ನಿಮಗೆ ನಿದ್ದೆ ಮಾಡ ಬೇಕೆ ,ಬೇಸರವೇಕೆ ಇದನ್ನು ಕಾಪಿ ಮಾಡಿಕೊಳ್ಳಿ .
ಹೌದು ಕಳೆದ ವರ್ಷ " ಓರಿಎಂಟಲ್ ಆರ್ಟ್ ಲಂಡನ್ " ನಲ್ಲಿ ೨೮ ಕೋಟಿ ೬೦ ಲಕ್ಷ ರೂಪಾಯಿ ಬೆಲೆ ಕಂಡ ಅಪರೂಪದ ಪೇಂಟಿಂಗ್ . by Gustav Bauernfeind , titled " The Gate of the Great Umayyed Mosque, Damascus. ಈ ಚಿತ್ರದ ಪ್ರಿಂಟ್ ಕಾಪಿಎನ್ನು ಗಲ್ಫ್ ನ್ಯೂಸ್ ನಿಂದ ಸ್ಕ್ಯಾನ್ ಮಾಡಿದ್ದು . ನನಗಂತೂ ಬಹಳ ಆಶ್ಚರ್ಯ ಉಂಟು ಮಾಡಿದ ಚಿತ್ರ ಅಸ್ಹೊಂದು ಚೆನ್ನಾಗಿದೆ , ಇನ್ನು ಬಹಳ ಚಿತ್ರಗಳಿದ್ದವು ಅವು ಸಹಾ ಒಂದಲ್ಲ ಒಂದು ರೀತಿ ಕುಶೀ ಕೊಡುವಂತವು .ಅದೇ ಮತ್ತೆ ಪರೆಶನ ಪರಾಕ್ರಮ ,.
ಎಲ್ಲ್ ಹೋಗಿದ್ದೋ ಹಾಳಾಗಿ ನೆನ್ನಇಂದ ನಿನ್ನ ಹುಡ್ಕ್ತಇದಿವಿ ಈಗ ಎಲ್ಲಿಂದ ಬರ್ತಿದಿಯ, ನಿನ್ನ ಅಮ್ಮನ ಅವಸ್ತೆ ಹೇಳತೀರದು ಅಂದೇ , ಇಲ್ಲ ಸಾರ್ ನಾನು ಬೆಂಗಳೂರಿಗೆ ಹೋಗಿದ್ದೆ ಅಂತ ಬಾಂಬ್ ಸಿಡಿಸಿದ ನಾನು ನಿಂತಲ್ಲೇ ದಂಗಾಗಿ ಹೋದೆ, ಅಲ್ಲ ಕಣೋ ನಿಮ್ಮ ಅಮ್ಮ ಹೇಳಿದ್ರು ಚಿಕ್ಕಪ್ಪನ ಮನೆಗೆ ನಿದಿಗೆ ಗೆ ಹೋಗ್ತೀನಿ ಅಂತ ಹೊದ್ಯಂತೆ ಅಲ್ಲೂ ತಲುಪಿಲ್ಲ ಮನೆಗೂ ಬಂದಿಲ್ಲ ಅಂತ ಗೋಳು ಕಣೋ ಅಂದೇ. ಈಗ ಬೇಗ ಮನೆಗೆ ಹೋಗು ಅಂದೇ ಹೋಗ್ತೀನ್ ಸಾರ್ ಅಂದ .,., ಸಾರ್ ಸಾಯಂಕಾಲ ಸಿಕ್ತೀರ ಅಂದ ನೋಡಾನ್ ತಗೋ ಅಂತ ನಾನು ಹೊರಟೆ, ಇದು ಬೆಳಗಿನ ಸಮಯ ೧೦ ಗಂಟೆಗೆ ಇವನು ರೋಡ್ನಲ್ಲಿ ಸಿಕ್ಕಾಗ ನಡೆದದ್ದು, ಆದರೆ ನಾನು ಮಾತ್ರ ಸಂಜೆ ವರೆಗೂ ಯೋಚಿಸಿದ್ದು ಒಂದೇ ನಿದಿಗೆ ಅಂತ ಹೇಳಿ ಬೆಂಗಳೂರು ಹೇಗೆ ತಲುಪಿದ ಅಂತ.
