Tuesday 28 July 2009

Marcato Mall - ದುಬೈ

Posted by Picasa

ತಾನೊಬ್ಬ ಮಹಾನ್ ಪಿಯಾನೋ ವಾದಕ ಎಂಬುದು ಎಲ್ಲರಿಗು ತಿಳಿದಿರುವಾಗ ಅದನ್ನೇ ಬಳಸಿ, ಅನಾಥ ಮಕ್ಕಳಿಗೆ ಸಹಾಯಕ್ಕಾಗಿ ತನ್ನ ಮನಮೋಹಕ ಪಿಯಾನೋ ವಾದದಿಂದ ಎಲ್ಲರ ಮನಸನ್ನು ಗೆದ್ದು , ಅದರ ಮೂಲಕ ಬರುವ ಹಣವನ್ನು ಅಂಥ ಮಕ್ಕಳಿಗೆ ಕೊಡಲಿಕ್ಕಾಗಿ Dubai - Marcato Mall ನಲ್ಲಿ ಸಂಗೀತ ರಸ ನಿಮಿಷಗಳು ನಡೆಸುತ್ತಿರುವ ವ್ಯಕ್ತಿಯೊಂದಿಗೆ ನನ್ನ ಒಂದು ಕ್ಷಣ ಮುಖ .

Burjuman Center - Dubai

Posted by Picasa

ಬರ್ ಜುಮಾನ್ ಸೆಂಟರ್ - ದುಬೈ .

ಫುಡ್ ಕೋರ್ಟಿನ ಒಂದು ಚಿತ್ರ

Colour Sale

Posted by Picasa

ಇದು ಯಾವ ರೀತಿ ಡಿಸ್ಕೌಂಟ್ ನನಗಂತೂ ಅರ್ಥವಾಗಲಿಲ್ಲ

Stone

Posted by Picasa

ಇತ್ತೀಚಿಗೆ " ವಿಲರಿ ಬೋಕ್ " ತನ್ನ ಜಾಹಿರಾತಿನೊಂದಿಗೆ ಮನೆ ಮನೆಗಳಿಗೆ ತಲುಪಿಸಿದ ಅರ್ಥವಾಗದ ಕಲ್ಲು.

Pot " ನೀರಿನ ಕುಡಿಕೆ "

Posted by Picasa

ಇದು ಎಲ್ಲರು ಸೇರಿ Fujairah & Khorfakkan ಟ್ರಿಪ್ ಹೋಗಿ ಬರುವಾಗ ನನ್ನವಳು ಕೊಂಡು ತಂದ ನೀರಿನ ಕುಡಿಕೆ. ಇದಕ್ಕೆ ಒಂದು ಪ್ರತ್ಯೇಕತೆ ಇದೆ. ಅದೆಂದರೆ ಇದರಲ್ಲಿ ನೀರು ತುಂಬಿ ಇಟ್ಟರೆ, ಇದರ ಹೊರಮೈ ಇಬ್ಬನಿ ಬಂದಂತೆ ನೀರು ಬಿಡುತ್ತದೆ. ಅಲ್ಲದೆ ನೀರು ಬಹಳ ತಂಪಾಗಿರುತ್ತದೆ

Monday 27 July 2009

ಇದು ಒಳ್ಳೆ ಆಯ್ತಲ್ರೀ

ರಿಂಗು,,,,,,,

ಮೊದ್ಲು

ಮೊಬೈಲ್ ರಿಂಗು,

ಆಮೇಲೆ ಚಾಟಿಂಗು,

ಅಮ್ಮೇಲೆ ಡೆಟಿಂಗು,

ನಂತರ ಔಟಿಂಗು,

ಎಲ್ಲ ಮುಗಿದ ಮೇಲೆ ಹಾಸ್ಪಿಟಲ್ಗೆ ರಿಂಗು ,,,!

=== ==== ====

ಈ ರೋಡು ಎಲ್ಲಿಗೆ ಹೋಗುತ್ತೆ ಸಾರ್ ?

ರೋಡು ಎಲ್ಲಿಗೂ ಹೋಗಲ್ಲ ನೀವೇ ಹೋಗ್ಬೇಕು .

=== ====

ಅದು ಏನಾಯ್ತು ಅಂದ್ರೆ ?

ನೀವು ಹೇಳುದ್ರೆ ಅಲ್ವ ಗೊತ್ತಾಗೋದು .

ಆ ಇವ್ರು ಇದಾರಲ್ಲ್ರಿ

ಯಾರು .

=== ====

ಹುಡುಗ ಒಳ್ಳೆ ಆಪಲ್ ತರ ಇದಾನ್ರಿ .!

ಹೇಗೆ ಸಾದ್ಯ .

ಹುಡುಗಿ ಒಳ್ಳೆ ಗೊಂಬೆ ಗೊಂಬೆ ಕಣ್ರೀ

ಮದುವೆ ಹೇಗೆ ಸಾದ್ಯ.

=== ==== ====

ಮನೆ ಅಂದ್ರೆ ಆ ರೀತಿ ಇರ್ಬೇಕು ಕಣ್ರೀ !

ಹಾಗಾದ್ರೆ ಬಾಕಿ ಎಲ್ಲ ಮನೆ ಅಲ್ವ .

== == ==

ಎ ಇಲ್ಲ ಸಾರ್ ನಾನು ಕೇಬಲ್ ಹಾಕ್ಸಿಲ್ಲ ಕಾರಣ

ಮಕ್ಕಳು ಹಾಳಾಗ್ಬಿಡ್ತಾರೆ

ಹಾಗಾದ್ರೆ ನೀವು ಹಾಳಾಗಿದ್ದು ? .

=== === ===

ಮಕ್ಕಳು ಹೆಂಗೆ ಅಂದ್ರೆ ನಾವು ಮನೆಯಲ್ಲಿ ಯಾವು ರೀತಿ ಕಲಿಸುತ್ತೆವೋ ಅದನ್ನೇ ಕಲಿಯೋದು ಸಾರ್

ಓಹೋ ಅವ್ನು ಕುಡಿಯೋದು ಕಲಿತದ್ದು ,,,,,,, !

Sunday 26 July 2009

ಎದುರು ಮನೆ ಆಂಟಿ ತುಂಬ ಒಳ್ಳ್ಯೋರು ಕಣೋ

ಸುಬ್ಬು : ಅಲ್ಲ ಕಣೋ ಸುರೇಶ ಆಫಿಸಿಂದ ಮನೆಗ ಹೋಗಬೇಕಾದ್ರೆ ದಿನ ಏನಾದ್ರೂ ಶಾಪಿಂಗ್ ಮಾಡ್ತಿಯಲ್ಲೋ ನಿಂಗ್ ಸಿಟ್ ಬರಲ್ಲೇನೋ ಹೆಂಡ್ತಿ ಮೇಲೆ.

ಸುರೇಶ : ಇದು ನಮ್ ಮನೆಗ್ ಅಲ್ಲ ಕಣೋ ಎದುರುಮನೆ ಆಂಟಿಗೆ ಅವ್ರು ತುಂಬ ಒಳ್ಳೆಯವರು ಕಣೋ ,,,,,,ಹೆಂಡ್ತಿ ಹೇಳುದ್ರೆ ತಗೊಂಡು ಹೋಗಕ್ಕೆ ನಂಗೇನ್ ಹುಚ್ಹ ಅಂತ ತಿಲ್ಕೊಂಡಿದಿಯ ನಾನ್ ಕಣ್ ಬಿಟ್ರೆ ಸಾಕ್ ನನ್ ಹೆಂಡ್ತಿ ಹೆದ್ರತಾಳೆ .,.
,,,,, ,,,,, ,,,,,,,,
ಸುರೇಶನ ಹೆಂಡತಿ ಸುಬ್ಬು ಹೆಂಡತಿ ಹತ್ರ ಹೇಳಿದ್ದು - ಏನಾದ್ರೂ ಆಗ್ಲಿ ಎಷ್ಟೇ ಕಷ್ಟದ ಕೆಲಸ ಇದ್ರೂ ಪರವಾಗಿಲ್ಲ ನಮ್ಮ ಎಜಮಾನ್ರು ನೋಡ್ರಿ, ಎದುರುಮನೆ ಆಂಟಿ ಬಾಯಲ್ಲಿ ಹೇಳುಸ್ಬಿಡ್ತೀನಿ ಅಷ್ಟೆ. ಈ ಮನುಷ್ಯ ಪಾಪ ಆಂಟಿ ಹೇಳಿದಾರೆ ಅಂತ ಕತ್ತೆ ತರ ಕೆಲಸ ಮಾಡ್ತಾರೆ .
'''' ನಾನು ಹೇಳದು ಅಂತ ಇವ್ರಿಗೆ ಇದುವರ್ಗೂ ಗೊತ್ತಿಲ್ಲ ""

Friday 24 July 2009

ಏನ್ರಿ ಇದು

ಚಂದಿರ ,,,,,, !

ಓ ನನ್ನ ಪ್ರೀತಿಯ ಚಂದಿರ

ನೀನೆ ನನ್ನ ಇಂದಿರಾ

ನೀನಿಲ್ಲಿಗೆ ಬಂದರೆ

ನಾನಾಗುವೆ ಪ್ರೀತಿಯ ಮಂದಿರ.

=== ==== ====

ಓ ಪ್ರೀಯೆ ,,,,,,!

ನನ್ನ ಅದೃಷ್ಟದ ಬಾಗಿಲು ತೆರೆದಿದೆ

ಆದರೆ ನನ್ನ ಸಮಯ ಸರಿಯಿಲ್ಲ ಕಾರಣ

ನಿನಗಾಗಿ ನಾನು ತಾಜ್ ಮಹಲ್ ಕಟ್ಟಬೇಕೆಂದು ಕಾದಿರುವೆ

>>>>>>>>

ನನ್ನ ಅದೃಷ್ಟದ ಬಾಗಿಲು ತೆರೆದಿದೆ

ಆದರೆ ನನ್ನ ಸಮಯ ಸರಿಯಿಲ್ಲ ಕಾರಣ ನೀನು ಸಾಯುತ್ತಿಲ್ಲ ಕಾರಣ

ನಾನು ತಾಜ್ ಮಹಲ್ ಕಟ್ಟ ಬೇಕೆಂದು ಕಾದಿರುವೆ .

===== ==== ===== ====

ನನ್ನ ಹೃದಯದ ಪ್ರತಿಯೊಂದು ಏರಿಳಿತಗಳು ನಿನಗಾಗಿ

ನನ್ನ ಪ್ರತಿ ಮುಗುಳ್ನಗೆಯೂ ನಿನ್ನ ಚೆಲ್ಲಾಟಕ್ಕಾಗಿ

ನಿನ್ನ ಪ್ರತಿಯೊಂದು ಚಲನೆಯು ನನ್ನ ಮನಸ್ಸನ್ನು ಕದಿಯುವುದಕ್ಕಾಗಿ

ಈಗಂತೂ ನನ್ನ ಜೀವನವೇ ನಿನ್ನ ನಿರೀಕ್ಷೆಗಾಗಿ .

==== ===== =====

ನನ್ನ ಹೃದಯವಂತೂ ನಿನ್ನ ಪ್ರೀತಿಗಾಗಿ ಹುಚ್ಚಾಗಿದೆ

ಕಾರಣ ಎಲ್ಲವನ್ನು ಬಿಟ್ಟು ನಿನ್ನ ಬಳಿ ಬಂದಿದೆ

ನನಗದರ ಅವಶ್ಯಕತೆ ಇದ್ದಾಗ್ಯೂ ಅದು ಅಲ್ಲಿ ಕುಳಿತಿದೆ

ಇಲ್ಲಿ ಬಂದಾಗಾ ಅದು ಹೃದಯ ಬಡಿತವನ್ನೇ ನಿಲ್ಲಿಸಿದೆ .

=== === === ===

ನಿನ್ನ ಹೆಸರನ್ನು ಎಷ್ಟು ಸಂತೋಷದಿಂದ ಬರೆದು ಬರೆದು

ನನ್ನ ಮನೆಯ ಗೋಡೆಯನ್ನು ಅಲಂಕರಿಸಿದ್ದೆ

ಈಗ ಅಳಿಸಲು ಅಷ್ಟೆ ಬೇಸರದಿಂದ ಕಷ್ಟ ಪಟ್ಟು

ಅಳುತ್ತ ಅಳುತ್ತ ಅಳಿಸುತ್ತಿದ್ದೇನೆ

ಆದರೇನು ಗೋಡೆ ವಿಕಾರವಾಗಿದೆಯಲ್ಲ ,,?

=== === ===

ದಿನವು ಹುಡುಗಿಯ ಸೌಂದರ್ಯವನ್ನು ನೋಡಿ ಆನಂದಿಸುತ್ತಿದ್ದ ಕಾಲೇಜು ಹುಡುಗ ಒಂದು ದಿನ

ರೀ ನಿಮ್ಮ ಒಂದು ಫೋಟೋ ಬೇಕಾಗಿತ್ತು ಎಂದ. ಅದಕ್ಕೆ ಹುಡುಗಿ

ಪಾಸ್ಪೋರ್ಟ್ ಸೈಜ್ ಬೇಕಾ ಪೋಸ್ಟ್ ಕಾರ್ಡ್ ಸೈಜ್ ಬೇಕಾ ?

ಒಳ್ಳೆಯದು ಯಾವುದು ಇದೆ ಅದೇ ಕೊಡಿ ಅಂದ.

ಹುಡುಗಿ ಹೇಳಿದಳು ಪೋಸ್ಟ್ ಕಾರ್ಡ್ ಸೈಜ್ ಒಳ್ಳೆಯದು ಅದರಲ್ಲಿ ನಮ್ಮ ಯಜಮಾನರು ನನ್ನೊಟ್ಟಿಗೆ ತುಂಬ ಚೆನ್ನಾಗಿ ಕಾಣ್ತಾರೆ.

====== ==== =====

Thursday 23 July 2009

ಜನಸಂಖೆ ಹೆಚ್ಚಾಗಲು ಇದೂ ಒಂದು ಕಾರಣ ಅಂತೆ

ಭಾನುವಾರ ಬೆಳಗ್ಗೆ ಗಿಡಗಳಿಗೆ ನೀರು ಹಾಕುತ್ತ ಇದ್ದೆ ಅಲ್ಲಿಗೆ ಬಂದ ಪರೇಶ ಸಾರ್ ನಮಸ್ಕಾರ ಸಾರ್ ಏನ್ ಸಾರ್ ತಿಂಡಿ ಆಯ್ತಾ ಸಾರ್ ಅಂದ ಇಲ್ಲ ಕಣೋ ಅಂದೇ. ಒಳ್ಳೇದ್ ಆಯ್ತು ಸಾರ್ ಬೇಗ ರೆಡಿ ಆಗ್ರಿ ಮೀನಾಕ್ಷಿ ಭವನ್ ಹೋಗಿ ತಿಂಡಿ ತಿನ್ಕೊಂಡ್ ಬರಾಣ ಅಂದ. ಆಯ್ತು ತಡಿ ಎಂದು ಬೇಗ ರೆಡಿಯಾಗಿ ಇಬ್ಬರು ಬೈಕ್ ಹತ್ತಿ ಹೋರಟೆವು

ಬಿ ಹೆಚ್ ರೋಡ್ ನಲ್ಲಿರುವ ಮೀನಾಕ್ಷಿ ಭವನ್ ನಮಗೆಲ್ಲರಿಗೂ ಇಷ್ಟವಾದ ಹೋಟೆಲ್. ರುಚಿಯಾದ ತಿಂಡಿಯನ್ನು ತಿಂದು ಒಂದು ಟೀ ಕುಡಿದರೆ ಏನೋ ಆಹ್ಲಾದ, ಒಂದೊಂದು ಭಾನುವಾರ ಒಂದೊಂದು ಹೋಟೆಲ್ ಗೆ ತಿಂಡಿಗೆ ಹೋಗೋದು ಬೇರೆಯದೇ ಸಂತೋಷ ಮತ್ತು ಸಂತೃಪ್ತಿ .

