Wednesday 1 July 2009

ಆಂಟಿ ಕಂಕುಳಲ್ಲಿ ಒಂದು ಮಗುವಿತ್ತು

ನಾನು ಪರೇಶ ಕೆಲಸ ನಿಮಿತ್ತ ಬೆಂಗಳೂರಿಗೆ ಶಿವಮೊಗ್ಗದಿಂದ ಟ್ರೈನ್ ಮೂಲಕ ಹೋಗುವ ಎಂದು ನಿರ್ಧರಿಸಿ ಮಧ್ಯಾನದ ಟ್ರೈನ್ ಹತ್ತಿದೆವು. ನಾನು ಪೇಪರ್ ಓದುತ್ತ ಕುಳಿತೆ ಇವನು ಅಕ್ಕ ಪಕ್ಕದವರ ಹತ್ತಿರ ಏನೇನೋ ಲಾಟು ಬಿಡುತ್ತಾ ಇದ್ದ , ಟ್ರೈನ್ ಭದ್ರಾವತಿ ತಲುಪಿದಾಗ ಅಲ್ಲಿಂದ ಸ್ವಲ್ಪ ಜನರು ಹತ್ತಿದರು ಅದರಲ್ಲಿ ಒಂದು ಆಂಟಿ ಕಂಕುಳಲ್ಲಿ ಒಂದು ಮಗುವಿತ್ತು ಬಂದು ನಮ್ಮ ಎದುರು ಸೀಟ್ ನಲ್ಲಿ ಕುಳಿತು ಕೊಂಡಿತು.

ಪರೆಶನಿಗೆ ಮಕ್ಕಳು ದೊಡ್ಡವರು ಕಂಡರೆ ಬಹಳ ಗೌರವ ಅದರಂತೆ ಅವನ ಮಾತು ಕಥೆ ನಡೆದಿತ್ತು. ಸ್ವಲ್ಪ ಹೊತ್ತಿನಲ್ಲಿ ಮಗು ಅಳಲು ಶುರುಮಾಡಿತು, ಆಂಟಿ ಸುಮ್ಮನೆ ಕುಳಿತಿತ್ತು ಕೂಡಲೇ ಪರೇಶ ಹೇಳಿದ ಅದಕ್ಕ ಸ್ವಲ್ಪ ಹಾಲೋ ನೀರೋ ಬೇಕೇನೋ ಸ್ವಲ್ಪ ಕೊಡ್ರಿ ಸ್ವಲ್ಪ ಸಮಾಧಾನ ಮಾಡ್ರಿ ಅಂದ ಆದರೆ ಆ ಮಗು ಮತ್ತು ಜೋರಾಗಿ ಅಳತೊಡಗಿತು.

ಬೋಗಿಯಲ್ಲಿ ಇದ್ದವರೆಲ್ಲಾ ಆಚೆ ಈಚೆ ಹೋಗ ತೊಡಗಿದರು , ಇದು ನೋಡಿದ ಪರೇಶ ಹೇಳ್ದ ಸ್ವಲ್ಪ ಹಾಡು ಗೀಡು ಹಾಡಿ ಮಗೂಗೆ ಸಮಾಧಾನ ಮಾಡ್ರಿ ಆಂಟಿ ಅಂದ ಇದು ಕೇಳಿದ ಆ ಹೆಂಗಸು ಹಾಡು ಹೇಳಲು ಶುರು ಮಾಡಿದಳು . ನಾನು ಪೇಪರ್ ಅಡ್ಡ ಹಿಡಿದು ಕುಳಿತೆ ಆದರೆ ಪರೇಶ ಮಾತ್ರ ಹುಚ್ಚನಂತಾಗಿದ್ದಾ ಕಾರಣ ಅ ಹೆಂಗಸು ಹಾಡವುದು ಒಳ್ಳೆ ಹಾಡು ಶಬ್ದ ಮಾತ್ರ ಗಂಡಸಿನದು ' ಹಿಂದಿ ನಟ ಅಮ್ಬರೀಶ್ಪುರಿ' ಯಾ ಶಬ್ದ ಅದು ಕೇಳುತ್ತಿದ್ದಂತೆ ಪರೇಶ ಹುಚ್ಹ ನಂತೆ ಆಡತೊಡಗಿದ .

ನಾನು ಪೇಪರ್ ಅಡ್ಡ ಹಿಡಿದು ನಗತೊಡಗಿದೆ ಮಗು ಮಾತ್ರ ಶಾಂತವಾಗಿತ್ತು ಬೋಗಿಯಲ್ಲಿ ಹೆಂಗಸಿನ ಶಬ್ದ ಬಹಳ ಕರ್ಕಶವಾಗಿತ್ತು . ಅಷ್ಟರಲ್ಲಿ ಪರೇಶ , ಅವ್ವ , ತಾಯಿ , ಅಮ್ಮ , ಕೈ ಮುಗಿತೀನಿ ಕಾಲಿಗ್ ಬೀಳ್ತೀನಿ ದಯವಿಟ್ಟು ಆ ಮಗೂನೆ ಅಳ್ಳಿ ಬಿಡವ್ವ , ನಿಂದೇನ್ ಬಾಯಿ ನ ಹಳೆ ರೇಡಿಯೋ ನ ,.

ನಿನ್ ಗಂಡ ಎಲ್ಲಿ ? ಅವ್ರು ಬಸ್ಸಲ್ಲಿ ಹೋದ್ರು ನಂಗೆ ಟ್ರೈನಲ್ಲಿ ಬಾ ಅಂದ್ರು

ನೋಡುದ್ರ ಸಾರ್ ಬೋಳಿಮಗ ಎಷ್ಟು ಶಾಣ್ಯ ಇದಾನ್ ,,,...,,,...!

No comments:

Post a Comment