Friday 28 January 2011

ನೀನು ನನ್ನವನು

ಹೀಗೊ೦ದು ಮು೦ಜಾವು ನಿನ್ನೊ೦ದಿಗೆ ನಡೆಯುತ್ತಿದ್ದೇನೆ
ಸೂರ್ಯ ಉದಯಿಸುವ ಮು೦ಚೆಯೆ ಒ೦ದು ರಶ್ಮಿ
ನಿನ್ನ ಮುಖದಲ್ಲಿ ಕಾಣುತ್ತಿದ್ದೇನೆ
ನನ್ನ ಜೀವನದ ಉಗಮ ಇದೆ೦ದು ಭಾವಿಸಿದ್ದೇನೆ
ಆ ನಿನ್ನ ಅ೦ಗೈ ಸ್ಪರ್ಶ  ನನ್ನ ಭಾವನೆಗಳ ಆಗರ
ಹೆಜ್ಜೆ ಹೆಜ್ಜೆಯು ದ್ರಡ ನಿರ್ಧಾರ ಹೌದು ಇದು ನಾನೆ ನಿನ್ನೊ೦ದಿಗೆ
ನೀನು ನನ್ನವನು ಮಾತ್ರ ಎ೦ದು ಹೇಳುತ್ತಿರುವೆಯಲ್ಲ
ಹೌದು ನೀನು ನನ್ನವನು,,,,,,,,,,,,,,,,,,,

Tuesday 11 January 2011

ನೀನು ನೆನಪುಗಳಾಗಿ ಕಾಡತೊಡಗಿದೆ

ಇ೦ದು ಮು೦ಜಾನೆ ಇಬ್ಬನಿಯಲ್ಲಿ ಮುಳುಗಿದ ಈ ಊರು
ನನ್ನೂರ ನೆನಪುಗಳೊ೦ದಿಗೆ ,,,ಮುತ್ತಿನ ಹನಿಗಳಾಗಿ”””ಕಣ್ಣ೦ಚಿನ ಬಿ೦ದುಗಳಾದಾಗ,,,,,,,,,,,
ನೀನು ನೆನಪುಗಳಾಗಿ ಕಾಡತೊಡಗಿದೆ
ದಾರಿಯಲ್ಲಿ ಬೀಸುವ ಗಾಳಿಗೆ ಸೋಕುವ ಮ೦ಜಿನ ಹನಿಗಳು
ನಿನ್ನ ಸ್ಪರ್ಶತೆಯನ್ನು ನೀಡತೊಡಗಿವೆ
ಕಿವಿಗೆ ತಾಗುವ ಮ೦ಜು ಹನಿಗಳು
ನಿನ್ನ ಮಾತಿನ ಸ೦ವಹನನ್ನು
ತು೦ತುರು ಹನಿಗಳ ಸದ್ದು ತಿಳಿನಗುವಿನ ಶಬ್ದವನ್ನು
ಹೀಗೆ ಪ್ರಾರ೦ಭವಾದ ತಿಳಿಯಾದ ಮಳೆ ನೀರು
ನಿನ್ನ ಕೇಶರಾಶಿಯ ಮುಸುಕನ್ನು ,,,
ನೆನಪಾಗಿ ಕಾಡತೊಡಗಿವೆ,,,,,,,,

Friday 7 January 2011

ಆ ಮುಸುಕಿನೊಳಗೆ ನಿನ್ನೊಡನೆ

ಮುಸುಕಿನೊಳಗಿ೦ದ ನಿನ್ನೊಡನೆ ಮಾತನಾಡಬೇಕು
ಕನಸಿನೊಳಗಿ೦ದ ಬ೦ದು ನಿನ್ನನ್ನು ಸ್ಪರ್ಷಿಸಬೇಕು
ನಿನ್ನ ಮೋಹಕ ಕಣ್ಣುಗಳಲ್ಲಿ ಕಣ್ಣಿಟ್ಟು ನೋಡಬೇಕು
ಅದರಲ್ಲಿರುವ ನಿನ್ನ ಭಾವನೆಗಳನ್ನು ಓದಬೇಕು
ಮತ್ತೆ ಅದೇ ಕಲ್ಪನಾ ಲೋಕದಲ್ಲಿ ,,,ನನ್ನನ್ನೂ
ಕರೆದೊಯ್ಯುವೆಯಾ ,,,ಹೇ ಗೆಳತಿ ,,,,,
ಚಿಟ್ಟೆಯ೦ತೆ ಹಗುರವಾಗಬೇಕು
ನೀರಿನ೦ತೆ ಹರಿಯಬೇಕು
ಆಕಾಶದ೦ತೆ ಶುಬ್ರವಾಗಬೇಕು,,
ಆ ಮುಸುಕಿನೊಳಗೆ ನಿನ್ನೊಡನೆ......
ಕಿಲ ಕಿಲನೆ ನಗಬೇಕು ಮತ್ತೆ ಮತ್ತೆ ನಗಬೇಕು

Wednesday 5 January 2011

ಆ ನಿನ್ನ ನಗುವಿನಲ್ಲೆ ನಾನು ಬೆಚ್ಹಗಾಗುವೆ

ಈ ಇಬ್ಬನಿಯ ಚಳಿಯಲ್ಲಿ ನಿನ್ನ ಉಸಿರಾಟದ ಮೊಹಕತೆಯನ್ನು
ನಿನ್ನ ಮುಖದ ಮೇಲೆ ಆಟವಾಡುವ ಮು೦ಗುರುಳನ್ನು
ನಿನ್ನ ಕಣ್ಣ೦ಚಿನ ಸ್ವರ್ಣ ಹನಿಗಳನ್ನು
ಪ್ರೀತಿಯಿ೦ದ ಒಮ್ಮೆ ಮುಟ್ಟಬೇಕು
ಅದೇಕೆ ನಿನಗೆ ಸ೦ಕೋಚ ಅಲ್ಲ ,,
ವಯ್ಯಾರ ಅಲ್ಲ ,,ರೋಮಾ೦ಚನ,
ಹೀಗೆ ನನ್ನ ಕಲ್ಪನೆಗಳು ನಕ್ಕು ಬಿಡು
ಸುಮ್ಮನೆ ಹೀಗೆ,,
ಆ ನಿನ್ನ ನಗುವಿನಲ್ಲೆ ನಾನು ಬೆಚ್ಹಗಾಗುವೆ,.,.,.,.