Sunday, 13 September 2009

ನಿಮ್ಮ ಶರೀರದ ಯಾವುದೇ ಭಾಗವನ್ನು ಹೊರ ಚಾಚ ಬೇಡಿ

ಇತ್ತೀಚಿಗೆ ಟಿ ವಿ ಯಲ್ಲಿ ನೆಟ್ಟಲ್ಲಿ ಎಲ್ಲಿ ನೋಡಿದರು ಒಂದು ವಿಶೇಷ ಚರ್ಚೆ ನಿಮಗೆಲ್ಲ ಗೊತ್ತೇ ಇದೆ. ಕೆಲವು ದಿನಗಳ ಹಿಂದೆ ಅರ್ದಂಬರ್ದ ಬಟ್ಟೆ ಹಾಕಿದ್ದರು ಎಂದು ಗಲಾಟೆ ನಡೆಯಿತು. ಈಗ ನಡೆದದ್ದು ಪೂರ್ತಿ ಬಟ್ಟೆ ಹಾಕಿದ್ದಾರೆ ಅಂತ. ಇದೆಲ್ಲ ಕೇಳುತ್ತಾ ನೋಡುತ್ತಾ ಇದ್ದ ನನಗೆ ನೆನೆಪಾದದ್ದು ಒಂದು ವಿಶೇಷ ದಿನದ ಅಂದಿನ ನಾನು ಮತ್ತು ಪರೇಶ ದಾವಣಗೆರೆಗೆ ಒಂದು ಮದುವೆಗೆ ಹೋಗಿ ಬರುವಾಗ ನಡೆದ ಬಸ್ಸಿನಲ್ಲಿನ ಘಟನೆ.

ಬೆಳಗ್ಗೆ ಬೇಗ ರೆಡಿಯಾಗಿ ನಾನು ಪರೇಶ ಶಿವಮೊಗ್ಗದ ಬಸ್ಟಾಂಡ್ ನಿಂದ ದಾವಣಗೆರೆ ಬಸ್ಸು ಹತ್ತಿ ದಾವಣಗೆರೆ ತಲುಪಿ ಮದುವೆ ಮತ್ತು ಊಟ ಮುಗಿಸಿ ಸಮಾಜಸೇವೆಯಲ್ಲಿ ತೊಡಗಿದ್ದ ಪರೆಶನನ್ನು ಕರೆದುಕೊಂಡು ದಾವಣಗೆರೆಯಿಂದ ಶಿವಮೊಗ್ಗದ ಬಸ್ಸು ಹತ್ತಿ ಕೂತೆ. ಬಸ್ಸಲ್ಲಿ ಅಷ್ಟೇನೂ ಜನ ಇರಲಿಲ್ಲ ಕಾರಣ ಭಾನುವಾರ ಬೇರೆ, ಇನ್ನೇನು ಬಸ್ಸು ಹೊರಡ ಬೇಕು ಎನ್ನುವಷ್ಟರಲ್ಲಿ ೫-೬ ಹುಡುಗಿಯರೂ ಮತ್ತು ೨ ಹುಡುಗರು ಬಸ್ಸು ಹತ್ತಿದರು ಅವರನ್ನು ನೋಡುತ್ತಿದ್ದಂತೆಯೇ ತಿಳಿಯಿತು ಮೆಡಿಕಲ್ ವಿದ್ಯಾರ್ಥಿಗಳು ಅಂತ. ಅಲ್ಲಿಗೆ ಬಸ್ಸಿನಲ್ಲಿ ಸುಮಾರು ೨೫ ರಿಂದ ೩೦ ಜನ ಆದರು. ಬಸ್ಸು ಹೊರಟಿತು.

ಆ ಹುಡಗಿಯರು ಸ್ವಲ್ಪ ಮಾಡ್ ಇದ್ದರು, ಅಂದರೆ ಅವರ ಬಟ್ಟೆ ಸ್ವಲ್ಪ ಬಿಗಿಯಾಗಿ, ಕಡಿಮೆಯಾಗಿ, ಶರೀರದ ಉಬ್ಬು ತಗ್ಗುಗಳು ಆಚೆ ಈಚೆ ಬಾಗಿದಾಗ ಶರೀರ ಕಾಣುತಿತ್ತು. ಅದಲ್ಲದೆ ಒಂದೆಡೆ ಕೂರದೆ ಆ ಹುಡುಗಿಯರು ಇಲ್ಲಿಂದ ಅಲ್ಲಿಗೆ ಓಡುವುದು ಕೂಗುವುದು ಕೆಲ ಚಿಕ್ಕ ಪುಟ್ಟ ವಸ್ತುಗಳನ್ನು ಆಚೆ ಈಚೆ ಎಸೆಯುತ್ತ ಅಂದರೆ ತಮ್ಮ ಸ್ನೇಹಿತರೊಂದಿಗೆ ಆಡುತ್ತ ಗಲಾಟೆ ಮಾಡುತ್ತಿದ್ದರು.

