Wednesday 17 June 2009

ಕೆಸರಿನಲ್ಲಿ ಮುಳುಗೆದ್ದ ರಾಯ್ದು

ಒಂದು ದಿನ ಮದ್ಯಾಹ್ನ ನಾನು ಮನೆಗೆ ಬರುತ್ತಿದ್ದಾಗ ನಮ್ಮ ಬಿ. ಹೆಚ್. ರೋಡ್ ನಲ್ಲಿರುವ ವಿನಾಯಕ ಟಾಕಿಸ್ ಪಕ್ಕದಲ್ಲಿರುವ ಲಾರಿ ಸ್ಟ್ಯಾಂಡ್ ಹತ್ತಿರ ದೊಡ್ಡ ಜನ ಸಮೂಹ ಆಚೆ ಈಚೆ ಓಡುತ್ತಿದ್ದರು.
ಕಾರಣ ಇಷ್ಟೇ ನಮ್ಮ ' ರಾಯ್ದು ' ತನ್ನ ಎರಡು ಕೈಗಳ ತುಂಬ ಕೆಸರನ್ನು ಮಾಡಿಕೊಂಡಿದ್ದಾನೆ , ಅವನ ಎದುರು ಒಂದು ವೆಕ್ತಿ ಬಿಳಿ ವಸ್ತ್ರದಲ್ಲಿದ್ದ ಮನುಷ್ಯ ಸ್ವಲ್ಪ ದೊರದಲ್ಲಿ ನಿಂತು ರಾಯ್ದು ಗೆ ಬೈತಿದ್ದಾನೆ , ಆ ಬಿಳಿವಸ್ತ್ರದಲ್ಲಿದ್ದ ವೆಕ್ತ್ಹಿಯ ಮುಖ ಬಟ್ಟೆ ಎಲ್ಲಾ ಕೆಸರಿನಲ್ಲಿ ಮುಳುಗಿದೆ. ಆ ರಂಗ ನೋಡಿದ ಕೂಡಲೇ ತಿಳಿದು ಹೋಯ್ತು ರಾಯ್ದು ಮಾಡಿರುವ ಕೆಲಸ ಇದು ಅಂತ. ಕಾರಣ ಅಲ್ಲೇ ಎದುರು ಮಹಾ ಸಾಗರದಂತ ದೊಡ್ಡ ಚರಂಡಿ ಇದೆ.
ಈ ಚರಂಡಿ ಎಂದರೆ ನಗರದ ಎಲ್ಲ ಕೊಳಕು, ತಳುಕು, ಹೊಳಪು, ಹೊತ್ತು ಸಾಗುವ ಚರಂಡಿ-ಸಾಗರ ಇದ್ರಲ್ಲಿ ಯಾರಾದರು ಬಿದ್ದರೆ ಅವನು ಶುದ್ದಃನಾಗಬೇಕಾದರೆ ನೇರ ಗಾಜನೂರು ಡ್ಯಾಂನಲ್ಲಿ ಹೋಗಿ ಮುಳುಗಬೇಕು ಅಷ್ಟೆ.
ಒಂದು ಕಾಲದಲ್ಲಿ ಸುಮಾರು ೨೦ -೩೦ ಲಾರಿಗಳ ಸಾಹುಕಾರನಾಗಿದ್ದ ರಾಯ್ದು ಈಗ ಇಲ್ಲಿ ಎರಡು ಕೈಗಳಲಿ ಕೆಸರು ಮಾಡಿಕೊಂಡು ನಿಂತು ಎಲ್ಲರಿಗು ಹೆದರಿಸುತ್ತ ' ಹಲ್ಕಾ ನನ್ಮಕ್ಳ ' ಯಾರದ್ರು ಹತ್ರ ಬಂದ್ರೆ ನೋಡ್ರಿ ಚಂದ್ರು ಗೆ ಹೆಂಗೆ ಕೆಸರು ಹಾಕಿದಿನೋ ಹಂಗೆ ನಿಮಗೂ ಹಾಕ್ತೀನಿ ಅಂತ ಕೂಗ್ತಾ ಇದ್ದಾ .

