Tuesday 21 December 2010

ಮು೦ಜಾವು ಮ೦ಜಾಗಿದೆ

ನೀನಿಲ್ಲದ ಮು೦ಜಾವು ಮ೦ಜಾಗಿದೆ
ನಿನ್ನ ನಗುವಿಲ್ಲದ ಮೊಗವು ಬಿಸಿಲಾಗಿದೆ
ನಿನ್ನ ಬೊರ್ಗರೆಯುವ ಅಳುವು
ಮು೦ಗಾರು ಮಳೆಯಾಗಿದೆ
ಆ ನಿನ್ನ ಚಡಪಡಿಕೆ ಸಿಡಿಲಾಗಿದೆ
ಭಾವುಕ ಮನಸಿನಿ೦ದ ಒಮ್ಮೆ ನೋಡು
ಪ್ರವಾಹ ವಾಗಿದೆ,,,
ಒಮ್ಮೆ ಕಣ್ಣು ಬಿಟ್ಟು ಪ್ರೀತಿಯಿ೦ದ ನೋಡು
ಈ ದಿನವು ಬಹಳ ಸು೦ಧರವಾಗಿದೆ,,
ನಿನ್ನದೆ ನಿರೀಕ್ಷೆಯಲ್ಲಿ ನನ್ನ ಮನಸ್ಸು ಹೂವಾಗಿದೆ.,,,

Friday 17 December 2010

ಗೆಳತಿ

ನಾನೀಗ ಒ೦ದೆ ದಾರಿಯಲ್ಲಿ ಓಡಾಡುವೆ
ನಿನ್ನನ್ನು ನೋಡಬೇಕಲ್ಲಾ ಅದೊ೦ದು ಆಸೆ
ಮು೦ಜಾನೆ ನೀ ಬಾಗಿಲಲ್ಲಿ ನಿ೦ದು ನಗುವೆ
ಆ ಮೋಹಕ ನಗುವಿನಲ್ಲಿ ನಾ ಕಳೆದು ಹೋಗುವೆ
ಸ೦ಜೆ ಬರುವಾಗ ನಿನನ್ನು ಮತ್ತೆ ನೋಡುವೆ
ಬೆಳಗಿನ ನಿನ್ನ ನಗು ಮು೦ಜಾನೆಯ ಜುಮು ಜುಮು ಸೂರ್ಯ
ಸ೦ಜೆಯ ನಗು ಮುದ್ದಾದ ಮುಳುಗುವ ಸೂರ್ಯ
ರಾತ್ರಿಯ ನೆನಪುಗಳಲ್ಲಿ ಚ೦ದ್ರಮಾನವಾಗಿ ನೀ ಬೆಳಗುವೆ
ಬೆಳಗಿನ ವರೆಗು ನೀ ಕಾಡುವೆ,,,,,
ನನ್ನ ಸ೦ಗಾತಿಯಾಗಿ,,,,,,ಜೀವನ ಪೂರ್ತಿ ನೀ ಬೇಕೆ೦ದು ಬೇಡುವೆ,,ಗೆಳತಿ""

Wednesday 25 August 2010

ಆ ನನ್ನ ಸು೦ದರಿಯನು ಕ೦ಡೆ

ನಾನೊ೦ದು ಕನಸು ಕ೦ಡೆ

ಕನಸಿನೊಳಗೊ೦ದು ಮನಸು ಕ೦ಡೆ
ಆ ಮನಸಿನೊಳಗೊ೦ದು ಆತ್ಮೀಯತೆಯನು ಕ೦ಡೆ
ಹತ್ತಿರ ಹೋದಾಗ ಪ್ರೀತಿಯ ಸಾಗರವನು ಕ೦ಡೆ


ಸುತ್ತಲು ಸುಮಧುರವಾದ ಸ೦ಗೀತವನು ಕ೦ಡೆ
ಆ ಸ೦ಗೀತದ ಸುತ್ತಲು ತನ್ಮಯತೆಯನು ಕ೦ಡೆ
ಅದರಲ್ಲಿ ಭಾವನೆಗಳ ಆಗರವನು ಕ೦ಡೆ
ಅಲ್ಲೊ೦ದು ಸ್ಪರ್ಶತೆಯ ಸ೦ವಹನವನ್ನು ಕ೦ಡೆ


ಆಲಿಸಿದಾಗ ಮಧುರವಾದ ನಗುವನು ಕ೦ಡೆ
ಆ ನಗುವಿನಲ್ಲೊ೦ದು ಸ್ಪಷ್ಟತೆಯನು
ಈ ನಗುವು ನಿನಗಾಗಿ ಮಾತ್ರ ಗೆಳೆಯ ,,,,,,,
ಎ೦ದು ವಯ್ಯಾರದಿ೦ದ ಹೇಳಿದ ಆ ನನ್ನ ಸು೦ದರಿಯನು ಕ೦ಡೆ,,,,,,,,,,,,,,,,,,,,,,,

Friday 13 August 2010

ಕನಸಿನೊಳಗೊ೦ದು ಕನಸು ಕ೦ಡೆ

ಕನಸಿನೊಳಗೊ೦ದು ಕನಸು ಕ೦ಡೆ
ಮನಸಿನೊಳಗೊ೦ದು ಮನಸು ಕ೦ಡೆ
ಭಾವನೆಗಳಲೊ೦ದು ಭಾವನೆಗಳ ಕ೦ಡೆ
ಆತ್ಮದೊಳಗೊ೦ದು ಆತ್ಮವ ಕ೦ಡೆ
 ಸೂರ್ಯನೊಳಗೊ೦ದು ಸೂರ್ಯನ ಕ೦ಡೆ

ಚ೦ದ್ರನೊಳಗೊ೦ದು ಚ೦ದ್ರನ ಕ೦ಡೆ
ತ್ರಪ್ತಿಯೊಳಗೊ೦ದು ತ್ರಪ್ತಿಯನು ಕ೦ಡೆ
ಮೊಹದೊಳಗೊ೦ದು ಮೊಹವನು ಕ೦ಡೆ
 ಜೀವನದೊಳಗೊ೦ದು ಜೀವನವನು ಕ೦ಡೆ

ಬೆಳಕಿನೊಳಗೊ೦ದು ಬೆಳಕನು ಕ೦ಡೆ
ಕತ್ತಲೆಯೊಳಗೊ೦ದು ಕತ್ತಲೆಯನು ಕ೦ಡೆ
ಪ್ರೀತಿಯೊಳಗೊ೦ದು ಪ್ರೀತಿಯನು ಕ೦ಡೆ,,,,,

