Sunday 9 August 2009

ಪರೇಶ - ಪ್ರತಿಮೆಗಳು ಮತ್ತು ಸ್ಥಾಪನೆ

ಭಾನುವಾರ ವಾದ್ದರಿಂದ ಬೆಳಗ್ಗೆ ನಾನು ಸ್ಕೂಟರ್ ತೊಳೆಯುತ್ತಿದ್ದೆ ಅಂದರೆ ಕೈನೆಟಿಕ್ ಹೋಂಡ ಬ್ಲಾಕ್ ಅದು ನನ್ನ ಸರ್ವಸ್ವ. ತರಲೆ ಪರೇಶ ನನ್ನ ಸಹಾಯಕ್ಕೆ ನಿಂತಿದ್ದ. ಕೆಲಸಕ್ಕಿಂತ ಜಾಸ್ತಿ ಲಾಟು ಬಿಡುವುದು ಪರೆಶನ ಬುದ್ದಿ . ಇದ್ದಕ್ಕಿದ್ದಂತೆ ಪ್ರತಿಮೆ ಸ್ಥಾಪಿಸುವ ವಿಷಯ ಅದರ ಬಗ್ಗೆ ವಾದ ವಿವಾದಗಳ ವಿಷಯ ಶುರುಮಾಡಿದ ನಾನು ಕೆಲಸದಲ್ಲಿ ಮುಳುಗಿದ್ದೆ. ಇದರ ಮದ್ಯೆ ನಾನು ಪರೆಶನಿಗೆ ಕೇಳಿದೆ ಪ್ರತಿಮೆ ಅನಾವರಣದ ಬಗ್ಗೆ ನಿನ್ನ ಅಭಿಪ್ರಾಯ ಏನೋ ಪರೇಶ ಅಂದೇ ಅಷ್ಟೆ.

ಶುರುಮಾಡಿದ ಸಾರ್ ಇಲ್ ಕೇಳ್ರಿ ಸಾರ್ ದಿನಾ ಹೊಸ ಹೊಸ ಪ್ರತಿಮೆಗಳು ಬೇರೆ ಬೇರೆ ಕಡೆ ಸ್ಥಾಪಿಸಬೇಕು ಸಾರ್ ಅವಾಗ್ ಕೂಲಿ ಮಾಡವ್ರಿಗೆ ಕೆಲಸ ಸಿಗುತ್ತೆ , ಪ್ರತಿಮೆ ಮಾಡವ್ರಿಗೆ ಕೆಲಸ ಸಿಗುತ್ತೆ , ಅವರ ಮೇಲೆ ಅವಲಂಬಿತರಾದವರಿಗೆ ಊಟ ಸಿಗುತ್ತೆ ಗಲಾಟೆ ಮಾಡವ್ರಿಗೆ ಊಟ ಸಿಗುತ್ತೆ , ಬೇಡ ಅನ್ನವರಿಗೆ ಊಟ ಸಿಗುತ್ತೆ ಅದಕ್ಕೋಸ್ಕರ ಆಯೋಗಗಳನ್ನು ಶುರು ಮಾಡ್ತಾರೆ ಅವ್ರಿಗೆ ಊಟ ಸಿಗುತ್ತೆ , ಅದರ ವಿರುದ್ದ ಮತ್ತು ಪರ ಬ್ಯಾನರ್ ಬರಿಯುವವರಿಗೆ ಊಟ ಸಿಗುತ್ತೆ , ಟಿ ವಿ ಯಲ್ಲಿ ಪ್ರಚಾರ ಸಿಗುತ್ತೆ ಆಮೇಲೆ ಅದಕ್ಕೋಸ್ಕರ ಉಪಯೋಗಿಸೋ ವಸ್ತುಗಳು ವಾಹನಗಳು ಅವರಿಗೆ ಕೆಲಸ ಸಿಗುತ್ತೆ , ಒಂದಲ್ಲ ಒಂದು ರೀತಿಯಲ್ಲಿ ಬಡವ ಒಂದು ಹೊತ್ತಿನ ಊಟವನ್ನು ಹೇಗಾದರು ಪಡಿತಾನೆ ಸಾರ್ ಅದು ಬಹಳ ಕಷ್ಟ ಪಟ್ಟು.