ಸಂಜೆ ನಾನು ಬರುವಾಗ ಕಾಂಪೌಂಡ್ ನ ಮೇಲೆ ಕುಂತಿದ್ದ, ಇವನು ನನ್ನ ನೋಡಿದ ಕೂಡಲೇ ಸಾರ್ ಬೆಂಗಳೂರು ತುಂಬ ಚಂದಗೈತ್ ಸಾರ್ ಅಂತ ಶುರು ಮಾಡಿದ .,.
ವಿಷ್ಯ ಏನಂತ ಸರಿಯಾಗಿ ಈಗ ಹೇಳೋ ಅಂದೇ, ಅದೇ ಸಾರ್ ನಮ್ಮ ತಾಯಿ ನಂಗೆ ತುಂಬ ಪ್ರೀತಿ ಮಾಡ್ತಾಲ್ ಸಾರ್, ಓಹೋ ಅದಕ್ಕೆ ನೀನ್ ಬೆಂಗಳೂರು ಹೋದ , ಅಲ್ಲಸಾರ್ ಅದು ಎನಾತ್ ಅಂದ್ರೆ ನಾನು ನಿನ್ನೆ ಸಂಜೆ ನಮ್ಮ ಚಿಕ್ಕಪನ ಮನೆ ಇಲ್ಲೇ ನಿದಿಗೆ ಹಂಗೆ ಹೊಗಾನ ಅಂತ ಬಸ್ ಹತ್ತಿದೆ ಅದು ನೋಡಿದ್ರೆ ಬೆಂಗಳೂರು ಬಸ್ ನಾನ್ ಸ್ಟಾಪ್ ನಂಗೆ ಗೊತ್ತಿಲ್ಲ, ಕಂಡಕ್ಟರ್ ಗರಂ ಆಗಿ ನಿದಿಗೆ ನಿಲ್ಸಲ್ಲ ಅಂದ ಭದ್ರಾವತಿ ಇಳಿ ಅಂದ , ನಾನ್ ಹೇಳ್ದೆ ನಾನ್ ಇಳಿದರೆ ನಿದಿಗೆ ಇಲ್ಲಾ ಅಂದ್ರೆ ಬೇರೆಕಡೆ ಇಳಿಯಲ್ಲ ಅಂದೇ ಅವನ್ಗು ನಂಗು ಜೋರ್ ಜಗಳ ಆಯ್ತು, ಆಮೇಲೆ ಯಾವಾಗ್ ನಿದ್ದೆ ಮಾಡಿದ್ನೋ ಗೊತ್ತಿಲ್ಲಾ ಬೆಂಗಳೂರಲ್ಲಿ ಎಚ್ಹರ ಆತು ಇಳ್ದು ಅಲೆಲ್ಲ ಸುತ್ತಿ ಕೈಯಾಗ್ ಇದ್ ವಾಚ್ ಮಾರಿ ಹೊಟ್ಲಾಗ್ ಊಟ ಮಾಡ್ದೆ ಆಮೇಲೆ ಶಿವರಾಜ್ಕುಮಾರ್ ಸಿನಿಮಾ ನೋಡ್ದೆ ಆಮೇಲೆ ಬಸ್ ಸ್ಟ್ಯಾಂಡ್ ವಾಪಸ್ ಬಂದೆ ಅಲ್ಲಿ ಡಿಪೋ ಮೇನೇಜರ್ ಹತ್ರ ಹೇಳ್ದೆ ನಿದಿಗಿ ಇಳೆಬೇಕಾಗಿತ್ತು ಇಲ್ ಇಳ್ದೆ ಅಂತ , ಅವರು