ಹೀಗೆ ಬೈಕ್ ಹತ್ತಿ ಹೊರಟ ನಾವು ಟ್ರಾಫಿಕ್ ಬಗ್ಗೆ ಜನ ಜಂಗುಳಿಯ ಬಗ್ಗೆ ಮಾತನಾಡುತ್ತಾ ಹೋಗುತ್ತಿದ್ದಾಗ ಪರೇಶ ಬರಿ ಜನ ಸಂಖೆ ಬಗ್ಗೆನೇ ಮಾತಾಡ್ತಾ ಇದ್ದ. ಸಾರ್ ಇದುಕ್ಕೆಲ್ಲ ಮೇನ್ ಕಾರಣ ಏನ್ ಗೊತ್ತ ಸಾರ್ ಈ ಟ್ರೈನ್ ಸಾರ್ ಈ ಟ್ರೈನ್ ಯಿಂದಾನೆ ಜನ ಸಂಖೆ ಜಾಸ್ತಿ ಆಗ್ತ ಇರೋದ್ ಸಾರ್ ಅಂದ. ನಾನಂದೆ ಟ್ರೈನ್ ನಿಂಗ್ ಏನ್ ಮಾಡೈತಾಪ ಅದ್ರು ಹಿಂದೆ ಯಾಕ್ ಬಿದ್ದಿದಿಯ ಅಂದೇ .

ನೋಡ್ರಿ ಸಾರ್ ಮೊದ್ಲು ಜಾಸ್ತಿ ಟ್ರೈನ್ ಇರಲಿಲ್ಲ ಜನ ಕಮ್ಮಿ ಇದ್ರೂ ಈಗ ಟ್ರೈನ್ ಜಾಸ್ತಿ ಆತು ಹಂಗೆ ಜನ ಜಾಸ್ತಿ ಆದ್ರು. ಕಾರಣ ಅಂದ್ರೆ ಎಲ್ಲ ಊರಾಗ್ ಟ್ರೈನ್ ಓಡಾಡ್ತಾವೆ ಅದು ಅಲ್ದೆ ಟ್ರೈನ್ ಟ್ರ್ಯಾಕ್ ಎಲ್ಲ ಹಳ್ಳಿ ಮದ್ಯದಾಗಿಂದ ಊರಿನ ಮದ್ಯದಾಗಿಂದ ಸಿಟಿ ಮದ್ಯದಾಗಿಂದ ಹೋಗ್ತಾವೆ ಅದು ಅಲ್ದೆ ದೊಡ್ಡ ದೊಡ್ಡ ಟ್ರೈನ್ ಗಳೆಲ್ಲ ರಾತಿ ೧ ಗಂಟೆಗೆ , ೨ ಗಂಟೆಗೆ , ೩ ಗಂಟೆಗೆ , ೪ ಗಂಟೆಗೆ ೫ ಗಂಟೆಗೆ ಓಡಾಡ್ತಾವೆ ರಾತ್ರಿ ಆ ಡಗ್ಗ್ ,, ಡಗ್ಗ್ ,,, ಡಗ್ಗ್ ,,, ಡಗ್ಗ್ ,,, ಶಬ್ದಕ್ಕೆ ಮಲ್ಗಿದ್ದವ್ರಿಗೆ ಎಚ್ಚರ ಆದ್ರೆ ಮತ್ತೆ ಎಲ್ಲಿಂದ ನಿದ್ದೆ ಬರ್ತೀತ್ ಸಾರ್ ಹಂಗಾಗಿ ನಿದ್ದೆ ಒಂದ್ ಸಲ ಹೋದ್ರೆ ಮತ್ತ್ ಬೆಳಗ್ಗೆ ತನಕ ಜನ ಹೆಂಗ್ ಟೈಮ್ ಪಾಸ್ ಮಾಡ್ತಾರೆ
ಆ ಟೈಮ್ ಪಾಸ್ ಇದಿಯಲ್ಲ ಸಾರ್ ಅದೇ ದೊಡ್ಡ ಪ್ರಾಬ್ಲಂ ಸಾರ್ ಹಂಗಾಗಿ ಜನ ಸಂಖೆ ಜಾಸ್ತಿ ಆಗ್ತೀತ್ ಸಾರ್

ಲೇ ಪರೇಶ ಹಂಗಾದ್ರೆ ಟ್ರೈನ್ ಇಲ್ಲ್ದಿದ್ ಕಡೆ ಜನ ಕಡಿಮೆ ಇದಾರ ಅಂದೇ. ಇಲ್ಲ ಸಾರ್ ಅಲ್ಲೂ ಜನ ಜಾಸ್ತಿ ಆಗಕ್ಕೆ ಒಂದ್ ರೀಸನ್ ಐತೆ ಅಂದ. ಅದೆನಪಾ ಅಂತದು ಅಂದೇ , ಪವರ್ ಕಟ್ ಸಾರ್ ರಾತ್ರಿ ಟೈಮಲ್ಲಿ ಕರಂಟ್ ಹೋದ್ರೆ ಸೆಖೆ ಮತ್ತ್ ನಿದ್ದೆ ಇಲ್ಲ ಮತ್ತ್ ಬೆಳಗ್ಗೆ ತನಕ ಟೈಮ್ ಪಾಸ್ ಏನ್ ಮಾಡ್ತಾರ್ ಸಾರ್.

ಹಂಗ್ ಜನ ಸಂಖೆ ಜಾಸ್ತಿ ಆಗ್ತ ಇರದ್ ಸಾರ್. ಈಗ ಇದೆಲ್ಲ ಯಾಕ್ ತಲೆ ಬಿಸಿ ನಿಗೆ ಅಂದೇ . ಹೋ ನಿಮಿಗ್ ಗೊತ್ತಿಲ್ಲ ಸಾರ್ ಈ ಸಲ ನಮ್ಮ ರಾಜ್ಯಕ್ಕೆ ಮತ್ತೆ ಹೊಸ ಟ್ರ್ಯಾಕ್ ಹಾಕ್ತಾರಂತೆ ಸಾರ್.
ಅದು ಹಿಂಗೆ ಊರ್ ಮದ್ಯ ಹಾಕುದ್ರೆ ಹೆಂಗ್ ಸಾರ್,,,,,,,,,, ?
(ಹೀಗೆ ನಕ್ಕು ಬಿಡಿ )

Wednesday 22 July 2009

ಇವಳೇಕೆ ಹೀಗೆ ಮಾಡಿದಳು ಛೆ ಥೂ

ಇವಳೇಕೆ ಹೀಗೆ ಮಾಡಿದಳು ಛೆ ..!

೨೫ ವಯಸ್ಸಿನ ಇವಳು ೪೫ ವಯಸ್ಸಿನವನ ಜೊತೆಗೆ ಸೇರಿ ಕೊಂಡಳಲ್ಲ , ೨ ಸುಂದರವಾದ ಮಕ್ಕಳು ಅಷ್ಟೊಂದು ಪ್ರೀತಿಸುವ ಗಂಡ ಎಲ್ಲವನ್ನೂ ಬಿಟ್ಟು, ಅದು ಮದುವೆಯಾಗಿ ೫ ಮಕ್ಕಳ ತಂದೆ ಅವನದಾದ ಕುಟುಂಬ ಇದೆ ಅವನನ್ನು ಏನು ಕಂಡು ಸೇರಿ ಕೊಂಡಳು. ಇಷ್ಟೊಂದು ಕಟ್ಹೊರ ಮನಸ್ಸು ಹೆಣ್ಣಿಗೆ ಇರುತ್ತದೆಯೇ ಇವಳೊಂದು ಕಳಂಕ ಥೂ ,.ಹೇಗೆ ಲಜ್ಜೆ ಇಲ್ಲದೆ ಅವನೊಂದಿಗೆ ಓಡಾಡುತ್ತಾಳೆ .

ನಮ್ಮ ಶಿವಣ್ಣನ ಪತ್ನಿಯ ವಿಷ್ಯ ಹೀಗಾಯ್ತು ಎಂದು ತಿಳಿದಾಗ ನಮಗೆಲ್ಲರಿಗೂ ಸಿಟ್ಟು ಬಂದದ್ದು ಶಿವಣ್ಣನ ಮೇಲೆ, ಇದಕ್ಕೆಲ್ಲ ಕಾರಣ ಅವಳನ್ನು ಮದುವೆಯ ನಂತರ ಕಾಲೇಜ್ ಕಳಿಸಿದ್ದು ಕೆಲಸಕ್ಕೆ ಕಳಿಸಿದ್ದು. ಕಾರಣ ಮನೆಯವರೆಲ್ಲರೂ ಸೇರಿ ನೋಡಿದ ಹುಡುಗಿಯನ್ನು ಇವನು ಬಹಳ ಸಂತೋಷ ದಿಂದ ಮದುವೆಯಾಗಿ ಸಂತೋಷದಿಂದ ಜೀವನ ಸಾಗಿಸುತ್ತಿದ್ದ . ಮೊದಲನೆ ಮಗುವಾಯ್ತು ಸಂತೋಷ ಇನ್ನು ಜಾಸ್ತಿಯಾತು .

ಎರಡನೇ ಮಗು ಆಗುವುದರೊಳಗೆ ಅಲ್ಲೋಲ ಕೊಲ್ಲೊಲ ಗೊಳ್ಳುತ್ತಾ ಹೋಯ್ತು. ಶಿವಣ್ಣ ನಮ್ಮ ಕುಟುಂಬದ ಒಬ್ಬ ಸದಸ್ಯನಂತೆ ಅವನಿಲ್ಲದೆ ಯಾವ ಕಾರ್ಯ ಕ್ರಮಗಳು ಇರಲಿಲ್ಲ ಎಲ್ಲದರಲ್ಲೂ ಅವನ ಓಡಾಟ ನಾವು ಚಿಕ್ಕಂದಿನಿದಲೇ ನೋಡುತ್ತಾ ಬಂದವರು. ತಮಾಷೆ ಮಾಡವುದರಲ್ಲಿ ನಗಿಸುವುದರಲ್ಲಿ ನಿಸ್ಸೀಮ. ಏನೊಂದೂ ಕಾರ್ಯ ಗಳಿದ್ದರು ಒಂದು ವಾರ ಮೊದಲೇ ಇವನ ಓಡಾಟ ಜೋರು.

SSLC ಪಾಸಾಗಿದ್ದ ಕಾರಣ ಇವನಿಗೆ ಆಗ ಲೋನ್ ಸಿಕ್ಕಿತು ಅದರಲ್ಲಿ ಇವನು ಒಂದು ಇಂಜಿನಿಯರಿಂಗ್ ವರ್ಕ್ಸ್ ಶುರು ಮಾಡಿದ ಕೆಲ ದಿನಗಳಲ್ಲೇ ಇವನ ಮದುವೆ ನಡೆಯಿತು. ಇವನ ಹೆಂಡತಿ ಬಹಳ ಸುಂದರಿಯಾಗಿದ್ದಳು ಒಳ್ಳೆ ಸ್ವಭಾವದಳು ಸಹ ಒಳ್ಳೆ ಪ್ರೀತಿ ವಿಶ್ವಾಸ ಗಳಿಂದ ಮನೆಯನ್ನು ನೋಡಿಕೊಂಡು ಹೋಗುತ್ತಿದ್ದಳು. ಕಾಲ ಕ್ರಮೇಣ ಇವನು ಅವಳಿಗೆ ಹೇಳಿದ ನಿನ್ನದು SSLC ಆಗಿದೆಯಲ್ಲ ನಿನಗಿಷ್ಟ ವಿದ್ದರೆ ಕಾಲೇಜಿಗೆ ಸೇರಿಕೋ ಮನೆಯಲ್ಲಿ ಸುಮ್ಮನೆ ಕೂರುವುದಕ್ಕಿಂತ ನಿನಗೆ ಸಮಯ ಕಳೆಯಲು ಒಳ್ಳೆಯದು ಆಗುತ್ತದೆ ಎಂದಾಗ ಅದಕ್ಕವಳು ಆಯ್ತು ಎಂದಳು. ಇವನೇ ಒಂದು ದಿನ ಕಾಲೇಜ್ ಗೆ ಕೊಂಡು ಹೋಗಿ ಸೇರಿಸಿದ, ಅವಳು ಪಿ ಯು ಸಿ ಪಾಸ್ ಆಯ್ತು. ನಂತರ ಅವಳನ್ನು ಡಿಪ್ಲೋಮಾ ಗೆ ಸೇರಿಸಿದ ಈ ಮದ್ಯದಲ್ಲಿ ೨ ಮಕ್ಕಳಾದವು ಬಹಳ ಪ್ರೀತಿಯಿಂದ ಎಲ್ಲವು ಸರಿಯಾಗಿ ನಡೆಯುತ್ತಿದ್ದವು.

ಶಿವಣ್ಣನಿಗೆ ಹಣದ ಕೊರತೆಯೇನು ಇರಲಿಲ್ಲ ಕಾರಣ ಇವನ ವರ್ಕ್ ಶಾಪ್ ಚೆನ್ನಾಗಿ ನಡೆಯುತ್ತಿತ್ತು ರಜಾ ದಿನಗಳಲ್ಲಿ ಹೊರಗೆಲ್ಲ ಸುತ್ತುವುದಕ್ಕಾಗಿ ಹೋಗುತಿದ್ದರು. ಇವಳಿಗೆ ಏನು ಬೇಕಾದರೂ ತೆಗೆದು ಕೊಡುತ್ತಿದ್ದ ಮಕ್ಕಳಿಗೂ ಅಷ್ಟೆ ಚೆನ್ನಾಗಿ ನೋಡುತಿದ್ದ. ಹೀಗಿರುವಾಗ ಇವಳಿಗೆ ಕೆಲಸಕ್ಕೆ ಸೇರುವ ಉತ್ಸಾಹ ಶುರುವಾಯ್ತು ಆದರೆ ಶಿವಣ್ಣನಿಗೆ ಅದು ಅಷ್ಟೊಂದು ಕುಶಿಯಾದ ವಿಷಯವಾಗಲಿಲ್ಲ . ಆದರು ಒಲ್ಲದ ಮನಸಿನಿಂದ ಒಪ್ಪಿ ಕೆಲಸಕ್ಕೆ ಕಳಿಸಿದ ಅದೇ ಮೊದಲ ತಪ್ಪು ಅಲ್ಲಿಂದ ಶುರುವಾಯ್ತು ಇವಳ ಧಾರವಾಹಿ ಮೊದಲು ಎಲ್ಲ ಸರಿಯಾಗೇ ಇತ್ತು.

