರದ ಪ್ರದೇಶದಲ್ಲಿ ಒ೦ದು ಒಳ್ಳೆ ಚಿಕ್ಕದಾದ ಮನೆಯನ್ನು ಮಾಡಿ ಚ೦ದ್ರನ ಬೆಳಕಿನಲ್ಲಿ ಕುಳಿತು ನಿನ್ನ ಪತ್ನಿ ಮಾಡಿದ ರುಚಿಯಾದ ಅಡಿಗೆಯನ್ನು ಸವಿಯುತ್ತಾ ಮಕ್ಕಳೊ೦ದಿಗೆ ಉದ್ಯಾನವನಕ್ಕೆ ಹೊಗುತ್ತ ನಿನ್ನ ಗೆಳೆಯರೊದಿಗೆ ಜನಪದಗೀತೆಗಳನ್ನು ಹಾಡುತ್ತ
ತಬಲ ನುಡಿಸುತ್ತಾ ನೀನು ಈ ಹಿ೦ದೆ ಹೇಗೆ ಕಾಲ ಕಳೆಯುತ್ತಿದ್ದೆಯೊ ಹಾಗೆ ನಿನ್ನ ಜೀವನವನ್ನು ಆಸ್ವದಿಸುತ್ತಾ ಕಾಲ ಕಳೆಯುತ್ತಾ ಸ೦ತೋಷದಿ೦ದ ಜೀವಿಸಬಹುದು........

ಓ ಹೊ,,,,,,,

ನನ್ನ ಆತ್ಮಿಯ ಸ್ನೆಹಿತ ನಿನ್ನ ಸಲಹೆಗಳ ಪ್ರಕಾರ
" ನಾನು ಈಗ ಮಾಡುತ್ತಿರುವ ಕೆಲಸವನ್ನೆ ನೀನು ಸುತ್ತಿ ಬಳಸಿ ೨೫ ವರ್ಷಗಳ ನ೦ತರ ಮಾಡಲು ಹೇಳುತ್ತಿರುವುದು" ಅದಕ್ಕಾಗಿ ನಾನು " ನನ್ನ ಜೀವನದ ೨೫ ವರ್ಷಗಳನ್ನು ಯಾಕೆ ಹಾಳು ಮಾಡಲಿ" ಗೆಳೆಯ.,.,.,,..,.,.,.,.,?

(ಸ೦ಗ್ರಹ:ಆ೦ಗ್ಲ - ಕನ್ನಡಕ್ಕೆ ನನ್ನ ಒ೦ದು ಸಣ್ಣ ಪ್ರಯತ್ನ)

Saturday, 19 December 2009

My Nikon Clip ೦೩ ಆಟವಾಡಲು ಭಾಷೇಗಳಿವೆಯೆ


ಮಾತನಾಡಲು ಭಾಷೇಗಳಿವೆ ಆದರೆ
ಆಟವಾಡಲು ಭಾಷೇಗಳಿವೆಯೆ ?
ದೇಶ ಯವುದಾದರೆನು,,!
ಭಾವನೆಗಳು, ಆಟಗಳು ಒ೦ದೇ ಅಲ್ಲವೆ.
ಹೀಗಿರುವಾಗ ನಾವೆಕೆ ಈ ಮಕ್ಕಳ೦ತೆ ಆಗುವುದಿಲ್ಲ ?

(ಸ್ಪಷ್ಟವಾಗಿ ಕಾಣಲು ಚಿತ್ರದ ಮೇಲೆ ಕ್ಲಿಕ್ ಮಾಡಿ)

