Wednesday, 27 May 2009

ನಿದಿಗೆ ನ ಬೆಂಗಳೂರ

ಅದೇ ಮತ್ತೆ ಪರೆಶನ ಪರಾಕ್ರಮ ,.

ಎಲ್ಲ್ ಹೋಗಿದ್ದೋ ಹಾಳಾಗಿ ನೆನ್ನಇಂದ ನಿನ್ನ ಹುಡ್ಕ್ತಇದಿವಿ ಈಗ ಎಲ್ಲಿಂದ ಬರ್ತಿದಿಯ, ನಿನ್ನ ಅಮ್ಮನ ಅವಸ್ತೆ ಹೇಳತೀರದು ಅಂದೇ , ಇಲ್ಲ ಸಾರ್ ನಾನು ಬೆಂಗಳೂರಿಗೆ ಹೋಗಿದ್ದೆ ಅಂತ ಬಾಂಬ್ ಸಿಡಿಸಿದ ನಾನು ನಿಂತಲ್ಲೇ ದಂಗಾಗಿ ಹೋದೆ, ಅಲ್ಲ ಕಣೋ ನಿಮ್ಮ ಅಮ್ಮ ಹೇಳಿದ್ರು ಚಿಕ್ಕಪ್ಪನ ಮನೆಗೆ ನಿದಿಗೆ ಗೆ ಹೋಗ್ತೀನಿ ಅಂತ ಹೊದ್ಯಂತೆ ಅಲ್ಲೂ ತಲುಪಿಲ್ಲ ಮನೆಗೂ ಬಂದಿಲ್ಲ ಅಂತ ಗೋಳು ಕಣೋ ಅಂದೇ. ಈಗ ಬೇಗ ಮನೆಗೆ ಹೋಗು ಅಂದೇ ಹೋಗ್ತೀನ್ ಸಾರ್ ಅಂದ .,., ಸಾರ್ ಸಾಯಂಕಾಲ ಸಿಕ್ತೀರ ಅಂದ ನೋಡಾನ್ ತಗೋ ಅಂತ ನಾನು ಹೊರಟೆ, ಇದು ಬೆಳಗಿನ ಸಮಯ ೧೦ ಗಂಟೆಗೆ ಇವನು ರೋಡ್ನಲ್ಲಿ ಸಿಕ್ಕಾಗ ನಡೆದದ್ದು, ಆದರೆ ನಾನು ಮಾತ್ರ ಸಂಜೆ ವರೆಗೂ ಯೋಚಿಸಿದ್ದು ಒಂದೇ ನಿದಿಗೆ ಅಂತ ಹೇಳಿ ಬೆಂಗಳೂರು ಹೇಗೆ ತಲುಪಿದ ಅಂತ.

ಸಂಜೆ ನಾನು ಬರುವಾಗ ಕಾಂಪೌಂಡ್ ನ ಮೇಲೆ ಕುಂತಿದ್ದ, ಇವನು ನನ್ನ ನೋಡಿದ ಕೂಡಲೇ ಸಾರ್ ಬೆಂಗಳೂರು ತುಂಬ ಚಂದಗೈತ್ ಸಾರ್ ಅಂತ ಶುರು ಮಾಡಿದ .,.

