Tuesday 30 June 2009

ಏನ್ರೀ ಇದು

A to Z Food Corner ಗೆ ಬಂದ ವೆಕ್ತಿ ಅಂಗಡಿಯಲ್ಲಿ ಕೇಳಿದ, ಹಾಗಾದರೆ ನಿಮ್ಮ ಅಂಗಡಿಯಲ್ಲಿ ತಿನ್ನುವ ಎಲ್ಲ ವಸ್ತುಗಳು ಸಿಗುತ್ತಾ ಎಂದಾ , ಹೌದು ಸಾರ್ ನಿಮಗೆ ಏನೂ ಬೇಕಾಗಿತ್ತು ಎಂದು ಅಂಗಡಿಯವನು ಕೇಳಿದ , ವೆಕ್ತಿ ಹೇಳಿದ ನಾಯಿ ತಿನ್ನುವ ಕೇಕ್ ಇದೆಯಾ , ಕೂಡಲೇ ಅಂಗಡಿಯವ ಇಲ್ಲೇ ತಿನ್ನುತ್ತಿರೋ ಅಥವಾ ಪಾರ್ಸೆಲ್ ತಗೊಂಡು ಹೋಗ್ತೀರೋ ,.,.,.!!

Monday 29 June 2009

ಅದೇ ರೀ ಆ ಎದುರು ಮನೆ ಹುಡುಗಿ

ಅದೇರೀ ಆ ಎದುರು ಮನೆ ಹುಡುಗಿ ಅವಳೀಗ ಮುಂಜಾನೆ ಎದ್ದು ರಂಗೋಲಿ ಹಾಕುವುದಿಲ್ಲ , ಅವಳೀಗ ಮನೆಯ ಕಂಪೊಂಡಿನಲ್ಲಿ ರಾಶಿ ರಾಶಿ ಬಟ್ಟೆ ಒಗೆಯುವುದು ಇಲ್ಲ , ಅದನ್ನು ಒಣ ಹಾಕುವುದುಇಲ್ಲ . ಅದೇ ರೀ ಆ ಎದುರು ಮನೆ ಹುಡುಗಿ ಈಗ ಅಲ್ಲಿ ಕುಳಿತು ರಾಶಿ ರಾಶಿ ಪಾತ್ರೆ ತೊಳೆಯುವುದಿಲ್ಲ,
ಅದೇ ರೀ ಆ ಎದುರು ಮನೆ ಹುಡುಗಿ ಈಗ ಅಲ್ಲಿ ನಿಂತು ನನ್ನನ್ನೂ ಬಾಲ್ಕನಿಯಲ್ಲಿ ನೋಡಿ ಕಣ್ಣು ಮಿಟುಕಿಸ್ವುದಿಲ್ಲ ಅವಳೀಗ ನನ್ನನ್ನೂ ವೈಯಾರದಿಂದ ನೋಡುವುದಿಲ್ಲ, ಪ್ರತಿದಿನ ಬಗೆ ಬಗೆ ಯಾದ ತಿಂಡಿ ಮಾಡಿ ನನಗೆ ಮೊದಲಿನಂತೆ ಕೊಡುವುದಿಲ್ಲ , ಪ್ರತಿ ಭಾನುವಾರ ವಿಶೇಷ ತಿಂಡಿ ಮಾಡುತ್ತಿದ್ದಳಲ್ಲ ಅದು ಈಗ ಸಿಗುತ್ತಿಲ್ಲ , ಕದ್ದು ಮುಚ್ಚಿ ನನ್ನ ಒಟ್ಟಿಗೆ ಸಿನಿಮಾ ನೋಡಲು ಈಗ ಬರುತ್ತಿಲ್ಲ ,
ಭಾನುವಾರದ ಆ ಬೆಣ್ಣೆ ದೋಸೆ ಚಟ್ತ್ನಿ ನೆನಪಾಗುತ್ತಿದೆ , ಸೋಮವಾರದ ಆ ಚಿತ್ರಾನ್ನ ನೆನಪಾಗುತ್ತಿದೆ , ಮಂಗಳವಾರದ ಪೂರಿ ಸಾಗು ನೆನಪಾಗುತ್ತಿದೆ , ಬುಧವಾರದ ರುಚಿಯಾದ ಇಡ್ಲಿ ಸಾಂಬಾರ್ ನೆನಪಾಗುತ್ತಿದೆ , ಗುರುವಾರದ ಪುಳಿಯೋಗರೆ ಅಹಾ ಬಹಳ ನೆನಪಾಗುತ್ತಿದೆ , ಶುಕ್ರವಾರದ ಬಹು ಬೇಡಿಕೆಯ ಘೀ ರೈಸ್ , ಶನಿವಾರದ ತಟ್ಟೆ ಇಡ್ಲಿ ಮತ್ತು ಬೆಣ್ಣೆ , ಒಂದೋ ಎರಡೋ ಏನು ಹೇಳಲಿ ಏನೆಲ್ಲಾ ನನಗಾಗಿ ಮಾಡಿ ಕೊಡುತ್ತಿದ್ದಳು ,ಈಗ ಆ ಒಂದೂ ಕಾರ್ಯಕ್ರಮಗಳು ಕಾಣುತ್ತಿಲ್ಲ ,
ಅದೇ ಆ ಎದುರು ಮನೆ ಹುಡುಗಿ ಈಗ
ಗಿಡಗಳಿಗೆ ನೀರು ಹಾಕುವುದು ಕಾಣುತ್ತಿಲ್ಲ , ಜೋರಾಗಿ ಹಾಡುವುದು ಕೇಳಿಸುತ್ತಿಲ್ಲ , ಏನಾಯಿತು ಅವಳಿಗೆ ಎಲ್ಲರು ಟಿ ವಿ ನೋಡುವಾಗ ಕತ್ತಲೆಯಲ್ಲಿ ಬಂದು ನನಗೊಂದು ಮುತ್ತು ಕೊಟ್ಟು ಹೆದರಿಸುತ್ತಿದ್ದ , ಅವಳೀಗ ಎಲ್ಲವನ್ನು ಮರೆತಿದ್ದಾಳೆ , ಅವಳೀಗ ನಾನು ಕೂರುತ್ತಿದ್ದ ಬಾಲ್ಕನಿಯನ್ನು ನೋಡುವುದಿಲ್ಲ ,
ಅದೇ ರೀ ಆ ಎದುರು ಮನೆ ಹುಡುಗಿ
ಅವಳು ಮಾಡುತಿದ್ದ ಎಲ್ಲ ಕೆಲಸವನ್ನು ಈಗ ನಾನೇ ಮಾಡುತ್ತಿದ್ದೇನೆ ,.,. ,.,.,. ಕಾರಣವಿಷ್ಟೇ
ನಾನೀಗ ಮದುವೆ ಯಾಗಿರುವುದು ಅವಳನ್ನೇ ,.,. ಅವಳು ಬಾಲ್ಕನಿಯಲ್ಲಿ ಕೂರುತ್ತಾಳೆ ,.ನಾ ಮಾಡುವ ಎಲ್ಲ ಕೆಲಸವನ್ನು ನೋಡುತ್ತಾ ,.,.,.,.,.
ನಾನು ಕಣ್ಣು ಮಿಟುಕಿಸಿದರೆ ,.,.,. ಅವಳು ಕಣ್ಣು ಬಿಟ್ಟು ಹೆದರಿಸುತ್ತಾಳೆ ,.,.,.!

Sunday 28 June 2009

ಯಾರು ಹುಚ್ಚರಾಗವುದು ಬೇಡ

ಇದು ಒಂದು ದಿನಸಿ ಅಂಗಡಿಯ ಎದುರಿಗಿದ್ದ ಬೋರ್ಡ್
ಒಂದು ಕಡೆ ಹೀಗೆ ಬರೆದಿತ್ತು ಸಾಲದೊರೆಯುವುದಿಲ್ಲ
ಮತ್ತೊಂದು ಕಡೆ ,.!
" ಯಾರು ಹುಚ್ಚರಾಗುವುದು ಬೇಡ "
ನೀವು ಸಾಲ ಕೇಳುತ್ತೀರಾ - ನಾನು ಕೊಡುವುದಿಲ್ಲ
ಆಗ ನೀವು ಹುಚ್ಚರಾಗುತ್ತೀರಾ .,

ನೀವು ಸಾಲ ಕೇಳುತ್ತೀರಾ - ನಾನು ಕೊಡುತ್ತೇನೆ
ನೀವು ಹಿಂದಿರುಗಿಸುವುದಿಲ್ಲ - ಆಗ ನಾನು ಹುಚ್ಚನಾಗುತ್ತೇನೆ
===== ***** ===== ****** ======
ನಂತರ ಹೀಗೆ ಬರೆದಿತ್ತು

ನಿಸ್ಪಕ್ಷಪಾತವಾದ ತೀರ್ಪು ಬಂದದ್ದು
ನನ್ನ ಅನುಭವದಿಂದ ,.
ಅನುಭವ ಬಂದದ್ದು
ನನ್ನ ಹಿಂದಿನ ಕೆಟ್ಟ ತೀರ್ಪಿನಿಂದ ,.

(ನೀವೇ ತೀರ್ಮಾನಿಸಿ ಹುಚ್ಚರಾಗಬೇಕದವರು ಯಾರು)

Saturday 27 June 2009

ಅವಳು ಸಿಕ್ಕಿದಾಗಿನಿಂದ ನಿನಗೇನಾಗಿದೆ ?

ಎ ಹೃದಯವೇ ಕೇಳು
ಎ ಹುಚ್ಚನೆ ಹೇಳು
ಆವಳು ಸಿಕ್ಕದಾಗಿನಿಂದ ನಿನಗೇನಾಗಿದೆ ಹೇಳು
ನೀನೆಲ್ಲೋ ನಿನ್ನ ಮನಸ್ಸೆಲ್ಲೋ ಈ ಅವಸ್ಥೆಯ ಕಥೆ ಏನು ಹೇಳು
ಈ ಕಲ್ಪನಾತೀತ ಆಗು ಹೋಗುಗಳ ನೋಡಲಾಗದ ಗೋಳು
ಎ ಹೃದಯವೇ ಕೇಳು , ಎ ಹುಚ್ಚನೆ ಹೇಳು,.

ನಾನು ಹೃದಯದೊಂದಿಗೆ ಹೇಳಿದೆ ಎ ಹುಚ್ಚನೆ ಹೇಳು
ಹೃದಯಬಡಿತದಲ್ಲಿ ಅಡಗಿರುವ ಆ ಶಬ್ದವೇನು ಹೇಳು
ಅದ್ಯಾವ ಹಾಡು ಹೇಳು, ಅದ್ಯಾವ ಶ್ರುತಿ ಹೇಳು
ಅದ್ಯಾವ ಮಾತು ಹೇಳು, ಅದ್ಯಾವ ಸಂಶಯ ಹೇಳು
ಎ ಹುಚ್ಚನೆ ಹೇಳು , ಎ ಹೃದಯವೇ ಹೇಳು ,.

ಅವಳು ಸಿಕ್ಕಿದಾಗಿನಿಂದ ನಿನಗೇನಾಗಿದೆ ಹೇಳು
ಚಂದ್ರ , ನಕ್ಷತ್ರ , ಪರ್ವತ , ಸರೋವರ ,
ಹೂವು , ದುಂಬಿ, ಗಾಳಿ , ಈ ಸುಂದರ ಸೃಷ್ಟಿ ,
ಈ ನೀಲಿ ಆಕಾಶ , ಎಲ್ಲವು ಎಲ್ಲವು ಹೊಸದಾಗಿದೆ
ಎ ಹುಚ್ಚ ಕೇಳು ,.,. ನಾನು ಹೇಳಿದ್ದು ಕೇಳು .

ಅದೇ ಎಲ್ಲವು ಹೊಸದಾಗಿದೆ ಅವಳು ಸಿಕ್ಕದಾಗಿನಿಂದ ಕೇಳು ,.,.,.

Friday 26 June 2009

ಏರೋಪ್ಲೇನಿನಲ್ಲಿ ಒಂದು ಪ್ರೇಮಾಯಣ(ಹೆಣ)


