Sunday, 31 May 2009

ನಿಮಗೆ ನಿದ್ದೆ ಮಾಡಬೇಕೆ

ನಿಮಗೆ ನಿದ್ದೆ ಮಾಡ ಬೇಕೆ ,
ಬೇಸರವೇಕೆ ಇದನ್ನು ಕಾಪಿ ಮಾಡಿಕೊಳ್ಳಿ .

ನಿಮಗೆ ಅಡಿಗೆ ಮಾಡಲು ತೊಂದರೆಯೇ ?ನಿಮಗೆ ಅಡಿಗೆ ಮಾಡಲು ತೊಂದರೆ ಯಾಗುತ್ತಿದೆಯೇ ,
ಕೂಡಲೇ ನಿಮ್ಮ ಕಿಚನ್ ಬದಲಾಯಿಸಿ ಬೇಗ ಇದನ್ನು ಕಾಪಿ ಮಾಡ್ಕೊಳ್ಳಿ .

ನಿಮಗೆ ಇಷ್ಟ ಆಯ್ತಾ

ನಿಮಗೆ ಇಷ್ಟ ಆಯ್ತಾ ಹಾಗಾದರೆ ತಡ ಮಾಡ ಬೇಡಿ ,
ಕೂಡಲೇ ಇದನ್ನು ಕಾಪಿ ಮಾಡಿಕೊಳ್ಳಿ

ಬೇಬಿ ಬೆಡ್ ಫ್ರೀ


ನಿಮಗಿದು ಇಷ್ಟ ಆಯ್ತಾ
ಹಾಗಾದರೆ ನಿಧನಿಸ ಬೇಡಿ ಈಗಲೇ ಕಾಪಿ ಮಾಡ್ಕೊಳಿ.
ನ್ಯಾಚುರಲ್ ಫ್ರೆಶ್ ಮಿಲ್ಕ್ ಕೇಕ್

Thursday, 28 May 2009

೨೮ ಕೋಟಿ ೬೦ ಲಕ್ಷ ದ ಪೇಂಟಿಂಗ್

ಹೌದು ಕಳೆದ ವರ್ಷ " ಓರಿಎಂಟಲ್ ಆರ್ಟ್ ಲಂಡನ್ " ನಲ್ಲಿ ೨೮ ಕೋಟಿ ೬೦ ಲಕ್ಷ ರೂಪಾಯಿ ಬೆಲೆ ಕಂಡ ಅಪರೂಪದ ಪೇಂಟಿಂಗ್ . by Gustav Bauernfeind , titled " The Gate of the Great Umayyed Mosque, Damascus. ಈ ಚಿತ್ರದ ಪ್ರಿಂಟ್ ಕಾಪಿಎನ್ನು ಗಲ್ಫ್ ನ್ಯೂಸ್ ನಿಂದ ಸ್ಕ್ಯಾನ್ ಮಾಡಿದ್ದು . ನನಗಂತೂ ಬಹಳ ಆಶ್ಚರ್ಯ ಉಂಟು ಮಾಡಿದ ಚಿತ್ರ ಅಸ್ಹೊಂದು ಚೆನ್ನಾಗಿದೆ , ಇನ್ನು ಬಹಳ ಚಿತ್ರಗಳಿದ್ದವು ಅವು ಸಹಾ ಒಂದಲ್ಲ ಒಂದು ರೀತಿ ಕುಶೀ ಕೊಡುವಂತವು .

ಅಂದ ಹಾಗೆ ನಮ್ಮ ಶಿವಮೊಗ್ಗದಲ್ಲಿ ಹಿಂದೆ ಆಗೊಮ್ಮೆ ಈಗೊಮ್ಮೆ ಕೆಲವರು ರಸ್ತೆ ಮೇಲೆ ಕೂತು ಕ್ಲೀನ್ ಮಾಡಿ ಬೆಳಗಿನಿಂದ ಕಷ್ಟ ಪಟ್ಟು ದೊಡ್ಡ ಚಿತ್ರ ಹನುಮಂತ , ರಾಮ , ಅಥವಾ ಸರಸ್ವತಿ , .,.,., ಹೀಗೆ ಸುಮಾರು ರೀತಿಯ ಚಿತ್ರಗಳನ್ನು ಬರೆದು ಅದರ ಪಕ್ಕದಲ್ಲಿ ದೂರದಲ್ಲಿ ಕೂರುತ್ತಿದ್ದರು ಸಂಜೆಯಾದ ಮೇಲೆ ಅದರ ಹತ್ತಿರ ಒಂದು ಸೀಮೀಣೆ ದೀಪ ಇಡುತ್ತಿದ್ದರು , ಜನ ಆಚೆ ಈಚೆ ನಡೆದುಕೊಂಡು ಹೋಗುವಾಗ ಚಿಲ್ಲರೆ ಹಣವನ್ನು ಅದರ ಮೇಲೆ ಹಾಕುತ್ತಿದ್ದರು. ಇದರಿಂದ ಬರೆದವನ ಜೀವನ ನಡಯುತ್ತಿತ್ತು , ಅದೇ ರೀತಿ ಕೆಲವರು ಗೋಡೆಗಳ ಮೇಲೆ ಸಿನಿಮಾ ತಾರೆಯರ ಚಿತ್ರಗಳನ್ನು ಬರೆವುದುಂಟು , ಈ ಎಲ್ಲ ಚಿತ್ರಗಳು ಸುಂದರ ಮತ್ತು ಸತ್ಯಕ್ಕೆ ಹತ್ತಿರವಾದ ಚಿತ್ರಗಳು , ಆದರು ಈ ಚಿತ್ರಕಾರನಿಗೆ ಪ್ರಶಸ್ತಿ ಬೇಡ, ಹಣ ಪುರಸ್ಕಾರ ಬೇಡ , ಅಂದರೆ ಅದು ನಾವು ಕೊಡಲಿಲ್ಲ .,.,,.,.,. ಕನಿಷ್ಠ ಪಕ್ಷ .,.,.,.,.,
ನೀನು ಬರೆದಿರುವ ಚಿತ್ರ ತುಂಬ ಚೆನ್ನಾಗಿದೆ ಅಂತ ನಾನು ಹೇಳಲಿಲ್ಲ ನೀವು ಹೇಳಲಿಲ್ಲ !.,!

ಕಾರಣ ಇದು ದೊಡ್ಡ ದೊಡ್ಡ ಆರ್ಟ್ ಗ್ಯಾಲರಿಗಳಲ್ಲಿ ಕಾಣಲಿಲ್ಲವಲ್ಲ ?
ಬರೆದವನು ದೊಡ್ಡ ಮನುಷ್ಯನಲ್ಲವಲ್ಲ ., ? ? ? ? ?
ಹೇಳ್ತಾರಲ್ಲ ಸ್ಲಮ್ ಡಾಗ್ ಚಿತ್ರಕ್ಕೆ ಆಸ್ಕಾರ್ ಬಂತು ಆದರೆ ಅದರಲ್ಲಿ ನಟಿಸಿದವರ " ಸ್ಕಾರ್ " ಹಾಗೆಯೆ ಇದೆ
!!!!! .,.,., ??????
= 0

Wednesday, 27 May 2009

ನಿದಿಗೆ ನ ಬೆಂಗಳೂರ

ಅದೇ ಮತ್ತೆ ಪರೆಶನ ಪರಾಕ್ರಮ ,.