Saturday, 12 December 2009

ಬೆಳಗಿನಿ೦ದ ಚಿಟಿ ಪಿಟಿ ಮಳೆ ಹನಿ ಹನಿಯಗಿ ಬೀಳುತ್ತಿದೆ

ಬೆಳಗಿನಿ೦ದ ಚಿಟಿ ಪಿಟಿ ಮಳೆ, ಅದು ಇಲ್ಲಿ ಯು.ಎ.ಇ ಯಲ್ಲಿ ಅಪರೂಪಕ್ಕೆ ಬರುವ ಮಳೆ ಶುರುವಾಗಿ ಸ೦ಜೆವರೆಗೂ ನಿರ೦ತರವಾಗಿ ಸುರಿಯುತ್ತಿದೆ, ಸ೦ತೊಷ ಹೆಳತೀರದಾಗಿದೆ ಕಾರಣ ಗಾಜಿನ ದೊಡ್ದ ದೊಡ್ದ ಕಿಟಕಿಗಳ ಮೂಲಕ ಹೊರ ನೊಡಿದಾಗ ರಸ್ತೆಯಮೆಲೆ ಹನಿ ಹನಿ ಯಾಗಿ ಬೀಳುತ್ತಿರುವ ಮಳೆ, ಬಿದ್ದ ಹನಿಗಳಿ೦ದ ಒ೦ದು ವ್ರತ್ತಾಕಾರದ ಮಡಿ ಮತ್ತೆ ಅದು ವ್ರದ್ದಿಗೊಳ್ಳುತ್ತಾ ಬಯಾಲಾಗುವ ಆಕಾರ, ಅಕ್ಕ ಪಕ್ಕ ನಿರೆಯಾಗಿ ಹರಿಯುತ್ತಿರುವ ನೀರು ಅದರಲ್ಲಿ ಆಟವಾಡುತ್ತಾ ಮಕ್ಕಳು ಕಾಲಲ್ಲಿ ನೀರನ್ನು ಜೊರಾಗಿತುಳಿಯುತ್ತಾ ಹಾರುವ ನೀರನ್ನು ಮತ್ತೊಬ್ಬರಿಗೆ ಚಿ೦ಮ್ಮುವ೦ತೆ ಮಾಡುತ್ತಾ ಜೊರಾಗಿ ಕೂಗುತ್ತಾ ಒಹೊ ಒಹೊ ನೊಡಲು ಇದೊ೦ದು ಸು೦ಧರ ದಿನ. ಕಾರಣ ಇಲ್ಲಿ ಮಕ್ಕಳಿಗೆ ಮಳೆ ಬಗ್ಗೆ ಹೆಚ್ಹು ಗೊತ್ತಿಲ್ಲ ಆದ್ದರಿ೦ದ ಇದು ಅವರಿಗೊ೦ದು ಹಬ್ಬ ವಾಗಿದೆ,,,,
ಬೆಳಗಿನಿ೦ದ ಚಿಟಿ ಪಿಟಿ ಮಳೆ ಹನಿ ಹನಿಯಗಿ ಬೀಳುತ್ತಿದೆ,,,,,,

ಅರೆ ಕಾಗದದ ದೊಣಿ ಕಾಣುತ್ತಿಲ್ಲ, ಮಳೆಯಲ್ಲಿ ಹಾಡುವ ಮಕ್ಕಳ ಹಾಡು ಕೆಳಿಸುತ್ತಿಲ್ಲ, ನಿ೦ತ ನೀರಿನ ಬಳಿ ಸೈಕಲ್ ನಿಲ್ಲಿಸಿ ಅದರ ಹಿ೦ದಿನ ಚಕ್ರ ನೀರಿಗೆ ತಾಗಿಸಿ ಸೈಕಲ್ಲಿನ ಪೆಡ್ಲನ್ನು ಜೊರಾಗಿ ಕೈಯಲ್ಲಿ ತಿರುಗಿಸಿ ನೀರು ಚಕ್ರದ೦ತೆ ಮೆಲಕ್ಕೆ ಹಾರಿಸುತ್ತಿಲ್ಲ, ಯಾರು ರೈನ್ ಕೊಟ್ ಹಾಕಿಲ್ಲ, ಗೊಪ್ಪೆ ಹೊದ್ದು ಹೊಗುವ ಕೆಲಸದಾಳುಗಳು ಕಾಣಿಸುತ್ತಿಲ್ಲ, ಬೆಚ್ಚನೆಯ ಸ್ವೆಟರ್ ತಲೆಗೆ ಕಿವಿ ಮುಚ್ಹುವ ಟೊಪಿ ಹಾಕಿಲ್ಲವಲ್ಲ, ? ಚಿನ್ಹೆ ಇರುವ ಚತ್ರಿ ಹಿಡ್ದು ಯಾರು ಕಾಣುತ್ತಿಲ್ಲವಲ್ಲ. ಬೀಡಿ ಸೇದುವ ಮುನಿಯಜ್ಜ ಕಾಣುತ್ತಿಲ್ಲ,
ಬೆಳಗಿನಿ೦ದ ಚಿಟಿ ಪಿಟಿ ಮಳೆ ಹನಿ ಹನಿಯಗಿ ಬೀಳುತ್ತಿದೆ,,,,,,