ಬೋರ್ಡಿಂಗ್ ಪಾಸ್ ಸಿಕ್ಕಿ, ನಂತರ ಸ್ವಲ್ಪ ಹೊತ್ತಿನಲ್ಲಿ. ಎಲ್ಲರು ಫ್ಲೈಟ್ಗೆ ಬರಬೇಕೆಂಬ ಸೂಚನೆ ಸಿಕ್ಕಿತು ಅದರಂತೆ ಎಲ್ಲರು ಸಾಲಾಗಿ ಒಬ್ಬಬ್ಬರೇ ಒಳಗೆ ಪ್ರವೆಶಿಸತೊಡಗಿದರು ಅವರೊಟ್ಟಿಗೆ ನಾನು ಹೊರಟೆ . ಒಳಗೆ ಬಂದು ಸೀಟಿನಲ್ಲಿ ಕೂರುವಾಗ ಸ್ವಲ್ಪ ಸಮಾಧಾನವಾಯ್ತು .
ಕಾರಣ ನಾಳೆ ಅಕ್ಕನ ಮಗನ ಮದುವೆ ಅದಕ್ಕೋಸ್ಕರ ಹೊರಟಿರುವುದು ೪ ದಿನಗಳಿಗಾಗಿ ಮಾತ್ರ ನಾನು ಬರುತ್ತಿರುವುದು. ಹೌದು ಈಗ ಹಿಂದಿನಂತೆ ಫ್ಲೈಟ್ ಟಿಕೆಟ್ ಗಾಗಿ ಹೋರಾಡುವುದು ಬೇಕಾಗಿಲ್ಲ , ನಮಗೆ ಬೇಕಾದಂತಹ ತಾರೀಕು ನೋಡಿ ನೆಟ್ ಮೂಲಕ ನಾವೇ ಬುಕ್ ಮಾಡಿ ಟಿಕೆಟ್ ಪಡೆಯಬಹುದು ಈ ವಿಷಯ ಬಹಳ ಒಳ್ಳೆ ವಿಷಯ.
ದುಬೈ ಇಂದ ಬೆಂಗಳೂರು ತಲುಪಲು ೩ ಗಂಟೆ ೨೦ ನಿಮಿಷ ಈ ಅವಧಿಯಲ್ಲಿ ಸುಂಧರವಾದ ಗಗನಸಖಿಯರು ಆಚೆ ಈಚೆ ನಡೆಯುತ್ತಾ ಸೇವೆಗಳಲ್ಲಿ ನಿರತರಾಗಿರುತ್ತಾರೆ. ಈ ಮದ್ಯದಲ್ಲಿ ಒಂದು ಸಿನಿಮಾ ನೋಡಿ ಮುಗಿಯುವುದರಲ್ಲಿ ನಾವು ಬೆಂಗಳೂರಿನಲ್ಲಿ ಇರುತ್ತೇವೆ. ಪ್ರತಿ ಬಾರಿಯೂ ಹೊಸ ಅನುಭವವನ್ನು ಈ ಪ್ರಯಾಣದಲ್ಲಿ ಪಡೆದಿದ್ದೇನೆ .
ಬ್ಯಾಗನ್ನು ಸರಿಯಾಗಿಟ್ಟು ನನ್ನ ಮೊಬೈಲ್ ತೆಗೆದೆ, ಅಷ್ಟರಲ್ಲಿ ಒಬ್ಬ ಯುವಕ ನನ್ನ ಪಕ್ಕದಲ್ಲಿ ಬಂದು ಕುಳಿತು ಹಲೋ ಹೇಳಿದ ಅದಕ್ಕೆ ಪ್ರತಿಯಾಗಿ ನಾನು ಹಲೋ ಹೇಳಿದೆ . ಅವನು ತನ್ನ ಮೊಬೈಲ್ ತೆಗೆದ ತೆಗೆದವನು ನನ್ನ ಮುಖ ನೋಡಿ ಬ್ಯಾಂಗಲೋರ್ ಅಂದ ಎಸ್ ಅಂದೇ ಕನ್ನಡ ಅಂದ ಹೌದು ಅಂದೇ ಕೂಡಲೇ ಅವನ ಮುಖದಲ್ಲಿ ಒಂದು ಮಂದ ಹಾಸ ಕಂಡೆ
ತನ್ನ ಮೊಬೈಲ್ ಡೈಲ್ ಮಾಡಿದ ಮನುಷ್ಯ ಆಚೆಯಿಂದ ಶಬ್ದ ಕೇಳಿದ ಕೂಡಲೇ ಮಲಯಾಳಂ ನಲ್ಲಿ ಹಲೋ ರೂಪ ಇದು ನಾನು ರಾಜೇಂದ್ರ , ಅಂದ್ರೆ ಯಾರು ಗೊತ್ತಾಯ್ತ ಅದೇ ರೀ ರೋಶನಿ ನಿಮ್ಮ ಫ್ರೆಂಡ್ ಅವಳ ಕಜ್ಹಿನ್ ನಾನು ಅಂದ ,,,, ಅಲ್ಲಾ ,,, ಅಲ್ಲಾ ನಂಗೆ ಅಂಕಲ್ ಹೇಳ್ಬೇಡಿ ನಾನು ತುಂಬ ಚಿಕ್ಕವನು ನಂಗೆ ವಯಸ್ಸು ೨೯ ಅಷ್ಟೆ ಅಂದ ,, ಅಲ್ಲಿ ಯಾರಾದರು ಇದ್ದಾರ ಒಂದು ಕೆಲಸ ಮಾಡಿ ಫೋನ್ ತಗೊಂಡು ಸ್ವಲ್ಪ ಹೊರಗೆ ಬನ್ನಿ ,, ಹಾಂ ,, ಹಾಂ ,, ರೀ ನಾನು ೨ ತಿಂಗಳ ರಜಾದಲ್ಲಿ ಊರಿಗೆ ಬರುತ್ತಿದ್ದೇನೆ ನಿಮ್ಮನ್ನು ನೋಡಿದಾಗಿಂದ ನಿಮ್ಮನ್ನು ಬಿಟ್ಟರೆ ಬೇರೆ ಯಾರನ್ನು ಮದುವೆ ಆಗಲಾರೆ ಎಂದು ತೀರ್ಮಾನಿಸಿದ್ದೇನೆ , ಆದ್ದರಿಂದ ನಾನು ನಿಮ್ಮ ಮನೆಗೆ ಬಂದು ನಿಮ್ಮ ಪೇರೆಂಟ್ಸ್ ಗೆ ಮಾತಾನಾಡುತ್ತೇನೆ ಅಂದ ,, ರೀ ರೀ ರೀ ನಂಗೆ ಅಂಕಲ್ ಹೇಳಬೇಡಿ ನಾನು ಚಿಕ್ಕವನು ಹಲೋ ಹಲೋ ಹಲೋ ,,,, ಅಲ್ಲಿಗೆ ಫೋನ್ ಕಟ್ ಆಯ್ತು. ಇಷ್ಟೆಲ್ಲಾ ಮಲಯಾಳಂನಲ್ಲಿ ಮಾತನಾಡಿದವ ಕೊನೆಯಲ್ಲಿ ಇಂಗ್ಲಿಷ್ನಲ್ಲಿ ಡಾಗ್ ಅಂದು ಫೋನ್ ಕುಕ್ಕಿದ. ಅಷ್ಟರಲ್ಲಿ ಗಗನಸಖಿ ಹೇಳತೊಡಗಿದಳು ,,,,,,,,
ಯಾತ್ರಿಕರೆ ತಮ್ಮ ಲ್ಯಾಪ್ ಟಾಪ್ ಮತ್ತು ಮೊಬೈಲ್ ಆಪ್ ಮಾಡಿರಿ ಈಗ ವಿಮಾನ ಹಾರಲಿದೆ ತಮ್ಮ ಸೀಟ್ ಬೆಲ್ಟ್ ಕಟ್ಟಿ ಕೊಳ್ಳಿರಿ ಯಾತ್ರೆ ಶುಭಾವಾಗಿರಲಿ ಎಂದು ಕೃತಕ ವಾಗಿ ನಕ್ಕಳು. ಸ್ವಲ್ಪ ಹೊತ್ತಿನಲ್ಲಿ ವಿಮಾನ ಆಕಾಶದಲ್ಲಿ ಸ್ತಿರವಾಗುತ್ತಿದಂತೆ ಲೈಟ್ ಬೆಳಗಿದವು .
ಗಗನಸಖಿಯರು ಒಂದೊಂದಾಗಿ ಜೂಸ್ , ನೀರು , ಲಿಕ್ಕರ್ , ಕೊಡತೊಡಗಿದರು ಇವನು ಅಂದರೆ ನನ್ನ ಪಕ್ಕದಲ್ಲಿದ್ದ ಭಗ್ನ ಪ್ರೇಮಿ ಭೂಪ ಒನ್ ಲಾರ್ಜ್ ಪ್ಲೀಸ್ ,,,,, ಬಂತು ಗಟ ಗಟ ಕುಡಿದ ,.
ಮತ್ತೆ ಲಾರ್ಜ್ ಬಂತು ಗಟ ಗಟ ಕುಡಿದ ,,,,, ಮತ್ತೆ ಲಾರ್ಜ್ ಬಂತು ಗಟ ಗಟ ಕುಡಿದ ,,,
ಅನಿಷ್ಟ ಬಂದು ನನ್ನ ಪಕ್ಕದಲ್ಲೇ ಕುಂತಿದಾನಲ್ಲ ಏನು ಮಾಡೋದು ,. ಮತ್ತೆ ಕೇಳಿದಾಗ ಅವ್ಳು ಕೊಡಲಿಲ್ಲ ,.ನನಗೆ ಹೇಳಿದ please you ask her she will give you ಎಂದು ಹೇಳಿದ ನಾನು ಸಾರೀ ಹೇಳಿದೆ . ಮಲಯಾಳಂ ನಲ್ಲಿ ಏನೋ ಬೈದ ಅದು ನನಗೆ ಕೇಳದ ಹಾಗೆ, ನಂತರ ಹಾಡು ಶುರುಮಾಡಿದ ,, ಸ್ವಲ್ಪ ನಗ ತೊಡಗಿದ ನಿಂಗೆ ಬಿಡಲ್ಲ ಕಣೆ ನಂಗೆ ಅಂಕಲ್ ಹೇಳ್ತಿಯೇನೆ ,,,,,.... ,,,,
ಕುಡಿದವರ ಅವಸ್ತೆ ನಿಮಗೆ ಗೊತ್ತಿರಬಹುದು ನೀವೆಲ್ಲ ನೋಡಿರುತ್ತೀರಾ ಅದರಂತೆ ವರ್ತಿಸ ತೊಡಗಿದ .
ಎ ಸಿ ಬಂದ್ ಮಾಡಿದ ಲೈಟ್ ಬಂದ್ ಮಾಡಿದ ,,,, , ಮತ್ತೆ ಎಲ್ಲ ಆನ್ ಮಾಡಿದ , ,,,,,, ಅಷ್ಟರಲ್ಲಿ ಗಗನಸಖಿ ಬೇರೆ ಯಾರಿಗೋ ಕೊಂಡು ಹೋಗುತ್ತಿದ್ದ ಒಂದು ಲಾರ್ಜ್ ನೋಡಿದ್ದೇ ಎದ್ದು ನಿಂತು ಮದುವೆ ಮನೆಯ ನಾಯಿಯಂತೆ ಎದ್ದು ಬಿದ್ದು ತೆಗೆದು ಕುಡಿದ ,, ನನ್ನ ಕಡೆ ತಿರುಗಿ ನಕ್ಕು see i got it ' ಎಂದು ಹೇಳಿದ ,.
ಟಾಯ್ಲೆಟ್ ಗೂ ಹೋಗಿ ಬಂದ , ಅಷ್ಟರಲ್ಲಿ ಗಗನ ಸಖಿ ಹೇಳತೊಡಗಿದಳು ಕೆಲವೇ ನಿಮಿಷಗಲ್ಲಿ ನಾವು ಬೆಂಗಳೂರು ವಿಮಾನ ನಿಲ್ದಾಣ ದಲ್ಲಿರುತ್ತೇವೆ ,.
ಆಗ ಇವನು ಹೇಳಿದ್ದು when i was entering flight i was verry happy ' but now i hate i hate ,,,!!!! ತುರಾಡ ತೊಡಗಿದ ,. ಓಕೆ ಬೈ ಎಂದು ಹೇಳಿ ನಡೆಯ ತೊಡಗಿದ .
ಅಷ್ಟು ಹೊತ್ತು ಸಹಿಸಿ ಕೊಂಡು ಕುಳಿತ್ತಿದ್ದ ನಾನು ಎದ್ದು ನಡೆಯಲು ಅನುವಾದೆ ,. ಒಮ್ಮೆ ಅವನಿಗೆ ನೋಡಿ ಮುಗುಳ್ ನಗುತ್ತ " ಮೊನೆ ದಿನೇಶ ಆದ್ಯಂ ತಂನ್ದೆ ಪ್ಯಾಂಟ್ ಡೆ ಜಿಪ್ ಇಡ್ರ " (ಮಗನೆ ದಿನೇಶ ಮೊದಲು ನಿನ್ನ ಪ್ಯಾಂಟ್ ಜಿಪ್ ಹಾಕೋ ) ಎಂದು ಹೇಳಿದ್ದೆ ತಡ ಅವ್ನ ಕೈಯಲ್ಲಿದ್ದ ಬ್ಯಾಗ್ ಕೆಳಗೆ ಬಿತ್ತು , ತನ್ನ ಜಿಪ್ ಹಾಕುತ್ತಾ ಸಾರ್ you know malayalam ಅಲ್ಲಿಗೆ ಅವನ ನಶೆಯು ಇಳಿದಿತ್ತು ಪ್ರೀತಿಯು ಮುಗಿದಿತ್ತು .

Tuesday 23 June 2009

ಲ್ಯಾಂಡ್ ಮಾರ್ಕ್ ನಿರ್ಮಿಸುವುದು ಹೇಗೆ ?

ಗೆ .
ಪರೇಶ್ ಕುಮಾರ್ D B S S
,,,,,,,,,,,,,,, ಬಡಾವಣೆ
ಶಿವಮೊಗ್ಗ .
ಇವರ ಮನೆ ಹತ್ರ ಅಲ್ವ ಸಾರ್ ನಿಮ್ ಮನೆ ಇರೋದು ಅಂತ ಅಂಗಡಿ ಹುಡುಗ ಹೇಳಿದಾಗ ಹೌದು ಅಂದೇ.
ಎಲ್ಲರು ಇದೆ ಅಡ್ರೆಸ್ ಕೇರಾಫ್ ಅಂತ ಬಳಸುತ್ತಾರೆ ಅಷ್ಟೊಂದು ಫೇಮಸ್ ಆಗಿದ್ದಾನೆ ಪರೇಶ. ಒಂದು ದಿನ ಬೆಳಿಗ್ಗೆ ಹಣ್ಣಿನ ಅಂಗಡಿಯಲ್ಲಿ ಹುಡುಗನ ಹತ್ತಿರ ಈ ಬಾಕ್ಸ್ ನಮ್ಮ ಮನೆಗೆ ತಲುಪಿಸಿಬಿಡು ಅಂತ ಹೇಳುತಿದ್ದಂತೆ ಅವ್ನು ಹೇಳಿದ ಗೊತ್ತು ಬಿಡಿ ಸಾರ್ ನಿಮ್ ಮನೆ ಪರೇಶ ಅವರ ಮನೆ ಹತ್ತಿರ ಅಲ್ವ ಸಾರ್ ಅಂತ ಹೇಳಿದ ಹೌದಪ್ಪ ಅಂತ ಹೇಳಿ ಹೊರಟೆ.
ಇದ್ದಕ್ಕಿದ್ದಂತೆ ಪರೇಶ ಅಷ್ಟೊಂದು ಫೇಮಸ್ ಆಗಿಬಿಟ್ಟ ಕಾರಣ ಮಾತ್ರ ಯಾರಿಗೂ ಗೊತ್ತಿಲ್ಲ , ಜೀವನದಲ್ಲಿ ಬಹಳ ಜನರು ಫೇಮಸ್ ಆಗಲಿಕ್ಕೆ ಲಕ್ಷ ಕೋಟಿ ಖರ್ಚು ಮಾಡಿದರು ಆಗುವದಿಲ್ಲ ಅಂತದರಲ್ಲಿ ಪರೇಶ ಇಷ್ಟೊಂದು ಫೇಮಸ್ ಆಗಿಬಿಟ್ಟ.
ಅಂದರೆ ಅವನ ಮನೆ ಅಡ್ರೆಸ್ ಒಂದು ಲ್ಯಾಂಡ್ ಮಾರ್ಕ್ ಆಗಿಬಿಟ್ಟಿದೆ.
ಕೆಲವರು ಲಾರಿಯವರಿಗೆ ಕೊಡುವ ಅಡ್ರೆಸ್ಸ್ ಇದೆ , ಮತ್ತೆ ಕೆಲವರು ಆಟೋ ದವರಿಗೆ ಹೇಳುವ ಅಡ್ರೆಸ್ಸ್ ಇದೆ , ಇನ್ನು ಕೆಲವರು ಹೊಸಬರು ಇಲ್ಲಿಗೆ ಬರುವಾಗ ಹೇಳುವುದು ಹೀಗೆ ಪರೇಶ್ ಕುಮಾರ್ ಮನೆ ಹತ್ರ ಬಂದ್ರೆ ಸಾಕು ನಾನು ಪಿಕ್ ಮಾಡ್ತೀನಿ , ಮುಂದುವರೆದು ಬೋರ್ವೆಲ್ ಹಾಕುವವರು ಬಂದು ಒಂದು ಬೋರೆವೆಲ್ ಸಹ ಅಲ್ಲಿ ಹಾಕಿದರು , ಕಾರಣ ಅಲ್ಲಿ ಇದ್ರೆ ಎಲ್ಲರಿಗು ಹೆಲ್ಪ್ ಆಗುತ್ತೆ ಸಾರ್ ಅಂತ ಕಾರಣ ಕೊಟ್ರು .
ಇನ್ನು ಮುಂದುವರೆದು ಜನರು ಪೋಸ್ಟಲ್ ಅಡ್ರೆಸ್ಸ್ ಬರೆಯುವಾಗ ಕೇರಾಫ್ - ಪರೇಶ ಕುಮಾರ್ D B S S ಅಂತ ಬೇರೆಯ ತೊಡಗಿದರು .
ಬ್ಯಾಂಕ್ ಮತ್ತು ಪೋಸ್ಟ್ ಆಫೀಸ್ ಎಲ್ಲ ಕಡೆ ಗೊತ್ತು ,. ಆದರೆ ನನಗೆ ಮಾತ್ರ ಈ ಸೀಕ್ರೆಟ್ ತಿಳಿಯಲೇ ಬೇಕೆಂದು ಆಸಕ್ತಿ ಯಾಯ್ತು .
ಒಂದು ದಿನ ರಾತ್ರಿ ಪರೇಶ ಹೀಗೆ ಮಾತನಾಡುತ್ತಿದ್ದಾಗ ನಾನು ಈ ವಿಷಯ ತೆಗೆದೆ ಏನೋ ಪರೇಶ ಏನಾದ್ರೂ ಆಗ್ಲಿ ನೀನು ಬಹಳ ಫೇಮಸ್ ಆದೆ ಕಣೋ ಅಂದೇ . ಹ್ಞೂ ಸಾರ್ 100/- ರೂ ಖರ್ಚು ಮಾಡಿದೀನ್ ಸಾರ್ ಅದಕ್ಕೆ ಇಷ್ಟು ಫೇಮಸ್ ಆಗಿದ್ ಸಾರ್ ಅಂದ . ಅದೆಂಗೋ ಅಂದೇ , ಅದೇ ಸಾರ್ ಅವತ್ತು ನಂ ಕಾಕಿ ಮಗಳು ಮದುವೆ ಅಂತ ಹೇಳಿದ್ನಲ್ಲ ಅವಳ್ದು ಮದುವೆ ಮುಗುದ ಮೇಲೆ ನಂಗೆ ಲೆಟರ್ ಸಿಕ್ತು ಪೋಸ್ಟ್ ಮ್ಯಾನ್ ಗೆ ಕೇಳ್ದಾಗ ನಿನ್ ಅಡ್ರೆಸ್ಸ್ ಯಾರಿಗು ಗೊತ್ತಿಲ್ಲ ಹಂಗಾಗಿ ಹುಡುಕಿ ನಿನಿಗ್ ತಲುಪಿಸಕ್ಕೆ ಲೇಟ್ ಆಯ್ತು ಅಂದ . ನಾನ್ ಹೇಳ್ದೆ ಇಲ್ಲಿ ಯಾರಿಗ್ ಕೆಳುದ್ರು ಹೇಳ್ತ್ರಿದಪ ಅಂದೇ ಅದಕ ಅವ್ನು ನಿನ್ ಮನೆ ಏನ್ ಕುತುಬ್ ಮಿನಾರ್ ಏನೋ ಎಲ್ಲರಿಗು ಗೊತ್ತು ಅನ್ನಾಕೆ ಅಂದ್ ಬಿಟ್ಟ ಸಾರ್ . ಅಷ್ಟೆ ಸಾರ್ ಅವತ್ತೇ ಪೋಸ್ಟ್ ಆಫೀಸ್ ಹೋಗಿ 100/- ರೂ ಕೊಟ್ಟು ಸುಮಾರು ಇನ್ಲ್ಯಾಂಡ್ ಲೆಟರ್ ತಂದೆ ಸಾರ್ , ಆಮೇಲೆ ಎಲ್ಲ ಲೆಟರ್ ಮೇಲೆ
ಪರೇಶ್ ಕುಮಾರ್ DBSS ,,,,, ,,,, ಶಿವಮೊಗ್ಗ . ಅಂತ ನನ್ನ ಫುಲ್ ಅಡ್ರೆಸ್ಸ್ ಬರೆದು ರೆಡಿ ಮಾಡಿಟ್ಟೆ ಸಾರ್ .