ಛೆ ! ಮನುಷ್ಯ ಯಾವುದಾದರು ಕೆಟ್ಟ ಚಟಗಳಿಗೆ ದಾಸನಾದರೆ ಅವನ ಪರಿಸ್ತಿತಿ ಹೇಗೆ ಆಗುತ್ತದೆ ಎಂಬುದಕ್ಕೆ ರಾಯ್ದು ಒಂದು ಜೀವಂತ ಉದಾಹರ್ಣೆಯಾಗಿದ್ದ. ೨೦- ೩೦ ಲಾರಿಗಳ ಸಾಹುಕಾರ, ಆ ಘನತೆ ಗಾಂಭೀರ್ಯ, ಆ ಗೌರವ ಅವನ ದೊಡ್ಡ ಮನೆ, ಕಾರು , ಬೆಳಗ್ಗೆ ಅಲ್ಲಿ ನಿಲ್ಲುತ್ತಿದ್ದ ಕೆಲಸದ ಜನರ ಸಾಲು, ಅವನಿಗಿದ್ದ ರಾಜಕೀಯ ಸಂಬಂದಗಳು, ಅವನ ಎದುರು ನಿಂತು ಮಾತನಾಡುವ ಧೈರ್ಯ ಯಾರಿಗಿತ್ತು , ಅವನು ಎದುರು ಬರುತ್ತಿದ್ದರೆ ಜನ ಅವನಿಂದ ದೂರ ದೂರ ಸರಿಯುತ್ತಿದ್ದರು ಆ ಗೌರವ ಅವನಿಗಿತ್ತು .
ಆ ರಾಯ್ದುವಿಗೆ ಇಂದು ಜನ ಹೆದರಿ ಆಚೆ ಈಚೆ ಓಡುತ್ತಿದ್ದಾರೆ ' ಗೌರವ ದಿಂದಲ್ಲ ' ಅವನ ಕುಡಿತದ ವಾಸನೆ ಇಂದ,
ಆ ಕೈಗಳಲಿ ತುಂಬಿರುವ ಕೆಸರಿಂದ, ಅವನ ಬಾಯಿ ಇಂದ ಹೊರಡುತ್ತಿರುವ ಕೆಟ್ಟ ಮಾತುಗಳಿಂದ,
ಅದೇ ಹೇಳೋದು ಮನುಷ್ಯ ಹಾಳಾಗಲು ಒಂದು ಕೆಟ್ಟ ಚಟ ಸಾಕು ಅಲ್ಲಿಂದ ಅವನ ಅವನತಿ ಪ್ರಾರಂಭ .
ಒಮ್ಮೆ ಕುಡಿತ ಪ್ರಾರಂಭವಾದರೆ ಸಾಕು ಬಾಕಿ ಚಟಗಳು ಅದರದೇ ಸಂಗಾತಿಗಳಾಗಿ ಬರ್ತ್ತವೆ .
ಅಷ್ಟು ದೊಡ್ಡ ಸಾಹುಕಾರ ಇವತ್ತಿನ ಪರಿಸ್ಥಿತಿಗೆ ತಲುಪಿರ್ವುದು ಹೇಗೆ ಗೊತ್ತಲ್ಲ .
ಈಗವನ ಬಳಿ ಏನು ಇಲ್ಲ, ಅಲ್ಲಿ ಇಲ್ಲಿ ರೋಡ್ ಸೈಡಲ್ಲಿ ಮಲುಗುತ್ತಾನೆ , ಅವನದೇ ಲಾರಿಗಳು ಸಾಲಾಗಿ ನಿಲ್ಲುತಿದ್ದ ಜಾಗದಲ್ಲಿ ಈಗ ಬೇರೆಯವರ ಲಾರಿಗಳು ನಿಲ್ಲುತ್ತಿವೆ. ಇವನ ಬಳಿ ಕೆಲಸ ಮಾಡುತ್ತಿದ್ದವರೆಲ್ಲ ಈಗ ಸಾಹುಕಾರ್ ಆಗಿದ್ದಾರೆ . ಇವನೀಗ ಬ್ರೋಕರ್ ಅಂದರೆ, ಆಚೆ ಈಚೆ ಲಾರಿ ಬಾಡಿಗೆ ಕೇಳಿ ಬರುವವರನ್ನು ಸ್ಟ್ಯಾಂಡ್ ತಂದು ಅವರಿಗೆ ಲಾರಿಯವರಿಗೆ ಪರಿಚೈಸುತ್ತಾನೆ ಇದರಿಂದ ಲಾರಿಯವರು ಇವನಿಗೆ ೫- ೧೦ ರೂ. ಕೊಡುತ್ತಾರೆ , ತಕ್ಷಣ ಇವನು ಸಿಕ್ಕ ಹಣದಲ್ಲಿ ಹೋಗಿ ಕುಡಿದು ಬರುತ್ತಾನೆ, ಇದಿಷ್ಟು ಇವನ ದಿನಚರಿ .