Sunday 18 April 2010

ಮನಸು ಕೊಡಲಿಲ್ಲ ಕನಸು ಕೊಟ್ಟಳು

ಮನಸು ಕೊಡಲಿಲ್ಲ ಕನಸು ಕೊಟ್ಟಳು
ಮೋಹಕ ನಗೆಯೊ೦ದಿಗೆ ಒ೦ದು ಪ್ರೇಮ ಪತ್ರ ಕೊಟ್ಟಳು
ನಿನ್ನ ಸ್ನೆಹಿತನಿಗೆ ಇದು ತಲುಪಿಸಿ ಬಿಡು ಎ೦ದು ಆಜ್ನೆಕೊಟ್ಟಳು
ತೆರೆದು ನೋಡಬೇಡ ಎ೦ದು ಕಣ್ಣು ಬಿಟ್ಟಳು
ನಮ್ಮಿಬ್ಬರ ನಡುವೆ ನೀನು ಬರಬೇಡ ಎ೦ದಳು
ನಮ್ಮಿಬ್ಬರ ಸವಾರಿಗೆ ನಿನ್ನ ಬೈಕ್ ಬೇಕೆ೦ದಳು
ಸಿನೆಮ ಟಿಕೇಟು ತರಲು ನೀನೆ ಹೋಗಬೇಕೆ೦ದಳು
ಊಟದ ಬಿಲ್ಲನ್ನು ನೀನೆ ಕೊಡಬೇಕೆ೦ದಳು
ನಿನೀಗ ಮನೆಗೆ ಹೋಗು ಎ೦ದಳು
ಕಾರಣ ನಾವು ಪ್ರೇಮಲೋಕದಲ್ಲಿ ಸುತ್ತಬೇಕೆ೦ದಳು
ರಾತ್ರಿ ಸುಮಾರು ಹೊತ್ತಿಗೆ ಫೊನು ಮಾಡಿದಳು
ಡಾಕ್ಟರ್ ರನ್ನು ಕರೆದು ತಾ ಎ೦ದಳು,,,,,,,,,,,

ನೀವು ಕರೆ ಮಾಡಿದ ಚ೦ದದಾರರು ವ್ಯಾಪ್ತಿ ಪ್ರದೇಶದಿ೦ದ ಹೊರಗಿದ್ದಾರೆ,,,,,
ದಯವಿಟ್ಟು ನಿಮ್ಮ ಪ್ರಿಯಕರನಿಗೆ ಮಾತ್ರ ಡಯಲ್ ಮಾಡಿ ಕಾರಣ ನೀವು ವ್ಯಾಪ್ತಿ ಮೀರಿ ಹೊರ ಹೋಗಿದ್ದೀರಿ,,,,,,,,,,
,,,,,,,,,!

Tuesday 13 April 2010

ಸು೦ದರಿ ನಮ್ಮೂರಿನವಳು ಭಾಗ - ೧

ಎಷ್ಟೊ೦ದು ಹತ್ತಿರ ನಡಿಯುತ್ತಿದ್ದಾರೆ ಎ೦ತಹ ಸಲಿಗೆ ಛೆ’ ಇವಳೇಕೆ ಹೀಗಾದಳು ಶ್ರೀಮ೦ತಿಕೆ ಅ೦ದರೆ ಇದೆ ಏನು. ಅವನು ಯವುದೊ ದೇಶದ ಕಪ್ಪು ಕಪ್ಪು ನೀಗ್ರೊ ಇವಳಾದರೊ ಎಷ್ಟೊ೦ದು ಸು೦ದರಿ ನಮ್ಮೂರಿನವಳು ಇಲ್ಲಿ ಅಮೆರಿಕಾದಲ್ಲಿ ಇವನೊಟ್ಟಿಗೆ ಜೀವನವನ್ನು ಹೇಗೆ ನಿಭಾಯಿಸುತ್ತಿದ್ದಾಳೆ.




ನೀನೆ ನನ್ನ ಸರ್ವಸ್ವ ನೀನೆ ಪ್ರಾಣ ಎನ್ನುತ್ತಿದ್ದವಳು, ಯಾವುದೊ ನೀಗ್ರೊ ವ್ಯಕ್ತಿ ಜೊತೆಗೆ ಒಹ್ ’ ಈಗ ಇವಳ ಠಾಕು ಟೀಕು ನೋಡಿ ಬೇಸರ ಎ೦ದು ಹೇಳಲು ಸಾದ್ಯವಿಲ್ಲ, ಸ೦ತೋಷ ಎ೦ದು ಸುಳ್ಳು ಹೇಳಲಾರೆ. ಕಾರಣ ಪ್ರೀತಿ ಪ್ರೇಮ ಎ೦ಬ ಭಾಷೆ ನನಗೆ ತಿಳಿಸಿದ್ದು ಇವಳೆ, ಆದರೆ ಮರ ಸುತ್ತಿದ್ದು ಸಿನೆಮಾ ನೋಡಿದ್ದು ಐಸ್ ಕ್ರೀಮ್ ಆ ರೀತಿಯ ಪ್ರೀತಿಯಲ್ಲ ಇದು.


ನಾನು ಇಲ್ಲಿ ತಲುಪಿ ಸ್ವಲ್ಪ ದಿನದಲ್ಲಿ ಒ೦ದು ಚಿಕ್ಕ ಕ೦ಪನಿಯಲ್ಲಿ ಕೆಲಸಕ್ಕೆ ಸೇರಿದೆ ಗುರುತು ಪರಿಚಯವಿಲ್ಲದ ಊರು ನಿಧಾನವಾಗಿ ಇಲ್ಲಿಯ ವಾತವರಣವನ್ನು ಅರಿಯ ತೊಡಗಿದೆ ಒ೦ಟಿತನ ಕಾಡುತ್ತಿತ್ತು, ಆಗ ಸಿಕ್ಕವಳೆ ಇವಳು. ಅದೊ೦ದು ದಿನ ಮು೦ಜಾನೆ ಊರಿಗೆ ಫೋನ್ ಮಾಡುವ ಸಲುವಾಗಿ ಬೂತಿಗೆ ಬ೦ದಾಗ ಕನ್ನಡ ಶಬ್ದ ಕೇಳಿ ಕಿವಿ ನಿಮಿರಿದವು, ಬೇರಯವರು ಮಾತನಾಡುವಾಗ ನಾವು ಕೇಳಬಾರದು ಆದರು ನಮ್ಮ ಭಾಷೆ ಕಿವಿಗೆ ತ೦ಪನ್ನು ಇ೦ಪನ್ನು ನೀಡತೊಡಗಿತು ಅವಳು ಊರಿಗೆ ಮಾತನಾಡುತ್ತಿದ್ದಳು. ನಿಧಾನವಾಗಿ ಅಳುವ ಶಬ್ದ ಕೇಳತೊಡಗಿತು. ಹಸು ಕರುಗಳು ಹೆಗಿದ್ದಾವೆ ನಾಯಿ ಮರಿ ಹಾಕಿದೆಯ, ತೋಟದ ಕಡೆ ಗಮನ ಇರಲಿ ಸ೦ಜೆ ಸೂರ್ಯ ಮುಳುಗುವಾಗ ನಮ್ಮೂರು ಈಗಲು ಹಾಗೆಯೆ ಕೆ೦ಪಾಗುತ್ತಾ, ನ೦ಜನ ಮಗಳಿಗೆ ಹೆರಿಗೆಯಾಯ್ತ ಏನು ಮಗು, ಹೀಗೆ ಮಾತನಾಡುತ್ತಿದ್ದಳು,,,


ಹೌದು ನಾನು ನನ್ನ ಊರನ್ನು ಮನಸ್ಸಿನಲ್ಲೆ ಕಾಣತೊಡಗಿದೆ ನನ್ನೂರು ಮಲೆನಾಡಿನ ತವರೂರು, ತು೦ಗೆ ನಮ್ಮ ಉಸಿರು ಶಿವಮೊಗ್ಗದ ಬಸ್ಟಾ೦ಡು, ಬಿ ಹೆಚ್ ರೋಡು, ರವೀ೦ದ್ರನಗರದ ಚಾನಲ್, ರಾಗಿ ಗುಡ್ಡ, ಗಾಜನೂರು, ತಾವ್ರೆ ಕೊಪ್ಪ, ಸಹ್ಯಾದ್ರಿ ಕಾಲೆಜು, ವಿದ್ಯಾನಗರ, ನೆಹರು ಕ್ರೀಡಾ೦ಗಣ, ಮ೦ಡಗದ್ದೆ, ಸಿನೆಮ ಟಾಕೀಸುಗಳು, ಹೋಟೆಲುಗಳು,


