Saturday, 18 July 2009

ಹೀಗೊಂದು ಪ್ರೇಮ ಪತ್ರ

ಬಡಗಿ :

ಓ ನನ್ನ ಪ್ರಿಯತಮೆ ಬೀಟೆ ಮರದಂತಿರುವ ನಿನ್ನ ಶರೀರ, ನೀಲಗಿರಿ ಮರದಂತಿರುವ ನಿನ್ನ ಕಾಲುಗಳು, ಎತ್ತಿನಗಾಡಿಯ ನೋಗದಂತಿರುವ ನಿನ್ನ ಮೂಗು, ಆಲದ ಮರದ ಬಿಳಿಲುಗಲನ್ತಿರುವ ನಿನ್ನ ಕೇಶ , ಕುದ್ರೆಗಾಡಿಯ ಚಕ್ರದಂತಿರುವ ನಿನ್ನ ಕಿವಿಗಳು, ಕಿಟಕಿಯ ಬಾಗಿಲಿನಂತಿರುವ ನಿನ್ನ ಕಣ್ಣುಗಳು, ಹೆಬ್ಬಾಗಿಲಿನಂತಿರುವ ನಿನ್ನ ಎದುರು, ಹಿಂಬಾಗಿಲಿನಂತಿರುವ ನಿನ್ನ ಹಿಂಬದಿ, ಬಿಸಿಲುಗಾಲದಲ್ಲಿ ತಂಪು ನೀಡುವ ಮಾಡಿನಂತಿರುವ ನಿನ್ನ ಸ್ನೇಹ , ಕುಸುರಿ ಕೆಲಸದಂತಿರುವ ನಿನ್ನ ಮೈಮಾಟ , ಚಳಿಯಲ್ಲೂ ತಗ್ಗದೆ ಬಗ್ಗದೆ ನಿಲ್ಲುವ ಮರದ ಕಂಬಗಳನ್ತಿರುವ ನಿನ್ನ ಧೈರ್ಯ. ಸಾಗುವಾನಿಯ ಕಪಾಟಿನಂತೆ ಕಾಣುವ ನಿನ್ನ ನಿಲುವು, ಬೀಟೆಯ ಡೈನಿಂಗ್ ಟೇಬಲ್ಲಿನ ಹಾಗೆ ಕಾಣುವ ನಿನ್ನ ಕುಳಿತ , ಎರಡು ಬಾಗಿಲನ್ನು ತೆರೆದಿಟ್ಟಂತೆ ಇರುವ ನಿನ್ನ ಹೃದಯ, ಎಲ್ಲ ಕಿಟಕಿಗಳನ್ನು ತೆರೆದಿಟ್ಟಂತೆ ಕಾಣುವ ನಿನ್ನ ನಗುವು, ಮರಕ್ಕೆ ಅತ್ರಿ ಹಾಕುವಾಗ ಬರುವಂತ ನಿನ್ನ ಹೃದಯದ ಶಬ್ದ ,.,.,.,.,,.

ಮೆಕ್ಯಾನಿಕ್ :

ಓ ನನ್ನ ಪ್ರಿಯತಮೆ ಸ್ಕಾರ್ಪಿಯದನ್ತಿರುವ ನಿನ್ನ ಶರೀರ, ಟೊಯೋಟಾದ ಸೀಟಿನಿಂತಿರುವ ನಿನ್ನ ಮೃದುವಾದ ಮನಸ್ಸು, ಆಲ್ಟೊ ದ ಹೆಡ್ ಲೈತಿನಂತಿರುವ ನಿನ್ನ ಕಣ್ಣುಗಳು, ಜಿಪ್ಸಿ ಯಂತಿರುವ ನಿನ್ನ ಓಡಾಟ, ಮಳೆಯಲ್ಲೂ ಕೆಸರಲ್ಲೂ ಹೊಂದಿಕೊಂಡು ಹೋಗುವಂತ ಟಾಟಾ ಸುಮೋ ದಂತಹ ನಿನ್ನ ಧೈರ್ಯ, ಹಾಳಾದ ಗಾಡಿಯನ್ನು ಎಳೆದು ತರುವ ಕ್ರೇನ್ ತರಹದ ನಿನ್ನ ಆತ್ಮೀಯತೆ , ಅಂಬಾಸಡರ್ ನಂತಿರುವ ನಿನ್ನ ಸಂಸ್ಕೃತಿ , ಎಲ್ಲವನ್ನು ಹೊತ್ತುಕೊಂಡು ಹೋಗುವ ಲಗ್ಗೇಜ್ ಕ್ಯಾರಿಯರ್ ನಂತಹ ನಿನ್ನ ಆತ್ಮ ಸ್ತೈರ್ಯ, ಟೆಂಪೋ ಟ್ರಾವಲರ್ ತರಹ ಎಲ್ಲರನು ಒಟ್ಟಿಗೆ ಸಹಿಸಿಕೊಂಡು ಹೋಗುವಂತಹ ನಿನ್ನ ಸಹನೆ, ಎಲ್ಲ ದಾರಿಗಳಲ್ಲೂ ಒಂದೇ ಸಮನಾಗಿ ಓಡುವ ಏನ್ ಪಿ ತರಹದ ನಿನ್ನ ವಿಶಾಲ ಹೃದಯ .,.,.,.,.,.,.,.,.,