ಎಲ್ಲ್ ಹೋಗಿದ್ದೋ ಹಾಳಾಗಿ ನೆನ್ನಇಂದ ನಿನ್ನ ಹುಡ್ಕ್ತಇದಿವಿ ಈಗ ಎಲ್ಲಿಂದ ಬರ್ತಿದಿಯ, ನಿನ್ನ ಅಮ್ಮನ ಅವಸ್ತೆ ಹೇಳತೀರದು ಅಂದೇ , ಇಲ್ಲ ಸಾರ್ ನಾನು ಬೆಂಗಳೂರಿಗೆ ಹೋಗಿದ್ದೆ ಅಂತ ಬಾಂಬ್ ಸಿಡಿಸಿದ ನಾನು ನಿಂತಲ್ಲೇ ದಂಗಾಗಿ ಹೋದೆ, ಅಲ್ಲ ಕಣೋ ನಿಮ್ಮ ಅಮ್ಮ ಹೇಳಿದ್ರು ಚಿಕ್ಕಪ್ಪನ ಮನೆಗೆ ನಿದಿಗೆ ಗೆ ಹೋಗ್ತೀನಿ ಅಂತ ಹೊದ್ಯಂತೆ ಅಲ್ಲೂ ತಲುಪಿಲ್ಲ ಮನೆಗೂ ಬಂದಿಲ್ಲ ಅಂತ ಗೋಳು ಕಣೋ ಅಂದೇ. ಈಗ ಬೇಗ ಮನೆಗೆ ಹೋಗು ಅಂದೇ ಹೋಗ್ತೀನ್ ಸಾರ್ ಅಂದ .,., ಸಾರ್ ಸಾಯಂಕಾಲ ಸಿಕ್ತೀರ ಅಂದ ನೋಡಾನ್ ತಗೋ ಅಂತ ನಾನು ಹೊರಟೆ, ಇದು ಬೆಳಗಿನ ಸಮಯ ೧೦ ಗಂಟೆಗೆ ಇವನು ರೋಡ್ನಲ್ಲಿ ಸಿಕ್ಕಾಗ ನಡೆದದ್ದು, ಆದರೆ ನಾನು ಮಾತ್ರ ಸಂಜೆ ವರೆಗೂ ಯೋಚಿಸಿದ್ದು ಒಂದೇ ನಿದಿಗೆ ಅಂತ ಹೇಳಿ ಬೆಂಗಳೂರು ಹೇಗೆ ತಲುಪಿದ ಅಂತ.

ಸಂಜೆ ನಾನು ಬರುವಾಗ ಕಾಂಪೌಂಡ್ ನ ಮೇಲೆ ಕುಂತಿದ್ದ, ಇವನು ನನ್ನ ನೋಡಿದ ಕೂಡಲೇ ಸಾರ್ ಬೆಂಗಳೂರು ತುಂಬ ಚಂದಗೈತ್ ಸಾರ್ ಅಂತ ಶುರು ಮಾಡಿದ .,.

ವಿಷ್ಯ ಏನಂತ ಸರಿಯಾಗಿ ಈಗ ಹೇಳೋ ಅಂದೇ, ಅದೇ ಸಾರ್ ನಮ್ಮ ತಾಯಿ ನಂಗೆ ತುಂಬ ಪ್ರೀತಿ ಮಾಡ್ತಾಲ್ ಸಾರ್, ಓಹೋ ಅದಕ್ಕೆ ನೀನ್ ಬೆಂಗಳೂರು ಹೋದ , ಅಲ್ಲಸಾರ್ ಅದು ಎನಾತ್ ಅಂದ್ರೆ ನಾನು ನಿನ್ನೆ ಸಂಜೆ ನಮ್ಮ ಚಿಕ್ಕಪನ ಮನೆ ಇಲ್ಲೇ ನಿದಿಗೆ ಹಂಗೆ ಹೊಗಾನ ಅಂತ ಬಸ್ ಹತ್ತಿದೆ ಅದು ನೋಡಿದ್ರೆ ಬೆಂಗಳೂರು ಬಸ್ ನಾನ್ ಸ್ಟಾಪ್ ನಂಗೆ ಗೊತ್ತಿಲ್ಲ, ಕಂಡಕ್ಟರ್ ಗರಂ ಆಗಿ ನಿದಿಗೆ ನಿಲ್ಸಲ್ಲ ಅಂದ ಭದ್ರಾವತಿ ಇಳಿ ಅಂದ , ನಾನ್ ಹೇಳ್ದೆ ನಾನ್ ಇಳಿದರೆ ನಿದಿಗೆ ಇಲ್ಲಾ ಅಂದ್ರೆ ಬೇರೆಕಡೆ ಇಳಿಯಲ್ಲ ಅಂದೇ ಅವನ್ಗು ನಂಗು ಜೋರ್ ಜಗಳ ಆಯ್ತು, ಆಮೇಲೆ ಯಾವಾಗ್ ನಿದ್ದೆ ಮಾಡಿದ್ನೋ ಗೊತ್ತಿಲ್ಲಾ ಬೆಂಗಳೂರಲ್ಲಿ ಎಚ್ಹರ ಆತು ಇಳ್ದು ಅಲೆಲ್ಲ ಸುತ್ತಿ ಕೈಯಾಗ್ ಇದ್ ವಾಚ್ ಮಾರಿ ಹೊಟ್ಲಾಗ್ ಊಟ ಮಾಡ್ದೆ ಆಮೇಲೆ ಶಿವರಾಜ್ಕುಮಾರ್ ಸಿನಿಮಾ ನೋಡ್ದೆ ಆಮೇಲೆ ಬಸ್ ಸ್ಟ್ಯಾಂಡ್ ವಾಪಸ್ ಬಂದೆ ಅಲ್ಲಿ ಡಿಪೋ ಮೇನೇಜರ್ ಹತ್ರ ಹೇಳ್ದೆ ನಿದಿಗಿ ಇಳೆಬೇಕಾಗಿತ್ತು ಇಲ್ ಇಳ್ದೆ ಅಂತ , ಅವರು ನಿನಗೀಗ ಎಲ್ಲಿ ಹೋಗ್ಬೇಕು ಅಂತ ಕೇಳಿದ್ರು ಶಿವಮೊಗ್ಗ ಅಂದೇ ನಿಂತಿರೋ ಬಸ್ ತೋರ್ಸಿ ಅದು ಹೋಗುತ್ತೆ ಅಂದ್ರು. ಅದರಾಗ್ ಬಂದ್ ಕುಂತೆ ಅಷ್ಟೆ ಅಂದ. ಅಲ್ಲ ಕಣೋ ದುಡ್ಡು ! ಹೋಗಬೇಕಾದ್ರೆ ಜಗಳ ದಿಂದ ಅವ್ನ್ ದುಡ್ಡು ಕೇಳಲಿಲ್ಲ , ಬರಬೇಕಾದರೆ ಡಿಪೋ ಮೇನೇಜರ್ ಹೇಳಿದಾರ್ ಅಂತ ಕಂಡಕ್ಟರ್ ಗೆ ಹೇಳಿದೆ ಅವ್ನು ಹೊರಗೆ ಡಿಪೋ ಮೇನೇಜರ್ ನಿಂತಿರುವುದು ನೋಡಿದ ನಂತರ ಸುಮ್ಮನಾದ , ಕೆ ಬಿ ಕ್ರಾಸಗೆ ಊಟ ತಿಂಡಿ ಎಲ್ಲ ಕೊಡುಸ್ದ ಮದ್ಯ ದಾಗ್ ಒಂದ್ ಜಾಗಾ ನಿಲ್ಲ್ಸ್ದಾಗ ವಡೆ ತಿಂಡಿ ಎಲ್ಲ ಅವ್ನೆ ತಂದು ಕೊಟ್ಟ ಈಗ ಶಿವಮೊಗ್ಗ ಬಸ್ಸ್ಟ್ಯಾಂಡ್ ಇಳಿಬೇಕಾದ್ರೆ ೫೦ ರೂ. ಜೋಬಗಿಟ್ಟ ನೋಡ್ರಿ ಬಾಳ ಒಳ್ಳೆಯ್ ಕಂಡಕ್ಟರ್ ಅಂತ ಕುಷಿಂದ ಹೇಳಿದ. ಮತ್ತೇನು ಹೇಳಿದ ಅಂತ ಕೇಳಿದೆ ಆರಾಮಾಗಿ ತಲುಪಿದೆ ಅಂತ ಹೇಳ್ರಿ ಡಿಪೋ ಮೇನೇಜರ್ ಗೆ ಅಂತ ಹೇಳಕ್ಕೆ ಹೇಳಿದ ನೀವೇ ಹೇಳ್ಬಿದ್ದ್ರಿ ಅಂತ ಬರ್ತ ಇದ್ದೆ ಆಗ ಕರದ್ ಡಿಪೋ ಮೇನೇಜರ್ ನಿಮಗೆ ಏನ್ ಆಗ್ಬೇಕು ಅಂತ ಕೇಳಿದ ನಮ್ಮ ಚಿಕ್ಕಪ್ಪ ಅಂದೇ ,..,,.,.,.,.,.,.