೨ ದಿನ್ಕೊಂದು ಲೆಟರ್ ನಾನು ಪೋಸ್ಟ್ ಮಾಡಕ್ ಶುರು ಮಾಡ್ದೆ ಸಾರ್ ಮೊದಲು ನಾನು ಪೋಸ್ಟ್ ಮ್ಯಾನ್ ಬರ್ಬೇಕಾದ್ರೆ ಮನೆಹತ್ರ ನಿಂತು ಕೆಳಕ ಶುರು ಮಾಡ್ದೆ ನಂದ ಏನಾರ ಲೆಟರ್ ಐತೆನ್ರಿ ಅಂತ . ಮತ್ ಶುರು ಆತ್ ನೋಡ್ರಿ ಸಾರ್ , ೨ ದಿನ ೩ ದಿನಕ್ ವಾರಕ್ ೨, ೩ ಲೆಟರ್ ಬರಾಕ್ ಶುರು ಆದವು ಸಾರ್ , ಬೇರೆ ಬೇರೆ ಊರಿಗ್ ಹೋಗವ್ರ್ ಹತ್ರ ಎಲ್ಲ ನನ್ನ ಲೆಟರ್ ಕೊಟ್ಟಿ ಆಲ್ ಪೋಸ್ಟ್ ಮಾಡ್ರಿ ಅಂತ ಹೇಳ್ದೆ ಅವ್ರು ಅಲ್ಲಿ ಪೋಸ್ಟ್ ಮಾಡ್ತಿದ್ರು ಅದು ಇಲ್ಲಿಗ್ ಕರ್ಟ್ ೪ , ೬ ದಿನದಾಗ್ ಬರಾಕ್ ಶುರು ಆದವು ಸಾರ್ ಅದು ಅಲ್ದೆ ನನ್ನ ಅಡ್ರೆಸ್ಸ್ ಅಷ್ಟೆ ಸ್ಟ್ರಾಂಗ್ ಅಯಿತ್ ಸಾರ್ ,. ಹೆಂಗಾತ್ ಅಂದ್ರೆ ಯಾರಿಗೂ ಲೆಟರ್ ಇಲ್ಲದಿದ್ದರೇನು ನನಗ ಮಾತ್ರ ಲೆಟರ್ ಬರ್ತಿದ್ವು ಸ್ಸಾರ್ ಅಷ್ಟೊಂದು ನಾನ್ ಪೋಸ್ಟ್ ಮಾಡ್ತಿದ್ದೆ ಅಂದ.
ಅದೆಲ್ಲ ಸರಿ ನೀನು " ಪರೇಶ್ ಕುಮಾರ್ DBSS " ಅಂತ ಬರದು ಎಲ್ಲಾರು ನೀನು ಏನೋ ದೊಡ್ಡ ಆಫೀಸರ್ ಅಂತ ತಿಲ್ಕೊಂಡಿದಾರೋ ಅಂದೇ ಹೋ ಹೋ ಅದ ಸಾರ್ ಹ್ಞೂ ಸಾರ್ ಅದು ಏನಂದ್ರ ,.
D B S S ,,,,, ಧಾರವಾಡ - ಬಿಟ್ಟು - ಶಿವಮೊಗ್ಗ - ಸೆಟಲ್ ,,,..,,,..,,..!!!!!!!

ರೀ ಏನೂಂದ್ರೆ ,,,,

ಯು ವೆರಿ ನೈಸ್
ಯು ವೆರಿ ಸ್ಮಾರ್ಟ್
ಯು ವೆರಿ ಲವ್ಲಿ
ಯು ವೆರಿ ಲಕ್ಕಿ
ಯು ವೆರಿ ಬ್ಯೂಟಿ
ಅಯ್ಯೋ ಕುಶಿ ನೋಡು - ಇದು ನನಗೆ ಬಂದ ಎಸ್ . ಎಂ . ಎಸ್ ಜಸ್ಟ್
ನೀವು ಓದಲಿ ಅಂತ ಕಳಿಸಿದ್ದು ಕಣ್ರೀ ,.,
ರೀ ಏನೂಂದ್ರೆ ,,..,,!! !!!!

Monday 22 June 2009

ಪರೀಕ್ಷೆಯಲ್ಲಿ ಪರೇಶ

ಪರೀಕ್ಷೆಯಲ್ಲಿ ಪರೆಶನಿಗೆ ಒಂದು ಪ್ರಶ್ನೆ ಹೀಗಿತ್ತು

ಚಾಲೆಂಜ್ ಎಂಬ ವಿಷಯಕ್ಕೆ ಒಂದು ಸರಿಯಾದ ಉದಾಹರಣೆ ಕೊಡಿ ?

ಅದಕ್ಕೆ ಪರೇಶ ಪೂರ್ತಿ ಪೇಪರ್ ಖಾಲಿ ಬಿಟ್ಟು ಕೊನೆಯಲ್ಲಿ ಹೀಗೆ ಬರೆದ

" ದಂ ಇದ್ದರೆ ಪಾಸ್ ಮಾಡಿ ನೋಡಾಣ "

ಕೆಲಸದವಳು

ಹೆಂಡತಿ : ರೀ ಮನೇಲಿ ಒಂದೋ ನಾನು ಇರಬೇಕು ಇಲ್ಲ ನಿಮ್ಮ ಅಮ್ಮ ಇರಬೇಕು ಏನ್ ಹೇಳ್ತೀರಾ ?

ಗಂಡ : ಇಬ್ಬರು ನಡೀರಿ ಕೆಲಸದವಳು ಮಾತ್ರ ಇರಲಿ

ಶರತ್ತುಗಳು

" ಈಗ ಎಲ್ಲಾ ವಿಷಯಗಳಲ್ಲಿ " Production Date - Expiry Date " ಕಾಣ ಬಹುದು ಇದು
" ಸ್ನೇಹ ಸಂಭಂದಗಳಿಗೂ " ಅನ್ವೈಸುತ್ತದೆ "
— " ಪರೇಶ "
ಶರತ್ತುಗಳು

ಸಂಪೂರ್ಣ ಕಥೆ ಹೇಳುವ ಚಿತ್ರ


" ಇದು ನನ್ನ ಭಾರತ "ಪ್ರೀತಿ ವಿಶ್ವಾಸ ಗೌರವ ಆತ್ಮೀಯತೆಸಂತೋಷ ಸಂಕೋಚ ಭಾವನೆಗಳ ಆಗರಕರುಣೆ ದಯೆ ಕನಿಕರ ಎಲ್ಲವು ತುಂಬಿರುವಸಾಗರ ,.,.,,,.,.,.,.,.,.

Saturday 20 June 2009

ಮಳೆ (ಕಣ್) ನೀರಿನ ಹನಿ


ಗೆಳೆಯ ತುಂಬ ಸಂತೋಷ ಇಂದು ಮಳೆ ಬಂದಿದೆ ಕಾರಣ ನನ್ನ ಕಣ್ಣೀರು ಕಾಣುವುದಿಲ್ಲ
ಮಿಂಚಿನ ಬೆಳಕಲ್ಲಿ ನನ್ನನ್ನು ನೋಡಬೇಕೆಂದು ನೀನು ಬಂದೆ
ಸದ್ಯ ಗುಡುಗಿನ ಶಬ್ದದಿಂದ ಹೆದರಿ ನೀ ನನ್ನ ನೋಡಲಿಲ್ಲಾ.,.

ಗೆಳೆಯ ನಿನ್ನ ಮೇಲೆ ನನಗೆ ಕೋಪವಿಲ್ಲ ಕಾರಣ
ನೀನು ಮಳೆ ನೆನೆಯಬಾರದೆಂದು ನನ್ನ ಛತ್ರಿಯನ್ನು ನೀನು ತೆಗೆದುಕೊಂಡೆ
ಮತ್ತೆ , ನೀನು ನನ್ನ ಜೀವನದ ಸೂರೆಲ್ಲಿ ಕೊಡಿಸುತ್ತಿಯ ಎಂಬುದ ನಾನು ಅರಿತು ಕೊಂಡೆ .,.

ಗೆಳೆಯ ನೀ ನನ್ನ ಗುಲಾಬಿ ಎಂದು ಕರೆದಾಗ ಸೊಂತೋಷ ಗೊಂಡೆ
ಸದ್ಯ ನಾನಿಂದು ಗುಲಾಬಿಯಂತೆ ಆಗಲಿಲ್ಲವಲ್ಲ ಅದರಿಂದ ನಾ ತೃಪ್ತಿ ಗೊಂಡೆ
ನೀನಿಂದು ನನ್ನಂಥ ಬೇರೆ ಸುಮಾರು ಹುಡುಕಿ ಕೊಂಡೆ .,.

ಗೆಳೆಯ ,,,ಆದರೇನು ಈಗ ಹುಡುಕಿ ಕೊಂಡವರಲ್ಲಿ ನಾನಿಲ್ಲವಲ್ಲ ಅದರಿಂದ ನಾ ಸಮಾಧಾನ ಗೊಂಡೆ
ಈ ಮಳೆ ನಿಂತ ಮೇಲೆ ಮತ್ತೊಂದು ಶುಬ್ರ ಆಕಾಶ ಕಂಡಿತಲ್ಲ ಅದರಿಂದ ನಾ ಪುಳಕಿತ ಗೊಂಡೆ
ನಾನು ನನ್ನ ಹೆಸರಿನ ಶುಬ್ರಃ ಗುಲಾಬಿಯಾಗಿ ಈ ಪ್ರಪಂಚವನ್ನು ಮತ್ತೆ ಮತ್ತೆ ಮತ್ತೆ ,,,, ಕಂಡೆ ,.,.,.,.

Friday 19 June 2009

ಇವನು ಆ ರೀತಿಯೋ ಅಥವಾ ಅವರು ಈ ರೀತಿಯೋ ?

ಇವನು ಆ ರೀತಿಯೋ ,,,,,,,, ಅಥವಾ ,,,,,,,, ಅವರು ಈ ರೀತಿಯೋ ?
ಚಿತ್ರ 1 2
3 4
5 6
ಚಿತ್ರವನ್ನು ಸರಿಯಾಗಿ ನೋಡಿ ನೀವೇ ತೀರ್ಮಾನಿಸಿ ಕಾರಣ ,
ಚಿತ್ರ ಬರೆದವನು ಆ ರೀತಿಯ ಮನುಷ್ಯನೋ, ಅಥವಾ ಆ ಚಿತ್ರ ಅಂಟಿಸಿರುವಲ್ಲಿ ಆ ರೀತಿಯ ಜನರಿದ್ದಾರೋ ?

ಕಾರಣ
ಚಿತ್ರ 1 . ಇದು ಸಾಮಾನ್ಯವಾಗಿ ಕಾಣ ಬರುವ ಚಿತ್ರ . ರಾಜನಂತೆ ಕೂತಿದ್ದಾನೆ .
ಚಿತ್ರ 2 . ಇದು ಸಾರ್ವಜನಿಕ ಸ್ಥಳಗಳಲ್ಲಿ ಮನುಷ್ಯನು ತಿಳಿದು ತಿಳಿದು ಮಾಡುವಂತ ವಿಷ್ಯ.
ಚಿತ್ರ 3 . ಇದು ಮನುಷ್ಯ ಅಲ್ಲಿ ಹುಡುಕುವಂತದು ಏನಿದೆ.
ಚಿತ್ರ 4 . ಇದು ಕಷ್ಟ ಪಟ್ಟು ಹತ್ತಿ ಮಂಗನಂತೆ ಕೂತಿದ್ದಾನೆ.
ಚಿತ್ರ 5 . ಇದು ಸರೋವರವು ಅಲ್ಲ ಸಮುದ್ರವು ಅಲ್ಲ ಹಾಗಾದರೆ ಅಲ್ಲಿ ಗಾಣ ಹಾಕಿ ಏನು ಹಿಡಿಯುತ್ತಿದ್ದಾನೆ.
ಚಿತ್ರ 6 . ಇದು ಮನುಷ್ಯ ನಾಯಿ ಆದನೋ ಎಂಬ ಸೂಚನೆಯೋ .

