Thursday, 8 October 2009

ಕವಿ ಕುವೆಂಪುರವರ ಕುಪ್ಪಳ್ಳಿಯ ಮನೆಯಲ್ಲಿ ನಾನು ನನ್ನವರೊಂದಿಗೆನಲ್ಲಿಯನ್ನು ತಿರುವುತ್ತಿದ್ದಂತೆ ಎರಡು ಕಾಲುಗಳಮೇಲೆ ನೀರು ಸುರಿಯತೊಡಗಿತು ನನ್ನ ಎರಡು ಕೈಗಳನ್ನು ತೊಳೆಯುತ್ತ ಬೊಗಸೆತುಂಬ ನೀರನ್ನು ಎತ್ತಿ ಮುಖದ ಮೇಲೆ ಸಿಂಪಡಿಸಿದೆ. ಇಡಿ ಮೈ ರೋಮಾಂಚನ ಗೊಂಡು ಸಂತೋಷ ಹೇಳತೀರದಾಯ್ತು, ಆ ನೀರು ಹಾಗಿದೆ ಮಲೆನಾಡ ಮದ್ಯದಲಿ ಕಾಡು ಮತ್ತು ಗುಡ್ಡಗಳ ಮದ್ಯೆ ಸುಂದರವಾದ ಮನೆ ಅದರಲ್ಲಿ ನೆನಪುಗಳ ಆಗರ ಸಂಸ್ಕೃತಿಯ ಒಡಲು ತಂಗಾಳಿಯ ತಂಪು ಪ್ರೀತಿಯ ಆರ್ದತೆ ಕಾಂಕ್ರೀಟ್ ಕಾಡಿನಿಂದ ನಾನು ನನ್ನೂರು ಮಲೆನಾಡಿಗೆ ೭ ದಿನಗಳ ರಜೆಯಲ್ಲಿ ಬಂದಿದ್ದೇನೆ ಅದೊಂದು ಸಂತೋಷವೆಬೇರೆ ಅದು ಅನುಭವಿಸಿಯೇ ತೀರಬೇಕು, ಮತ್ತೆ ಮತ್ತೆ ನೀರನ್ನು ಮುಖದ ಮೇಲೆ ಹಾಕುತ್ತ ಪ್ರತಿಸಾರಿಯೂ ಪುಳಕಿತ ಗೊಳ್ಳುತ್ತಾ ಮೈ ಮನ ಎಲ್ಲ ಸಂತೋಷವನ್ನು ಒಮ್ಮಲೆ ಅನುಭವಿಸ ತೊಡಗಿದೆ,
ಆಗ ಹಿಂದಿನಿಂದ ಒಂದು ಶಬ್ದ ಬಂತು ಅದು ಅಕ್ಕನ ಮಗಳು ಐಶ್,
ಹೇಗಿದೆ ನೀರು ನಿಮ್ಮ ದುಬೈಯಲ್ಲಿ ಈ ನೀರು ಸಿಗುತ್ತಾ ? ಸಿಕ್ಕರೂ ಆ ನೀರಿಗೆ ಈ ಆತ್ಮೀಯತೆ ಇದೆಯಾ ಇದ್ದರು ಅದಕ್ಕೆ ಈ ರೋಮಾಂಚನದ ಶಕ್ತಿ ಇದೆಯಾ, ಕಾರಣ ನಾನು ಮೊದಲು ಬಂದು ಇಲ್ಲಿ ಕುಳಿತದ್ದು ಅಣ್ಣ ನಿಮ್ಮ ಪ್ರತಿಕ್ರಿಯೆ ನೋಡಲಿಕ್ಕಾಗಿಯೇ ಎಂದು ನಗುತ್ತ ಹೇಳತೊಡಗಿದಳು ಹೌದು ನೀವು ಉತ್ತರ ಕೊಡುವುದು ಬೇಡ ನಿಮ್ಮ ಉತ್ತರವನ್ನು ನಾನು ಗ್ರಹಿಸಿಯಾಯ್ತು ಹೌದು ಇದು ನಮ್ಮ ನಾಡು ನಮ್ಮ ಮಲೆನಾಡು ನಾವು ಮಲೆನಾಡಿನ ತವರೂರಿನವರು ಎಂದು ಹೇಳುತ್ತಾ ರಮ್ಮಿಯನ್ನು ಕರೆದು ಅಣ್ಣನ ಸಂತೋಷ ನೋಡು.
