Thursday 20 August 2009

ಗೊತ್ತಿದ್ದರೆ ಹೇಳ್ಬೇಕು ಇಲ್ಲದಿದ್ದರೆ ಸುಮ್ನೆ ಕೂರಬೇಕು

ಇಂದು ಬೆಳಗ್ಗೆ ನನ್ನ ಆಫೀಸಿನ ಹತ್ತಿರ ಒಬ್ಬ ವ್ಯಕ್ತಿ please can you tell me were is B H S ಎಂದು ಕೇಳಿದ ನಾನಂದೆ ನೆಕ್ಸ್ಟ್ ಸಿಗ್ನಲ್ ಲೆಫ್ಟ್ o k saar thanku ಎಂದ ವ್ಯಕ್ತಿ ಎ ಇಲ್ಲೇ ಹತ್ತ್ರ ಕಣೋ ಎಂದು ಆ ವ್ಯಕ್ತಿ ಇನ್ನೊಬ್ಬನಿಗೆ ಕನ್ನಡದಲ್ಲಿ ಹೇಳಿದ. ತಕ್ಷಣ ನಾನು ಓ ಕನ್ನಡಾನ ಅಂದೇ, ಓ ಹೌದು ಸಾರ್ ಎಂದು ಸ್ವಲ್ಪ ಕುಶಲೋಪರಿ ಯಾಯ್ತು. ೩ ಜನರಿಗೂ ಕುಶಿಯಾಯಿತು ಮತ್ತೆ ತಮ್ಮ ತಮ್ಮ ಕೆಲಸಗಳಿಗೆ ಹೊರಟೆವು.

ನನಗೆ ಮಾತ್ರ ಒಂದು ಡೈಲಾಗ್ ನೆನೆಪಾಯ್ತು " ಗೊತ್ತಿದ್ರೆ ಹೇಳ್ಬೇಕು ಇಲ್ಲದಿದ್ದರೆ ಸುಮ್ನೆ ಕೂರಬೇಕು " ಇದು ಅಂದು ಪರೇಶ ನನಗೆ ಹೇಳಿದ್ದು. ಒಂದು ದಿನ ಬೆಳಗ್ಗೆ ಒಬ್ಬರು ಯಜಮಾನರೊಂದಿಗೆ ಸೈಕಲ್ ಶಾಪ್ ಬಾಬು ನಮ್ಮ ಮನೆಯ ಹತ್ತಿರ ಬಂದ ಬಂದವನೇ ಸಾರ್ ಇವರು ತುಮಕೂರಿಂದ ಬಂದಿದ್ದಾರೆ ಇಲ್ಲಿ ಯಾರೋ ಲೆಕ್ಚರ್ ಹೊಸದಾಗಿ ಬಂದಿದಾರಂತಲ್ಲ ಅವರ ತಂದೆ ಇವರು, ಆ ಮನೆ ಗೊತ್ತಿಲ್ಲ ಇವ್ರಿಗೆ ಸ್ವಲ್ಪ ಹೇಳಿದ್ರೆ ಕರ್ಕೊಂಡು ಹೋಗ್ ಬಿಡ್ತಿದ್ದೆ ಅಂದ .

ಓ ಆ ಲೆಕ್ಚರ್ ಮನೆ ಅಲ್ವೇನೋ ಗೊತ್ತು ಬಿಡೋ ಈ ರೋಡಲ್ಲಿ ನೇರ ಹೋದ್ರೆ ಒಂದು ದೇವಸ್ಥಾನ ಐತಲ್ಲ ಗೊತ್ತ ? ಅದೆಲ್ ಸಾರ್ ದೇವಸ್ಥಾನ , ಹೋಗ್ಲಿ ನೇರ ಬಲಗಡೆ ಹೋದ್ರೆ ಮಸಿದಿ ಐತಲ್ಲ ಗೊತ್ತ ? ಅದೆಲ್ ಸಾರ್, ಹೋಗ್ಲಿ ಪ್ರೈಮರಿ ಸ್ಕೂಲ್ ಗೊತ್ತ ? ಸ್ಕೂಲ ಅದೆಲ್ ಸಾರ್ . ಏನು ಬೇಡ ನ್ಯೂಸ್ ಪೇಪರ್ ಬುಕ್ ಎಲ್ಲಾ ಮಾರೋ ಅಂಗ್ಡಿ ಐತಲ್ಲ ಗೊತ್ತ, ನಂ ಏರಿಯದಲ್ಲಿ ಬುಕ್ ಅಂಗ್ಡಿ ಐತಾ ಅದೆಲ್ ಸಾರ್, ಯಾಕ್ ಇರಬಾರದ ಎಂದು ಸಿಟ್ಟಿನಲ್ಲಿ ನಾನು ಕೇಳಿದೆ ನಿಂಗ ಈ ಏರಿಯದಲ್ಲಿ ಬೇರೆ ಏನಾದ್ರೂ ಗೊತ್ತೈತ ಅಂದೇ, ನೀವ್ಯಾಕ್ ಸಿಟ್ಟ ಆಗ್ತೀರ ಸಾರ್ ಅಂದ. ಅಷ್ಟರಲ್ಲಿ ಪರೆಶನ ತಾಯಿ ನೀರು ತುಂಬುತ್ತಿದ್ದವರು ತಡಿಯಪ್ಪ ಪರೆಶನ್ಗೆ ಕೇಳಾಣ ಅಂದು ಪರೆಶನಿಗೆ ಕರೆದರು.