(ಹೀಗೆ ಸುಮ್ಮನೆ ನಕ್ಕು ಬಿಡಿ)

Wednesday 17 June 2009

ಕೆಸರಿನಲ್ಲಿ ಮುಳುಗೆದ್ದ ರಾಯ್ದು

ಒಂದು ದಿನ ಮದ್ಯಾಹ್ನ ನಾನು ಮನೆಗೆ ಬರುತ್ತಿದ್ದಾಗ ನಮ್ಮ ಬಿ. ಹೆಚ್. ರೋಡ್ ನಲ್ಲಿರುವ ವಿನಾಯಕ ಟಾಕಿಸ್ ಪಕ್ಕದಲ್ಲಿರುವ ಲಾರಿ ಸ್ಟ್ಯಾಂಡ್ ಹತ್ತಿರ ದೊಡ್ಡ ಜನ ಸಮೂಹ ಆಚೆ ಈಚೆ ಓಡುತ್ತಿದ್ದರು.
ಕಾರಣ ಇಷ್ಟೇ ನಮ್ಮ ' ರಾಯ್ದು ' ತನ್ನ ಎರಡು ಕೈಗಳ ತುಂಬ ಕೆಸರನ್ನು ಮಾಡಿಕೊಂಡಿದ್ದಾನೆ , ಅವನ ಎದುರು ಒಂದು ವೆಕ್ತಿ ಬಿಳಿ ವಸ್ತ್ರದಲ್ಲಿದ್ದ ಮನುಷ್ಯ ಸ್ವಲ್ಪ ದೊರದಲ್ಲಿ ನಿಂತು ರಾಯ್ದು ಗೆ ಬೈತಿದ್ದಾನೆ , ಆ ಬಿಳಿವಸ್ತ್ರದಲ್ಲಿದ್ದ ವೆಕ್ತ್ಹಿಯ ಮುಖ ಬಟ್ಟೆ ಎಲ್ಲಾ ಕೆಸರಿನಲ್ಲಿ ಮುಳುಗಿದೆ. ಆ ರಂಗ ನೋಡಿದ ಕೂಡಲೇ ತಿಳಿದು ಹೋಯ್ತು ರಾಯ್ದು ಮಾಡಿರುವ ಕೆಲಸ ಇದು ಅಂತ. ಕಾರಣ ಅಲ್ಲೇ ಎದುರು ಮಹಾ ಸಾಗರದಂತ ದೊಡ್ಡ ಚರಂಡಿ ಇದೆ.
ಈ ಚರಂಡಿ ಎಂದರೆ ನಗರದ ಎಲ್ಲ ಕೊಳಕು, ತಳುಕು, ಹೊಳಪು, ಹೊತ್ತು ಸಾಗುವ ಚರಂಡಿ-ಸಾಗರ ಇದ್ರಲ್ಲಿ ಯಾರಾದರು ಬಿದ್ದರೆ ಅವನು ಶುದ್ದಃನಾಗಬೇಕಾದರೆ ನೇರ ಗಾಜನೂರು ಡ್ಯಾಂನಲ್ಲಿ ಹೋಗಿ ಮುಳುಗಬೇಕು ಅಷ್ಟೆ.
ಒಂದು ಕಾಲದಲ್ಲಿ ಸುಮಾರು ೨೦ -೩೦ ಲಾರಿಗಳ ಸಾಹುಕಾರನಾಗಿದ್ದ ರಾಯ್ದು ಈಗ ಇಲ್ಲಿ ಎರಡು ಕೈಗಳಲಿ ಕೆಸರು ಮಾಡಿಕೊಂಡು ನಿಂತು ಎಲ್ಲರಿಗು ಹೆದರಿಸುತ್ತ ' ಹಲ್ಕಾ ನನ್ಮಕ್ಳ ' ಯಾರದ್ರು ಹತ್ರ ಬಂದ್ರೆ ನೋಡ್ರಿ ಚಂದ್ರು ಗೆ ಹೆಂಗೆ ಕೆಸರು ಹಾಕಿದಿನೋ ಹಂಗೆ ನಿಮಗೂ ಹಾಕ್ತೀನಿ ಅಂತ ಕೂಗ್ತಾ ಇದ್ದಾ .

ಛೆ ! ಮನುಷ್ಯ ಯಾವುದಾದರು ಕೆಟ್ಟ ಚಟಗಳಿಗೆ ದಾಸನಾದರೆ ಅವನ ಪರಿಸ್ತಿತಿ ಹೇಗೆ ಆಗುತ್ತದೆ ಎಂಬುದಕ್ಕೆ ರಾಯ್ದು ಒಂದು ಜೀವಂತ ಉದಾಹರ್ಣೆಯಾಗಿದ್ದ. ೨೦- ೩೦ ಲಾರಿಗಳ ಸಾಹುಕಾರ, ಆ ಘನತೆ ಗಾಂಭೀರ್ಯ, ಆ ಗೌರವ ಅವನ ದೊಡ್ಡ ಮನೆ, ಕಾರು , ಬೆಳಗ್ಗೆ ಅಲ್ಲಿ ನಿಲ್ಲುತ್ತಿದ್ದ ಕೆಲಸದ ಜನರ ಸಾಲು, ಅವನಿಗಿದ್ದ ರಾಜಕೀಯ ಸಂಬಂದಗಳು, ಅವನ ಎದುರು ನಿಂತು ಮಾತನಾಡುವ ಧೈರ್ಯ ಯಾರಿಗಿತ್ತು , ಅವನು ಎದುರು ಬರುತ್ತಿದ್ದರೆ ಜನ ಅವನಿಂದ ದೂರ ದೂರ ಸರಿಯುತ್ತಿದ್ದರು ಆ ಗೌರವ ಅವನಿಗಿತ್ತು .
ಆ ರಾಯ್ದುವಿಗೆ ಇಂದು ಜನ ಹೆದರಿ ಆಚೆ ಈಚೆ ಓಡುತ್ತಿದ್ದಾರೆ ' ಗೌರವ ದಿಂದಲ್ಲ ' ಅವನ ಕುಡಿತದ ವಾಸನೆ ಇಂದ,
ಆ ಕೈಗಳಲಿ ತುಂಬಿರುವ ಕೆಸರಿಂದ, ಅವನ ಬಾಯಿ ಇಂದ ಹೊರಡುತ್ತಿರುವ ಕೆಟ್ಟ ಮಾತುಗಳಿಂದ,
ಅದೇ ಹೇಳೋದು ಮನುಷ್ಯ ಹಾಳಾಗಲು ಒಂದು ಕೆಟ್ಟ ಚಟ ಸಾಕು ಅಲ್ಲಿಂದ ಅವನ ಅವನತಿ ಪ್ರಾರಂಭ .
ಒಮ್ಮೆ ಕುಡಿತ ಪ್ರಾರಂಭವಾದರೆ ಸಾಕು ಬಾಕಿ ಚಟಗಳು ಅದರದೇ ಸಂಗಾತಿಗಳಾಗಿ ಬರ್ತ್ತವೆ .
ಅಷ್ಟು ದೊಡ್ಡ ಸಾಹುಕಾರ ಇವತ್ತಿನ ಪರಿಸ್ಥಿತಿಗೆ ತಲುಪಿರ್ವುದು ಹೇಗೆ ಗೊತ್ತಲ್ಲ .
ಈಗವನ ಬಳಿ ಏನು ಇಲ್ಲ, ಅಲ್ಲಿ ಇಲ್ಲಿ ರೋಡ್ ಸೈಡಲ್ಲಿ ಮಲುಗುತ್ತಾನೆ , ಅವನದೇ ಲಾರಿಗಳು ಸಾಲಾಗಿ ನಿಲ್ಲುತಿದ್ದ ಜಾಗದಲ್ಲಿ ಈಗ ಬೇರೆಯವರ ಲಾರಿಗಳು ನಿಲ್ಲುತ್ತಿವೆ. ಇವನ ಬಳಿ ಕೆಲಸ ಮಾಡುತ್ತಿದ್ದವರೆಲ್ಲ ಈಗ ಸಾಹುಕಾರ್ ಆಗಿದ್ದಾರೆ . ಇವನೀಗ ಬ್ರೋಕರ್ ಅಂದರೆ, ಆಚೆ ಈಚೆ ಲಾರಿ ಬಾಡಿಗೆ ಕೇಳಿ ಬರುವವರನ್ನು ಸ್ಟ್ಯಾಂಡ್ ತಂದು ಅವರಿಗೆ ಲಾರಿಯವರಿಗೆ ಪರಿಚೈಸುತ್ತಾನೆ ಇದರಿಂದ ಲಾರಿಯವರು ಇವನಿಗೆ ೫- ೧೦ ರೂ. ಕೊಡುತ್ತಾರೆ , ತಕ್ಷಣ ಇವನು ಸಿಕ್ಕ ಹಣದಲ್ಲಿ ಹೋಗಿ ಕುಡಿದು ಬರುತ್ತಾನೆ, ಇದಿಷ್ಟು ಇವನ ದಿನಚರಿ .
ಇಷ್ಟೆಲ್ಲಾ ಆದರು ಇವನ ಮಾತುಗಳಿಗೆ ಕೊರತೆ ಇಲ್ಲ, ದೊಡ್ಡ ದೊಡ್ಡ ಮಾತುಗಳು ಕುಡಿದಾಗ ಡೈಲಾಗ್ ಬೇಕಾದಷ್ಟು ಇರುತ್ತವೆ ಆದರೆ ಅದೆಲ್ಲ ಈಗ ಯಾರು ಕೇರ್ ಮಾಡುತ್ತಾರೆ, ಪೈಲ್ವಾನಂತೆ ಇದ್ದ ರಾಯ್ದು ಈಗ ನುಗ್ಗೆ ಕಾಯಿ ತರ ಇದ್ದಾನೆ.
ಕುಡಿತ enjoy ಹೇಳುತಿದ್ದವನು end-joy ಆಗಿದ್ದಾನೆ.
ಇಂದು ಆದದ್ದು ಇಷ್ಟೇ ಲಾರಿ ಬಾಡಿಗೆ ಬೇಕು ಅಂತ ಚಂದ್ರು ಸಾಹುಕಾರ್ ಸ್ಟ್ಯಾಂಡ್ ಗೆ ಬಂದಾಗ ಅವರನ್ನು ಲಾರಿಯವರ ಮದ್ಯೆ ಮಾತನಾಡಿಸುತ್ತ ರಾಯ್ದು ತನ್ನ ಹಳೆ ಪವರ್ ತೋರಿಸುತ್ತಾ ಚಂದ್ರು ಸಾಹುಕಾರ್ ಗೆ ಏನೋ ಬೈದು ಬಿಟ್ಟ, ಅದನ್ನು ಕೇಳಿದ ಚಂದ್ರು ರಾಯ್ದುನ ಕೆನ್ನೆಗೆ ಬಲವಾಗಿ ಹೊಡೆದ ಎಲ್ಲರು ನಗ ತೊಡಗಿದರು, ಇದರಿಂದ ಅವಮಾನಿತನಾದ ರಾಯ್ದು ಗೆ ಚಂದ್ರು ಗೆ ಹಿಂತಿರುಗಿಸಿ ಹೊಡೆಯಲು ಆಗವುದಿಲ್ಲ ಅಷ್ಟು ಶಕ್ತಿಯು ಇಲ್ಲ , ತಕ್ಷಣ ಹೋಗಿದ್ದೆ ಎದುರಿನ ಚರಂಡಿಯಿಂದ ಎರಡು ಕೈಗಳಲಿ ಕೆಸರು ಬಾಚಿ ತಂದು ಚಂದ್ರು ಸಾಹುಕಾರನ ಮೇಲೆ ರಪ್ ಅಂತ ಬೀಸಿ ಒಗೆದ , ಇದು ಕ್ಷಣ ಮಾತ್ರದಲ್ಲಿ ನಡೆದು ಹೋಯ್ತು , ಚಂದ್ರು ಮುಖ ಬಟ್ಟೆ ಎಲ್ಲ ಕೆಸರಿನಲ್ಲಿ ರಾಡಿಯಯಿತು. ಸೂಳೆ ಮಕ್ಳ ಅವನ್ ಹೊಡ್ದಾಗ ಎಲ್ಲ ನೋಡಿ ನಕ್ಕ್ತೀರೆನ್ರೋ , ಅಂತ ಆಚೆ ಈಚೆ ಇದ್ದವರಿಗೆಲ್ಲ ತನ್ನ ಕೆಸರಿನ ಕೈ ಇಂದ ಹೆದರಿಸ ತೊಡಗಿದ,.
ಒಂದು ಕಾಲದಲ್ಲಿ ಇವನ ಗೌರವ ಗಾಮ್ಬ್ಹಿರ್ಯಕ್ಕೆ ಹೆದರುತ್ತಿದ್ದ ಜನ ,.! ಇಂದು ಇವನ
ಕೆಸರು, ವಾಸನೆ, ಕೊಳಕು ಮಾತುಕೇಳಿ ಹೆದರಿ ಓಡುತ್ತಿದ್ದಾರೆ . ಯಾರು ಗೆಲ್ಲುತ್ತಾರೆ ?
ಯಾರು ಗೆಲ್ಲುತ್ತಾರೆ ?

Monday 15 June 2009

ನಮ್ಮ ಯಜಮಾನರಿಗೆ ಬುದ್ದಿ ಇಲ್ಲ ಕಣೇ

ನೀತು,,,, ನೋಡೇ ನಮ್ಮಯೇಜಮಾನರಿಗೆ ತೀರಾ ಬುದ್ದಿ ಇಲ್ಲ ಕಣೆ , ಒಂದೂ ಗೊತ್ತಾಗಲ್ಲ .
ಹೌದು ಕಣೇ ಸುನೀ,,,, ನಿನನ್ನ್ ಮದುವೆ ಆಗಿದ್ದಾರೆ ಅಂದಾಗ್ ಲೇ ಗೊತ್ತಾಯ್ತು ಅವ್ರಿಗ್ ಬುದ್ದಿ ಇಲ್ಲ ಅಂತ .
ಆದ್ರೆ ನೀತು ,,, ನಿನ್ನ್ ಯಜಮಾನ್ರು ತುಂಬ ಬುದ್ದಿವಂತ್ರು ಕಣೇ ,,, ಅದ್ಹೇಗೆ ?
ಅವ್ರು ದಿನಾ ನಂಗೆ ಎಸ್ ಎಂ ಎಸ್ / ಎಂ ಎಂ ಎಸ್ / ಇ ಮೇಲ್ / ರೋಜ್ಹ್ ಎಲ್ಲಾ ಕಳಸ್ತಾರೆ ಕಣೇ ,,,,,
!!!!!! ??????

( ಹೀಗೆ ನಕ್ಕು ಬಿಡಿ )

ನನ್ನ ಕನಸಿನ ರಾಣಿ ಹೀಗಿರಬೇಕು

ನನ್ನ ಕನಸಿನ ರಾಣಿ ಹೀಗಿರಬೇಕು ,.
5'6' ಎತ್ತರವಿರಬೇಕು
ಅವಳ ಜೀನ್ಸ್ ಟೈಟ್ ಇರಬೇಕು
ಅವಳ ಮುಖ ಬ್ರೈಟ್ ಇರಬೇಕು
ಅವಳ ತೂಕ ಲೈಟ್ ಇರಬೇಕು
ವಯಸ್ಸಲ್ಲಿ ವೆತ್ಯಾಸ ಸ್ಲೈಟ್ ಇರಬೇಕು
ಸ್ವಲ್ಪ ಕ್ವೈಟ ಇರಬೇಕು ,.,. ನನ್ನ ಕನಸಿನ ರಾಣಿ ಹೀಗಿರಬೇಕು

ರಸ್ತೆಯಲ್ಲಿ ನಡೆಯುವಾಗ ಎಲ್ಲರು ಹೇಳಬೇಕು ಅಲ್ಲಿ ನೋಡಿ , ಅಲ್ಲಿ ನೋಡಿ ,
ಗುಂಪಲ್ಲಿ ಎಲ್ಲರೂ ಹೇಳಬೇಕು ದಾರಿ ಬಿಡಿ , ದಾರಿ ಬಿಡಿ,
ಭಾರತಿಯ ಸುಂದರಿಯಾಗಿರಬೇಕು
ಅತ್ತೆಯ ಸೇವೆಯೇ ಅವಳ ಗುರಿಯಾಗಿರಬೇಕು ,.
ನನ್ನ ಕನಸಿನ ರಾಣಿ ಹೀಗಿರಬೇಕು

ಪಕ್ಕದವನು ನೋಡಿದರೆ ಕೈಯಲ್ಲಿ ಕತ್ತಿ ಇರಬೇಕು
ರಾತ್ರಿ ಊಟಕ್ಕೆ ಮೊಂಬತ್ತಿ ಎದುರು ಇರಬೇಕು
ಇಬ್ಬರಲ್ಲೂ ಪ್ರೀತಿಯ ಮಾತೆ ಇರಬೇಕು
ಇಬ್ಬರು ಸೇರಿದರೆ ಮನಸ್ಸು ಹಗುರಾಗಿರಬೇಕು
ಓ ಪ್ರಭು ನಿನ್ನ ಅರ್ಚನೆಯೇ ಅವಳ ಜೀವನವಾಗಿರಬೇಕು
ಈ ಕವಿತೆ ಓದಿದವರೆಲ್ಲ ನಾನು ಹೇಳಿದಂತ ಹುಡುಗಿಯೇ ಹುಡುಕುತ್ತಿರಬೇಕು ,.
ನನ್ನ ಕನಸಿನ ರಾಣಿ ಹೀಗಿರಬೇಕು