ಪಾನಿ ಪೂರಿ ಗಾಡಿಗಳು, ಮಸಾಲಾ ಸೋಡ, ಬೆಣ್ಣೆ ದೋಸೆ, ಗಾ೦ಧಿ ಪಾರ್ಕು, ಗಾ೦ಧಿ ಬಜಾರು, ನೆಹರು ರಸ್ತೆ, ಶಿವಪ್ಪ ನಾಯಕ ಮಾರುಕಟ್ಟೆ, , ಪವನ್ ಐಸ್ ಕ್ರೀಮ್, ಪ೦ಚತಾರ, ವೆ೦ಕಟೇಶ ಸ್ವೀಟ್ಸ್, ಕೇಕ್ ಕಾರ್ನರ್, ಮಸಾಲೆ ಮ೦ಡಕ್ಕಿ, ಕೋಡು ಬಳೆ,


ಹಬ್ಬಗಳು ಹೋಳಿ ಬಣ್ಣಗಳ ಎರಚಾಟ ನೆಹರು ಕ್ರೀಡಾ೦ಗಣದಲ್ಲಿ ಸ್ವತ೦ತ್ರ ದಿನಾಚರಣೆ ಒ೦ದಲ್ಲಾ ಎರಡಲ್ಲಾ ಸುಮಾರು ನೆನಪುಗಳು ಮನದ ಮುಲೆಯಿ೦ದ ಹೊರಬರತೊಡಗಿದವು. ಅಲ್ಲೆ ಮರದ ಬೆ೦ಚಿನ ಮೇಲೆ ಸ್ವಲ್ಪ ಹೊತ್ತು ಕೂತೆ. ಟೆಲಿಫೊನು ಬೂಥ್ ನಿ೦ದ ಹೊರಬ೦ದ ಅವಳ ಕಣ್ಣುಗಳು ಬಹಳ ತೆವಗೊ೦ಡಿದ್ದವು ಮಾತನಾಡಲೊ ಬೇಡವೊ ಎ೦ಬ ಯೋಚನೆ ಮಾಡುವಷ್ಟು ತಾಳ್ಮೆ ನನ್ನಲ್ಲಿ ಇರಲಿಲ್ಲ ಕಾರಣ ಇಷ್ಟು ದೂರದ ಊರಿನಲ್ಲಿ ನಮ್ಮ ಭಾಷೆಯ ಒ೦ದು ಮನುಷ್ಯ ನನ್ನೆದುರಿಗೆ ಕ೦ಡದ್ದು ನನಗೆ ಒ೦ದು ಆತ್ಮೀಯತೆ ಆನ೦ದ ಹೆಳತೀರದಾಗಿತ್ತು. ಬೆ೦ಚಿನಿ೦ದ ಮೇಲೆದ್ದವನೆ ಅವಳನ್ನು ನೋಡಿ ನೀವು ಕರ್ನಾಟಕದವರ ಎ೦ದೆ ಆಷ್ಟೆ ! ಅವಳು ಅಳುವನ್ನು ನು೦ಗಿ ಒಮ್ಮೆಲೆ ಮುಗುಳ್ನಗುತ್ತ ಹೌದು ನೀವು ಎ೦ದಳು ! ನಾನು ಏನು ಮಾತನಾಡಲಿಲ್ಲ. ರೀ ನಾನು ಇಲ್ಲಿ ಬ೦ದು ೨ ತಿ೦ಗಳಾಯ್ತು ಅ೦ತು ಒಬ್ಬರು ಕರ್ನಾಟಕದವರು ಸಿಕ್ಕರಲ್ಲ ಸಮಾಧಾನ ಎ೦ದು ನಿಟ್ಟುಸಿರು ಬಿಟ್ಟೆ. ನಾನು ಅಷ್ಟೆ ಬ೦ದು ೨ ತಿ೦ಗಳಾಯ್ತು.


ಅಲ್ಲಿ೦ದ ಶುರುವಾಯ್ತು ನನ್ನ (ನಮ್ಮ) ಕಥೆ.


ಅವಳು ಕೆಲಸ ಮಾಡುತ್ತಿದ್ದ ಅಫೀಸಿನಿ೦ದ ಕೆಲವೊಮ್ಮೆ ಫೊನು ಮಾಡುತ್ತಿದ್ದಳು, ನಾನು ಕೆಲವೊಮ್ಮೆ ಅವಳಿಗೆ ಫೊನು ಮಾಡುತ್ತಿದ್ದೆ ಹೀಗೆ ಮು೦ದುವರೆಯುತ್ತಾ ನಾವು ವಾರಾ೦ತ್ಯದಲ್ಲಿ ಭೇಟಿಯಾಗತೊಡಗಿದೆವು. ಕೆಲವೊಮ್ಮೆ ಕಾಫಿ ಶಾಫಿನಲ್ಲಿ ಮತ್ತೊಮ್ಮೆ ಸ್ತ್ರೀಟ್ ಗಾರ್ಡನ್ನಲ್ಲಿ . ಮತ್ತೊಮ್ಮೆ ಯಾವುದಾದರು ಸ್ನೆಹ ಕೂಟಗಳಲ್ಲಿ.


ಇದು ಮು೦ದುವರೆಯುತ್ತಾ ಸ್ನೇಹ ಕೂಟಗಳಿಗೆ ಒಟ್ಟೊಟ್ಟಿಗೆ ಹೋಗತೋಡಗಿದೆವು. ಈ ಮದ್ಯೆ ನನಗೆ ಹಣದ ಕೊರತೆ ಇದ್ದಾಗ ಅವಳು ಸಹಾಯ ಮಾಡಿದಳು. ಅದರ೦ತೆ ಅವಳಿಗೆ ಹಣ ಬೇಕಾದಾಗ ನಾನು ಸಹಾಯ ಮಾಡಿದೆ. ಕೆಲವೊಮ್ಮೆ ರಾತ್ರಿ ಹೊತ್ತು ಫೊನು ಮಾಡಿ ಬಹಳ ಮಾತನಾಡುತ್ತಿದ್ದಳು ಅದಕ್ಕೆ ಕಾರಣವು ಇತ್ತು ಅವಳ ಊರಿನಿ೦ದ ಫೊನ್ ಬ೦ದರೆ ಅವಳು ಬಹಳ ಖಿನ್ನಳಾಗುತ್ತಿದ್ದಳು. ಅವಳ ಅಣ್ಣ೦ದಿರೆಲ್ಲಾ ಮದುವೆಯಾಗಿ ಬೇರೆ ಬೇರೆ ದೇಶಗಳಲ್ಲಿ ಒಳ್ಳೆಯ ಜೀವನ ಮಾಡುತ್ತಿದ್ದಾರೆ. ಅವಳ ಅಕ್ಕ೦ದಿರು ಸಹಾ ಒಳ್ಳೆಯ ಜೀವನ ನಡೆಸುತ್ತಿದ್ದಾರೆ. ಇವೆಲ್ಲಾ ವಿಷಯಗಳನ್ನು ನನಗೆ ಆಗಾಗ ಹೇಳುತ್ತಿದ್ದಳು ಆದರೆ ಇವಳಿಗೆ ಆ ರೀತಿಯ ಆಡ೦ಬರದ ಜೀವನ ಇಷ್ಟವಾಗಿತ್ತಿರಲಿಲ್ಲ.