ನಿನಗೀಗ ಎಲ್ಲಿ ಹೋಗ್ಬೇಕು ಅಂತ ಕೇಳಿದ್ರು ಶಿವಮೊಗ್ಗ ಅಂದೇ ನಿಂತಿರೋ ಬಸ್ ತೋರ್ಸಿ ಅದು ಹೋಗುತ್ತೆ ಅಂದ್ರು. ಅದರಾಗ್ ಬಂದ್ ಕುಂತೆ ಅಷ್ಟೆ ಅಂದ. ಅಲ್ಲ ಕಣೋ ದುಡ್ಡು ! ಹೋಗಬೇಕಾದ್ರೆ ಜಗಳ ದಿಂದ ಅವ್ನ್ ದುಡ್ಡು ಕೇಳಲಿಲ್ಲ , ಬರಬೇಕಾದರೆ ಡಿಪೋ ಮೇನೇಜರ್ ಹೇಳಿದಾರ್ ಅಂತ ಕಂಡಕ್ಟರ್ ಗೆ ಹೇಳಿದೆ ಅವ್ನು ಹೊರಗೆ ಡಿಪೋ ಮೇನೇಜರ್ ನಿಂತಿರುವುದು ನೋಡಿದ ನಂತರ ಸುಮ್ಮನಾದ , ಕೆ ಬಿ ಕ್ರಾಸಗೆ ಊಟ ತಿಂಡಿ ಎಲ್ಲ ಕೊಡುಸ್ದ ಮದ್ಯ ದಾಗ್ ಒಂದ್ ಜಾಗಾ ನಿಲ್ಲ್ಸ್ದಾಗ ವಡೆ ತಿಂಡಿ ಎಲ್ಲ ಅವ್ನೆ ತಂದು ಕೊಟ್ಟ ಈಗ ಶಿವಮೊಗ್ಗ ಬಸ್ಸ್ಟ್ಯಾಂಡ್ ಇಳಿಬೇಕಾದ್ರೆ ೫೦ ರೂ. ಜೋಬಗಿಟ್ಟ ನೋಡ್ರಿ ಬಾಳ ಒಳ್ಳೆಯ್ ಕಂಡಕ್ಟರ್ ಅಂತ ಕುಷಿಂದ ಹೇಳಿದ. ಮತ್ತೇನು ಹೇಳಿದ ಅಂತ ಕೇಳಿದೆ ಆರಾಮಾಗಿ ತಲುಪಿದೆ ಅಂತ ಹೇಳ್ರಿ ಡಿಪೋ ಮೇನೇಜರ್ ಗೆ ಅಂತ ಹೇಳಕ್ಕೆ ಹೇಳಿದ ನೀವೇ ಹೇಳ್ಬಿದ್ದ್ರಿ ಅಂತ ಬರ್ತ ಇದ್ದೆ ಆಗ ಕರದ್ ಡಿಪೋ ಮೇನೇಜರ್ ನಿಮಗೆ ಏನ್ ಆಗ್ಬೇಕು ಅಂತ ಕೇಳಿದ ನಮ್ಮ ಚಿಕ್ಕಪ್ಪ ಅಂದೇ ,..,,.,.,.,.,.,.

೧೯೭೦ ,,,೧೯೮೦,,, ೧೯೯೦,,, ನಾವು ಬೆಳೆದು ಬಂದಾ ದಾರೀ ಹೀಗಲ್ಲವೇ !!!!!!
ಹೌದು ದೂರದಿಂದ ನಿನ್ನ ಒಮ್ಮೆ ನೋಡುವಾಸೆ !