ಏನಾಯ್ತು

ಹೃದಯಕ್ಕೆ ಏನಾಗಿದೆ ಅವನೇ ಬಲ್ಲ
ಇದೇಕೆ ತಣ್ಣಗಾಗಿದೆ ಅವನೇ ಬಲ್ಲ
ಹೃದಯವು ಕೊಟ್ಟೆ ಮನಸ್ಸು ಕೊಟ್ಟೆ
ಹೇಗೆ ಕಾಣದಾಯ್ತೋ ಅವನೇ ಬಲ್ಲ,.

ನನ್ನ ಹೃದಯ ಕಾಣದಾಗಿದೆ ನಿನಗೆ ಗೊತ್ತು
ನನ್ನ ಪ್ರೀತಿ ಕಾಣದಾಗಿದೆ ನಿನಗೆ ಗೊತ್ತು
ನನ್ನ ಕಣ್ಣು ಕಾಣದಾಗಿದೆ ನಿನಗೆ ಗೊತ್ತು
ನಿನ್ನ ಮನಸ್ಸು ಕಲ್ಲಾಗಿದೆ ' ನನಗೆ ' ಮಾತ್ರ ಗೊತ್ತು.,

ಆರಿ ಹೋಗಿದೆ ಆ ದೀಪ ನೀನೆ ಹಚ್ಚಿದ್ದು
ಮುದುಡಿ ಹೋಗಿದೆ ಆ ಗುಲಾಬಿ ನೀನೆ ನೆಟ್ಟಿದ್ದು
ಕಾಣದಾಗಿದೆ ಗಿಣಿ ನೀನೆ ಸಾಕಿದ್ದು
ಬಾಗಿಲು ಮುಚ್ಚಿದೆ ನೀನೆ ತೆರೆದಿದ್ದು.,

ಸೂರ್ಯನು ಉದಿಸಲಿಲ್ಲ
ಚಂದ್ರ ಕಾಣಲಿಲ್ಲ
ಹಕ್ಕಿಗಳು ಹಾರಲಿಲ್ಲಾ
ಮಳೆಯಂತು ಬರಲೇ ಇಲ್ಲಾ .,

ನೀನೆ ಅಲ್ಲವೇ ಹೇಳಿದ್ದು ನಾನು ಬರುತ್ತೇನೆ
ನೀನೆ ಅಲ್ಲವೇ ಹೇಳಿದ್ದು ನಾನು ತರುತ್ತೇನೆ
ಆದರೇನಾಯ್ತು ನಾನು ಹೇಳಿದೆನಲ್ಲ
ನಾನು ನಿನ್ನ ಮದುವೆಗೆ ಬರುತ್ತೇನೆ .,.. ಖಂಡಿತ ಬರುತ್ತೇನೆ .