ಪರೇಶ ಬಂದವನೇ ಏನೋ ಹಲ್ಕಾ ನನ್ಮಗನೇ ಬೆಳಗ್ಗೆನೇ ಯಾರ್ಗೋ ಕರ್ಕೊಂಡು ಬಂದಿದಿಯ ಏನ್ ಬೇಕಾಗಿತ್ತೋ ಅಂದ. ಇಲ್ಲ ಕಣೋ ಇವರು ತುಮಕೂರಿಂದ ಬಂದಿದ್ದಾರೆ ಇವ್ರ ಮಗ ಲೆಕ್ಚರ್ ಇಲ್ಲಿ ಹೊಸದಾಗಿ ಬಂದಿದಾರಂತೆ ಅವ್ರ ಮನೆ ಬೇಕಂತೆ. ಅದಕ್ಕೆ ಪರೇಶ ಏನ್ಸಾರ್ ಅವ್ರು ನಿಮ್ ಫ್ರೆಂಡ್ ಅಲ್ವ ನಿಮಿಗ್ ಗೊತ್ತಲ್ಲ ಅವ್ರ ಮನೆ ಹೇಳಾಕ್ ಆಗ್ಲಿಲ್ವಾ ಅಂದ . ಅಲ್ಲ ಕಣೋ ಪರೇಶ ಇವ್ನಿಗೆ ಹೆಂಗ್ ಹೇಳುದ್ರು ಅರ್ಥ ಆಗ್ತಿಲ್ಲ ಅಂದೇ. ಓ ಹೋ ಹಂಗ ,,

ಬಾಬು ಬಾರೋ ಇಲ್ಲಿ ಇಸ್ಪೀಟ್ ಕ್ಲಬ್ ಗೊತ್ತೇನೋ ? ಹ್ಞೂ ಗೊತ್ತು , ಅದರಿಂದ ಮುಂದೆ ಹೋದ್ರೆ ಬಲಗಡೆ ಮಟ್ಕಾ(ಓ ಸಿ) ನಾಗನ ಅಂಗ್ಡಿ ಗೊತ್ತೇನೋ ಹ್ಞೂ ಗೊತ್ತು , ಸ್ವಲ್ಪ ಮುಂದೆ ಹೋಗಿ ಅಲ್ಲಿಂದ ಎಡಗಡೆ ಹೋದ್ರೆ ಶರಾಬ್ ಅಂಗ್ಡಿ ಗೊತ್ತೇನೋ ಹ್ಞೂ ಗೊತ್ತು , ಅದರ ಎದುರುಗಡೆ ಫೀಲ್ಡಲ್ಲಿ ಒಂದು ಬೋರ್ವೆಲ್ ಐತೆ ಬರಿ ಹುಡುಗಿಯರೇ ನೀರ್ ತುಂಬ್ತಾ ಇರ್ತಾರ್ ನೋಡೋ ಹ್ಞೂ ಹ್ಞೂ ಹೇಳು, ಅಲ್ಲಿ ನಿಂತು ನೋಡುದ್ರೆ ಹೊಸ ಬಿಲ್ಡಿಂಗ್ ಕಾಣ್ತೀತ್ ನೋಡು ಅದೇ ನಂ ಹೊಸ ಲೆಕ್ಚರ್ ಮನೆ. ಓ ಗೊತ್ತಾಯ್ತು ಬಿಡಪ್ಪ.

ಇಷ್ಟು ಹೇಳಾಕ್ಕೆ ಒಂದು ಗಂಟೆಯಿಂದ ಇವ್ರು ದೇವಸ್ಥಾನ - ಮಸೀದಿ - ಬುಕ್ ಅಂಗ್ಡಿ - ಸ್ಕೂಲು ಒಳ್ಳೆ ಕಥೆ ಆಯ್ತು ಎ ಬರ್ರಿ ಯಜಮಾನ್ರೆ ಅಂತ ಬಾಬು ಹೊರಟ.
ಕೂಡಲೇ ಪರೇಶ ಯಾರಿಗೆ ಹೆಂಗ್ ಅಡ್ದ್ರೆಸ್ ಹೇಳ್ಬೇಕು ಅನ್ನೋದು ಒಂದು ಕಲೆ. ಅದು ಬಿಟ್ಟು ಸುಮ್ಮನೆ ಜನ ಅದೇನೋ ಹೇಳ್ತಾರಲ್ಲ ಹಂಗೆ. " ಸುಮ್ಮನೆ ಇರಲಾರದೆ ಇರುವೆ ಬಿಟ್ಕೊಂದ್ರು ಅಂತ "

1 comment:

  1. ಇಸ್ಮಾಯಿಲ್,

    ಕೆಲವು ಜನ ಸರಿಯಾದ ಅಡ್ರೆಸ್ ಗೂತ್ತಿಲ್ಲದಿದ್ರೂ ತಾವು ಮಹಾ ಪರೋಪಕಾರಿ ಅನ್ನೋ ಪೋಸು ಕೊಟ್ಟುಕೊಂಡು ಏನೇನೋ ಅಡ್ರೆಸ್ ಹೇಳಿ ಅಡ್ರೆಸ್ ಕೇಳಿಕೊಂಡು ಬಂದವರನ್ನು ಫಜೀತಿಗೀಡು ಮಾಡ್ತಾರೆ. ಗೊತ್ತಿಲ್ಲ ಅಂದ್ರೆ ಗೊತ್ತಿಲ್ಲ ಅಂತ ಹೇಳಿದ್ರೆ ಆಯ್ತು, ಮತ್ತೊಬ್ಬರಿಗೆ ಸಹಾಯ ಮಾಡೋಕೆ ಆಗದಿದ್ರೂ ಪರವಾಗಿಲ್ಲ. ಏನೇನೋ ತಪ್ಪು ಮಾಹಿತಿ ನೀಡಿ ತೊಂದರೆಯಂತೂ ಮಾಡಬಾರದು, ಅಲ್ವಾ.

    - ಉಮೇಶ್

    ReplyDelete