ಓ ಪ್ರಭು ನಾನು ಹೇಳಿರುವದರಲ್ಲಿ 000000.01% ಆದ್ರು ಸರಿಯಾಗಬೇಕು
ಇಂತ ನನ್ನ ಕನಸಿನ ರಾಣಿ ಸಿಕ್ಕರೆ ನನ್ನ ಜೀವನ ಸಕ್ಕರೆ
ಪ್ರತಿಯೊಬ್ಬರ ಆಸೆಗಳು ಹೀಗೆ ಆದರೆ ಅವರ ಜೀವನ ಪೂರ್ತಿ ಸಕ್ಕರೆ
ಸೃಷ್ಟಿಯಾ ಆಸೆಯು ಇದೆ ಆಗಿರಬೇಕು
ಸೃಷ್ಟಿ ಕರ್ತನ ಸಾಫ್ಟ್ ವೇರ್ ನಲ್ಲಿ ಯಾವುದೇ ವೈರಸ್ ಬರದೆ ಇರಬೇಕು
ಓ ಪ್ರಭುವೆ ಎಲ್ಲಾದರು ಒಂದು ಈ ರೀತಿ ಹುಟ್ಟಿ ಬರಬೇಕು ,.
ನನ್ನ ಕನಸಿನ ರಾಣಿ ಹೀಗಿರಬೇಕು

( ಓದಿದ ನಂತರ ಯಾರು ಅಸೂಯೆ ಪಡದಿರಬೇಕು ) ,. ನನ್ನ ಕನಸಿನ ರಾಣಿ ಹೀಗಿರಬೇಕು

Saturday 13 June 2009

ಡಿಟೆಕ್ಟಿವ್ ಪರೇಶ ಮತ್ತು ಕಾಲಿ ಡಬ್ಬ

ಗೊದಾಮಣಿ ಮದುವೆ ಫಿಕ್ಸ್ ಆಯ್ತು ಸಾರ್ ಮುಂದಿನ ತಿಂಗಳು ಮದುವೆ ಅಂತ ಸರೋಜಮ್ಮ ತನ್ನ ಮಗಳ ವಿಷ್ಯ ಹೇಳಿದಾಗ ನಾನು ತಕ್ಷಣ ಕೇಳಿದೆ ಅವಳು ಒಪ್ಪಿದಾಳ ಅಂತ. ಏನ್ಮಾಡೋದ್ ಸಾರ್ ಒಳ್ಳೆ ಗಂಡು ಸಿಕ್ಕಿದಾನೆ ಅವ್ನು ಒಳ್ಳೆ ಕಲ್ತಿದಾನೆ ದೊಡ್ಡ ಬಿಸಿನೆಸ್ ಮ್ಯಾನ್ ಸಾರ್. ಭದ್ರಾವತಿಯಲ್ಲಿ ದೊಡ್ಡ ಶೋ ರೂಂ ಇದೆಯಂತೆ ಸಾರ್ , ನೋಡಕ್ಕೂ ಚೆಂದ ಇದಾನ್ ಸಾರ್, ಅಂತ ಹೇಳಿ ಹೋದ್ರು .
ಇಷ್ಟು ಒಳ್ಳೆ ಹುಡುಗಿ ಒಳ್ಳೆ ನಡತೆ Msc, ಮಾಡಿದ್ದಾಳೆ ಕೆಲಸದ ನಿರೀಕ್ಷೆಯಲ್ಲಿ ಕಾಯುತ್ತಿದ್ದಾಳೆ ಈಗಷ್ಟೇ ಕಾಲೇಜ್ ಮುಗಿಸಿ ಬಂದ ಹುಡುಗಿಗೆ ತಕ್ಷಣ ಮದುವೆ , ಮನಸ್ಸಿಗೆ ಕಸಿವಿಸಿ ಉಂಟು ಮಾಡಿತು. ಒಳ್ಳೆ ಹೋರಾಟಗಾರ್ತಿ ಧ್ಯರ್ಯವಂತೆ ಚುರುಕು ಬುದ್ದಿ ಸ್ನೇಹ ಭಾವ ಎಲ್ಲ ಹೆಂಗಸರಿಗೂ ಒಂದಲ್ಲಾ ಒಂದು ರೀತಿ ಸಹಾಯಮಾಡುತ್ತಾಳೆ ಪ್ರತ್ಯೇಕವಾಗಿ ಗುರುಹಿರಿಯರಬಗ್ಗೆ ಬಹಳ ಗೌರವವಿದೆ ಯಾವಾಗಲು ನೌಕರಿಯ ವಿಷ್ಯ ಮಾತಾಡ್ತಾಳೆ . ಇನೂ ತುಂಬ ಕಲಿಯಬೇಕೆಂಬ ಆಸೆ ಇದೆ ಆದರೆ ಆರ್ಥಿಕ ಮುಗ್ಗಟ್ಟು ಆದರು ಛಲವಿದೆ .
ನಾನು ತಕ್ಷಣ ಪರೆಶನಿಗೆ ಕಳಿಸಿ ಅವಳನ್ನು ಕರೆಸಿದೆ ಬಂದು ಅಳತೊಡಗಿದಳು ನಾನು ಸ್ವಲ್ಪ ಸಮಾಧಾನದಿಂದ ಅವಳಿಗೆ ಕೇಳಿದೆ
ನೀನು ಹುಡ್ಗನ್ನ ನೋಡಿದಿಯ ಇಲ್ಲ ಅಂದಳು ಫೋಟೋ ನೋಡ್ದೇ ಅಂದ್ಲು . ನಿಂಗೆ ಇಷ್ಟ ಆಯ್ತಾ ಅಂದೇ ಅದಕ್ಕವಳು ನಂಗೆ ಈಗ ನೌಕರಿ ಮುಖ್ಯ ಮದುವೆ ಅಲ್ಲ ಅಂದ್ಲು , ಅದಕ್ಕೇನಂತೆ ಮದುವೆ ಆದ್ಮೇಲೆ ಕೆಲ್ಸಕ್ಕೆ ಹೋಗಬಹುದಲ್ಲ ಅಂದೇ , ಯಾರಿಗ್ ಗೊತ್ತು ಸಾರ್ ಅಮೇಲ್ ಅವುನ್ ಕಳುಸ್ತಾನೋ ಇಲ್ವೋ , ಸಾರ್ ನೀವು ಸ್ವಲ್ಪ ನಮ್ ತಾಯಿಗೆ ಹೇಳ್ರಿ ಸಾರ್ ನನ್ ನೌಕರಿ ಸಿಗೋ ತನಕ ಕಾಯಲಿ ಅಂದ್ಲು ಆಯಿತಮ್ಮ ನೋಡಾಣ ನಾನ್ ಮಾತಾಡ್ತೀನಿ ಅಂದೇ .
ಅಷ್ಟರಲ್ಲಿ ಪರೇಶ ಸಾರ್ ಅವ್ನು ದೊಡ್ಡ ಬಿಸಿನೆಸ್ ಮ್ಯಾನ್ ಅಂತೆ ಸಾರ್ ಇವ್ಳ್ ತಾಯಿ ಹೇಳುದ್ಲು ಅಂದ ನಿಂಗ್ ಗೊತ್ತೇನೋ ಅಂದೇ , ಇಲ್ಲಾ ಸಾರ್ ಅಂದ ಮತ್ ಸುಮ್ನಿರೋ ಅಂದೇ , ಹೆಂಗ್ ಸುಮ್ನಿರದ್ ಸಾರ್ ,,, ಎ ತಿಕ್ಲಿ ಅಳಬೇಡ ಸುಮ್ನಿರೆ ಯಾರ್ ಸತ್ರು ಅಂತ ಅಳ್ತಾ ಇದ್ಯೇ ಅಂತ ಅವಳಿಗೆ ಜೋರು ಮಾಡಿ ನನ್ನ ಮೇಲಿನ ಸಿಟ್ಟೆಲ್ಲ ಅವಳ ಮೇಲೆ ತೀರಿಸಿದ .
ನಂತರ ಅವಳು ಮನೆಗೆ ಹೋದಳು , ಪರೇಶ ನನ್ನ ಬಳಿ ಹೇಳ್ದ ಅವ್ನ ಫೋಟೋ ನಾನ್ ನೋಡಿದೀನ್ ಸಾರ್ ಅಂತ ಹಂಗಾದ್ರೆ ನೀನೆ ಮದ್ವೆ ಆಗೋ ಅಂತ ಹೇಳ್ದೆ , ಸಿಟ್ಟಲ್ಲಿ ಕಾಂಪೌಂಡ್ ಜಂಪ್ ಮಾಡಿ ನೇರ ಹೋದ.
ಭದ್ರಾವತಿಯಲ್ಲಿ ಅಷ್ಟು ದೊಡ್ಡ ಶೋ ರೂಂ ಅದು " ಗಿಫ್ಟ್ ಅಂಡ್ ಫ್ಯಾನ್ಸಿ ಶೋ ರೂಂ " ಯಾವುದಿರಬಹುದು ಅಂತ ಯೋಚನೆ ಮಾಡುತ್ತಾ ಆಫೀಸ್ ಗೆ ಹೊರಟೆ ಅದಲ್ಲದೆ ದೊಡ್ಡ ಬಿಸಿನೆಸ್ ಮ್ಯಾನ್ ,,!!
ಮರು ದಿನ ಬೆಳಗ್ಗೆ ಸರೋಜಮ್ಮ ನಮ್ಮ ಮನೆ ಮುಂದೆ ನಿಂತಿರುವುದು ಕಂಡೆ,
ಸಾರ್ ಯಾಕ ಸಾರ್ ಹಿಂಗ್ ಮಾಡದ್ರಿ ಒಳ್ಳೆ ಹುಡ್ಗ ಸಿಕ್ಕಿದ್ದಾ ಹಾಳ್ ಮಾಡುದ್ರಲ್ಲ ಸಾರ್ , ಅಂತ ಅಳ ತೊಡಗಿದರು ನಾನು ವಿಷ್ಯ ತಿಳಿಯದೆ ಏನ್ ಏನಾಯಿತು ಅಂದೇ , ಸಾರ್ ಮಾಡದೆಲ್ಲ ಮಾಡಿ ಈಗ ಹಿಂಗ್ ಹೇಳ್ತಿರಲ್ಲ , ಆ ಪರೇಶ ನಿಮ್ ಶಿಷ್ಯ ಬರಲಿ ಅವನಿಗ್ ಮಾಡ್ತೀನಿ ಅಂತ ಹೇಳಿ ಸಿಟ್ಟಲ್ಲಿ ಹೋದ್ರು.
ಪರೆಶನಿಗೆ ಏನೆಲ್ಲ ಕೆಟ್ಟ ಶಾಪ ಹಾಕಬೇಕೋ ಅದೆಲ್ಲಾ ಮನಸ್ಸಿನಲ್ಲೇ ಹಾಕಿ ಪರೇಶನ ನಿರೀಕ್ಷೆಯಲ್ಲಿ ಸಂಜೆ ತನಕ ಕಾದೆ , ಮಹಾರಾಜ ಕಡ್ಲೆ ಬೀಜ ತಿನ್ನುತ್ತಾ ಬಂದ ಬಾರೋ ಇಲ್ಲಿ ಅಂದೇ . ಒಂದ್ ನಿಮ್ಷ ಸಾರ್ ಅಂತ ಹೇಳಿ ಹೋದವನು ಹುಡುಗಿ ಗು ಅವಳ ತಾಯಿಗೂ ಕರೆದುಕೊಂಡು ಬಂದ . ಬಂದವನೇ ಹೇಳೇ ಗೋದು (ಗೊದಾಮಣಿ ) ಸಾರ್ ಗೆ ನಿಮ್ ತಾಯಿಗೆ ಬಿಸಿನೆಸ್ ಮ್ಯಾನ್ ವಿಷ್ಯ ಹೇಳೇ ದೊಡ್ಡ ಶೋ ರೂಂ ವಿಷ್ಯ ಅಂದ ..,
ಸಾರ್ ನಾನ್ ಹೇಳ್ತೀನಿ ಕೇಳ್ರಿ ಅಂತ ಪರೇಶ ಶುರು ಮಾಡಿದ ನೆನ್ನೆ ನೀವ್ ನನಗ್ ಬಯ್ದರಲ್ಲ , ನಾನ್ ಇಲ್ಲಿಂದ ಹೋಗಿ ಬೋಬಮ್ಮನ್ ಮನೆ ಇಂದ ಅವ್ರ ಮಗಳು ಹಾಕೋ ಬುರ್ಕ ಇಸ್ಕೊಂಡು ಗೊದಾಮಣಿ ಗೆ ಹಾಕುಸ್ಕೊಂಡು ನೇರ ಇಬ್ರು ಭದ್ರಾವತಿ ಗೆ ಹೋದ್ವಿ ಅಲ್ಲಿ ನೀವ್ ಹೇಳುದ್ರಲ್ಲ ಹುಡುಗ ದೊಡ್ಡ್ ಶೋ ರೂಂ ಬಿಸಿನೆಸ್ ಮ್ಯಾನ್ ಆಲ್ ಹೋಗಿ ಅವ್ನ ಶೋ ರೂಂ 8x10 ಅಡಿ ಗೂಡ್ ಅಂಗ್ಡಿ ಅಲ್ಲಿ ಖರೀದಿ ಮಾಡವ್ರನ್ಗೆ ನಾನು ಇವ್ಳು ಹೋದ್ವಿ, ಅಂಗ್ಡಿ ತುಂಬ ಸಾಮನ್ ಇತ್ರಿ , ಮೇಲಿನ ಡಬ್ಬಾ ಹೂವಿಂದ್ ಕೊಡಪ್ಪ ಅಂದೇ ಸಾರೀ ಸಾರ್ ಅದು ಸ್ಟಾಕ್ ಇಲ್ಲ ಅಂದ , ಆ ಮದ್ಯ ಪೌಡರ್ ಐತಲ್ಲಅದು ಕೊಡು ಅಂದೇ ಅದು ಸ್ಟಾಕ್ ಇಲ್ಲ ಅಂದ , ಅವಾಗ್ಲೇ ನಂಗ ಡೌಟ್ ಆತ್ ಸಾರ್ ನಾನೇ ಅಂಗ್ಡಿ ಒಳಗ ಹೋಗಿ ಎಲ್ಲ ಕಾಲಿ ಡಬ್ಬ ಕೆಳಗ್ ಇಟ್ಟೆ. ಬೇರೆ ಗಿಫ್ಟ್ ವಸ್ತು ಏನೈತೆ ಅಂದೇ ಅದಕ ಹೇಳ್ದ ಈಗ ಬರಿ paan paarag ಅಯಿತ್ರಿ ಅಂದ , ಯಾಕಂದ್ರೆ ಮುಂದಿನ ತಿಂಗಳ ನನ್ನ ಮದುವೆ ಅದರ ಮೇಲ ಎಲ್ಲ ತರ್ತೀನ್ರಿ ಅಂದ .
ಬೋಳಿ ಮಗನೆ,,,,,, ನಿನ್ ಅವ್ವನ್ .,,..,.,., ನಿಂಗ್ ಮದ್ವಿ ಬೇರೆ ಕೇಡ್.,,..,.,,.,.,.,.
ತೆಗಿಯೇ ಬುರ್ಕ ಅಂತ ಅಲ್ಲೇ ತೆಗ್ಸಿ ಇವಳ ಬಾಯಾಗು ನಾಕ್ ಬಯ್ಸಿ ಕರ್ಕೊಂಡ್ ಬಂದೆ ನೋಡ್ರಿ ,.,.,..,
ಗೂಡಂಗಡಿ ? ಶೋ ರೂಂ ಅಂತಾರ ಸಾರ್ ,,, ? ಪಾನ್ ಪರಾಗ್ ಮಾರವ್ನ್ ,,,, ಬಿಸಿನೆಸ್ ಮ್ಯಾನ್ ಅಂತಾರ ..
ಎ ನಡಿಯೇ ತಿಕ್ಲಿ ಈಗ ಯಾರ್ ಸತ್ರು ಅಂತ ಅಳ್ತಾ ಇದ್ದೀಯ ,.,.,. ನಿಮ್ ಅಮ್ಮ ಇಲ್ಲೇ ಕಲ್ಲಂಗ್ ಕುಂತಿದಾಳೆ .,.,.,!!!!!!