ಸೈಕಲ್ ಶಾಪ್ :

ಓ ನನ್ನ ಪ್ರಿಯತಮೆ ಸ್ಪೋರ್ಟ್ಸ್ ಸೈಕಲ್ ನಂತಿರುವ ನಿನ್ನ ಶರೀರ , ಚೈನ್ ನಂತಿರುವ ನಿನ್ನ ಕೇಶ ರಾಶಿ, ಬ್ರೇಕ್ ಇಲ್ಲದ ಸೈಕಲ್ ನಂತಿರುವ ನಿನ್ನ ಮಾತುಗಳು, ಚಕ್ರದಂತಿರುವ ನಿನ್ನ ಕೆನ್ನೆಗಳು, ಕ್ಯಾರಿಯರ್ ಇಲ್ಲದ ಸೈಕಲ್ನಂತಿರುವ ನಿನ್ನ ವೈಯಾರ, ಸ್ಟ್ಯಾಂಡ್ ನಂತಿರುವ ನಿನ್ನ ಕಾಲುಗಳು, ಸೈಕಲ್ ಹಾಗೆಯೇ ಡಯಟಿಂಗ್ ಮಾಡಿದಂತೆ ಕಾಣುವ ನಿನ್ನ ಸೌಂದರ್ಯ.,.,.,.,,.,..,

ಹೋಟೆಲ್ ನವನು :

ಓ ನನ್ನ ಪ್ರಿಯತಮೆ ಮೈಸೂರು ಮಸಾಲೆ ದೊಸೆಯನ್ತಿರುವ ನಿನ್ನ ಶರೀರ, ಇಡ್ಲಿಯನ್ತಿರುವ ನಿನ್ನ ಕೆನ್ನೆಗಳು, ಸಾಂಬಾರ್ ನಂತಿರುವ ನಿನ್ನ ಚುರುಕು, ಉಪ್ಪಿಟ್ ನಂತಿರುವ ನಿನ್ನ ಮಾತುಗಳು , ಉಬ್ಬಿದ ಪೂರಿಯಂತೆ ಇರುವ ನಿನ್ನ ವಿಶಾಲ ಹೃದಯ, ಎಲ್ಲದಕ್ಕೂ ಹೊಂದಿ ಕೊಳ್ಳುವಂತಹ ಆತ್ಮ ಸ್ತೈರ್ಯ, ಟಿ ಕುಡಿದ ಕೂಡಲೇ ಶಾಂತವಾಗುವ ನಿನ್ನ ಮನಸ್ಸು

ಐ ಟಿ :

ಓ ಪ್ರಿಯ ತಮೆ ಲ್ಯಾಪ್ಟಾಪ್ ನಂತಿರುವ ನಿನ್ನ ಶರೀರ, ಇಂಟೆಲ್ ನನ್ತಿರುವ ನಿನ್ನ ಸ್ಮರಣ ಶಕ್ತಿ , ಪೆವಿಲಿಯಾನ್ ನಂತಿರುವ ನಿನ್ನ ದೇಹ ಸೃಷ್ಟಿ , ೧೯' ನಂತಿರುವ ನಿನ್ನ ಆಕರ್ಷಕ ಮುಖ ಸೌಂದರ್ಯ , ಕೀ ಬೋರ್ಡ್ನ ಕೀ ಗಳನ್ತಿರುವ ನಿನ್ನ ಮೃದುವಾದ ಬೆರಳುಗಳು , ಮೈ ಡಾಕ್ಯುಮೆಂಟ್ ನಂತಿರುವ ವಿಶಾಲಾ ಹೃದಯ , ಸಿನ್ತೆಕ್ಷ ಎರರ್ ನಂತೆ ಬರುವ ಮೃದುವಾದ ನಿನ್ನ ಸಿಟ್ಟು , ಅಡೋಬ್ ನಂತೆ ಎಲ್ಲವನ್ನು ಸ್ವೀಕರಿಸುವ ನಿನ್ನ ಮನೋ ಸ್ತೈರ್ಯ , ಎಲ್ಲವನ್ನು ಸರಿಯಾದ ಸ್ಥಳದಲ್ಲಿ ಇಡುವ ಫೋಲ್ಡರ್ ನಂತೆ ನಿನ್ನ ಒಪ್ಪ , ಬರುವಾಗಲು ಹೋಗುವಾಗಲು ತಿಳಿಸುವ ನಾದ ಗೆಜ್ಜೆ , ಅನೈತಿಕತೆಯನ್ನು ಸ್ವೀಕರಸದಂತಹ ಆಂಟಿ ವೈರಸ್ ನಂತಹ ನಿನ್ನ ಅದೃಶ್ಯ ಶಕ್ತಿ, ಪರಿಸ್ಥಿತಿಗೆ ತಕ್ಕಂತೆ ಅಪ್ಗ್ರಯೇಡ್ ಆಗುತ್ತಾ ಹೋಗುವ ನಿನ್ನ ಆಧುನಿಕತೆ .,,.,.,..,,.,.

