Wednesday 22 July 2009

ಇವಳೇಕೆ ಹೀಗೆ ಮಾಡಿದಳು ಛೆ ಥೂ

ಇವಳೇಕೆ ಹೀಗೆ ಮಾಡಿದಳು ಛೆ ..!

೨೫ ವಯಸ್ಸಿನ ಇವಳು ೪೫ ವಯಸ್ಸಿನವನ ಜೊತೆಗೆ ಸೇರಿ ಕೊಂಡಳಲ್ಲ , ೨ ಸುಂದರವಾದ ಮಕ್ಕಳು ಅಷ್ಟೊಂದು ಪ್ರೀತಿಸುವ ಗಂಡ ಎಲ್ಲವನ್ನೂ ಬಿಟ್ಟು, ಅದು ಮದುವೆಯಾಗಿ ೫ ಮಕ್ಕಳ ತಂದೆ ಅವನದಾದ ಕುಟುಂಬ ಇದೆ ಅವನನ್ನು ಏನು ಕಂಡು ಸೇರಿ ಕೊಂಡಳು. ಇಷ್ಟೊಂದು ಕಟ್ಹೊರ ಮನಸ್ಸು ಹೆಣ್ಣಿಗೆ ಇರುತ್ತದೆಯೇ ಇವಳೊಂದು ಕಳಂಕ ಥೂ ,.ಹೇಗೆ ಲಜ್ಜೆ ಇಲ್ಲದೆ ಅವನೊಂದಿಗೆ ಓಡಾಡುತ್ತಾಳೆ .

ನಮ್ಮ ಶಿವಣ್ಣನ ಪತ್ನಿಯ ವಿಷ್ಯ ಹೀಗಾಯ್ತು ಎಂದು ತಿಳಿದಾಗ ನಮಗೆಲ್ಲರಿಗೂ ಸಿಟ್ಟು ಬಂದದ್ದು ಶಿವಣ್ಣನ ಮೇಲೆ, ಇದಕ್ಕೆಲ್ಲ ಕಾರಣ ಅವಳನ್ನು ಮದುವೆಯ ನಂತರ ಕಾಲೇಜ್ ಕಳಿಸಿದ್ದು ಕೆಲಸಕ್ಕೆ ಕಳಿಸಿದ್ದು. ಕಾರಣ ಮನೆಯವರೆಲ್ಲರೂ ಸೇರಿ ನೋಡಿದ ಹುಡುಗಿಯನ್ನು ಇವನು ಬಹಳ ಸಂತೋಷ ದಿಂದ ಮದುವೆಯಾಗಿ ಸಂತೋಷದಿಂದ ಜೀವನ ಸಾಗಿಸುತ್ತಿದ್ದ . ಮೊದಲನೆ ಮಗುವಾಯ್ತು ಸಂತೋಷ ಇನ್ನು ಜಾಸ್ತಿಯಾತು .

ಎರಡನೇ ಮಗು ಆಗುವುದರೊಳಗೆ ಅಲ್ಲೋಲ ಕೊಲ್ಲೊಲ ಗೊಳ್ಳುತ್ತಾ ಹೋಯ್ತು. ಶಿವಣ್ಣ ನಮ್ಮ ಕುಟುಂಬದ ಒಬ್ಬ ಸದಸ್ಯನಂತೆ ಅವನಿಲ್ಲದೆ ಯಾವ ಕಾರ್ಯ ಕ್ರಮಗಳು ಇರಲಿಲ್ಲ ಎಲ್ಲದರಲ್ಲೂ ಅವನ ಓಡಾಟ ನಾವು ಚಿಕ್ಕಂದಿನಿದಲೇ ನೋಡುತ್ತಾ ಬಂದವರು. ತಮಾಷೆ ಮಾಡವುದರಲ್ಲಿ ನಗಿಸುವುದರಲ್ಲಿ ನಿಸ್ಸೀಮ. ಏನೊಂದೂ ಕಾರ್ಯ ಗಳಿದ್ದರು ಒಂದು ವಾರ ಮೊದಲೇ ಇವನ ಓಡಾಟ ಜೋರು.