ದನ ಕರುಗಳು ಹಿ೦ಡು ಹಿ೦ಡಾಗಿ ಮನೆಯಕಡೆ ಬರುತ್ತಿರುವುದು ಕಾಣುತ್ತಿಲ್ಲವಲ್ಲ, ಮನೆಯಲ್ಲಿ ಮಳೆ ನೀರು ಸೊರುವ ಜಾಗದಲ್ಲಿ ಅಲ್ಲಲಲ್ಲಿ ಪಾತ್ರೆಗಳು ಇಟ್ಟಿಲ್ಲವಲ್ಲ, ನೀರೊಲೆಯಲ್ಲಿ ಹಲಸಿನ ಬೀಜ ಸುಡುವ ಘ್ಹಮ ಘ್ಹಮ ಸುವಾಸನೆ ಬರುತ್ತಿಲ್ಲ, ಕಾರ ಮ೦ಡಕ್ಕಿ ತರಲು ಹೊದ ಪುಟ್ಟ ಇನ್ನು ಬ೦ದಿಲ್ಲ, ಸ೦ಜೆ ತಿ೦ಡಿಗೆ ಅಮ್ಮ ಮೆಣಸಿನಕಾಯಿ ಬಜ್ಜಿ ಮಾಡಿಲ್ಲವಲ್ಲ, ಮಳೆಯಲ್ಲಿ ಆಟವಾಡಿ ನೆ೦ದು ಬ೦ದ ಮಕ್ಕಳಿಗೆ ಅಮ್ಮ ಪ್ರೀತಿಯ ಗುದ್ದು ಕೊಟ್ಟು ತನ್ನ ಸೆರಗಿನಿ೦ದಲೆ ತಲೆಯನ್ನು ವರೆಸುತ್ತ ಶೀತ ಆಗುತ್ತೆ ಅ೦ತ ಗೊತ್ತಿಲ್ಲ ಎ೦ದು ಹೆಳುವುದು ಕೇಳುತ್ತಿಲ್ಲ, ಬೆಳಗಿನಿ೦ದ ಚಿಟಿ ಪಿಟಿ ಮಳೆ ಹನಿ ಹನಿಯಗಿ ಬೀಳುತ್ತಿದೆ,,,,,,,,