ಹೀಗೆ ಅಲ್ಲವೇ ಮನಸ್ಸಿನ ಭಾವನೆಗಳು, ಪ್ರತಿಯೊಬ್ಬರೂ ತನ್ನದೇ ಆದ ಶೈಲಿಯನ್ನು ಹೊಂದಿರುತ್ತಾರೆ. ಆದರೆ ಎಲ್ಲರು ವ್ಯಕ್ತ ಪಡಿಸುವುದು ತಮ್ಮ ಪ್ರೀತಿಯನ್ನೇ ಅಲ್ಲವೇ. ಪ್ರೀತಿಗೆ ಯಾವ ಭಾಷೆ ಯಾದರೇನು ಕೊನೆಗೆ ಬಂದು ನಿಲ್ಲುವುದು ಅಲ್ಲೇ , ಅಯ್ಯಪ್ಪ ಯಾಕ್ಬೇಕಿತ್ತು ಈ ಪ್ರೀತಿ, ಈ ಮದುವೆ.

" ಹಗಲು ಕಂಡ ಹೊಂಡದಲ್ಲಿ - ಹಗಲೇ ಹೋಗಿ ಬೀಳುವುದು "

ಇದೆಲ್ಲ ಮುಗಿದ ಮೇಲೆ .,,..,.,.,.,.,

ಬಡಗಿ ಹೇಳಿದ್ದು : ನಿನ್ ಮನೆ ಹಾಳಾಗ್ ಹೋಗ ನಿಂದೇನ್ ಬಾಯಿನ ಗರಗಸನ ಮೆಚ್ಚೆ ಬಾಯಿ .

ಮ್ಯಕಾನಿಕ್ : ಹೇಯ್ ಇದೊಳ್ಳೆ ಯಾವ್ದೋ ಗಾಡಿಗೆ ಯಾವ್ದೋ ಪಾರ್ಟ್ಸ್ ಹಾಕ್ದಂಗೆ ಕಾಣತೈತ್ ಸಾರ್, ಹಾಳಗ್ ಹೋಗ ತಗೊಂಡ್ ಹೋಗಿ ಗುಜ್ರಿಗ್ ಹಾಕದೆ ಸರಿ

ಸೈಕಲ್ ಶಾಪ್ :

ಕ್ಲಚ್ಚೆ ಇಲ್ದಿದ್ ಮೇಲೆ ಈ ಸೈಕಲ್ ಎಲ್ಲಿಂದ ಓಡ್ತೀತ್ ಮಾರಾಯ

ಹೋಟೆಲ್ನವನು :

ಒಂದೇ ಮಾತು ಈ ಹಿಟ್ಟು ಹಳ್ಸೋಗೈತಾಪ

ಐ ಟಿ :

ಈ ಲ್ಯಾಪ್ ಟಾಪ್ ಔಟ್ ಆಫ್ ಡೇಟ್ ಇದು ಸರಿ ಮಾಡಕ್ಕಾಗಲ್ಲ . ಕಾರಣ ಇದುಕ್ಕೆ ಸ್ಪೇರ್ ಸಿಗಲ್ಲ

1 comment:

  1. ಇಸ್ಮಾಯಿಲ್ ಸರ್,

    ಬೇರೆಯವರ ಬ್ಲಾಗಿನಿಂದ ನಿಮ್ಮ ಬ್ಲಾಗಿಗೆ ಹಾರಿಬಂದೆ. ಬೇರೆ ಬೇರೆ ವೃತ್ತಿಯಲ್ಲಿರುವವರ ಭಾವನೆಯಲ್ಲಿ ಪ್ರಿಯತಮೆಯ ವರ್ಣನೆ ತುಂಬಾ ಚೆನ್ನಾಗಿ ಬರೆದಿದ್ದೀರಿ...ನಾನು ಓದಿ ನಕ್ಕು ನನ್ನ ಶ್ರೀಮತಿಗೂ ತೋರಿಸಿದೆ ಇಬ್ಬರಿಗೂ ನಗು ತಡೆಯಲಾಗಲಿಲ್ಲ....

    ಧನ್ಯವಾದಗಳು.

    ReplyDelete