ಪರೇಶ ಒಂದು ದಿನ ಸಾರ್ ಏನು ತಿಳ್ಕೋ ಬ್ಯಾಡ್ರಿ ನಾನ್ ಒಂದು ಮಾತ್ ಹೇಳ್ತೀನಿ ಅಂದ ಏನ್ ಹೇಳೋ ಅಂದಾಗ ಸಾರ್ ನಂ ಶಿವಣ್ಣನ ಹೆಂಡ್ತಿ ಅವ್ರ ಕಂಪನಿ ಮೇನೇಜರ್ ಜೊತೆ ಬಾಳ ಓಡಾಟ ಅಂತ ನ್ಯೂಸ್ ಬಂದೈತ್ ಸಾರ್ ಅಂದ. ನಾನು ಏನು ಗೊತ್ತಿಲ್ಲ ದ ಹಾಗೆ ಹೌದ ನಿಂಗ್ ಯಾರು ಹೇಳಿದರೋ ಅಂದೇಯಾರು ಹೇಳದ ಬೇಡ ನಾನು ಬಾಳ ದಿನದಿಂದ ಎಲ್ಲ ಚೆಕ್ ಮಾಡಿ ನಿಮಿಗ್ ಹೇಳಿದ್ದು ಅಂದ. ಅಲ್ಲಿಗೆ ನನ್ನ ಮನಸ್ಸಿನಲ್ಲಿದ್ದ ಎಲ್ಲ ವಿವರಗಳು ಸರಿ ಎಂಬುದು ಖಾತ್ರಿಯಾಯ್ತು.

ಈ ವಿಷಯ ಶಿವಣ್ಣನಿಗೆ ಹೇಗೆ ಹೇಳುವುದು ಅಂತ ಯೋಚನೆಯಲ್ಲೇ ಬಹಳ ದಿನಗಳು ಕಳೆದು ಹೋಯ್ತು. ಒಂದು ದಿನ ಈ ವಿಷ್ಯ ಮನೆಯಲ್ಲಿ ಗೊತ್ತು ಇದರಿಂದಲೇ ಮನೆಯಲ್ಲಿ ದಿನವು ಜಗಳ ನಡೆಯುತ್ತಿದೆ ವಿಷಯ ಕೈ ಜಾರಿ ಹೋಗಿದೆ ಅಂತ ನನಗೆ ಶಿವಣ್ಣನ ಸ್ನೇಹಿತ ಬಾಬು ಹೇಳಿದಾಗ ಆಕಾಶವೇ ಕುಸಿದು ಬಿದ್ದಂತೆ ಆಯ್ತು. ಯಾವುದೇ ದುರಬ್ಯಾಸ ಗಳಿಲ್ಲದ ಸ್ವಾಭಿಮಾನಿ ಶಿವಣ್ಣನಿಗೆ ಇಂತ ಕೆಟ್ಟ ಹೆಂಗಸು ಎಲ್ಲಿಂದ ಸಿಕ್ಕಳು, ವಿಷಯ ಬಹಳ ರಾಜ ರೋಶಾಗಿ ಎಲ್ಲರ ಬಾಯಲ್ಲೂ ನಡೆದಾದ ತೊಡಗಿತು. ಪ್ರತಿದಿನ ಮನೆಯಲ್ಲಿ ಜಗಳ ಕಾರವಿಷ್ಟೇ ಅವಳಿಗೆ ಡೈವೋರ್ಸ್ ಬೇಕು ಅಷ್ಟೆ. ಆದರೆ ಅವಳೆಷ್ಟೇ ಜಗಳ ಮಾಡಿದರು ಇವನು ಮಾತ್ರ ಅವಳ ಯಾವ ಮಾತಿಗೂ ಉತ್ತರ ಕೊಡುತ್ತಿರಲಿಲ್ಲ , ಅದು ಅವಳಲ್ಲಿ ರೋಷ ಹೆಚ್ಹುವಂತೆ ಮಾಡುತಿತ್ತು.

ಇವನು ಸುಮ್ಮನಿರಲು ಕಾರಣ ಇವನ ೨ ಮಕ್ಕಳು ಅನಾಥರಾಗುತ್ತಾರೆ ಎಂಬ ಭಯ ಅದೇ ಇವನಿಗೆ ಎಲ್ಲಕ್ಕೂ ಸುಮ್ಮನಿರುವಂತೆ ಪ್ರೇರೇಪಿಸುತಿತ್ತು. ಆದರೆ ಅದು ಬಹಳ ದಿನ ನಡೆಯಲಿಲ್ಲ ಕೋರ್ಟು ಕೇಸು ಎಂದು ಶುರುವಾಗಿ ಮಕ್ಕಳು ಅನಾಥಾಶ್ರಮಕ್ಕೆ ಸೇರುವಂತೆ ಆಯ್ತು . ಅಷ್ಟಕ್ಕೂ ಬಿಡದೆ ಅವಳು ಇವನ ಆಸ್ತಿಯ ಮೇಲೆ ಅಟ್ಯಾಚ್ಮೆಂಟ್ ತಂದಳು. ಅದು ಕೋರ್ಟು ಸೇರಿತು. ಇವನು ದಾರಿಯಲ್ಲಿ ಬಿದ್ದ.

ಸ್ವಾಭಿಮಾನಿಯಾದ ಶಿವಣ್ಣ ಈಗ ಬೇರೆ ಕಡೆ ಕೆಲಸ ಮಾಡುತ್ತಾನೆ ದುಡಿದ ಹಣದಿದಂದ ತನ್ನ ಪಾಡು ಮತ್ತು ಅನಾಥಶ್ರಮದಲ್ಲಿರುವ ಆ ೨ ಮಕ್ಕಳನ್ನು ಅಗಾಗ ನೋಡಲು ತನ್ನ ಹಳೆಯ ಸೈಕಲನ್ನು ತುಳಿಯುತ್ತ ಅಲ್ಲಿಗೆ ಹೋಗುತ್ತಾನೆ. ಹೀಗೆ ಹೋಗುವಾಗ ಕೆಲೋವೊಮ್ಮೆ ಅವನ ಮಾಜಿ ಪತ್ನಿ ಇವನ ಪಕ್ಕದಲ್ಲೇ ತನ್ನ ಹೊಸ ಟೊಯೋಟಾ ಕಾರಿನಲ್ಲಿ ಸ್ಪೀಡಾಗಿ ಹೋಗುವುದನ್ನು ಇವನು ನೋಡಿಯು ನೋಡದಂತೆ ಸೈಕಲ್ ಜೋರಾಗಿ ತುಳಿಯುತ್ತಾನೆ ,.,.,.

ಹೇಗೆ ಸಾದ್ಯ ಸೈಕಲ್ ಟೊಯೋಟಾ ಕಾರಿನೊಂದಿಗೆ ಓಡಲು ಸಾದ್ಯವೇ ,,,,......,,,..?

Saturday 18 July 2009

ಹೀಗೊಂದು ಪ್ರೇಮ ಪತ್ರ

ಬಡಗಿ :

ಓ ನನ್ನ ಪ್ರಿಯತಮೆ ಬೀಟೆ ಮರದಂತಿರುವ ನಿನ್ನ ಶರೀರ, ನೀಲಗಿರಿ ಮರದಂತಿರುವ ನಿನ್ನ ಕಾಲುಗಳು, ಎತ್ತಿನಗಾಡಿಯ ನೋಗದಂತಿರುವ ನಿನ್ನ ಮೂಗು, ಆಲದ ಮರದ ಬಿಳಿಲುಗಲನ್ತಿರುವ ನಿನ್ನ ಕೇಶ , ಕುದ್ರೆಗಾಡಿಯ ಚಕ್ರದಂತಿರುವ ನಿನ್ನ ಕಿವಿಗಳು, ಕಿಟಕಿಯ ಬಾಗಿಲಿನಂತಿರುವ ನಿನ್ನ ಕಣ್ಣುಗಳು, ಹೆಬ್ಬಾಗಿಲಿನಂತಿರುವ ನಿನ್ನ ಎದುರು, ಹಿಂಬಾಗಿಲಿನಂತಿರುವ ನಿನ್ನ ಹಿಂಬದಿ, ಬಿಸಿಲುಗಾಲದಲ್ಲಿ ತಂಪು ನೀಡುವ ಮಾಡಿನಂತಿರುವ ನಿನ್ನ ಸ್ನೇಹ , ಕುಸುರಿ ಕೆಲಸದಂತಿರುವ ನಿನ್ನ ಮೈಮಾಟ , ಚಳಿಯಲ್ಲೂ ತಗ್ಗದೆ ಬಗ್ಗದೆ ನಿಲ್ಲುವ ಮರದ ಕಂಬಗಳನ್ತಿರುವ ನಿನ್ನ ಧೈರ್ಯ. ಸಾಗುವಾನಿಯ ಕಪಾಟಿನಂತೆ ಕಾಣುವ ನಿನ್ನ ನಿಲುವು, ಬೀಟೆಯ ಡೈನಿಂಗ್ ಟೇಬಲ್ಲಿನ ಹಾಗೆ ಕಾಣುವ ನಿನ್ನ ಕುಳಿತ , ಎರಡು ಬಾಗಿಲನ್ನು ತೆರೆದಿಟ್ಟಂತೆ ಇರುವ ನಿನ್ನ ಹೃದಯ, ಎಲ್ಲ ಕಿಟಕಿಗಳನ್ನು ತೆರೆದಿಟ್ಟಂತೆ ಕಾಣುವ ನಿನ್ನ ನಗುವು, ಮರಕ್ಕೆ ಅತ್ರಿ ಹಾಕುವಾಗ ಬರುವಂತ ನಿನ್ನ ಹೃದಯದ ಶಬ್ದ ,.,.,.,.,,.

ಮೆಕ್ಯಾನಿಕ್ :

ಓ ನನ್ನ ಪ್ರಿಯತಮೆ ಸ್ಕಾರ್ಪಿಯದನ್ತಿರುವ ನಿನ್ನ ಶರೀರ, ಟೊಯೋಟಾದ ಸೀಟಿನಿಂತಿರುವ ನಿನ್ನ ಮೃದುವಾದ ಮನಸ್ಸು, ಆಲ್ಟೊ ದ ಹೆಡ್ ಲೈತಿನಂತಿರುವ ನಿನ್ನ ಕಣ್ಣುಗಳು, ಜಿಪ್ಸಿ ಯಂತಿರುವ ನಿನ್ನ ಓಡಾಟ, ಮಳೆಯಲ್ಲೂ ಕೆಸರಲ್ಲೂ ಹೊಂದಿಕೊಂಡು ಹೋಗುವಂತ ಟಾಟಾ ಸುಮೋ ದಂತಹ ನಿನ್ನ ಧೈರ್ಯ, ಹಾಳಾದ ಗಾಡಿಯನ್ನು ಎಳೆದು ತರುವ ಕ್ರೇನ್ ತರಹದ ನಿನ್ನ ಆತ್ಮೀಯತೆ , ಅಂಬಾಸಡರ್ ನಂತಿರುವ ನಿನ್ನ ಸಂಸ್ಕೃತಿ , ಎಲ್ಲವನ್ನು ಹೊತ್ತುಕೊಂಡು ಹೋಗುವ ಲಗ್ಗೇಜ್ ಕ್ಯಾರಿಯರ್ ನಂತಹ ನಿನ್ನ ಆತ್ಮ ಸ್ತೈರ್ಯ, ಟೆಂಪೋ ಟ್ರಾವಲರ್ ತರಹ ಎಲ್ಲರನು ಒಟ್ಟಿಗೆ ಸಹಿಸಿಕೊಂಡು ಹೋಗುವಂತಹ ನಿನ್ನ ಸಹನೆ, ಎಲ್ಲ ದಾರಿಗಳಲ್ಲೂ ಒಂದೇ ಸಮನಾಗಿ ಓಡುವ ಏನ್ ಪಿ ತರಹದ ನಿನ್ನ ವಿಶಾಲ ಹೃದಯ .,.,.,.,.,.,.,.,.,

ಸೈಕಲ್ ಶಾಪ್ :

ಓ ನನ್ನ ಪ್ರಿಯತಮೆ ಸ್ಪೋರ್ಟ್ಸ್ ಸೈಕಲ್ ನಂತಿರುವ ನಿನ್ನ ಶರೀರ , ಚೈನ್ ನಂತಿರುವ ನಿನ್ನ ಕೇಶ ರಾಶಿ, ಬ್ರೇಕ್ ಇಲ್ಲದ ಸೈಕಲ್ ನಂತಿರುವ ನಿನ್ನ ಮಾತುಗಳು, ಚಕ್ರದಂತಿರುವ ನಿನ್ನ ಕೆನ್ನೆಗಳು, ಕ್ಯಾರಿಯರ್ ಇಲ್ಲದ ಸೈಕಲ್ನಂತಿರುವ ನಿನ್ನ ವೈಯಾರ, ಸ್ಟ್ಯಾಂಡ್ ನಂತಿರುವ ನಿನ್ನ ಕಾಲುಗಳು, ಸೈಕಲ್ ಹಾಗೆಯೇ ಡಯಟಿಂಗ್ ಮಾಡಿದಂತೆ ಕಾಣುವ ನಿನ್ನ ಸೌಂದರ್ಯ.,.,.,.,,.,..,

ಹೋಟೆಲ್ ನವನು :

ಓ ನನ್ನ ಪ್ರಿಯತಮೆ ಮೈಸೂರು ಮಸಾಲೆ ದೊಸೆಯನ್ತಿರುವ ನಿನ್ನ ಶರೀರ, ಇಡ್ಲಿಯನ್ತಿರುವ ನಿನ್ನ ಕೆನ್ನೆಗಳು, ಸಾಂಬಾರ್ ನಂತಿರುವ ನಿನ್ನ ಚುರುಕು, ಉಪ್ಪಿಟ್ ನಂತಿರುವ ನಿನ್ನ ಮಾತುಗಳು , ಉಬ್ಬಿದ ಪೂರಿಯಂತೆ ಇರುವ ನಿನ್ನ ವಿಶಾಲ ಹೃದಯ, ಎಲ್ಲದಕ್ಕೂ ಹೊಂದಿ ಕೊಳ್ಳುವಂತಹ ಆತ್ಮ ಸ್ತೈರ್ಯ, ಟಿ ಕುಡಿದ ಕೂಡಲೇ ಶಾಂತವಾಗುವ ನಿನ್ನ ಮನಸ್ಸು

ಐ ಟಿ :

ಓ ಪ್ರಿಯ ತಮೆ ಲ್ಯಾಪ್ಟಾಪ್ ನಂತಿರುವ ನಿನ್ನ ಶರೀರ, ಇಂಟೆಲ್ ನನ್ತಿರುವ ನಿನ್ನ ಸ್ಮರಣ ಶಕ್ತಿ , ಪೆವಿಲಿಯಾನ್ ನಂತಿರುವ ನಿನ್ನ ದೇಹ ಸೃಷ್ಟಿ , ೧೯' ನಂತಿರುವ ನಿನ್ನ ಆಕರ್ಷಕ ಮುಖ ಸೌಂದರ್ಯ , ಕೀ ಬೋರ್ಡ್ನ ಕೀ ಗಳನ್ತಿರುವ ನಿನ್ನ ಮೃದುವಾದ ಬೆರಳುಗಳು , ಮೈ ಡಾಕ್ಯುಮೆಂಟ್ ನಂತಿರುವ ವಿಶಾಲಾ ಹೃದಯ , ಸಿನ್ತೆಕ್ಷ ಎರರ್ ನಂತೆ ಬರುವ ಮೃದುವಾದ ನಿನ್ನ ಸಿಟ್ಟು , ಅಡೋಬ್ ನಂತೆ ಎಲ್ಲವನ್ನು ಸ್ವೀಕರಿಸುವ ನಿನ್ನ ಮನೋ ಸ್ತೈರ್ಯ , ಎಲ್ಲವನ್ನು ಸರಿಯಾದ ಸ್ಥಳದಲ್ಲಿ ಇಡುವ ಫೋಲ್ಡರ್ ನಂತೆ ನಿನ್ನ ಒಪ್ಪ , ಬರುವಾಗಲು ಹೋಗುವಾಗಲು ತಿಳಿಸುವ ನಾದ ಗೆಜ್ಜೆ , ಅನೈತಿಕತೆಯನ್ನು ಸ್ವೀಕರಸದಂತಹ ಆಂಟಿ ವೈರಸ್ ನಂತಹ ನಿನ್ನ ಅದೃಶ್ಯ ಶಕ್ತಿ, ಪರಿಸ್ಥಿತಿಗೆ ತಕ್ಕಂತೆ ಅಪ್ಗ್ರಯೇಡ್ ಆಗುತ್ತಾ ಹೋಗುವ ನಿನ್ನ ಆಧುನಿಕತೆ .,,.,.,..,,.,.