Sunday, 24 May 2009

ಸ್ಪಂಜಿನ ಹೊಡೆತ

ಸ್ಪಂಜಿನ ಹೊಡೆತ ,.,.,..,.,.,.,
ಪರೇಶ್ ಇಂದೆನಾಯಿತೋ ಹೊಸದು, ಹೌದು ಪರೇಶ್ ಹುಟ್ಟಿದ್ದು ಬೆಳೆದದ್ದು ಧಾರವಾಡ ಆದರೆ ಈಗ ಇರುವುದು ಶಿವಮೊಗ್ಗ. ಅದೆಂದರೆ ಅವನು ೭ ತರಗತಿ ವರೆಗೆ ಓದಿದ್ದಾನಂತೆ . ಆದರೆ ಇವನ ಮಾತು ಕೆಲಸ ಎಲ್ಲ ಹೊಡೆತ ತಿನ್ನುವಂತದೆ ಆದರೆ ಇವನ ಮನಸ್ಸು ತುಂಬ ಒಳ್ಳೆಯದು, ಜನ ಮನಸ್ಸು ನೋಡೋದಲ್ಲ, ಇವನ ಕೆಲಸ ಅಂತಹುದು.
ಏನಾದರು ಆದರೆ ಮೊದಲು ಬಂದು ನನ್ನ ಬಳಿ ಹೇಳಿ ನಂತರ ಸಮಾದಾನ ಮಾಡಿದ ನಂತರ ಮನೆಗೆ ಹೋಗುತ್ತಾನೆ ಅಲ್ಲಿ ವರೆಗೂ ನಿದ್ದೆ ಮಾಡುವದಿಲ್ಲಾ.
ಇಂದು ಅದೇ ಆದದ್ದು ಅದು ಆದದ್ದು ಹೀಗೆ, ಸಂಜೆ ಫಸ್ಟ್ ಶೋ ಸಿನಿಮಾ ನೋಡಲು ವಿನಾಯಕ ಟಾಕಿಸಿಗೆ ಹೋದಾಗ ಸಿನಿಮಾ ಪ್ರಾರಂಭವಾಗಿ ೨೦ ನಿಮಿಷ ಆಗಿತ್ತು ನಮಗೆಲ್ಲಾ ತಿಳಿದಿರುವಂತೆ ಗೇಟ್ ಮ್ಯಾನ್ ಟಾರ್ಚ್ ಹಾಕಿ ದಾರಿ ತೋರಿಸುತ್ತಾನೆ ಅದರಂತೆ ನಾವು ಹೋಗಿ ಕೂರುತ್ತೇವೆ. ಇಲ್ಲೂ ಅದೇ ಆದದ್ದು ಇವನು ಕತ್ತಲೆಯಲ್ಲಿ ಹೋಗಿ ಸೀಟಿನಲ್ಲಿ ಕುಳಿತ ನಂತರ, ಎದುರು ಸೀಟಿಗೆ ಕಾಲು ತಾಗಿಸಿ ಕುಳಿತ ಅದು ಸ್ಪಂಜಿನ ಸೀಟು ನಮಗೆಲ್ಲ ತಿಳಿದಿದೆ . ಸಿನಿಮಾ ನೋಡುವದರಲ್ಲಿ ತಲ್ಲಿನನಾದ ಪರೇಶ್ ಗೆ ಇದು ಸ್ಪಂಜಿಗಿಂತ ಮೃದು ಇದೆ ಎಂಬ ವಿಷಯ ತಿಳಿಯಲು ಸುಮಾರು ೩೦ ನಿಮಿಷ ಕಳೆದಿತ್ತು. ಕ್ರಮೇಣ ತನ್ನ ಎರಡು ಕಾಲುಗಳನ್ನು ಎದುರಿನ ಸ್ಪಂಜಿನ ಮೇಲೆ ಒತ್ತ ತೊಡಗಿದ ಅಷ್ಟರಲ್ಲಿ ಕತ್ತಲೆಯಲ್ಲಿ ಎದುರಿನ ಸೀಟಿನಿಂದ ಒಂದು ಆಕೃತಿ ಇವನ ಕಡೆಗೆ ತಿರುಗಿ ಚಟಾರಣೆ ಬೀಸಿ ಇವನ ಕೆನ್ನೆಗೆ ಹೊಡೆಯಿತು . ಕಾರಣ ಇಷ್ಟೇ ಸ್ಪಂಜು ಎಂದು ಇವನು ತಿಳಿದದ್ದು ಮುಂದೆ ಕುಳಿತಿದ್ದ ಹೆಂಗಸಿನ ಸೀಟ್ ಆಗಿತ್ತು ಅವಳು ನೋವು ತಡೆಯಲಾರದೆ ಚಟಾರಣೆ ಬಾರಿಸಿದ್ದಳು ಕ್ಷಣಮಾತ್ರದಲ್ಲಿ ಇದು ನಡೆದು ಹೋಯಿತು. ರಾಸ್ಕಲ್ ಅರ್ದ ಗಂಟೆ ಇಂದ ನೋಡ್ತಿದೀನಿ ಎಂದು ಗಲಾಟೆ ಶುರು ಮಾಡಿದಳು ಅಷ್ಟರಲ್ಲಿ ಇವನು ಅಲ್ಲಿಂದ ಓಡಿದ್ದು ಮತ್ತೆ ಬಂದು ಕುಳಿತದ್ದು ನಮ್ಮ ಮನೆಯ ಮುಂದಿನ ಕಾಂಪೌಂಡ್ ನಲ್ಲಿ ಇದಿಷ್ಟು ನಡೆದ ಸಂಗತಿ .
ಇದು ನಾನು ಬೇಕಂತ ಮಾಡಿದ್ದಲ್ಲ ಕತ್ತಲೆಯಲ್ಲಿ ನನಗೆ ಗೊತ್ತಾಗಲಿಲ್ಲ ಅಂತ ಅಳತೊಡಗಿದ ನಂತರ ನಗತೊಡಗಿದ . ನಾನು ಅವನಿಗೆ ಮನೆ ಒಳಗೆ ಕರೆದು ಮುಖ ನೋಡಿದಾಗ ಸರಿ ಸುಮಾರೋ ೧೦೦ ಪೌಂಡ್ ಹೊಡೆತ ಬಿದ್ದ ಹಾಗೆ ಕಿವಿ ಕೆನ್ನೆ ಎಲ್ಲಾ ಸರಿಯಾಗಿ ಊದಿಕೊಂಡಿತ್ತು , ಇನ್ನಾದರು ಹುಷಾರಾಗಿರು ಅಂತ ಹೇಳಿ ಮನೆ ಕಳಿಸಿದೆ . ಇದು ಅಲ್ಲಿಗೆ ಮುಗಿಯಲಿಲ್ಲಾ ಮತ್ತೊಂದು ವಾರದಲ್ಲಿ ಹೊಸ ವಿಷಯ ಮಾಡಿ ಕೊಂಡು ಬಂದ ಅದು ನಿಮಗೆ ಮುಂದೆ ತಿಳಿಸುತ್ತೇನೆ ,,.,.,.,.,.,.,.