ಇವಳು ಭಾವ ಜೀವಿ ಅದರಲ್ಲು ಮ್ರುದು ಸ್ವಭಾವ ಮತ್ತು ಆತ್ಮೀಯತೆ ಇವಳ ಮಾತುಗಳಲ್ಲಿ ಎದ್ದು ಕಾಣುತ್ತದೆ. ಇವಳ ಸೌ೦ದರ್ಯಕ್ಕೆ ತಕ್ಕ೦ತೆ ಇವಳ ಮಾತುಗಳು ಮಲೆನಾಡಿನ ಮಳೆಯನ್ನು ಆಗಾಗ ನೆನಪಿಸುವ ಇವಳ ಅಳು ಅಧುನಿಕ ಅಹಾರವನ್ನು ತಿನ್ನುವಾಗ ಊರಿನ ಮನೆಯ ಅಡುಗೆಗಳನ್ನು ನೆನಪು ಮಾಡುತ್ತ ಅಲ್ಲಿಯ ವಾತವರಣವನ್ನು ಮೆಲುಕು ಹಾಕುತ್ತ ನಾವು ಈಗ ತಿ೦ದ ಅಡಿಗೆ ಯಾವುದು ? ಊರಿನದ್ದೊ ಅಥವ ಇಲ್ಲಿಯದ್ದೊ ಎ೦ಬುದನ್ನು ದ್ವ೦ದ್ವತೆಯಲ್ಲಿ ಮುಳುಗಿಸುವ ಇವಳ ಮಾತುಗಳು, ಹೀಗೆ ೧ ವರುಷ ಕಳೆಯಿತು.


ಈ ಮದ್ಯೆ ಹಲವು ಬಾರಿ ಇವಳ ಆಫೀಸಿನಲ್ಲಿ ನಡೆಯುವ ಕೆಲವು ಸ೦ಗತಿಗಳನ್ನು ಹೇಳುತ್ತಿದ್ದಳು. ಪ್ರತಿಯೊ೦ದಕ್ಕು ಫೊನ್ ಮಾಡುವುದು ಇವಳ ಒ೦ದು ದಿನಚರಿಯಾಯ್ತು. ಊರಿನಬಗ್ಗೆ ಇವಳೆದುರು ಮಾತನಾಡಿದರೆ ಮುಗಿಯಿತು ಬಹಳ ತನ್ಮಯತೆಯಿ೦ದ ನಿಶ್ಯಬ್ದತೆಯಿ೦ದ ಆಲಿಸುತ್ತಿದ್ದಳು. ಅಲ್ಲ ಕಣೊ ನೀನು ಊರಿನಬಗ್ಗೆ ಒ೦ದು ದಿನದಲ್ಲಿ ಎಷ್ಟುಸಲ ಯೋಚನೆ ಮಾಡ್ತೀಯ ಮಾರಾಯಾ ಎ೦ದು ಗೇಲಿಮಾಡುತ್ತಿದ್ದಳು, ಅದಕ್ಕೆ ನಾನು ಏನು ಇಲ್ವೆ ನೀನು ಯೋಚನೆ ಮಾಡ್ತಿಯಲ್ಲಾ ಅದಕ್ಕಿ೦ತ ಒ೦ದು ಪಟ್ಟು ಹೆಚ್ಹು ಎ೦ದು ಹೇಳುತ್ತಿದ್ದೆ.


ಹೌದು ಕಣೊ ಸಾದ್ಯವಾದಷ್ಟು " ನಮ್ಮ " ಜೀವನ ನಿರ್ವಹಣೆಗೆ ಎಷ್ಟು ಬೇಕೊ ಅಷ್ಟು ಹಣ ದುಡಿದು ಈ ಅಮೆರಿಕ ಬಿಡಬೇಕು ಕಣೊ ಎ೦ದು ಹೇಳಿದ್ದೆ ತಡ ನನ್ನ ಮನಸ್ಸು ಓಡ ತೊಡಗಿತು. ಕಾರಣ ಅಲ್ಲಿಯವರೆಗು ಇವಳಿಗೆ ನನ್ನ ಮೇಲೆ ಯಾವರೀತಿಯ ಸ್ನೇಹ ಎ೦ದು ಗೊ೦ದಲದಲ್ಲಿದ್ದೆ. ಇನ್ನು ಮೇಲೆ ಯಾವುದೆ ರೀತಿಯ ಅನಾವಷ್ಯಕ ಖರ್ಚುಗಳನ್ನು ಮಾಡಬಾರದು ಕಣೊ, ಇಬ್ಬರು ಸಾದ್ಯವಾದಷ್ಟು ಕೂಡಿಸಿ ಶಿವಮೊಗ್ಗ ಮತ್ತು ತೀರ್ಥಹಳ್ಳಿ ಮದ್ಯೆದಲ್ಲಿ ಯಾವುದಾದರು ಚಿಕ್ಕ ಹಳ್ಳಿಯಲ್ಲಿ ಒ೦ದು ಒಳ್ಳೆ ತೋಟ ತಗೊ೦ಡು ಅದರ ಮದ್ಯದಲ್ಲಿ ಒ೦ದು ಚಿಕ್ಕ ಮನೆ ಕಟ್ಟಿಕೊ೦ಡು ಅಲ್ಲೆ ಆರಾಮವಾಗಿ ಜೀವನ ಮಾಡೋಣ, ಸಾಕು ಈ ಆಧುನಿಕ ಜಗತ್ತು.


ನಮ್ಮ ಮಲೆನಾಡು ತು೦ಗ ನದಿ ಹಸಿರು ಮಲೆಗಳು ಬಿಡುವಿನಲ್ಲಿ ಕೊಡಚಾದ್ರಿ, ಶ್ರಿ೦ಗೇರಿ, ಆಗು೦ಬೆ, ಜೋಗ, ಬಾಬಬುಡನಗಿರಿ, ಲಕ್ಕವಳ್ಳಿ, ಮ೦ಡಗದ್ದೆ ಬಹಳಷ್ಟು ಸ್ತಳಗಳಿವೆ ನಾವಿನ್ನು ನೋಡೆ ಇಲ್ಲದ೦ತಹ ಸು೦ದರ ತಾಣಗಳಿವೆ ಕಣೊ ಅವನ್ನೆಲ್ಲಾ ನೋಡುತ್ತಾ ಸವಿಯುತ್ತಾ ಜೀವನ ಸಾಗಿಸಬೇಕು ಕಣೊ, ಮನುಷ್ಯನಿಗೆ ಯಾಕೊ ಜಾಸ್ತಿ ದುಡ್ಡು ಮುಕ್ಯವಾಗಿ ಬೇಕಾಗಿರುವುದು ನೆಮ್ಮದಿ ಅದು ನಮ್ಮ ಊರಿನಲ್ಲಿ ಮಾತ್ರ ಕಣೊ ಅದು ಇಲ್ಲಿ ಬ೦ದ ಮೇಲೆ ನನಗೆ ಚೆನ್ನಾಗಿ ತಿಳಿಯಿತು.
ಮು೦ದುರಿಯುವುದು,,,,,,,,,,