ವಿಷ್ಯ ಏನಂತ ಸರಿಯಾಗಿ ಈಗ ಹೇಳೋ ಅಂದೇ, ಅದೇ ಸಾರ್ ನಮ್ಮ ತಾಯಿ ನಂಗೆ ತುಂಬ ಪ್ರೀತಿ ಮಾಡ್ತಾಲ್ ಸಾರ್, ಓಹೋ ಅದಕ್ಕೆ ನೀನ್ ಬೆಂಗಳೂರು ಹೋದ , ಅಲ್ಲಸಾರ್ ಅದು ಎನಾತ್ ಅಂದ್ರೆ ನಾನು ನಿನ್ನೆ ಸಂಜೆ ನಮ್ಮ ಚಿಕ್ಕಪನ ಮನೆ ಇಲ್ಲೇ ನಿದಿಗೆ ಹಂಗೆ ಹೊಗಾನ ಅಂತ ಬಸ್ ಹತ್ತಿದೆ ಅದು ನೋಡಿದ್ರೆ ಬೆಂಗಳೂರು ಬಸ್ ನಾನ್ ಸ್ಟಾಪ್ ನಂಗೆ ಗೊತ್ತಿಲ್ಲ, ಕಂಡಕ್ಟರ್ ಗರಂ ಆಗಿ ನಿದಿಗೆ ನಿಲ್ಸಲ್ಲ ಅಂದ ಭದ್ರಾವತಿ ಇಳಿ ಅಂದ , ನಾನ್ ಹೇಳ್ದೆ ನಾನ್ ಇಳಿದರೆ ನಿದಿಗೆ ಇಲ್ಲಾ ಅಂದ್ರೆ ಬೇರೆಕಡೆ ಇಳಿಯಲ್ಲ ಅಂದೇ ಅವನ್ಗು ನಂಗು ಜೋರ್ ಜಗಳ ಆಯ್ತು, ಆಮೇಲೆ ಯಾವಾಗ್ ನಿದ್ದೆ ಮಾಡಿದ್ನೋ ಗೊತ್ತಿಲ್ಲಾ ಬೆಂಗಳೂರಲ್ಲಿ ಎಚ್ಹರ ಆತು ಇಳ್ದು ಅಲೆಲ್ಲ ಸುತ್ತಿ ಕೈಯಾಗ್ ಇದ್ ವಾಚ್ ಮಾರಿ ಹೊಟ್ಲಾಗ್ ಊಟ ಮಾಡ್ದೆ ಆಮೇಲೆ ಶಿವರಾಜ್ಕುಮಾರ್ ಸಿನಿಮಾ ನೋಡ್ದೆ ಆಮೇಲೆ ಬಸ್ ಸ್ಟ್ಯಾಂಡ್ ವಾಪಸ್ ಬಂದೆ ಅಲ್ಲಿ ಡಿಪೋ ಮೇನೇಜರ್ ಹತ್ರ ಹೇಳ್ದೆ ನಿದಿಗಿ ಇಳೆಬೇಕಾಗಿತ್ತು ಇಲ್ ಇಳ್ದೆ ಅಂತ , ಅವರು ನಿನಗೀಗ ಎಲ್ಲಿ ಹೋಗ್ಬೇಕು ಅಂತ ಕೇಳಿದ್ರು ಶಿವಮೊಗ್ಗ ಅಂದೇ ನಿಂತಿರೋ ಬಸ್ ತೋರ್ಸಿ ಅದು ಹೋಗುತ್ತೆ ಅಂದ್ರು. ಅದರಾಗ್ ಬಂದ್ ಕುಂತೆ ಅಷ್ಟೆ ಅಂದ. ಅಲ್ಲ ಕಣೋ ದುಡ್ಡು ! ಹೋಗಬೇಕಾದ್ರೆ ಜಗಳ ದಿಂದ ಅವ್ನ್ ದುಡ್ಡು ಕೇಳಲಿಲ್ಲ , ಬರಬೇಕಾದರೆ ಡಿಪೋ ಮೇನೇಜರ್ ಹೇಳಿದಾರ್ ಅಂತ ಕಂಡಕ್ಟರ್ ಗೆ ಹೇಳಿದೆ ಅವ್ನು ಹೊರಗೆ ಡಿಪೋ ಮೇನೇಜರ್ ನಿಂತಿರುವುದು ನೋಡಿದ ನಂತರ ಸುಮ್ಮನಾದ , ಕೆ ಬಿ ಕ್ರಾಸಗೆ ಊಟ ತಿಂಡಿ ಎಲ್ಲ ಕೊಡುಸ್ದ ಮದ್ಯ ದಾಗ್ ಒಂದ್ ಜಾಗಾ ನಿಲ್ಲ್ಸ್ದಾಗ ವಡೆ ತಿಂಡಿ ಎಲ್ಲ ಅವ್ನೆ ತಂದು ಕೊಟ್ಟ ಈಗ ಶಿವಮೊಗ್ಗ ಬಸ್ಸ್ಟ್ಯಾಂಡ್ ಇಳಿಬೇಕಾದ್ರೆ ೫೦ ರೂ. ಜೋಬಗಿಟ್ಟ ನೋಡ್ರಿ ಬಾಳ ಒಳ್ಳೆಯ್ ಕಂಡಕ್ಟರ್ ಅಂತ ಕುಷಿಂದ ಹೇಳಿದ. ಮತ್ತೇನು ಹೇಳಿದ ಅಂತ ಕೇಳಿದೆ ಆರಾಮಾಗಿ ತಲುಪಿದೆ ಅಂತ ಹೇಳ್ರಿ ಡಿಪೋ ಮೇನೇಜರ್ ಗೆ ಅಂತ ಹೇಳಕ್ಕೆ ಹೇಳಿದ ನೀವೇ ಹೇಳ್ಬಿದ್ದ್ರಿ ಅಂತ ಬರ್ತ ಇದ್ದೆ ಆಗ ಕರದ್ ಡಿಪೋ ಮೇನೇಜರ್ ನಿಮಗೆ ಏನ್ ಆಗ್ಬೇಕು ಅಂತ ಕೇಳಿದ ನಮ್ಮ ಚಿಕ್ಕಪ್ಪ ಅಂದೇ ,..,,.,.,.,.,.,.

2 comments:

 1. ಚೆನ್ನಾಗ್ ಬರೇತಿರಿ ಸರ್..ಇವತ್ತೇ ಮೊದಲು ಬಂದಿದ್ದು ನಿಮ್ಮ ಬ್ಲಾಗಿಗೆ. ಇನ್ನು ಬರ್ತಾ ಇರ್ತೀನಿ. ನಿಮ್ಮ ಪ್ರೋತ್ಸಾಹದ ಮಾತುಗಳಿಗೆ ಧನ್ಯವಾದಗಳು.
  -ಧರಿತ್ರಿ

  ReplyDelete
 2. ಇಸ್ಮಾಯಿಲ್ ಹೇಗಿದ್ದೀರಿ ಹೊರ ನಾಡ್ನಾಗೆ?? ನನ್ತರ..??? !!! ನಾನು ಕುವೈಟ್ನಲ್ಲಿದ್ದೀನಿ
  ಬಸ್ನಲ್ಲಿ ಪರದಾಟದ ಜೊತೆಗೆ ನಾನ್-ಸ್ಟಾಪ್ ಪರದಾಟ ಚನ್ನಾಗಿದೆ...ಹಳ್ಳಿ ಜನಕ್ಕೆ ಸರಿಯಾಗಿ ಮಾಹಿತಿ ಕೊಡದೇ ನಾನ್-ಸ್ಟಾಪ್ ಬಸ್ಸಿಗೆ ಹತ್ತಲು ಬಿಟ್ಟಿದ್ದು ಕಂಡಕ್ಟರದೇ ತಪ್ಪು..
  ನಿಮ್ಮ ಕವನ ಸಹಾ ಚನ್ನಾಗಿ ಮೂಡಿದೆ..ಬ್ಲಾಗುಮೈತ್ರಿ ಮುಂದುವರೆಸೋಣ...

  ReplyDelete