Saturday 12 December 2009

ಬೆಳಗಿನಿ೦ದ ಚಿಟಿ ಪಿಟಿ ಮಳೆ ಹನಿ ಹನಿಯಗಿ ಬೀಳುತ್ತಿದೆ

ಬೆಳಗಿನಿ೦ದ ಚಿಟಿ ಪಿಟಿ ಮಳೆ, ಅದು ಇಲ್ಲಿ ಯು.ಎ.ಇ ಯಲ್ಲಿ ಅಪರೂಪಕ್ಕೆ ಬರುವ ಮಳೆ ಶುರುವಾಗಿ ಸ೦ಜೆವರೆಗೂ ನಿರ೦ತರವಾಗಿ ಸುರಿಯುತ್ತಿದೆ, ಸ೦ತೊಷ ಹೆಳತೀರದಾಗಿದೆ ಕಾರಣ ಗಾಜಿನ ದೊಡ್ದ ದೊಡ್ದ ಕಿಟಕಿಗಳ ಮೂಲಕ ಹೊರ ನೊಡಿದಾಗ ರಸ್ತೆಯಮೆಲೆ ಹನಿ ಹನಿ ಯಾಗಿ ಬೀಳುತ್ತಿರುವ ಮಳೆ, ಬಿದ್ದ ಹನಿಗಳಿ೦ದ ಒ೦ದು ವ್ರತ್ತಾಕಾರದ ಮಡಿ ಮತ್ತೆ ಅದು ವ್ರದ್ದಿಗೊಳ್ಳುತ್ತಾ ಬಯಾಲಾಗುವ ಆಕಾರ, ಅಕ್ಕ ಪಕ್ಕ ನಿರೆಯಾಗಿ ಹರಿಯುತ್ತಿರುವ ನೀರು ಅದರಲ್ಲಿ ಆಟವಾಡುತ್ತಾ ಮಕ್ಕಳು ಕಾಲಲ್ಲಿ ನೀರನ್ನು ಜೊರಾಗಿತುಳಿಯುತ್ತಾ ಹಾರುವ ನೀರನ್ನು ಮತ್ತೊಬ್ಬರಿಗೆ ಚಿ೦ಮ್ಮುವ೦ತೆ ಮಾಡುತ್ತಾ ಜೊರಾಗಿ ಕೂಗುತ್ತಾ ಒಹೊ ಒಹೊ ನೊಡಲು ಇದೊ೦ದು ಸು೦ಧರ ದಿನ. ಕಾರಣ ಇಲ್ಲಿ ಮಕ್ಕಳಿಗೆ ಮಳೆ ಬಗ್ಗೆ ಹೆಚ್ಹು ಗೊತ್ತಿಲ್ಲ ಆದ್ದರಿ೦ದ ಇದು ಅವರಿಗೊ೦ದು ಹಬ್ಬ ವಾಗಿದೆ,,,,
ಬೆಳಗಿನಿ೦ದ ಚಿಟಿ ಪಿಟಿ ಮಳೆ ಹನಿ ಹನಿಯಗಿ ಬೀಳುತ್ತಿದೆ,,,,,,

ಅರೆ ಕಾಗದದ ದೊಣಿ ಕಾಣುತ್ತಿಲ್ಲ, ಮಳೆಯಲ್ಲಿ ಹಾಡುವ ಮಕ್ಕಳ ಹಾಡು ಕೆಳಿಸುತ್ತಿಲ್ಲ, ನಿ೦ತ ನೀರಿನ ಬಳಿ ಸೈಕಲ್ ನಿಲ್ಲಿಸಿ ಅದರ ಹಿ೦ದಿನ ಚಕ್ರ ನೀರಿಗೆ ತಾಗಿಸಿ ಸೈಕಲ್ಲಿನ ಪೆಡ್ಲನ್ನು ಜೊರಾಗಿ ಕೈಯಲ್ಲಿ ತಿರುಗಿಸಿ ನೀರು ಚಕ್ರದ೦ತೆ ಮೆಲಕ್ಕೆ ಹಾರಿಸುತ್ತಿಲ್ಲ, ಯಾರು ರೈನ್ ಕೊಟ್ ಹಾಕಿಲ್ಲ, ಗೊಪ್ಪೆ ಹೊದ್ದು ಹೊಗುವ ಕೆಲಸದಾಳುಗಳು ಕಾಣಿಸುತ್ತಿಲ್ಲ, ಬೆಚ್ಚನೆಯ ಸ್ವೆಟರ್ ತಲೆಗೆ ಕಿವಿ ಮುಚ್ಹುವ ಟೊಪಿ ಹಾಕಿಲ್ಲವಲ್ಲ, ? ಚಿನ್ಹೆ ಇರುವ ಚತ್ರಿ ಹಿಡ್ದು ಯಾರು ಕಾಣುತ್ತಿಲ್ಲವಲ್ಲ. ಬೀಡಿ ಸೇದುವ ಮುನಿಯಜ್ಜ ಕಾಣುತ್ತಿಲ್ಲ,
ಬೆಳಗಿನಿ೦ದ ಚಿಟಿ ಪಿಟಿ ಮಳೆ ಹನಿ ಹನಿಯಗಿ ಬೀಳುತ್ತಿದೆ,,,,,,