SSLC ಪಾಸಾಗಿದ್ದ ಕಾರಣ ಇವನಿಗೆ ಆಗ ಲೋನ್ ಸಿಕ್ಕಿತು ಅದರಲ್ಲಿ ಇವನು ಒಂದು ಇಂಜಿನಿಯರಿಂಗ್ ವರ್ಕ್ಸ್ ಶುರು ಮಾಡಿದ ಕೆಲ ದಿನಗಳಲ್ಲೇ ಇವನ ಮದುವೆ ನಡೆಯಿತು. ಇವನ ಹೆಂಡತಿ ಬಹಳ ಸುಂದರಿಯಾಗಿದ್ದಳು ಒಳ್ಳೆ ಸ್ವಭಾವದಳು ಸಹ ಒಳ್ಳೆ ಪ್ರೀತಿ ವಿಶ್ವಾಸ ಗಳಿಂದ ಮನೆಯನ್ನು ನೋಡಿಕೊಂಡು ಹೋಗುತ್ತಿದ್ದಳು. ಕಾಲ ಕ್ರಮೇಣ ಇವನು ಅವಳಿಗೆ ಹೇಳಿದ ನಿನ್ನದು SSLC ಆಗಿದೆಯಲ್ಲ ನಿನಗಿಷ್ಟ ವಿದ್ದರೆ ಕಾಲೇಜಿಗೆ ಸೇರಿಕೋ ಮನೆಯಲ್ಲಿ ಸುಮ್ಮನೆ ಕೂರುವುದಕ್ಕಿಂತ ನಿನಗೆ ಸಮಯ ಕಳೆಯಲು ಒಳ್ಳೆಯದು ಆಗುತ್ತದೆ ಎಂದಾಗ ಅದಕ್ಕವಳು ಆಯ್ತು ಎಂದಳು. ಇವನೇ ಒಂದು ದಿನ ಕಾಲೇಜ್ ಗೆ ಕೊಂಡು ಹೋಗಿ ಸೇರಿಸಿದ, ಅವಳು ಪಿ ಯು ಸಿ ಪಾಸ್ ಆಯ್ತು. ನಂತರ ಅವಳನ್ನು ಡಿಪ್ಲೋಮಾ ಗೆ ಸೇರಿಸಿದ ಈ ಮದ್ಯದಲ್ಲಿ ೨ ಮಕ್ಕಳಾದವು ಬಹಳ ಪ್ರೀತಿಯಿಂದ ಎಲ್ಲವು ಸರಿಯಾಗಿ ನಡೆಯುತ್ತಿದ್ದವು.

ಶಿವಣ್ಣನಿಗೆ ಹಣದ ಕೊರತೆಯೇನು ಇರಲಿಲ್ಲ ಕಾರಣ ಇವನ ವರ್ಕ್ ಶಾಪ್ ಚೆನ್ನಾಗಿ ನಡೆಯುತ್ತಿತ್ತು ರಜಾ ದಿನಗಳಲ್ಲಿ ಹೊರಗೆಲ್ಲ ಸುತ್ತುವುದಕ್ಕಾಗಿ ಹೋಗುತಿದ್ದರು. ಇವಳಿಗೆ ಏನು ಬೇಕಾದರೂ ತೆಗೆದು ಕೊಡುತ್ತಿದ್ದ ಮಕ್ಕಳಿಗೂ ಅಷ್ಟೆ ಚೆನ್ನಾಗಿ ನೋಡುತಿದ್ದ. ಹೀಗಿರುವಾಗ ಇವಳಿಗೆ ಕೆಲಸಕ್ಕೆ ಸೇರುವ ಉತ್ಸಾಹ ಶುರುವಾಯ್ತು ಆದರೆ ಶಿವಣ್ಣನಿಗೆ ಅದು ಅಷ್ಟೊಂದು ಕುಶಿಯಾದ ವಿಷಯವಾಗಲಿಲ್ಲ . ಆದರು ಒಲ್ಲದ ಮನಸಿನಿಂದ ಒಪ್ಪಿ ಕೆಲಸಕ್ಕೆ ಕಳಿಸಿದ ಅದೇ ಮೊದಲ ತಪ್ಪು ಅಲ್ಲಿಂದ ಶುರುವಾಯ್ತು ಇವಳ ಧಾರವಾಹಿ ಮೊದಲು ಎಲ್ಲ ಸರಿಯಾಗೇ ಇತ್ತು.