ಬಹಳ ಸುಂದರವಾದ ಚಿತ್ರ

ಮಹಾನ್ ಕುಂಚ ಕಲಾವಿದರ ಚಿತ್ರಗಳಲ್ಲಿ ಒಂದಾದ ಈ ಚಿತ್ರ " A 19th century Art Display at Musee d' Orsay" (Barbizaan near Paris) ಬಹಳ ಸುಂದರವಾಗಿದೆ ನಿಮಗೂ ಇಷ್ಟವಾಗಬಹುದು
(GN/WP/13/06/2009)

Thursday 11 June 2009

ಜನ್ಮದಿನದಂದು ನೀ ಕೊಟ್ಟ ಮುತ್ತು

ಜನ್ಮದಿನದಂದು ನೀ ನಂಗೆ ಕೊಟ್ಟ ಮುತ್ತು ನನ್ನನ್ನು ಹುಚ್ಚಿಯನ್ನಾಗಿಸಿದೆ ಎಲ್ಲರೂ ಅದೇ ವಿಷಯ ಮಾತನಾಡುತ್ತಾರೆ . ಎಲ್ಲರಿಗೂ ಉತ್ತರ ಕೊಟ್ಟು ಸಾಕಾಗಿದೆ , ಒಬ್ಬಬರದು ಒಂದೊಂದೊಂದು ರೀತಿಯ ಮಾತು ಹೇಗೆ ಸಮಾದಾನ ಮಾಡುವುದು ನೀನೆ ಹೇಳು. ನೀನು ಅಷ್ಟು ಜನರ ಎದುರಿಗೆ ಮುತ್ತು ಕೊಡಬಾರದಿತ್ತು , ಕಾರಣ ಈಗ ನನ್ನ ಸ್ನೇಹಿತೆಯರೆಲ್ಲ ಒಂಟಿಯಾಗಿ ಸಿಕ್ಕಿ ನಂಗು ಬೇಕು ಅಂತ ನಿನ್ನ ಬಾಯ್ ಫ್ರೆಂಡ್ ಗೆ ಹೇಳೇ , ನಾನು ಯಾರಿಗೂ ಹೇಳಲ್ಲ ಕಣೆ ಟ್ರೈ ಮಾಡೇ ಅಂತ ಹೇಳ್ತಾರೆ .

ನೀನು ಏಕೆ ಹೀಗೆ ಮಾಡಿದೆ , ಕಾಲೇಜ್ ನಲ್ಲೂ ಇದೆ ವಿಷಯ, ನಮ್ಮ ಮನೆಯ ಪಕ್ಕದ ಆಂಟಿ ಮೊನ್ನೆ ಗುಟ್ಟಾಗಿ ಕರೆದು ನಂಗು ಬೇಕು ನಿನ್ನ ಬಾಯ್ ಫ್ರೆಂಡ್ ಗೆ ಹೇಳು ಅಂತ ಹೇಳಿದರು ನಾನೇನು ಉತ್ತರ ಕೊಡಲಿ ನೀನೆ ಹೇಳು . ನೀನೇಕೆ ಹೀಗೆ ಮಾಡಿದೆ ನೀನು ನಂಗೆ ಗುಟ್ಟಾಗಿ ಕೊಡಬಹುದಿತ್ತಲ್ಲ ನೀನು ಈ ರೀತಿ ಎಲ್ಲರೆದುರು ಮುತ್ತು ಕೊಟ್ಟು ಎಷ್ಟು ದೊಡ್ಡ ರಾದ್ದಾಂತ ಮಾಡಿದೆ .

ಇಂದು ಬೆಳಗ್ಗೆ ನಮ್ಮ ಮೇಡಂ ನನನ್ನೂ ಸ್ಟಾಫ್ ರೂಂ ಗೆ ಕರೆದುಕೊಂಡು ಹೋಗಿ ಇದೆ ವಿಷ್ಯ ಕೇಳಿದರು ನಿನ್ನ ಬಾಯ್ ಫ್ರೆಂಡ್ ಗೆ ಹೇಳು ನಂಗೆ ಸಹ ಬೇಕು ಅಂತ , ನಾನೇನು ಹೇಳಲಿ ಈಗ ಪರಿಸ್ತಿತಿ ತುಂಬ ಬಿಗಡೈಸಿದೆ . ನೀನು ಮಾಡಿದ ತಪ್ಪಿಗೆ ನೀನೆ ಸರಿ ಮಾಡ ಬೇಕು ಅಲ್ಲವೇ ಹಾಗಾದರೆ ಈಗಲೇ ಈ ಕ್ಷಣ ನೀನು ,.,.,.,.,.,.,. !!!!!!

ಆ " ಮುತ್ತು " ಯಾವ ಅಂಗಡಿ ಇಂದ ತಂದದ್ದೋ ಆ ಅಂಗಡಿಯ ಹೆಸರು ವಿಳಾಸ ಟೆಲಿಫೋನ್ ನಂಬರ್ ಕೊಟ್ಟು ಬಿಡು ಅವರೇ ಹೋಗಿ ಪಡೆದುಕೊಳ್ಳಲಿ .
ಕಾರಣ ಈಗ ಒರಿಜಿನಲ್ ಮುತ್ತು ಎಲ್ಲ ಕಡೆ ಸಿಗುವುದಿಲ್ಲವಂತೆ ,,,,,.!!!!! ??????

Photography

"""" Just Wait One Clickkkkkkk,.,.,.,.,..,.,,. !!!!!!!!!
!!!!!! O Kkkkkkkkk,,,,,,,, .

Fantasia Photo (ಅಲ್ಜೀರಿಯ)

ಫೋಟೋ : " ಫೆಂಟಸಿಯ "
Djamel Hadi Aissa - Algeriya
( a movement of colour and tradition )

Wednesday 10 June 2009

ಗೆರೆಗಳ ಹಿಂದಿರುವ ಕಥೆಗಳು

" ಮನುಷ್ಯನ ಮುಖವೆಂಬುದು ಅವನ ಜೀವನದ ನಕಾಶೆಯೆನ್ನು ವೆಕ್ತಪಡಿಸುವ ಕನ್ನಡಿ "
ನಾನು ಮಗುವಾಗಿದ್ದೆ
ನಾನು ಹುಡುಗಿಯಾಗಿದ್ದೆ
ನಾನು ಯುವತಿಯಾಗಿದ್ದೆ
ನಾನು ಮದುವಣಗಿತ್ತಿಯಾಗಿದ್ದೆ
ನಾನು ಗ್ರಹಿಣಿಯಾಗಿದ್ದೆ
ನಾನು ತಾಯಿಯಾಗಿದ್ದೆ
ನಾನು ಅಜ್ಜಿ ಯಾಗಿದ್ದೇನೆ
ನನ್ನ ಮುಖದಲ್ಲಿ ಮೂಡಿರುವ ಒಂದೊಂದು ರೇಖೆಗಳು ಸಹ ನನ್ನ ಜೀವನದ ಒಂದೊಂದು ದಿನದ ಅನುಭವಗಳು .,.,
ಇದು ಮುಂದೆ ಮತ್ತೊಬ್ಬ ಮನುಷ್ಯನ ದಾರಿ ದೀಪವಾಗಿ ಸೊಂತೋಷಪಡಲಿ ,........
(ಚಿತ್ರ : GN Focus 10/06/2009)

Tuesday 9 June 2009

ಎ ಹುಡುಗಿ ಎಲ್ಲಿಗೆ ಹೊರಟೆ ನಿಲ್ಲೇ ನಾ ಬರುವೆ

ಹಲೋ .,.,.,., ಹಲೋ ,.,..,.,,.
ಎ ಹುಡುಗಿ ಎಲ್ಲಿಗೆ ಹೊರಟೆ ನಿಲ್ಲೇ ನಾ ಬರುವೆ !!!!!!!
ನಿನ್ನನ್ನು ನೋಡುವಾಸೆ
ನಿನ್ನನ್ನು ಪಡಯುವಾಸೆ
ನಿನ್ನ ಮನಸ್ಸನ್ನು ಗೆಲ್ಲುವಾಸೆ
ನನ್ನ ಪ್ರೇಮವನ್ನು ತಿಳಿಸುವಾಸೆ,.

ಕಾಣುತಿರುವುದು ಬೆನ್ನು
ಕೈಯಲ್ಲಿರುವುದು ಪೆನ್ನು
ಕಿವಿಯಲ್ಲಿರುವುದು ಫೋನು
ಎಲ್ಲರದು ಇರುವುದು ನಿನ್ನ ಮೇಲೆ ಕಣ್ಣು ,.

ನಾನು ಹೇಳುತಿರುವುದು ನಿನಗೆ ಗೊತ್ತಿಲ್ಲ
ನೀನು ಹೇಳುತಿರುವುದು ನನಗೆ ಗೊತ್ತಿಲ್ಲ
ನಾವು ಮಾತನಾಡಿದ್ದು ಏನಂತ ಯಾರಿಗೂ ಗೊತ್ತಿಲ್ಲ
ನಮ್ಮಿಬ್ಬರ ಭಾಷೆಗಳಿಗೆ ಅರ್ಥವೇ ಇಲ್ಲ .,

ಕಾರಣ ನಮ್ಮಿಬ್ಬರ ಮೊಬೈಲ್ ನಲ್ಲಿ
ಕ್ರೆಡಿಟ್ ಇಲ್ಲಾ ,.,.,.,.,.,.,..,.,.,,..,,.

Monday 8 June 2009

ಪರೆಶನ ಲೈಟ್ ಬಿಲ್ ಮತ್ತು ಇಲಿ

ಸಂಜೆ ನಾನು ಟೈಲರ್ ಚಂದ್ರುನಿಂದ ಬಟ್ಟೆ ತೆಗೆದು ಕೊಂಡು ಬರಲು ಹೋದಾಗ ಅಲ್ಲಿ ಚಂದ್ರು ಹೇಳ್ದ ಸಾರ್ ನಿಮ್ ಪರೇಶ ಇವತ್ತು ಲೈಟ್ ಬಿಲ್ ಕಟ್ಟಾಕ್ ಬಂದಿದ್ದ ಬರುವಾಗ ಜೋಬಲ್ಲಿ ಇಲಿ ಮರಿ ಇಟ್ಕೊಂಡ್ ಬಂದಿದ್ದ . ಏನ್ ಹೇಳ್ತಾ ಇದಿಯಪ್ಪ ಅಂದೇ, ಹೌದು ಸಾರ್ ಬಾಳ ದೊಡ್ಡ ಕತೆ ಆಯ್ತು ಇಲ್ಲಿ ಕ್ಯೂ ನಲ್ಲಿದ್ದವರಿಗೆ ಎಲ್ಲ ಓಡ್ಸಿ ಬಿಲ್ ಕಟ್ಟಿ ಹೋದ ಅಂದ , ನನಗೆ ಏನ್ ಹೇಳಬೇಕೋ ತಿಳಿಯದೆ ಮನಗೆ ಬಂದೆ ಕಾರಣ ನೆನ್ನೆ ರಾತ್ರಿ ನಾನೇ ಅವನಿಗೆ ಲೈಟ್ ಬಿಲ್ ಕಟ್ಟು ಅಂತ ಹಣ ಮತ್ತು ಬಿಲ್ ಕೊಟ್ಟಿದ್ದು . ನೇರ ಮನೆಗೆ ಬಂದು ಕೇಳಿದಾಗ ಪರೇಶ ಇನ್ನು ಬಂದಿರಲಿಲ್ಲ ,
ರಾತ್ರಿ ಸುಮಾರು ೧೦ ಗಂಟೆಗೆ ಮಹಾರಾಜ ನಿಧಾನವಾಗಿ ಕಡ್ಲೆ ಬೀಜ ತಿಂತ ಬಂದ .
ಪರೇಶ ಬಾರೋ ಇಲ್ಲಿ ಅಂದೇ ಏನ್ಸಾರ್ ಅಂದ ಲೈಟ್ ಬಿಲ್ ಕಟ್ಟಾಕ್ ಹೋದಾಗ ಇಲಿ ಮರಿ ಜೋಬಗ್ ಇಟ್ಕೊಂಡ್ ಹೋಗಿ ಅಲ್ಲಿ ಗಲಾಟೆ ಯಾಕ್ ಮಾಡ್ದೇ . ಹೋಒ ಅದಾ ಸಾರ್.,.,.,
ಇದೆ ಕಡ್ಲೆ ಬೀಜ ಸಾರ್ .,., ಅದು ಏನಂದ್ರೆ ನಮ್ಮ ವಿನಾಯಕ ಟಾಕಿಸ್ ಹತ್ರ ಒಬ್ಬ ಬಾಂಡ್ಲಿ ಯಲ್ಲಿ ಮರಳು ಉಪ್ಪು ಮಿಕ್ಸ್ ಮಾಡಿ ಕಡ್ಲೆ ಬೀಜ ಹುರ್ದು ಮಾರ್ತಾನಲ್ಲಾ ಸಾರ್ ಡಾನ್ ಡೀನ್ ಅಂತ ಸೌಂಡ್ ಮಾಡ್ತಾ ಇರ್ತಾನ್ ನೋಡ್ರಿ ಸಾರ್ ಅದೇ ಕಡ್ಲೆ ಬೀಜ ಸಾರ್ ಇದು ಅಂದ. ಅದೆಲ್ಲ ಇರ್ಲಿ ನಾನ್ ಕೇಳಿದ್ ಅದಲ್ಲ ಅಂದೇ ಅದೇ ಸಾರ್ ಹೇಳ್ತೀನ್ ಕೇಳ್ರಿ .,,.

ನೆನ್ನೆ ರಾತ್ರಿ ಕಡ್ಡ್ಲೇ ಬೀಜ ತಿಂದು ಬಾಕಿ ಜೋಬಲ್ಲಿ ಹಂಗೆ ಇತ್ತಲ್ಲ ಸಾರ್ ಮನೆಗ್ ಹೋಗಿ ಊಟ ಆದ್ ಮೇಲೆ ಬಟ್ಟೆ ಗೂಟಕ್ ನೆತ್ ಹಾಕಿ ಮಲುಗ್ ಬಿಟ್ಟೆ . ಬೆಳಿಗ್ಗೆ ಕೆಲಸಕ್ಕೆ ಹೊರಟಾಗ ಬಟ್ಟೆ ಹಾಕೊಂಡ್ ಹೊರಟೆ ನೇರ KEB ಆಫೀಸ್ ಹೋದೆ ಬಿಲ್ ಕಟ್ಟಿ ಬರಾನ ಅಂತ ನೀವ್ ಕೊಟ್ಟಿದ್ರಲ್ಲ ಅದಕ್ಕೆ , ಅಲ್ಲಿ ಹೋಗ್ ನೋಡುದ್ರೆ ಬಾಳ ಜನ ಕ್ಯೂ ನಲ್ಲಿ ನಿಂತಿದ್ರು ನಾನು ಹೋಗ್ ನಿಂತೇ ನಿಂತಾಗ ಜೋಬಾಗ್ ಒಂತರ ಬುಳು ' ಬುಳು ' ಅಂತ ಶುರು ಆಯ್ತು ಸಾರ್ ನನಗ್ಯಾಕೋ ಒಂತರ ಅನುಸ್ತು ಜನ ಬೇರೆ ತುಂಬ ಇದಾರೆ ಅಂತ ಸುಮ್ನೆ ನಿಂತೇ , ಆದ್ರೆ ಜಾಸ್ತಿನೆ ಬುಳು ಬುಳು ಶುರು ಆಗ್ ಬಿಡ್ತು ಸಾರ್ ಗೊತ್ತಾಗ್ ಬಿಡ್ತು ಸಾರ್ ಎಲ್ಲೋ ರಾತ್ರಿ ಕಡ್ಲೆ ಬೀಜ ತಿನ್ನಕ್ಕೆ ಇಲಿ ಮರಿ ಜೋಬಾಗ್ ಬಂದೈತೆ ಹೊರಗ ಹೊಗಾಕ್ ಆಗಿಲ್ಲ ಅಲ್ಲೇ ಬಾಕಿ ಆಗೈತೆ ಅಂತ , ಸೈಕಲ್ ನಲ್ಲಿ ಬಂದ್ನಲ್ಲ ಸಾರ್ ಹಂಗಾಗ್ ಗೊತ್ತಾಗಿಲ್ಲ ಇಲ್ ಕ್ಯೂ ನಲ್ಲಿ ನಿಂತ ಮೇಲೆ ಬಾಳ ಬುಳು ಬುಳು ಶುರು ಆಗ್ ಬಿಡ್ತು ಸಾರ್ .
ಜೋಬಿಂದ ತೆಗದು ಕೆಳಗ್ ಹಾಕ್ದೆ ಸಾರ್ ,,,,! ಅಷ್ಟೆ ,,, !! ಜನ ಒಂತರ ಇಲಿ ನೋಡಿ ಹುಲಿ ನೋಡ್ ದವರಂಗೆ ಕ್ಯೂ ಬಿಟ್ ಆಕಡೆ ಈಕಡೆ ಒಡುದ್ರು ,,,,,,,,
ನಾನ್ ನೇರ ಹೋಗಿ ಕೌಂಟರ್ನಲ್ಲಿ ದುಡ್ಡು ಕಟ್ಟಿ ಬಂದೆ ಅಂದ ,,,
ಇಷ್ಟೆಲ್ಲಾ ಮಾಡ್ ದಾಗ ಜನ ಯಾರು ನಿಂಗ್ ಬೈಲಿಲ್ವೇನೋ ,,, ಏನ್ ಬೈತಾರೆ ನಾಕೈದ್ ಜನ ಜೋರ ಮಾಡಕ್ ಬಂದ್ರು ಇನೊಂದ್ಸಲ ಹೀಗ್ ಮಾಡುದ್ರೆ ಹಂಗ್ ಮಾಡ್ತಿವ್ ಹಿಂಗ್ ಮಾಡ್ತಿವ್ , ಜೋಬಾಗ್ ಇಲಿ ಇಟ್ಕೊಂಡ್ ಬಂದಿ ನಮಗೆಲ್ಲ ಓಡ್ಸಿ ಮೋಸ ಮಾಡ್ತಿಯೇನೋ ಅಂದ್ರು ,,,,
ನಾನ್ ಹೇಳ್ದೆ ಮುಂದಿನ ತಿಂಗ್ಳು ಇದೆ ತಾರಿಕ್ ಬರ್ತೀನಿ ಅವತ್ತು ಜೋಬಾಗ್ ನಾಲ್ಕು ಹಾವ್ ಇಟ್ಕೊಂಡ್ ಬರ್ತೀನಿ .,.,.,.,.,.,.,.,.,.,.,