ಹೀಗೆ ಅಲ್ಲವೇ ಮನಸ್ಸಿನ ಭಾವನೆಗಳು, ಪ್ರತಿಯೊಬ್ಬರೂ ತನ್ನದೇ ಆದ ಶೈಲಿಯನ್ನು ಹೊಂದಿರುತ್ತಾರೆ. ಆದರೆ ಎಲ್ಲರು ವ್ಯಕ್ತ ಪಡಿಸುವುದು ತಮ್ಮ ಪ್ರೀತಿಯನ್ನೇ ಅಲ್ಲವೇ. ಪ್ರೀತಿಗೆ ಯಾವ ಭಾಷೆ ಯಾದರೇನು ಕೊನೆಗೆ ಬಂದು ನಿಲ್ಲುವುದು ಅಲ್ಲೇ , ಅಯ್ಯಪ್ಪ ಯಾಕ್ಬೇಕಿತ್ತು ಈ ಪ್ರೀತಿ, ಈ ಮದುವೆ.

" ಹಗಲು ಕಂಡ ಹೊಂಡದಲ್ಲಿ - ಹಗಲೇ ಹೋಗಿ ಬೀಳುವುದು "

ಇದೆಲ್ಲ ಮುಗಿದ ಮೇಲೆ .,,..,.,.,.,.,

ಬಡಗಿ ಹೇಳಿದ್ದು : ನಿನ್ ಮನೆ ಹಾಳಾಗ್ ಹೋಗ ನಿಂದೇನ್ ಬಾಯಿನ ಗರಗಸನ ಮೆಚ್ಚೆ ಬಾಯಿ .

ಮ್ಯಕಾನಿಕ್ : ಹೇಯ್ ಇದೊಳ್ಳೆ ಯಾವ್ದೋ ಗಾಡಿಗೆ ಯಾವ್ದೋ ಪಾರ್ಟ್ಸ್ ಹಾಕ್ದಂಗೆ ಕಾಣತೈತ್ ಸಾರ್, ಹಾಳಗ್ ಹೋಗ ತಗೊಂಡ್ ಹೋಗಿ ಗುಜ್ರಿಗ್ ಹಾಕದೆ ಸರಿ

ಸೈಕಲ್ ಶಾಪ್ :

ಕ್ಲಚ್ಚೆ ಇಲ್ದಿದ್ ಮೇಲೆ ಈ ಸೈಕಲ್ ಎಲ್ಲಿಂದ ಓಡ್ತೀತ್ ಮಾರಾಯ

ಹೋಟೆಲ್ನವನು :

ಒಂದೇ ಮಾತು ಈ ಹಿಟ್ಟು ಹಳ್ಸೋಗೈತಾಪ

ಐ ಟಿ :

ಈ ಲ್ಯಾಪ್ ಟಾಪ್ ಔಟ್ ಆಫ್ ಡೇಟ್ ಇದು ಸರಿ ಮಾಡಕ್ಕಾಗಲ್ಲ . ಕಾರಣ ಇದುಕ್ಕೆ ಸ್ಪೇರ್ ಸಿಗಲ್ಲ

ಪ್ಯಾಂಟ್ ಹೊಲಿಯಲು ಎಷ್ಟು ಚಾರ್ಜ್

ಟೈಲರ್ ಅಂಗಡಿಗೆ ಬಂದ ವ್ಯಕ್ತಿ ಸಾರ್ ಪ್ಯಾಂಟ್ ಹೊಲಿಯಲು ಎಷ್ಟು ಚಾರ್ಜ್ ಕೇಳಿದ

೩೦೦/-ರೂ

ಚಡ್ಡಿ ಹೊಲಿಯಲು ಎಷ್ಟು ಚಾರ್ಜ್

೧೦೦/- ರೂ

ಓಹೋ ಹೋ ಹಾಗಾದರೆ ಒಂದು ಕೆಲಸಮಾಡಿ ಚಡ್ಡಿನೆ ಹೊಲಿಯಿರಿ ಆದರೆ ಮಾತ್ರ

ಉದ್ದ ಮಂಡಿಗಿಂತ ಕೆಳಗೆ ಮತ್ತು ಪಾದಕ್ಕಿಂತ ೧ ಇಂಚು ಮೇಲೆ ಇರಲಿ ಅಷ್ಟು ಸಾಕು .,.,.,

ಯಾವಾಗ ಸಿಗಬಹುದು ?

ನಿಮ್ಮ ಮದುವೆಯ ಒಂದು ವರ್ಷದ ನಂತರ ,,,! ,,,, ??? ,,,!!!

ಕಾರಣ ಇದು ನಿಮ್ಮ ಮಗುವಿಗಲ್ಲವೇ

Thursday 16 July 2009

ಹೀಗೂ ಒಬ್ಬ ಮನುಷ್ಯ ಸ್ನೇಹಮಾಯಿ - ಭಾವಜೀವಿ

ಇಂದು ಮುಂಜಾನೆ ಅಬುಧಾಬಿಯ ಅರಬ್ ಉಡುಪಿ ಉಪಹಾರಗೃಹದಲ್ಲಿ ಉದ್ದಿನವಡೆ ಇಡ್ಡ್ಲಿತಿಂದು ಮುಗಿಸಿ ನಂತರ ಮೈಸೂರು ಮಸಾಲೆ ದೋಸೆಯನ್ನು ತಿನ್ನುತ್ತಾ ನನ್ನ ಸ್ನೇಹಿತರಾದ ಅರಬ್ ರಾಷ್ಟ್ರೀಯ A K Sukkar ಹೇಳಿದ್ದು ನಾಳೆ ಚಪ್ಪನ್ ಭೋಗ್ ರೆಸ್ಟೋರೆಂಟ್ ಹೋಗುವ ಕಣೋ ಪಾನಿ ಪೂರಿ ತಿಂದು ವಾರ ಆಯ್ತು ಎಂದು ಹೇಳುತ್ತಾ ಹೌದು ಅಂದ ಹಾಗೆ ಯಾರಾದರು ಬರುವವರು ಇದ್ದರೆ ಮಾವಿನ ಉಪ್ಪಿನ ಕಾಯಿ ತರೋದಿಕ್ ಹೇಳೋ ಮನೆಯಲ್ಲಿ ಕಾಲಿ ಆಗಿದೆ.
ಹೇ ಆ ಸೊಂಟ ನೋವಿಗೆ ಹಚ್ತಾರಲ್ಲ ಆ ಎಣ್ಣೆ ಸಹ ಮರೀದಂಗೆ ತರ್ಸೋ,

ಅದಕ್ಕೆ ನಾನಂದೆ ಒಂದೇ ಉಸಿರಲ್ಲಿ ನೀನು ಏನೆಲ್ಲ ಹೇಳ್ತಿಯಪ್ಪ ನಿದಾನ ತಿನ್ನು ಯಾರಾದರು ನೋಡಿದ್ರೆ ನೀನು ಒಂದು ವಾರದಿಂದ ಊಟ ಮಾಡಿಲ್ಲ ಅಂತ ತಿಳ್ಕೋತಾರೆ ಅಂದೇ, ನಿಂಗೊತ್ತಿಲ್ಲ ಇಡ್ಡ್ಲಿ ಸಾಂಬಾರ್ ಬೇರೆ ಟೇಸ್ಟ್ ಅದರೊಟ್ಟಿಗೆ ಉದ್ದಿನ ವಡೆ ಗೆ ಈ ಕೆಂಪು ಚಟ್ನಿ ಮತ್ತು ಈ ಬಿಳಿ ಚಟ್ನಿ ಮಿಕ್ಸ್ ಮಾಡಿ ತಿಂದ್ರೆ ಬಿಸಿ ಬಿಸಿ ವಡೆಗೆ ಅದ್ರು ರುಚಿ ನಂಗೆ ಮಾತ್ರ ಗೊತ್ತು ಕಣೋ ನಿಂಗ್ ಗೊತ್ತಿಲ್ಲ ಆಯ್ತಪ್ಪ ನೀನು ಹೇಳಿದ್ದೆ ಸರಿ ಅಂದೇ .

ಅದಕ್ಕೆ ಸುಕ್ಕರ್ ಅದೆಲ್ಲ ಇರ್ಲಿ ನಿಮ್ಮ ಇಂಡಿಯನ್ಸ್ ಒಳ್ಳೆ ಒಳ್ಳೆ ಇಂಡಿಯನ್ ಫುಡ್ ಬಿಟ್ಟು ಅದ್ಯಾಕೋ ಬರಿ ಪಿಜ್ಜಾ , ಕೆಂಟುಕಿ ಬರ್ಗರ್ , ಬರಿ ಜಂಕ್ ಫುಡ್ ತಿಂತಾರೆ . ಅದಕ್ಕೆ ನಾನು ಹೇಳ್ದೆ ಬೇರೆಯವರ ವಿಷ್ಯ ಗೊತ್ತಿಲ್ಲ ನಾನು ಫ್ರೆಶ್ ಫುಡ್ ಮಾತ್ರ ತಿಂತೀನಿ ಅದೆಲ್ಲ ನಾನ್ ತಿನ್ನಲ್ಲ ಅಂದೇ, ಅಲ್ಲ ಕಣೋ ಹೇಳಿದ್ದು ಅಷ್ಟೆ ನೀನ್ ಯಾಕ ಬಿಸಿಯಾಗ್ತಿಯ ತಗೋ ಬಿಸಿ ಬಿಸಿ ಇಂಡಿಯನ್ ಟೀ ಕುಡಿ, ಹೇಳಿ ಎಲ್ಲ ಮುಗಿದ ಮೇಲೆ ಹೊರಡುವಾಗ ಅಲ್ಲಿದ್ದವರಿಗೆ ಥ್ಯಾಂಕು " ಬಹುದ್ ಅಜ್ಜ ಹೇ " ಗೊತ್ತಿಲ್ಲದ ಬಾಷೆಯನ್ನು ಪ್ರಯತ್ನಿಸಿ ಹೇಳಿ ನಗುತ್ತ ಹೊರ ಬಂತು ಈ ವ್ಯಕ್ತಿ .
ವೀಕ್ ಎಂಡ್ ಎಲ್ಲರು ಸೇರಿ ದುಬಾಯಿ ವೀನಸ್ ರೆಸ್ಟೋರೆಂಟ್ ಹೋಗಾಣ ಅಲ್ಲಿ ಎಲೆ ಊಟ ಚೆನ್ನಾಗಿರುತ್ತೆ , ಟಾಲಿ ತಿನ್ನೋಣ, ನಾನಂದೆ ಟಾಲಿ ಅಲ್ಲ ಥಾಲಿ ಅಂದೇ ಹ್ಞೂ ಅದೇ ಅದೇ .

ಇದೆಲ್ಲ ಹೇಳಲು ಕಾರಣ ಈ ಅರಬ್ ರಾಷ್ಟ್ರೀಯ ವ್ಯಕ್ತಿ ಭಾರತದ ತಿನಿಸುಗಳ ಬಗ್ಗೆ ಡ್ರೆಸ್ ಗಳ ಬಗ್ಗೆ ಬೊಂಬಾಯ್ ಡೆಲ್ಲಿ ಬೆಂಗಳೂರು ಮದ್ರಾಸು ಜನ ಜೀವನದ ಬಗ್ಗೆ ಕಾಳಜಿಯಿಂದ ತಿಳಿದುಕೊಂಡಿರುವುದು ಸುಮಾರು ಸಲ ಬೇಟಿ ಕೊಟ್ಟು ಅಲ್ಲಿಯ ಕಟ್ಟಡಗಳ ನಿರ್ಮಾಣದ ಬಗ್ಗೆ ಕಲೆ ಸಂಸ್ಕೃತಿಯ ಬಗ್ಗೆ ಕೂಡಿ ಹಾಕಿರುವ ವಿಷಯಗಳು ಬಹಳ ಕುತೂಹಲ ಉಂಟು ಮಾಡುತ್ತದೆ. ಅಲ್ಲದೆ ಸ್ನೇಹಮಯಿ ಮತ್ತು ಭಾವ ಜೀವಿ .

ಶ್ರೀಮತಿ ಇಂದಿರಾಗಾಂಧಿ ಯವರು ಮೊದಲ ಬೇಟಿ ಯು ಎ ಯಿ ಬಂದಾಗ ಅವರೊಂದಿಗೆ ಅರಬ್ ರಾಯಭಾರಿಯಾಗಿ ೩ ದಿನಗಳು ಓಡಾಡಿದ್ದು ಅವರ ಕಾಲದ ಏರ್ ಪೋರ್ಟ್ ನ ವಿಷ್ಯ ಎಲ್ಲವು ಒಮ್ಮೊಮ್ಮೆ ಮೆಲುಕು ಹಾಕುವುದುಂಟು . ಆಗಿನ ಕಾರುಗಳು ಚಿಕ್ಕ ಚಿಕ್ಕ ಕಟ್ಟಡಗಳು ,.,.

ಈಗ ನೋಡದ್ಯ ಯು ಎ ಯಿ ಹೇಗೆ ಬದಲಾಗಿದೆ ನೋಡಿಲ್ಲಿ ಗಗನ ಚುಂಬಿ ಕಟ್ಟಡಗಳು ಹೊಸ ಹೊಸ ಕಾರುಗಳು , ಯಂತ್ರಗಳು ಮನುಷ್ಯರ ಸ್ವಭಾವಗಳು ಎಲ್ಲ ಬದಲಾಗಿವೆ.
ಆದರೆ ನಾನು ಮಾತ್ರ ಬದಲಾಗಿಲ್ಲ ಕಣೋ .
ಅದಕ್ಕೆ ಕಾರಣ ಏನು ಗೊತ್ತ ಅಂದೇ ,,,
ಏನು
ನೀನು ನನ್ನ ಫ್ರೆಂಡ್ ಆದ್ರಿಂದ ,,,!

