Wednesday, 27 May 2009

ಏನಾಯ್ತು

ಹೃದಯಕ್ಕೆ ಏನಾಗಿದೆ ಅವನೇ ಬಲ್ಲ
ಇದೇಕೆ ತಣ್ಣಗಾಗಿದೆ ಅವನೇ ಬಲ್ಲ
ಹೃದಯವು ಕೊಟ್ಟೆ ಮನಸ್ಸು ಕೊಟ್ಟೆ
ಹೇಗೆ ಕಾಣದಾಯ್ತೋ ಅವನೇ ಬಲ್ಲ,.

ನನ್ನ ಹೃದಯ ಕಾಣದಾಗಿದೆ ನಿನಗೆ ಗೊತ್ತು
ನನ್ನ ಪ್ರೀತಿ ಕಾಣದಾಗಿದೆ ನಿನಗೆ ಗೊತ್ತು
ನನ್ನ ಕಣ್ಣು ಕಾಣದಾಗಿದೆ ನಿನಗೆ ಗೊತ್ತು
ನಿನ್ನ ಮನಸ್ಸು ಕಲ್ಲಾಗಿದೆ ' ನನಗೆ ' ಮಾತ್ರ ಗೊತ್ತು.,

ಆರಿ ಹೋಗಿದೆ ಆ ದೀಪ ನೀನೆ ಹಚ್ಚಿದ್ದು
ಮುದುಡಿ ಹೋಗಿದೆ ಆ ಗುಲಾಬಿ ನೀನೆ ನೆಟ್ಟಿದ್ದು
ಕಾಣದಾಗಿದೆ ಗಿಣಿ ನೀನೆ ಸಾಕಿದ್ದು
ಬಾಗಿಲು ಮುಚ್ಚಿದೆ ನೀನೆ ತೆರೆದಿದ್ದು.,

ಸೂರ್ಯನು ಉದಿಸಲಿಲ್ಲ
ಚಂದ್ರ ಕಾಣಲಿಲ್ಲ
ಹಕ್ಕಿಗಳು ಹಾರಲಿಲ್ಲಾ
ಮಳೆಯಂತು ಬರಲೇ ಇಲ್ಲಾ .,

ನೀನೆ ಅಲ್ಲವೇ ಹೇಳಿದ್ದು ನಾನು ಬರುತ್ತೇನೆ
ನೀನೆ ಅಲ್ಲವೇ ಹೇಳಿದ್ದು ನಾನು ತರುತ್ತೇನೆ
ಆದರೇನಾಯ್ತು ನಾನು ಹೇಳಿದೆನಲ್ಲ
ನಾನು ನಿನ್ನ ಮದುವೆಗೆ ಬರುತ್ತೇನೆ .,.. ಖಂಡಿತ ಬರುತ್ತೇನೆ .


No comments:

Post a Comment