Friday, 22 May 2009

ನನ್ನ ಹೆಸರು ಏನ್ ಗೊತ್ತ


ಸಾರ್ ನನ್ನ ಹೆಸರು ಏನ್ ಗೊತ್ತ ?
ನನಗೆ ೩ ಹೆಸರುಗಳಿವೆ ಅದರಲ್ಲಿ ನಿಮಗೆ ಯಾವ್ದು ಬೇಕು
೧ ಅಬ್ಬು , ೨ ಸೂಪರ್ಮ್ಯಾನ್ ೩ ಸ್ಪೈಡರ್ಮ್ಯಾನ್
ಇದು ನಮ್ಮ ಅಬ್ಬು ಅವನ್ ಪಾಸು ಪೋರ್ಟ್ ಏನ್ ಕೊಇರಿ ಬಂದಾಗ ಪೋಲಿಸ್ ಸ್ಟೇಷನಲ್ಲಿ ಆಫೀಸರ್ ಕೇಳಿದ ಪ್ರಶ್ನೆಗೆ ಕೊಟ್ಟ ಉತ್ತರ. ಅಂದರೆ ಆಫೀಸರ್ ಅವನ ಬಳಿ ನಿನ್ನ ಹೆಸರು ಏನಪ್ಪಾ ಅಂತ ಕೇಳಿದಾಗ ಕೊಟ್ಟ ಉತ್ತರ , ಅದಕ್ಕವರು ಬಹಳ ಕ್ಯೂಟ್ ಇದನ್ರಿ ಹುಡುಗ ಅಂತ ನಗತೊಡಗಿದರು. ನಂತರ ಹೇಳಿದ್ದು ನಾನು ತುಂಬ ಓದಿ ಕಮಿಷನರ್ ಆಗ್ತೀನಿ ಸಾರ್.
ಅವನು ಹೀಗೆ ಒಂದಲ್ಲ ಒಂದು ಹೇಳ್ತಾ ಇರ್ತಾನೆ, ಗಣೇಶನ ದೊಡ್ಡ ಫ್ಯಾನ್ ಅವನ ಎಲ್ಲ ಹಾಡುಗಳನ್ನು ಹಾಡುತ್ತಾ ಇರುತ್ತಾನೆ. ಇತ್ತೀಚಿಗೆ ಗಜನಿ ಸಿನಿಮಾ ನೋಡಿ ನನಗೆ ಅದೇ ರೀತಿ ಹೇರ್ ಕಟ್ ಬೇಕು ಅಂತ ಮಾಡಿಸಿ ಕೊಂಡ ಅದೇ ಚಿತ್ರ ಇದು. ನಂತರ ಕೆಲ ಒಮ್ಮೆ ನಾನು ಇಂಡಿಯನ್ ಜೈ ಹಿಂದ್ ಅಂತ ಫೋಸ್ ಕೊಡುತಾನೆ , ಇವನ ಎಲ್ಲ ವಿಷಯ ಗಳಿಗೆ ಸರಿ ಎನ್ನುವಂತೆ ಕುಮ್ಮಕ್ಕು ನೀಡುವ ಇವನ ತಂಗಿ " ಅಪ್ಪು " ಹೌದು ಕಣೋ ಅಬ್ಬು , ಇಲ್ಲ ಕಣೋ ಅಬ್ಬು ಹಂಗೆ ಕಣೋ ಅಬ್ಬು ಅಂತ .,., ಇನ್ನು ತುಂಬ ಇದೆ ಮುಂದೆ ತಿಳಿಸುತ್ತೇನೆ ,.,.,.,.,.,.,.,.,.,.,.,.

Thursday, 21 May 2009

ಬರಿ ಕೈಯಲ್ಲ ಪ್ರೀತಿ

ಅಲ್ರಿ ಬರಿಕೈಯಲ್ಲಿ ಬಂದಿದ್ದಿರಲ್ಲ ?
ಬರುವಾಗ ಏನಾದರೂ ತರಬಾರದೆ ,.
ಯೇನ್ಮಾಡೋದೇ ಯಾವ್ದಕ್ಕೂ ಹಣ ಅಥವಾ ಅದೃಷ್ಟ ಬೇಕು,
ಹೋಗ್ಲಿ ಪುಕ್ಕಟೆ ಸಿಕ್ಕಿದಾದರು ಏನಾದರೂ ತರಬಹುದಿತ್ತಲ್ಲ
ಒಂದಷ್ಟು ಪ್ರೀತಿಯಾದರು ನಿಮ್ಮ ಬಳಿ ಇರಲಿಲ್ಲವಾ ,
ಅದಕೆಂದೇ ನಾನು ಇವಳನ್ನು ಕರೆ ತಂದದ್ದು !
ಯಾರ್ರಿ ಇವಳು ? ಪ್ರೀತಿ ಅಂತ ನಮ್ಮ ಆಫೀಸ್ನಲ್ಲಿ
ಟೈಪಿಸ್ಟ್ ?!?! .,,..,.,,.,.

ನಾನು ಹಿಂದಕ್ಕೆ ಹೋಗಲೋ ಅಥವಾ ಮುಂ,.,.,.

