
ಸಾರ್ ನನ್ನ ಹೆಸರು ಏನ್ ಗೊತ್ತ ?
ನನಗೆ ೩ ಹೆಸರುಗಳಿವೆ ಅದರಲ್ಲಿ ನಿಮಗೆ ಯಾವ್ದು ಬೇಕು
೧ ಅಬ್ಬು , ೨ ಸೂಪರ್ಮ್ಯಾನ್ ೩ ಸ್ಪೈಡರ್ಮ್ಯಾನ್
ಇದು ನಮ್ಮ ಅಬ್ಬು ಅವನ್ ಪಾಸು ಪೋರ್ಟ್ ಏನ್ ಕೊಇರಿ ಬಂದಾಗ ಪೋಲಿಸ್ ಸ್ಟೇಷನಲ್ಲಿ ಆಫೀಸರ್ ಕೇಳಿದ ಪ್ರಶ್ನೆಗೆ ಕೊಟ್ಟ ಉತ್ತರ. ಅಂದರೆ ಆಫೀಸರ್ ಅವನ ಬಳಿ ನಿನ್ನ ಹೆಸರು ಏನಪ್ಪಾ ಅಂತ ಕೇಳಿದಾಗ ಕೊಟ್ಟ ಉತ್ತರ , ಅದಕ್ಕವರು ಬಹಳ ಕ್ಯೂಟ್ ಇದನ್ರಿ ಹುಡುಗ ಅಂತ ನಗತೊಡಗಿದರು. ನಂತರ ಹೇಳಿದ್ದು ನಾನು ತುಂಬ ಓದಿ ಕಮಿಷನರ್ ಆಗ್ತೀನಿ ಸಾರ್.
ಅವನು ಹೀಗೆ ಒಂದಲ್ಲ ಒಂದು ಹೇಳ್ತಾ ಇರ್ತಾನೆ, ಗಣೇಶನ ದೊಡ್ಡ ಫ್ಯಾನ್ ಅವನ ಎಲ್ಲ ಹಾಡುಗಳನ್ನು ಹಾಡುತ್ತಾ ಇರುತ್ತಾನೆ. ಇತ್ತೀಚಿಗೆ ಗಜನಿ ಸಿನಿಮಾ ನೋಡಿ ನನಗೆ ಅದೇ ರೀತಿ ಹೇರ್ ಕಟ್ ಬೇಕು ಅಂತ ಮಾಡಿಸಿ ಕೊಂಡ ಅದೇ ಚಿತ್ರ ಇದು. ನಂತರ ಕೆಲ ಒಮ್ಮೆ ನಾನು ಇಂಡಿಯನ್ ಜೈ ಹಿಂದ್ ಅಂತ ಫೋಸ್ ಕೊಡುತಾನೆ , ಇವನ ಎಲ್ಲ ವಿಷಯ ಗಳಿಗೆ ಸರಿ ಎನ್ನುವಂತೆ ಕುಮ್ಮಕ್ಕು ನೀಡುವ ಇವನ ತಂಗಿ " ಅಪ್ಪು " ಹೌದು ಕಣೋ ಅಬ್ಬು , ಇಲ್ಲ ಕಣೋ ಅಬ್ಬು ಹಂಗೆ ಕಣೋ ಅಬ್ಬು ಅಂತ .,., ಇನ್ನು ತುಂಬ ಇದೆ ಮುಂದೆ ತಿಳಿಸುತ್ತೇನೆ ,.,.,.,.,.,.,.,.,.,.,.,.
No comments:
Post a Comment