Makta Bridge, Abu Dhabi - UAE

Makta Bridge, Abu Dhabi UAE

ಇದು ಸೇತುವೆಯ ಪಕ್ಷಿ ನೋಟ 01

ಇದು ಸೇತುವೆಯ ಪಕ್ಷಿ ನೋಟ 02

ಇದು ಹೇಗಿದೆ ? 03
೨ ಸೇತುವೆ ಮದ್ಯದಲ್ಲಿ ಕೆಳಗೆ ನಿಂತು ಸೂರ್ಯಾಸ್ತದ ವೇಳೆಗೆ ತೆಗೆದ ಫೋಟೋ











Saturday 6 June 2009

ಅಜ್ಜಿ ಮನೆಯ ಗೋಡೆ ಬೀರು

ಬಹಳ ಸುಂದರವಾದ ಅಜ್ಜಿ ಮನೆಯ ಗೋಡೆ ಬೀರು ಇದನ್ನು ನಾನು M o C/Abu Dhabi Art Galary ಯಲ್ಲಿ ನೋಡಿದೆ ಅಂದರೆ ಇದು ನಿಜವಾದ ಬೀರು ಅಲ್ಲ .
ಇದು ಪೇಂಟಿಂಗ್ ಇದನ್ನು ನೀವು ಎಷ್ಟೇ ಹತ್ತಿರದಿಂದ ನೋಡಿದರು ದೂರದಿಂದ ನೋಡಿದರು ಇದು ನ್ಯಾಚುರಲ್ ಆಗಿ ಕಾಣುತ್ತದೆ. ಈ ಪೇಂಟಿಂಗ್ ನನಗೆ ತುಂಬ ಇಷ್ಟವಾಯ್ತು ನಿಮಗೂ ಇಷ್ಟವಾಗಬಹುದು .
ಇದರಲ್ಲಿ ಒಂದು ಬುಕ್ಕನ್ನು ಓದಿ ಅದರಲ್ಲಿ ಪೇಜ್ ಮಾರ್ಕ್ ಆಗಿ ಒಂದು ಪೇಪರ್ ಇಟ್ಟಿರುವುದು ತುಂಬ ಸಾಮಾನ್ಯ ವಾಗಿ ಕಾಣುತ್ತದೆ ಬಾಕಿ ಮತ್ತೆ ಅಲ್ಪ ಸ್ವಲ್ಪ ಹರಿದಿರುವ ಬುಕ್ಸ್ ಕಾಣಬಹುದು , ಧೂಳು ಸಹಾ ಅಂಟಿದೆ ಇನ್ನು ತುಂಬ ವಿಶೇಷಗಳನ್ನೂ ನೀವೇ ಕಂಡು ಆನಂದಿಸಿರಿ .

Thursday 4 June 2009

ನಾನು ' ಅವಳು

ನಾನು ,..,.,
ಕಣ್ಣಿನ ತುಂಬ ಕರುಣೆ ಇರಲಿ
ಮನದ ತುಂಬ ಮಮತೆ ಇರಲಿ
ತುಟಿಯ ತುಂಬ ನಗುವಿರಲಿ
ನೀ ನಕ್ಕಾಗ ನನ್ನ ನೆನಪಿರಲಿ ,.

ಅವಳು .,,.,..,
ನಿನ್ನ ಬ್ಯಾಂಕ್ ಖಾತೆಯಲ್ಲಿ ತುಂಬ ಹಣವಿರಲಿ
ಮನೆಯ ತುಂಬ ನನಗೆ ಬೇಕಾದ ವಸ್ತುಗಳಿರಲಿ
ನಾನು ತುಟಿ ಬಿಟ್ಟಾಗ ನಿನ್ನ ತುಟಿ ಮುಚ್ಚಿರಲಿ
ನಾನು ಕರೆದಾಗ ನೀನು ನನ್ನೆದುರು ಮಂಡಿ ಊರಿ
ನಿಂತಿರಲಿ .,,..,,..,.,,.,.,.,.

ಇಲ್ಲೇನ್ ನೊಡ್ತಿಯ ಮೇಲ್ನೋಡೋ

ಇಲ್ಲೇನ್ ನೊಡ್ತಿಯ ಮೇಲ್ನೋಡೋ !!
ಈ ವಿಷಯ ಬರಿದಿದ್ದದ್ದು ನಮ್ಮ ಕಾಲೇಜ್ ನ ವಾಶ್ ರೂಂ (tiolet) ನಲ್ಲಿ ಮಿರರ್ ನ ಮೇಲೆ . ಅದನ್ನು ಓದಿದ ನಾನು ಮೇಲೆ ನೋಡಿದೆ ಅಂದರೆ ಸೀಲಿಂಗ್ (ಕಾಂಕ್ರೀಟ್ ಸೀಲಿಂಗ್) ಅಲ್ಲಿ ಬರೆದಿತ್ತು ಇಲ್ಲೇನ್ ನೋಡ್ತಿಯೋ ಮಂಗ ಹೋಗಿ ನೋಟೀಸ್ ಬೋರ್ಡ್ ನೋಡೋ ? ಅಂತ ಬರದಿತ್ತು .,
ನನಗೆ ಬಾಂಬ್ ಸಿಡಿದಂತೆ ಆಯ್ತು , ಕಾರಣ ಅದು ನನ್ನ PUC ಮೊದಲ ದಿನ , ನಾನು ಬರಿ ಯೋಚನೆ ಮಾಡಿದ್ದು ಈ ಕಾಂಕ್ರೀಟ್ ಸೀಲಿಂಗ್ ಗೆ ಹೇಗೆ ಬರೆದಿರಬಹುದು , ಈ ಮಹಾನ್ ಕಲಾಕಾರನ ಬಗ್ಗೆ ಚಿಂತಿಸುತ್ತ ನೋಟೀಸ್ ಬೋರ್ಡ್ ನೋಡೋಣ ಅಂತ ಹೋದೆ ಅಲ್ಲಿ ನನ್ನಂತೆ ಬಹಳ ಹುಡುಗರು ನಿಂತಿದ್ರು , ಎಲ್ಲರು ಏನೋ ಹುಡುಕುತ್ತಿದ್ದರು ಅಲ್ಲಿ ಮಾತ್ರ ಏನು ಇರಲ್ಲಿಲ್ಲ .,.,.,.,.,.
ಕ್ಲಾಸ್ ಪ್ರಾರಂಬ ಆಯ್ತು ಫಸ್ಟ್ ಬಂದ ಲೆಕ್ಚರರ್ ಎಲ್ಲರ ಹೆಸರುಗಳನ್ನು ಕೇಳಿದರು, ನಂತರ ಅವರು ಪ್ರಾರಬಿಸಿದ್ದು ಹೀಗೆ ನೋಡಿ ನಿಮಗೆ ಈ ಕಾಲೇಜ್ ಗೆ ಸ್ವಾಗತ ಅಂದ ಹಾಗೆ ಇಲ್ಲಿಗೆ ಬಂದವರು ಎಲ್ಲರು ಒಂದೊಂದು ರೀತಿಯ ಸಾದನೆ ಮಾಡಿ ಕಾಲೇಜ್ ಗೆ ಹೆಸರು ತಂದಿದ್ದಾರೆ ಅಂತರಾಷ್ಟ್ರೀಯ ಮಟ್ಟದಲ್ಲಿ , ರಾಜ್ಯ ಮಟ್ಟದಲ್ಲಿ, ಕಾಲೇಜಿನ ಇತಿಹಾಸ ಪುಟಗಳಲ್ಲಿ ಜೀವನದಲ್ಲಿ ರಾಜಕೀಯದಲ್ಲಿ ನಂತರ ಬಿಸಿನೆಸ್ ನಲ್ಲಿ ,.,. ಇನ್ನು ಕೆಲವರು ಕಾಲೇಜಿನ ಕಲ್ಲುಗಳಲ್ಲಿ ಬೆಂಚುಗಳಲ್ಲಿ ತಮ್ಮ ಹೆಸರುಗಳನ್ನೂ ಕೆತ್ತಿ ಸಾದನೆ ಮಾಡಿದ್ದರೆ ಇನ್ನು ಕೆಲವರು .,,.., ಅಂತ ಹೇಳುತ್ತಿದಂತೆಯೇ ನಾನು ಎದ್ದು ನಿಂತು ಹೌದು ಸಾರ್ ಕಾಲೇಜಿನ ವಾಶ್ ರೂಂ ಗಳಲ್ಲಿ ಸೀಲಿಂಗ್ನಲ್ಲಿ ಎಲ್ಲ ತಮ್ಮ ಸಾದನೆ ಗಳನ್ನು ತೋರಿಸಿದ್ದಾರೆ ಅಂದೇ , ಇಡೀ ಕ್ಲಾಸ್ ಗೊಳ್ಳೆಂದು ನಗತೊಡಗಿತು .,.,.,,..,

ಇಂದು ಇದು ನೆನಪಾಗಲು ಕಾರಣ ಇಂದು ಬೆಳಗ್ಗೆ ನಮಗೆ AMT & Est. DXB ಯಲ್ಲಿ ಒಂದು ಮೀಟಿಂಗ್ ಇತ್ತು ಇದರ ಮದ್ಯದಲ್ಲಿ ಬ್ರೇಕ್ ಸಮಯದಲ್ಲಿ ನಾನು ವಾಶ್ ರೂಂ (toilet) ಗೆ ಹೋದಾಗ ಅಲ್ಲಿ ಪ್ಯಾನಲ್ ಮೇಲೆ ಈ ರೀತಿ ಬರೆದಿತ್ತು
" Sit like a King " - " Don't sit like Monkey "
.,.,.,.,.,.,.,.,., !!!!!!

Tuesday 2 June 2009

ಕಸದ ರಾಶಿ ಮತ್ತು ಪರೇಶ

ನಾನು ಮಧ್ಯಾನ ಊಟಕ್ಕೆ ಬರುವಾಗ ಒಂದು ಆಶ್ಚರ್ಯ ಕಾದಿತ್ತು ಅದೆಂದರೆ ಅದೇ ಸರೋಜಕ್ಕ ನವರ ಮನೆ ಎದುರು ತುಂಬ ಜನ ಸೇರಿದ್ದಾರೆ, ಸರೋಜಕ್ಕ ಕೂಗೂದು ಅಲ್ಲದೆ ಪರೆಶನ ಕೂಗಾಟ ಎಲ್ಲ ಕೇಳುತ್ತಿದೆ. ನಿಧಾನಕ್ಕೆ ಹತ್ತಿರ ಹೋದೆ ನೋಡಿದರೆ ಸರೋಜಕ್ಕನ ಮನೆ ಕಾಂಪೋಂಡ್ ಗೇಟ್ ಒಳಗೆ ಮತ್ತು ಹೊರಗೆ ಪೂರ್ತಿ ಕಸದ ರಾಶಿ ತುಂಬಿದೆ . ನೋಡಿ ನಾನು ದಂಗು ಬಡಿದು ಹೋದೆ ಕಾರಣ ನನಗೆ ತಿಳಿದು ಹೋಯ್ತು , ಅದೇ ಒಂದು ತಿಂಗಳಿಂದ ಪರೇಶ ನನ್ನ ಬಳಿ ಹೇಳುತ್ತಿದ್ದ ಕೆಲಸ ಇಂದು ಮಾಡಿದ್ದಾನೆ . ಸಂಗತಿ ಇಷ್ಟೇ ನಮ್ಮ ಏರಿಯ ದಲ್ಲಿ ಎಲ್ಲರ ಮನೆಗೂ ಕಾಂಪೋಂಡ್ ಇದೆ , ಆದರೆ ಪರೇಶನ ಮನಗೆ ಇಲ್ಲ ಅದಲ್ಲದೆ ಮನೆ ಇಂದ ರೋಡ್ ವರೆಗೆ ಓಪನ್ ಏರಿಯ ಆ ಅವಕಾಶವನ್ನು ಉಪಯೋಗಿಸಿ ಕೊಂಡು ಕೆಲ ಜನರು ಅಲ್ಲಿ ಕಸ ತಂದು ಹಾಕುದನ್ನು ಮಾಡುತ್ತಿದ್ದರು , ಆದರೆ ಎಲ್ಲ ವಿಷಯಗಳಲ್ಲಿ ಕ್ಲೀನ್ ಇರುತ್ತಿದ್ದ ಪರೇಶ ಪ್ರತಿ ಭಾನುವಾರ ಇದೆಲ್ಲ ಗುಡಿಸಿ ಸುಂದರ ಗೊಳಿಸುತ್ತಿದ್ದ , ಇದೆಲ್ಲ ನೋಡಿದ ಜನರು ಅಲ್ಲಿ ಕಸ ಹಕೂದನ್ನು ಬಿಟ್ಟಿದ್ದರು ಕಾರಣ ಪರೆಶನ ಬೈಗೆ ಎಲ್ಲ ಹೆದರುತ್ತಿದ್ದರು ಆದರು ಕೆಲೊಮ್ಮೆ ಅಲ್ಲಿ ಯಾರೋ ಕಸ ಹಾಕುತ್ತಿದ್ದರು.