೧೯೭೦ ,,,೧೯೮೦,,, ೧೯೯೦,,, ನಾವು ಬೆಳೆದು ಬಂದಾ ದಾರೀ ಹೀಗಲ್ಲವೇ !!!!!!
ನಾನು ಹಿಂದಕ್ಕೆ ಹೋಗಲೋ ಅಥವಾ ಮುಂದಕ್ಕೆ ಹೋಗಲೋ ? ನೆನಪಿದೆಯೆ ನಿಮಗೆ ,
ಮುಂಗ್ಹೇರಿ ಲಾಲ್ ಕೆ ಹಸೀನ್ ಸಪ್ನೆ , ಕರಮ್ಚಂದ್ , ವಿಕ್ರಂ ಅವರ್ ಬೆತಾಲ್, ಏಕ ದೋ ತೀನ್, ಫೌಜಿ ,,,
ಆಗ ಸೀಟ್ ಬೆಲ್ಟ್ ಇರಲಿಲ್ಲ , ಏರ್ ಬ್ಯಾಗ್ ಇರಲಿಲ್ಲ , ಲಾರಿ ಅಂದರೆ ಟ್ರಕ್ ನ ಹಿಂದೆ ಕೂರುವ್ದೆ ಸ್ವರ್ಗ ಸುಖ ,
ಬೇಬಿ ಪ್ರಾಮ್ಪ್ಸ್ ಗೊತ್ತಿಲ್ಲ , ಟಿನ್ ಬಾಟಲ್ ನೋಡಿಲ್ಲ , ಅಡಿಗೆ ಕೋಣೆ ಮಾತ್ರ ಗೊತ್ತು, ಕಿಚನ್ ಪ್ಯಾಂಟ್ರಿ ಗೊತ್ತಿಲ್ಲ
ಸೈಕಲ್ ಎಂಬುದೂ ಪಂಚ ಪ್ರಾಣ, ಅದರ ಚಕ್ರಕ್ಕೆ ರಟ್ಟನ್ನು ಇಟ್ ಮೋಟಾರ್ ಬೈಕ್ ತರ ಶಬ್ದ ಮಾಡ್ತಾ ತುಳಿದ ಆ ರಸ ನಿಮಿಷಗಳ ಸಂತೋಷ !!!!!! ಆಗ ಹೆಲ್ಮೆಟ್ ಇಲ್ಲ, ನೀ ಪ್ಯಾಡ್ ಇಲ್ಲ , ಎಲ್ಬೌ ಪ್ಯಾಡ್ ಇಲ್ಲ, ,,
ಬಾಯಾರಿದಾಗ ನಲ್ಲಿ ನೀರೆ ಎಲ್ಲರೂ ಕುಡಿದದ್ದು , ಬಾಟಲ್ ನೀರು ಯಾರಿಗೂ ಗೊತ್ತಿಲ್ಲ , ಕೈಗೆ ಸಿಕ್ಕ ಕಾಗದ ಮರ ಇಟ್ಟಿಗೆ ಕಲ್ಲು ಚಕ್ರ ಡಬ್ಬ ಎಲ್ಲಾ ಆಟದ ವಸ್ತುಗಳು , ಬ್ರೇಕ್ ಇಲ್ಲದ ಸೈಕಲ್ ನಿಂದ ಬಿದ್ದರು ನೋವು ಗೊತ್ತಿಲ್ಲ , ಹೆದರಿಕೆ ಇಲ್ಲ ನಾವೆಷ್ಟು ಶಕ್ತಿ ವಂತರು ಯೆಂಬ ಧೈರ್ಯ , ಎಷ್ಟೂ ದೊಡ್ಡ ಮರವನ್ನು ಹತ್ತುವ ಹುಮ್ಮಸ್ಸು , ಕತ್ತಲಾಗುವವರೆಗೂ ಆಟ , ಕೀ . ಮೀ ದೂರಗಳು ನಡೆಯುವ ಸ್ಕೂಲು , ಹೋಗುವಾಗ ಹಗ್ಗದಿಂದ ತಯಾರು ಮಾಡಿದ ಬಸ್ಸು ಎಲ್ಲರೂ ಒಟ್ಟಿಗೆ ,
ಬಾಯಾರಿದಾಗ ಒಂದೇ ಲೋಟದಿಂದ ನೀರು ಎಲ್ಲರೂ ಕುಡಿದರೂ ಯಾರಿಗೂ ಯಾವ ರೋಗಗಳು ಬರಲಿಲ್ಲಾ ,
ನಮ್ಮ ಬಳಿ ಮೊಬೈಲ್ ಇರಲಿಲ್ಲ ಆದರು ಒಬ್ಬರಿಗೊಬ್ಬರು ಸಹಕಾರ ಸಂಬಾಷಣೆ ಸರ್ಯಾಗಿ ನಡಯುತಿತ್ತು ,
ಹಲ್ಲು ಮುರಿದಿತ್ತು ಕಾಲು ಮುರಿದಿತ್ತು ಕೈ ಮುರಿದಿತ್ತು ಎಲ್ಲ ನಮ್ಮ ತಪ್ಪುಗಳೇ ಆದರು ಸಂತೋಷದಲ್ಲಿ ಎಲ್ಲ ಮರೆತಿದ್ದೆವು,
ಎಲ್ಲವನ್ನು ತಿನ್ನುತ್ತಾ ಒಂದೇ ಇದ್ದಾಗ ಅದನ್ನು ಅಂಗಿ ಮದ್ಯ ಇಟ್ ಹಲ್ಲಿಂದಾ ತುಂಡು ಮಾಡಿ ಎಲ್ಲರೂ ತಿನ್ನುತ್ತಿದ್ದೆಉ,
ಈ ಮದ್ಯೆ ನಮ್ಮಲ್ಲಿ ಒಬ್ಬರಿಗೆ ಒಂದು ಸೋಡಾ ಬಾಟಲ್ ಕುಡಿಯಲು ಸಿಕ್ಕರೆ ಎಲ್ಲರು ಅದರಿಂದಲೇ ಕುಡಿವುದು ಎಂಜಲು ಎಬುದು ಗೊತ್ತಿಲ್ಲ , ಕೆಲಒಮ್ಮೆ ಪರೀಕ್ಷೆಯಲ್ಲಿ ಯಾರಾದರು ಫೈಲ್ ಆದರೆ ಮುಂದಿನ ಪರೀಕ್ಷೆ ಬರಿಯೋದು ಅಷ್ಟೆ , ಅದು ಬಿಟ್ಟು
ಮನೋರೋಗ ವೈದ್ಯರಲ್ಲಿ ಯಾರೂ ಹೋಗಿಲ್ಲ , ಕೌನ್ಸಿಲಿಂಗ್ ನಡೆಸಿಲ್ಲಾ ,.
ಗುರು ಹಿರಿಯರನ್ನು ಗೌರವಿಸುತ್ತಿದ್ದೆವೂ ,

ಈಗ ಏಕೆ ಹೀಗೆ ಯಾವ್ದು ಸರಿ ಯಾವ್ದು ತಪ್ಪು ?
ನಾನು ಹಿಂದಕ್ಕೆ ಹೋಗಲೋ ಮುಂದಕ್ಕೆ .,.,,.,.,.,.,.

Wednesday, 20 May 2009

ದೂರದಿಂದ ಒಮ್ಮೆ ನೋಡುವಾಸೆ

ಹೌದು ದೂರದಿಂದ ನಿನ್ನ ಒಮ್ಮೆ ನೋಡುವಾಸೆ !
ಆದರೆ ನಿನ್ನ ಹತ್ತಿರ ಬರಲು ನನಗಿಷ್ಟವಿಲ್ಲ !
ಆಸೆಯಿಲ್ಲ ನಿನ್ನನ್ನನ್ನೂ ಪಡೆಯಬೇಕೆಂಬ !
ಆದರೆ ನಿನ್ನನ್ನೂ ಬಿಟ್ಟು ಬದುಕಲಾರೆ ,

ಒಂದೊಂದು ಕ್ಷಣವೂ ಒಂದೊಂದು ವರುಷದಂತೆ !
ಪ್ರತಿ ಕ್ಷಣ ಪ್ರತಿ ನಿಮಿಷವೂ ನೀನಿಲ್ಲದ ನನ್ನ ಕಾಯುವಿಕೆ !
ನೀನಾನದರೋ ನಿನ್ನ ಜೀವನದ ಸಂತೋಷದಲ್ಲಿ ಮುಳುಗಿರುವೆ !
ಆದರೆ ನಾನು ನೀನಿಲ್ಲದ ಜೀವನದಲ್ಲಿ ಮುಳುಗುತಿರುವೆ .,.,,.,.

ಚಂದ್ರಲೋಕದಲ್ಲಿ ಮಲಯಾಳಿ

ಸಂಪೂರ್ಣ ಕತೆ ಹೇಳುವ ಚಿತ್ರ ಅಂದರೆ ಚಂದ್ರಲೋಕದಲ್ಲೂ ಮಲಯಾಳಿಯಾ ಸಾನಿದ್ಯವಿದೆ ಎಂಬುದಕ್ಕೆ ಒಂದು ಉತ್ತಮ ಜಾಹಿರಾತು. ಕಾರಣ ಮಲಯಾಳಿ ಇಲ್ಲದ ಸ್ತಳವಿಲ್ಲ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಷಯ. ಈ ಚಿತ್ರ ಇಲ್ಲಿ ಅಂದರೆ ಗಲ್ಫ್ ನಲ್ಲಿ ಬಹಳ ಚರ್ಚೆ ಗೋಳಪಟ್ಟದ್ದು. ಮಲಯಾಲಿಗಳು ತುಂಬ ಸಂತೋಷ ಗೊಂಡಿದ್ದರು

Monday, 18 May 2009

Aisi apni Wife ho


Kaaaassshhh,.,.,.,.