ಇಷ್ಟೆಲ್ಲಾ ಆದರು ಇವನ ಮಾತುಗಳಿಗೆ ಕೊರತೆ ಇಲ್ಲ, ದೊಡ್ಡ ದೊಡ್ಡ ಮಾತುಗಳು ಕುಡಿದಾಗ ಡೈಲಾಗ್ ಬೇಕಾದಷ್ಟು ಇರುತ್ತವೆ ಆದರೆ ಅದೆಲ್ಲ ಈಗ ಯಾರು ಕೇರ್ ಮಾಡುತ್ತಾರೆ, ಪೈಲ್ವಾನಂತೆ ಇದ್ದ ರಾಯ್ದು ಈಗ ನುಗ್ಗೆ ಕಾಯಿ ತರ ಇದ್ದಾನೆ.
ಕುಡಿತ enjoy ಹೇಳುತಿದ್ದವನು end-joy ಆಗಿದ್ದಾನೆ.
ಇಂದು ಆದದ್ದು ಇಷ್ಟೇ ಲಾರಿ ಬಾಡಿಗೆ ಬೇಕು ಅಂತ ಚಂದ್ರು ಸಾಹುಕಾರ್ ಸ್ಟ್ಯಾಂಡ್ ಗೆ ಬಂದಾಗ ಅವರನ್ನು ಲಾರಿಯವರ ಮದ್ಯೆ ಮಾತನಾಡಿಸುತ್ತ ರಾಯ್ದು ತನ್ನ ಹಳೆ ಪವರ್ ತೋರಿಸುತ್ತಾ ಚಂದ್ರು ಸಾಹುಕಾರ್ ಗೆ ಏನೋ ಬೈದು ಬಿಟ್ಟ, ಅದನ್ನು ಕೇಳಿದ ಚಂದ್ರು ರಾಯ್ದುನ ಕೆನ್ನೆಗೆ ಬಲವಾಗಿ ಹೊಡೆದ ಎಲ್ಲರು ನಗ ತೊಡಗಿದರು, ಇದರಿಂದ ಅವಮಾನಿತನಾದ ರಾಯ್ದು ಗೆ ಚಂದ್ರು ಗೆ ಹಿಂತಿರುಗಿಸಿ ಹೊಡೆಯಲು ಆಗವುದಿಲ್ಲ ಅಷ್ಟು ಶಕ್ತಿಯು ಇಲ್ಲ , ತಕ್ಷಣ ಹೋಗಿದ್ದೆ ಎದುರಿನ ಚರಂಡಿಯಿಂದ ಎರಡು ಕೈಗಳಲಿ ಕೆಸರು ಬಾಚಿ ತಂದು ಚಂದ್ರು ಸಾಹುಕಾರನ ಮೇಲೆ ರಪ್ ಅಂತ ಬೀಸಿ ಒಗೆದ , ಇದು ಕ್ಷಣ ಮಾತ್ರದಲ್ಲಿ ನಡೆದು ಹೋಯ್ತು , ಚಂದ್ರು ಮುಖ ಬಟ್ಟೆ ಎಲ್ಲ ಕೆಸರಿನಲ್ಲಿ ರಾಡಿಯಯಿತು. ಸೂಳೆ ಮಕ್ಳ ಅವನ್ ಹೊಡ್ದಾಗ ಎಲ್ಲ ನೋಡಿ ನಕ್ಕ್ತೀರೆನ್ರೋ , ಅಂತ ಆಚೆ ಈಚೆ ಇದ್ದವರಿಗೆಲ್ಲ ತನ್ನ ಕೆಸರಿನ ಕೈ ಇಂದ ಹೆದರಿಸ ತೊಡಗಿದ,.
ಒಂದು ಕಾಲದಲ್ಲಿ ಇವನ ಗೌರವ ಗಾಮ್ಬ್ಹಿರ್ಯಕ್ಕೆ ಹೆದರುತ್ತಿದ್ದ ಜನ ,.! ಇಂದು ಇವನ
ಕೆಸರು, ವಾಸನೆ, ಕೊಳಕು ಮಾತುಕೇಳಿ ಹೆದರಿ ಓಡುತ್ತಿದ್ದಾರೆ . ಯಾರು ಗೆಲ್ಲುತ್ತಾರೆ ?
ಯಾರು ಗೆಲ್ಲುತ್ತಾರೆ ?

1 comment:

  1. There is atleast one RAYDU like this in every village....Nice article

    ReplyDelete