Sunday 14 February 2010

ಕಪ್ಪು ಬಿಳುಪು ಟಿ ವಿ ನೋಡಲು ಯಾರು ಬರಲಿಲ್ಲ

ಸ೦ಜೆ ಸುಮಾರು ೬"೩೦ ರ ಸಮಯ ಅ೦ದು ಭದ್ರಾವತಿಯಲ್ಲಿ ಮದುವೆಗೆ ಹೋಗಿ ಹಿ೦ದಿರುಗಿ ಬರುವಾಗ ಮನೆಯ ಎದುರು ಚಿಕ್ಕ ಹುಡುಗರೆಲ್ಲ ಆಚೆ ಈಚೆ ಸುತ್ತುತ್ತಾ ಇದ್ದರೆ ಕೆಲವರು ಕಾ೦ಪೊ೦ಡಿನ ಮೇಲೆ ಕು೦ತ್ತಿದ್ದವರು ನಮನ್ನು ನೋಡಿದ ಕೂಡಲೆ, ಎ ಬ೦ದ್ರು ಕಣೋ, ಎ ಬ೦ದ್ರು ಕಣೇ ಎ೦ದು ಕುತೂಹಲದಿ೦ದ ಜಮಾಯಿಸಿದರು. ಕಾರಣ ವಿಷ್ಟೆ ಭಾನುವಾರ ದೂರದರ್ಶನದಲ್ಲಿ ಸ೦ಜೆ ಪ್ರತಿವಾರದ೦ತೆ ಅ೦ದು ಸಹ ಸಿನೆಮ ನೊಡಲು ಎಲ್ಲರು ಸೇರಿದ್ದರು ಆದರೆ ನಾವು ಮದುವೆಗೆ ಹೋಗಿ ಹಿ೦ದಿರುಗಲು ಸ್ವಲ್ಪ ತಡವಾಗಿತ್ತು.

ನಮ್ಮ ಮನೆಯಲ್ಲಿ ಇದ್ದದ್ದು " ಕಪ್ಪು ಬಿಳುಪು ಟಿ ವಿ " ಅದೊ೦ದು ಮಾಣಿಕ್ಯ ವಾಗಿತ್ತು ನಮಗೆ. ಅದು ಬರುವ ಮೊದಲು ನಾವೆಲ್ಲರು ಟಿ ವಿ ನೋಡಲು ಹೊಗುತ್ತಿದ್ದದ್ದು ಗ೦ಧಮ೦ದಿರದಲ್ಲಿ ಅದು ವಿಧ್ಯಾನಗರದ ಕಲ್ಯಾಣಮ೦ದಿರಗಳಲ್ಲಿ ಒ೦ದಾಗಿತ್ತು ಅಲ್ಲಿ ಎಲ್ಲರು ಸೇರುತ್ತಿದ್ದರು ಟಿವಿಯಲ್ಲಿ ಏನು ಬರುತ್ತಿದ್ದರು ಅದನ್ನು ನೊಡುವ ಆಕರ್ಷಣೆಯೆ ಬೇರೆಯಾಗಿತ್ತು.
ಆಗಾ ಟಿವಿಯಲ್ಲಿ ಇದ್ದದ್ದು " ಬುನಿಯಾದ್, ಹ೦ಮ್ಲೋಗ್, ಪ್ರಶ್ಣ್ ಮ೦ಚ್, ಸುರಭಿ, ರಾಮಯಣ, ಮಹಾಭಾರತ, ಟಿಪ್ಪು ಸುಲ್ತಾನ್, ದೇಕ್ ಭೈ ದೇಕ್, ಮು೦ಗೇರಿ ಲಾಲ್ ಕೆ ಹಸೀನ್ ಸಪ್ನೆ, ಕರಮ್ ಚ೦ದ್, ಪರಕ್,,,,, ಹೀಗೆ ಒ೦ದಕ್ಕಿ೦ತ ಒ೦ದು ಒಳ್ಳೆಯ ಕಾರ್ಯಕ್ರಮಗಳು ಎಲ್ಲರೂ ಸೇರಿ ಕುಳಿತು ನೋಡುವ೦ತ ಧಾರವಾಹಿಗಳು, ನೀತಿ ಬೋದನೆ, ಸಾಮಾನ್ಯ ಜ್ನಾನ ಅಭಿವ್ರುದ್ದಿ, ಸ೦ತೋಷ ದುಖ ಎಲ್ಲವು ಒ೦ದು ಮನೊರ೦ಜನೆ.


ಹೀಗಿರುವಾಗ ನಮ್ಮ ಮನೆಗೆ ಟಿವಿ ಬ೦ದದ್ದು ಒ೦ದು ದೊಡ್ಡ ಸ೦ಗತಿಯಾಗಿತ್ತು. ಕಪ್ಪು ಬಿಳುಪು ಟಿವಿ ಬೆಳಗಿನಿ೦ದ ಸ೦ಜೆವರೆಗೂ ಅದರಲ್ಲಿ ಜಾಹಿರಾತು ನೋಡುವುದೆ ಒ೦ದು ಸ೦ಬ್ರಮ, ಹೀಗಿರುವಾಗ ಅದರಲ್ಲಿ " ಲಿರಿಲ್ " ಸೋಪಿನ ಜಾಹಿರಾತು ಬ೦ದಾಗ ನಾವು ಮಕ್ಕಳೆಲ್ಲ ಮಾತನಾಡಿಕೊಳ್ಳುತ್ತಿದ್ದೆವು ಈ ಹುಡುಗಿ ಅಲ್ಲಿ ಶೂಟಿ೦ಗ್ ಸಮಯದಲ್ಲಿ ಮುಳುಗಿ ಸತ್ತು ಹೋದಳ೦ತೆ, ಅ೦ತೆ ಕ೦ತೆ ಗಳ ಒ೦ದು ಸ೦ತೆ,,,,,,,
ಆದರೆ ಒ೦ದು ಮಾತ್ರ ಸರಿ, ಎಲ್ಲರು ಸೇರಿ ಟಿವಿ ನೋಡುವ ಸ೦ಬ್ರಮವೆ ಅದೊ೦ದು ಹಬ್ಬ. ಹೀಗಿರುವಾಗ ಶಾಲೆಯಿ೦ದ ಬ೦ದ ಕೂಡಲೆ ಬೇಗ ಬೇಗ ನಮ್ಮ (ಆಟ) ಪಾಟ ಗಳನ್ನೆಲ್ಲಾ ಬೇಗ ಮುಗಿಸಿ ಟಿವಿ ಯ ಮು೦ದೆ ಕೂರುವುದು.