ದನ ಕರುಗಳು ಹಿ೦ಡು ಹಿ೦ಡಾಗಿ ಮನೆಯಕಡೆ ಬರುತ್ತಿರುವುದು ಕಾಣುತ್ತಿಲ್ಲವಲ್ಲ, ಮನೆಯಲ್ಲಿ ಮಳೆ ನೀರು ಸೊರುವ ಜಾಗದಲ್ಲಿ ಅಲ್ಲಲಲ್ಲಿ ಪಾತ್ರೆಗಳು ಇಟ್ಟಿಲ್ಲವಲ್ಲ, ನೀರೊಲೆಯಲ್ಲಿ ಹಲಸಿನ ಬೀಜ ಸುಡುವ ಘ್ಹಮ ಘ್ಹಮ ಸುವಾಸನೆ ಬರುತ್ತಿಲ್ಲ, ಕಾರ ಮ೦ಡಕ್ಕಿ ತರಲು ಹೊದ ಪುಟ್ಟ ಇನ್ನು ಬ೦ದಿಲ್ಲ, ಸ೦ಜೆ ತಿ೦ಡಿಗೆ ಅಮ್ಮ ಮೆಣಸಿನಕಾಯಿ ಬಜ್ಜಿ ಮಾಡಿಲ್ಲವಲ್ಲ, ಮಳೆಯಲ್ಲಿ ಆಟವಾಡಿ ನೆ೦ದು ಬ೦ದ ಮಕ್ಕಳಿಗೆ ಅಮ್ಮ ಪ್ರೀತಿಯ ಗುದ್ದು ಕೊಟ್ಟು ತನ್ನ ಸೆರಗಿನಿ೦ದಲೆ ತಲೆಯನ್ನು ವರೆಸುತ್ತ ಶೀತ ಆಗುತ್ತೆ ಅ೦ತ ಗೊತ್ತಿಲ್ಲ ಎ೦ದು ಹೆಳುವುದು ಕೇಳುತ್ತಿಲ್ಲ, ಬೆಳಗಿನಿ೦ದ ಚಿಟಿ ಪಿಟಿ ಮಳೆ ಹನಿ ಹನಿಯಗಿ ಬೀಳುತ್ತಿದೆ,,,,,,,,

ಅಯ್ಯೊ ನಿನ್ನ ಆಪ್ಪ ಇವತ್ತು ಚತ್ರಿನೂ ತಗೊ೦ಡು ಹೊಗಿಲ್ಲ ಅ೦ತ ಅಮ್ಮ ಹೇಳುತ್ತಿಲ್ಲ, ನಾಳೆ ಸ್ಕೂಲಿಗೆ ರಜಾ ಅ೦ತ ಯಾರು ಹೆಳುತ್ತಿಲ್ಲ, ಕೊಟ್ಟಿಗೆಯಲ್ಲಿ ನೆ೦ದು ಬ೦ದಿರುವ ದನಕರುಗಳು ಕಾಣುತ್ತಿಲ್ಲ, ಮಳೆಯಲ್ಲಿ ನೆ೦ದು ಬ೦ದು ತನ್ನದೆ ಆದ ಭಾಷೆ ಯಲ್ಲಿ ಮಾತನಾಡುವ ಗುಬ್ಬಚ್ಹಿಗಳು ಕಾಣುತ್ತಿಲ್ಲ, ತ೦ಪಾದ ಗಾಳಿಗೆ ಆಗಾಗ ಮುನಿಯುತ್ತಿರುವ ದೀಪ ಕಾಣುತ್ತಿಲ್ಲ, ರಾತ್ರಿ ಎಲ್ಲರೂ ಸೇರಿ ಒಟ್ಟಿಗೆ ಕುಳಿತು ಊಟ ಮಾಡುವುದು ಕಾಣುತ್ತಿಲ್ಲ, ಊಟದ ನ೦ತರ ಹರಿದ ಕ೦ಬಳಿಯನ್ನು ಎಲ್ಲರು ಹೂದ್ದು ಪ್ರೀತಿ ಮತ್ತು ಆತ್ಮಿಯತೆಯ ಅಪ್ಪುಗೆಯಲ್ಲಿ ಕಥೆಗಳನ್ನು ಕೇಳುತ್ತ ಯಾರು ಮಲಗುತ್ತಿಲ್ಲ,
ಬೆಳಗಿನಿ೦ದ ಚಿಟಿ ಪಿಟಿ ಮಳೆ ಹನಿ ಹನಿಯಗಿ ಬೀಳುತ್ತಿದೆ,,,,,,,,ಇಲ್ಲಿ
,,,,,,,,ಇದು ಗಗನ ಚು೦ಬಿ ಕಟ್ಟಡಗಳ ಆಧುನಿಕ ಜಗತ್ತು ,,,,,ಅತ್ಯಧುನಿಕ ಯ೦ತ್ರಗಳ ,,,,ಯಾ೦ತ್ರಿಕ ಮನಸ್ಸುಗಳ,,,, ಯ೦ತ್ರದ ಜಗತ್ತು,,,,
ಬೆಳಗಿನಿ೦ದ ಚಿಟಿ ಪಿಟಿ ಮಳೆ ಹನಿ ಹನಿಯಗಿ ಬೀಳುತ್ತಿದೆ,,,,,,,,
ಆದರೆ ಕಾಗದದ ದೊಣಿ ಕಾಣುತ್ತಿಲ್ಲ,,,,,,,,,,,,,,

No comments:

Post a Comment