ಹೌದು ನಾನು ನನ್ನವರೊಂದಿಗೆ ಕುಪ್ಪಳ್ಳಿಯಲ್ಲಿ ಕುವೆಂಪುರವರ ಮನೆಯಲ್ಲಿದ್ದೆ ಅದನ್ನು ನೋಡಲಿಕ್ಕಾಗಿಯೇ ನಾವೆಲ್ಲರೂ ಬೆಳಗ್ಗೆ ಬೇಗನೆ ಎದ್ದು ಎಲ್ಲ ಸಿದ್ದತೆಯೊಂದಿಗೆ ಶಿವಮೊಗ್ಗದಿಂದ ಹೊರಟೆವು, ಇದಕ್ಕೆ ಹೆಚ್ಚಿನ ಆದ್ಯತೆ ನೀಡಿದ್ದು ಅನ್ನು' ಅಂದರೆ ಅನ್ನು' ಬಹಳ ಸಲ ಇಲ್ಲಿ ಬೇಟಿ ನೀಡಿದ್ದು ಇಲ್ಲಿನ ಪ್ರಕೃತಿ ಸೌಂದರ್ಯವನ್ನು ಯಾವಾಗಲು ಅನ್ನು ಮೆಲುಕುಹಾಕುವುದನ್ನು ಕೇಳುತ್ತಲೇ ಇದ್ದೆ, ಹಿಂದಿನ ದಿನ ಮಳೆ ಬಂದು ಶಿವಮೊಗ್ಗದ ತುಂಬ ತಂಪು ಹವಾಮಾನ ಬೆಳಗ್ಗೆ ಹೊರಡುವಾಗ ಇಬ್ಬನಿ ಮಳೆ ಟಾಟ ಸುಮೋದಲ್ಲಿ ಎಲ್ಲರು ಹತ್ತಿ ಹೊರಟಾಗ ಅಂತ್ಯಾಕ್ಷರಿ ಹಾಡುತ್ತಾ ಇಬ್ಬನಿ ಮಳೆಯನ್ನು ಸವಿಯುತ್ತ ಹೊಸಳ್ಳಿ, ಗಾಜನೂರು , ಮಂಡಗದ್ದೆ ಮುಡುಬ ,,,,,ತೀರ್ಥಹಳ್ಳಿ ದಾರಿಯುದ್ದಕ್ಕೂ ಕಾಡು, ತೊರೆ , ಜರಿ , ನೀರ ಧಾರೆ ಪ್ರಾಣಿಗಳನ್ನು ನೋಡುತ್ತಾ ಎಲ್ಲವನ್ನು ಸವಿಯುತ್ತ ಫೋಟೋ ತೆಗೆಯುತ್ತ ಬಂಡೆಗಳ ಮದ್ಯಇಂದ ಹರಿಯುವ ನೀರನ್ನು ಆಸ್ವಾದಿಸುತ್ತಾ ದಾರಿ ಸರಿದದ್ದೇ ತಿಳಿಯಲಿಲ್ಲ ದಾರಿಯುದ್ದಕ್ಕೂ ತುಂಗೆ ನಮ್ಮನ್ನು ನೋಡುತ್ತಲೇ ಹರಿಯುತ್ತಿದ್ದಳು,
ಹೀಗೆ ಮೊದಲು ಹೋಗಿ ಇಳಿದದ್ದು ಕುವೆಂಪುರವರ ಕವಿಶೈಲದಲಿ ಅಲ್ಲಿ ಇದ್ದ ಗೈಡ್ ಅನ್ನುವಿನ ಪರಿಚಯದ ವ್ಯಕ್ತಿ. ನಮ್ಮನು ನೋಡಿದಾಕ್ಷಣ ಸಂತೋಷದಿಂದ ಬರಮಾಡಿಕೊಂಡು ಎಲ್ಲರಿಗು ಅಲ್ಲಿಯ ಬಗ್ಗೆ ಎಲ್ಲವನ್ನು ಹೇಳುತ್ತಾ ಕುವೆಂಪುರವರ ಜೀವನ ದ ಕೆಲವು ಹಂತಗಳನ್ನು ವಿವರಿಸುತ್ತ ತನ್ನ ಕಂಠಪಾಠ ನಮಗೆ ಒಪ್ಪಿಸಿದ ರೀತಿ ನಿಜಕ್ಕೂ ಸಂತೋಷ ಗೊಳಿಸಿತು. ಅಲ್ಲಿ ಕವಿಶೈಲದಲಿ ಸುತ್ತಲು ಕಾಡು ಮತ್ತು ಬೆಟ್ಟಗಳು ಅದೊಂದು ರಮಣೀಯ ಸ್ತಳ ಶಾಂತ ಪ್ರಕೃತಿ ಸಮಾಧಾನದ ನಿಶ್ಯಬ್ಧ .