ನಾವು ಭಾರತೀಯರು ಸಾರ್ ಎಲ್ಲವನ್ನು ಗೌರವಿಸಬೇಕು ಅದು ನಮ್ಮ ಆತ್ಮದಿಂದ ನಮ್ಮ ಮನಸ್ಸಿನಿಂದ ನಮ್ಮ ಸಂತೋಷ ದಿಂದ ಅದರಿಂದ ಯಾರಿಗೂ ತೊಂದರೆ ಯಾಗಬಾರದು ಯಾರ ಭಾವನೆಗಳಿಗೂ ಧಕ್ಕೆಯಾಗಬಾರದು , ಎಲ್ಲವು ಎಲ್ಲರಿಗು ಬೇಕು ಆದರೆ ನಮ್ಮ ನಿಮ್ಮ ಮತ್ತೊಬ್ಬರ ಭಾವನೆಗಳನ್ನು ಕೊಂದು ಏನು ಪ್ರಯೋಜನ ಸಾರ್

ನಾವು ಸ್ಥಾಪಿಸುವ ಪ್ರತಿಮೆಯನ್ನು ನಾವು ನೋಡಿದಾಗ ನಮಗೆ ಸಂತೋಷವನ್ನು ನೀಡಬೇಕು ಅದು ಬಿಟ್ಟು ಪ್ರತಿಮೆ ನಮ್ಮನ್ನು ನೋಡಿ ಅಳುವಂತಾಗಾಬಾರದು ಅಥವಾ ಪ್ರತಿಮೆಯನ್ನು ನಾವು ನೋಡಿ ಅಳುವಂತಾಗಬಾರದು.

ಅಲ್ವ ಸಾರ್ ಅಂದ, ಎನೋಪ ನಂಗೆ ನಿನ್ನಷ್ಟು ಬುದ್ದಿ ಇಲ್ಲ ಅಂದೇ, ಒಳ್ಳೆದಾಯ್ತು ಬಿಡಿ , ಯಾಕೋ ಅಂದೇ , ಈಗ ಪ್ರಪಂಚದ ಎಲ್ಲಾ ಸಮಸ್ಯೆಗಳು ಬುದ್ದಿವಂತರಿಂದಲೇ ಆಗುತ್ತಿರುವುದು ಅದೇ ದೊಡ್ಡ ಸಮಸ್ಯೆ ಗೊತ್ತ ಸಾರ್ ,,,,,,,

6 comments:

  1. ನಲುಮೆಯ ಇಸ್ಮಾಯಿಲ್ ಅವರಿಗೆ ನಮಸ್ತೆ

    ನಿಮ್ಮ ಬ್ಲಾಗೊಂದು ಇತ್ತ ಕಡೆಯೂ ಇದೆ ಅಂತ ತಿಳಿದೇ ಇರಲಿಲ್ಲ :)
    ಇನ್ಮೇಲೆ ನಾನು ಪ್ರತಿದಿನ ಇತ್ತ ಕಡೆ ಬರುವೆ, ಕಣ್ಣು ಹಾಯಿಸುವೆ, ಮನವನ್ನು ಉಲ್ಲಸಿತಗೊಳಿಸಿಕೊಳ್ಳುವೆ.