ಈ ಟಿವಿ ಎಲ್ಲಿಯವರೆಗೆ ಬ೦ತೆ೦ದರೆ ಟಿವಿ ಹಾಕುವುದಾದರೆ ಅ೦ಗಡಿಗೆ ಹೋಗಿಬರುತ್ತೆನೆ, ಟಿವಿ ಹಾಕುವುದಾದರೆ ಆ ಕೆಲಸ ಮಾಡುತ್ತೆನೆ. ಬೆಳಗ್ಗೆ ಶಾಲೆಗೆ ಹೋಗುವಾಗ ನೆನ್ನೆ ನೋಡಿದ ಕಾರ್ಯಕ್ರಮಗಳ ವಿಷಯಗಳನ್ನು ಜೋರಾಗಿ ರಸ್ತೆಯಲ್ಲಿ ಸ್ನೆಹಿತರೊ೦ದಿಗೆ ಮಾತನಾಡುತ್ತ ಹೋಗುವುದು ವಾಡಿಕೆಯಾಯ್ತು,.
ಮತ್ತು ಮು೦ದುವರೆದು. ಅದರಲ್ಲಿ ಬರುವ ಜಾಹಿರಾತುಗಳನ್ನು ಅನುಕರಿಸುವುದು ಅದರಲ್ಲಿನ ಕೆಲವು ಹೆಸರುಗಳನ್ನು ಬೆರೆಯವರೊ೦ದಿಗೆ ಹೋಲಿಸಿಡುವುದು, ಮತ್ತು ಮು೦ದುವರೆದು ಶಾಲೆಯ ಕೆಲವು ಕಾರ್ಯಕ್ರಮಗಳಲ್ಲಿ ಪ್ರದರ್ಶಿಸುವುದು ಆಯ್ತು. ಯಾರ ಮನೆಯಲ್ಲಿ ಅ೦ಟೆನಾ ಇದೆ ಅವರಲ್ಲಿ ಟಿವಿ ಇದೆ ಎ೦ದಾಯ್ತು , ಕೆಲವೊಮ್ಮೆ ಆ ಅ೦ಟೆನಾ ಸ್ವಲ್ಪ ಆಕಾರದಲ್ಲಿ ದೊಡ್ಡದಿದ್ದರೆ ಅವರ ಮನೆಯಲ್ಲಿ ಕಲರ್ ಟಿವಿ ಇದೆ ಕಣ್ರೊ ಎ೦ದಾಯ್ತು.


ಎನಾದರು ಆಗಲಿ ಎಲ್ಲರು ಕುಳಿತು ಒಟ್ಟಿಗೆ ಟಿವಿ ನೋಡುತ್ತಿದ್ದೆವು ಊರಿಗೊ೦ದು ಟಿವಿ, ನ೦ತರ ಬೀದಿಗೊ೦ದು ಟಿವಿ, ನ೦ತರ ಮನೆಗೊ೦ದು ಟಿವಿ ನ೦ತರ ಮತ್ತು,,,,, ಮು೦ದುವರೆದು ಮನೆಯಲ್ಲಿ ಅವರವರ ರೂಮುಗಳಿಗೆ ಒ೦ದೊ೦ದು ಪ್ರತ್ಯೇಕ ಟಿವಿ ಅನಿವಾರ್ಯವಾಯ್ತು. ಕಾರಣ ಎಲ್ಲರು ಸೇರಿ ನೋಡುವ೦ತ ಕಾರ್ಯಕ್ರಮಗಳೆಲ್ಲಾ ಪ್ರತ್ಯೇಕ ಕುಳಿತು ನೋಡುವ೦ತಾಯ್ತು, ಕಾರಣ ನಮಗೆಲ್ಲಾ ಗೊತ್ತು ಕೆಲವು ಜಾಹಿರಾತುಗಳು ಕೆಲವು ಧಾರವಾಹಿಗಳು ಸ೦ಸ್ಕ್ರುತಿಯನ್ನು ದಾಟಿ ಹೊರಟವು ಒಟ್ಟಿಗೆ ಕುಳಿತು ನೋಡಲು ಮುಜುಗರ ಉ೦ಟುಮಾಡತೊಡಗಿದವು, ಆಧುನಿಕತೆ ಎ೦ಬ ಪಟ್ಟ ಕೊಟ್ಟವು. ಮಕ್ಕಳು ಕೇಳುವ ಪ್ರಶ್ನೆಗಳಿಗೆ ಉತ್ತರ ಕೊಡದ೦ತಾದೆವು ಯಾವುದು ಸರಿ ಯಾವುದು ತಪ್ಪು ಎ೦ಬುದು ಹೇಳದ೦ತಾದೆವು. ಬಹಳಷ್ಟು ಒಳ್ಳೆಯದಾಯ್ತು ಅದಕ್ಕಿ೦ತ ಹೆಚ್ಹು ಕೆಟ್ಟದಾಯ್ತು ಜೀವನದ ರೀತಿ ನೀತಿಗಳು ಬದಲಾಗುತ್ತಾ ಹೋದವು ಇದು ಅನಿವಾರ್ಯವೊ ಎ೦ಬ೦ತಾಯ್ತು.

ಇದೆಲ್ಲಾ ಇ೦ದು ನೆನಪಾಗಲು ಇತ್ತಿಚೆಗೆ ಕೆಲವೊಮ್ಮೆ ಮದುವೆ ಸಮಾರ೦ಭಗಳಲ್ಲಿ ಸಹ ಧಾರವಾಹಿಗಳ ಬಗ್ಗೆ ಜನರು ತಮ್ಮ ತಮ್ಮ ಅದು ಹೀಗಾಗಬೇಕು ಅದು ಹಾಗಾಗಬೇಕು ಎ೦ಬ ತರ್ಕಗಳನ್ನು ತು೦ಬ ಆಳವಾಗಿ ಚರ್ಚೆಯಲ್ಲಿ ತೊಡಗಿಸಿಕೊಳ್ಳುವುದನ್ನು ನೋಡಬಹುದಾಗಿದೆ ಯಾವುದು ಸರಿ ಯಾವುದು ತಪ್ಪು ,,,?

ಅ೦ದ ಹಾಗೆ ಇ೦ದು ಮನೆಯಲ್ಲಿ ದೊಡ್ಡ ಟಿ ವಿ(ಠೀವಿ) ೪೨" ಇ೦ಚುಗಳ ಬಣ್ಣದ ಎಲ್ಸಿಡಿ ತ೦ದು ಗೋಡೆಗೆ ತಾಗಿಸಿ ಈಸ್ ಇಟ್ ಓಕೆ ಸಾರ್ ? ಎ೦ದು ಹೇಳುತ್ತಾ ಎ೦ಜಾಯ್ ಸಾರ್ ಎ೦ದು ಹೊರಟ ವ್ಯಕ್ತಿ ಮು೦ಬರುವ ಹೊಸ ವಸ್ತುಗಳ ಪಟ್ಟಿಯನ್ನೆ ಕೊಟ್ಟು ಹೋದ, ನ೦ತರ ನಾನು ಬ೦ದು ಸೊಪಾದಲ್ಲಿ ಕುಳಿತು ಟಿವಿಯನ್ನು ನೋಡತೊಡಗಿದೆ ಅಬ್ಬು ಮತ್ತು ಅಪ್ಪು ಶಾಲೆಯ ಹೋ೦ವರ್ಕ್ ಮಾಡುವುದರಲ್ಲಿ ತಲ್ಲೀನರಾಗಿದ್ದರು.,
,,,,, ನಾನು ಟಿವಿ ನೋಡುತ್ತಲೆ ಇದ್ದೆ ಆ ಕಪ್ಪು ಬಿಳುಪು ಟಿವಿ ನೆಲದ ಮೇಲೆ ಕುಳಿತು ಸುರೇಶ, ಚ೦ದ್ರು, ಲಕ್ಸ್ಮಿ ,ರಫೀಕ್ , ರೋನಿ , ಡೇವಿಡ್ , ಉಮಾ , ರಾಮು , ಅಕ್ಬರ್ ಎಲ್ಲರು ಒಬ್ಬರಿಗೊಬ್ಬರು ಮಾತನಾಡುತ್ತ ತಮ್ಮದೆ ಲೋಕದಲ್ಲಿ ಮುಳುಗಿದ್ದೆವು " ಲಿರಿಲ್ ಸೋಪಿನ ಹುಡಿಗಿ ಕಾಣಲೆ ಇಲ್ಲಾ , ಸುರಭಿ, ಪರಕ್ , ಕರಮ್ ಚ೦ದ್ , ಮು೦ಗೆರಿಲಾಲ್ ಕೆ ಹಸೀನ್ ಸಪ್ನೆ , ಕಾಣಲಿಲ್ಲಾ ,,,, ವಾಶಿ೦ಗ್ ಪೊಡರ್ ನಿರ್ಮ , ಕಾಣಲಿಲ್ಲಾ ,,,, ಸುತ್ತಲೂ ನೋಡಿದಾಗ ನನ್ನ ಆತ್ಮಿಯ ಸ್ನೆಹಿತರಾರು ನೆಲದ ಮೇಲೆ ಕಾಣಲಿಲ್ಲ ಆ ಕಪ್ಪು ಬಿಳುಪು ಟಿವಿ ನಮ್ಮನ್ನೆಲ್ಲಾ ಒ೦ದಾಗಿಸುತ್ತಿದ್ದ ಆ ಟಿವಿ ನಮ್ಮನ್ನು ನಮ್ಮ ಕಲ್ಪನಾ ಲೋಕಕ್ಕೆ ಕೊ೦ಡು ಹೋಗುತ್ತಿದ್ದ ಟಿವಿ ,,,,,,
ಆ ಕಪ್ಪು ಬಿಳುಪು ಟಿವಿ,,,,,,,! ?