ಪರೇಶ ಒಂದು ದಿನ ಸಾರ್ ಏನು ತಿಳ್ಕೋ ಬ್ಯಾಡ್ರಿ ನಾನ್ ಒಂದು ಮಾತ್ ಹೇಳ್ತೀನಿ ಅಂದ ಏನ್ ಹೇಳೋ ಅಂದಾಗ ಸಾರ್ ನಂ ಶಿವಣ್ಣನ ಹೆಂಡ್ತಿ ಅವ್ರ ಕಂಪನಿ ಮೇನೇಜರ್ ಜೊತೆ ಬಾಳ ಓಡಾಟ ಅಂತ ನ್ಯೂಸ್ ಬಂದೈತ್ ಸಾರ್ ಅಂದ. ನಾನು ಏನು ಗೊತ್ತಿಲ್ಲ ದ ಹಾಗೆ ಹೌದ ನಿಂಗ್ ಯಾರು ಹೇಳಿದರೋ ಅಂದೇಯಾರು ಹೇಳದ ಬೇಡ ನಾನು ಬಾಳ ದಿನದಿಂದ ಎಲ್ಲ ಚೆಕ್ ಮಾಡಿ ನಿಮಿಗ್ ಹೇಳಿದ್ದು ಅಂದ. ಅಲ್ಲಿಗೆ ನನ್ನ ಮನಸ್ಸಿನಲ್ಲಿದ್ದ ಎಲ್ಲ ವಿವರಗಳು ಸರಿ ಎಂಬುದು ಖಾತ್ರಿಯಾಯ್ತು.

ಈ ವಿಷಯ ಶಿವಣ್ಣನಿಗೆ ಹೇಗೆ ಹೇಳುವುದು ಅಂತ ಯೋಚನೆಯಲ್ಲೇ ಬಹಳ ದಿನಗಳು ಕಳೆದು ಹೋಯ್ತು. ಒಂದು ದಿನ ಈ ವಿಷ್ಯ ಮನೆಯಲ್ಲಿ ಗೊತ್ತು ಇದರಿಂದಲೇ ಮನೆಯಲ್ಲಿ ದಿನವು ಜಗಳ ನಡೆಯುತ್ತಿದೆ ವಿಷಯ ಕೈ ಜಾರಿ ಹೋಗಿದೆ ಅಂತ ನನಗೆ ಶಿವಣ್ಣನ ಸ್ನೇಹಿತ ಬಾಬು ಹೇಳಿದಾಗ ಆಕಾಶವೇ ಕುಸಿದು ಬಿದ್ದಂತೆ ಆಯ್ತು. ಯಾವುದೇ ದುರಬ್ಯಾಸ ಗಳಿಲ್ಲದ ಸ್ವಾಭಿಮಾನಿ ಶಿವಣ್ಣನಿಗೆ ಇಂತ ಕೆಟ್ಟ ಹೆಂಗಸು ಎಲ್ಲಿಂದ ಸಿಕ್ಕಳು, ವಿಷಯ ಬಹಳ ರಾಜ ರೋಶಾಗಿ ಎಲ್ಲರ ಬಾಯಲ್ಲೂ ನಡೆದಾದ ತೊಡಗಿತು. ಪ್ರತಿದಿನ ಮನೆಯಲ್ಲಿ ಜಗಳ ಕಾರವಿಷ್ಟೇ ಅವಳಿಗೆ ಡೈವೋರ್ಸ್ ಬೇಕು ಅಷ್ಟೆ. ಆದರೆ ಅವಳೆಷ್ಟೇ ಜಗಳ ಮಾಡಿದರು ಇವನು ಮಾತ್ರ ಅವಳ ಯಾವ ಮಾತಿಗೂ ಉತ್ತರ ಕೊಡುತ್ತಿರಲಿಲ್ಲ , ಅದು ಅವಳಲ್ಲಿ ರೋಷ ಹೆಚ್ಹುವಂತೆ ಮಾಡುತಿತ್ತು.