    ಅಂದ ಹಾಗೆ, ತಮಗೆ ತಿಳಿಯದೇ ಇರಬಹುದು. ಸೌದೀ ದೇಶದಲ್ಲಿಯ ಬ್ಲಾಗಿಗರು ಬರೆಯುವ ಬ್ಲಾಗುಗಳನ್ನು ಪ್ರತಿ ನಿತ್ಯವೂ ಅವಲೋಕಿಸುತ್ತಿರುವೆ (ಉದಾಹರಣೆಗೆ http://americanbedu.com). ಅವೆಲ್ಲವೂ ಆಂಗ್ಲ ಭಾಷೆಗಳಲ್ಲಿದ್ದು, ಇಸ್ಲಾಂ ಮತದ ಬಗ್ಗೆ ಹೆಚ್ಚು ಹೆಚ್ಚು ತಿಳಿದುಕೊಳ್ಳಬಯಸಿರುವ ನನ್ನ ಮನವನ್ನು ತುಂಬಲಾಗಿಲ್ಲ. ನೀವು ಈ ನಿಟ್ಟಿನಲ್ಲಿ ನನಗೆ ಸಹಾಯಿಸಬಹುದು ಎಂದೆನಿಸುತ್ತಿದೆ. ರಮಾದಾನ್ ಉಪವಾಸ ವ್ರತದ ಬಗ್ಗೆ ನೀವೇನಾದರೂ ಬರೆದಿದ್ದರೆ, ಅದರ ಕೊಂಡಿಯನ್ನು ತಿಳಿಸುವಿರಾ? ಹಾಗಿಲ್ಲದಿದ್ದರೆ, ಬರೆದು ಏರಿಸುವಿರಾ? atleast, ನನಗೆ ಮಿಂಚಂಚೆಯ ಮೂಲಕವಾದರೂ ಅದರ ಒಳನೊಟವನ್ನು ತೋರುವಿರಾ?

    ಒಳ್ಳೆಯದಾಗಲಿ

    ಗುರುದೇವ ದಯಾ ಕರೊ ದೀನ ಜನೆ

    ತವಿಶ್ರೀ

    ReplyDelete
  2. ಇಸ್ಮಾಯಿಲರೆ ಕೊನೆಯ ಪಂಚ್ ಸೂಪರ್ ಇದೆ.
    ಒಂದು ಪ್ರತಿಮೆ ಇಂದ ಇಷ್ಟೆಲ್ಲಾ ಲಾಭ ಇದೆ ಅಂತ ತಿಳೀತು, ಸೊ ಉತ್ತರ ಪ್ರದೇಶದಲ್ಲಿ ಎಲ್ಲ ಕಡೆ ಮಾಯಾವತಿ ಪ್ರತಿಮೆ ಮಾಡ್ತಾ ಇರೋದ್ರಿಂದ ಜನಕ್ಕೆ ಒಂದಿಷ್ಟು ಕೆಲಸ ಸಿಗ್ತಾ ಇದೆ ಅನ್ಸುತ್ತೆ. ಮುಂದೆ ಬೇರೆ ಸರ್ಕಾರ ಬಂದ್ರೆ ಪ್ರತಿಮೆ ತೆರವು ಗೊಳಿಸ್ತಿವಿ ಅಂದ್ರೆ ಅವಾಗ್ಲು ಜನಕ್ಕೆ ಕೆಲಸ ಸಿಗುತ್ತೆ.

    ಬ್ಲಾಗ್ ಚೆನ್ನಾಗಿದೆ.

    ReplyDelete
  3. ಒಂದು ಪ್ರತಿಮೆ ಸ್ಥಾಪನೆ ಹಿಂದೆ ಎಷ್ಟೊಂದು ಜನಕ್ಕೆ ಕೆಲಸ ಸಿಗುತ್ತೆ ಅಲ್ವ....ಚೆನ್ನಾಗಿ ಬರೆದಿದ್ದೀರಾ...

    ReplyDelete
  4. Srinivas sir you can check www.islam.com

    ReplyDelete
  5. ಸವಿಗನಸು :-
    ಧನ್ಯವಾದಗಳು

    ReplyDelete
  6. ಬಾಲು ರವರೆ ಧನ್ಯವಾದಗಳು
    ಧನ್ಯವಾದಗಳು

    ReplyDelete