Wednesday 15 July 2009

ಬಸ್ಟಾಪಿನಲ್ಲಿ ನಿಂತ ಹುಡುಗಿ

ಮನುಷ್ಯರು ಏನಾದರು ಕಳೆದು ಕೊಂಡಾಗ ತಕ್ಷಣಕ್ಕೆ ಅವರ ಬಾಯಿಂದ ಬರುವ ಉದ್ದ್ಗಾರಗಳು ಒಂದು ಅನುಭವ ಸಂಕೇತಗಳಾಗಿರುತ್ತವೆ. ಅದು ಅವರ ಮನಸಿನ ಮಾತನ್ನು ಹೊರ ಸೂಸುತ್ತವೆ, ಅವರ ಹೃದಯದ ತಳಮಳವನ್ನು ವ್ಯಕ್ತಪಡಿಸುತ್ತದೆ. ಬಸ್ಸು ಮಿಸ್ ಆದಾಗ, ಒಳ್ಳೆ ಕೆಲಸದ ಸಮಯದಲ್ಲಿ ಕರೆಂಟು ಹೋದಾಗ, ಚೆಕ್ ಬೌನ್ಸ್ ಅದಾಗ, ಸಿನಿಮಾ ಟಿಕೆಟ್ ಸಿಗದಾಗ, ಅದರಲ್ಲಿ ಎಲ್ಲರ ಅಭಿಪ್ರಾಯಗಳು ಒಂದೇ ಆಗಿರಬೇಕಿಂದಿಲ್ಲ . ಕಾರಣ ಒಂದು ಹುಡುಗ ಬಸ್ಟಾಪಿನಲ್ಲಿ ನಿಂತಾಗ ಅವನಿಷ್ಟದ ಹುಡುಗಿಯು ಅಲ್ಲಿದ್ದು ಇವನ ಬಸ್ಸು ಬೇಗ ಬಂದರೆ ಆಗ ಹುಡುಗನ ಮನಸ್ಸಿನಲ್ಲಿ ಬೋಳಿಮಗ ದಿನಾ ಲೇಟ್ ಬರ್ತಾನೆ ಇವತ್ತೇ ಬೇಗ ಬರ್ಬೇಕಿತ್ತ ಇವ್ನಿಗೆ.

ಮತ್ತು ಮುಂದುವರೆದು ಬಸ್ಸ ಮಿಸ್ ಆಗಿ ನಿಂತ ಹುಡುಗಿಯನ್ನು ತನ್ನ ಬೈಕಲ್ಲಿ ಡ್ರಾಪ್ ಕೊಡೋಣ ಅಂತ ಪಿಕ್ ಮಾಡಲು ಬರುವಾಗ, ಅಷ್ಟರಲ್ಲಿ ಆ ಹುಡುಗಿಯ ತಂದೆ ಬಂದು ತನ್ನ ಕಾರಲ್ಲಿ ಮಗಳನ್ನು ಕರೆದು ಕೊಂಡು ಹೋದಾಗ, ಹುಡುಗನ ಮನಸ್ಸು ಬಡ್ಡಿಮಗ ಮುದುಕ ಒಳ್ಳೆ ಟೈಮಲ್ಲಿ ಶನಿ ಎಲ್ಲಿಂದ ಬಂದ ಮಾರಾಯ .

ಮಳೆಯಲ್ಲಿ ನಡೆದು ಬರುತ್ತಿರುವ ಸುಂದರ ಹುಡುಗಿಯನ್ನು ನೋಡಿ ತನ್ನ ಚತ್ರಿಯನ್ನು ಅವಳಿಗೆ ಕೊಟ್ಟು ನೆನಿಬೇಡ್ರಿ ಶೀತ ಆಗತ್ತೆ ಅಂದಾಗ ಕೂಡಲೇ ಅವಳು ತ್ಯಾಂಕು ಬ್ರದರ್ ಅಂದ್ರೆ .

ಬಸ್ಸಲ್ಲಿ ಬಹಳ ಹುಡುಗಿಯರಿದ್ದು ಒಂದು ಸೀಟ್ ನಿಮ್ಮ ಪಕ್ಕದ್ದು ಕಾಲಿ ಇದ್ದಾಗ ಆ ಸೀಟಿನಲ್ಲಿ ಒಂದು ಅಜ್ಜ ಕುಂತಾಗ ಆಗ ನಿಮ್ಮ ಅವಸ್ತೆ

ಹೀಗೆ ಮುಂದು ವರೆದು ಮನುಷ್ಯರು " ತಮ್ಮ ಪರ್ಸನ್ನು ಕಳೆದುಕೊಂಡಾಗ " ಅಂದರೆ

ಒಬ್ಬ ಬಡಹುದುಗ ಅಯ್ಯೋ ನನ್ನ ಹಣ ಹೋಯ್ತು

ಒಳ್ಳೆ ಉದ್ಯೋಗಿ ಅಯ್ಯೋ ನನ್ನ ಕ್ರೆಡಿಟ್ ಕಾರ್ಡ್ ಹೋಯ್ತು

ಶ್ರೀಮಂತ ಹುಡುಗ ಅಯ್ಯೋ ನನ್ನ ಮಾಸ್ಟರ್ ಕಾರ್ಡ್ ಹೋಯ್ತು

ಸುಂದರ ಹುಡುಗಿ ಅಯ್ಯೋ ನನ್ನ ಇಸ್ಮಾಯಿಲ್ ಫೋಟೋ ,,,,,,,,,,....... !

(ಹೀಗೆ ನಕ್ಕು ಬಿಡಿ ಕಾರಣ ನೀವೇನು ಕಳೆದುಕೊಂಡಿಲ್ಲವಲ್ಲ)

ಹುಡುಗರು ತುಂಬ ಚುಡಾಯಿಸ್ತಾರೆ ಸಾರ್

ಪ್ರಾಧ್ಯಾಪಕರು : ಎನ್ರಮ್ಮ ನೀವು ಹುಡುಗಿಯರಾಗಿ ದಿನ ಕ್ಲಾಸಿಗೆ ಲೇಟಾಗಿ ಬರ್ತೀರಾ

ಹುಡುಗಿಯರೂ : ಸಾರ್ ಅದು ಏನಂದ್ರೆ ನಾವ್ ಬರುವಾಗ ಮೇನ್ ಗೇಟಲ್ಲಿ ತುಂಬ ಹುಡುಗರು ನಿಂತ್ಕೊಂಡು ಬಾಳ ಚುಡಾಯಿಸ್ತಾರೆ ತಮಾಷೆ ಮಾಡ್ತಾರೆ ಹಂಗಾಗಿ ಲೇಟ್ ಆಗುತ್ತೆ ಸಾರ್

ಪ್ರಾಧ್ಯಾಪಕರು : ಓಹೋ ಹಾಗಾದ್ರೆ ನಾಳೆಯಿಂದ ನೀವು ಬೇರೆ ದಾರಿಯಲ್ಲಿ ಬನ್ನಿ ,,,,,,,,,,,,

ಪ್ರಾಧ್ಯಾಪಕರು : ಎನ್ರಮ್ಮ ಇವತ್ತು ಮತ್ತೆ ಲೇಟಾಗಿ

ಹುಡುಗಿಯರೂ : ಸಾರ್ ನೀವು ಹೇಳಿದ ಹಾಗೆ ಬೇರೆ ದಾರಿಯಲ್ಲಿ ಬಂದು ಅಲ್ಲಿ ಯಾರು ಹುಡುಗರು ಇಲ್ಲದ ಕಾರಣ ಮತ್ತೆ ಹಿಂದೆ ತಿರುಗಿ ಮೇನ್ ,,,,,,,,,,, !

ಅಯ್ಯೋ ಹೋಗಿ ಸಾರ್ ,,,, .

Tuesday 14 July 2009

ನಮ್ಮುರಿನ ಹುಡುಗಿಯರೂ

ನಮ್ಮುರಿನ ಹುಡುಗಿಯರೂ
ಎಲ್ಲದರಲ್ಲೂ ಬಹಳ ಜೋರು
ಹುಡುಗರು ಎದುರು ಬಂದರೆ
ಅವರು ಮಾಡುವುದಿಲ್ಲ ಕೇರು
ಸೈಡಲ್ಲಿ ಬೈಕ್ ಬಂದರೆ ಇವರ ಗಾಡಿಗೆ ಹಾಕುವರು ಜೋರಾಗಿ ಗೇರು
ಹುಡುಗರ ಚೆಸ್ಟೆ ದಿನವು ನೋಡಿ ಇವರಾಗಿರುವರು ಬೋರು
ಕಾಲೇಜಲ್ಲಿ ಬಹಳ ಜೋರು
ಮನೆಯಲ್ಲಿ ಕೆಲಸ ಮಾಡುವುದು ಬಹಳ ರೇರು
ಲವ್ ಲೆಟರ್ ಬರೆಯುವಾಗ ಮಾತ್ರ ಮುಚ್ಚುವರು ಡೋರು
ಮ್ಯೂಸಿಕ್ ಮಾತ್ರ ಹಾಕುವರು ಬಹಳ ಜೋರು
ಡ್ರಾಪ್ ಕೊಡದ ಹುಡುಗನ ಬೈಕಿನ ಸೀಟಿಗೆ ಹಾಕುವರು ಬ್ಲೇಡಿನಿಂದ ಗೀರು
ಕಾಲೇಜ್ ಕ್ಯಾಂಟೀನ್ಗೆ ನುಗ್ಗಿದರೆ ಅಲ್ಲಿ ಬಾಕಿ ಉಳಿಯುವುದಿಲ್ಲ ಒಂದು ಚೂರೂ
ಹಾಗೆ ತಿಂದು ಮುಗಿಸುವರು ಇವರು
ಒಮ್ಮೊಮ್ಮೆ ಒಂದೇ ಗಾಡಿಯಲ್ಲಿ ಸೇರಿ ಕೂರುವರು ಮೂರು
ಆಕ್ಸಿಡೆಂಟ್ ಬಗ್ಗೆ ಇವರಿಗಿಲ್ಲ ಕೇರು
ಹೇಳಿದರೆ ಕೇಳುವರು ಅದೆಲ್ಲ ಹೇಳಾಕೆ ನೀನ್ ಯಾರು
ಹೀಗೆ ಬಿಟ್ಟರೆ ಇವರಾಗುವರು ದೊಡ್ಡ ತೇರು
ಆದಷ್ಟು ಬೇಗ ತೋರಿಸಬೇಕು ಇವರಿಗೆ " ಮದುವೆಯ ಡೋರು "

Sunday 12 July 2009

ಸ್ನೇಹ ಮತ್ತು ಶತ್ರುತ್ವ ಮತ್ತು ೧ನೆ ಬಹುಮಾನ

ಫ್ರೆಂಡ್ ಶಿಪ್ ಅಂಡ್ ಎನಿಮಿ -- ಸ್ನೇಹ ಮತ್ತು ಶತ್ರುತ್ವ
ಎಂಬ ಪ್ರಬಂದ ಸ್ಪರ್ದೆಯಲ್ಲಿ ಮೊದಲ ಬಹುಮಾನ ಪಡೆದ ಪರೇಶನ ವಿಷಯ ಕೇಳುತ್ತಿದ್ದಂತೆ ನನಗೆ ಆಶ್ಚರ್ಯ ಕಾರಣ ಅವನು ಕಲಿತಿರುವುದು ೭ ನೆ ತರಗತಿ. ಆದರೆ ಅಲ್ಲಿ ಬಂದವರೆಲ್ಲ ಅವನಿಗಿಂತ ಹೆಚ್ಚು ಕಲಿತವರು ಇದು ಹೇಗಾಯ್ತು ಎಂದು ತಿಳಿಯುವ ಕಾತರದಿಂದ ಕಾಯುತ್ತ ಇದ್ದೆ. ಸಂಜೆಯಾಗುತ್ತಿದ್ದಂತೆ ಪರೇಶ ಬಂದ ಅಲ್ಲಾ ಕಣೋ ಅದ್ಹೆಂಗೆ ನೀನ್ ಗೆದ್ದೋ ಅಲ್ಲಿ ಅಂದೇ, ಅಲ್ಲಾ ಸಾರ್ ಅವ್ರು ಏನ್ ಕೇಳಿದರೋ ಅದಕ್ ಸರ್ಯಾಗಿ ಉತ್ರಾ ಬರ್ದೇ ಸಾರ್
ಅಂದ್ರೆ ಏನ್ ಪ್ರಶ್ನೆ ಇತ್ತೋ ಅಲ್ಲಿ ಅಂದೇ " ಸ್ನೇಹ ಮತ್ತು ಶತ್ರುತ್ವ " ಇದಕ್ಕೆ ಉದಾಹರಣೆಗಳೊಂದಿಗೆ ಸರ್ಯಾಗಿ ಪ್ರಬಂದ ಬರೆಯಿರಿ ಅಂತ ಇತ್ತು ನೀನೇನ್ ಬರ್ದೋ ಬರ್ಯೇದ್ ಏನ್ ಸಾರ್ ಎಲಾರ್ಗು ಗೊತ್ತಿರೋ ವಿಷ್ಯ ಅಂದ್ರೆ ,.,.
ಸ್ನೇಹ : -
ಮೂಗು ಮತ್ತು ಸಿಂಬಳ , ಪೈಜಾಮ ಮತ್ತು ಲಾಡಿ , ಕಾಲು ಮತ್ತು ಚಪ್ಪಲಿ , ಕುರುಡ ಮತ್ತು ಕೋಲು , ಸೈಕಲ್ ಮತ್ತು ಸೀಟು , ಕಣ್ಣು ಮತ್ತು ಕನ್ನಡಕ , ವಾಚು ಮತ್ತು ಕೈ , ತಟ್ಟೆ ಮತ್ತು ಲೋಟ , ಕರಂಟು ಮತ್ತು ಲೈಟು , ಸೂಜಿ ಮತ್ತು ದಾರ , ಸೀರೆ ಮತ್ತು ಬ್ಲೌಸು , ಸ್ಕ್ಕೂಲು ಮತ್ತು ಮೇಸ್ಟ್ರು , ಪ್ಯಾಂಟು ಮತ್ತು ಜಿಪ್ಪು , ಚರಂಡಿ ಮತ್ತು ಕೆಸರು , ಬಾವಿ ಮತ್ತು ನೀರು , ಬೀಡಿ ಮತ್ತು ಬೆಂಕಿ ಪಟ್ನ , ಡಾಕ್ಟರು ಮತ್ತು ರೋಗಿ, ಪೋಲಿಸ್ ಮತ್ತು ಲಾಠಿ, ಪೆನ್ನು ಮತ್ತು ಇಂಕು , ಬಾಟಲು ಮತ್ತು ಮುಚ್ಚಳ , ಟಿ ವಿ ಮತ್ತು ರಿಮೋಟು , ಕಿವಿ ಮತ್ತು ಮೊಬೈಲು , ಪಾನಿ ಮತ್ತು ಪೂರಿ , ನಲ್ಲಿ ಮತ್ತು ನೀರು , ಮೀನು ಮತ್ತು ನೀರು ,,,,,,,,,,,
ಸಾಕ್ ನಿಲ್ಸೋ. ಯಾಕ್ ಸಾರ್ ನಾನು ಇಷ್ಟು ಹೆಸರು ಹೇಳಿದಿನಲ್ಲ ಅದರಲ್ಲಿ ಯಾವುದಾದರು ಒಂದು ಐಟಂ ಒಂದುಕೊಂದು ಬಿಟ್ ಇರಾಕ್ ಆಗುತ್ತಾ ಅಂತ ನೀವೇ ಹೇಳ್ರಿ , ಒರಿಜಿನಲ್ ಫ್ರೆಂಡ್ ಶಿಪ್ ಅಂದ್ರೆ ಇದು ಸಾರ್ ಬಾಕಿ ಎಲ್ಲ ಬೇಕಾರ್
ಸಾರ್ .
ಓಹೋ ಹಂಗಾ ಹಂಗಾದ್ರೆ ಶತ್ರುತ್ವ ಅಂದ್ರೆ ಏನ್ ಹೇಳಪ , ಅದೇನ್ಸಾರ್
ಶತ್ರುತ್ವ : -
ಕತ್ತರಿ ಮತ್ತು ಬಟ್ಟೆ , ಬೆಂಕಿ ಮತ್ತು ನೀರು , ಪೋಲಿಸ್ ಮತ್ತು ಕಳ್ಳ , ಅತ್ತೆ ಮತ್ತು ಸೊಸೆ , ಹಾವು ಮತ್ತು ಮುಂಗುಸಿ , ಸುತ್ತಿಗೆ ಮತ್ತು ಉಳಿ , ಮರ ಮತ್ತು ಗರಗಸ , ಬಂದೂಕು ಮತ್ತು ಪ್ರಾಣಿ , ಜೋತಿಷಿ ಮತ್ತು ಡಾಕ್ಟ್ರು , ಹಜಾಮ ಮತ್ತು ತಲೆ , ಸೌದೆ ಮತ್ತು ಶವ , ಬೆಂಕಿ ಮತ್ತು ತುಪ್ಪ , ಪರೀಕ್ಷೆ ಮತ್ತು ವಿದ್ಯಾರ್ಥಿ , ಬಟ್ಟೆ ಒಗಿಯುವಕಲ್ಲು ಮತ್ತು ಬಟ್ಟೆ , ಮೀನು ಮತ್ತು ಗಾಣ , ,.,.
ಹೇಳುತ್ತಾ ಗೇಟಿನ ತನಕ ಹೋಗುತ್ತಿದ್ದವನು ಹೊರಗೆ ನಿಂತು , ಹೀರೋ ಮತ್ತು ವಿಲನ್ , ಅಂದು ಲಾಸ್ಟ್ ಹಿಂಗ್ ಬರೆದೆ ಸಾರ್ ಅಂದ , ಏನೋ ಅಂದೇ
ಬಹುಮಾನ ಕೊಡದೆ ಇದ್ರೆ ನಾನು ಮತ್ತು ನೀವು ,,,?
ಪರೇಶ '

