Thursday 21 May 2009

ನಾನು ಹಿಂದಕ್ಕೆ ಹೋಗಲೋ ಅಥವಾ ಮುಂ,.,.,.

೧೯೭೦ ,,,೧೯೮೦,,, ೧೯೯೦,,, ನಾವು ಬೆಳೆದು ಬಂದಾ ದಾರೀ ಹೀಗಲ್ಲವೇ !!!!!!
ನಾನು ಹಿಂದಕ್ಕೆ ಹೋಗಲೋ ಅಥವಾ ಮುಂದಕ್ಕೆ ಹೋಗಲೋ ? ನೆನಪಿದೆಯೆ ನಿಮಗೆ ,
ಮುಂಗ್ಹೇರಿ ಲಾಲ್ ಕೆ ಹಸೀನ್ ಸಪ್ನೆ , ಕರಮ್ಚಂದ್ , ವಿಕ್ರಂ ಅವರ್ ಬೆತಾಲ್, ಏಕ ದೋ ತೀನ್, ಫೌಜಿ ,,,
ಆಗ ಸೀಟ್ ಬೆಲ್ಟ್ ಇರಲಿಲ್ಲ , ಏರ್ ಬ್ಯಾಗ್ ಇರಲಿಲ್ಲ , ಲಾರಿ ಅಂದರೆ ಟ್ರಕ್ ನ ಹಿಂದೆ ಕೂರುವ್ದೆ ಸ್ವರ್ಗ ಸುಖ ,
ಬೇಬಿ ಪ್ರಾಮ್ಪ್ಸ್ ಗೊತ್ತಿಲ್ಲ , ಟಿನ್ ಬಾಟಲ್ ನೋಡಿಲ್ಲ , ಅಡಿಗೆ ಕೋಣೆ ಮಾತ್ರ ಗೊತ್ತು, ಕಿಚನ್ ಪ್ಯಾಂಟ್ರಿ ಗೊತ್ತಿಲ್ಲ
ಸೈಕಲ್ ಎಂಬುದೂ ಪಂಚ ಪ್ರಾಣ, ಅದರ ಚಕ್ರಕ್ಕೆ ರಟ್ಟನ್ನು ಇಟ್ ಮೋಟಾರ್ ಬೈಕ್ ತರ ಶಬ್ದ ಮಾಡ್ತಾ ತುಳಿದ ಆ ರಸ ನಿಮಿಷಗಳ ಸಂತೋಷ !!!!!! ಆಗ ಹೆಲ್ಮೆಟ್ ಇಲ್ಲ, ನೀ ಪ್ಯಾಡ್ ಇಲ್ಲ , ಎಲ್ಬೌ ಪ್ಯಾಡ್ ಇಲ್ಲ, ,,
ಬಾಯಾರಿದಾಗ ನಲ್ಲಿ ನೀರೆ ಎಲ್ಲರೂ ಕುಡಿದದ್ದು , ಬಾಟಲ್ ನೀರು ಯಾರಿಗೂ ಗೊತ್ತಿಲ್ಲ , ಕೈಗೆ ಸಿಕ್ಕ ಕಾಗದ ಮರ ಇಟ್ಟಿಗೆ ಕಲ್ಲು ಚಕ್ರ ಡಬ್ಬ ಎಲ್ಲಾ ಆಟದ ವಸ್ತುಗಳು , ಬ್ರೇಕ್ ಇಲ್ಲದ ಸೈಕಲ್ ನಿಂದ ಬಿದ್ದರು ನೋವು ಗೊತ್ತಿಲ್ಲ , ಹೆದರಿಕೆ ಇಲ್ಲ ನಾವೆಷ್ಟು ಶಕ್ತಿ ವಂತರು ಯೆಂಬ ಧೈರ್ಯ , ಎಷ್ಟೂ ದೊಡ್ಡ ಮರವನ್ನು ಹತ್ತುವ ಹುಮ್ಮಸ್ಸು , ಕತ್ತಲಾಗುವವರೆಗೂ ಆಟ , ಕೀ . ಮೀ ದೂರಗಳು ನಡೆಯುವ ಸ್ಕೂಲು , ಹೋಗುವಾಗ ಹಗ್ಗದಿಂದ ತಯಾರು ಮಾಡಿದ ಬಸ್ಸು ಎಲ್ಲರೂ ಒಟ್ಟಿಗೆ ,
ಬಾಯಾರಿದಾಗ ಒಂದೇ ಲೋಟದಿಂದ ನೀರು ಎಲ್ಲರೂ ಕುಡಿದರೂ ಯಾರಿಗೂ ಯಾವ ರೋಗಗಳು ಬರಲಿಲ್ಲಾ ,
ನಮ್ಮ ಬಳಿ ಮೊಬೈಲ್ ಇರಲಿಲ್ಲ ಆದರು ಒಬ್ಬರಿಗೊಬ್ಬರು ಸಹಕಾರ ಸಂಬಾಷಣೆ ಸರ್ಯಾಗಿ ನಡಯುತಿತ್ತು ,
ಹಲ್ಲು ಮುರಿದಿತ್ತು ಕಾಲು ಮುರಿದಿತ್ತು ಕೈ ಮುರಿದಿತ್ತು ಎಲ್ಲ ನಮ್ಮ ತಪ್ಪುಗಳೇ ಆದರು ಸಂತೋಷದಲ್ಲಿ ಎಲ್ಲ ಮರೆತಿದ್ದೆವು,
ಎಲ್ಲವನ್ನು ತಿನ್ನುತ್ತಾ ಒಂದೇ ಇದ್ದಾಗ ಅದನ್ನು ಅಂಗಿ ಮದ್ಯ ಇಟ್ ಹಲ್ಲಿಂದಾ ತುಂಡು ಮಾಡಿ ಎಲ್ಲರೂ ತಿನ್ನುತ್ತಿದ್ದೆಉ,
ಈ ಮದ್ಯೆ ನಮ್ಮಲ್ಲಿ ಒಬ್ಬರಿಗೆ ಒಂದು ಸೋಡಾ ಬಾಟಲ್ ಕುಡಿಯಲು ಸಿಕ್ಕರೆ ಎಲ್ಲರು ಅದರಿಂದಲೇ ಕುಡಿವುದು ಎಂಜಲು ಎಬುದು ಗೊತ್ತಿಲ್ಲ , ಕೆಲಒಮ್ಮೆ ಪರೀಕ್ಷೆಯಲ್ಲಿ ಯಾರಾದರು ಫೈಲ್ ಆದರೆ ಮುಂದಿನ ಪರೀಕ್ಷೆ ಬರಿಯೋದು ಅಷ್ಟೆ , ಅದು ಬಿಟ್ಟು
ಮನೋರೋಗ ವೈದ್ಯರಲ್ಲಿ ಯಾರೂ ಹೋಗಿಲ್ಲ , ಕೌನ್ಸಿಲಿಂಗ್ ನಡೆಸಿಲ್ಲಾ ,.
ಗುರು ಹಿರಿಯರನ್ನು ಗೌರವಿಸುತ್ತಿದ್ದೆವೂ ,

ಈಗ ಏಕೆ ಹೀಗೆ ಯಾವ್ದು ಸರಿ ಯಾವ್ದು ತಪ್ಪು ?
ನಾನು ಹಿಂದಕ್ಕೆ ಹೋಗಲೋ ಮುಂದಕ್ಕೆ .,.,,.,.,.,.,.

No comments:

Post a Comment