ಹೀಗೆ ಮುಂದುವರೆದು ಮತ್ತೆ ಹೋದದ್ದು ಕುವೆಂಪುರವರ ಮನೆಗೆ. ಕವಿಶೈಲದಿಂದ ಕಾಲು ದಾರಿಯು ಇದೆ ಅಲ್ಲಿ ತಲುಪಿ ಎಲ್ಲರು ವಾಹನದಿಂದ ಇಳಿದು ಯಾರು ಮಾತನಾಡಲಿಲ್ಲ ಎಲ್ಲರು ನಿಟ್ಟುಸಿರು ಬಿಟ್ಟು ನೋಡುತ್ತಾ ನಿಂತದ್ದು ಆ ಮನೆ, ಅದೊಂದು ಸ್ವರ್ಗ ' ಎಲ್ಲರು ಒಬ್ಬರ ಮುಖ ಒಬ್ಬರು ನೋಡುತ್ತಾ ಒಳಗೆ ತಲುಪಿದೆವು ಅಲ್ಲಿ ಎಡಭಾಗದಲ್ಲಿ ಹೊರಗೆ ನಲ್ಲಿ ಕಂಡಿತು ಅದರ ನೀರು ನಮ್ಮನ್ನೆಲ್ಲ ಮೂಕರನ್ನಾಗಿ ಮಾಡಿತು ಅಲ್ಲಿಂದ ಮನೆಯ ಒಳಗೆ ಒಂದೊಂದೇ ಹಂತಗಳನ್ನು ಗೈಡ್ ಪರಿಚಯಿಸುತ್ತಾ ಹೊರಟರು ಅದೊಂದು ನೆನಪುಗಳ ಆಗರ ಪ್ರತಿಯೊಂದು ವಸ್ತುಗಳು ತನ್ನದೇ ಆದ ಕಥೆಯನ್ನು ಹೇಳುತ್ತವೆ.
ಒಂದರ ಮೇಲೆ ಒಂದು ಮಾಳಿಗೆ ಮರದ ವಸ್ತುಗಳು ತಂಪಾದ ವಾತವರಣ ಎಲ್ಲವನ್ನು ನೋಡುತ್ತಾ ಒಲ್ಲದ ಮನಸ್ಸಿನಿಂದ ಹೊರಬಂದೆವು ಹಸಿವಾಗತೊಡಗಿತ್ತು ಸ್ವಲ್ಪ ದೂರ ಬಂದು ದಾರಿ ಪಕ್ಕದಲ್ಲೇ ಜರಿಯಾಗಿ ಹರಿಯುತ್ತಿದ್ದ ನೀರ ಧಾರೆಯ ಬಳಿ ಎಲ್ಲರು ಕುಳಿತು ಊಟ ಪ್ರಾರಂಬಿಸಿದೆವು. ಅಲ್ಲಿ ಸ್ವಲ್ಪ ದೂರದಲ್ಲಿ ಬಟ್ಟೆ ಒಗೆಯಲು ಕುಳಿತಿದ್ದ ಮೂರು ಹೆಂಗಸರು ಊರಿನ ಬಗ್ಗೆ ನಾಡಿನ ಬಗ್ಗೆ ಕುಶಲೋಪರಿ ಮಾತನಾಡ ತೊಡಗಿದರು.
ನಾವು ತಂದಿದ್ದ ಜಾಮೂನ್ ತಿಂದು ಇನ್ನು ಇದೆಯಾ ಅಂತ ಕೇಳಿದರು ಇಲ್ಲ ಮುಗಿಯಿತು ಎಂದು ಹೇಳಿದಾಗ ಜಾಮೂನ್ ಮಾಡಿದವರು ಯಾರು ಅಂತ ಕೇಳುತ್ತಾ ಬಹಳ ರುಚಿಯಾಗಿದೆ ಎಂದರು, ಅದಕ್ಕೆ ನಾನಂದೆ ನನ್ನ ಅಕ್ಕನ ಮಗಳು ರಮ್ಮಿ ಜಾಮೂನ್ ಮಾಡಿದ್ದು ಎಂದು ಹೇಳುತ್ತಾ ನಾನು ಕೆಲವು ಫೋಟೋಗಳನ್ನು ತೆಗೆದೆ ಕಾಡಿನಲ್ಲಿ ನೀರ ತೊರೆ ಬಂಡೆಗಳು ತಂಪಾದ ಹವಾಮಾನ ಪಕ್ಷಿಗಳ ಇಂಪಾದ ಶಬ್ದ ಇಬ್ಬನಿ ಮಳೆ ದೂರ ದೂರದಲ್ಲಿ ಮನೆಗಳು ದಾರಿ ಮದ್ಯದಲ್ಲಿ ಅಪರೂಪಕ್ಕೊಮ್ಮೆ ಎದುರಾಗುವ ಬಸ್ಸುಗಳ ಕರ್ಕಶ ಹಾರ್ನ್ ಶಬ್ದ ಅಲ್ಲಲ್ಲಿ ಗೋಪ್ಪೆ ಹೊದ್ದು ಹೋಗುತ್ತಿರುವ ಮನುಷ್ಯರು ರಸ್ತೆಯ ಮೇಲು ಹರಿಯುವ ನೀರ ನೆರಿಗೆಗಳು ,,,,,,,,,, ,,,,,, ...
(ಹೆಚ್ಚಿನ ಫೋಟೋಗಳು ಇಲ್ಲಿ ನೋಡಿ http://picasaweb.google.com/IsmailMkShivamogga/KuppalliKuvempuHouse# )

1 comment:

  1. ella photo noadide.tumbaa khushi aaytu. kuppalli teerthakshetra iddante. kuppalliya darshana maadisiddakke nimage noorondu namana:):)

    ReplyDelete