Saturday 11 July 2009

ಬೆಳಗ್ಗೆ ಎಂಟಾಣೆ ಮಾರಿದ್ದು ಈಗ ರುಪಾಯಿಗೆ ಎರಡು

ಸಂತೆಯಲ್ಲಿ ವ್ಯಾಪಾರ ಮಾಡುವವರು ಯಾವರೀತಿ ಜನರನ್ನು ಆಕರ್ಷಿಸುತ್ತಾರೆ, ಅಲ್ಲದೆ ಅವರು ವಸ್ತುಗಳನ್ನು ವಿಂಗಡಿಸಿ ಬೇರೆ ಬೇರೆ ಹೆಸರನ್ನಿಟ್ಟು ಕೂಗುತ್ತಾ ಅದರದಾದ ಶೈಲಿಯಲ್ಲಿ ಒಂದು ನೆಟ್ವರ್ಕ್ ಮಾಡಿಕೊಂಡಿರುತ್ತಾರೆ.
ಶಿವಮೊಗ್ಗದ ಬಸ್ಟಾಂಡ್ ಪಕ್ಕದಲ್ಲಿ ಪ್ರತಿ ಮಂಗಳವಾರ ಸಂತೆ ನಡೆಯುತ್ತದೆ. ನನಗೆ ಬಹಳ ಕುತೂಹಲ ಉಂಟುಮಾಡುವುದು ಅವರು ಕೂಗುವ ಶೈಲಿ ಅದರಲ್ಲಿ,
೧. ಆಗೋಯ್ತು ಮುಗ್ದೋಯ್ತು ಕಾಲಿಯಾಯ್ತು
೨. ಈಗ ಬಂದಿದ್ದು ನೆನ್ನೆ ಬೆಳೆದಿದ್ದು
೩. ಎಲ್ ಹೋದ್ರು ಸಿಗಲ್ಲ ಇಲ್ ಮಾತ್ರ
೪. ಅಣ್ಣಾ ಅಕ್ಕ ಅಜ್ಜ ಈ ಕಡೆ ಈ ಕಡೆ
೫. ಬೆಳಗ್ಗೆ ಎಂಟಾಣೆ ಮಾರಿದ್ದು ಈಗ ರುಪಾಯಿ ಗೆ ಎರಡು ( ?)
೬. ಬೆಣ್ಣೆ ಬೆಣ್ಣೆ ಬೆಣ್ಣೆ ಇದು ಮೆಣಸಿನ ಕಾಯಿ ಮಾರುವವನು ಕೂಗೋದು (?)
೭. ತಿಂದು ನೋಡ್ರಿ ದುಡ್ಡು ಆಮೇಲ್ ಕೊಡ್ರಿ
೮. ಕೋಳಿ ಕೋಳಿ ದಿನಕ್ ೨ ಮೊಟ್ಟೆ ಇಡೋ ಕೋಳಿ (?)
೯. ಬಣ್ಣ ಹೋದ್ರೆ ಬಟ್ಟೆ ವಾಪಸ್,.,.,.,
ಸುಮಾರು ರೀತಿಯ ಬಾಷೆಗಳನ್ನೂ ಪ್ರಯೋಗಿಸುತ್ತ ತಮ್ಮದೇ ಆತ್ಮೀಯತೆಯನ್ನು ತೋರುತ್ತ ಎನಣ್ಣ ಹೋದವಾರ ಬರ್ಲೆ ಇಲ್ಲ ಅಕ್ಕ ನಿಮ್ಮ ಎಜ್ಮಾನ್ರು ಕಾಣ್ತಿಲ್ಲ, ಎ ಎನ್ರಣ್ಣ ಬೆಲೆ ಗಿಲೆ ಕೇಳಬಾರದು ಈ ಅಂಗ್ಡಿನೆ ನಿಮ್ದು , ಹೀಗೆ ಸುಮಾರೂ ರೀತಿ ಅವರ ವ್ಯಾಪಾರದಲ್ಲಿ ಕಾಣಬಹುದು ಅಲ್ಲದೆ ಸಂತೆ ಎಂದ ಮೇಲೆ ಅಲ್ಲಿ ಹಜಾಮನಿಂದ ಹಿಡಿದು ಮೆಣಸಿನಕಾಯಿ ಬಜ್ಜಿ ವರೆಗೂ ಸಿಗುತ್ತದೆ ಮದ್ಯದಲ್ಲಿ ಅಯಿಸ್ ಕ್ಯಾಂಡಿ ತಿನ್ನುತ್ತಾ ತಮ್ಮ ತಂದೆ ತಾಯಿಯರ ಕೈ ಹಿಡಿದು ಓಡುತ್ತಾ ಇರುವ ಮಕ್ಕಳು.
ಇಂದು ಸಂತೆ ಎಂದರೆ ಶಾಪಿಂಗ್ ಸೆಂಟರ್ ಇಲ್ಲಿ ಎಲ್ಲವು ದೊರೆಯುತ್ತದೆ ಮಾತ್ರ ಆಧುನಿಕತೆಯೊಂದಿಗೆ ಅಷ್ಟೆ
ಫುಡ್ ಕೋರ್ಟ್ನಲ್ಲಿ ಕುಳಿತು ಮೆಕ್ದೊನಾಲ್ದ್ ಅಯಿಸ್ ಕ್ರೀಮ್ ತಿನ್ನುತಿದ್ದ ಅಬ್ಬು ಮತ್ತು ಅಪ್ಪು ಅಪ್ಪುವನ್ನು ನೋಡಿ ನಾನು ಸಂತೆಯಲ್ಲಿ ತಿನ್ನುತಿದ್ದ ಅಯಿಸ್ ಕ್ಯಾಂಡಿ ನೆನಪಾಗಿ ಬಾಯಲ್ಲಿ ನೀರು ಬರತೊಡಗಿತು

Thursday 9 July 2009

ನೀ ಕೊರಗ ಬೇಡ

ಪ್ರತಿಯಂದು ಮುಖವನ್ನೂ ದುಃಖದ ಕನ್ನಡಿ ಎಂದು ಹೇಳ ಬೇಡ

ಈ ಜೀವನ ಎಂಬುದು ಒಂದು ಕೊಡುಗೆ ಇದನ್ನು ಸಜೆ ಎಂದು ಹೇಳ ಬೇಡ

ಯಾರಿಗೆ ಗೊತ್ತು ಯಾವ ಕಾರಣದಿಂದ ಖೈದಿಯಾಗಿದ್ದಾನೋ ಅವನು

ನಿನ್ನನ್ನು ಬಿಟ್ಟು ಹೋದ ಮಾತ್ರಕ್ಕೆ ಅವನನ್ನು ಮೋಸಗಾರ ಎನ್ನಬೇಡ

ಎಲ್ಲರೆದುರು ಮಾನ ಹೋಯಿತೆಂದು ನೀ ಕೊರಗ ಬೇಡ

ಇದೊಂದು ಆಕಸ್ಮಿಕ ವಾಗಿರಬಹುದು ಎಂಬುದನ್ನೂ ಮರೆಯ ಬೇಡ

ಇಂದು ಅವನು ನಿನ್ನ ಶತ್ರು ವಾಗಿರಬಹುದು ಆದರೆ ಅದಕ್ಕೂ ಮೊದಲು

ಅವನು ನಿನ್ನ ಸ್ನೇಹಿತನಾಗಿದ್ದ ಎಂಬುದು ಮರೆಯಬೇಡ

ನನ್ನ ತಪ್ಪುಗಳನ್ನು ನನ್ನ ಎದುರೇ ಹೇಳು ಆದರೆ ಬೆನ್ನ ಹಿಂದೆ ಚೂರಿ ಹಾಕಬೇಡ

ನನ್ನನ್ನೂ ನಿನ್ನ ತಪ್ಪುಗಳ ಹೊಣೆಗಾರ ಎನ್ನಬೇಡ

ಈ ಪ್ರಪಂಚದಲ್ಲಿ ರಾಕ್ಷಸರೂ ಇದ್ದಾರೆ ಆದ್ದರಿಂದ ಇಲ್ಲಿರುವ ಎಲ್ಲಾ ಪ್ರತಿಮೆಗಳನ್ನೂ ದೇವರೆನ್ನಬೇಡ

ಲೇಗಯಾ

ಚೆಹ್ರೊಂಕಿ ಧೂಪ್ ಆನ್ಕ್ಹೊಂಕಿ ಗೆಹರಾಯಿ ಲೇಗಯಾ

ಅಯೀನ ಸಾರೆ ಶಹರ್ ಕಿ ಬಿನಾಯಿ ಲೇಗಯಾ

ಡೂಬೆ ಹೂವೆ ಜಹಾಜ್ ಪೆ ಕ್ಯಾ ತಬಾಜರ ಕರೆ

ಏ ಹಾದ್ಸ ತೋ ಸೋಚ್ ಕಿ ಗೆಹರಾಯಿ ಲೇಗಯಾ

ಹಾಲಾಂಕಿ ಬೆಜುಬಾನ ಥ ಲೇಕಿನ್ ಅಜೀಬ್ ಥ

ಜೋ ಶಕ್ಸ್ ಮುಜ್ ಸೆ ಛೀನ್ ಕೆ ಗೊಯಾಯಿ ಲೇಗಯಾ

ಇಸ್ ವ್ಹಕ್ತ್ ತೋ ಮೇ ಘರ್ ಸೆ ನಿಕಲ್ ನಾ ಪಾಊನ್ಗ

ಬಸ್ ಎಕ್ ಕಮೀಜ್ ಥಿ ಮೇರಾ ಜೋ ಭಾಯಿ ಲೇಗಯಾ

ಜ್ಹೂಟೆ ಖಸೀದೆ ಲಿಖೆ ಗಯೇ ಉಸ್ ಕಿ ಶಾನ್ ಮೇ

ಜೋ ಮೊತಿಯೊಂಸೆ ಛೀನ್ ಕೆ ಸಚ್ಚೈ ಲೇಗಯಾ

ಯಾದೊಂಕಿ ಎಕ್ ಭೀಡ ಮೇರೆ ಸಾಥ್ ಚೋಡ್ ಕರ್ ಗಯಾ

ಅಬ್ ಅಸದ್ ತುಮಾರೆ ಲಿಯೇ ಕುಚ್ ನಹಿ ರಹ

ಗಲಿಯೊಂಕೆ ಸಾರೆ ಸಂಗ ತೋ ಸೋದಾಯಿ ಲೇ ಗಯಾ

ಅಬ್ ತೋ ಖುದ್ ಅಪ್ನಿ ಸಾನ್ಸ್ ಸೆ ಭಿ ಲಗ್ತಿ ಹೈ ಭೋಜ್ ಸಿ

ಉಮ್ರೊಂಕ ದೇವ್ ಸಾರಿ ತಮನ್ನ ಲೇ ಗಯಾ

(Collect:Rahat)

ಆದರೆ ಆ ಕಣ್ಣುಗಳು ನನ್ನದಲ್ಲವಲ್ಲ

ನಿನಗಂತೂ ಯಾರಾದರು ಸಿಗಬಹುದು ನೀ ಹುಡುಕಿ ನೋಡು,

ಆದರೆ ನನ್ನಷ್ಟು ನಿನ್ನನ್ನು ಪ್ರೀತಿಸುವವನು ಯಾರೂ ಸಿಗಲಾರ,

ಖಂಡಿತವಾಗಿಯೂ ಪ್ರೀತಿಯ ಕಣ್ಣುಗಳಿಂದ ನೋಡುವವನು ಸಿಗಬಹುದು,

ಆದರೆ ಆ ಕಣ್ಣುಗಳು ನನ್ನದಲ್ಲವಲ್ಲ .

ನನ್ನಿಂದ ನೀನು ಹೇಗೆ ದೂರ ಹೋಗಲು ಸಾದ್ಯ,

ಮನಸ್ಸಿನಿಂದ ನನ್ನನ್ನು ಮರೆಯಲು ಹೇಗೆ ಸಾದ್ಯ,

ನಾನಾದರೋ ಸುವಾಸನೆ ಅದೇ ನಿನ್ನ ಉಸಿರಾಟದಲ್ಲಿ ಇರುವ ಉಸಿರು,

ನಿನ್ನ ಉಸಿರಾಟವನ್ನು ನೀನು ತಡೆಹಿಡಿಯಲು ಹೇಗೆ ಸಾದ್ಯ.