ಏನ್ ಸ್ವಾಮಿ ಅಲ್ಲಿ ಗುಬೈಯಲ್ಲಿ ಒಂಟೆ ಮೇಲೆ ಬೇಸಾಯ ಮಾಡ್ತಾರಂತೆ ಹೌದಾ ? ಸೂಪರ್ ಬಾಷೆಯಲ್ಲಿ ಗುಬಾಯಿ ಅಂದರೆ ದುಬಾಯಿ ಅಂತ. ನಾನು ಹೇಗೆ ಹೇಳಲಿ ನನ್ನ ೧೬ ವರುಷಗಳ ಜೀವನದಲ್ಲಿ ಅಲ್ಲಿ ಬೇಸಾಯ ಎಂಬುದೂ ನೋಡಿಲ್ಲ ಆದರೆ ಇರಬಹುದೇನೋ ಗೊತ್ತಿಲ್ಲ . ಈ ಸೂಪರ್ ಗೆ ಈ ವಿಷಯ ಯಾರು ಹೇಳಿರಬಹುದು ! ಅನ್ನುತ್ತಾ ಅದೆಲ್ಲ ಬೇಡ ನಾನು ಮುಂದಿನ ವಾರ ಹೋಗುವಾಗ ನನ್ನ ಜೊತೆ ನೀನು ಬಾ ಆಗ ಎಲ್ಲ ವಿಷಯ ನೀನೆ ಖುದ್ದು ನೋಡಿ ತಿಳಿಯಬಹುದು, ಅಲ್ಲಿ ಒಳ್ಳೆ ಸಂಬಳ ಸಹ ಸಿಗುತ್ತೆ ಎಂದೇ, ಅದಕ್ಕೆ ಸೂಪರ್ ಉತ್ತರ ಅಯ್ಯೋ ಸಂಬಳ ದುಡ್ಡು ಎಲ್ಲಾ ನಂಗೆ ಯಾಕೆ ಸಾಮಿ ನಾನು ಇಲ್ಲಿ ಆರಾಮಾವಾಗಿದ್ದಿನಿ ಸುಕವಾಗಿದ್ದೀನಿ ಸೂಪರ್ - ಸೂಪರ್ ಅಂತ ಜೋರಾಗಿ ನಕ್ಕು ಹೇಳಿದ, ನನಗಿಲ್ಲಿ ಎಲ್ಲರೂ ಚೆನ್ನಾಗೆ ನೋಡುತ್ತಾರೆ ಅಮ್ಮ ಅಕ್ಕ ವಾದ್ಯಾರ್ ಮಕ್ಕಳು ತುಂಬ ಚೆನ್ನಾಗೆ ಮಾತಾಡ್ತಾರೆ ಎಂದು ಹೇಳುತ್ತಾ ಒಂದು ತಮಿಳು ಹಾಡನ್ನು ಹಾಡಲು ಶುರುಮಾಡಿದ, ಅಂದರೆ ಒಂಟಿಯಾಗಿರುವ ಈ ಮನುಷ್ಯ ನಮ್ಮ ಮನೆಯವರನ್ನೆಲ್ಲ ಒಂದೊಂದು ಹೆಸರಿಂದ ತನ್ನದೇ ಆದ ಸಂಬಂದ ಗಳ ಹೆಸರಿನಲ್ಲಿ ಕರೆಯುತ್ತಾನೆ. ಹಬ್ಬ ಮದ್ವೆ ಇತರ ಕಾರ್ಯಕ್ರಮಗಳಿಗೆ ತನ್ನಿದಾಗುವ ಸಹಾಯ ಅಂದರೆ ಮನೆಯ ಸುತಮುತ್ತ ಗುಡಿಸುದು ಮನೆಯನ್ನು ಕಾಯೋದು ಇತರೆ ಕೆಲ್ಸಗಲ್ಲ್ನು ಹೇಳದೆಯು ಮಾಡುತ್ತಾನೆ.
ನನ್ನ ಹೆಸರು ಇಸ್ಮಾಯಿಲ್ ಎಂ ಕುಟ್ಟಿ
ನನ್ನ ಊರು ಮಲೆನಾಡಿನ ತವರೂರು ಶಿವಮೊಗ್ಗ,
ಕಲಿತದ್ದು ಸಹ್ಯಾದ್ರಿ ಕಾಲೇಜು
ಉದ್ಯೋಗ ಅಬು ಧಾಬಿ . ಯು ಏ ಇ