ಇದೆಲ್ಲ ನೋಡುತ್ತಾ ಎಲ್ಲರು ಸುಮ್ಮನೆ ಕುಳಿತಿದ್ದರು, ಆದರೆ ಪರೆಶನಿಗೆ ಮಾತ್ರ ಅವರ ನಾಟಕ ಸಹಿಸಲು ಸಾಧ್ಯವಾಗುತ್ತಿಲ್ಲ, ಒಮ್ಮೆ ನನ್ನ ಕಡೆ ನೋಡುತ್ತಾ ಒಮ್ಮೆ ಅವರ ಕಡೆ ನೋಡುತ್ತಾ ಏನ್ಸಾರ್ ಇದು ಒಳ್ಳೆ ತಿಕ್ಲು ಹಿಡಿದಂಗೆ ಮಾಡ್ತಾವ್ರೆ ಅಂದ, ಅದಕ್ಕೆ ನಾನಂದೆ ಏನಾರು ಮಾಡ್ಕೊಳ್ಳಿ ನೀ ಸುಮ್ನೆ ಕೂತ್ಕೋ ಅಂದೇ, ಕಾರಣ ನನಗೆ ಹೆದರಿಕೆ ಹುಡುಗಿಯರು ಅಂದಮೇಲೆ ಕೇಳಬೇಕ ಬಸ್ಸಿನ ಜನ ಎಲ್ಲ ಸೇರಿಕೊಂಡು ನಮ್ಮನ್ನ ಹೊಡೆಯೋದು ಗ್ಯಾರಂಟಿ. ಅದು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ ಹುಡಗಿಯರು ಹೇಳಿದ್ದು ಸರಿ ಮಾಡಿದ್ದು ಸರಿ. ಹೀಗಿರುವಾಗ ಮದುವೆ ಊಟ ಬಸ್ಸಲ್ಲಿ ಖಾಲಿಯಾಗಬಹುದು.

ಇದ್ದಕಿದ್ದಂತೆ ಪರೇಶ ಎದ್ದು ನಿಂತು ಜೋರಾಗಿ ಎ ನೀವೇನ್ ಪ್ರಾಣಿಗಳ ಮನುಷ್ಯರ ಸುಮ್ನೆ ಕುನ್ತುಕೊಳ್ರೆ ಸಾಕು ನಿಮ್ ನಾಟ್ಕ. ಇದು ನಿಮ್ ಮನೆ ಅಲ್ಲ ಸಾರ್ವಜನಿಕ ಬಸ್ಸು ಅಂದ, ಅಷ್ಟರಲ್ಲಿ ಒಂದು ಹುಡುಗಿ ಎದ್ದು ನಿಂತು ನಿಮ್ ಅಪ್ಪಂದ ಬಸ್ಸೂ ಕುಂತ್ಕೋ ಸಾಕು ಅಂದು ಬಿಟ್ಟಳು. ಅಷ್ಟು ಸಾಕಿತ್ತು ಪರೆಶಂಗೆ ಶುರು ಮಾಡಿದ ಭಾಷಣ ಅಲ್ವೇ ಹಲ್ಕಾ ಮುಂಡೆ ನಂ ಅಪ್ಪಂದ್ ಬಸ್ ಆಗಿದ್ರೆ ನಿನಿಗೆಲ್ಲೇ ಹತಾಕ್ ಬಿಡ್ತಿದ್ದೆ ಕೆರ ತಗೊಂಡು ಹೊಡಿತೀನ್ ನೋಡು ಕುಂತ್ಕೊಳೆ ಸಾಕು. ಇಲ್ಲಿ ಬಸ್ಸಲ್ಲಿ ದೊಡ್ದವರು ಚಿಕ್ಕವರು ಮನುಷ್ಯರು ಕುಂತಿದಾರೆ ಅಂತ ಗೊತ್ತಿಲ್ಲ ಸ್ವಲ್ಪ ಮರ್ಯಾದೆ ಕಲ್ತ್ಕೊಳೆ ಬರಿ ಕಾಲೇಜ್ ಹೋದ್ರೆ ಸಾಕಿಲ್ಲ ಬೆವರ್ಸಿಗಳ ಅಂತ ಬೈದ, ಚಿಕ್ಕ ಚಿಕ್ಕ ಬಟ್ಟೆ ಹಾಕೊಂಡು ಮೈ ತೋರಿಸ್ಕೊಂಡು ಎನಿದ್ ನಿಮ್ ನಾಟ್ಕ ಅಂದ.