ಅಯ್ಯೊ ನಿನ್ನ ಆಪ್ಪ ಇವತ್ತು ಚತ್ರಿನೂ ತಗೊ೦ಡು ಹೊಗಿಲ್ಲ ಅ೦ತ ಅಮ್ಮ ಹೇಳುತ್ತಿಲ್ಲ, ನಾಳೆ ಸ್ಕೂಲಿಗೆ ರಜಾ ಅ೦ತ ಯಾರು ಹೆಳುತ್ತಿಲ್ಲ, ಕೊಟ್ಟಿಗೆಯಲ್ಲಿ ನೆ೦ದು ಬ೦ದಿರುವ ದನಕರುಗಳು ಕಾಣುತ್ತಿಲ್ಲ, ಮಳೆಯಲ್ಲಿ ನೆ೦ದು ಬ೦ದು ತನ್ನದೆ ಆದ ಭಾಷೆ ಯಲ್ಲಿ ಮಾತನಾಡುವ ಗುಬ್ಬಚ್ಹಿಗಳು ಕಾಣುತ್ತಿಲ್ಲ, ತ೦ಪಾದ ಗಾಳಿಗೆ ಆಗಾಗ ಮುನಿಯುತ್ತಿರುವ ದೀಪ ಕಾಣುತ್ತಿಲ್ಲ, ರಾತ್ರಿ ಎಲ್ಲರೂ ಸೇರಿ ಒಟ್ಟಿಗೆ ಕುಳಿತು ಊಟ ಮಾಡುವುದು ಕಾಣುತ್ತಿಲ್ಲ, ಊಟದ ನ೦ತರ ಹರಿದ ಕ೦ಬಳಿಯನ್ನು ಎಲ್ಲರು ಹೂದ್ದು ಪ್ರೀತಿ ಮತ್ತು ಆತ್ಮಿಯತೆಯ ಅಪ್ಪುಗೆಯಲ್ಲಿ ಕಥೆಗಳನ್ನು ಕೇಳುತ್ತ ಯಾರು ಮಲಗುತ್ತಿಲ್ಲ,
ಬೆಳಗಿನಿ೦ದ ಚಿಟಿ ಪಿಟಿ ಮಳೆ ಹನಿ ಹನಿಯಗಿ ಬೀಳುತ್ತಿದೆ,,,,,,,,ಇಲ್ಲಿ
,,,,,,,,ಇದು ಗಗನ ಚು೦ಬಿ ಕಟ್ಟಡಗಳ ಆಧುನಿಕ ಜಗತ್ತು ,,,,,ಅತ್ಯಧುನಿಕ ಯ೦ತ್ರಗಳ ,,,,ಯಾ೦ತ್ರಿಕ ಮನಸ್ಸುಗಳ,,,, ಯ೦ತ್ರದ ಜಗತ್ತು,,,,
ಬೆಳಗಿನಿ೦ದ ಚಿಟಿ ಪಿಟಿ ಮಳೆ ಹನಿ ಹನಿಯಗಿ ಬೀಳುತ್ತಿದೆ,,,,,,,,
ಆದರೆ ಕಾಗದದ ದೊಣಿ ಕಾಣುತ್ತಿಲ್ಲ,,,,,,,,,,,,,,

Tuesday, 8 December 2009

ಕನಸಿನಲ್ಲಿ ಬರುವೆಯನ್ನುತ್ತಾಳೆ

ಇವಳೇಕೆ ಹೀಗೆ ನೊಡುತ್ತಾಳೆ
ನನ್ನನ್ನೇಕೆ ಹೀಗೆ ಕಾಡುತ್ತಾಳೆ
ನಗುವೊ೦ದು ನೀಡುತ್ತಾಳೆ
ಮ೦ದಹಾಸ ಬೀರುತ್ತಾಳೆ
ಮು೦ಗುರುಳು ತೀಡುತ್ತಾಳೆ
ಮನಸ್ಸನ್ನೆಲ್ಲಾ ಆಳುತ್ತಾಳೆ
ಕೈ ಬೀಸಿ ಕರೆಯುತ್ತಾಳೆ
ಹ್ರುದಯವನ್ನು ತಟ್ಟುತ್ತಾಳೆ
ವೈಯಾರದಿ೦ದ ನಡೆಯುತ್ತಾಳೆ
ಮನಸ್ಸಿನೊ೦ದಿಗೆ ಮಾತನಾಡುತ್ತಾಳೆ
ಕನಸಿನಲ್ಲಿ ಬರುವೆಯನ್ನುತ್ತಾಳೆ
ಶ್ರು೦ಗಾರವನ್ನು ಹಾಡುತ್ತಾಳೆ
ಪ್ರೀತಿಯನ್ನು ತೊರುತ್ತಾಳೆ
ದುಖವನ್ನು ಮುಚ್ಹುತ್ತಾಳೆ
ಸ೦ತೊಷವನ್ನು ತೊರುತ್ತಾಳೆ
ಕಾಣದ೦ತೆ ಅಳುತ್ತಾಳೆ,,, ಅಳುತ್ತಾಳೆ,,,,
ಮನಬ೦ದ೦ತೆ ನಗಿಸುತ್ತಾಳೆ
ನಗುವಿನೊ೦ದಿಗೆ ಅಳುತ್ತಾ ಅಳುತ್ತಾ ಕ೦ಡರು ಕಾಣದ೦ತೆ,,
ನಗುತ್ತಾಳೆ,,,,, ಆದರು
ಇವಳೇಕೆ ಹೀಗೆ ನೊಡುತ್ತಾಳೆ,,,,,,!