Aisi apni Wife ho,,,,,,,,,,
5'6" jiski hight ho,
Jeans uski tight ho,
Chehra uska bright,
Weight mey thoda light ho,
Umer mey difference slight ho,
Thodi si wo quite ho,
Aisi apni Wife ho,,,,,

Sadak per sab kahe kya cute ho,
Bhid me sab kahe side h0 side ho,
India ki paidaish ho,
Sas ki seva jis ki khwahish ho,
Aisi apni Wife ho,,,,,

Padosi jab baat kare to haat mey knife ho,
Dinner candle light ho,
Dono mey na kabhi fight ho,
Milne ke baad dil delight ho,
Hey prabhu teri archana us ki life ho,
Yah kavita padkar sub kahe " Guru tu right ho",
Aisi apni Wife ho,,,,,,,

Kaash ye concept 0.00001 percent bhi right ho,
Agar aisi apni Wife hoto kya hasin life ho,
Har kisi ki yahi farmaish ho,
Khudrat ki bhi aazmaish ho,
Khuda key software mein bhi bug ki gunjaish na ho,
Ay kaash, kahin to ek aisi paidaish ho,
Aisi apni wife ho, asi apni wife,,,,,,

Sunday, 10 May 2009

ಅವಳ ಸರ್ಪ್ರೈಸ್

ಸೂಪರ್ ಗುಬಾಯಿ (ದುಬಾಯಿ)

ಏನ್ ಸ್ವಾಮಿ ಅಲ್ಲಿ ಗುಬೈಯಲ್ಲಿ ಒಂಟೆ ಮೇಲೆ ಬೇಸಾಯ ಮಾಡ್ತಾರಂತೆ ಹೌದಾ ? ಸೂಪರ್ ಬಾಷೆಯಲ್ಲಿ ಗುಬಾಯಿ ಅಂದರೆ ದುಬಾಯಿ ಅಂತ. ನಾನು ಹೇಗೆ ಹೇಳಲಿ ನನ್ನ ೧೬ ವರುಷಗಳ ಜೀವನದಲ್ಲಿ ಅಲ್ಲಿ ಬೇಸಾಯ ಎಂಬುದೂ ನೋಡಿಲ್ಲ ಆದರೆ ಇರಬಹುದೇನೋ ಗೊತ್ತಿಲ್ಲ . ಈ ಸೂಪರ್ ಗೆ ಈ ವಿಷಯ ಯಾರು ಹೇಳಿರಬಹುದು ! ಅನ್ನುತ್ತಾ ಅದೆಲ್ಲ ಬೇಡ ನಾನು ಮುಂದಿನ ವಾರ ಹೋಗುವಾಗ ನನ್ನ ಜೊತೆ ನೀನು ಬಾ ಆಗ ಎಲ್ಲ ವಿಷಯ ನೀನೆ ಖುದ್ದು ನೋಡಿ ತಿಳಿಯಬಹುದು, ಅಲ್ಲಿ ಒಳ್ಳೆ ಸಂಬಳ ಸಹ ಸಿಗುತ್ತೆ ಎಂದೇ, ಅದಕ್ಕೆ ಸೂಪರ್ ಉತ್ತರ ಅಯ್ಯೋ ಸಂಬಳ ದುಡ್ಡು ಎಲ್ಲಾ ನಂಗೆ ಯಾಕೆ ಸಾಮಿ ನಾನು ಇಲ್ಲಿ ಆರಾಮಾವಾಗಿದ್ದಿನಿ ಸುಕವಾಗಿದ್ದೀನಿ ಸೂಪರ್ - ಸೂಪರ್ ಅಂತ ಜೋರಾಗಿ ನಕ್ಕು ಹೇಳಿದ, ನನಗಿಲ್ಲಿ ಎಲ್ಲರೂ ಚೆನ್ನಾಗೆ ನೋಡುತ್ತಾರೆ ಅಮ್ಮ ಅಕ್ಕ ವಾದ್ಯಾರ್ ಮಕ್ಕಳು ತುಂಬ ಚೆನ್ನಾಗೆ ಮಾತಾಡ್ತಾರೆ ಎಂದು ಹೇಳುತ್ತಾ ಒಂದು ತಮಿಳು ಹಾಡನ್ನು ಹಾಡಲು ಶುರುಮಾಡಿದ, ಅಂದರೆ ಒಂಟಿಯಾಗಿರುವ ಈ ಮನುಷ್ಯ ನಮ್ಮ ಮನೆಯವರನ್ನೆಲ್ಲ ಒಂದೊಂದು ಹೆಸರಿಂದ ತನ್ನದೇ ಆದ ಸಂಬಂದ ಗಳ ಹೆಸರಿನಲ್ಲಿ ಕರೆಯುತ್ತಾನೆ. ಹಬ್ಬ ಮದ್ವೆ ಇತರ ಕಾರ್ಯಕ್ರಮಗಳಿಗೆ ತನ್ನಿದಾಗುವ ಸಹಾಯ ಅಂದರೆ ಮನೆಯ ಸುತಮುತ್ತ ಗುಡಿಸುದು ಮನೆಯನ್ನು ಕಾಯೋದು ಇತರೆ ಕೆಲ್ಸಗಲ್ಲ್ನು ಹೇಳದೆಯು ಮಾಡುತ್ತಾನೆ.

ಸೂಪರ್ ನ ಹೆಸರು ಮುರಗೇಶ ಅಂತೆ ಊರು ತಮಿಳುನಾಡು ಯವ್ವನದಲ್ಲಿ ಯಾರನ್ನೋ ಪ್ರೀತಿಸಿ ನಂತರ ಮನೆಯವರು ಒಪ್ಪದಿದ್ದಾಗ ಆ ಹುಡುಗಿ ಆತ್ಮ ಹತ್ಯೆ ಮಾಡಿಕೊಂಡಳು, ಆ ನೋವಿನಲ್ಲಿ ಸೂಪರ್ ಊರು ಬಿಟ್ಟದ್ದು ಮತ್ತೆ ಹೋಗಿಲ್ಲ ಜೀವನ ಪೂರ್ತಿ ಬ್ರಹ್ಮಚಾರಿಯಾಗಿ ಹೀಗೆ ಚಿಕ್ಕ ಪುಟ್ಟ ಕೂಲಿ ಕೆಲಸ ಮಾಡಿ ಸಂತೋಷವಾಗಿ ಹಾಡು ಹೇಳುತ್ತಾ ಎಲ್ಲರನ್ನು ರಂಜಿಸುತ್ತ ಜೀವಿಸುತಿದ್ದಾನೆ ಮನಸ್ಸಿನಲ್ಲಿನ ನೋವನ್ನ ಹಾಡಿನ ಮೂಲಕ ಹೊರಹಾಕುತ್ತ ಸೂಪರ್ - ಸೂಪರ್ ಅನ್ನುತ್ತಾನೆ .
ಸಾಮಾನ್ಯವಾಗಿ ಈ ಬಡಾವಣೆಯ ಯಲ್ಲಾ ಜನರು ಸೂಪರ್ ಗೆ ಪರಿಚಯವಿದ್ದಾರೆ ಎಲ್ಲರೊಂದಿಗೂ ಒಡನಾಟವಿದೆ ಸೂಪರ್ ಗೆ ಮಾತ್ರ ಎಲ್ಲರೂ ಸಹಾಯ ಮಾಡುತ್ತಾರೆ .