ಇವನು ಸುಮ್ಮನಿರಲು ಕಾರಣ ಇವನ ೨ ಮಕ್ಕಳು ಅನಾಥರಾಗುತ್ತಾರೆ ಎಂಬ ಭಯ ಅದೇ ಇವನಿಗೆ ಎಲ್ಲಕ್ಕೂ ಸುಮ್ಮನಿರುವಂತೆ ಪ್ರೇರೇಪಿಸುತಿತ್ತು. ಆದರೆ ಅದು ಬಹಳ ದಿನ ನಡೆಯಲಿಲ್ಲ ಕೋರ್ಟು ಕೇಸು ಎಂದು ಶುರುವಾಗಿ ಮಕ್ಕಳು ಅನಾಥಾಶ್ರಮಕ್ಕೆ ಸೇರುವಂತೆ ಆಯ್ತು . ಅಷ್ಟಕ್ಕೂ ಬಿಡದೆ ಅವಳು ಇವನ ಆಸ್ತಿಯ ಮೇಲೆ ಅಟ್ಯಾಚ್ಮೆಂಟ್ ತಂದಳು. ಅದು ಕೋರ್ಟು ಸೇರಿತು. ಇವನು ದಾರಿಯಲ್ಲಿ ಬಿದ್ದ.

ಸ್ವಾಭಿಮಾನಿಯಾದ ಶಿವಣ್ಣ ಈಗ ಬೇರೆ ಕಡೆ ಕೆಲಸ ಮಾಡುತ್ತಾನೆ ದುಡಿದ ಹಣದಿದಂದ ತನ್ನ ಪಾಡು ಮತ್ತು ಅನಾಥಶ್ರಮದಲ್ಲಿರುವ ಆ ೨ ಮಕ್ಕಳನ್ನು ಅಗಾಗ ನೋಡಲು ತನ್ನ ಹಳೆಯ ಸೈಕಲನ್ನು ತುಳಿಯುತ್ತ ಅಲ್ಲಿಗೆ ಹೋಗುತ್ತಾನೆ. ಹೀಗೆ ಹೋಗುವಾಗ ಕೆಲೋವೊಮ್ಮೆ ಅವನ ಮಾಜಿ ಪತ್ನಿ ಇವನ ಪಕ್ಕದಲ್ಲೇ ತನ್ನ ಹೊಸ ಟೊಯೋಟಾ ಕಾರಿನಲ್ಲಿ ಸ್ಪೀಡಾಗಿ ಹೋಗುವುದನ್ನು ಇವನು ನೋಡಿಯು ನೋಡದಂತೆ ಸೈಕಲ್ ಜೋರಾಗಿ ತುಳಿಯುತ್ತಾನೆ ,.,.,.

ಹೇಗೆ ಸಾದ್ಯ ಸೈಕಲ್ ಟೊಯೋಟಾ ಕಾರಿನೊಂದಿಗೆ ಓಡಲು ಸಾದ್ಯವೇ ,,,,......,,,..?

1 comment:

  1. ಅವಳು ಹೆಣ್ಣಲ್ಲ ಹೆಣ್ಣಿನ ಜಾತಿಗೇ ಕಳಂಕ ತರುವವಳು. ಅಲ್ಲ ಒಬ್ಬಳು ಓಡಿ ಹೋದರೆ ಇಡೀ ದುನಿಯಾದಲ್ಲಿ ಬೇರೆ ಹೆಣ್ಣು ಸಿಕ್ಕಲಿಲ್ಲವಾ ಶಿವಣ್ಣನಿಗೆ. ಅವನೊಂದು ಪೆಂಗ.www.neradaari,blogspot.com

    ReplyDelete