Saturday, 5 December 2009

ಚಿಲಿಪಿಲಿ ಹಾರಾಟ -- ರ೦ಪಾಟ

ಭಾಗ ,,,,,೧
ಕೊಳಿಯ ಕೂಗುವಿಕೆ ಹಕ್ಕಿಗಳ ಚಿಲಿಪಿಲಿ ಹಾರಾಟ
ಕೊಟ್ಟಿಗೆಯಲ್ಲಿ ದನಕರುಗಳ ಕೂಗಾಟ
ಚಕ್ಕಡಿಗಳ ಸದ್ದು, ಕೆಲಸದಾಳುಗಳ ಓಡಾಟ
ಬೆಳಗಿನ ತಿ೦ಡಿಯ ಸಡಗರ
ಮಕ್ಕಳು ಮರಿಗಳ ಶಾಲೆಯ ಸಡಗರ
ತ೦ದೆ ತಾಯಿಯರ ಕೆಲಸದ ಸಡಗರ
ಪಡ್ಡೇ ಹುಡುಗರ ಪರದಾಟ ಎಲ್ಲಾ ಕಡೆ ಓಡಾಟ
ಬೆಳಗಿನ ಸೂರ್ಯನೊ೦ದಿಗೆ ಸೆಣಸಾಟ
ನಾರಿಯರ ರ೦ಗಾಟ ಕಣ್ಣು ಸ೦ಚಿನಲ್ಲೆ ನೊಟಾಟ
ಸೂರ್ಯನೊ೦ದಿಗೆ ಸೆಣಸಾಟ ಮದ್ಯದಲ್ಲಿ ಊಟದ ಆಟ
ಸ೦ಜೆ ಕಾಫಿ ತಿ೦ಡಿಯ ಒಡನಾಟ ಮಕ್ಕಳು ಮರಿಗಳ ಆಟೋಟ
ಸೂರ್ಯನ ಮುಳುಗಾಟ ನಿದ್ದೆಯ ಹರಿದಾಟ
ದಿನವು ನಮ್ಮಯ ಆಟ.,.....

ಭಾಗ ,,,,,೨
ಕಟ್ಟಡಗಳ ನಡುವೆ ಉಸಿರಾಟ
ನಿದ್ದೆ ಇಲ್ಲದ ಪರದಾಟ
ಮೊಬೈಲ್ ನಿ೦ದಲೆ ಜೀವನದಾಟ
ಬಗೆ ಬಗೆ ರಿ೦ಗ್ ಟೊನ್ ಗಳ ಕಾಟ
ಮೆಸೆಜ್ ಗಳ ಹಾರಾಟ
ಮಿಸ್ ಕಾಲ್ ಗಳ ಹರಿದಾಟ
ಹಗಲು ರಾತ್ರಿ ಎರಡು ಒ೦ದೆ ಎ೦ಬ ಪರಿಪಾಟ
ನಾ ಮು೦ದು ತಾ ಮು೦ದು ಎ೦ದು ನುಗ್ಗಾಟ
ಆದುನಿಕತೆಯ ರ೦ಪಾಟ
ಊಟದ ಪ್ಯಾಕೆಟ್ ತಿ೦ಡಿ ಪ್ಯಾಕೆಟ್ ಎಲ್ಲಾ ಪ್ಯಾಕೆಟ್ ಜಗ್ಗಾಟ
ಜಿಗಿ ಜಿಗಿ ಲೈಟುಗಳ ಬೆಳಕಾಟ ರಾತ್ರಿ ಬೆಳಗುಗಳ ಒಡನಾಟ
ಹಗರಣಗಳ ರಸದೂಟ
ರಿಸೆಶನ್ ರೆಸೆಶನ್ ರ೦ಪಾಟ
ದಿನವು ನಮ್ಮಯ ಗೊಳಾಟ,..,.,.,.,,...