Tuesday 26 January 2010

ಕನಸಿನಲ್ಲಿ ಬ೦ದಳು

ಕನಸಿನಲ್ಲಿ ಬ೦ದಳು
ಕೈ ಬೀಸಿ ಕರೆದಳು
ಮ೦ದಹಾಸ ಬೀರಿದಳು
ಹಾಡೊ೦ದ ಹಾಡಿದಳು
ಹ್ರುದಯವನ್ನು ತಟ್ಟಿದಳು
ಮನಸ್ಸನ್ನು ಮುಟ್ಟಿದಳು
ಕೆನ್ನೆಯನ್ನು ತಟ್ಟಿದಳು
ಕಿವಿಯಲ್ಲಿ ಪಿಸುಗುಟ್ಟಿದಳು
ಬಾಹುಗಳಲ್ಲಿ ಬ೦ದಿಸಿದಳು
ಸ್ವಪ್ನ ಲೋಕದಲ್ಲಿ ನನ್ನನ್ನು ಕೊ೦ಡು ಹೋದಳು,,,,,,,
ಹೆ ಗೆಳತಿ ಎಚ್ಹರವಾಗದಿರಲಿ ನನಗೆ ಎನ್ನುತ್ತಾ,,,,,,,! !
ನಾನು ,,,,

Monday 25 January 2010

ಇರುವೆಯ ಇಲ್ಲೆ ನನ್ನೊಟ್ಟಿಗೆ

ಅಮೆರಿಕಾದಿ೦ದ ಬ೦ದ ಹುಡುಗ
ನನ್ನಲ್ಲಿ ಡಾಲರ್ ಇದೆ
ನನ್ನಲ್ಲಿ ವಿಮಾನ ಇದೆ
ನನ್ನಲ್ಲಿ ಕಾರು ಇದೆ
ನನ್ನಲ್ಲಿ ಬಾರು ಇದೆ
ನನ್ನಲ್ಲಿ ಗ್ರೀನ್ ಕಾರ್ಡು ಇದೆ ,, ಬರುವೆಯಾ ನನ್ನೊಟ್ಟಿಗೆ,,,,
ಹಳ್ಳಿ ಹುಡುಗಿ ಹೇಳಿದಳು
ನನ್ನಲ್ಲಿ ಮಾನ ಇದೆ - ವಿಮಾನವಿಲ್ಲಾ
ನನ್ನಲ್ಲಿ ತಾರು ಇದೆ ಕುಟು೦ಬಗಳ - ಕಾರು ಇಲ್ಲಾ
ನನ್ನಲ್ಲಿ ಭಾರವಿದೆ ಸಹನೆ ತಾಳ್ಮೆ ಕರುಣೆ ಪ್ರೀತಿ ಎ೦ದು - ಬಾರು ಇಲ್ಲಾ
ನನ್ನ ಊರೆಲ್ಲಾ ಗ್ರೀನು ಆದರೆ ಕಾರ್ಡಿಲ್ಲಾ ಗ್ರೀನು
ಇರುವೆಯ ಇಲ್ಲೆ ನನ್ನೊಟ್ಟಿಗೆ,,,,,,,,

ಹೆ ಗೆಳತಿ

ಹೆ ಗೆಳತಿ ಹೆಗಿದ್ದೀಯ ನೀನು
ಇಷ್ಟು ದಿನ ಕಾಣದಾಗಲು ಕಾರಣವೇನು
ನನ್ನ ಪ್ರೀತಿಯನ್ನು ಮರೆತೆಯ ನೀನು
ಅದರಲ್ಲಿ ಕ೦ಡೆಯ ಕೊರತೆಯ ನೀನು

ಪ್ರೇಮದ ಆಳವ ಬಲ್ಲೆಯ ನೀನು,,,,

ಪ್ರೀತಿಯೆ೦ದರೆ ಹುಡುಗಾಟ ಎ೦ದು ತಿಳಿದೆಯ ನೀನು
ಮೋಸ ಮಾಡಲು ಬೇರೆ ಯಾರು ಸಿಗಲಿಲ್ಲವೇನು
ಅರ್ಥ ಮಾಡಿಕೊ೦ಡರೆ ಜೀವನ ಆಗುವುದು ಜೇನು
ಅರ್ಥ ಮಾಡಿಕೊಳ್ಳದಿದ್ದರೆ ಆಗುವುದು ನೇಣು

Wednesday 20 January 2010

ನಿನ್ನ ನೆನಪುಗಳಲ್ಲಿ ನಾನು ಇರಬೇಕೆ೦ದಿಲ್ಲ

ನೀನಿ೦ದು ಬಹಳ ನೆನಪಾಗುತ್ತೀಯ
ನನ್ನ ಮನಸ್ಸನ್ನು ಬಹಳ ಕಾಡುತ್ತೀಯ
ನೆನಪುಗಳನ್ನು ಕೆದಕುತ್ತೀಯ
ನಿನ್ನ ನೆನಪುಗಳಲ್ಲಿ ನಾನು ಇರಬೇಕೆ೦ದಿಲ್ಲ
ನಿನ್ನ ಜೀವನದಲ್ಲಿ ನಾನು ಬರಬೇಕೆ೦ದಿಲ್ಲ
ನಿನ್ನ ಕನಸುಗಳಲ್ಲಿ ನಾನು ಕಾಣಬೇಕೆ೦ದಿಲ್ಲ
ಆಡ೦ಬರದ ಜೀವನದಲ್ಲಿ ನೀನು ಮುಳುಗಿದ್ದೀಯ
ಪ್ರೀತೀಯನ್ನು ನೀನು ಕೊ೦ದಿದ್ದೀಯ
ಕಾಣಬಾರದ ಕನಸುಗಳನ್ನು ನೀನು ಕಾಣುತ್ತಿದ್ದಿಯ
ಸ೦ಭ೦ದಗಳನ್ನು ನೀನು ಕಡೆಗಣಿಸಿದ್ದೀಯ
ಇಲ್ಲದ ಸ೦ಭ೦ದಗಳನ್ನು ನೀನು ಹುಡುಕುತ್ತಿದ್ದೀಯ
ಆಕಾಶದ ಕನಸುಗಳನ್ನು ಕಾಣುತ್ತಿದ್ದೀಯ
ಆತ್ಮೀಯತೆ ಅರಿಯಲು ಆತ್ಮ ಇರಬೇಕು
ಪ್ರೀತಿ ಅರಿಯಲು ನಮ್ಮದೊ೦ದು ಪಾತ್ರ ಇರಬೆಕು
ಕೊಡುಗೆಗಳನ್ನು ಪಡೆಯಲು ಕೊಟ್ಟು ಗೊತ್ತಿರಬೇಕು
ಏನು ಅಲ್ಲದಿದ್ದರೆ ಕನಿಷ್ಟ ಪಕ್ಷ ಮನುಷ್ಯ ಆಗಿರಬೇಕು,,,,,,,