ಒಂದು ದಿನ ಸಂಜೆ ನನ್ನಬಳಿ ಬಂದು ಸ್ವಾಮಿ ಚಿಲ್ಲರೆ ದುಡ್ಡು ಇದ್ದರೆ ಕೊಡಿ ಅಂದ ಸೂಪರ್, ನಾನು ೨೦/- ಕೊಟ್ಟೆ ಅದಕ್ಕೆ ಸೂಪರ್ ಹೇಳಿದ್ದು ನನಗೆ ೧೦/- ಸಾಕು ಸ್ವಾಮಿ ಜಾಸ್ತಿ ದುಡ್ಡು ನನಗ್ಯಾಕೆ ಸ್ವಾಮಿ ?
ಎಂದು ಹೇಳುತ್ತಾ ಈಗ ಬರುತ್ತೇನೆ ಸಾಮಿ ಅಂತ ಅಂಗಡಿಯ ಕಡೆಗೆ ನಡೆಯತೊಡಗಿದ ಜೋರಾಗಿ ತಮಿಳು ಹಾಡು ಕೇಳಿಸುತ್ತಾ ,. ಹೌದು ಮನುಷ್ಯನಿಗೆ ಜಾಸ್ತಿ ದುಡ್ಡು ಯಾಕೆ ,.,.,.
ಎಂದು ಯೋಚಿಸುತ್ತಾ ನನ್ನ ಕ್ಯೆಯಲ್ಲಿನ ನನ್ನ ವಿಮಾನದ ಟಿಕೆಟ್ ಅನ್ನು ನೋಡತೊಡಗಿದೆ .,,.
ಹೌದು ಜಾಸ್ತಿ ದುಡ್ಡು ಯಾಕೆ ?

Saturday, 9 May 2009

ದೂರ ಮಾಡದಿರಿ ನನ್ನ


ನಾನೇನು ಮಾಡಿದ್ದೆ ,.,.
ನೀವೇ ಅಲ್ಲವೇ ನನ್ನನ್ನು ದೂರ ಮಾಡಿದ್ದು , ನೀವಲ್ಲವೇ ಸೃಷ್ಟಿಸಿದ್ದು ಈ ಅಂತರ ,
ನನ್ನದಲ್ಲದ ಯಾಂತ್ರಿಕ ದೋಣಿಯನ್ನು ನೀವಲ್ಲವೇ ತಂದ್ದಿದ್ದು , ನಾನಾದರೋ
ನೀವು ಬರಿ ಪ್ರೀತಿಯಲ್ಲಿ ಜೀಕಿದರೆ ಸಾಕು ನಿಮ್ಮನ್ನು ಎಲ್ಲಿಗೆ ಬೇಕಾದರೂ ಕರೆದೊಯುತ್ತೇನೆ ,.
ಏನು ಮಾಡಲಿ ನೀವೇ ನನ್ನ ದೂರ ಮಾಡಿದಿರಿ,
ನನಗೆ ಇಂದನ ಬೇಕಾಗಿಲ್ಲ - ವಿದ್ಯುತ್ ಬೇಕಾಗಿಲ್ಲ ,.
ಬೇಕಾಗಿರುವುದು ನಿಮ್ಮ ಪ್ರೀತಿಯಾ ಜೀಕು - ಅಷ್ಟೆ ಸಾಕು.
ಬೇಸರಿಸಬೇಡಿ !
ಇಂದನ ಮುಗಿಯಿತೋ , ಯಂತ್ರ ತಡೆಯೋ !
ಬನ್ನಿ ಪ್ರೀತಿಯಿಂದ ಜೀಕಿರಿ ನಿಮ್ಮೆಲ್ಲರನ್ನು ಸುರಕ್ಷಿತ ಸ್ತಳ ಸೇರಿಸುತ್ತೇನೆ
ನನಗೆ ಬೇಕಾಗಿರುದು ನಿಮ್ಮ ಪ್ರೀತಿ , ನಾನು ನಿಮ್ಮೊಂದಿಗಿರಲು ಸಂತೋಷ ಪಡುತ್ತೇನೆ .,
ದೂರ ಮಾಡದಿರಿ ನನ್ನ .,.,.,.,.,.,

Friday, 8 May 2009

ಮನಸ್ಸು

ನನ್ನ ಹೆಸರು ಇಸ್ಮಾಯಿಲ್ ಎಂ ಕುಟ್ಟಿ

ನನ್ನ ಊರು ಮಲೆನಾಡಿನ ತವರೂರು ಶಿವಮೊಗ್ಗ,

ಕಲಿತದ್ದು ಸಹ್ಯಾದ್ರಿ ಕಾಲೇಜು

ಉದ್ಯೋಗ ಅಬು ಧಾಬಿ . ಯು ಏ ಇ

Gharur

Jis sar ko gharur hai aaj yahaan taajwaari ka,
Kal us pe yehin shor hai noha gari ka.

Aafaaq ki manzil se gaya kaun salaamat,
Asbaab luta raah mein yahaan har safri ka.

Zindaa mein bhi shorish na gayi apne janun ki,
Ab sang madaawa hai is ashufta sari ka.

Is rang se jhamke hai palak par ke kahe tu,
Tukra hai mera ashk aqiq-e-jigari ka.

Le saans bhi aahista ke naazuk hai bahut kaam,
Aafaaq ki is kaargah-e-shisha gari ka.

Tuk Mir-e-jigar sokta ki jalad khabar le,
kya yaar bharosa hai chirag-e-sahri ka.
(Mir Taqi Mir)

Thursday, 7 May 2009

ಮೈ ಹಾರ್ಟ್ ಬೀಟ್1st
Dile nadaa,,n huva kya hai
Aakhir is dard ki duva kya hai
Hum hain mushtaaq aur vo bezaar
Yaa ilaahi ye maajrakyaa hai
Main bhi mu,n may zubaan raktha hu,n
kaash pucho ki maajra kya hai
2nd
Jab ke tuj bin nahin koi maujud
phir ye hangaama ai khudaa kya hai.,
Ye pari cheharaa log kaise hai,n
Gamazaa-o-ishva-o-ada kya hai
Sabazaa-o-gul khaa,n se aaye hai,n
Abr kua chiiz hai havaa kyaa hai
Humko unse vafa kii hai ummeed
Jo nahi,n jaante vafa kya hai
Haa,n bhala kar tere bhala hogaa
Aur dervesh ki sadaa kyaa hai
Jaan tum par nisaar kartaa huu,n
Mai,n nahii,n jaantaa duaa kyaa hai
Mai,n ne maanaki ki kuch nahi,n 'Ghalib'
Muft haath aaye to bura kya hai.,.,.
(Mirza Ghalib)