Saturday, 9 May 2009

ದೂರ ಮಾಡದಿರಿ ನನ್ನ


ನಾನೇನು ಮಾಡಿದ್ದೆ ,.,.
ನೀವೇ ಅಲ್ಲವೇ ನನ್ನನ್ನು ದೂರ ಮಾಡಿದ್ದು , ನೀವಲ್ಲವೇ ಸೃಷ್ಟಿಸಿದ್ದು ಈ ಅಂತರ ,
ನನ್ನದಲ್ಲದ ಯಾಂತ್ರಿಕ ದೋಣಿಯನ್ನು ನೀವಲ್ಲವೇ ತಂದ್ದಿದ್ದು , ನಾನಾದರೋ
ನೀವು ಬರಿ ಪ್ರೀತಿಯಲ್ಲಿ ಜೀಕಿದರೆ ಸಾಕು ನಿಮ್ಮನ್ನು ಎಲ್ಲಿಗೆ ಬೇಕಾದರೂ ಕರೆದೊಯುತ್ತೇನೆ ,.
ಏನು ಮಾಡಲಿ ನೀವೇ ನನ್ನ ದೂರ ಮಾಡಿದಿರಿ,
ನನಗೆ ಇಂದನ ಬೇಕಾಗಿಲ್ಲ - ವಿದ್ಯುತ್ ಬೇಕಾಗಿಲ್ಲ ,.
ಬೇಕಾಗಿರುವುದು ನಿಮ್ಮ ಪ್ರೀತಿಯಾ ಜೀಕು - ಅಷ್ಟೆ ಸಾಕು.
ಬೇಸರಿಸಬೇಡಿ !
ಇಂದನ ಮುಗಿಯಿತೋ , ಯಂತ್ರ ತಡೆಯೋ !
ಬನ್ನಿ ಪ್ರೀತಿಯಿಂದ ಜೀಕಿರಿ ನಿಮ್ಮೆಲ್ಲರನ್ನು ಸುರಕ್ಷಿತ ಸ್ತಳ ಸೇರಿಸುತ್ತೇನೆ
ನನಗೆ ಬೇಕಾಗಿರುದು ನಿಮ್ಮ ಪ್ರೀತಿ , ನಾನು ನಿಮ್ಮೊಂದಿಗಿರಲು ಸಂತೋಷ ಪಡುತ್ತೇನೆ .,
ದೂರ ಮಾಡದಿರಿ ನನ್ನ .,.,.,.,.,.,

No comments:

Post a Comment