Wednesday 8 July 2009

ನೋಡುದ್ರಾ ಸಾರ್ ಹೆಂಗೈತೆ

ಮಲೋಗೋ ಟೈಮಲ್ಲಿ ಮಿಸ್ ಕಾಲ್

ಪೂಜೆ ಟೈಮಲ್ಲಿ ಮೊಬೈಲ್ ರಿಂಗು

ಊಟದ ಟೈಮಲ್ಲಿ ಮೆಸೇಜ್ ಬ್ಲಿಂಕ್

ಡಯಲ್ ಮಾಡಿದ್ದ್ರೆ ಔಟ್ ಆಫ್ ರೇಂಜ್

------ **** ----- ****

ಪ್ರಿಯತಮೆಯ ಫೋನ್ ಬಂದಾಗ ,,,,,,

ಏನ್ ಬೇಕಾಗಿತ್ತ್ ಚಿನ್ನ, ತೊಂದ್ರೆ ಏನ್ ಬಂತು ಹೇಳ್ ಚಿನ್ನ

ನಾನೀಗ ಅಲ್ಲೇ ಹಣ್ಣಿನ ಅಂಗಡಿಯಲ್ಲೇ ನಿಂತಿರೋದು

ಬೇಡ ಚಿನ್ನ ಬಿಸಲಲ್ಲಿ ನೀ ಎಲ್ಲೂ ಹೋಗಬೇಡ ಚಿನ್ನ

ಓ ಕೆ ಚಿನ್ನ ನೀ ಹೇಳಿದ್ ಎಲ್ಲಾ ತರ್ತೀನ್ ಚಿನ್ನ

ನಿನ್ ಮುಖ ಒಮ್ಮೆ ನೆನೆಪ್ ಮಾಡ್ಕೊಂಡ್ರೆ ಸಾಕ್ ಚಿನ್ನ

ನನ್ನ ಆಯಾಸ ಎಲ್ಲಾ ಮಾಯಾ ಚಿನ್ನ

>>>>>>>

ಹೆಂಡತಿಯ ಫೋನ್ ಬಂದಾಗ ,,,,,,,

ಹಲೋ ಅದೇನ್ ಸರಿಯಾಗ್ ಬೊಗಳು

ಹ್ಞೂ ಈಗ ಆಗಲ್ಲ ನಾನು ಟ್ರಾಫಿಕ್ಕಲ್ಲಿ ಇದೀನ್

ಆ ಅಂಗ್ಡಿ ಎಲ್ಲೈತೋ ನಂಗೊತ್ತಿಲ್ಲ

ಬೆಳಗ್ಗಯಿಂದ ಏನ್ ದನ ಕಾಯ್ತಿದ್ದ

ನಿನ್ ಮುಖಕ್ಕೆ ಒಂದಿಷ್ಟ್ ,,,,, ಹಾಕ ,.

>>>>>>>

ಅದೇ ಸಾರ್ ನೋಡುದ್ರೆ ಗೊತ್ತಾಗಲ್ವ

ಬೈಕಲ್ಲಿ ಒಬ್ಬರಿಗೊಬ್ಬರು ಅಂಟಿಕೊಂಡು ಕೂರ್ತಾರಲ್ಲ ಅವ್ರು ಲವರ್ಸು

ಅದೇ ಬೈಕಲ್ಲಿ ಹಾವು ಮುಂಗ್ಸಿ ತರ ದೂರ ದೂರ ಕೂರ್ತಾರಲ್ಲ

ಅವ್ರು ಗಂಡ ಹೆಂಡ್ತಿ ಸಾರ್

----- ***** ----- *****

ಹುಡುಗ ಮದುವೆಯಾಗುವ ಮೊದಲು

ರೂಮಲ್ಲಿ ಪರ್ಫ್ಯೂಮ್, ಗಾಗಲ್

ಮ್ಯುಸಿಕ್ ಪ್ಲೇಯರ್, ಬಾಗಿಲಲ್ಲಿ ಬೈಕ್

ಲವ್ ಕಾರ್ಡ್ಸ್.,

ಮದುವೆಯಾದನಂತರ ,,,,

ರೂಮಲ್ಲಿ ಪೈನ್ ಬಾಮ್ , ತೆಸ್ತೆಡ್ ಗ್ಲಾಸ್

ಮಗುವಿನ ಅಳು , ಬಾಗಿಲಲ್ಲಿ ಸೈಕಲ್

ಕ್ರೆಡಿಟ್ ಕಾರ್ಡ್ಸ್ .,

Tuesday 7 July 2009

ಹೃದಯದ ಮಾತು

ಎಲ್ಲವನ್ನು ಹೊಸದಾಗಿ ಹೊಸ ರೀತಿಯಲ್ಲಿ ಪ್ರಾರಂಭಿಸೋಣ,

ಎಷ್ಟೊಂದು ಹಳೆ ಪರಿಕರಗಳಿವೆಯೋ ಅವುಗಳನ್ನು ಮೊದಲು ಈ ಸಭಾ ಅಂಗಣದಿಂದ ಹೊರ ಹಾಕೋಣ,

ನನ್ನ ಮನೆಯಂತೂ ಈಗ ಬೆಂಕಿಯ ಅಲೆಯಲ್ಲಿ ಮುಳುಗಿದೆ, ಆದರೆ ಇದರ ಬೆಳಕು ನಿನ್ನ ಮನೆಯಂಗಳವನ್ನು ಬೆಳೆಗಿಸುತ್ತಿದೆಯಲ್ಲ ಅಷ್ಟೆ ಸಾಕು ನನಗೆ,

ದುಖ ಸಂತೋಷಗೊಂಡಿದೆಯಲ್ಲ ಮತ್ತೇನು ನಟಿಸುತ್ತಲೇ ಇರುತ್ತೇನೆ ಆದರೆ ನನ್ನ ಸಭಾಂಗಣದ ವ್ಯವಸ್ಥೆ ಸರಿಯಾದರೆ ಸಾಕು,

ಬಿಡುವಿನ ಸಮಯದಲ್ಲಿ ಆರಾಮವಾಗಿ ಕುಳಿತು ಅಳೋಣ ಸ್ನೇಹಿತರೇ, ಬಿಡುವಿದ್ದರೆ ಸಮುದ್ರವನ್ನೇ ಜಾಲಾಡೋಣ ,

ಈ ರೀತಿ ಮಣ್ಣಿನಲ್ಲಿ ಹಾಕುವುದುಬೇಡ ಅವಮಾನಿಸಬೇಡ ಈ ಕಣ್ಣೀರು ಆ ಕಣ್ನೀರಲ್ಲ ಇದು ಈ ಪ್ರಪಂಚವನ್ನೇ ಮುಳುಗಿಸಬಹುದಾದ ಕಣ್ಣೀರು,

ನಾನು ಇಲ್ಲಿ ಬಾಯಾರಿದ್ದೇನೆ ಎಂಬುದು ನಿನಗರಿವಿರಲಿ, ಇಲ್ಲಿ ಬರಿದಾದ ಮನಸುಗಳೇ ಗಾಳಿಯಲ್ಲಿ ಹಾರಾಡುತ್ತವೆ, ಬನ್ನಿ ಹೊಸ ರೀತಿಯಲ್ಲಿ ಪ್ರಾರಂಭಿಸೋಣ .,..

ನಿನ್ನ ಕನಸಿನ ಲೋಕದಲ್ಲಿ ನಾ ಮುಳುಗುತ್ತಾ ಹೋದೆ

ದುಖವನ್ನು ಮರೆ ಮಾಚುತ್ತಲೇ ಹೋದೆ ಮುಗುಳ್ನಗುತ್ತಲೇ ಹೋದೆ

ಗುಂಪು ಗುಂಪು ಗಳಲ್ಲೂ ಹಾಡು ಹಾಡುತ್ತಲೇ ಹೋದೆ,

ಕಣ್ಣಿರಿಂದ ಬರೆದ ಅದೃಷ್ಟದ ರೇಖೆಗಳನ್ನು

ಹೂವಿನ ಎಲೆಗಳಿಂದ ಸಿಂಗರಿಸುತ್ತ ಹೋದೆ ,

ಹಾಡುಗಳನ್ನು ಹಾಡುತ್ತಾ ಹೋದೆ ಶ್ರುತಿ ತಪ್ಪುತ್ತಾ ಹೋದೆ

ಕವನಗಳನ್ನು ಹೇಳುತ್ತಾ ಹೋದೆ ಲಯವನ್ನು ಮರೆಯುತ್ತಾ ಹೋದೆ ,

ಆದರು ಈ ಪ್ರಕೃತಿ ಎಷ್ಟೊಂದು ಸುಂದರ ಸೂರ್ಯ ಚಂದ್ರ ಭೂಮಿ ಆಕಾಶ

ಎಲ್ಲರಿಗು ಹಾಡು ಕೇಳಿಸುತ್ತಾ ಹೋದೆ ನಿನ್ನ ಉಸಿರಿನ ಸುಗಂಧ ನಿನ್ನ ಶರೀರದ ಸುವಾಸನೆ

ಅದ್ಯಾವ ಮೋಹಕಥೆಯೋ ಈ ಗಾಳಿಯಲ್ಲಿ ಸೇರುತ್ತ ಹೋದೆ ,

ಕ್ಷಣ ಕ್ಷಣ ದ ಮಾಯಾ ಮೋಹಕಥೆಯೋ ಏನೋ ನಾನು ಅದರಲ್ಲಿ ಮುಳುಗುತ್ತಾ ಹೋದೆ

ಒಂದೊಂದು ಹೆಜ್ಜೆಗಳಲ್ಲು ನಾನು ಅದುರುತ್ತ ಹೋದೆ ,,,,,,,, ಪದರುತ್ತ ಹೋದೆ ,.,..

ನಿನ್ನ ಕನಸಿನ ಲೋಕದಲ್ಲಿ ನಾ ಮುಳುಗುತ್ತಾ ಹೋದೆ .

Monday 6 July 2009

ಪಾನಿ

ಜಾತೆ ಜಾತೆ ಓ ಮುಜೆಹ್ ಅಚ್ಚಿಹ್ ನಿಶಾನಿ ದೇ ಗಯಾ

ಉಮರ್ ಭರ್ ದೊಹ್ರಾವುನ್ ಐಸಿ ಕಹಾನಿ ದೇ ಗಯಾ

ಉಸ್ಸೆ ಮೇ ಕುಚ್ ಪಾ ಸಕುನ್ ಐಸಿ ಕಹಾನಿ ಉಮ್ಮಿದ್ ಥಿ

ಘಂ ಭಿ ಓ ಶಾಯದ್ ಬಡಾ ಏ ಮೆಹರ್ಭಾನಿ ದೇ ಗಯಾ

ಸಬ್ ಹವಯೇನ್ ಲೇ ಗಯಾ ಮೇರೆ ಸಮಂದರ್ ಕಿ ಕೊಇ

ಔರ ಮುಜ್ ಕೋ ಏಕ ಬಾದ್ಬಾನಿ ದೇ ಗಯಾ

ಖೈರ್ ಮೇ ಪ್ಯಾಸ ರಹಾ ಪರ್ ಉಸ್ ನೆ ಇತನಾ ತೋ ಕಿಯಾ

ಮೇರಿ ಪಲ್ಕೊಂಕಿ ಕತಾರೊಂಕೋ ಪಾನಿ ದೇ ಗಯಾ

Dill ki Baat

phareb ki hansi ko aashiqi samaj baithe
mouth ko hi apni zindagi samaj baithe
wahkt ka mazaak tha ya bad naseebi thi meri
thumhaari do baataonko
mohabat samaj baithe.
---- ----- ----- ----
ajnabee hote huve bhi dosti ka rishta
nibhatain hain aap
najaane kuon dill ko itna lubhatain hain aap
ye kaisi karishma hai aapki
jo hum ko itna yaad
aatae hain aap
----- ----- ------
tan haie mey bhi
tuje yaad karlenge
teri her baat per
aith baar karenge
thuje aane ko tho naheen kahenge
phir bhi tere intezaar karenge
----- ----- ------ -----
yek yek pal saal hai tumhaare bina
her pal intezaar hai tumhaare bina
tumto jeeloge apni zindagi
per hamaari zindagi bekaar hai tumhaare bina
----- ----- ---- ----
aarzu hai door se dekne ki
kareeb aana bhi nahi chate
tamanna nahin tumey paane ki
magar khona bhi nahi chate

(Collect)

Sunday 5 July 2009

೫ ಪೈಸೆಯಲ್ಲಿ ನೋಡುವ ಸಿನೆಮಾ ( Byscope)


ದೇಖೋ ದೇಖೋ ದೇಖೋ ಬೈಸ್ಕೊಪ್ ದೇಖೋ, ದಿಲ್ಲಿ ಕ ಕ್ಹುತುಬ್ಮಿನಾರ್ ದೇಖೋ, ಆಗ್ರಕ ತಾಜ್ ಮಹಲ್ ದೇಖೋ , ಘರ್ ಬೈಟೆಯ್ ಸಾರ ಸಂನ್ಸಾರ್ ದೇಖೋ ,,,,, ಈ ಹಾಡು ಕೇಳದವರು ಯಾರು ಎಲ್ಲರು ಕೇಳಿದವರೇ.
ಅಂದ ಹಾಗೆ ಈ ವಿಚಾರ ಇಂದು ,,, ?

ಡಿಂಗ್ ಚಿಕ್ - ಡಿಂಗ್ ಚಿಕ್ - ಡಿಂಗ್ ಚಿಕ್ - ಡಿಂಗ್ ಚಿಕ್ ಶಬ್ದ ಮಾಡುತ್ತಾ ಬರುವ ಆ ವ್ಯಕ್ತಿ ಈ ಚಿತ್ರದಲ್ಲಿರುವ ಸಿನೆಮ ಪೆಟ್ಟಿಗೆಯನ್ನು ತನ್ನ ಹೆಗಲ ಮೇಲೆ ಹೊತ್ತು ತರುತ್ತಿದ್ದ ಸಾದಾರಣವಾಗಿ ಇವನು ಬರವುದು ಭಾನುವಾರ ಅಥವಾ ಸಂಜೆ ಅಥವಾ ರಜಾ ದಿನಗಳಲ್ಲಿ , ಹಬ್ಬ ಹರಿದಿನಗಳಲ್ಲಿ , ನಾನಾಗ ಬಹಳ ಚಿಕ್ಕವನು ಪ್ರೈಮರಿ ಸ್ಕೂಲು ಅದು ನನ್ನ ಮನೆಗೆ ಹತ್ತಿರದ ಸ್ಕೂಲು ವಿದ್ಯಾನಗರ ಅಂದರೆ ಸಹ್ಯಾದ್ರಿ ಕಾಲೇಜ್ ಎದುರು.

ಈ ಶಬ್ದ ಬಂದ ಕೂಡಲೇ ನಾವೆಲ್ಲರೂ ಅವನನ್ನು ಸುತ್ತುವರೆವುತ್ತಿದೆವು ಅವನು ಅದರ ಕಾಲುಗಳನ್ನು ಸರಿ ಮಾಡಿ ಅದರ ಮೇಲೆ ಈ ಸಿನೆಮಾ ಬಾಕ್ಸ್ ಇಡುತ್ತಿದ್ದ ನಂತರ ಹಾಡು ಶುರು ಮಾಡುತ್ತಿದ್ದ ಮತ್ತೆ ಅದೇ ಶಬ್ದ ಡಿಂಗ್ ಚಿಕ್ - ಡಿಂಗ್ ಚಿಕ್ ನಾಡಿಗೆ ಹಾಡು ಹುಡುಗರೆಲ್ಲ ಕಾಡಿ ಬೇಡಿ ಮನೆಯಿಂದ ೫ ಪೈಸೆ ತಂದು ಅವನಿಗೆ ಕೊಟ್ಟ ಕೂಡಲೇ ಅವನು ಒಂದೊಂದೇ ಮುಚ್ಚಳ ವನ್ನು ತೆಗೆಯುತ್ತ ಒಬ್ಬಬರಿಗೆನೆ ತನ್ನ ಮುಖ ಕಣ್ಣು ಆ ಮುಚ್ಚಳಕ್ಕೆ ಸರಿಯಾಗುವಂತೆ ರೆಡಿ ರೆಡಿ ಅನ್ನುತಿದ್ದ ನಾವು ತಮ್ಮ ಎರಡು ಕೈಗಳನ್ನು ತಮ್ಮ ಮುಖ ಸೈಡ್ ಕವರ್ ಮಾಡಿ ನೋಡಲು ಅಣಿಯಾಗುತ್ತಿದ್ದೆವು.