ಒಂದು ದಿನ ಬೆಳಗ್ಗೆ ಬಂದು ಸಾರ್ ನಾನು ಕಂಡ ಹಿಡ್ದೆ ಸಾರ್ ಕಸ ಹಾಕದ್ ಯಾರು ಅಂತ ಹೇಳ್ದ ಯಾರೋ ಅಂತ ಕೇಳ್ದೆ ಅದೇ ಸಾರ್ ಸರೋಜಕ್ಕ ಅಂದ ಹೇಯ್ ಅವ್ರು ಹಂಗೆಲ್ಲ ಮಾಡಲ್ಲ ಬಿಡೋ ಅಂದೇ, ಸಾರ್ ನಾನು ಇವತ್ತು ಬೆಳಿಗ್ಗೆ ೫ ಗಂಟೆಗೆ ಎದ್ದು ಕಿಟಕಿ ಒಳಗೆ ಕುಂತ್ಕೊಂಡ್ ಕಾದೆ ಅವಳೇ ಸಾರ್ ತಂದು ಹಾಕಿದ್ದು ಅವ್ಲಿಗ್ ಬಿಡಲ್ಲ ಸಾರ್ ನಾನು ಅಂದ, ಅಲ್ಲ ಕಣೋ ಈಗ ಇದ್ದಕ್ಕಿದ್ದಂತೆ ಅವ್ಳಿಗ್ ಕೇಳ್ದ್ರೆ ಅವ್ಳೆನ್ ಒಪ್ಪ್ಕೂಲ್ ತಾಳೆನೋ ಅಂದೇ , ಮತ್ತೆ ಹೆಂಗ್ ಮಾಡೋದ್ ಸಾರ್ ಅಂದ ನಾನ್ ಮಾತಾಡ್ತೀನಿ ಅಂದೇ ನೀವೇ ಹೇಳ್ದ್ರಿ ಅವ್ಳು ಒಪ್ಪಲ್ಲ ಅಂತ ಮತ್ತೆ ಹೆಂಗ್ ಮಾತಾಡ್ತೀರಾ ಅದು ಹೌದು ಅಂದೇ, ಸಂಜೆ ನೋಡಾನ್ ತೊಗೋ ಈಗ ಕೆಲಸಕ್ಕೆ ಹೋಗು ಅಂದೇ ಆಯ್ತು ಸಾರ್ ಅಂತ ಹೋದ. ಇದಿಷ್ಟು ಬೆಳಗ್ಗೆ ನಡೆದ ಸಂಗತಿ .

ನಾನು ಅಲ್ಲಿ ಸರೋಜಕ್ಕನ ಹತ್ರ ಕೇಳ್ದೆ ಏನಿದೆಲ್ಲ ಅಂತ ಅದಕ್ಕವರು ನಿಮ್ಮ ಪರೇಶ ಇದಾನಲ್ಲ ಅವ್ನಿಗೆ ಕೇಳ್ರಿ ಅಂದ್ಲು. ಏನೋ ಪರೇಶ ಅಂದೇ ನೋಡಿಸಾರ್ 500 ರೂ . ಕೊಟ್ಟರೆ ಈಗ ಇಲ್ಲಿ ಹಾಕ್ಸಿರೋ ಕಸ ನಾನ್ ತಗಸ್ತಿನಿ ಅಂದ, ಮತ್ತೆ ರಾಜಿ ಪಂಚಾತಿಗೆ ಮಾಡಿ ೪೦೦ ರೂ. ಫಿಕ್ಸ್ ಆಯಿತು . ಮತ್ತೆ ಪರೇಶ ತನ್ನ ಜೊತೆ ಗಿದ್ದವರಿಗೆ ಹೇಳಿ ಕಸ ತೆಗಿಸಿದ ಎಲ್ಲ ಸರಿ ಯಾಯ್ತು . ಇಷ್ಟೆಲ್ಲಾ ನಡಯುತ್ತಿದ್ದರೂ ಅಷ್ಟು ಜೋರಿನ ಸರೋಜಕ್ಕ ಮಾತ್ರ ತಪ್ಪು ಮಾಡಿದವಳಂತೆ ಸುಮ್ಮನೆ ಗುರ್ ಗುರ್ ಅನ್ನುತ್ತಿದ್ದಳು .
ಎಲ್ಲ ಮುಗಿತ್ತಿದ್ದಂತೆ ಮನೆ ಒಳಗೆ ಹೋಗುತ್ತಿದ್ದ ಸರೋಜಕ್ಕ ಒಮ್ಮ್ಲೇಲೆ ನಿಂತು ನಂ ಮನೆಯವೆರು ಬರಲಿ ನಿಂಗ ಮಾಡ್ತೀನ್ ಅಂದ್ಲು, ಅದನ್ನು ಕೇಳುತ್ತಿದ್ದಂತೆ ಪರೇಶ ಗರಂ ಆಗಿ ಅವ್ನ ಬಂದ್ ಏನಾದ್ರು ಮಾತಾಡ್ ದ ಅಂದ್ರೆ ನೋಡ್ಕೋ ಈವತ್ತು ಕಸ ಗಾಡ್ಯಲ್ಲಿ ತಂದು ಗೆಟಾಗ್ ಹಾಕದೆ ನಾಳೆ ಲಾರಿ ತುಮ್ಬುಸ್ಕೊಂಡ್ ಬಂದ್ ಮನೆ ಒಳಗ ಹಾಕ್ತೀನಿ ಅಂದ ,.,..,.,,..,.,.,
,.,.,..,.,,.

ಸಂಜೆವರೆಗೂ ನನಗೆ ಅರ್ಥ ಆಗದ ವಿಷ್ಯ ಅಂದ್ರೆ ಸರೋಜಕ್ಕನಿಗೆ ಇವ್ನ್ ಹೆಂಗ್ ಬಾಯಿ ಬಿಡಿಸ್ದ ಅಂತ , ಸಂಜೆ ರಿಪೋರ್ಟ್ ಕೊಟ್ಟ ಸಾರ್ ನಾನ್ ಇವತ್ತು ಕೆಲ್ಸಕ್ ಹೋಗಿಲ್ಲ ಮನಿಯಾಗೆ ಕಾದ ಕುಂತೆ ಇವ್ಳು ಬಟ್ಟ್ರ್ ಅಂಗ್ಡಿ ಕಡೆ ಹೊಂಟ್ಲು ನಾನು ಸ್ಪೀಡಾಗಿ ಹೋಗಿ ಅಲ್ ನಿಂತೇ ಸರೋಜಕ್ಕ ಅಲ್ ಬಂದಿದ್ ಕೂಡ್ಲೇ ಅವ್ಳಿಗ್ ಕೆಳ್ಸಂಗೆ ಜೋರಾಗಿ ಬಟ್ತ್ರೆ ಯಾರೋ ನೋಡ್ರಿ ನಂ ಮನೆ ಹತ್ರ ಕಸ ಹಾಕಿದಾರೆ ಅದ್ರಾಗೆ ಚಮಚ ಲೋಟ ತಟ್ಟೆ ಎಲ್ಲಾ ಬಿದ್ದೈತೆ ನೋಡೇ ಇಲ್ಲ ಹಂಗೆ ಕಸದ ಜೊತೆಗೆ ಎಸುದ್ ಬಿಟ್ಟಿದಾರೆ ಅಂದೇ ಅಷ್ಟೆ ,, ಅಯ್ಯೋ ಪರೇಶ ನಂದೇ ಕಣೋ ಅಂದ್ಲು ಎಲ್ಲೈತೋ ಅಂದ್ಲು ,..,., ನಿನ್ನವನ್ ಹಲ್ಕಟ್ ತಂದು ನಂ ಮನಿ ಎದರು ದಿನ ಕಸ ಹಾಕ್ತಿಯೇನೆ ಹೆಂಗ್ ಬಾಯಿ ಬಿಟ್ಟೆ ಈಗ ದಿನಾ ಕೇಳ್ದ್ರು ಗೊತ್ತಿಲ್ಲಾ ಯಾರ್ ಹಾಕ್ತಾರೋ ಅಂತಿದ್ದೆ ಕಸ್ದಾಗ್ ಚಮಚ ಲೋಟ ತಟ್ಟೆ .,,.,. ಬಂದ್ಬಿತ್ಲು ಬಾಯಿ ಬಿಟ್ಕೊಂಡು ನಂದೇ ಕಣೋ ಅಂತ ಕಸಾನು ನಿಂದೆ ಬಾರೆ ಅಂತ ಹೇಳ್ತ್ತಿದ್ದಂಗೆ ಅಲ್ಲಿ ಅಂಗ್ಡಿ ಯಲ್ಲಿ ತುಂಬ ಜನ ಇದ್ರೂ ಸಾರ್ ಬಾಕಿ ನಿಮಿಗ್ ಗೊತ್ತಲ್ಲಾ.
200 ರೂ ಲಾಭ ಆತ್ ಸಾರ್ ಅಂದ , ಅದ್ಹೆಂಗೆ ಅಂದೇ ೨ ಕೂಲಿ ಆಳ್ ೧ ಕೈ ಗಾಡಿ ಕೆಲಸ ಮಾತಾಡಿದ್ದು 200 ರೂ.

ಪಸ್ಟ್ ನಮ್ಮ ಮನಿಇಂದ ಸರೋಜಕ್ಕನ ಬಾಗಲಾಗ್ ಹಾಕೋದ ಊಟ ಮುಗುದ್ ಮೇಲೆ ಬಂದ್ ಅದನ ತೆಗದು ತಿಪ್ಪೆ ಗ ಹಾಕೋದ್ ಅಂತ ಮಾತ್ ಆಗಿತ್ ಸಾರ್ ಆದ್ರ ಸರೋಜಕ್ಕ 400 ರೂ. ಕೊಡ್ತಾಲ್.,.,.,.,!!! ಅಂತ ಗೊತ್ತಿರ್ಲಿಲ್ಲ ಸಾರ್
ಅದೇ ಲಾಬ ಆತ್ ಸಾರ್ ,.,.,.?

Monday 1 June 2009

ಹೌದು ಅವಳೇ ಇದು


ಹೌದು ಅವಳೇ ಇದು !!!!!!!

ಟೈಟ್ ಜೀನ್ಸ್, ಫಿಟ್ ಟೀ ಶರ್ಟ್ ಪೋನಿ ಟೈಲ್, ಸ್ಮಾರ್ಟ್ ಹೈಟ್ ಮೊನ್ ಬ್ಯೂಟಿ, ಕೈನೆಟಿಕ್ ಹೋಂಡ ಸನ್ ಗ್ಲಾಸ್ ತಲೆ ಮೇಲೆ, ಹೌದು ಅವಳೇ ಇದು. ಪ್ರತಿ ತಿಂಗಳು ನನ್ನ ಬರ್ತ್ ಡೇ ಎಂದು ಹೇಳಿ ಹೊಸ ಹೊಸ ಹುಡುಗರನ್ನು ಸ್ನೇಹಿಸಿ ಗಿಫ್ಟ್ ಗಳನ್ನೂ ಪಡಯುತ್ತಿದ್ದ, ಸ್ಮಾರ್ಟ್ ಹುಡುಗರನ್ನು ಒಂಟಿಯಾಗಿ ಸಿಕ್ಕಿ ನಿಮ್ಮ ಡ್ರೆಸ್ ತುಂಬ ಚೆನ್ನಾಗಿದೆ ಅಂತ ಹೇಳಿ ಅವರಿಂದ ಐಸ್ ಕ್ರೀಂ ಬಿಟ್ಟಿ ಯಾಗಿ ತಿನ್ನುತ್ತಿದ್ದ , ಹೌದು ಅವಳೇ ಇದು ,.

ತನ್ನ ಕೈನೆಟಿಕ್ ಪೆಟ್ರೋಲ್ ಬಂಕ್ ಗಿಂತ ಸುಮಾರು ೨೦ ಅಡಿ ದೂರದಲ್ಲಿ ನಿಲ್ಲಿಸಿ ಯಾರಾದರು ಸ್ಮಾರ್ಟ್ ಹುಡುಗ ಬರುವಾಗ ಸ್ವಾರಿರೀ ನಾನು ಪರ್ಸ್ ಮರೆತು ಬಂದೆ ಅಂತ ಹೇಳಿ ೧ ಲೀಟರ್ ಪೆಟ್ರೋಲ್ ಹಾಕಿಸ್ರಿ ಈಗ ತಂದು ಕೊಡ್ತೀನಿ ದುಡ್ಡು ಅಂತ ಹೇಳಿ ಫುಲ್ ಟ್ಯಾಂಕ್ ಮಾಡುಸ್ಕೊಲ್ತಿದ್ದ, ಲೆಕ್ಚರರ್ ಗಳಿಗೆ ಬುಜ ತಾಗಿಸಿ ಪ್ರಾಕ್ಟಿಕಲ್ ನಲ್ಲಿ ಮಾರ್ಕ್ಸ್ ಗಿಟ್ಟಿಸುತ್ತಿದ್ದ , ಬಿಹಾರಿ ಹುಡುಗರಿಗೆ ಸ್ವಲ್ಪ ಪ್ರೀತಿ ವೈಯಾರ ತೋರಿಸಿ ಜೊತೆಯಲ್ಲಿ ಹೋಗಿ ತನಗೆ ಬೇಕಾದ ಡ್ರೆಸ್ ವಸ್ತುಗಳನ್ನು ತಂದು ಕೊಳ್ಳುತ್ತಿದ್ದ ಹೌದು ಅವಳೇ ಇದು ,.

ನಮ್ಮ ಕಾಲೇಜ್ ನಲ್ಲಿ ಮೋನ್ ಬ್ಯೂಟಿ ಎಂಬ ಹೆಸರಲ್ಲಿ ಕರೆಯಲ್ಪಡುತ್ತಿದ್ದ , ರಾಣಿ ಯಂತೆ ಮೆರಯುತ್ತಿದ್ದ , ಎಲ್ಲರನ್ನು ಹಾಯ್ ಬಾಯ್ ಎಂದು ಸಂದರ್ಬಕ್ಕೆ ಬೇಕಂತೆ ಸ್ನೇಹಿತರನ್ನು ಮಾಡಿ ಕೊಳ್ಳುತ್ತಿದ್ದ , ಪಯಿಂಗ್ ಗೆಸ್ಟ್ ಆಗ್ಯು ಪೈಯ್ ಮಾಡದೆ ವಿಜ್ರಂಬಿಸುತ್ತಿದ್ದ , ಹೌದು ಅವಳೇ ಇದು ., !

ಆದರೆ ಇವಳಿಗೆನಾಗಿದೆ ಇಂದು ಈ ಆಸ್ಪತ್ರೆಯಲ್ಲಿ ಯಾಕೆ ಮಲಗಿದ್ದಾಳೆ , ಇವಳ ಕಣ್ಣು ಗಳಿಗೆನಾಗಿದೆ ಇವಳ ಸುತ್ತ ಮುತ್ತ ಯಾರು ಇಲ್ಲವಲ್ಲ, ಇದೇನು ಬಿಳಿ ಬಟ್ಟೆಯಲ್ಲಿ ಮಲಗಿದ್ದಾಳೆ , ಪಕ್ಕದಲ್ಲಿ ವೀಲ್ ಚೇರ್ ಇದೆ ಕೈನೆಟಿಕ್ ಎಲ್ಲಿ ! ಇವಳ ಜೀನ್ಸ್ ಎಲ್ಲಿ ಸನ್ ಗ್ಲಾಸ್ ಇಡುತ್ತಿದ್ದ ತಲೆಯಮೇಲೆ ಏನೋ ವೈರ್ ಗಳಿವೆ , ಗ್ಲೂಕೋಸ್ ದ್ರಿಪ್ಸ್ ತೂಗುತ್ತಿದೆ ಪೆಟ್ರೋಲ್ ಬಂಕ್ ?

ಇವಳನ್ನ ಟಿ ವಿ ಯಲ್ಲಿ ಯಾಕೆ ತೋರಿಸುತ್ತಿದ್ದಾರೆ ,. !!!!!! ????? !!!! ???? ಒಂದ್ನಿಮಿಷ ,,,,

ಈಗ ತೋರಿಸುತ್ತಿರುವ ಮಹಿಳೆಯಾ ಸಂಬಂದ ಪಟ್ಟವರು ಯಾರಾದರು ಇದ್ದಲ್ಲಿ ಕೂಡಲೇ ಈ ನಂಬರ್ ಗೆ ಸಂಪರ್ಕಿಸ ತಕ್ಕದ್ದು ಅಥವಾ ಈಗ ಹೇಳುವ ಆಸ್ಪತ್ರೆ ಗೆ ಸಂಪರ್ಕಿಸ ತಕ್ಕದ್ದು ... ,.,.,.,.,..,.,,.,.,.,.,.,.,.,.,.