ನಾವೇನಾದ್ರೂ ಮಾಡ್ತೀವಿ ನಿಂದೇನ್ ರೂಲ್ಸ್ ಮುಚ್ಕೊಂಡ್ ಕುಂತ್ಕೋ ಅಂದ್ಲು ಮತ್ತೊಂದು ಹುಡುಗಿ. ಹೌದೆ ರೂಲ್ಸ್ ಕಣೆ ನಾನ್ ಮಾಡಿದ್ದಲ್ಲ ಬಸ್ಸಲ್ಲಿ ಬರ್ದೈತ ನೋಡ್ಬಾ ಇಲ್ಲಿ, ಎಲ್ಲ ಬಾಳ ಓದಿದೀರಲ್ಲ ಇಲ್ಲೇನ್ ಬರ್ದೈತೆ ನೋಡೇ ನಿರ್ವಾಹಕರ ಆಸನ - ಟಿಕೇಟು ಕೇಳಿ ಪಡೆಯಿರಿ - ಧೂಮಪಾನ ನಿಷೇದಿಸಿದೆ - ಇಲ್ ನೋಡು ದೊಡ್ ದಾಗ್ ಏನ್ ಬರ್ದೈತೆ
" ನಿಮ್ಮ ಶರೀರದ ಯಾವುದೇ ಭಾಗವನ್ನು ಹೊರ ಚಾಚ ಬೇಡಿ " ಇದು ಯಾಕ ಬರ್ದಿದಾರೆ ಅಂತ ಹೇಳುದ್ರೆ ನಿಮ್ಮಂತ ಹುಡುಗಿಯರು ಕಡಿಮೆ ಬಟ್ಟೆ ಹಾಕಿ ಮೈ ಯಲ್ಲ ತೋರಿಸ್ತಾರಲ್ಲ ಅದಕ್ಕೆ ಬರ್ದಿರೋದು. ಇಷ್ಟು ಹೇಳುತ್ತಿದ್ದಂತೆ ಇಡಿ ಬಸ್ಸೂ ಗೊಳ್ಳೆಂದು ನಗತೊಡಗಿತು ಅಷ್ಟರಲ್ಲಿ ಪರಿಸ್ಥಿತಿಯ ಒತ್ತಡ ಅರಿತ ಹುಡುಗಿಯರು ಸುಮ್ಮನಾಗಿ ಬಿಟ್ಟರು.

ಅಷ್ಟರಲ್ಲಿ ನಾನು ಪರೆಶನ ಹತ್ರ ನಿಧಾನವಾಗಿ ಅಲ್ಲ ಕಣೋ ಪರೇಶ ಅದರ ಅರ್ಥ ಹಂಗಲ್ಲ ಕಣೋ ಅನ್ನು ವಷ್ಟರಲ್ಲಿ ಸಾರ್ ಸುಮ್ನೆ ಕೂರ್ತೀರ ಸ್ವಲ್ಪ ಇಷ್ಟ ಹೊತ್ತು ನಿಮ್ಮ ಅರ್ಥ ಎಲ್ಲ ಎಲ್ ಹೋಗಿತ್ತು ಬಂದ್ ಬಿಟ್ಟ್ರು ಅರ್ಥ ಹೇಳಾಕ್ಕೆ. ಅದು ಸರಿಯಾಗೇ ಬರ್ದಿರೋದು ಇದು ಹುಡುಗಿಯೋರಿಗೆ ಬರ್ದಿರೋದು.

ಈ ಬೋರ್ಡ್ ಎಲ್ಲ ಕಡೆ ಬರಿ ಬೇಕು ಸಾರ್ " ನಿಮ್ಮ ಶರೀರದ ಯಾವುದೇ ಭಾಗವನ್ನು ಹೊರ ಚಾಚ ಬೇಡಿ " ಅಂತ
,,,,,,,, ?
ಹಂಗಾದ್ರು ಸರ್ಯಾಗತಾವೇನೋ ನೋಡ್ಬೇಕು ಅಂತ ಶುರು ಮಾಡಿದ ,,,,,,,,

3 comments:

  1. ಹ್ಹ ಹ್ಹ. ಸಖತ್ತಾಗಿದೆ. ಹೌದು ಎಲ್ಲಾ ಕಡೆ ಬೋರ್ಡ್ ಹಾಕಿಸ್ಬೇಕು ನೋಡಿ ಈ ಥರ :)

    ReplyDelete
  2. ಇಸ್ಮೈಲ್, ಬರಹ ಚೆನ್ನಾಗಿದೆ. ಹೌದು, ಬೋರ್ಡಿನ ವಾಕ್ಯವನ್ನು ಆ ರೀತಿಯಲ್ಲೂ ಅರ್ಥೈಸಬಹುದು.

    ReplyDelete
  3. ತುಂಬಾ ಚೆನ್ನಾಗಿದೆ ಸರ್, ಈಗೀಗ ಹುಡುಗಿಯರಿಗೆ ಏನೂ ಹೊಕ್ಕೊಬೇಕು ಅನ್ಸಲ್ವೋ , ಅಥವಾ ಹಾಗೆ ಹಾಕ್ಕೊಂಡ್ರೆ ನಾವೆಲ್ಲಾ ಕಾಣ್ತೀವಿ ಅಂತಾನೋ ಗೊತ್ತಿಲ್ಲ.... ಈ ಬೋರ್ಡನ್ನ ನೂರು ಪ್ರಿಂಟ್ ಹಾಕಿಸಿ ಮಂಗಳೂರಿನ ಎಲ್ಲಾ ಬೀದಿಗಳಲ್ಲೂ ಹಾಕಿಸ್ತೀನಿ......

    ReplyDelete