೫-೬ ಮುಚ್ಚಳಗಳಿರುತ್ತಿದ್ದವು ಅವನು ಹೆಹ್ ಹೀಹ್ ಹೆಹ್ ಹೀಈಹ್ ಬಾಂಬೆ ಬಾಂಬೆ ಕಲ್ಕತ್ತಾ , ಬೆಂಗಳೂರ್ ಬೆಂಗಳೂರ್ ನೋಡಿ ನೋಡಿ ಡಿಂಗ್ ಚಿಕ್ ,,, ಕನ್ನಂಬಾಡಿ ಕಟ್ಟೆ ನೋಡು ,,,,,, ಹೊಟ್ಟೆ ನೋಡು ವಿಧಾನ ಸೌಧ ನೋಡು , ರಾಜ್ಕುಮಾರ್ ವಿಷ್ಣುವರ್ಧನ್ ಭಾರತಿ ನೋಡು ನೋಡು ಎಂದು ಹಾಡುತ್ತಾ ಎಲ್ಲ ಊರುಗಳ ಹೆಸರುಗಳನ್ನು ಸೇರಿಸಿ ಜನರ ಹೆಸರನ್ನು ಸೇರಿಸಿ ಜೋರಾಗಿ ಹಾಡುತ್ತಾ ಒಂದು ಕೈಯಲ್ಲಿ ರೀಲುಗಳ ಸಲಿಗೆಯನ್ನು ತಿರುಗಿಸುತ್ತಾ ಮತ್ತೊಂದು ಕೈಯಲ್ಲಿ ಅದರ ಮೇಲಿರುವ ಗೊಂಬೆಯ ದಾರವನ್ನು ಎಳೆಯುತ್ತಿದ್ದಂತೆ ಆ ಗೊಂಬೆ ತನ್ನ ಎರಡು ಕೈಗಳನ್ನು ತನ್ನ ಬಟ್ಟೆ ಸಹಿತ ಮೇಲೆ ಕೆಳಗೆ ಮಾಡುತ್ತ ಕುಣಿಯುತ್ತಿರುತ್ತದೆ. ಅದಾಗಲೇ ತಮ್ಮ ತಮ್ಮ ಮುಖಗಳನ್ನು ಇಟ್ಟು ಸಿನೆಮಾ ನೋಡುತ್ತಿರುವ ನಾವು ತಮ್ಮ ಎಲ್ಲವನ್ನು ಮೈಮರೆತು ಅದರಲ್ಲೇ ಮುಳುಗಿರುತ್ತೇವೆ .

ಈ ಮದ್ಯೆ ನಾವು ನೋಡಿ ಮುಗಿಯುತ್ತಿದ್ದಂತೆ ನಮ್ಮೆ ಹಿಂದೆಯೇ ಇನ್ನೊಂದು ಗ್ರೂಪ್ ರೆಡಿ ಇರುತ್ತದೆ. ಈ ಮದ್ಯೆ ಒಮ್ಮೆ ನೋಡಿದವರು ಮತ್ತೊಮ್ಮೆ ಮಗದೊಮ್ಮೆ ನೋಡುವುದುಂಟು , ಜೊತೆಗೆ ನಾನ್ ನೋಡ್ದಾಗ ಅದು ಇತ್ತು ಇದು ಇತ್ತು ಎಂದು ಸುಮ್ಮನೆ ಸ್ವಲ್ಪ ಸೇರಿಸಿ ಲಾಟು ಬಿಡ್ವುದ್ ಉಂಟು . ಮಾರನೆ ದಿನ ಸ್ಕೂಲ್ ನಲ್ಲಿ ಇದೆ ವಿಷಯ ಅದೊಂದು ವಿಸ್ಮಯ ಲೋಕ ನಮ್ಮ ಜೀವನದ ಅಪೂರ್ವ ದಿನಗಳು, ಅದೇ ನಮ್ಮ ಡಾಲ್ಬಿ ಡಿಜಿಟಲ್ ಸಿನೆಮಾ ಹಾಲ್ ಇಡಿ ಪ್ರಪಂಚವನ್ನು ಆ ಮುಚ್ಚಳ ದ ಒಳಗಿಂದ ನೋಡುತ್ತಿದ್ದೆವು .
ಇಂದು ಏನಾಗಿ ಹೋಗಿದೆ ಮೊನ್ನೆ ಅಬ್ಬು ಗೆ ಅಪ್ಪು ಹೇಳಿಕೊಟ್ಟಿದ್ದು ಈ ಟಾರ್ಜ್ಯನ್ ಕಾರ್ ಸರಿಯಿಲ್ಲ ಕಣೋ ಅಬ್ಬು ಇದು ಗಾಳಿಯಲ್ಲಿ ಹೋಗಲ್ಲ ನಮಗೆ ಹ್ಯಾರೀ ಪೋಟ್ ಕಾರ್ ಬೇಕು ಅಂತ ಹೇಳೋ ಅದು ಸ್ವಿಚ್ ಹಾಕಿದ್ರೆ ಗಾಳಿಯಲ್ಲಿ ಹೋಗುತ್ತೆ
ಅವನೇ ಜೋರು ಅಂದ್ರೆ ಅದಕ್ಕಿಂತ ಜೋರು ಅವನ ತಂಗಿ

ಕಾರಣ ಮನೆಯಲ್ಲೇ ಕುಳಿತು ಎಲ್ಲವನ್ನು T V ಮತ್ತು ಕಂಪ್ಯೂಟರ್ ನಲ್ಲಿ ನೋಡಿ ತಿಳಿಯುವ ಮಕ್ಕಳೆಲ್ಲಿ ?
ರೋಡಿನಲ್ಲಿ ೫ ಪೈಸೆ ಕೊಟ್ಟು ಡಬ್ಬದಲ್ಲಿ ತಿರುಗುವ ಸಿನೆಮಾ ನೋಡುವ ನಾನೆಲ್ಲಿ ?

Thursday 2 July 2009

ನಿರೀಕ್ಷೆಯಲ್ಲಿದ್ದೇನೆ

ಅವಳ ಮುಖವನ್ನೂ ನೋಡಿಲ್ಲ
ಅವಳ ಹೆಸರನ್ನೂ ಕೇಳಿಲ್ಲ
ಆದರೂ ಅಂಥಹ ಒಂದು ಪ್ರಿಯತಮೆಯ
ನಿರೀಕ್ಷೆಯಲ್ಲಿದ್ದೇನೆ ವರುಷಗಳಿಂದ .,.,

ಪ್ರೀತಿಯ ವಿನಂತಿ

ನಿನ್ನಲ್ಲಿ ಒಂದು ಪ್ರೀತಿಯ ವಿನಂತಿಯನ್ನು ಮಾಡಲಾಗಲಿಲ್ಲ

ಏನೂ ಹೇಳಲೂ ಆಗಲಿಲ್ಲ - ಏನು ಕೇಳಲೂ ಆಗಲಿಲ್ಲ

ನಾನು ಇಲ್ಲಿ ಹೇಳಲೆಂದು ಬಾಯ್ದೆರೆದಿದ್ದೆ

ಅಲ್ಲಿ ನಿನ್ನ ಕಣ್ಣುಗಳು ಮುಚ್ಚಿ ಕೊಂಡವು

ಮತ್ತು ನೀನು ನಾಚಿ ನೀರಾಗಿದ್ದೆ

ನನ್ನ ಪ್ರಿಯತಮೆ

ನಿನ್ನ ಮೋಹಕ ಮೋಸದ ನಗುವನ್ನು ನನ್ನ ಪ್ರಿಯತಮೆ ಅಂದು ಕೊಂಡೆ

ನನ್ನ ಅಂತ್ಯವನ್ನೇ ನಾನು ನನ್ನ ಜೀವನ ಎಂದು ಕೊಂಡೆ

ನನ್ನ ಸಮಯದ ತಮಾಷೆಯೋ ಅಥವಾ ದುರಾದೃಷ್ಟವೋ

ನಿನ್ನ ಕೆಲವು ಮಾತುಗಳನ್ನು ಪ್ರೇಮದ ಕಾರಂಜಿ ಅಂದು ಕೊಂಡೆ

Wednesday 1 July 2009

ಆಂಟಿ ಕಂಕುಳಲ್ಲಿ ಒಂದು ಮಗುವಿತ್ತು

ನಾನು ಪರೇಶ ಕೆಲಸ ನಿಮಿತ್ತ ಬೆಂಗಳೂರಿಗೆ ಶಿವಮೊಗ್ಗದಿಂದ ಟ್ರೈನ್ ಮೂಲಕ ಹೋಗುವ ಎಂದು ನಿರ್ಧರಿಸಿ ಮಧ್ಯಾನದ ಟ್ರೈನ್ ಹತ್ತಿದೆವು. ನಾನು ಪೇಪರ್ ಓದುತ್ತ ಕುಳಿತೆ ಇವನು ಅಕ್ಕ ಪಕ್ಕದವರ ಹತ್ತಿರ ಏನೇನೋ ಲಾಟು ಬಿಡುತ್ತಾ ಇದ್ದ , ಟ್ರೈನ್ ಭದ್ರಾವತಿ ತಲುಪಿದಾಗ ಅಲ್ಲಿಂದ ಸ್ವಲ್ಪ ಜನರು ಹತ್ತಿದರು ಅದರಲ್ಲಿ ಒಂದು ಆಂಟಿ ಕಂಕುಳಲ್ಲಿ ಒಂದು ಮಗುವಿತ್ತು ಬಂದು ನಮ್ಮ ಎದುರು ಸೀಟ್ ನಲ್ಲಿ ಕುಳಿತು ಕೊಂಡಿತು.

ಪರೆಶನಿಗೆ ಮಕ್ಕಳು ದೊಡ್ಡವರು ಕಂಡರೆ ಬಹಳ ಗೌರವ ಅದರಂತೆ ಅವನ ಮಾತು ಕಥೆ ನಡೆದಿತ್ತು. ಸ್ವಲ್ಪ ಹೊತ್ತಿನಲ್ಲಿ ಮಗು ಅಳಲು ಶುರುಮಾಡಿತು, ಆಂಟಿ ಸುಮ್ಮನೆ ಕುಳಿತಿತ್ತು ಕೂಡಲೇ ಪರೇಶ ಹೇಳಿದ ಅದಕ್ಕ ಸ್ವಲ್ಪ ಹಾಲೋ ನೀರೋ ಬೇಕೇನೋ ಸ್ವಲ್ಪ ಕೊಡ್ರಿ ಸ್ವಲ್ಪ ಸಮಾಧಾನ ಮಾಡ್ರಿ ಅಂದ ಆದರೆ ಆ ಮಗು ಮತ್ತು ಜೋರಾಗಿ ಅಳತೊಡಗಿತು.

ಬೋಗಿಯಲ್ಲಿ ಇದ್ದವರೆಲ್ಲಾ ಆಚೆ ಈಚೆ ಹೋಗ ತೊಡಗಿದರು , ಇದು ನೋಡಿದ ಪರೇಶ ಹೇಳ್ದ ಸ್ವಲ್ಪ ಹಾಡು ಗೀಡು ಹಾಡಿ ಮಗೂಗೆ ಸಮಾಧಾನ ಮಾಡ್ರಿ ಆಂಟಿ ಅಂದ ಇದು ಕೇಳಿದ ಆ ಹೆಂಗಸು ಹಾಡು ಹೇಳಲು ಶುರು ಮಾಡಿದಳು . ನಾನು ಪೇಪರ್ ಅಡ್ಡ ಹಿಡಿದು ಕುಳಿತೆ ಆದರೆ ಪರೇಶ ಮಾತ್ರ ಹುಚ್ಚನಂತಾಗಿದ್ದಾ ಕಾರಣ ಅ ಹೆಂಗಸು ಹಾಡವುದು ಒಳ್ಳೆ ಹಾಡು ಶಬ್ದ ಮಾತ್ರ ಗಂಡಸಿನದು ' ಹಿಂದಿ ನಟ ಅಮ್ಬರೀಶ್ಪುರಿ' ಯಾ ಶಬ್ದ ಅದು ಕೇಳುತ್ತಿದ್ದಂತೆ ಪರೇಶ ಹುಚ್ಹ ನಂತೆ ಆಡತೊಡಗಿದ .

ನಾನು ಪೇಪರ್ ಅಡ್ಡ ಹಿಡಿದು ನಗತೊಡಗಿದೆ ಮಗು ಮಾತ್ರ ಶಾಂತವಾಗಿತ್ತು ಬೋಗಿಯಲ್ಲಿ ಹೆಂಗಸಿನ ಶಬ್ದ ಬಹಳ ಕರ್ಕಶವಾಗಿತ್ತು . ಅಷ್ಟರಲ್ಲಿ ಪರೇಶ , ಅವ್ವ , ತಾಯಿ , ಅಮ್ಮ , ಕೈ ಮುಗಿತೀನಿ ಕಾಲಿಗ್ ಬೀಳ್ತೀನಿ ದಯವಿಟ್ಟು ಆ ಮಗೂನೆ ಅಳ್ಳಿ ಬಿಡವ್ವ , ನಿಂದೇನ್ ಬಾಯಿ ನ ಹಳೆ ರೇಡಿಯೋ ನ ,.

ನಿನ್ ಗಂಡ ಎಲ್ಲಿ ? ಅವ್ರು ಬಸ್ಸಲ್ಲಿ ಹೋದ್ರು ನಂಗೆ ಟ್ರೈನಲ್ಲಿ ಬಾ ಅಂದ್ರು

ನೋಡುದ್ರ ಸಾರ್ ಬೋಳಿಮಗ ಎಷ್ಟು ಶಾಣ್ಯ ಇದಾನ್ ,,,...,,,...!

ನನ್ನ ಚಪ್ಪಲಿ ಕಳುವಾಯಿತಲ್ಲ

ಕಳೆದ ವಾರ ಅತ್ಯಂತ ಸಂತೋಷ ಮತ್ತು ಆನಂದವನ್ನು ಉಂಟುಮಾಡಿದ ಅದೇ ಸ್ತಳ ದಲ್ಲಿ ಇಂದು ನನಗೆ ಅನುಭವಿಸಲು ಸಹಿಸಲು ಆಗದಂತಹ ದುಖ ಮತ್ತು ವೆಥೆ ಬಂದೋದಗಿತಲ್ಲ , ಕಾರಣ ವಿಷ್ಟೇ ನನ್ನ ಚಪ್ಪಲಿ ಕಳುವಾಗಿವೆ , ಅದೇ ದೇವಸ್ಥಾನದಲ್ಲಿ ಹೋಗಲಿ ತೊಂದರೆಯಿಲ್ಲ ಸದ್ಯ ನಾನು ಎಲ್ಲಿಂದ ಹಾಕಿಕೊಂಡು ಬಂದಿದ್ದೇನೋ ಅಲ್ಲೇ ಹೋಯಿತಲ್ಲ ಹೋಗಲಿ ಬಿಡಿ ,.,.,.!