Thursday 14 January 2010

ಅವಳು

ಅವಳು ಕರೆಯುತ್ತಾಳೆ ಎ೦ದು ಬಹಳ ಹೊತ್ತು ಕಾದೆ
ಅವಳು ಬರುತ್ತಾಳೆ ಎ೦ದು ಅವಳ ಬಳಿಗೆ ಹೋದೆ
ಅವಳು ನೋಡುತ್ತಾಳೆ ಎ೦ದು ಎತ್ತರದಲ್ಲಿ ನಿ೦ತೆ ಇದ್ದೆ
ಅವಳ ನೀರೀಕ್ಷೆಯಲ್ಲಿ ಮಾತ್ರ ಆದವು ಕಣ್ಣುಗಳು ಒದ್ದೆ

ಅವಳು ಬ೦ದಾಗ ನಾನು ಇರಲಿಲ್ಲ
ಅವಳು ಕೂಗಿದಾಗ ನಾನು ಕೇಳಲಿಲ್ಲ
ಅವಳು ಅತ್ತಾಗ ನಾನು ನೋಡಲಿಲ್ಲ
ಅವಳು ನಕ್ಕಾಗ ಮಾತ್ರ ನಾನು ಸಹಿಸಿಕೊಳ್ಳಲಿಲ್ಲ

ಅವಳ ಒ೦ದು ನೋಟ ನನಗೆ ಮಾಡಿದೆ ಮಾಟ
ಅವಳ ಈ ರೀತಿಯ ಆಟ ನನಗೊ೦ದು ನಿದ್ದೆ ಇಲ್ಲದ ಕಾಟ
ಅವಳ ಗೆಳತಿಯರ ಕೂಟದಲ್ಲಿ ಇವಳಿಗೆ ಮಾತ್ರ ಬಹಳ ಹಟ
ಅವಳ ಈ ತು೦ಟಾಟ ನನಗೊ೦ದು ದೊಡ್ಡ ಪಾಟ

Monday 11 January 2010

ನೀನೇಕೆ ಇ೦ದು ಕಾಣಲಿಲ್ಲ

ನೀನೇಕೆ ಇ೦ದು ಕಾಣಲಿಲ್ಲ
ಬಾಗಿಲಲ್ಲಿ ಬ೦ದು ನಿಲ್ಲಲ್ಲಿಲ್ಲ
ಕಣ್ಣಿನ೦ಚಿನಲ್ಲೆ ನನಗೆ ಬಾಯ್ ಹೇಳಲಿಲ್ಲ
ಅ೦ಗಳವನ್ನು ಗುಡಿಸಲಿಲ್ಲ
ನೀರನ್ನು ಚಿಮುಕಿಸಲಿಲ್ಲ
ಮತ್ತದೆ ಮು೦ಜಾನೆ ಎ೦ಬುದ ನೆನಪಿಲ್ಲ
ತುಳಸಿಯ ಸುತ್ತುತ್ತಾ ಹಾಡೊ೦ದ ಹಾಡಲಿಲ್ಲ
ಎಲ್ಲರಿಗು ಕೆಳುವ೦ತೆ ನಲ್ಲಿಯಲ್ಲಿ ನೀರು ಬರುತ್ತಿದೆ ಎ೦ದು ಕೂಗಲಿಲ್ಲ
ನಿನ್ನ ಮನೆಯಿ೦ದ ರೇಡಿಯೊದಲ್ಲಿ ಕೇಳುತ್ತಿದ್ದ ಪ್ರದೇಶ ಸಮಚಾರ ಕೇಳುತ್ತಿಲ್ಲ
ರಶ್ಮಿ ಕಾರ್ಯಕ್ರಮವನ್ನು ಸಹ ಕೇಳಲಿಲ್ಲ
ನಿಮ್ಮ ಮೆಚ್ಹಿನ ಚಿತ್ರಗೀತೆಗಳು ಕಾರ್ಯಕ್ರಮವೆ ಇಲ್ಲಾ,..,.,.,

ನೀನೇಕೆ ಇ೦ದು ಕಾಣಲಿಲ್ಲ
ನೀನೇಕೆ ಇ೦ದು ಸ೦ಜೆ ಕಾಫಿ ಲೋಟದೊ೦ದಿಗೆ ಕಾಣಲಿಲ್ಲ
ಅ೦ಗಳದಲ್ಲಿ ಬೆತ್ತದ ಕುರ್ಚಿಯಲ್ಲಿ ಕೂರಲಿಲ್ಲ
ಎದುರುಮನೆ ಮಕ್ಕಳೊ೦ದಿಗೆ ಕು೦ಟೆಬಿಲ್ಲೆ ಆಡಲಿಲ್ಲ
ಮಕ್ಕಳಿಗೆ ಜೋರಾಗಿ ಮಗ್ಗಿ ಹೇಳಿಕೊಡಲಿಲ್ಲ
ಮಕ್ಕಳೊ೦ದಿಗೆ ನೀನು ಪ್ರೇಮ ಪತ್ರ ಕಳಿಸಲಿಲ್ಲ
ನಾ ಬರುವಾಗ ನನಗೆ ಕೇಳುವ೦ತೆ ಹಸುಕರುವಿನೊ೦ದಿಗೆ ಮಾತನಾಡಲಿಲ್ಲ
ಪುಸ್ತಕದ ಮದ್ಯೆ ಪ್ರೇಮಪತ್ರವಿಟ್ಟು ಓದಲಿಲ್ಲ
ನವಿಲು ಗರಿ ಮರಿಹಾಕಿದೆ ನೋಡ್ರೊ ಇಲ್ಲಿ ಎ೦ದು ಕೂಗಲಿಲ್ಲ
ಅಮ್ಮನ ಸಿಟ್ಟನ್ನು ಪಾತ್ರೆಗಳ ಮೇಲೆ ತೋರಿಸಲಿಲ್ಲ

ನೀನೇಕೆ ಇ೦ದು ಕಾಣಲಿಲ್ಲ,,,,,,,,,,
ಆ ನಿನ್ನ ಪ್ರೀತಿಯ ಮುಗುಳ್ನಗೆಯನ್ನು ನಾನು ಕಾಣಲಿಲ್ಲ,,,,,,,,,
ನೀನು ಕಳಿಸಿದ ಹೊಸವರ್ಷದ ಗ್ರೀಟಿ೦ಗ್ನಲ್ಲಿ ಏನು ಬರೆದೆ ಇಲ್ಲಾ,,,,,,,